Friday, April 10, 2015

ಎದ್ದೇಳು ಮಂಜುನಾಥ

ಸುಪ್ರಭಾತ! ಶುಭ ಮುಂಜಾನೆ!

ಆಕಾಶವಾಣಿ ಧಾರವಾಡದಿಂದ ಭಕ್ತರ ಕೋರಿಕೆ ಮೇಲೆ ಪ್ರಸಾರವಾಗುತ್ತಿದೆ 'ಎದ್ದೇಳು ಮಂಜುನಾಥ' ಭಕ್ತಿ ಗೀತೆ. ಇದು ಭಕ್ತರಿಗೇ ಅರ್ಪಣೆ.

ಎದ್ದೇಳು ಮಂಜು'ನಾತ' ಏಳು ಬೆಳಗಾಯಿತು
ಸಂಡಾಸಿಗೆ ಹೋದ ಮಂದಿಯೆಲ್ಲ ಡಿಸ್ಕೋ ಹೊಡೆಯುತಿಹರು
ನೀರು ಹಾಕಿ ಬರದೇ ಗಬ್ಬು ನಾತ ಹೊಡೆಸುತಿಹರು
ಗಜರಾಜನು ನಿನಗೆ fresh ಆಗಿ ಲದ್ದಿ ಹಾಕುತಿಹನು
ಆದಿಶೇಷನು ನಿನಗೆ ಅವನ ಮೊಟ್ಟೆಯ ಆಮ್ಲೆಟ್ (omelet) ಮಾಡುತಿಹನು
ಎದ್ದೇಳು ಮಂಜು'ನಾತ' ಏಳು ಬೆಳಗಾಯಿತು

ಧರ್ಮಸ್ಥಳದ ಮಂಜುನಾಥ, ಅಣ್ಣಪ್ಪ, ಹೆಗ್ಗಡೆ ಎಲ್ಲರ ಕ್ಷಮೆ ಕೋರಿಯೇ ಬಿಡುತ್ತೇನೆ! ಇಲ್ಲಾಂದ್ರೆ ಅಲ್ಲಿಯ ಅಣ್ಣಪ್ಪ ದೇವರು ಮುರಕೊಂಡು ಬಿದ್ದ ಅಂದರೆ ಕಷ್ಟ. ಧರ್ಮಸ್ಥಳಕ್ಕೆ ಸುಳ್ಳು ಹೇಳಿ, ಮನಮಾನಿ ಮಾಡಿ, ಭೋಂಗು ಬಿಟ್ಟು, ಬರೋಬ್ಬರಿ ಬರ್ಬಾದಾಗಿ ಹೋದ ಎಷ್ಟೋ ಜನರು ನಮಗೆ ಗೊತ್ತು ಬಿಡಿ. ನಿಮಗೆ ಒಂದು ಮಾತು ಹೇಳಲೇ? ನಿಮಗೆ ಯಾರಾದರೂ ರೊಕ್ಕ ಕೊಡಬೇಕಿದ್ದು ಕೊಡದೇ ಸತಾಯಿಸುತ್ತಿದ್ದರೆ ಒಂದು ಆವಾಜ್ ಹಾಕಿ, 'ಧರ್ಮಸ್ಥಳಕ್ಕೆ ಬರೆದು ಬಿಡುತ್ತೇನೆ' ಅಂತ. ನಿಮ್ಮ ಆವಾಜಿಗೆ ಒಪ್ಪಿ, ರೊಕ್ಕ ವಾಪಸ್ ಕೊಟ್ಟರೋ ಸರಿ. ಇಲ್ಲ ಅಂದರೆ ಒಂದು ಸಿಂಪಲ್ ಪೋಸ್ಟ್ ಕಾರ್ಡಿನಲ್ಲಿ ನಿಮ್ಮ ವ್ಯಾಜ್ಯ ಬರೆದು, ಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, ಅಂತ ವಿಳಾಸ ಬರೆದು ಪೋಸ್ಟ್ ಮಾಡೇ ಬಿಡಿ. ಒಂದೇ ಮಾತು ನೆನಪಲ್ಲಿ ಇಡಿ. ಸತ್ಯ ನಿಮ್ಮ ಪರವಾಗಿ ಇರಬೇಕು ಅಷ್ಟೇ. ಇಲ್ಲಾಂದ್ರೆ ಧರ್ಮಸ್ಥಳದ ಅಣ್ಣಪ್ಪ ಉಲ್ಟಾ ಹೊಡೆದುಬಿಡುತ್ತಾನೆ. ನಿಮ್ಮ ಬತ್ತಿ ನಿಮ್ಮ ಬ್ಯಾಕಿಗೇ ಬಂದು ಕೂಡುತ್ತದೆ. ನಿಮ್ಮ ಅರ್ಜಿ ಸ್ವೀಕರಿಸಿದ ಶ್ರೀ ಹೆಗ್ಗಡೆ ಅವರು ಧರ್ಮಸ್ಥಳದ ದೇವರ ಪರವಾಗಿ ಒಂದೇ ಒಂದು ಪತ್ರ ಹಾಕುತ್ತಾರೆ ನಿಮ್ಮ ವಿರುದ್ಧ ಪಾರ್ಟಿಗೆ. 'ಹೀಗೆ ನಿಮ್ಮ ಕುರಿತಾಗಿ ಇಂತವರು ಹೀಗೆ ಬರೆದಿದ್ದಾರೆ. ನೀವು ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಮುಂದಿನ ಕ್ರಮ ಕೈಗೊಳ್ಳಿ. ಧರ್ಮಸ್ಥಳದ ದೇವರು ನಿಮಗೆ ಒಳ್ಳೆಯದು ಮಾಡಲಿ. ಇಂತಿ ನಮಸ್ಕಾರ. ಶ್ರೀ ಧರ್ಮಸ್ಥಳ ಕ್ಷೇತ್ರ,' ಅಂತ ಸ್ಟ್ಯಾಂಡರ್ಡ್ ಪತ್ರ ನಿಮ್ಮ ವಿರುದ್ಧ ಪಾರ್ಟಿಗೆ ಹೋಗುತ್ತದೆ. ಎಷ್ಟೋ ಮಂದಿ ಧರ್ಮಸ್ಥಳದಿಂದ ಪತ್ರ ಬಂತು ಅಂತ ಹೇಳಿ, ಹೆದರಿ, ತಮ್ಮದು ತಪ್ಪಿದ್ದರೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಭಂಡ ಮಂದಿ ಮಾತ್ರ ಅದನ್ನು ಧಿಕ್ಕರಿಸುತ್ತಾರೆ. ಅದರ ಪರಿಣಾಮ ಏನು ಗೊತ್ತೇ? ಧರ್ಮಸ್ಥಳದ ದೇವರಾದ ಮಂಜುನಾಥ, ಅಣ್ಣಪ್ಪ ಭಂಡ ಮಂದಿಗೆ ಅವರದ್ದೇ ಆದ ಪಾಪ ಪ್ರಜ್ಞೆ ಮೂಲಕ ಬರೋಬ್ಬರಿ ಇಕ್ಕುತ್ತಾರೆ. ಅದರ ಪರಿಣಾಮವಾಗಿ ಮಂದಿ ಫುಲ್ ಹುಚ್ಚರಾಗಿಹೋಗುತ್ತಾರೆ. ಧಾರವಾಡದ ಬೆಳಗಾಂ ರೋಡಿಗೆ ಬರುತ್ತಾರೆ. ಯಾಕೆಂದರೆ ಧಾರವಾಡದ ಮೆಂಟಲ್ ಹಾಸ್ಪಿಟಲ್ ಇರುವದು ಬೆಳಗಾಂ ರೋಡಿನಲ್ಲೇ ನೋಡಿ. ಇದೆಲ್ಲ ಕೇವಲ ಬೊಗಳೆ ಅಂತ ಹೇಳದಿರಿ. ಸಿರ್ಸಿ ಕಡೆ ನಮ್ಮ ಬಹಳ ಹತ್ತಿರದ ಸಂಬಂಧಿಯೇ ಒಬ್ಬ ಹೀಗೆ ಧರ್ಮಸ್ಥಳದ ಜೊತೆ ಲಫಡಾ ಮಾಡಿಕೊಂಡು, ಹುಚ್ಚನಾಗಿ, ಅಕಾಲ ಮೃತ್ಯುವಿಗೆ ಈಡಾಗಿದ್ದನ್ನು ಖುದ್ದಾಗಿ ಕಂಡಿದ್ದೇನೆ. ಅನೇಕಾನೇಕ ಉದಾಹರಣೆಗಳು ಇವೆ. ನಿಮಗೆ ಟೋಪಿ ಹಾಕಿದ ಮಂದಿ ನಿಮಗೆ ನಿಮ್ಮ ರೊಕ್ಕ, ನಿಮ್ಮ ಆಸ್ತಿ ವಾಪಸ್ ಕೊಡುತ್ತಾರೋ ಇಲ್ಲವೋ ಅದರ ಬಗ್ಗೆ ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥ ಗ್ಯಾರಂಟಿ ಕೊಡುವದಿಲ್ಲ. ಆದರೆ ನೀವು ಸತ್ಯವಂತರಾಗಿದ್ದು, ಖುಲ್ಲಂ ಖುಲ್ಲಾ ಪೂರ್ತಿ ದಿಲ್ ಖೋಲ್ಕೆ ಧರ್ಮಸ್ಥಳದ ಮಂಜುನಾಥನಿಗೆ ಅರ್ಜಿ ಹಾಕಿಕೊಂಡಿರಿ ಅಂದರೆ ನಿಮ್ಮ ವಿರುದ್ಧ ಪಾರ್ಟಿಯ ಕುಂಡಲಿಯಲ್ಲಿ ಎಲ್ಲ ತರಹದ ಶನಿ ವಕ್ಕರಿಸಿದ ಅಂತ ತಿಳಿಯಿರಿ.

ಜೈ ಧರ್ಮಸ್ಥಳ!

2 comments:

sunaath said...

ಧಱ್ಮಸ್ಥಳದವರು ನಿಮ್ಮ ಲೇಖನವನ್ನು ಪತ್ರಿಕೆಗಳ ಜಾಹೀರಾತು ವಿಭಾಗದಲ್ಲಿ ಪ್ರಕಟಿಸಲು ನಿಮ್ಮನ್ನು ಭೇಟಿ ಮಾಡಬಹುದು. ‘ಇದು ಒಂದು ಸತ್ಯ ಅನುಭವ, ಮಹೇಶ ಹೆಗಡೆಯವರೇ ಅನುಭವಿಸಿದವರು’ ಎಂದು ಕೆಳಟಿಪ್ಪಣಿ ಬರೆಯಬಹುದು.

Mahesh Hegade said...

LOL Sir. Definitely. ನಾವು ಸದ್ಯಕ್ಕೆ ಧರ್ಮಸ್ಥಳದ ದೇವರ ಅನುಗ್ರಹವನ್ನೇ ಅನುಭವಿಸಿದ್ದೇವೆ. ಆದರೆ ಧರ್ಮಸ್ಥಳದ ದಿಕ್ಕತ್ ಧಿಕ್ಕರಿಸಿ ಮೆಂಟಲ್ ಆದ ಮಂದಿಯ ಕೇಸುಗಳು ಗೊತ್ತಿವೆ. ಅವರಿಗೆ ರೆಫರ್ ಮಾಡೋಣ.