Saturday, July 30, 2016

ಆತ್ಮಹತ್ಯೆ...ಒಂದು ಜಿಜ್ಞಾಸೆ

'ಆತ್ಮಕ್ಕೆ ಸಾವಿಲ್ಲ. ಸಾವೇನಿದ್ದರೂ ಅದು ದೇಹಕ್ಕೆ ಮಾತ್ರ,' ಅಂತ ಸಾರಿದ ಸನಾತನ ಸಂಸ್ಕೃತಿಯ ಶಬ್ದ ಭಂಡಾರದಲ್ಲೇ 'ಆತ್ಮಹತ್ಯೆ' ಎಂಬ ಶಬ್ದದ ಉದ್ಭವ ಹೇಗಾಯಿತು ಮತ್ತು ಉಪಯೋಗ ಹೇಗೆ ಶುರುವಾಯಿತು?

ಹೀಗೆ ಮೇಲಿನಂತೆ ಒಂದು ಪ್ರಶ್ನೆ ಫೇಸ್ಬುಕ್ ಮೇಲೆ ಕೇಳಿದ್ದೆ.

ಪಂಡಿತ  ತಿರುಮಲೇಶ್ವರ ಭಟ್ಟರು ಕೆಳಗಿನಂತೆ ಉತ್ತರಿಸಿದರು:

ಇಲ್ಲಿ ಎರಡು ರೀತಿಯ ಆತ್ಮನನ್ನು ಶಾಸ್ತ್ರಗಳು ತಿಳಿಸಿದೆ. 
೧) ಜನ್ಮ ಮರಣ ಇಲ್ಲದ ಆತ್ಮ
೨) ಶರೀರವೇ ಆತ್ಮ ಎಂದು ತಿಳಿಯುವದು. ಇದನ್ನು ಜೀವಾತ್ಮ ಎಂದೂ ಕರೆಯುತ್ತಾರೆ. ಆದ್ದರಿಂದ ಶರೀರವನ್ನು ಅವಲಂಬಿಸಿ ಜನ್ಮ ಮರಣ ವ್ಯವಸ್ಥೆ. 

ಇನ್ನು ನಿಮ್ಮ ಪ್ರಶ್ನೆಯಾದ ಆತ್ಮ ಹತ್ಯೆಯೂ ಎರಡು ವಿಧ. 
೧) ಶರೀರಸ್ಥನಾದ ಆತ್ಮನನ್ನು (ಜೀವಾತ್ಮನನ್ನು) ಅವಿಧಿಯಾಗಿ ಹೊರಹಾಕಿದರೆ ಅದು ಆತ್ಮಹತ್ಯೆ. ಆದರೆ ವಿಧಿ ಪೂರ್ವಕ ಹಾಕಿದರೆ ಅದು ಆತ್ಮಹತ್ಯೆ ಆಗಲಾರದು. (ವಿಧಿಯನ್ನು ಇಲ್ಲಿ ತಿಳಿಸಲು ಸಾಧ್ಯವಿಲ್ಲ ) ಇದು ಲೌಕಿಕ ಆತ್ಮಹತ್ಯೆ. 
೨) ಯಾರು ಶುದ್ಧ ಆತ್ಮನನ್ನು ಅರಿಯದೆ ಸಾಯುತ್ತಾರೋ ಅದು ಕೂಡ ಆತ್ಮಹತ್ಯೆ. ಇದು ಪರಮಾರ್ಥ ರೂಪದ್ದು.

ಈ ಮಾಹಿತಿಯ ಮೂಲ ಯಾವದು ಅಂದು ಕೇಳಿದಾಗ ಪಂಡಿತರು ಉತ್ತರಿಸಿದ್ದು:

ಉಪನಿಷತ್ತುಗಳು. 

೨ನೇ ಆತ್ಮಹತ್ಯೆ ವಿಚಾರ ಈಶಾವಾಸ್ಯ ಉಪನಿಷತ್ತಿನ ಶಂಕರ ಭಾಷ್ಯದಲ್ಲಿ ಇದೆ. ೩ನೇ ಮಂತ್ರ. 
೧ನೇ ಆತ್ಮಹತ್ಯೆ ಲೋಕಸಿದ್ಧ.

3 comments:

Varun Totemane said...


There is some discussion in "Shimogga Psychos!"

sunaath said...

ಆತ್ಮ ಎಂದರೆ the soul ಅನ್ನುವ ಅರ್ಥವಲ್ಲದೇ, self ಎನ್ನುವ ಅರ್ಥವೂ ಇದೆ. ಆತ್ಮಾ ಹಿ ಆತ್ಮನಃ ಬಂಧುಃ ಎನ್ನುವ ಗೀತಾವಾಕ್ಯವನ್ನು ಗಮನಿಸಿರಿ.ಅಂದರೆ ತನಗೆ ತಾನೇ ಬಂಧು, ಬೇರೆಯವರ ಸಹಾಯವನ್ನು ಅಪೇಕ್ಷಿಸಿ ಪ್ರಯೋಜನವಿಲ್ಲ ಎನ್ನುವ ಅರ್ಥ ಇಲ್ಲಿದೆ. ಆದುದರಿಂದ ಆತ್ಮಹತ್ಯೆ ಎಂದರೆ: self killing ಅಥವಾ suicide. ಲ್ಯಾಟಿನ್ ಭಾಷೆಯಲ್ಲಿಯೂ ಸಹ sui ಅಂದರೆ self. cide ಅಂದರೆ ಹತ್ಯೆ.

Mahesh Hegade said...

Thanks Sunaath Sir.