ಅದು ೧೯೭೯ ನೇ ಇಸ್ವಿ. ಆಗಿನ್ನೂ ನಾವು ಎರಡನೆ ಕ್ಲಾಸ್. ಆಗ ನಮ್ಮ ಕ್ಲಾಸಿನ
ತರಗತಿಗಳು ಮುಂಜಾನೆ ಎಂಟರಿಂದ ಮಧ್ಯಾನ್ಹ ಹನ್ನೆರೆಡರವರೆಗೆ ನಡೆಯುತ್ತಿದ್ದವು. ಅದೇನೋ
ಜಾಗದ ಅಭಾವವಂತೆ. ಹಾಗಾಗಿ ಬೆಳಿಗ್ಗೆ ಶಿಫ್ಟ್, ಮಧ್ಯಾನ್ಹದ ಶಿಫ್ಟ್ ಅಂತೆಲ್ಲ ಶಾಲೆ
ನಡೆಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವದೇ ಒಂದು ತೊಂದರೆ ಅನ್ನುವದನ್ನು ಬಿಟ್ಟರೆ ಬಾಕಿ
ಎಲ್ಲ ಮಜಾನೇ. ಯಾಕೆಂದರೆ ಫುಲ್ ಮಧ್ಯಾನ್ಹ ಫ್ರೀ. ಆಟವಾಡಿಕೊಂಡು
ಆರಾಮಾಗಿರಬಹುದಾಗಿತ್ತು.
ಒಂದು ದಿನ ಮಧ್ಯಾನ್ಹ ಶಾಲೆ ಮುಗಿಸಿ ವಾಪಾಸ್ ಮನೆಗೆ ಬರುತ್ತಿದ್ದೆ. ಎಂದಿನಂತೆ ಜೊತೆಗಿದ್ದವ ಆತ್ಮೀಯ ಗೆಳೆಯ ನಮ್ಯಾ. ನಮ್ಮಿಬ್ಬರ ಮನೆಗಳು ಹತ್ತಿರವೇ ಇದ್ದವು. ಶಾಲೆಯಿಂದ ಸೀದಾ ನಡೆದು ಬಂದರೆ ಒಂದು ಹತ್ತು ನಿಮಿಷದ ಹಾದಿ. ನಾವ್ಯಾಕೆ ಸೀದಾ ಬರೋಣ? ನಮಗೇನು ಅವಸರ? ನಾನು ಮತ್ತು ನಮ್ಯಾ ಊರೆಲ್ಲ, ಅಂದರೆ ನಮ್ಮ ಮಾಳಮಡ್ಡಿ ಬಡಾವಣೆಯನ್ನೆಲ್ಲ, ಸುತ್ತಾಡಿಕೊಂಡು, ಏನೇನೋ ಸುದ್ದಿ ಹೇಳಿಕೊಂಡು, ಕೇಳಿಕೊಂಡು, ಒಂದು ತಾಸಿನ ನಂತರ ಮನೆ ಮುಟ್ಟಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ನಮ್ಮ ಕ್ಲಾಸಿನ ಮಾಸ್ತರರನ್ನೂ ಅವರ ಮನೆ ಮುಟ್ಟಿಸಿಬರುವ ಇಲ್ಲದ ಉಸಾಬರಿ ಬೇರೆ. ಅವರೂ ಅದೇ ಏರಿಯಾದಲ್ಲಿ ಇದ್ದರಲ್ಲ. ಹಾಗಾಗಿ ಶಾಲೆ ಬಿಟ್ಟ ನಂತರ ಅವರ ಜೊತೆಯೇ ಹೊರಟು, ಅವರ ಸೊಗಸಾದ ಮಾತುಗಳನ್ನು ಕೇಳುತ್ತ, ಅವರಿಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತ, ಅವರಿಗೆ ಮನೆ ಕಡೆ ಸುದ್ದಿ ಸಹಿತ ಹೇಳಿ, ಅವರ ಮನೆ ಹತ್ತಿರ ಬಂದಾಗ ಸರ್ ಅವರಿಗೊಂದು ಆಖ್ರೀ ನಮಸ್ಕಾರ ಹಾಕಿ, ಮತ್ತೆ ಮನೆ ಕಡೆ ಪಯಣ. ಹೀಗೆ ಮಜವಾಗಿರುತ್ತಿತ್ತು ಗೆಳೆಯ ನಮ್ಯಾನ ಜೊತೆ ಮನೆ ಕಡೆ ಬರುವ ಪಯಣ.
ಅನೇಕ ವಿಷಯಗಳಲ್ಲಿ ನಮ್ಯಾ ನನಗಿಂತ 'ಮುಂದುವರೆದಿದ್ದ'. ದೊಡ್ಡ ಕುಟುಂಬ ಅವರದ್ದು. ಕಮ್ಮಿಯೆಂದರೂ ಒಂದು ಹತ್ತು ಹನ್ನೆರೆಡು ಜನ ಇದ್ದರು ಅವರ ಮನೆಯಲ್ಲಿ ಅಂತ ನೆನಪು. ಹಾಗಾಗಿ ಅವನಿಗೆ ಬೇಕಾದಷ್ಟು ಸಹೋದರ, ಸಹೋದರಿಯರಿದ್ದರು. ಕಸಿನ್ನುಗಳ ಲೆಕ್ಕ ಕೇಳಬೇಡಿ. ಐವತ್ತು ನೂರು ಜನ ಕಸಿನ್ಸ್ ಅವನಿಗೆ. ಮತ್ತೆ ಮಾಳಮಡ್ಡಿಯ ದೊಡ್ಡ ಆಚಾರ್ (ಆಚಾರ್ಯ) ಕುಟುಂಬದ ಹುಡುಗ ನಮ್ಯಾ. ಹಾಗಾಗಿ ಹೆಚ್ಚಿನ ಸಂಪರ್ಕಗಳು ಬೇರೆ. ಹಾಗಾಗಿ ಮಾಳಮಡ್ಡಿ ಎಂಬ ಬ್ರಾಹ್ಮಣರ, ಅದರಲ್ಲೂ ಮೆಜಾರಿಟಿ ವೈಷ್ಣವ ಬ್ರಾಹ್ಮಣರ, ಏರಿಯಾದ ಆಗುಹೋಗುಗಳೆಲ್ಲ ನಮ್ಯಾನಿಗೆ ಬರೋಬ್ಬರಿ ಗೊತ್ತಿರುತ್ತಿತ್ತು. ನಮಗೆ ಅವೆಲ್ಲ ಏನೂ ಗೊತ್ತಿರುತ್ತಿರಲಿಲ್ಲ. ಈ ನಮ್ಯಾ ಚಿತ್ರವಿಚಿತ್ರ ಸುದ್ದಿಗಳನ್ನು ಹೇಳುತ್ತಿದ್ದರೆ ಏನೂ ಸರಿಯಾಗಿ ತಿಳಿಯದೆ, ಅವನನ್ನೇ ಏನೇನೋ ಪ್ರಶ್ನೆ ಕೇಳಿ ಅವನ ಬೋಳು ತಲೆಯನ್ನೇ ಕೆಡಿಸಿಬಿಡುತ್ತಿದ್ದೆ. ದೊಡ್ಡ ಆಚಾರಿ ಮನೆತನದ ನಮ್ಯಾ ತಲೆ ಬೋಳಿಸಿಕೊಂಡು ದೊಡ್ಡ ಚಂಡಿಕೆ ಬಿಟ್ಟಿರುತ್ತಿದ್ದ. ಎಲ್ಲೋ ಅಪರೂಪಕ್ಕೆ ಒಮೊಮ್ಮೆ ಮಾತ್ರ ಸಾದಾ ಕೇಶವಿನ್ಯಾಸ ಇರುತ್ತಿತ್ತು ಅವನದು. ನಮ್ಯಾ ಅಂದರೆ ಅಷ್ಟೊಂದು ಯಾಕಿಷ್ಟ ಅಂದರೆ ಅವನ ಬೋಳು ತಲೆಗೆ 'ಪ್ರೀತಿಯಿಂದ' ಕೈ ತಿಕ್ಕಿ, 'ನಮ್ಯಾ, ನಿನ್ನ ಬೋಳು ತಲಿಗೆ ಕೈ ತಿಕ್ಕಲಿಕ್ಕೆ ಮಸ್ತ ಆಗ್ತದಲೇ,' ಅಂತ ಕಾಡಿದರೂ ನಾನು ಅವನ 'ಪಾಪದ' ಆತ್ಮೀಯ ಗೆಳೆಯ ಅಂತ ನಮ್ಯಾ ಸುಮ್ಮನಿರುತ್ತಿದ್ದ. ಬೇರೆ ಯಾರಾದರೂ ಆಗಿದ್ದರೆ ಅವರ ಬೋಳು ತಲೆಗೆ ಕೈಹಾಕಿದ್ದರೆ ನಮ್ಮ ಕೂದಲಿದ್ದ ಬುರುಡೆಗೆ ಎರಡು ತಟ್ಟಿ ಕಳಿಸುತ್ತಿದ್ದರು. ಆದರೆ ಅಂದಿನ ಏಕ್ದಂ ಖಾಸ್ ದೋಸ್ತ ನಮ್ಯಾ ಸಿಕ್ಕಾಪಟ್ಟೆ ಕ್ಲೋಸ್. ಹಾಗಾಗಿ ಬಾರಾ ಖೂನ್ ಮಾಫ್.
ಸರಿ. ಜೊತೆಗಿದ್ದ ಗುರುಗಳು ಅವರ ಮನೆ ಕಡೆ ಕಳಚಿಕೊಂಡರು. ನಾನು, ನಮ್ಯಾ ಮನೆ ಕಡೆ ಹೊರಟಿದ್ದೆವು. ಯಾರೋ, 'ಏ!' ಅಂತ ಕರೆದಂತಾಯಿತು. ತಲೆಯೆತ್ತಿ ನೋಡಿದರೆ ರಸ್ತೆ ಆಕಡೆ, ಒಂದು ಮನೆಯ ಮುಂದಿನ ಕಟ್ಟೆ ಮೇಲೆ ಕೂತಿದ್ದ ಆಕೃತಿಯೊಂದು ನನ್ನನ್ನು ಕರೆಯುತ್ತಿತ್ತು. ನೋಡಿದರೆ ಒಂದು ವಿಚಿತ್ರ ಪುರುಷಾಕೃತಿ. ವಿಚಿತ್ರ. ರಂಗುರಂಗಾದ ಬಟ್ಟೆ ಹಾಕಿತ್ತು. ಅಂಗಿಯ ಕೆಳಗಿನ ಎರಡು ಗುಂಡಿಗಳನ್ನು ಬಿಟ್ಟರೆ ಉಳಿದ ಅಷ್ಟೂ ಗುಂಡಿಗಳನ್ನು ಬಿಚ್ಚಿಕೊಂಡು ಎದೆ ತೋರಿಸುತ್ತಿತ್ತು. ಏನೋ ಲಾಕೆಟ್ ಎದೆ ಮುಂದೆ ನೇತಾಡುತ್ತಿತ್ತು. ಅಮಿತಾಭ್ ಬಚ್ಚನ್ ಮಾದರಿಯ ಉದ್ದನೆಯ ಹಿಪ್ಪಿ ಸ್ಟೈಲಿನಲ್ಲಿ ಕೂದಲು ಬಿಟ್ಟಿತ್ತು. ಇಂತಹ ಪುರುಷಾಕೃತಿ ಬಾಯಲ್ಲಿ ಅಡಿಕೆಯನ್ನೋ ಅಥವಾ ಬೇರೆ ಏನನ್ನೋ ಜಗಿಯುತ್ತ ಅಸಡ್ಡಾಳ ಅವತಾರದಲ್ಲಿ ಮನೆ ಮುಂದೆ ಕಟ್ಟೆ ಮೇಲೆ ಅಪಶಕುನದ ಮಾದರಿಯಲ್ಲಿ ಕೂತಿತ್ತು. ಕೂತಿದ್ದು ಈಗ ನಮ್ಮನ್ನು ಕರೆಯುತ್ತಿದೆ ಬೇರೆ.
ಆ ಆಕೃತಿ ಕಡೆ ನೋಡಿದೆ. 'ಇಲ್ಲಿ ಬಾ,' ಅನ್ನುವಂತೆ ಸನ್ನೆ ಮಾಡಿತು ಆ ಆಕೃತಿ. ನಮ್ಯಾನ ಕಡೆಗೆ ನೋಡಿದೆ. ಅವನೇನೆಂದಾನು? ಏನೂ ಹೇಳಲಿಲ್ಲ. ಕರೆದ ಮೇಲೆ ಹೋಗಲೇಬೇಕು. ಆ ಮನುಷ್ಯ ನೋಡಲು ವಿಚಿತ್ರವಾಗಿದ್ದರೂ ನನ್ನನ್ನೇನೂ ತಿಂದುಹಾಕುವಷ್ಟು ಖರಾಬ್ ಆಗಿ ಕಾಣಲಿಲ್ಲ. ರಸ್ತೆ ದಾಟಿ ಹೋದೆ. ಅವರ ಮನೆ ಕಾಂಪೌಂಡ್ ಗೋಡೆ ಮಳೆಗಾಲದಲ್ಲಿ ಅರ್ಧಕ್ಕರ್ಧ ಕುಸಿದುಹೋಗಿತ್ತು. ಹಾಗಾಗಿಯೇ ರಸ್ತೆ ಮೇಲೆ ಹೋಗುತ್ತಿದ್ದವರು ಕಟ್ಟೆ ಮೇಲೆ ಕೂತಿದ್ದ ಈ ಪುಣ್ಯಾತ್ಮನಿಗೆ ಕಾಣುತ್ತಿದ್ದರು. ನಾನೂ ಗೋಡೆ ಕಡೆ ಹೋಗಿ ಗೋಡೆ ಇತ್ತಕಡೆ ನಿಂತೆ.
'ನೀ ಹೆಗಡೆ ಶೈಲ್ಯಾನ ತಮ್ಮ. ಹೌದಿಲ್ಲೋ???' ಅಂತ ಕೇಳಿದ.
ಹೆಗಡೆ ಶೈಲ್ಯಾ ಅಂದರೆ ಅಣ್ಣ. ಏಳು ವರ್ಷಕ್ಕೆ ದೊಡ್ಡವನು. ಹೌದು. ಅವನ ತಮ್ಮ ನಾನು. ಹಾಗಾಗಿ 'ಹೌದು. ಅವನ ತಮ್ಮನೇ ನಾನು,' ಅನ್ನುವಂತೆ ತಲೆಯಾಡಿಸಿದೆ.
'ಎಷ್ಟನೇತ್ತಾ??' ಎಂದು ಕೇಳಿದ. 'ಎಷ್ಟನೇತ್ತಾ??' ಅಂದರೆ 'ಎಷ್ಟನೇ ಕ್ಲಾಸ್?' ಅಂತ ಅರ್ಥ.
'ಎರಡನೇತ್ತಾ' ಅಂತ ಹೇಳಲು ಎರಡು ಬೆರಳು ತೋರಿಸುವದು ನಿಷಿದ್ಧ. ಎರಡು ಬೆರಳು ತೋರಿಸುವದು ನಂಬರ್ ಟೂ ಕಾರ್ಯಕ್ರಮಕ್ಕೆ ಮಾತ್ರ. ಹಾಗಾಗಿ ಈಗ ಮಾತಾಡಲೇಬೇಕು.
ಮುಗುಮ್ಮಾಗಿ, 'ಎರಡನೇತ್ತಾ,' ಅಂದು ನೆಲ ನೋಡುತ್ತ ನಿಂತೆ. ಅಂದಿನ ದಿನಗಳಲ್ಲಿ ಅಪರಿಚಿತರನ್ನು ಕಂಡರೆ ವಿಪರೀತ ಸಂಕೋಚ ನನಗೆ.
'ಹೂಂ. ಹೋಗ್ರಿ ಮನಿಗೆ. ಸೀದಾ ಮನಿಗೇ ಹೋಗ್ರಿ ಮತ್ತ!' ಅಂತ ಹೇಳಿದ ಆ ಪುಣ್ಯಾತ್ಮ ಮನೆಗೆ ಹೋಗಲು ಅನುಮತಿ ಕೊಟ್ಟ. ನೋಡಲು ಒಂದು ತರಹದ ರೌಡಿ ಲುಕ್ಕಿದ್ದರೂ ಸುಂದರನಾಗಿದ್ದ. ಲಕ್ಷಣವಂತನಾಗಿದ್ದ. ಮಾತೂ ಓಕೆ. ಏನೂ ಜಬರಿಸಿ, ಹೆದರಿಸಿ, ಬೈದು ಮಾತಾಡಿರಲಿಲ್ಲ. ಅಣ್ಣನ ಪರಿಚಯದವನು ಅಂತ ಕಾಣುತ್ತದೆ. ಹಾಗಾಗಿ ನನ್ನನ್ನು ನೋಡಿ, ಕರೆದು, ಮಾತಾಡಿಸಿದ್ದ ಅಂತ ಅಂದುಕೊಂಡೆ.
ಆ ಪುಣ್ಯಾತ್ಮನ ಕೂಗಳತೆಯಿಂದ ದೂರ ಬಂದೆವು. ನಾವು ಮಾತಾಡಿದ್ದು ಅವನಿಗೇನೂ ಕೇಳುವದಿಲ್ಲ ಅಂತ ಗೊತ್ತಾದ ಮೇಲೆ ನಮ್ಯಾ ತನ್ನ ಮಾತು ಶುರುವಿಟ್ಟುಕೊಂಡ. ಸೊಗಸಾಗಿ, ನವರಸಗಳನ್ನು ಬರೋಬ್ಬರಿ ಸೇರಿಸಿ ಮಾತಾಡುವದು ನಮ್ಯಾನ ಸ್ಪೆಷಾಲಿಟಿ. 'ರಸ' ಅವನ ಪ್ರೀತಿಯ ಅಡುಗೆ ಕೂಡ. ರಸವನ್ನು ಪೊಗದಸ್ತಾಗಿ ಉಂಡೂ ಉಂಡೂ ಅಷ್ಟು ರಸವತ್ತಾಗಿ ಮಾತಾಡುತ್ತಿದ್ದ ಅಂತ ಕಾಣುತ್ತದೆ.
'ಆಂವಾ ಯಾರು ಗೊತ್ತದ ಏನು?' ಅಂತ ಕೇಳಿದ ನಮ್ಯಾ. ನನ್ನನ್ನು ಈಗಷ್ಟೇ ಮಾತಾಡಿಸಿದ್ದ ಮನುಷ್ಯನ ಬಗ್ಗೆ ಕೇಳುತ್ತಿದ್ದ.
ಮನೆ ಮುಂದಿನ ಕಟ್ಟೆ ಮೇಲೆ ಕೂತಿದ್ದ ಆ ವಿಚಿತ್ರ ಪುರುಷಾಕೃತಿ ಕರೆದಾಗ, ಅವನ ಅವತಾರವನ್ನು ನೋಡಿದಾಗ ಏನೂ ನೆನಪಾಗಿರಲಿಲ್ಲ. ಆಮೇಲೆ ನೆನಪಾಗಿತ್ತು. 'ಇವನನ್ನು ಸಾಕಷ್ಟು ಸಾರಿ ನೋಡಿದ್ದೇನೆ. ಮಾಳಮಡ್ಡಿ ತುಂಬಾ ತಿರುಗುತ್ತಲೇ ಇರುತ್ತಾನೆ. ಅಂಡಿನಲ್ಲಿ ಒಂದು ಸೈಕಲ್ ಸಿಕ್ಕಾಕಿಸಿಕೊಂಡು ಊರ ತುಂಬಾ ಓಡಾಡುತ್ತಿರುತ್ತಾನೆ. ಆಗಾಗ ಶೆಟ್ಟಿಯ ಚುಟ್ಟಾ ಅಂಗಡಿ ಮುಂದೆ, ಪಠಾಣನ ಪಾನ್ ಅಂಗಡಿ ಮುಂದೆ ಗೌಪ್ಯವಾಗಿ ಬೀಡಿ, ಸಿಗರೇಟ್ ಸಹಿತ ಸೇದುತ್ತಿರುತ್ತಾನೆ. ಸದಾ ರಂಗೀನ್ ರಂಗೀನ್ ಢಾಳು ಬಣ್ಣದ ಸ್ಟೈಲಿಶ್ ಅಂಗಿ, ಪ್ಯಾಂಟ್ ಹಾಕಿರುತ್ತಾನೆ,' ಅಂತೆಲ್ಲ ನೆನಪಾಯಿತು. ಆದರೆ ಅವನು ಯಾರು ಅಂತ ಗೊತ್ತಿರಲಿಲ್ಲ.
'ಇಲ್ಲಲೇ ನಮ್ಯಾ. ಯಾರಂತ ಗೊತ್ತಿಲ್ಲ. ಯಾರಲೇ ಆಂವಾ?' ಅಂತ ಕೇಳಿದೆ.
ಅವನ ಹೆಸರು ಹೇಳಿದ. ಅದೇನೋ ಕಪ್ಯಾನೋ, ಸಪ್ಯಾನೋ ಅಂದ. ನನಗಂತೂ ಗೊತ್ತಿರಲಿಲ್ಲ. ಕಪ್ಯಾ ಅಂದನೋ ಅಥವಾ ಸಪ್ಯಾ ಅಂದನೋ ಅಂತ ಈಗ ನೆನಪಿಲ್ಲ. ಏನೋ ಒಂದು. ಅದೇ ಮಾದರಿಯ ಹೆಸರು. ಮುಂದುವರೆದ ನಮ್ಯಾ ಕೇಳಿದ. 'ಆಂವಾ ಏನ ಮಾಡ್ತಾನ ಅಂತ ಗೊತ್ತದ ಏನು??' ಅಂತ ಕೇಳಿ, ಹುಬ್ಬು ಕುಣಿಸಿದ. ಅದರಲ್ಲಿ ಬರೋಬ್ಬರಿ ತುಂಟತನ. ಅದು ನಮ್ಯಾನ ಸ್ಪೆಷಾಲಿಟಿ.
ಆ ಕಟ್ಟೆ ಮೇಲೆ ಕೂತಿದ್ದ ಕಪ್ಯಾನೋ, ಸಪ್ಯಾನೋ ಅನ್ನುವ ಪುಣ್ಯಾತ್ಮ ಏನು ಮಾಡುತ್ತಾನೋ ಯಾರಿಗೆ ಗೊತ್ತು!?
'ಗೊತ್ತಿಲ್ಲಲೇ. ಯಾಕ? ಏನು ಮಾಡ್ತಾನ?' ಅಂತ ಕೇಳಿದೆ.
'ಹುಡುಗ್ಯಾರ ಮಲಿ ಹಿಚಕ್ತಾನ!' ಅಂತ ಹೇಳಿಬಿಟ್ಟ ನಮ್ಯಾ. ಬಾಂಬ್ ಹಾಕಿಬಿಟ್ಟ.
ಏನೂ!? ಕಟ್ಟೆ ಮೇಲೆ ಕೂತಿದ್ದ ಆ ಮಹಾನುಭಾವ ಏನು ಮಾಡುತ್ತಾನೆ ಅಂತ ಹೇಳಲು ಹೊರಟಿದ್ದ ಈ ನಮ್ಯಾ ಏನು ಹೇಳಿದ? ಏನು ಹೇಳಿಬಿಟ್ಟ? ಆ ಕಟ್ಟೆ ಮೇಲಿ ಕೂತಿದ್ದ ಆಸಾಮಿ, 'ಹುಡುಗಿಯರ ಮೊಲೆ ಹಿಚಕುತ್ತಾನೆ' ಅಂದನೇ ನಮ್ಯಾ?? ಅಥವಾ ನಾನು ಹಾಗೆ ಕೇಳಿಸಿಕೊಂಡೆನೋ? ಡೌಟ್ ಬಂತು.
ಖಾತ್ರಿ ಮಾಡಿಕೊಳ್ಳೋಣ ಅಂತ ಸ್ವಲ್ಪ ಗಾಬರಿಯಿಂದ ಕೇಳಿದೆ, 'ಏನಲೇ ನಮ್ಯಾ!? ಏನಂದೀ? ಏನು ಮಾಡ್ತಾನ ಆಂವಾ? ಮತ್ತೊಮ್ಮೆ ಹೇಳಲೇ!?'
'ಅದನೋ. ಆ ಮಂಗ್ಯಾನಮಗ ಹುಡುಗ್ಯಾರ ಮಲಿ ಹಿಚಕ್ತಾನ ಅಂತ ಹೇಳಿದೆ. ಶ್ಯಾಮ್ಯಾ ಅವರ ಅಕ್ಕಂದೂ ಹಿಚುಕಿಬಿಟ್ಟಾನ' ಅಂದುಬಿಟ್ಟ.
ಈಗ ಖಾತ್ರಿಯಾಯಿತು. ನಮ್ಯಾ ಹೇಳಿದ್ದು, ನಾ ಕೇಳಿಸಿಕೊಂಡಿದ್ದು ಎಲ್ಲ ಒಂದೇ ಅಂತ. ಆದರೆ ಸಿಕ್ಕಾಪಟ್ಟೆ confusion ಆಗಿಬಿಟ್ಟಿತು. ಒಮ್ಮೆಲೇ ಡೀಪ್ ಥಿಂಕಿಂಗ್ ಮೋಡಿಗೆ ಹೋಗಿಬಿಟ್ಟೆ. ನಿಂತುಬಿಟ್ಟೆ. ನಾನು ನಿಂತಿದ್ದು ನೋಡಿ ನಮ್ಯಾನೂ ನಿಂತ. 'ಏನಾತೋ ಈಗ?' ಅನ್ನುವ ಹಾಗೆ ನೋಡಿದ.
ಈ ದೋಸ್ತ ನಮ್ಯಾನ ಇಂತಹ ಖತರ್ನಾಕ್ ಮಾತುಗಳನ್ನು ಕೇಳಿ ತಲೆಯಲ್ಲಿ ಸಿಕ್ಕಾಪಟ್ಟೆ ಆಲೋಚನೆಗಳು ಗಿರಕಿ ಹೊಡೆಯಲಾರಂಭಿಸಿದವು. ಅದೂ ಬಾಂಬ್ ಹಾಕಿದಂತಹ ಮಾತುಗಳನ್ನು ಕೇಳಿ. ಆಗಿನ್ನೂ ಎರಡನೆ ಕ್ಲಾಸ್ ಮಾತ್ರ. ಮೊಲೆ ಹಾಲು ಕುಡಿದು, ಎಷ್ಟೋ ವರ್ಷಗಳ ಹಿಂದೆಯೇ ಬಿಟ್ಟು ಮಾತ್ರ ಗೊತ್ತಿತ್ತು. ಹಾಲು ಕುಡಿಸುವ ಅಮ್ಮಂದಿರೂ, ಕುಡಿಯುವ ಹಸುಗೂಸುಗಳು ಗೊತ್ತಿದ್ದವು. ಅಲ್ಲಿಲ್ಲಿ ಕಾಣುತ್ತಿದ್ದವು. ಹಲ್ಲು ಬರುತ್ತಿರುವ ಕೂಸುಗಳು ಅಮ್ಮನ ಮೊಲೆ ಕಡಿದುಬಿಡುತ್ತವೆ ಅನ್ನುವದನ್ನು ಕಡಿಸಿಕೊಂಡು ಅಂತಹ ಮಗುವಿಗೆ ಪ್ರೀತಿಯಿಂದ ಶಾಪ ಹಾಕುತ್ತಿದ್ದ ಅಮ್ಮಂದಿರ ಬಾಯಿಯಿಂದಲೇ ಕೇಳಿದ್ದೆ. ತನ್ನ ತಮ್ಮನ ಮೊಲೆಯುಣ್ಣುವ ಚಟ ಬಿಡಿಸಿಲು ಅವಳ ಅಮ್ಮನಿಗೆ ಬೇವಿನ ತೊಪ್ಪಲು ತರಲು ಹೊರಟಿದ್ದ ಗೆಳತಿಯೊಬ್ಬಳಿಗೆ ಕಂಪನಿ ಕೊಟ್ಟಿದ್ದೆ. ಬೇವಿನ ಸೊಪ್ಪನ್ನು ಖುದ್ದಾಗಿ ಹರಿದುಕೊಟ್ಟಿದ್ದೆ. 'ಯಾಕ ಬೇಕಾಗ್ಯಾವ ಈ ಕೆಟ್ಟ ಕಹಿ ಬೇವಿನ ತೊಪ್ಪಲ?' ಅಂತ ಕೇಳಿದರೆ, ನನ್ನದೇ ವಯಸ್ಸಿನ ಓಣಿಯ ಗೆಳತಿ, 'ನಮ್ಮ ತಮ್ಮಗ ಮಮ್ಮು ಉಣ್ಣೋದು ಬಿಡಿಸಬೇಕಾಗ್ಯದ,' ಅಂದಿದ್ದಳು. 'ಅಂದ್ರ ಮಮ್ಮು ಬದ್ಲಿ ಬೇವಿನ ತೊಪ್ಪಲಾ ತಿನ್ನಸ್ತೀರಿ ನಿಮ್ಮ ತಮ್ಮಗ?' ಅಂತ ಯಬಡನಂತೆ ಕೇಳಿದ್ದೆ. ಬಿದ್ದು ಬಿದ್ದು ನಕ್ಕ ಗೆಳತಿ ಬೇವಿನ ತೊಪ್ಪಲ ಉಪಯೋಗಿಸಿ ಮಕ್ಕಳ ಮೊಲೆ ಹೇಗೆ ಬಿಡಿಸುತ್ತಾರೆ ಅಂತ ಶಾರ್ಟ್ & ಸ್ವೀಟಾಗಿ ಹೇಳಿದ್ದಳು. ಆಶ್ಚರ್ಯವೆನಿಸಿತ್ತು. ಪಾಪ ಸಣ್ಣ ಮಗು. ಬಾಯಿ ಹಾಕಿದರೆ ಬೇವಿನ ಕೆಟ್ಟ ಕಹಿ. ತಾನಾಗಿಯೇ ಚಟ ಬಿಡುತ್ತದೆ. ಅದೇ ಪ್ಲಾನ್. ಇದೆಲ್ಲ ಈ ನಮ್ಯಾನ ಮಾತು ಕೇಳಿ ನೆನಪಾಯಿತು. ಹೀಗೆ ಮೊಲೆಗಳೇನಿದ್ದರೂ ಅವು ಸಣ್ಣ ಹುಡುಗರಿಗೆ ಮಾತ್ರ ಅಂತ ಅಂದುಕೊಂಡಿದ್ದ ಭೋಳೆ ತಿಳುವಳಿಕೆಯ ಮುಗ್ಧ ಸ್ವಭಾವದ ದಿನಗಳು ಅವು. ಹಾಗಿದ್ದಾಗ ಸುಮಾರು ಹದಿನೇಳು ಹದಿನೆಂಟು ವಯಸ್ಸಿನ, ನೋಡಿದರೆ ಪುಂಡನಂತಿರುವ, ಕಟ್ಟೆ ಮೇಲೆ ಕೂತಿದ್ದ ಆ ವ್ಯಕ್ತಿಗೂ ಮೊಲೆಗಳ ಜರೂರತ್ತಿದೆ. ಅದರಲ್ಲೂ ಆತ ಅವನ್ನು ಹಿಚಕುತ್ತಾನೆ ಅಂತ ಕೇಳಿ ತಲೆ ಪೂರ್ತಿ ಕಡೆದಿಟ್ಟ ಮೊಸರು ಗಡಿಗೆಯಾಗಿಬಿಟ್ಟಿತು. ನಮ್ಯಾನ ಜೊತೆಗೇ ಮಾತಾಡಿ ಸಂದೇಹ ಬಗೆಹರಿಸಿಕೊಳ್ಳಬೇಕು.
'ಯಾಕ ನಮ್ಯಾ? ಆಂವಾ ಹಾಂಗ್ಯಾಕ ಮಾಡ್ತಾನ? ಆಂವಾ ಇನ್ನೂ ಮಮ್ಮು ಹಾಲು ಕುಡಿತಾನ? ಅವ್ವನ ಹಾಲು ಬಿಟ್ಟಿಲ್ಲಾ ಆಂವಾ? ಇಷ್ಟು ದೊಡ್ಡವ ಆಗ್ಯಾನ ಮತ್ತ?' ಅಂತ ಕೇಳಿಬಿಟ್ಟೆ. ನಾನು ಫುಲ್ ಮುಗ್ಧ. ಇದೇ ಮೊದಲು ಇಂತಹ ವಿಚಿತ್ರಗಳ ಬಗ್ಗೆ ಕೇಳಿದ್ದು.
ನಮ್ಯಾ 'ಹ್ಯಾಂ!?!?' ಅಂತ ಬಾಯಿ ತೆಗೆದು ನಿಂತ. ನನ್ನ ಯಬಡತನದ ಬಗ್ಗೆ ಅವನ ಮುಖದ ಮೇಲೆ ಸಂತಾಪ. ಅದು ಅಂದು ಗೊತ್ತಾಗಲಿಲ್ಲ. ಈಗ ನೆನಪಾದಾಗ ಅದು ಅಂತಹ ಸಂತಾಪವೇ ಅಂತ ಗೊತ್ತಾಯಿತು.
ನಾನೇ ಮುಂದುವರೆದು ಮಾತಾಡಿದೆ. 'ಅಲ್ಲಲೇ ನಮ್ಯಾ. ಇಷ್ಟು ದೊಡ್ಡವ ಆದರೂ ಮಮ್ಮುನಿಂದ ಹಾಲು ಕುಡಿಯವಾ ಅಂದ್ರ ಇವನೊಬ್ಬನೇ ಇರಬೇಕು ನೋಡಲೇ. ಹಾ!! ಹಾ!! ನಮ್ಮ ಅಣ್ಣನ ದೋಸ್ತ ಇರಬೇಕು. ಅವನಿಗಿಂತ ದೊಡ್ಡವ ಇದ್ದಾನ. ಆದರೂ ಇನ್ನೂ ಮಮ್ಮು ತಿಂತಾನ. ಅವ್ವನದು ಸಾಕಾಗಿಲ್ಲ ಅಂತ ಕಾಣಿಸ್ತದ. ಹಾಂಗಾಗಿ ಈಗ ಯಾರೋ ಹುಡುಗಿ ಮಮ್ಮು ತಿಂತಾನ ಅಂತ ಕಾಣಿಸ್ತದ. ಅಲ್ಲಾ??' ಅಂತ ಕೇಳಿಬಿಟ್ಟೆ.
ನಮ್ಮ ಅಂದಿನ ಚಿಣ್ಣ ಮನಸ್ಸಿನ ಊಹೆ ಏನೆಂದರೆ ಆ ಕಟ್ಟೆ ಆಸಾಮಿ ಇನ್ನೂ ಅಮ್ಮನ ಮೊಲೆಹಾಲನ್ನೇ ಬಿಟ್ಟಿಲ್ಲ. ಹುಟ್ಟಿ ಇಷ್ಟು ವರ್ಷಗಳ ಬಳಿಕ ಅದ್ಯಾವ ತಾಯಿಯ ಮೊಲೆಯಲ್ಲಿ ಹಾಲಿರಬೇಕು. ಇವನಿಗೋ ಮೊಲೆಹಾಲು ಬೇಕೇಬೇಕು. ಅಮ್ಮನಲ್ಲಿಲ್ಲ. ಹಾಗಾಗಿ ಯಾವದೋ ಹುಡುಗಿಯ ಮೊಲೆಯಿಂದ ಮೊಲೆಹಾಲು ಕುಡಿಯುತ್ತಾನೆ. ಅಷ್ಟೇ. ವಿಚಿತ್ರ ಮನುಷ್ಯ. ಇಷ್ಟು ದೊಡ್ಡವನಾದರೂ ಇನ್ನೂ ಮೊಲೆಹಾಲು ಬಿಟ್ಟಿಲ್ಲ. ಹುಚ್ಚ!
ನಮ್ಮ ವಿವರಣೆ ಕೇಳಿದ ನಮ್ಯಾ ತಲೆಯನ್ನು ಆಚೀಚೆ ಅಲ್ಲಾಡಿಸಿದ. ನನ್ನ ಊಹೆ ತಪ್ಪು ಅಂತ ಅದರ ಅರ್ಥ. ಅವನ ಉದ್ದ ಚಂಡಿಕೆ ಆಕಡೆ ಈಕಡೆ ಅಲ್ಲಾಡಿತು. ನಮ್ಯಾನ ಬೋಳು ತಲೆಗೆ 'ಪ್ರೀತಿಯಿಂದ' ಕೈ ತಿಕ್ಕಿ, 'ಲೇ, ನಮ್ಯಾ, ನಮ್ಯಾ ಏನಾತಲೇ? ಏನಂತ ಹೇಳಲೇ? ಫುಲ್ ಎಲ್ಲಾ ಹೇಳಲೇ. ಪ್ಲೀಸ್ ಹೇಳಲೇ,' ಅಂತ ಕಾಡಿದೆ. ಮಾಹಿತಿಗಾಗಿ ಸಿಕ್ಕಾಪಟ್ಟೆ ಹಸಿವು.
ನಾನು, ನನ್ನ ವಿವರಣೆ, ನನ್ನ ಸಹವಾಸ ಎಲ್ಲ ಸಾಕಾಗಿತ್ತು ಅವನಿಗೆ. ಅದೂ ಶಾಲೆ ಬಿಟ್ಟು ಒಂದು ತಾಸಿನ ಮೇಲಾಗಿಹೋಗಿತ್ತು. ಹೊಟ್ಟೆ ಕೂಡ ಬರೋಬ್ಬರಿ ಹಸಿವಾಗುತ್ತಿತ್ತು. ಹಾಗಿದ್ದಾಗ ಅವನು ಏನೋ ಹೇಳಿದರೆ ನಾನು ಏನೋ ತಿಳಿದುಕೊಂಡು, ಈಗ ಅದರ ಬಗ್ಗೆ ವಿವರಣೆ ಕೇಳುತ್ತಿದ್ದೇನೆ. full explanation ಡಿಮ್ಯಾಂಡ್ ಮಾಡುತ್ತಿದ್ದೇನೆ. ಪಾಪ ನಮ್ಯಾ. ಇಕ್ಕಳದಲ್ಲಿ ಸಿಕ್ಕಿಬಿದ್ದ. ಹೇಳದೇ ಗತಿಯಿಲ್ಲ. ಮಾಳಮಡ್ಡಿ ಹಿಟ್ಟಿನ ಗಿರಣಿ ಮುಂದೆ ವಿವರಣೆ ಶುರು ಹಚ್ಚಿಕೊಂಡ. ನಾನು ಬೇರೆಯೇ ಲೋಕಕ್ಕೆ ಹೋಗಲು ರೆಡಿಯಾಗಿಬಿಟ್ಟೆ.
'ಅಯ್ಯೋ! ಹಾಲು ಕುಡಿಲಿಕ್ಕೆ ಅಲ್ಲೋ. ಆಂವಾ ಮಾಲ್ ಇಟ್ಟಾನ. ಅಕಿದು ಮಲಿ ಹಿಚಕ್ತಾನ. ಮಲಿ ಹಿಚಕೋದು ಅಂದ್ರ ಮಮ್ಮು ತಿನ್ನೋದು ಅಂತಿಯಲ್ಲಪಾ??? ಹಾಂ?' ಅಂದುಬಿಟ್ಟ. ಧ್ವನಿಯಲ್ಲಿ 'ಇಷ್ಟೂ ಗೊತ್ತಿಲ್ಲ ನಿನಗೆ?!' ಅನ್ನುವ ಸಣ್ಣ ಆಕ್ಷೇಪ.
'ಮಾಲ್ ಅಂದ್ರ?' ಅಂತ ನಮ್ಮ ಮುಂದಿನ ಪ್ರಶ್ನೆ. ಮಾಲ್ ಗಾಡಿ ಉರ್ಫ್ ಗೂಡ್ಸ್ ಟ್ರೈನ್ ಬಿಟ್ಟರೆ ಬೇರೆ ಯಾವದೇ ತರಹದ ಮಾಲ್ ಬಗ್ಗೆ ಗೊತ್ತಿರದ ದಿನಗಳು ಅವು.
'ಮಾಲ್ ಅಂದ್ರ ಲವರ್. ಅಕಿ ಇವನ ಲವರ್. ಇಂವಾ ಅಕಿ ಲವರ್. ಲವ್ ಮಾಡ್ಯಾರ!' ಅಂದುಬಿಟ್ಟ.
ಹಾಂ! ಈಗ ಗೊತ್ತಾಯಿತು. 'ಲವ್ ಮಾಡ್ಯಾರ!' ಅಂದ್ರ ಅಲ್ಲಿಗೆ ಮುಗಿಯಿತು. ಆಗಿನ ಕಾಲದಲ್ಲಿ ಲವ್ ಅಂದರೆ ಸಿನೆಮಾದಲ್ಲಿ ಹೀರೋ ಹೀರೋಯಿಣಿ ಮಾಡುವದು. ಅದೇ ಲವ್. ಆ ಲವ್ ಬಿಟ್ಟರೆ ಬೇರೆ ಲವ್ ಗೊತ್ತಿಲ್ಲ. ಲವ್ ಅಂದರೆ ಚುಮ್ಮಾಚುಮ್ಮಿ, ಡಾನ್ಸ್, ನೃತ್ಯ, ಸಂಗೀತ, ಹಾಡು, ಜಗಳ, ಹೊಡೆದಾಟ, ಮುಂದೆ ಏನೋ ಒಂದು. ದಿ ಎಂಡ್.
ಒಟ್ಟಿನಲ್ಲಿ ಆ ಕಟ್ಟೆ ಮೇಲೆ ಕೂತಿದ್ದ ಆಸಾಮಿ ಯಾವದೋ ಹುಡುಗಿಯನ್ನು ಲವ್ ಮಾಡಿಬಿಟ್ಟಿದ್ದಾನೆ. ಲವ್ ಮಾಡಿದವ ಡಾನ್ಸ್ ಮಾಡಬೇಕು, ಹಾಡು ಹಾಡಬೇಕು, ಫೈಟ್ ಮಾಡಬೇಕು. ಅದು ಬಿಟ್ಟು ಹೋಗಿ ಹೋಗಿ ಮೊಲೆ ಯಾಕೆ ಹಿಚಕುತ್ತಾನೆ. ಮೊದಲು ಇವನಿಗೆಲ್ಲೊ ಅಮ್ಮನ ಹಾಲಿನ ಹುಚ್ಚು ಇನ್ನೂ ಬಿಟ್ಟಿಲ್ಲ. ಹಾಗಾಗಿ ಕಂಡ ಕಂಡ ಸ್ತ್ರೀಯರ ಮೊಲೆಗೆ ಬಾಯಿ ಹಾಕುತ್ತಾನೆ ಅಂದುಕೊಂಡೆ. ನೋಡಿದರೆ ವಿಷಯ ಅದಲ್ಲ. ಇವನದು ಲವ್ ಕೇಸಂತೆ. ಲವ್ ಕೇಸಿನಲ್ಲಿ ಮೊಲೆಗೇನು ಕೆಲಸ ಶಿವನೇ? ಯಾವ ಸಿನೆಮಾದಲ್ಲೂ ಯಾರೂ ಹೀಗೆ 'ಲವ್' ಮಾಡಿಯೇ ಇಲ್ಲವಲ್ಲ? ಮೊಲೆ ಹಿಚಕುವ ಈ ಆಸಾಮಿಯದು ಬೇರೆಯೇ ತರಹದ ಲವ್ ಇರಬೇಕು ಅಂದುಕೊಂಡೆ.
ನನ್ನ ಅಂದಿನ ಸಣ್ಣ ವಯಸ್ಸಿನ ತಲೆಯಲ್ಲಿ ಇಷ್ಟೆಲ್ಲ ವಿಷಯಗಳು process ಆಗುವತನಕವೂ ನಮ್ಯಾ ಹಾಗೆಯೇ ನಿಂತಿದ್ದ. ನನ್ನ processing ಮುಗಿಯಿತು ಅಂತಾದಾಗ 'ಮುಂದುವರೆಯಲೇ?' ಅಂತ ಲುಕ್ ಕೊಟ್ಟ. 'ಪ್ಲೀಸ್ proceed,' ಅಂತ ವಾಪಸ್ ಲುಕ್ ಕೊಟ್ಟೆ.
'ಅಷ್ಟss ಅಲ್ಲಾ! ರೊಕ್ಕಾ ಕೊಟ್ಟರ ಕಪ್ಯಾ 'ಅದನ್ನೂ' ತೋರಸ್ತಾನಂತ. ನಮ್ಮ ಕಾಕಾನ ಮಗ ಹೋಗಿ ನೋಡಿಬಂದಾನ. ಅವನೇ ಹೇಳಿದ! ಗೊತ್ತದ???' ಅಂತ ದೊಡ್ಡ ರಹಸ್ಯವೊಂದನ್ನು ಹೇಳುವವನಂತೆ ಹೇಳಿ ಮತ್ತೊಂದು ಬಾಂಬ್, ಈ ಸಲ, ಆಟಂ ಬಾಂಬ್ ಹಾಕಿಬಿಟ್ಟ.
ಕೇಳಿ ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ಸಾರಾಂಶ ಇಷ್ಟು. ಕಟ್ಟೆ ಮೇಲೆ ಕೂತಿದ್ದ ಕಪ್ಯಾ ಅಲ್ಲೆಲ್ಲೋ ದೇವಸ್ಥಾನದ ಹಿಂದೆ ಒಂದು ಕೋಣೆ ಬುಕ್ ಮಾಡಿರುತ್ತಾನಂತೆ. ಗುಡಿಯ ಆಚಾರ್ರಿಗೆ ಭರ್ಜರಿ ದಕ್ಷಿಣೆ ಕೊಟ್ಟಿರಬೇಕು. ಅದಕ್ಕಾಗಿಯೇ ಇವನ 'ಪುಣ್ಯ ಕಾರ್ಯಕ್ಕೆ' ಗುಡಿಯ ಹಿಂದಿನ ಕೋಣೆ ಬಿಟ್ಟುಕೊಟ್ಟಿದ್ದಾರೆ. ಈ ಆಸಾಮಿ ಅವನ ಮಾಲ್ ಉರ್ಫ್ ಲವರ್ ಹುಡುಗಿಯನ್ನು ಕರೆದುಕೊಂಡು ಅಲ್ಲಿ ಹೋಗಿಬಿಡುತ್ತಾನೆ. ಶೃಂಗಾರ ಕ್ರಿಯೆ ಶುರುಮಾಡಿಬಿಡುತ್ತಾನೆ. ಕಿಟಕಿಯನ್ನು ಕೊಂಚ ತೆರೆದಿಟ್ಟಿರುತ್ತಾನೆ. ಹೊರಗಿಂದ ಬೇಕಾದವರು ನೋಡಬಹದು via ಕಿಟಕಿ ಸಂದಿ. ಶೃಂಗಾರ ಕ್ರಿಯೆಯ ದರ್ಶನಕ್ಕೆ ಸಣ್ಣ ಫೀ ಅಂತ ಇಟ್ಟಿರುತ್ತಾನೆ. ಒಟ್ಟಿನಲ್ಲಿ ಲೈವ್ ಬ್ಲೂ ಫಿಲಂ ಶೋ ಮಾದರಿಯಲ್ಲಿ.
ನನ್ನ ಮಿತ್ರ ನಮ್ಯಾನ ಕಸಿನ್ ಯಾರೋ ಕೂಡ ಈ ಲೈವ್ ಶೋ ನೋಡಿಬಂದಿದ್ದಾನೆ. ಅದನ್ನು ನಮ್ಯಾನಿಗೆ ಹೇಳಿದ್ದಾನೆ. ನಮ್ಯಾ ನಮಗೆ ಹೇಳಿ ದೊಡ್ಡ ಬಾಂಬ್ ಹಾಕಿಬಿಟ್ಟಿದ್ದಾನೆ. ಅದಕ್ಕೇ ನಮ್ಯಾ ನನ್ನ ಕ್ಲೋಸ್ ಫ್ರೆಂಡ್. ನನಗೆ ಇಂತವೆಲ್ಲ ಸುದ್ದಿ ಗೊತ್ತಿರುತ್ತಲೇ ಇರಲಿಲ್ಲ. ನಮ್ಯಾನಂತಹ ದೋಸ್ತರು ಇದ್ದಿದ್ದಕ್ಕೆ ಲೈಫಿನಲ್ಲಿ ಒಂದಿಷ್ಟು ಮಜಾ. ಇಲ್ಲವಾದರೆ ಸಪ್ಪೆ ಸಪ್ಪೆ.
ಎರಡನೆ ಕ್ಲಾಸಿನ ಮುಗ್ಧ ತಲೆಗೆ ಜಾಸ್ತಿ ಏನೂ ಹೊಳೆಯಲಿಲ್ಲ. ಮೊಲೆಗಳು ಚಿಕ್ಕಮಕ್ಕಳಿಗೆ ಮಾತ್ರ, ಅದೂ ಹಾಲು ಕುಡಿಯಲು ಮಾತ್ರ, ಅನ್ನುವ 'ತಪ್ಪು ಕಲ್ಪನೆ'ಯ ಅಡಿಪಾಯವೇ ನಮ್ಯಾನ ಬಾಂಬಿನಿಂದ ಉಡೀಸ್ ಆಗಿಹೋಗಿತ್ತು. ಆದರೂ ಲವ್ ಮಾಡುವ ಮಂದಿ ಅದ್ಯಾಕೆ ಹಾಗೆ ಮಾಡುತ್ತಾರೆ? ಅದರಲ್ಲೂ ಹಾಗೆ ಮಾಡುವವರು ಬೇರೆಯವರಿಗೆಲ್ಲ ಯಾಕೆ ಪ್ರದರ್ಶನ ಮಾಡುತ್ತಾರೆ? ಅಂತ ಗೊತ್ತಾಗಲಿಲ್ಲ. ಸಿನೆಮಾದಲ್ಲಿ ಲವ್ ಮಾಡುವವರು ಎಲ್ಲರ ಮುಂದೆಯೇ ಚುಮ್ಮಾ ಚುಮ್ಮಿ ಮಾಡುವದಿಲ್ಲವೇ? ಹಾಡಿ ಕುಣಿಯುವದಿಲ್ಲವೇ? ಅದನ್ನು ನಾವೆಲ್ಲ ರೊಕ್ಕ ಕೊಟ್ಟು ನೋಡಿಬರುವದಿಲ್ಲವೇ? ಹಾಗೆಯೇ ಇದೂ ಸಹಿತ ಇರಬೇಕು ಅಂತ ಅಂದುಕೊಂಡು ಆ ವಿಷಯಕ್ಕೆ ಅಲ್ಲಿಗೇ ಎಳ್ಳುನೀರು ಬಿಟ್ಟೆ. ಪುಣ್ಯಕ್ಕೆ ಕಟ್ಟೆ ಮಹಾಪುರುಷನ ಶೃಂಗಾರ ಸಾಹಸದ ಬಗ್ಗೆ ಹೆಚ್ಚಿನ ವಿವರಣೆಯನ್ನು ಪಾಲಕರ ಹತ್ತಿರ, ಗುರುಗಳ ಹತ್ತಿರ ಅಥವಾ ಬೇರೆ ಯಾರೋ ಹಿರಿಯರ ಹತ್ತಿರ ಕೇಳಲಿಲ್ಲ. ಅದು ಆಗಿನ ಆಸಕ್ತಿಯ ವಿಷಯವೇ ಅಲ್ಲ.
ನಮ್ಯಾನಿಗೆ ಒಂದು ಲಾಸ್ಟ್ ಬೈ ಬೈ ಹೇಳಿ ಮನೆ ಕಡೆ ಬಂದೆ. ಆಗಿನ ದಿನಗಳಲ್ಲಿ ನಮ್ಯಾ ನಾನು ಅದೆಷ್ಟು ಕ್ಲೋಸ್ ದೋಸ್ತರೆಂದರೆ ಮನೆಗೆ ಹೋಗಿ ಊಟ ಮುಗಿಸಿ ನಮ್ಯಾ ಆಟವಾಡಲು ಮತ್ತೆ ನಮ್ಮ ಮನೆ ಕಡೆ ಬಂದೇಬಿಡುತಿದ್ದ. ನಮ್ಮ ಮನೆಯಲ್ಲೇ ಒಂದಿಷ್ಟು ಟೈಮ್ ಟೇಬಲ್ ಅಂತ ಇತ್ತು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ಒಂದಿಷ್ಟು ಮಲಗಿ, ನಂತರ ಏನಾದರೂ ಮಾಡಿಕೊಳ್ಳಿ ಅಂತ ಮನೆ ಮಂದಿ ಕರಾರು. ಅದಕ್ಕೆ ನಾನು homework ಕೂಡ ಸೇರಿಸಿಕೊಳ್ಳುತ್ತಿದ್ದೆ. ಎಲ್ಲ ಲೆಕ್ಕ ಮಾಡಿ ಎಷ್ಟೊತ್ತಿಗೆ ಮನೆಗೆ ಬರಬೇಕು ಅಂತ ನಮ್ಯಾಗೆ ಬರೋಬ್ಬರಿ ಹೇಳಿರುತ್ತಿದ್ದೆ. ಅಷ್ಟರವರೆಗೆ ಸಿಕ್ಕಾಪಟ್ಟೆ ತ್ರಾಸು ಪಟ್ಟು ಕಾದು, ಮನೆ ಮುಂದೆ ಬೇಕಾದರೆ ನಾಲ್ಕಾರು ಬಾರಿ ಓಡಾಡಿ ಕೂಡ ಹೋಗಿರುತ್ತಿದ್ದ ನಮ್ಯಾ ಹೇಳಿದ ವೇಳೆಗೆ ಬರೋಬ್ಬರಿ ಹಾಜರಾಗುತ್ತಿದ್ದ. ಮುಂದೆ ಆಟೋಟಗಳಲ್ಲಿ ಫುಲ್ ಮಸ್ತಿ.
ಮುಂದೆ ಎಷ್ಟೋ ವರ್ಷಗಳ ನಂತರ ನಮ್ಯಾನ ಜೊತೆ ಮಾತಾಡುವಾಗಲೂ ಇದೇ ಸುದ್ದಿ ಬರುತ್ತಿತ್ತು. ಆ ಹೊತ್ತಿಗೆ ನಮ್ಮ ತಲೆಯೂ ಒಂದಿಷ್ಟು ಬಲಿತು ಕಟ್ಟೆ ಮೇಲೆ ಕುಳಿತಿದ್ದ ಕಪ್ಯಾನ ಅಂದಿನ 'ಕುಚಮರ್ದನದ' ವಿಚಿತ್ರ ವರ್ತನೆಗೊಂದು ನಮ್ಮದೇ ವಿವರಣೆ ದೊರೆತಿತ್ತು.
ಅದು ೧೯೭೯-೮೦ ರ ದಶಕ. ಆವಾಗ pornography material (ಅಶ್ಲೀಲ ಕಾಮದ ಬಗೆಗಿನ ವಸ್ತುಗಳು) ಏನೂ ಸಿಗುತ್ತಿರಲಿಲ್ಲ. ಇಂಟರ್ನೆಟ್ ಪಂಟರ್ನೆಟ್ ಇಲ್ಲ ಆವಾಗ. ಆಂಗ್ಲ ಭಾಷೆಯ ಅಶ್ಲೀಲ ಸಾಹಿತ್ಯ ಕೂಡ ಧಾರವಾಡದಂತಹ ಸಣ್ಣ ಊರುಗಳಲ್ಲಿ ದುರ್ಲಭ. ಇಷ್ಟಕ್ಕೂ ಮೀರಿ ಅಂತವನ್ನು ಓದಬೇಕೆಂದೆರೆ ಸಿಗುತ್ತಿದ್ದವು ಸುರತಿ, ರತಿ ವಿಜ್ಞಾನ ಮುಂತಾದ ಮಹಾ ತಗಡು ಪತ್ರಿಕೆಗಳು. ಅವುಗಳಲ್ಲಿ ಅಶ್ಲೀಲತೆ ಹಾಳಾಗಿ ಹೋಗಲಿ ಕೇವಲ ವಿಕೃತಿಯೇ ತುಂಬಿರುತ್ತಿತ್ತಂತೆ. ಮತ್ತೆ ಅಂತಹ ತಗಡು ಪತ್ರಿಕೆಗಳನ್ನು ಓದಲೂ ರೊಕ್ಕ ಕೊಡಬೇಕು. ಸಾಧ್ಯವಿಲ್ಲ. ಇವೆಲ್ಲ shortages ಗಳನ್ನೇ ಸಣ್ಣ ಪ್ರಮಾಣದಲ್ಲಿ encash ಮಾಡಿಕೊಂಡಿದ್ದ ನಮ್ಮ ಕಟ್ಟೆ ಸುಂದರ. ಅವನ ಅಫೇರ್, ಅವನ ಹುಡುಗಿ, ಗುಡಿ ಹಿಂದಿನ ರಹಸ್ಯ ಕೋಣೆಯಲ್ಲಿ ಅವರ ಶೃಂಗಾರ ಕಾವ್ಯ ವಾಚನ, ಮರ್ದನ ಮಾಡುವ ಮರ್ದಾನಗಿ ಎಲ್ಲ ಸೊಗಸಾಗಿ ಸಾಗಿತ್ತು. ಎಲ್ಲೋ ಅವನ ಸ್ನೇಹಿತರು ಅವನ escapades ಗಳ ಬಗ್ಗೆ, ಲಫಡಾಗಳ ಬಗ್ಗೆ ತಿಳಿಯುವ ಕುತೂಹಲ ವ್ಯಕ್ತಪಡಿಸಿರಬೇಕು. ಮತ್ತೆ ಮಾಲು ಪಟಾಯಿಸಿ ಬಹಳ ಮುಂದುವರೆದ ಮಹನೀಯರಿಗೆ ಸಕಲರಿಗೆ ಎಲ್ಲವನ್ನೂ ತೋರಿಸಿ, 'ನಿಮ್ಮೆಲ್ಲರಿಗಿಂತ ನಾನು ಎಷ್ಟು ಮುಂದುವರೆದಿದ್ದೇನೆ ನೋಡಿ. ನಿಮಗಿಲ್ಲ ಈ ಭಾಗ್ಯ' ಅಂತ ಸಾಹಸ ಮೆರೆಯುವ ಆಸೆ ಬೇರೆ. ಹೀಗಾಗಿ ಕಿಡಕಿಯನ್ನು ಚಿಕ್ಕದಾಗಿ ತೆರೆದಿಟ್ಟೇ 'ದೇವರ ಕೆಲಸಕ್ಕೆ' ಶುರುವಿಟ್ಟುಕೊಳ್ಳುತ್ತಿದ್ದ. ಅವನ ದೋಸ್ತ ಮಂದಿ ಚಿಲ್ಲರೆ ರೊಕ್ಕ ಕೊಟ್ಟು ನೋಡಿ ಜೊಲ್ಲು ಸುರಿಸುತ್ತಿದ್ದರು. ಮತ್ತೇನು ಮಾಡುತ್ತಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮಾಲಿನಿಂದ ಸಣ್ಣ ಪ್ರಮಾಣದ ಕಮಾಯಿಯನ್ನೂ ಮಾಡಿಬಿಟ್ಟಿದ್ದ ಈ ಭೂಪ.
ಕಟ್ಟೆ ಆಸಾಮಿಯ ಮಾಲು ಕೂಡ ನಮಗೆ ಗೊತ್ತು. ಮತ್ತೊಬ್ಬ ಗೆಳೆಯ ಶ್ಯಾಮ್ಯಾನ ಅಕ್ಕ. ಕಸಿನ್. ಆ ಕಾಲದ ಬಾಂಬ್ ಸುಂದರಿಯಂತೆ. ನೋಡಿದ ನೆನಪಿಲ್ಲ. ಅಂತವಳಿಗೇ ಗಾಳ ಹಾಕಿದ್ದ ನಮ್ಮ ಆಸಾಮಿ. ನೋಡಲಿಕ್ಕೆ ಒಳ್ಳೆ ರೌಡಿಯಂತಿದ್ದ ಅವನಲ್ಲಿ ಏನು ಕಂಡಿದ್ದಳೋ ಗೊತ್ತಿಲ್ಲ.
ಎಷ್ಟೋ ವರ್ಷಗಳ ಬಳಿಕ ಶ್ಯಾಮ್ಯಾ ಕೂಡ ಸಿಕ್ಕಿದ್ದ. 'ಏನಲೇ, ನಿಮ್ಮ ಭಾವ ಏನಂತಾನ?' ಅಂತ ಕೇಳಿದ್ದೆ. 'ಭಾವಾ???!!' ಅಂತ ಬಹಳ confuse ಆದವರಂತೆ ಕೇಳಿದ್ದ. ಧಾರವಾಡ ಕಡೆ ಜನ ಅಕ್ಕನ ಗಂಡ ಭಾವನಿಗೆ ಮಾಮಾ ಅನ್ನುತ್ತಾರೆ ಎಂದು ಆವಾಗ ನೆನಪಾಯಿತು. 'ಅವನಲೇ, ನಿಮ್ಮ ಮಾಮಾ. ನಿಮ್ಮ ಅಕ್ಕನ, ನಿಮ್ಮ ಕಸಿನ್ ಗಂಡ. ಲಗ್ನಾ ಮಾಡಿಕೊಂಡರಂತ. ಎಲ್ಲಿದ್ದಾರ? ಹ್ಯಾಂಗಿದ್ದಾರ?' ಅಂತ ಕೇಳಿದೆ. ಆವಾಗ ಅವನಿಗೆ ಗೊತ್ತಾಯಿತು ಯಾರ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ ಎಂದು.
ಹಳೆಯದೆಲ್ಲವನ್ನೂ ನೆನಪಿಸಿಕೊಂಡು ಶ್ಯಾಮ್ಯಾ ಕೂಡ ನಕ್ಕ. ಅವರ ಮನೆತನದವರೋ ಊರಿಗೇ ದೊಡ್ಡ ಶ್ರೀಮಂತರು. ಅಂತವರ ಮಗಳಿಗೆ ಗಾಳ ಹಾಕಿದ್ದ ಭೂಪ ನಮ್ಮ ಕಟ್ಟೆ ಆಸಾಮಿ. ಅವನೋ ಓದದ ಬರೆಯದ ಅಂಗುಠಾ ಛಾಪ್ ಆಸಾಮಿ. ಪೋಲಿ ಅಲೆದುಕೊಂಡಿದ್ದ. ಅದು ಹೇಗೋ ದೊಡ್ಡ ಶ್ರೀಮಂತರ ಅತಿ ಸುಂದರ ಮಗಳನ್ನು ಪಟಾಯಿಸಿಬಿಟ್ಟಿದ್ದ. ಮುಂದೆ ಅದು ಮನೆಯವರಿಗೂ ತಿಳಿಯಿತು. ತಮ್ಮ ಭಾವಿ ಅಳಿಯನನ್ನು ನೋಡಿ ಹುಡುಗಿಯ ಮನೆಯವರು ಲಬೋ ಲಬೋ ಅಂತ ಬಾಯಿಬಾಯಿ ಬಡೆದುಕೊಂಡರು. ಕೃಷ್ಣ ಪರಮಾತ್ಮ ರೌಡಿ ಅವತಾರ ಎತ್ತಿದಂತಿದ್ದ ಭಾವಿ ಅಳಿಯ. ಹುಡುಗಿ ಮಾತ್ರ ಅಚಲ ನಿರ್ಧಾರ ತೆಗೆದುಕೊಂಡು ಕೂತುಬಿಟ್ಟಿದ್ದಳು. ಕಟ್ಟೆ ಕಪ್ಯಾಗೆ ಪರಿಪರಿಯಾಗಿ ಹೇಳಿದರು. 'ನಿನಗ ಕೈ ಮುಗಿತೀವಿ. ನಿನ್ನ ಕಾಲಿಗೆ ಬೀಳ್ತೀವಿ. ಬೇಕಾದ್ರ ಕೇಳಿದಷ್ಟು ರೊಕ್ಕಾ ಕೊಡತೇವಿ. ನಮ್ಮ ಹುಡುಗಿ ಸಹವಾಸ ಬಿಡಪಾ. ಅಕಿನ್ನ ಬ್ಯಾರೆ ಯಾರೋ ಒಳ್ಳೆ ಮನಿತನದ, ಕಲಿತು, ಒಳ್ಳೆ ರೀತಿ ಸೆಟಲ್ ಆದ ಹುಡುಗಗ ಕೊಟ್ಟು ಲಗ್ನ ಮಾಡ್ತೇವಿ. ನೀ ಅಕಿನ್ನ ಬಿಟ್ಟು ಬಿಡಪಾ,' ಅಂತ ಅಂಬೋ ಅಂದರು. ದೊಡ್ಡ ಸನ್ಯಾಸಿ ಗೆಟಪ್ ಹಾಕಿದ ಇವನು, 'ಅಯ್ಯ! ನಾ ಎಲ್ಲೆ ಅಕಿನ್ನ ಹಿಡಕೊಂಡೇನ್ರೀ? ಅಕಿ ಬ್ಯಾಡ ಅಂತ ಹೇಳಿ ಬಿಟ್ಟು ಹೋಗಲಿ. ನಾ ಏನೂ ಅಕಿ ಹಿಂದ ಬಂದು ಅಕಿಗೆ ತ್ರಾಸು ಕೊಂಡಗಿಲ್ಲ. ಬಿಟ್ಟು ಹೋಗು ಅಂತ ಹೇಳ್ರೀ ನಿಮ್ಮ ಮಗಳಿಗೆ,' ಅಂತ ವಾಪಸ್ ಸವಾಲ್ ಒಗೆದು ಗೋಡೆಗೊರಗಿ ಕೂತುಬಿಟ್ಟ. ಪಂಚಾಯಿತಿ ಮಾಡಲಿಕ್ಕೆ ಕೂತಿದ್ದ ಹಿರಿಯರು ಮಗಳ ಕಡೆ ನೋಡಿದರು. 'ನಾ ಇವನ್ನ ಬಿಟ್ಟು ಬ್ಯಾರೆ ಯಾರನ್ನೂ ಲಗ್ನಾ ಆಗಂಗಿಲ್ಲ. ಆದ್ರ ಇವನ ಜೋಡಿನೇ. ಇಲ್ಲಂದ್ರ ಭಾವ್ಯಾಗ ಜಿಗಿತೀನಿ! ಸತ್ತುಹೋಗ್ತೇನಿ!' ಅಂದುಬಿಟ್ಟಳು. ಅವರ ಮಹಾ ದೊಡ್ಡ ಕಂಪೌಂಡಿನಲ್ಲಿದ್ದ ಹಾಳು ಭಾವಿ ನೆನಪಾಯಿತು. ಆ ಭಾವಿಗೆ ಆಗಲೇ ನಾಲ್ಕಾರು ಅತೃಪ್ತ ಜೀವಗಳು ಬಿದ್ದು ಆತ್ಮಹತ್ಯೆ ಮಾಡಿಕೊಂಡು ಅದು ಡೇಂಜರ್ ಭಾವಿ ಅಂತ ಹೆಸರಾಗಿಬಿಟ್ಟಿತ್ತು. ಇನ್ನೂ ಒತ್ತಾಯ ಮಾಡಿದರೆ ಮಗಳು, ಅದೂ ಹಿರಿಮಗಳನ್ನು, ಕಳೆದುಕೊಳ್ಳಬೇಕಾಗುತ್ತದೆ ಅಂತ ವಿಚಾರ ಮಾಡಿ ಹಿರಿಯರೂ ಹೂಂ ಅಂದರು. ಪುಣ್ಯಕ್ಕೆ ಜಾತಿ ಒಂದೇಯಾಗಿತ್ತು. ಒಂದೇ ಮಠ ಕೂಡ. ಆ ಮಟ್ಟಿಗೆ ತೊಂದರೆಯಿಲ್ಲ.
'ನಮ್ಮ ಕಾಕಾ ಆ ಹುಚ್ಚ ಸೂಳಿಮಗ್ಗ ಜಗ್ಗೆ ರೊಕ್ಕಾ ಕೊಟ್ಟು ಜೀವನಕ್ಕ ಏನೋ ಒಂದು ವ್ಯವಸ್ಥಾ ಮಾಡಿಕೊಟ್ಟ ನೋಡಪಾ. ಏನೋ ಬಿಸಿನೆಸ್ ಹಾಕಿಕೊಟ್ಟಾ. ಫುಲ್ ಬೋಳಿಸ್ಕೊಂಡು ಹೋದಾ ನಮ್ಮ ಕಾಕಾ,' ಅಂದ ಶ್ಯಾಮ್ಯಾ.
'ಇರಲಿ ಬಿಡಲೇ. ಯಾರಿಗೆ ಕೊಟ್ಟರು ನಿಮ್ಮ ಕಾಕಾ? ನಿಮ್ಮ ಅಕ್ಕ, ನಿಮ್ಮ ಮಾಮಾಗೇ ಕೊಟ್ಟರು. ಹೌದಿಲ್ಲೋ? ಈಗ ಹ್ಯಾಂಗ ಇದ್ದಾರ ಎಲ್ಲಾ? ಎಲ್ಲಾ ಆರಾಮ್ ಇದ್ದಾರೋ ಇಲ್ಲೋ??' ಅಂತ ಕೇಳಿದೆ.
'ಯಾರಿಗ್ಗೊತ್ತೋ ಮಾರಾಯಾ ಅವರ ಸುದ್ದಿ? ಜಾಸ್ತಿ ಟಚ್ಚಿನಾಗ ಇಲ್ಲ. ಆವಾ ಹುಚ್ಚಸೂಳಿಮಗ, ಅವನೇ ನಮ್ಮ so called ಮಾಮಾ ಮನ್ನೆ ಸಾಯಲಿಕ್ಕೆ ಬಿದ್ದಿದ್ದನಂತ!' ಅಂದುಬಿಟ್ಟ.
'ಯಾಕಲೇ!? ಏನಾಗಿತ್ತು?? ಈಗ!? ಆರಾಮಾತ?' ಎಂದು ಕೇಳಿದ್ದೆ. ಪಾಪ! ನಮ್ಮ ಕಟ್ಟೇಶ್ವರ ಕಪ್ಯಾ ಹೇಗಿದ್ದಾನೋ ಅಂತ ಆತಂಕ.
'ಚಿಕನ್ ಗುನ್ಯಾ ಆಗಿತ್ತಂತ. ಈಗ ಆರಾಮ್ ಆಗ್ಯಾನಂತ,' ಅಂದ ದೋಸ್ತ ಮುಂದುವರೆದು, ಕೊಂಚ ಉರಿದುಕೊಂಡು 'ಮೂರೂ ಹೊತ್ತು ಚಿಕನ್ ತಿಂದು, ಶೆರೆ ಕುಡದ್ರ ಚಿಕನ್ ಗುನ್ಯಾನೂ ಬರ್ತದ ಮತ್ತೊಂದೂ ಬರ್ತದ' ಅಂದುಬಿಟ್ಟ. ಶಿವಾಯ ನಮಃ!
ಹೋಗ್ಗೋ! ಚಿಕನ್ ತಿನ್ನುವದರಿಂದ ಚಿಕನ್ ಗುನ್ಯಾ ಬರೋದಿಲ್ಲ ಮಾರಾಯಾ ಎಂದು ಹೇಳೋಣ ಅಂತ ಮಾಡಿದೆ. at least ಚಿಕನ್ ತಿಂದರೆ ಚಿಕನ್ ಗುನ್ಯಾ ಬರುತ್ತದೆ ಅಂತ ತಪ್ಪು ತಿಳಿದಾದರೂ ಕೆಲವು ಮಂದಿ ಚಿಕನ್ ಬಿಟ್ಟಿದ್ದಾರೆ. ಅದೇ ಪುಣ್ಯ. ಎಷ್ಟೋ ಕೋಳಿಗಳು ಬಚಾವಾಗಿ ಕೋ ಕೋ ಕೊಕ್ಕೋ ಕೋ ಅಂತ ನಲಿದುಕೊಂಡಿವೆ. ಆ ತಪ್ಪು ಮಾಹಿತಿ ಹಾಗೇ ಇರಲಿ ಅಂತ ತಿದ್ದುಪಡಿ ಮಾಡದೇ ಅಲ್ಲಿಗೇ ಬಿಟ್ಟೆ.
ಹೀಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಕೇಳಿದ್ದ 'ಮಲಿ ಹಿಚಕ್ತಾನ' ಅನ್ನುವ ಖತರ್ನಾಕ್ ಕಥೆಗೊಂದು ಅಂತ್ಯ ಸಿಕ್ಕಿತ್ತು.
ಭಾರತದಲ್ಲಿ ಅದೇನೋ 'ಅಚಾರಿ ಮಸ್ತಿ' ಅನ್ನುವ ಉಪ್ಪಿನಕಾಯಿ (ಅಚಾರ್) ರುಚಿಯ ಪೊಟಾಟೋ ವೇಫರ್ ಸಿಗುತ್ತದೆಯಂತೆ. ನಾನು ಆ 'ಅಚಾರಿ ಮಸ್ತಿ' ಅನ್ನುವದನ್ನು ನಗುತ್ತ 'ಆಚಾರಿ ಮಸ್ತಿ' ಅಂತಲೇ ಓದಿಕೊಳ್ಳುತ್ತೇನೆ. ಹೇಳಿಕೇಳಿ ಆಚಾರಿ ಜನಗಳ ಭದ್ರಕೋಟೆಯಾದ ಧಾರವಾಡದ ಮಾಳಮಡ್ಡಿಯಲ್ಲಿ ಬಾಲ್ಯವನ್ನು ಕಳೆದವನು ನಾನು. ಹಾಗಾಗಿ ಆಚಾರಿಗಳ ಮಸ್ತಿ ಬರೋಬ್ಬರಿ ಗೊತ್ತು ಕೂಡ.
ಮಾಳಮಡ್ಡಿ ಆಚಾರಿಗಳ ಅಂದಿನ ಮಸ್ತಿ ನೆನಪಾದಾಗ ಹಳೆ ಗೆಳೆಯ ನಮ್ಯಾ ನೆನಪಾಗುತ್ತಾನೆ. ನಮ್ಯಾ ಆಚಾರಿಯದು ಇಂತಹ ರೋಚಕ ಕಥೆ ಹೇಳುವ ಮಸ್ತಿ. ಕಟ್ಟೆ ಕಪ್ಯಾ ಆಚಾರಿಯದು ಶೃಂಗಾರ ಕಾವ್ಯ, ಕುಚಮರ್ದನದ ಮಸ್ತಿ. ಇತರೇ ಆಚಾರಿಗಳದ್ದು ರೊಕ್ಕ ಕೊಟ್ಟು ಅದನ್ನು ನೋಡಿ, ಜೊಲ್ಲು ಸುರಿಸುವ ಮಸ್ತಿ. ಒಟ್ಟಿನಲ್ಲಿ ಆಚಾರಿ ಮಸ್ತಿ! ಏನಂತೀರಿ?