Thursday, January 15, 2015

I is fine!

ಟೀಚರ್: ಇಂಗ್ಲೀಷ್ "I" ಉಪಯೋಗಿಸಿ ಒಂದು ವಾಕ್ಯ ಮಾಡ್ರೀ. ಯಾರು ಮಾಡ್ತೀರಿ?????

ದ್ಯಾಮ್ಯಾ (ಕೈಯೆತ್ತಿ, ಕೈಯೆತ್ತಿ, ಜಿಗಿದು, ಜಿಗಿದು, ಜಿಗಿಯೋವಾಗ ಚೊಣ್ಣಾ ಜಾರುತ್ತಿದ್ದರೂ): ಟೀಚರ್ ನಾನ್ರೀ! ನಾನ್ರೀ! ನನ್ನೇ ಕೇಳ್ರೀ. ಪ್ಲೀಸ್ ರೀ ಟೀಚರ್!

ಟೀಚರ್: ಸರಿ. ಮಾಡಪಾ ದ್ಯಾಮಣ್ಣ. ಏನು ವಾಕ್ಯ ಮಾಡ್ತೀ??

ದ್ಯಾಮ್ಯಾ: I is.......

(ಅಷ್ಟರಾಗ ಅವನ ತಡೆದ) ಟೀಚರ್: ಏ! ಹುಚ್ಚ ಖೋಡಿ! "I is" ಅಂತೀ ಅಲ್ಲೋ?! ಹಾಂ?! ಅದು I am....I am....

ದ್ಯಾಮ್ಯಾ (ಮತ್ತೊಮ್ಮೆ): I is......

ಈಗ ಟೀಚರ್ ಉರಿದು ಬಿದ್ದು, ಡಯಾಸ್ ಬಿಟ್ಟು ಕೆಳಗ ಇಳಿದು ಬಂದು, ದ್ಯಾಮ್ಯಾನ ತಲಿಗೆ ಒಂದು 'ಫಟ್' ಅಂತ ಕೊಟ್ಟರು. ಅದರಿಂದ ದ್ಯಾಮ್ಯಾನ ತಲಿ ಗಿಂವ್ ಅಂತು. ಟೀಚರ್ ಹೇಳಿದಾಂಗ ಕೇಳದಿದ್ದರೆ ಭರಪೂರ ಕಡತ, ಕಡಬು ಎಲ್ಲಾ ಬೀಳ್ತಾವ ಅಂತ ಹೇಳಿ ಬರೋಬ್ಬರಿ, ಟೀಚರ್ ಹೇಳಿದಂಗೆ ವಾಕ್ಯ ಮಾಡಿ, ಕೂತುಬಿಟ್ಟ.

ದ್ಯಾಮ್ಯಾ: I am the ninth letter of English alphabet!

ಟೀಚರ್ ಮತ್ತ ರಪ್ಪಂತ ಒಂದು ತಲಿಗೆ ಕೊಟ್ಟರು.

ಟೀಚರ್: ಈ ವಾಕ್ಯ ಮಾಡಲಿಕ್ಕೆ ಹೊಂಟಿದ್ದಿ ಏನು? ಅಂದ್ರ "I is" ಬರೋಬ್ಬರಿ ಇತ್ತಲ್ಲೋ! ಮೊದಲೇ ಹೇಳಬೇಕೋ ಬ್ಯಾಡೋ??? (!!!) ಹುಚ್ಚನ ತಂದು!

ಇದನ್ನು ಕೇಳಿದ ದ್ಯಾಮ್ಯಾ ಢಮಾರ್!!!!

ಮುಂದ ಆವಾ ಎಂದೂ ಇಂಗ್ಲೀಷ್ ಕ್ಲಾಸ್ ಒಳಗ ಇಲ್ಲದ ಉಸಾಬರಿ ಮಾಡಲಿಲ್ಲ! :)

(ಮೂಲ: ಶಿವರಾಂ ಶಾಸ್ತ್ರಿ)

ವಿವರಣೆ (ಬೇಕಾದವರಿಗೆ ಮಾತ್ರ): ದ್ಯಾಮ್ಯಾ ಹೇಳಲಿಕ್ಕೆ ಹೊಂಟಿದ್ದು - "I" is the ninth letter of the alphabet - ಅನ್ನುವ ಬರೋಬ್ಬರಿ ವಾಕ್ಯವಾಗಿತ್ತು. ಪೂರ್ತಿ ಕೇಳದ ಟೀಚರ್ I am ಅಂತ ತಿದ್ದಿದ್ದಕ್ಕೆ ದ್ಯಾಮ್ಯಾ - "I" am the ninth letter of English alphabet - ಅಂತ ಅಂದುಬಿಟ್ಟ! :)



No comments: