Tuesday, June 07, 2016

ಮೊಸಳಿ ತತ್ತಿ ಎಂಬ ಚೌಕ ಗುಳಗಿ

ನದಿ ದಂಡಿ ಮ್ಯಾಗ ಚೆಂಡಾ ಆಡಾಕತ್ತಿದ್ದಿವಿರೀ ಸರ್ರಾ.

ಮುಂದ??

ಅದೇನಾತ್ರೀ ಅಂದ್ರ ನಮ್ಮ ಚೆಂಡರೀ, ಬಾಲ್ ಬಾಲ್, ನದಿಯಾಗ ಹೋಗಿ ಬಿತ್ತರೀ. ಏನಾತ್ ಹೇಳ್ರೀ?

ನೀವು ಆಡಾಕತ್ತಿದ್ದ ಚೆಂಡು ನದಿಯಾಗ ಹೋಗಿ ಬಿತ್ತು. ಮುಂದ??

ನದಿಯಾಗ ಇಳಿದು ಬಾಲ್ ತರೋಣ ಅಂದ್ರ ನದಿಯಾಗ ಒಂದು ಮೊಸಳಿ ಇತ್ತರೀ!!! ಗೊತ್ತೈತ್ರೀ??!!

ಹೌದಾ? ಮೊಸಳಿ? ನದಿಯಾಗ? ಮುಂದ? ಬಾಲ್ ಹಾಂಗs ಬಿಟ್ಟು ಮನಿಗೆ ಬಂದ್ರ್ಯಾ???

ಏ!! ಅದೆಂಗ ಬಾಲ್ ಬಿಟ್ಟು ಬರಾಕಾಗತೈತ್ರೀ ಸರ್ರಾ? ನದ್ಯಾಗ ಇಳಿದು ಬಾಲ್ ತರಾಕs ಬೇಕು. ಏನ್ರೀ?

ಹ್ಯಾಂಗ ತಂದ್ರೀ ಬಾಲ್? ಮೊಸಳಿ ಜೋಡಿ ಗುದ್ದಾಡಿ ತಂದ್ರ್ಯಾ???? ಹ್ಯಾಂ???

ಅವನೌನ್! ಜೋರ್ ಗಾಳಿ ಬೀಸಿದ್ರ ಹಾರಿಹೋಗೋ ಬಿರುಗಾಳಿ ಭೀಮನ ಪರ್ಸನಾಲಿಟಿ ನಂದ್ರಿ ಸರ್ರಾ. ನೀವ ನೋಡಾಕತ್ತಿರಲ್ಲಾ? ಹಾಂಗಿದ್ದಾಗ ಎಲ್ಲಿ ನದ್ಯಾಗ ಇಳಿದು ಮೊಸಳಿ ಜೋಡಿ ಗುದ್ದಾಡೋಣ? ಅದಕs ಒಂದು ಐಡಿಯಾ ಮಾಡಿದಿವಿ ಸರ್ರಾ.

ಐಡಿಯಾ ಮಾಡಿದ್ರ್ಯಾ? ಏನು? ಏನು ಐಡಿಯಾ??

ಸರ್ರಾ, ಅದೇನಾಗಿತ್ತು ಅಂದ್ರ ಆ ಮೊಸಳಿ ದಂಡಿ ಮ್ಯಾಗ ತತ್ತಿ ಇಟ್ಟಿತ್ತರೀ. ತತ್ತಿ ರೀ ಅವ ಮೊಟ್ಟೆ ಮೊಟ್ಟೆ. ದೊಡ್ಡ ರೌಂಡ್ ರೌಂಡ್ ಮೊಸಳಿ ತತ್ತಿ. ಗೊತ್ತಾತರೀ???

ಹಾಂ! ಗೊತ್ತಾತೋ ಮಾರಾಯಾ. ಮೊಸಳಿ ತತ್ತಿ ತಂದು ಆಮ್ಲೆಟ್ ಮಾಡಿ ತಿಂದ್ರ್ಯಾ??? ಲಗೂ ಹೇಳೋ!

ಸರ್ರಾ, ನಮ್ಮ ದೋಸ್ತ ಹೋಗಿ ಮೊಸಳಿ ತತ್ತಿಗೆ ಕೈ ಹಾಕಿದ ನೋಡ್ರೀ! 'ನನ್ನ ತತ್ತಿಗೆ ಅದ್ಯಾವ ಭಾಡ್ಕೋ ಸೂಳಿಮಗ ಕೈ ಹಚ್ಚಿದ' ಅನ್ನೋ ಸಿಟ್ಟಿನಾಗ ಮೊಸಳಿ ನೀರು ಬಿಟ್ಟು ದಂಡಿ ಮ್ಯಾಗ ಬಂದು ಭುಸ್ ಭುಸ್ ಅಂತು ನೋಡ್ರೀ!

ಅಬ್ಬಾ! ತತ್ತಿ ಮುಟ್ಟಿದರ ಮೊಸಳಿಗೆ ಅಷ್ಟು ಸಿಟ್ಟಾ??? ಮುಂದ???

ಮೊಸಳಿ ನದಿ ಬಿಟ್ಟು ಹೊರಗ ಬಂದಿದ್ದ ಬಂದಿದ್ದು, ನಾ ನೀರಾಗ ಜಿಗಿದು, ಸುಂಯ್ ಅಂತ ಈಜಿ, ಬಾಲ್ ತೊಗೊಂಡು ಬಂದೆ ನೋಡ್ರೀ. ಆ ಹುಚ್ಚ ಮೊಸಳಿ ತನ್ನ ತತ್ತಿ ಅದಾವೋ ಅಥವಾ ಆಮ್ಲೆಟ್ ಆಗಿಹೋಗ್ಯಾವೋ ಅಂತ ನೋಡಿಕೋತ್ತ ದಂಡಿ ಮ್ಯಾಗೆ ನಿಂತಿತ್ತು ನೋಡ್ರೀ ಸರ್ರಾ. ಹ್ಯಾಂಗೈತ್ರೀ????

ಚೌಕ್ ಗುಳಗಿ ಮಸ್ತ ಐತಿ. ಎಲ್ಲೆ ಸಿಗ್ತಾವ ಇಂತಾ ಚಚ್ಚೌಕ ಗುಳಗಿ? ನಮಗೂ ಒಂದು ಡಜನ್ ಬೇಕಾಗ್ಯಾವ.

ಯಾಕ ಸರ್ರಾ?

ನಿನ್ನಂತಾ ಕೆಲವು ಹಡಬಿಟ್ಟಿ ಮಂದಿಗೆ ಒಂದಿಷ್ಟು ಬಾಯಾಗ ಒಂದಿಷ್ಟು ಮು*ಳ್ಯಾಗ ಇಂತಾವೇ ಚೌಕ ಗುಳಗಿ ತುರ್ಕೋ ಮನಸ್ಸಾಗೈತಿ! ಭಾಳ ಮನಸ್ಸಾಗೈತಿ!

ಹಾಂಗ್ರೀ???!!!

* ದಿನಪೂರ್ತಿ ಇಂತವೇ ನಂಬಲು ಅಸಾಧ್ಯವಾದ ಕಾರ್ಪೊರೇಟ್ ಚೌಕ್ ಗುಳಿಗೆಗಳನ್ನು ತೆಗೆದುಕೊಂಡ ನಂತರ ಹೊಳೆದಿದ್ದು. ಈ ಕಾರ್ಪೊರೇಟ್ ಜನ ಅದೆಲ್ಲಿಂದ ಈಪರಿ ಛೋಡುತ್ತಾರೋ!? ಅದೂ ನಂಬೋ ರೀತಿಯಲ್ಲಿ ಛೋಡೋದೇ!??

:) :)

#ಕಾರ್ಪೊರೇಟಛೋಡ್

2 comments:

sunaath said...

ನವಲಗುಂದ ಅನ್ನೋ ಊರು (-ಇದು ನಮ್ಮೂರು-)ಸುಳ್ಳರ ಊರು. ಅಲ್ಲಿ ಪ್ರತಿ ವರ್ಷ ಸುಳ್ಳಿನ ಸ್ಪರ್ಧಾ ಇಡತಿದ್ದರು. ಈ ನಿಮ್ಮ ಹುಡುಗನ್ನ ಅಲ್ಲಿಗೆ ಕಳಿಸಿದ್ದರ,ಅವಗೊಂದು ಇನಾಮು ಸಿಗತಿತ್ತು!

Mahesh Hegade said...

ಹಾ....ಹಾ.....ಸುಳ್ಳು ಹೇಳುವ ಸ್ಪರ್ಧೆ! ಶಭಾಶ್! :) Thanks Sunaath, Sir.