Saturday, April 04, 2015

'ಮುಖ ಪುಸ್ತಕ'ದಲ್ಲಿ ಮುಖ ತೋರಿಸದ ಮುಖೇಡಿಗಳು

ಫೇಸ್ಬುಕ್ (Facebook) ಅಂದರೆ ಮುಖ ಪುಸ್ತಕ. ಹಾಗೆ ಇದ್ದಾಗ ಸ್ವಂತ ಮುಖ ತೋರಿಸದೇ, ಮಾರಿ ತೋರಿಸದೇ, ಮಸಡಿ ತೋರಿಸದೇ ಯಾರದ್ದೋ ಫೋಟೋ ಹಾಕಿಕೊಂಡು ಕೂತರೆ ಹ್ಯಾಂಗ್ರೀ????????

ಮೊನ್ನೆ ಒಬ್ಬರು ಫೇಸ್ಬುಕ್ ಮೇಲೆಯೇ ಹೇಳುತ್ತಿದ್ದರು. ಯಾವದೋ ಒಂದು ಫೇಸ್ಬುಕ್ ಪ್ರೊಫೈಲ್ ನೋಡಿದರಂತೆ. ಫೋಟೋ ಯಾಕೋ ಸಂಶಯ ಬಂತಂತೆ. ಹೋಗಿ ತನಿಖೆ ಮಾಡಿದರೆ ಗುಜರಾತಿನಲ್ಲಿ ಯಾವದೋ ಹೆಂಗಸರ ಬ್ಯೂಟಿ ಪಾರ್ಲರ್ ವೆಬ್ ಸೈಟ್ ಒಂದರಲ್ಲಿ ಹಾಕಿದ್ದ ಫೋಟೋ ಅಂತೆ ಅದು. ಅವರು ಅದು ಹ್ಯಾಂಗೆ ಕಂಡು ಹಿಡಿದರೋ ಗೊತ್ತಿಲ್ಲ. ನಮ್ಮದು ಒಂದು ಐಡಿಯಾ ಇದೆ. ಇಷ್ಟೇ. ಗೂಗಲ್ ಇಮೇಜ್ ಸರ್ಚ್ ಅಂತ ಇದೆ. https://images.google.com/. ಅಲ್ಲಿ ಹೋಗಿ ಚಿತ್ರ ಹುಡುಕಿ. ಅಕಸ್ಮಾತ ಎಲ್ಲಿಯೋ ಇಂಟರ್ನೆಟ್ ನಿಂದ ಫೋಟೋ ಎತ್ತಿ ಫೇಕ್ ಪ್ರೊಫೈಲ್ ಮಾಡಿಕೊಂಡಿದ್ದರೆ ತಾಪಡ್ತೋಪ್ ಗೊತ್ತಾಗಿಬಿಡುತ್ತದೆ. ಯಾರ್ಯಾರೋ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ನಮ್ಮ ಊರಿನವರು ಅಥವಾ ಫ್ರೆಂಡ್ ಆಫ್ ಫ್ರೆಂಡ್ ಇದ್ದರೆ accept ಮಾಡುವಲ್ಲಿ ಯಾವದೇ ತೊಂದರೆಯಿಲ್ಲ. 'There are no strangers here. Only the friends you have not yet met' ಅನ್ನುವ ನಂಬಿಕೆ ನಮ್ಮದು. ಹಾಗಾಗಿ ಯಾರ್ಯಾರೋ ಇದ್ದಾರೆ ನಮ್ಮ ಫ್ರೆಂಡ್ ಲಿಸ್ಟಿನಲ್ಲಿ. ತುಂಬ ಒಳ್ಳೆಯ ಜನರೇ ಪರಿಚಿತರಾಗಿದ್ದಾರೆ ಅನ್ನಿ. ಎಲ್ಲೋ ಅಪರೂಪಕ್ಕೆ ಪಿರ್ಕಿ, ಪೊರ್ಕಿ ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೂ ಸಹ ಇದೆ. ಅವನ್ನು ತೆಗೆದು ಹಾಕಿದ್ದೇವೆ. ಎಲ್ಲರ ಹಾಗೆ.

ಆದರೆ ಮುಖಪುಸ್ತಕದಲ್ಲಿ ಸ್ವಂತ ಮುಖ ತೋರಿಸದವರು ಅಥವಾ ಯಾರ್ಯಾರದ್ದೋ ಫೋಟೋ ಹಾಕಿಕೊಂಡ ಅಡ್ನಾಡಿಗಳು ಕಂಡುಬಂದರೆ, ಸಂಶಯ ಬಂದರೆ ಒಂದು ಸರಿ ಇಮೇಜ್ ಸರ್ಚ್ ಮಾಡಿಬಿಡುತ್ತೇನೆ. ಇತ್ತೀಚೆಗೆ ಒಂದು ವಿಷಯದ ಬಗ್ಗೆ ಸಿಕ್ಕಾಪಟ್ಟೆ ವಿವಾದಾತ್ಮಕವಾಗಿ ಬರೆಯುತ್ತಿರುವ ಒಬ್ಬರ ಬಗ್ಗೆ ಯಾಕೋ ಡೌಟ್ ಬಂತು. ಪುಣ್ಯಾತ್ಮರು ಯಾರೋ ಅಮೇರಿಕನ್ ನಟನ ಫೋಟೋ ಹಾಕಿಕೊಂಡು ಯಾವದೋ ದೇಸಿ ಇಶ್ಯೂ ಬಗ್ಗೆ ಬರೆಯುತ್ತಿದ್ದಾರೆ. ಯಾಕೋ ಏನೋ!? ಇರಲಿ ಬಿಡಿ. ಸಕತ್ತಾಗಿ ಬರೆಯುತ್ತಿದ್ದಾರೆ. ನಾವು ಓದಿ ಮಜಾ ಮಾಡೋಣ. ಅವರ ಭಾಂಡಾ ಓಪನ್ ಮಾಡಿಬಿಟ್ಟರೆ ಬರೆಯೋದನ್ನ ಬಿಟ್ಟು ಓಡಿ ಹೋದಾರು.

ತಮ್ಮ privacy ಕಾರಣಕ್ಕೆ ತಮ್ಮ ಮುಖ ತೋರಿಸದ ಮಂದಿ ಬಗ್ಗೆ ಏನೂ ತಕರಾರು ಇಲ್ಲ ಬಿಡಿ. ಅವರ ನಿರ್ಧಾರ ಗೌರವಿಸಬೇಕಾಗಿದ್ದೇನೋ ಸರಿ. ಅವರ ಅವರ ಮುಖಕ್ಕೆ, ಅವರ ಅವರ ತಿ*ಕ್ಕೆ ಅಂತ ಬಿಟ್ಟು ಬಿಡಬಹುದು. ಆದರೆ ಒಂದು ವಿಷಯದ ಬಗ್ಗೆ ಜೋರ್ದಾರ ಮಾತಾಡುತ್ತೀರಿ, ಚರ್ಚೆ ಮಾಡುತ್ತೀರಿ ಅಂತಾದರೆ ಮುಖೇಡಿತನ ಯಾಕೆ ಅಂತ ಅಷ್ಟೇ ಜಿಜ್ಞಾಸೆ.

ಇರಲಿ. ಇಮೇಜ್ ಸರ್ಚ್ ಬಗ್ಗೆ ನಿಮಗೆ ಗೊತ್ತಿತ್ತೆ? ಫೇಕ್ ಪ್ರೊಫೈಲ್ ತನಿಖೆ ಮಾಡಲು ಮತ್ಯಾವ ಟೆಕ್ನಿಕ್ ಉಪಯೋಗಿಸಬಹುದು? :)

4 comments:

Pundalik Tikmore said...


Very valid point!

Sending a few "kutro'" to sniff around may be helpful!!

sunaath said...

ನನ್ನ ಮುಖ ಜರಾ horror ಐತ್ರಿ. ನೋಡಿದ ಓದುಗರು ಹೆದರಿಕೋಬಾರ್ದು ಅಂತ spider(man)ಮುಖ ಹಾಕೇನಿ!

Dunasya Tikare said...


Ha! Ha!!

Some novelty items from Mumbai!!!

Mahesh Hegade said...

LOL...Sunaath sir :)