Friday, March 27, 2015

ರಾಮ ನವಮಿ

ರಾಮ ನವಮಿ ಶುಭಾಶಯಗಳು.

'ಪಾನಕ', 'ಕೋಸಂಬರಿ' ಎಲ್ಲ ಬರೋಬ್ಬರಿ ತೊಗೊಂಡುಬಿಡ್ರೀ! ;) ಸಮಾರಾಧನೆ ಚೊಲೋ ಆಗ್ಲಿ. ಸಂದಿಯೊಳಗ ಸಮಾರಾಧ್ನಿ ಅಲ್ಲ ಮತ್ತ!

ಅಯ್ಯೋ! ಮಾವಿನಕಾಯಿ ಪಾನಕ, ಹೆಸರುಬ್ಯಾಳಿ ಕೋಸಂಬರಿ ಅಂದೆ ಅಷ್ಟೇ. ನೀವು ರಾಮ ನವಮಿ ಮಸ್ತ ವೀಕೆಂಡ್ ಬಂದದ ಅಂತ ಬೇರೇನೇ ತರಹದ 'ಪಾನಕ', ಬೇರೇನೇ ತರಹದ 'ಕೋಸಂಬರಿ' ಅಂತ ತಿಳ್ಕೊಂಡು ಆಹಾ! ಊಹೂ! ಅಂತ ಯಾಕ ಅಷ್ಟು ಸಂತೋಷದಿಂದ ಮುಲುಗುತ್ತಿದ್ದಿರೋ ಏನೋ! ;)

ಒಂದಿಷ್ಟು ಬರೋಬ್ಬರಿ ಪಾನಕ, ಕೋಸಂಬರಿ ಸೇವನೆ ಆದ ಮ್ಯಾಲೆ ಕೆಳಗಿನ ಶ್ಲೋಕ ೧೦೮ ಬಾರಿ ಹೇಳಿ, ಬೇಕಾದ್ರ ಡ್ಯಾನ್ಸ್ ಸಹ ಮಾಡಿಬಿಟ್ಟರೆ ರಾಮ ನವಮಿ ಸಮಾಪ್ತ.

ರಾಮ್ ರಾಮ್ ಸಬ್ ಕರೇ
ದಶರಥ ಕರೇ ನ ಕೋಯಿ
ರಾಮ್ ರಾಮ್ ಸಬ್ ಕರೇ
ದಶರಥ ಕರೇ ನ ಕೋಯಿ
ಜೋ ದಶರಥ ಕಸರತ್ ನ ಕರೇ ತೋ ರಾಮ ಕಹಾನ್ ಸೇ ಹೋಯಿ!

ಇಲ್ಲೆ ದಶರಥ್ ಕಸರತ್ ಮಾಡಿದ ಅಂದ್ರ ಭಾಳ ಕಷ್ಟ ಪಟ್ಟು ಪುತ್ರ ಕಾಮೇಷ್ಟಿ ಯಾಗ ಮಾಡಿ ರಾಮನನ್ನು ಪಡಕೊಂಡ ಅಂತ ಅರ್ಥ. ಅಪಾರ್ಥ ಬೇಡ! ;)

2 comments:

sunaath said...

ಆತರೆಪಾ! ಕಸರತ್ತು ಯಾರರೇ ಮಾಡಲಿ, ನಾವಂತೂ ಪಾನಗೋಷ್ಠಿಯಲ್ಲಿ ಸ್ವಸ್ತಿವಾಚನ ಮಾಡಲಿಕ್ಕೆ ತಯಾರು!
Three cheers to Mahesh Hegade!!!

Mahesh Hegade said...

Thank you Sir. Cheers to you too!