Wednesday, February 18, 2015

ಕಿಸ್ಸಿಂಗ್ ಕಿಡಿಗೇಡಿ

ಕಿಸ್ಸಿಂಗ್ ಕಿಡಿಗೇಡಿ....ರಾಮ್ ಜೇಠ್ಮಲಾನಿ. ಹೆಸರು ರಾಮ. ಎತ್ತಿದ ಅವತಾರ, ಮಾಡುವ ಕಾರಬಾರ ಎಲ್ಲ ಕೃಷ್ಣ.

ಲೀನಾ ಚಂದಾವರಕರ ಮೂಲ ಧಾರವಾಡದವರು. ಎಲ್ಲೋ ಭೆಟ್ಟಿ ಆಗ್ಯಾರ.

'ಏನವಾ ಪೇಢೆ ತರಲಿಲ್ಲೇನು?' ಅಂತ ಕೇಳ್ಯಾರ ಜೇಠ್ಮಲಾನಿ ಸಾಹೇಬರು. ಧಾರವಾಡ ಪೇಢೆ ಅಂದ್ರ ಅವರೂ ಫಿದಾ.

'ಪೇಢೆ ರೀ??? ಇಲ್ಲರೀ ಸರ್. ಈಗಿತ್ತಲಾಗ ಧಾರವಾಡಕ್ಕೆ ಹೋಗೇ ಇಲ್ಲರೀ ಸರ್ರಾ' ಅಂದ್ರು ಲೀನಾ ಮೇಡಂ.

'ನೀ ಅಂತೂ ಪೇಢೆ ತರಲಿಲ್ಲ. ಕೊಡಲಿಲ್ಲ,' ಅಂದ ಜೇಠ್ಮಲಾನಿ, 'ನಾನss ನಿನಗ ಒಂದು ಕೊಡಲೀ????' ಅಂತ ಕೇಳ್ಯಾರ.

ಎಲ್ಲಾ ಕಡೆ 'ನಂದೆಲ್ಲಿ ಇಡ್ಲೀ????' ಮಾಡಿ ಈಗ ಎಲ್ಲೂ ಸಲ್ಲದ ವಕೀಲರು ಅಪರೂಪಕ್ಕ 'ಕೊಡ್ಲೀ????' ಅಂತ ಕೇಳಲಿಕತ್ತಾರ ಅಂತ ಭಾಳ ಆಶ್ಚರ್ಯಪಟ್ಟರಂತ ಲೀನಾ ಮೇಡಂ.

'ಏನ್ರೀ? ಏನು ಕೊಡ್ತಿರೀ?????' ಅಂತ ಕೇಳಿದರು.

'ಬೆಲ್ಲಾ!!!!!' ಅಂದವರೇ  ಜೇಠ್ಮಲಾನಿ ಮುಂದೆ ಮಾತಾಡಲಿಲ್ಲ. ಮಾತಾಡಲಿಕ್ಕೆ ಬಾಯಿ ಇತ್ತು. ಭಾಳ ಬ್ಯುಸಿ ಇತ್ತು.

ಕಲಿತ ಪಾಠ: ಪೇಢೆ ಕೊಡಲಿಲ್ಲ ಅಂದ್ರ ಬೆಲ್ಲ ಸಿಗೋ ಚಾನ್ಸ್ ಭಾಳ ಇರ್ತಾವ! (ಷರತ್ತುಗಳು ಅನ್ವಯಿಸುತ್ತವೆ)

ರಾಮ್ ಜೇಠ್ಮಲಾನಿ ಬಗ್ಗೆ ಬರೆದಿದ್ದ ಹಳೆಯ ಎರಡು ಬ್ಲಾಗ್ ಲೇಖನಗಳು :

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ? 

ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

3 comments:

angadiindu said...

ಹೆಗ್ಡೆಯವರ, ಧಾರವಾಡ ಲೈನ್ ಬಜಾರ್ ಬಾಬುಸಿಂಗನ ಪೇಢೆ ಅಂಗಡಿಯೊಳಗ ಇವತ್ಗೂ ಕಿಶೋರಕುಮಾರ ಧಾರವಾಡ ಪೇಢೆ ತಿನ್ನೋ ಫೋಟೋ ಹಾಕ್ಯಾರ್ರಿ. ಅದರ ಮಗ್ಗಲದಾಗ ಈ ಫೋಟೋನ್ನೂ ಹಾಕಾಕ್ ಹೇಳೋನೇನ್ರೀ ?

Mahesh Hegade said...

LOL....ಗುಡ್ ಐಡಿಯಾ ಸರ್ಜೀ! :)

Tritatva Mallahatti said...


That guy can also pose in some "Anantana Aavantara" ads!!