Tuesday, July 31, 2012

ಸ್ವಗತ ಜುಲೈ 2012

ಜುಲೈ ಮುಗಿದೇ ಹೋಯಿತು. ಒಂದು ಕ್ಷಣ ಹಿಂದೆ ತಿರುಗಿ ನೋಡಲು ಸಕಾಲ.

ಈ ಒಂದು ತಿಂಗಳಲ್ಲಿ ಕನ್ನಡದಲ್ಲಿ ಸಾಕಷ್ಟು ಬರೆದಿದ್ದು ಆಯಿತು. ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೆ.

ಮೊದಮೊದಲು ಕನ್ನಡದಲ್ಲಿ ಬರೆಯೋದು ಅಂದರೆ ತುಂಬಾ ಕಷ್ಟ ಕಷ್ಟ. ಕಾಗುಣಿತ ಸರಿ ಮಾಡುವದರಲ್ಲಿಯೇ ತುಂಬಾ ಟೈಮ್ ಹೋಗುತ್ತಿತ್ತು. ಬೋರೆದ್ದು ಹೋಗುತ್ತಿತ್ತು. ಈಗೇನು.....ಇಂಗ್ಲಿಷ್-ಕನ್ನಡ ಡಿಕ್ಷನರಿ,  ಬರೆಯಲು ಒಳ್ಳೊಳ್ಳೆ ಎಡಿಟರ್......ಎಲ್ಲ ಆನ್ಲಾಯಿನ್ ಲಭ್ಯ. ಬರೆಯುವ ಆಸಕ್ತಿ, ಬರೆಯಲಿಕ್ಕೆ ವಿಷಯ ಇದ್ದರೆ ಸಂತೋಷವೋ ಸಂತೋಷ.

ಮುಖ್ಯವಾಗಿ ಅನೇಕ ಸಹೃದಯಿಗಳು ಬ್ಲಾಗ್ ಓದಿದ್ದಷ್ಟೇ ಅಲ್ಲ, ಸುಮಾರು ಜನ ಅಲ್ಲಿ ಇಲ್ಲಿ ಒಂದೆರಡು ಒಳ್ಳೆ ಮಾತು ಕೂಡ ಹೇಳಿದ್ದಾರೆ. ಕೆಲವರು ಕಾಮೆಂಟ್ಸ್ ಹಾಕಿದರೆ, ಕೆಲವರು ಫೇಸ್ಬುಕ್ ಮೇಲೆ, ಇನ್ನು ಕೆಲವರು ಇ-ಮೇಲ್, ಕೆಲವರು ಫೋನ್ ನಲ್ಲಿ ಹರಟೆಗೆ ಸಿಕ್ಕಾಗ. ತುಂಬಾ ಜನ ಓದಿದ್ದಾರೆ. ಅದು ಸಂತೋಷ.

ಬರೆಯುತ್ತಿರುವದಕ್ಕೆ ಹೆಚ್ಚಿಗೆ ಏನೂ ಪ್ರಚಾರ ಕೊಟ್ಟಿಲ್ಲ. ನನ್ನ ಫೇಸ್ಬುಕ್ ಮೇಲೆ ಶೇರ್ ಮಾಡುತ್ತೇನೆ. ಟ್ವಿಟ್ಟರ್ ಒಂದು. ನಾನೇನೂ ಟ್ವಿಟ್ಟರ್ ಜಾಸ್ತಿ ಉಪಯೋಗಿಸುವದಿಲ್ಲ.

ಕಂಡ ಕಂಡ ಕಡೆ ಹೋಗಿ - ನಂದು ಎಲ್ಲೆ ಇಡ್ಲಿ? ಇಟ್ಟೆ. ಓದ್ರೀ. ಪ್ಲೀಜ್.  - ಅಂತ ಹೇಳುವ ಅವಶ್ಯಕತೆ ಇಲ್ಲ. ಅದಕ್ಕೇ ಸುಮಾರು ಫೇಸ್ಬುಕ್ ಗ್ರುಪ್ಪುಗಳಲ್ಲಿ ಹಾಕುವ ಅವಕಾಶವಿದ್ದರೂ ಹಾಕಿಲ್ಲ. 

ಅದು ಬಿಟ್ಟರೆ ನಮ್ಮ 'ಹವ್ಯಕ' ಜನರ ಒಂದು ಫೇಸ್ಬುಕ್ ಗ್ರುಪ್ ಇದೆ. ಅದರಲ್ಲಿ ಬ್ಲಾಗ್ ಗಳಿಗಾಗಿಯೇ ಒಂದು ಸೆಕ್ಷನ್ ಇದೆ.  ಹೊಸ ಪೋಸ್ಟ್ ಬರೆದಾಗ ಅಲ್ಲಿ ಹಾಕಿ ಬರುತ್ತೇನೆ. ಸುಮಾರು ಜನ ಓದಿ, ಅಲ್ಲಿಯೇ ಕಾಮೆಂಟ್ ಮಾಡಿ ಪ್ರೋತ್ಸಾಹಿಸಿದ್ದಾರೆ. ಎಷ್ಟೋ ಜನ, ನಮ್ಮ ಟಿಪಿಕಲ್ ಹವ್ಯಕ ಸ್ಟೈಲ್ ನಲ್ಲಿ ಅತ್ಯಂತ ಆತ್ಮೀಯವಾಗಿ "ಮಹೇಶಣ್ಣ" ಅಂತ ಕರೆದು ಪ್ರೀತಿ ತೋರಿಸಿದ್ದಾರೆ. ಕೆಲವರಿಗೆ ನಾವು  "ಮಹೇಶ್ ಸರ್". ಹಾಗೆಲ್ಲ ಕರೆಯುವದು ನಮ್ಮ ಸಂಸ್ಕೃತಿ. ಅವರಿಗೆಲ್ಲ ಚಿರಋಣಿ. ಪ್ರೀತಿ ಹಾಗೆಯೇ ಇರಲಿ. ಮತ್ತೂ ಬೆಳೆಯಲಿ.

ನಮ್ಮ "ಹವ್ಯಕ" ಫೇಸ್ಬುಕ್ ಗ್ರುಪ್ ತುಂಬಾ ಒಳ್ಳೆ ರೀತಿಯಲ್ಲಿ ಡೆವಲಪ್ ಆಗಿದೆ. ಬೇರೆಬೇರೆ ವಿಷಯಗಳಿಗೆ ಬೇರೆ ಬೇರೆ ಥ್ರೆಡ್ ಇವೆ. ಹಾಡಿಗೆ, ಹರಟೆಗೆ, ಬ್ಲಾಗ್ ಗಳಿಗೆ, ಮತ್ತೊಂದಕ್ಕೆ ಅಂತ. ತುಂಬಾ ಇಂಟರೆಸ್ಟಿಂಗ್ ಚರ್ಚೆ ಮತ್ತೊಂದು ನಡೆಯುತ್ತಿರುತ್ತದೆ. ಬೇಕಾದಷ್ಟು ಮಾಹಿತಿ, ನಮ್ಮ ಸಂಸ್ಕೃತಿ, ನಮ್ಮ ಊರ ಕಡೆ ಸುದ್ದಿ ಎಲ್ಲ ಚನ್ನಾಗಿ ತಿಳಿಯುತ್ತಿದೆ. ಅಂತಹ ಗ್ರುಪ್ ಒಂದನ್ನು ಸೇರಿ ಅಲ್ಲಿಯ  ಜನರ ಸ್ನೇಹ ಪ್ರೀತಿ ಇತ್ಯಾದಿ ಸಿಕ್ಕಿದ್ದು ತುಂಬಾ ಸಂತೋಷದ ಸಂಗತಿ.

ಕೆಲವು ಜನ ಇಂಗ್ಲಿಷ್ನಲ್ಲಿ ಬರೆಯೋದನ್ನು ನಿಲ್ಲಿಸಿಬಿಟ್ಟಿರಾ ಅಂತ ಕೇಳಿದ್ದಾರೆ. ಸದ್ಯದ ಮಟ್ಟಿಗೆ ಗೊತ್ತಿಲ್ಲ. ಮುಂದೆ ನೋಡೋಣ. ಪೋಸ್ಟ್ ಬೈ ಪೋಸ್ಟ್ ವಿಚಾರ ಮಾಡಿದರಾಯಿತು.

ಅತ್ಯಂತ ಹೆಚ್ಚಿನ ಹಿಟ್ಸ್ ಬಂದಿದ್ದು ನಮ್ಮ ಸ್ಕೂಲ್ ಮಾಸ್ತರ್ ಆಗಿದ್ದ ದಿವಂಗತ ಎಚ್. ಆರ್. ಕನವಳ್ಳಿ ಸರ್ ಬಗ್ಗೆ ಬರೆದ ಪೋಸ್ಟ್ ಗೆ. ನಮ್ಮ ತುಂಬ ಜನ ಸ್ನೇಹಿತರು, ಅವರ ಸ್ನೇಹಿತರು ಓದಿರಬೇಕು. ತುಂಬಾ ಖುಷಿ ಆಯಿತು. ಮಾಸ್ತರಿಗೂ ಖುಷಿ ಆಗಿರುತ್ತದೆ.

ನಂತರ ಕರೀಮನ ಸಾಹಸಗಳು (?). "ನಿಮ್ಮ ಕರೀಂ ಒಳ್ಳೆ ಮಿ.ಬೀನ್ ಇದ್ದಾಗೆ ಇದ್ದಾನಲ್ಲರೀ.." - ಅಂತ ಒಬ್ಬರು ಅಂದರು. ದೊಡ್ಡ ಮಾತು. ಕರೀಮನ ಲೈಕ್ ಮಾಡಿದವರು ತುಂಬಾ ಜನ. ಆದರೆ ಹೇಳಿದಂತೆ ಕರೀಮನ ಬಗ್ಗೆ ನಿಜವಾಗಿ ಹಾಸ್ಯ ಬರೆಯಲು ಅದು ಅದಾಗೇ ಫ್ಲಾಶ್ ಆದಾಗ ಮಾತ್ರ ಸಾಧ್ಯ. ಇಲ್ಲಾಂದರೆ ಜಬರ್ದಸ್ತಿ ತುರುಕಿದ ಹಾಸ್ಯವಾದೀತು. ಅದಕ್ಕೆ ತಲೆ ಓಡದಿದ್ದಾಗ.....ಯಾವದೋ ಪುಸ್ತಕದಲ್ಲಿ ಓದಿದ ಯಾವದಾದರು ಇಂಟರೆಸ್ಟಿಂಗ್ ಮಾಹಿತಿ ಬಗ್ಗೆ ಬರೆದು ಪುಸ್ತಕ ಪರಿಚಯ. ಅದಕ್ಕೆ ನಮಗೆ ಇರೋ ಮಟ್ಟಿನ ಕೆಪಾಸಿಟಿ ಸಾಕು.

ಸದ್ಯಕ್ಕೆ ಟೈಮ್ ಕೂಡ ಇದೆ. ಕೆಲಸ ಇದ್ದರೂ ಆ ಪಾಟಿ ಬಿಜಿ ಇಲ್ಲ. ಸುಮ್ಮನೆ ಹಾಳುವರಿ ಇಂಟರ್ನೆಟ್, ಫೇಸ್ಬುಕ್ ಮತ್ತೊಂದು ಮಾಡಿ ಟೈಮ್ ವೆಸ್ಟ್ ಮಾಡುವದಕಿಂತ ಸಿಕ್ಕಾಗ ನಾಕು ಲೈನ್ ಗೀಚೋದು, ಬರಿಯೋದೇ  ಹಾಯನಿಸತೊಡಗಿದೆ. ನ್ಯೂಸ್ ಓದೋದು ಒಂದೈದು ನಿಮಿಷ ಮಾತ್ರ. ಟೀವಿ ಗೀವಿ ಇಲ್ಲವೇ ಇಲ್ಲ.

ನೀವು ಓದಿ. ಏನೇ ಅನ್ನಿಸಿದರೂ ಕಾಮೆಂಟ್ ಮಾಡಿ. ಎಲ್ಲಾ ರೀಸನೆಬಲ್ ಕಾಮೆಂಟ್ಸ್ ಗೆ ಸ್ವಾಗತ.

ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ. ಭಗವಂತ ಇಚ್ಛಿಸಿದಲ್ಲಿ (God willing)..........ಓದುವ, ಬರೆಯುವ, ಹೊಸ ಹೊಸ ಸಹೃದಯೀ, ಸಮಾನಮನಸ್ಕ ಮಿತ್ರರನ್ನು ಮಾಡಿಕೊಳ್ಳುವ, ಲಘುಹರಟೆ ಹೊಡೆಯುವ, ಒಟ್ಟಿನಲ್ಲಿ ಬಿಂದಾಸ್ ಜಿಂದಗೀ ಜೀಯುವ ಕೆಲಸ  ಮುಂದುವರೆಯುತ್ತದೆ.

ಪ್ರೀತಿ, ವಿಶ್ವಾಸ ಹೀಗೆ ಮುಂದುವರಿಯಲಿ. ಬೆಳೆಯಲಿ.

ದೇವರು ಎಲ್ಲರಿಗೂ ಒಳ್ಳೇದು ಮಾಡಲಿ.

2 comments:

angadiindu said...

ಬೇರೆ ಏನೋ ಹುಡುಕುತ್ತಿದ್ದಾಗ, ಅಕಸ್ಮಾತ್ ನಿಮ್ಮ ಬ್ಲಾಗ್ ನ ಲಿಂಕ್ ಸಿಕ್ಕಿತು. ಓದುತ್ತಾ ಹೋದಂತೆ "ನೀವು" ಅನ್ನುವದನ್ನು ಬಿಟ್ಟು "ನೀನು" ಆಗಿಬಿಟ್ಟೆ. ಯಾಕೆಂದರೆ ನೀನೂ ಧಾರವಾಡದವ,ನಮ್ಮ ಕೆ ಇ ಬೋರ್ಡ್ ನವಾ,ಕೆಸಿಡಿ ಹುಡುಗಾ ಅಂತಾ ಗೊತ್ತಾತು. ಅದರಾಗನ ಶೈಲೇಶ ಹೆಗಡೆ (ಶೈಲ್ಯಾ)ನ ತಮ್ಮಾ ಅನ್ನೋದ್ ತಿಳಿದು ಭಾಳ ಸಂತೋಷ ಆತು. ಕೆಇಬೋರ್ಡ್ ನೊಳಗ ನಿಮ್ಮ ಅಣ್ಣಾ "ಏ" ಕ್ಲಾಸು ಮತ್ತ ನಾ "ಸಿ" ಕ್ಲಾಸು.( ಕನ್ನಡಾ ಮೀಡಿಯಂ ). ಪಿಯೂಸಿ ಯೊಳಗ ಇಬ್ರೂ ಕ್ಲಾಸ್ ಮೇಟ್ ಆಗಿದ್ವಿ. ಅವಗ ನನ್ ನಮಸ್ಕಾರ ತಿಳಿಸು. "ಅಂಗಡಿ" ಕೇಳಿದಾ ಅಂತಾ ಹೇಳು. ನನ್ನ ಬಗ್ಗೆ ಇನ್ನೂ ತಿಳ್ಕೋಬೇಕು ಅಂದ್ರ facebook ನ್ಯಾಗ Indushekhar Angadi ಅಂತಾ ಟೈಪ್ ಮಾಡಿದ್ರ ಗೊತ್ತಾಗ್ತೈತಿ. ನಿಮ್ಮ ಅಪ್ಪಾರು ಹೆಗಡೆ ಸರ್ ಗೆ ನನ್ನ ಶಿರಸಾಷ್ಟಾಂಗ ನಮಸ್ಕಾರ ತಿಳಿಸು

Mahesh Hegade said...

ಅಂಗಡಿ ಅವರಿಗೆ ನಮಸ್ಕಾರ.

ನಿಮ್ಮ ಕಾಮೆಂಟ್ ಓದಿ ಭಾಳ್ ಖುಷಿ ಆತು. ನಿಮ್ಮ ಮೆಸೇಜ್ ನಮ್ಮ ಅಣ್ಣ, ನಿಮ್ಮ ದೋಸ್ತ ಶೈಲೇಶ್ ಗೆ ಫಾರ್ವರ್ಡ್ ಮಾಡ್ತೇನಿ. ತಂದೆಯವರಿಗೂ ಹೇಳತೇನಿ.

ಬ್ಲಾಗ್ ಓದಿ, ಟೈಮ್ ತೊಗೊಂಡು ಕಾಮೆಂಟ್ ಹಾಕಿದ್ದಕ್ಕ ಭಾಳ ಥ್ಯಾಂಕ್ಸ್ ರೀ.

-ಮಹೇಶ