Saturday, June 16, 2012

ಪಾಪಿ ಚಿರಾಯು!

ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು.

ಇದು ಗಾದಿ ಮಾತು.

ಪಾಪ ಮಾಡದವರು ಯಾರವರೇ?
ಪಾಪ ಮಾಡದವರು ಎಲ್ಲವರೇ?

ಅಂತ ಜಗ್ಗೇಶ್ ಅವರ 'ಮಠ' ಪಿಕ್ಚರ್ ಹಾಡನ್ನ ಸ್ವಲ್ಪ ಚೇಂಜ್ ಮಾಡಿ ಹಾಡ್ಕೋತ್ತ ಬರ್ಬೇಕಾದ್ರ, ಅಲ್ಲೇ ಬಾರಾಕೊಟ್ರಿ ಮ್ಯಾಲೆ ದೋಸ್ತ ಕರಿಂ ಸಾಬ್ ಸಿಕ್ಕ.

ಮುಂದ ಏನಾತು ಅನ್ನೋದನ್ನ ನೀವೇ ಓದ್ರಿ.

ಕರೀಮ - ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು. ಹೇನು ಸಾಬ್ ಹಿದರ ಅರ್ಥ?
ನಾನು - ಹೋಗ್ಗೋ ಸಾಬ್ರಾ. ಹೇನು ಅಲ್ಲಪಾ. ಏನು ಇದರ ಅರ್ಥ ಅಂತಿ ಏನು?
ಕರೀಂ - ಹಾಂ ಹಾಂ....ಹೌದು ಸಾಬ್. ನಮ್ದುಕೆ ಏನು ಗೊತ್ತು ಸಾಬ್? ನಂದು ಉರ್ದು ಮೀಡಿಯಂ.
ನಾನು - ಗೆಸ್ ಮಾಡ್ರಿ ಸಾಬ್ರಾ. ನೋಡೋಣ.
ಕರೀಂ - ಪಾಪಿ ಅಂದ್ರೆ ಪಾಪು ಮಾಡೋರು ಏನು ಸಾಬ್?
ನಾನು - ಹೋಗ್ಗೋ ನಿಮ್ಮ ಸಾಬ್ರಾ. ಪಾಪು ಮಾಡೋದು ಹ್ಯಾಂಗ್ರಿ ಪಾಪ ಅಗ್ತದ?
ಕರೀಂ - ಮತ್ತೆ ಸಾಬ್? ಪಾಪು ಮಾಡಬಾರದು ಪಾಪು ಮಾಡಬಾರದು ಅಂತ ಹೇಳ್ತಾನೆ ಇರ್ತೀರಿ ನೀವು.
ನಾನು - ಕೇಳಿದಿ ಏನು ನನ್ನ ಮಾತು?
ಕರೀಂ - ಕೇಳ್ದೆ ಏನು ಸಾಬ್? ಬಿಲ್ಕುಲ್ ಪಾಪುನೇ ಮಾಡಿಲ್ಲ ನಾನು.
ನಾನು - ಮತ್ತ ಮನ್ಯಾಗ ಮುಕ್ಕಾಲ ಡಜನ್ ಏನೋ ಅವು?
ಕರೀಂ  - ಏನು ಸಾಬ್?
ನಾನು - ಪಾಪುಗೋಳು!!
ಕರೀಂ  - ಓ....ಅದಾ ಸಾಬ್? ಅವೆಲ್ಲ ನಮ್ಮ ಮಕ್ಳು ಸಾಬ್.....ಮಕ್ಳು ಮಾಡೋದು ಪಾಪಾನೆ ಸಾಬ್?
ನಾನು - ಹೋಗ್ಗೋ ನಿನ್ನ....
ಕರೀಂ - ಪಾಪು ಮಾಡಿದವರಿಗೆ ಎಲ್ಲೇ ಹೋದರೂ ಮೊಣಕಾಲುದ್ದ ಪಾನಿ ಅಂತೀರಿ ಕ್ಯಾ?
ನಾನು - ಹೋಗ್ಗೋ ಸಾಬ್ರಾ.....ಪಾಪಿ ಅಂದ್ರ ಏನು ಅಂತ ತಿಳದಿ?
ಕರೀಂ - ಪಾಪಿ ಅಂದ್ರ ಪಾಪುನ ಅಮ್ಮ ಅಥವಾ ಪಾಪುನ  ಅಪ್ಪ ಅಲ್ಲ? ಕ್ಯಾ ಸಾಬ್?
ನಾನು - ಹೋಗ್ಗೋ ಸಾಬ್ರ ....ಅದರ ಪ್ರಕಾರ ಹೋದ್ರ ನೀ ಮಹಾಪಾಪಿ ನೋಡು.....ಮುಕ್ಕಾಲ್ ಡಜನ್ ಪಾಪು ಇವೆ ನಿಮ್ಮ ಮನಿಯಾಗ.
ಕರೀಂ - ಮತ್ತೇನು ಸಾಬ್ ಅರ್ಥ?
ನಾನು - ನಿನಗ ಪಾಪಿ ಅನ್ನೋದರ ಅರ್ಥ ಹೇಳೋದ್ರಾಗ ಮಹಾಪಾಪ ಆಗಿ ಹೋಗ್ತದ.....ಖುದಾ ಹಾಫಿಜ್.....ನಡಿ ಇನ್ನ.
ಕರೀಂ - ಖುದಾ ಹಾಫಿಜ್ ಸಾಬ್. ಮುಂದಿನದು ಸಾರೆ ಇನ್ನು ಸ್ವಲ್ಪ ಮುಂದೆ ಮುಂದೆ ಹೋಗಿ. ಘುಟ್ನೇಕೆ ಕೆ ಊಪರ ಪಾನಿ ಆಯೇಗಾ  ಸಾಬ್.
ನಾನು - ಇಟ್ಟಿ ಅಲ್ಲಪಾ ಬತ್ತಿ. ಪಾಪಿ. ಚುಲ್ಲು ಭರ್ ಪಾನಿ ಮೇ ಡೂಬ್ ಕೆ ಮರ್ಜಾ.

ಇಷ್ಟೆಲ್ಲಾ ಬರೀಲಿಕ್ಕೆ  ತಲಿ ಓಡಿದ್ದು ಮೊನ್ನೆ  Piercy, California   ಗೆ ಹೋಗಿ Eel River ನ್ಯಾಗ  ಮೊಣಕಾಲಲ್ಲ ಅಂಗಾಲ ತನಕಾ ಬರೋ ನೀರಿನ್ಯಾಗ ತಂಪ ಆಗಿ ನಿಂತು ಫೋಟೋ ತೆಗಿಸ್ಕೊಂಡಾಗ.

ಛೋಟಾ ಪಾಪಿ ಛೋಟಾ ಸಮುಂದರ್ ಮೇ. :)

PS: Inspired by a similar dialog in some Kannada film (Jaggesh starer I think)


No comments: