Friday, July 13, 2012

ಬ್ಲಾಗರನ ಸ್ವಗತ

ಸುಮಾರು  ಜನ ಕೇಳಿದರು. ಏನು ಬ್ಲಾಗಿಂಗ ಜಾಸ್ತಿ ಆಗಿದೆ? ಏನು ಕಥೆ?....... ಅಂತ

ಏನೂ ವಿಶೇಷ ಇಲ್ಲ.

ಓದೋದು, ಬರೆಯೋದು ಮೊದಲಿಂದಲೂ ಅತ್ಯಂತ ಪ್ರಿಯ ವಿಷಯ. ಆಲಸಿತನ  ಹೆಚ್ಚಾದಾಗ ಬರಿಯೋದು ಕಮ್ಮಿ. ಓದೋದು ಮಾತ್ರ ನಿರಂತರ. ಜೈ amazon kindle ಇ-ಬುಕ್ ರೀಡರ್.

ಮತ್ತೆ ಕನ್ನಡದಲ್ಲಿ ಬರೆಯುವದು ಈಗ ತುಂಬಾ ಸುಲಭವಾಗಿದೆ. ಕನ್ನಡದಲ್ಲಿ ಬರೆಯುವದರ ಸಕತ್ ಮಜಾ ಎಂಜಾಯ್ ಮಾಡುತ್ತಿದ್ದೇನೆ.

ಯಾರಾದರೂ ನನ್ನ ಬ್ಲಾಗ್ ಓದ್ತಾರಾ? ಏನು ಉಪಯೋಗ ಬರೆದು?

ಒಳ್ಳೆ ಪ್ರಶ್ನೆ. ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸ್ಕೊಂಡಿಲ್ಲ.

ಬ್ಲಾಗ್ ಎಂಬುದು ಒಂದು ಡೈರಿ ತರಹ. ನಮ್ಮ ಸಲುವಾಗಿ. ಯಾರಾದರು  ನಾಕು  ಜನ ಓದಿದರೆ ಸಂತೋಷ. ಇಲ್ಲಾಂದ್ರೆ ಓಕೆ. ಎಲ್ಲ ನಮ್ಮ ಖುಷಿಗೆ ಅಂತ ಮಾಡೋದು.

ಇಂದಿನ ಫೇಸ್ಬುಕ್, ಟ್ವಿಟ್ಟರ್ ಯುಗದಲ್ಲಿ 10-15 ನಿಮಿಷ ಇಟ್ಟುಗೊಂಡು ಬ್ಲಾಗ್ ಓದುವರ ಸಂಖೆ ಬಹಳ ಕಮ್ಮಿ ಅಂತೆ. ಮತ್ತೆ ಬ್ಲಾಗ್ ಗಳಲ್ಲಿ ಇರೋ ವಸ್ತು ಎಷ್ಟು ಸತ್ಯವೋ ಯಾರಿಗೆ ಗೊತ್ತು? ಹಾಂಗಾಗಿ ಬ್ಲಾಗ್ಸ್ ಓದುವವರು ಜಾಗರೂಕರಾಗಿದ್ದರೆ ಒಳ್ಳೆಯದೇ. ಹಂಸಕ್ಷೀರ ನ್ಯಾಯ ಒಳ್ಳೇದು. ಒಳ್ಳೆಯದನ್ನು ಆರಿಸಿಕೊಂಡು ಸೇರಿದರೆ ಓದಿ. ಇನ್ನೂ ಸೇರಿದರೆ ಒಂದು ಮಾತು ಹೇಳಿ.

ಆದ್ರೆ ತಲೆಯಲ್ಲಿ ಬಂದ ವಿಚಾರಗಳನ್ನು ಬ್ರೀಫ್ ಆಗಿ ಬರೆದು ಇಡಲು ಬ್ಲಾಗ್ ಒಂದು ಒಳ್ಳೆ ವಿಧಾನ. ಮುಂದೆ ಯಾವಾಗಲೋ ರೆಫರ್ ಮಾಡಬೇಕು ಅಂದ್ರೆ ಗೂಗಲ್ ಮಾಡಿ ಬಿಟ್ಟರೆ ಸಾಕು. ಈಗ 8 ವರ್ಷದಲ್ಲಿ ಬರೆದಿದ್ದು ಭಾಳ ಇದೆ. ಟಾಪಿಕ್ ನೆನಪು ಇದ್ದರೆ ಸಾಕು. ಗೂಗಲ್ ಮಾಡಿದರೆ ಸಿಗುತ್ತದೆ.

ಮತ್ತೆ ಇನ್ನೊಂದು. ಬರೆದು ಬಿಟ್ಟರೆ ತಲೆಯಲ್ಲಿ ಒಂದಿಷ್ಟು ಜಾಗ ಮಾಡಿಕೊಂಡಂಗೆ. ಬೇರೆ ಏನಾದರೂ ತುಂಬಬಹುದು.

ಮುಂದಿನ ಗುರಿ ಅಂದ್ರೆ ಹೇಗೆ ಅತಿ ಸಂಕ್ಷಿಪ್ತವಾಗಿ ಹೇಳುವದು ಅನ್ನುವ ಕಲೆಯನ್ನು ರೂಢಿ ಮಾಡಿಕೊಳ್ಳುವದು. 3-5 ನಿಮಿಷದಲ್ಲಿ ಓದಿ ಮುಗಿಸುವಂತಹದ್ದು ಇದ್ದರೆ ಸುಮಾರು ಜನ ಓದುತ್ತಾರೆ. ಬರೆಯುತ್ತ ಬರೆಯುತ್ತ ಅದೂ ಸಿದ್ಧಿಯಾಗಬಹುದು. ಆಗಬೇಕೆಂದು ನಮ್ಮ ನಸೀಬನಲ್ಲಿ ಇದ್ದರೆ. ಮೊದಲು ಬರಿ ನಂತರ ಉತ್ತಮಗೊಳಿಸು - ಅದು ಈಗ ಸದ್ಯದ ಮಂತ್ರ.

ನಾರ್ಮಲಿ  ಒಂದು ಪೋಸ್ಟಿನ ರೂಪುರೇಷೆಗೆ ಹೆಚ್ಚೆಂದರೆ 10-15 ನಿಮಿಷ ಸಾಕು. ಆಮೇಲೆ ಅದರಲ್ಲಿ ವಸ್ತು ತುಂಬಲು 20-30 ನಿಮಿಷ. ಎಡಿಟ್ ಮಾಡಲು ಮತ್ತೊಂದು 10 ನಿಮಿಷ. ಹೀಗಾಗಿ ಬರೆಯುವ ವಸ್ತು ಗೊತ್ತಿದ್ದರೆ ಒಂದು ಪೋಸ್ಟ್ ಗೆ ಹೆಚ್ಚೆಂದರೆ ಒಂದು ಘಂಟೆ ಅಷ್ಟೇ. ಬರೆಯಲು ಅಷ್ಟೊಂದು ಟೈಮ್ ಎಲ್ಲಿದೆ ಅಂದವರಿಗೆ ಈಗ ತಿಳಿದಿರಲು ಸಾಕು. ಇದು ತಿಳಿದ  ನೀವೂ ಬರೆಯಲು ಮನಸ್ಸು ಮಾಡಿದರೆ ಅದಕ್ಕಿಂತ ಖುಷಿಯೇನಿದೆ. ಟ್ರೈ ಮಾಡಿ.

When you start inking, you start thinking - ಇದು ಮಾತ್ರ 100% ಸತ್ಯ. ಶಾಲೆ, ಕಾಲೇಜ್ ಗಳಲ್ಲಿ ಇದ್ದಾಗ ಆ ಕಾಲದ ಗುರುಗಳು ಮೊಳೆ ಹೊಡೆದಿದ್ದು ಈಗ ಸತ್ಯ ಅಂತ ಮನವರಿಕೆ ಆಗಿದೆ. ಎಲ್ಲ ಸಬ್ಜೆಕ್ಟ್ ಇನ್ನೂ ಬರೆದು ಬರೆದು ತೆಗೆದಿದ್ದರೆ ಇನ್ನೊಂದು 10% ಜಾಸ್ತಿ ಬರತಿತ್ತೋ ಏನೋ?

ಆದ್ರೆ ಬರೆಯುವದರಿಂದ ತುಂಬಾ ಉಪಯೋಗ ಮಾತ್ರ ಇದೆ. ಒಂದು ಸಲ ಬರೆದು ಬಿಟ್ಟರೆ, ಅದೇನೋ ಒಂದು ತರಹದ ನಿರಾಳ. ನೆನಪು  ತಂತಾನೆ ಇರುತ್ತೆ. That's the beauty of writing. You won't even need to refer back many times.

ಕರೀಂ ಯಾರು ಅಂತ ಕೆಲವರು ಕೇಳಿದ್ದಾರೆ. ಕರೀಂ ನಮ್ಮ ದೋಸ್ತ. ಮನಸ್ಸಿನಲ್ಲಿ ಮಾತ್ರ ಇರುವ ಬೆಸ್ಟ್ ಫ್ರೆಂಡ್. ಸಾಬರ ಕನ್ನಡಕ್ಕೆ ಅದರದ್ದೇ ಆದ ಒಂದು ಸೊಗಡಿದೆ. ಮಜವಿದೆ ಅವರೊಂದಿಗೆ ಮಾತಾಡುತ್ತಾ ಅವರ ಕನ್ನಡದಲ್ಲಿ ಹಾಸ್ಯ ಹುಡುಕುವದರಲ್ಲಿ. ಅಷ್ಟೇ ವಿನಹಾ ಯಾರನ್ನೂ ಅಪಹಾಸ್ಯ ಮಾಡುವ ಇರಾದೆ ಖಂಡಿತ  ಇಲ್ಲ. ಹಾಗಂತ ಯಾರಾದರು ತಪ್ಪು ತಿಳಕೊಂಡು ಬೇಜಾರ್ ಮಾಡಿಕೊಂಡರೆ ಅದಕ್ಕೆ ನಾವೇನೂ ಮಾಡಲು ಆಗೋದಿಲ್ಲ. ನಮ್ಮ ಅತ್ಯಂತ ಖಾಸ್ ಕೆಲೊ ಜನ ಮಿತ್ರರು ಬಾಲ್ಯದಲ್ಲಿ ಸಾಬರೇ ಇದ್ದರು. ಅವರೆಲ್ಲರ ಒಂದು ಮಿಶ್ರಣದಂತೆ ಇರುವವನು ಕರೀಮ್ - ದಿ ಗ್ರೇಟ್. ಈಗ ಆ - ಪ್ಯಾರ್ ಗೆ ಆಗಿ ಬಿಟ್ಟೈತೆ - ಹಾಡಿನಲ್ಲಿ ಮಜಾ ಬರೋದು ಸಾಬರ ಕನ್ನಡದಿಂದ ತಾನೆ? ಹಾಗೇ ನಮ್ಮದು ಕರೀಮ್ದು ದೋಸ್ತಿ.

ಮೊನ್ನೆ ಒಬ್ಬ ದೋಸ್ತ ಹೊಸ ಬ್ಲಾಗ್ ಶುರು ಮಾಡಿದ. ಫೇಸ್ಬುಕ್ ಮೇಲೆ ಕಂಗ್ರಾಟ್ಸ್ ಅಂದೆ. ನನ್ನ ಬ್ಲಾಗೂ ಅವನಿಗೆ  ಒಂದು  inspiration ಅಂದ. ದೊಡ್ಡ ಮಾತು. ದೊಡ್ಡ ಮಾತು. ಬ್ಲಾಗ್ ಓಪನ್ ಮಾಡಿದ ಮೇಲೆ ರೆಗ್ಯುಲರ್ ಆಗಿ ಬರೆಯೋದು ಮುಖ್ಯ. ಅವ ಬರಿಯಲಿ ಅಂತ ಹಾರೈಸಿದೆ. ಇಲ್ಲ ಅಂದ್ರೆ ಎಷ್ಟೋ ಬ್ಲಾಗ್ಸ್ ಆರಂಭ ಶೂರತ್ವ ತೋರಿಸಿ ಆಮೇಲೆ ಗಾಯಬ್ ಆಗಿಬಿಡುವದೇ ಜಾಸ್ತಿ. ನಂದೂ 2011 ನಲ್ಲಿ ಹಾಗೆ ಆಗಿತ್ತು. ಎಲ್ಲ ಫೇಸ್ಬುಕ್ ಮಾಯೆ. ಈಗ ಫೇಸ್ಬುಕ್ ಹುಚ್ಚು ಕಮ್ಮಿ ಆಗಿದೆ. ಹಾಂಗಾಗಿ ಮೊದಲಿನ ಪ್ರೀತಿ ಓದೋದು, ಬರೆಯೋದು ಬ್ಯಾಕ್ ಟು ನಾರ್ಮಲ್. ಹ್ಯಾಪೀ.

ನಾನು ಸ್ವಗತ ಬರೆಯೋದು ಕಮ್ಮಿ. ಬರೆಯೋಕೆ ಬೇಕಾದಷ್ಟು ಆಸಕ್ತಿಕರ ವಿಷಯಗಳಿರುವಾಗ ಸ್ವಗತ ಯಾಕೆ? ಮೊನ್ನೆ ಒಂದಿಷ್ಟು ಜನ ಸಹೃದಯೀ ದೋಸ್ತರು, ಬಂಧುಗಳು ಕೇಳಿದರು ಅಂತ ಒಂದು ಚಿಕ್ಕ ರೈಟ್ ಅಪ್ ಅಷ್ಟೇ.

ದೇವರು ಒಳ್ಳೇದು ಮಾಡ್ಲಿ ಎಲ್ಲರಿಗೂ.

No comments: