Thursday, June 28, 2012

ಕಾಮಾಚಾರಿ ಸ್ವಾಮಿ ವಾಮಾಚಾರಾ ಮಾಡ್ತಾರಾ?

ಸಾಬ್....ಏನು ಇದು ಅಸಹ್ಯ!? ನಿಮ್ಮದು ಕೆ  ಸ್ವಾಮೀಜಿ ಇಂತಾ ಹೊಲಸ್ ಹೊಲಸ್ ಕೆಲಸ ಮಾಡಿ, ಅದರ ಸೀಡಿ (video CD) ಆಗಿ, ಅದು ಟಿವಿ ನಲ್ಲಿ ಬಂದ್ಬಿಟ್ಟಿ, ಯಾರ್ಯಾರೋ  ಔರತ್ ಮಂದಿ ಎಲ್ಲಾ ಟಿವಿ ಮ್ಯಾಲೆ ಬಂದು ಸ್ವಾಮೀಜಿ ನಮಗೆ ಹೀಗೆ ಮಾಡಿದ್ರು, ಹಾಗೆ ಮಾಡಿದ್ರು ಅಂತ ಬೊಂಬಡಾ ಬಜಾಯಿಸ್ತಾ ಇದ್ದಾರೆ ನೋಡಿ.....ಬಹುತ್ ಬೇಶರ್ಮೀ ಕಿ ಬಾತ್ ಸಾಬ್.....ಅಂತ ಹೇಳಿ ನನ್ನ ರಿಯಾಕ್ಷನ್ ಗೆ ಕಾದ ಕರೀಂ ಸಾಬ್.

ಸಾಬ್ರ ....ಯಾವ್ ಸ್ವಾಮಿಗೋಳು.....? ನಮ್ಮ ಎಲ್ಲಾ ಸ್ವಾಮಿಗಳು ಕಚ್ಚೆ ಇನ್ನೊಂದು ಎಲ್ಲ ಘಟ್ಟೆ ಕಟ್ಟಿಗೊಂಡ ಇರ್ತಾರ್ರಿ....ಯಾರ್ ಬಗ್ಗೆ ಹೇಳಲಿಕತ್ತೀರಿ?.....ಅಂದೆ.

ಅದೇ ಸಾಬ್ ನಿತ್ಯಾನಂದಾ ಅವರ ಬಗ್ಗೆ....ಅಂತ ಕರೀಂ ಹೇಳಿದ್ ಮ್ಯಾಲೆ ತಿಳೀತು.

2010 ರಲ್ಲಿ ನಿತ್ಯಾನಂದರು ಯಾವದೋ ಸಿನಿಮಾ ನಟಿ ಜೊತೆ ಅಸಭ್ಯ ರೀತಿ ಇರೋ ಸೀಡಿ ಬಹಿರಂಗವಾಗಿ, ಅವರೂ ಜೇಲ್ ಒಳಗೆ ಹೋಗಿ, ನಂತರ ಹೊರಗೆ ಬಂದು, ಎಲ್ಲ ಥಂಡಾ ಆಗಿತ್ತು. ಈಗ ಮತ್ತೆ ಹೊಸ ಹೊಸ ಗಂಡಸೂರು , ಹೆಂಗಸೂರು ಎಲ್ಲ ಬಂದು ಮತ್ತೆ ಅವರ ಮೇಲೆ ಆರೋಪ ಮಾಡಿ ಮತ್ತೆ ಸುದ್ದಿಯಲ್ಲಿ ಇದ್ದಾರೆ ಸ್ವಾಮಿ ನಿತ್ಯಾನಂದ ಅವರು.

ನೋಡ್ರೀ ಸಾಬರ...ಏನ ಕೇಳಿದರೂ, ಏನ ನೋಡಿದರೂ, ಎಲ್ಲದನ್ನು ಚಿಂತಿಸಿ ಪರಾಮರ್ಶೆ ಮಾಡಿ ಒಂದು ಅಭಿಪ್ರಾಯಕ್ಕ ಬರಬೇಕ ನೋಡ್ರೀಪ....ಅಂದೆ.

ಕರೀಮಾ....ನೋಡಪಾ....ನಿತ್ಯಾನಂದ ಸ್ವಾಮಿಗಳು ಏನರ ಅಂತದ್ದೆಲ್ಲ ಮಾಡಿದ್ರ, ಅದ್ರಾಗೇನು 100% ತಪ್ಪು ಅಂತ ಹೇಳಲಿಕ್ಕೆ ಬರೋದಿಲ್ಲ ನೋಡಪಾ...ಅಂದು ಕರೀಮನ ರಿಯಾಕ್ಷನ್ ಗೆ ಕಾದೆ.

ಸಾಬ್....ಏನು ಹೇಳ್ತೀರಿ ಸಾಬ್.....ಸ್ವಾಮೀ ಆದವರು ಹೆಂಗಸು ಮಂದಿ ಜೊತೆ ಅದೆಲ್ಲ ಖರಾಬ್ ಖರಾಬ್ ಕೆಲಸ ಮಾಡೋದು ಸರಿ  ಕ್ಯಾ? ನಿಮ್ಮದು ತಲಿ ಮೇಲೆ ನಮಗೆ ಡೌಟ್ ಬರ್ತದೆ.....ಅಂದ ಕರೀಂ. ಶಾಕ್ ಆಗಿತ್ತ ಅವಂಗ.

ಕರೀಂ....ನಾನು ಸ್ವಲ್ಪ ಓದಿ ತಿಳಕೊಂಡೇನಿ ನೋಡಪಾ....ನಮ್ಮ ಸ್ವಾಮಿ ಮಂದಿ ವಳಗ ತಾಂತ್ರಿಕ್ ಸಿಸ್ಟಮ್ ಫಾಲೋ ಮಾಡೋ ಕೆಲೊ ಮಂದಿ ಇರ್ತಾರ್ ನೋಡಪಾ....ಅದ್ರಾಗೂ ತಂತ್ರ ವಾಮಾಚಾರ ವರ್ಗಕ್ಕೆ ಸೇರಿದವರಿಗೆ ಇದೆಲ್ಲ ಓಕೆ....ಅಂತಾ ಶಾರ್ಟ್ ಆಗಿ ತಂತ್ರ, ವಾಮಾಚಾರದ ಬಗ್ಗೆ ಇಂಟ್ರೋ ಕೊಟ್ಟೆ.

ಕ್ಯಾ ಸಾಬ್.....? ತಂತ್ರ ಅಂದ್ರೆ? ನಮಗೆ ತಿಳಿಯೋದಿಲ್ಲ ಅಂತ ಸುಳ್ಳು ಸುಳ್ಳು ಚೋಡತೀರಿ  ಕ್ಯಾ.....?....ಅಂತ ನಾ ಹೇಳಿದ್ದ ಡಿಸ್ಮಿಸ್ಸ್ ಮಾಡಿದ.

ಹಾಂಗ ಅಲ್ಲಪ....ಅಂತ ಮುಂದು ವರಿಸಬೇಕು ಅನ್ನೋದ್ರಾಗ. ಅವನಾ ಮತ್ತ ಹೇಳಿದ.

ಚುಪ್ ಕರೋಜಿ....ಆ  ನಿತ್ಯಾ ಸ್ವಾಮಿ ಅಂತಾನೆ, ಅವನದು ಯಂತ್ರಾನೇ ಕೆಲಸಾ ಮಾಡೋದಿಲ್ಲ ಅಂತ....ಚೆಕ್ ಮಾಡಿದ್ದ ಡಾಕ್ಟರ್ ಮಂದಿ ಹೇಳ್ಯಾರೆ ಸ್ವಾಮಿ ಅವರದ್ದು ಸೆಕ್ಸ್ ಪವರ್ ಛೋಟಾ ಬಚ್ಚಾ ಲೋಗ್  ಮಾಫಿಕ್ ಅದೇ ಅಂತ....ಅಂತ ಬುರ್ನಾಸ್ ಯಂತ್ರಾ ಇಟ್ಟಗೊಂಡು ಔರತ್ ಮಂದಿಗೆ ಏನು ತಂತ್ರ ಮಾಡೋಕೆ ಸಾಧ್ಯಾ ಆ ಕೊರಮಾ ಸ್ವಾಮಿಗೆ? ಅಂತಾ ಬುರ್ನಾಸ್ ತಂತ್ರಾ ಮಾಡಿಸಿಕೊಳ್ಳೋಕೆ ಹೋಗೋ ಗರಂ ಗರಂ ಹೆಂಗಸು ಮಂದಿದೂ ಖೂನ್ ಎಲ್ಲ ಥಂಡಾ ಆಗಿದೆ ಅಂತಾ ಕ್ಯಾ....?................ಅಂತ ಹೇಳಿ ಫುಲ್ ಡಿಸ್ಮಿಸ್ಸ್ ಮಾಡಿಬಿಟ್ಟ.

ಕರೀಮಾ.....ನಾ ಹೇಳೋದ್ ಪೂರ ಕೇಳಿ ಅರ್ಥ ಮಾಡಿಕೊಂಡ ಮೇಲೆ ನಿನಗ ಹ್ಯಾಂಗ ಬೇಕು ಹಾಂಗ ಡಿಸೈಡ್ ಮಾಡೀ  ಅಂತ. ಓಕೆ ಏನಪಾ?....ಅಂತ ಆಫರ್ ಮಾಡಿದೆ.

ಓಕೆ...ಸಾಬ್....ಮೊದಲು ಒಂದು ಹೇಳಿ.. ಅಂದ ಕರೀಂ.

ಕೇಳೋ ನಮ್ಮಪ್ಪಾ...ಸಾಬಣ್ಣ.

ವಾಮಾಚಾರಿ ಅಂದ್ರೆ ಯಾವ ಮಠದ್ದು ಆಚಾರ್ರು ಸಾಬ್?.....ಸ್ಟುಪಿಡ್ ಇನ್ನೋಸೆಂಟ್ ಆಗಿ ಕೇಳಿದ.

ಹೋಗ್ಗೋ...ವಾಮಾಚಾರಿ ಅಂದ್ರ ಯಾವದ ಮಠದ ಆಚಾರ್ರು ಅಲ್ಲ. ಸದಾಚಾರಿ ಸ್ವಾಮಿಗಳು ಯಾವದನ್ನ ಮಾಡೋದಿಲ್ಲವೋ ಅವನ್ನೆಲ್ಲ ಸಿಕ್ಕಾಪಟ್ಟೆ ಮಾಡಿ, ಅವರ ತಾಂತ್ರಿಕ ಪಧ್ಧತಿ ಪ್ರಕಾರ್ ಮಾಡಿ, ಆ ಮೂಲಕವೇ ಆ ಆಸೆಗಳ, ಆ ದುರ್ಬಲತೆಗಳ ಮೇಲೆ ವಿಜಯ ಸಾಧಿಸಿ, ಸಮಾಧಿ, ಮೋಕ್ಷ ಪಡೆಯೋ ಪ್ರಯತ್ನ ಮಾಡೋ ಸ್ವಾಮಿಗಳಿಗೆ ವಾಮಾಚಾರಿಗಳು ಅಂತಾರೆ ನೋಡಪಾ....ಸದಾಚಾರಿ ಸ್ವಾಮಿಗಳು ನಾನ್-ವೆಜ್ ತಿನ್ನೋದಿಲ್ಲ, ಹೆಂಡ ಕುಡಿಯೋದಿಲ್ಲ, ಸೆಕ್ಸ್ ಇಂದಾ ದೂರ. ವಾಮಾಚಾರಿಗಳು ಇದೆಲ್ಲವನ್ನೂ excess ಮಾಡ್ತಾರ್ ನೋಡಪಾ.....ಅಂತ ಅಂದು  ಎಷ್ಟು ಅರ್ಥ ಆಗಿರಬೋದು ಅಂತ ಮಾರಿ ನೋಡಿದೆ ಕರೀಮಂದು.

ತಲಿ ಕೆರಕೊತ್ತ ಕೇಳಿದ ಕರೀಂ.

ಸಾಬ್....ಈ ವಾಮಚಾರಿ ಮಂದಿಗೆ ಮತ್ತೆ ರಾಮಾಚಾರಿಗೆ ಏನಾರಾ ರಿಷ್ತಾ ಐತೆ  ಕ್ಯಾ?...ಅಂದ ಕರೀಂ.

ಯಾವ್ ರಾಮಾಚಾರಿನೋ.....? ಅಂತ ಸ್ವಲ್ಪ irritate ಆಗಿ ಕೇಳಿದೆ.

ಅದೇ ಸಾಬ್....ರವಿಚಂದ್ರನ್ ಸಿನಿಮಾ ಸಾಬ್....ರಾಮಾಚಾರಿ ಅಂತ ಬಂದಿತ್ತು ಅಲ್ಲಾ ಸಾಬ್?....ಅಂದ.

ಏ .........ಮಂಗ್ಯಾನ್ ಕೆ.....ಬೇಕಂತ ಉಲ್ಟಾ ಪುಲ್ಟಾ ಕೇಳ್ತಿ ಏನ? ಸೊಕ್ಕೇನು ಮುಕ....ಅಲ್ಲ ಮೈಯ್ಯಾಗಾ?....ಅಂತ ಝಾಡಿಸಿದೆ ಮಂಗ್ಯಾನ್ ಕೇ ಗೆ.

ಗುಸ್ಸಾ ನಕೋ ಕರೋಜಿ....ಹೇಳಿ...ಹೇಳಿ....ತಂತ್ರಾದ ಬಗ್ಗೆ...ವಾಮಾಚಾರಿ ಬಗ್ಗೆ....ಆಗೇ ಬೋಲೋಜಿ .....ಅಂದ ಕರೀಂ.

ಕರೀಮಾ....ನೋಡಪಾ..ವಾಮಾಚಾರ ಶಬ್ದದ ಲಿಟರಲ್ ಮೀನಿಂಗ್ ಅಂದ್ರ 'ಎಡಗೈಯ್ಯಿಂದ ಮಾಡೋ ಕೆಲಸ' ಅಂತ....ಡೆಫಿನಿಶನ್ ಕೊಟ್ಟೆ.

ಎಲ್ಲಾರೂ  ಎಡಗೈಯ್ಯಿಂದ ಮಾಡೋ ಕೆಲಸ ಇದ್ದೇ ಇರ್ತದೇ  ಸಾಬ್....ಅವರೆಲ್ಲಾ ವಾಮಚಾರಿ ಆಗ್ತಾರೆ ಕ್ಯಾ?....ಅಂತ ಕುಹಕ ನಗಿ ನಕ್ಕೋತ್ತ ಅಧಿಕಪ್ರಸಂಗಿತನ ಮಾಡಿದಾ ಕರೀಂ.

ಸುಮ್ಮನಾ ಕೇಳಪಾ ....ಆ ಕೆಲಸಾ ಒಂದಾ ಬಲಗೈಯ್ಯಾಗ್ ಮಾಡಿ ಸದಾಚಾರಿ ಹಾಂಗ್ ಇರೋ ರೊಡ್ಡ ಮಂದಿ ಇರ್ತಾರ್...ಅಂತ ಕಟ್ ಮಾಡಿದೆ. ಅವನ ಮಾತ್ ಕೇಳಿ ನಗು ಮಾತ್ರ ಬಂದಿದ್ದ ಖರೆ.

ನೋಡಪಾ ಕರೀಂ....SSLC ವಳಗ magnetism ಕಲತಿದ್ದ ನೆನಪ ಅದ ಏನ? NT ಮಾಸ್ತರ್ ಹ್ಯಾಂಗ ಹೇಳಿದ್ರು? ನೆನಪ ಮಾಡಿಕೊಂಡು ಹೇಳಪಾ....ಅಂತ ಕೇಳಿದೆ.

ನೆನಪ ಅದೆ ಸಾಬ್.....NT ಮಾಸ್ತರ್ ಒಂದು ಮಾಗ್ನೆಟ್, ಒಂದು ಆರ್ಡಿನರಿ ಕಬ್ಬಣ ಪೀಸ್ ತಂದು, ಮಾಗ್ನೆಟ್ ನಿಂದ ಕಬ್ಬಿಣ ತಿಕ್ಕಿದ್ದ್ರು.....ಮ್ಯಾಲಿಂದ ಕೆಳವರೆಗೂ ತಿಕ್ಕಿದರು....ಜೋರಾಗಿ ಫೋರ್ಸ ಹಾಕಿ ಹಾಕಿ ತಿಕ್ಕಿದರು....ಆ ಮ್ಯಾಲೆ ಆ ಕಬ್ಬಿಣ ಪೀಸ್ ಸಹಿತ ಮಾಗ್ನೆಟ್ ಆಯಿತು....ಟೆಂಪೊರರಿ ಮಾಗ್ನೆಟ್ ಆಯಿತು.....ಅಂತ ಹೇಳಿ ಕರೀಂ ನನ್ನ impress ಮಾಡಿದ.

ಗುಡ್....ಸಾಬ್ರಾ.....ಮಸ್ತ ನೆನಪ ಇಟ್ಟ ಹೇಳಿದ್ರಿ ನೋಡ್ರಿ. ನಿತ್ಯಾನಂದ ಸ್ವಾಮಿಗಳೂ ಇದನ್ನ ಮಾಡಿರಬಹುದು. ಅವರು ಭಾಳ ಸಾಧನಾ ಮಾಡಿ ಮಾಗ್ನೆಟ್ ಆಗಿ ಬಿಟ್ಟಿರಬಹುದು. ಅದಕ್ಕ ಎಲ್ಲರೂ ಅವರಿಗೆ attract ಆಗ್ತಾರ್ ನೋಡಪಾ. ಅದರಾಗ ಸ್ವಾಮಿಗಳದ್ದು ಏನು ತಪ್ಪು? ತಂತ್ರ, ವಾಮಾಚಾರದಾಗ ಅದಕ್ಕ ಓಕೆ ಅದ. ಹೆಂಗಸೂರು, ಗಂಡಸೂರು ತಾವೂ ಮಾಗ್ನೆಟ್ ಆಗ್ಬೇಕ್ ಅಂತ ಅವರ ಕಡೆ ಬಂದು  ತಿಕ್ಕಿಸಿಕೊಂಡು, ಸ್ವಾಮಿಗಳಿಗೂ ತಿಕ್ಕಿ, ಅವರು ಕೊಟ್ಟ ಅವರ ಸ್ವಂತದ ಪಂಚಾಮ್ರತ ಕುಡದು, ತಾವೂ ಸ್ವಲ್ಪ ಮೋಕ್ಷದ ಫೀಲಿಂಗ್ ಅನುಭವಿಸಿದರ ಏನ ತಪ್ಪ ಅದನೋ?.....ಅಂತ ತಂತ್ರದ ಕ್ರಿಯಾ ಬಗ್ಗೆ ಹೇಳಿದೆ.

ಸಾಬರು ಗಹನ ವಿಚಾರದಲ್ಲಿ ಮುಳಗಿದರು.

ಹೌದು....ನೋಡಿ ಸಾಬ್...ಇದು ಸಾಧ್ಯ ಇದ್ದರೂ ಇರಬಹುದು....ಅಂತ ಹೇಳಿದ ಕರೀಂ.

ಆದ್ರೆ ಒಂದು ಡೌಟ್  ಸಾಬ್......ಒಬ್ಬ ವಾಮಾಚಾರಿ ಸ್ವಾಮಿ ಎಷ್ಟು ಮಂದಿಗೆ ಮಾಗ್ನೆಟ್ ಮಾಡಬಹದು ಸಾಬ್?....ಅಂತ ಕೇಳಿದ ಕರೀಂ.

ಅದೆಲ್ಲಾ ಮಾಗ್ನೆಟ್ ನಲ್ಲಿ ಎಷ್ಟು ಪವರ್ ಅದ ಅದರ ಮ್ಯಾಲೆ ಡಿಪೆಂಡ್ ನೋಡಪಾ....ಅಂದೆ.

ಸಾಬ್....ಈ ಸ್ವಾಮಿ ಮಂದಿ ಕಡೆ ಅಷ್ಟು ಪಾವರ್ ಎಲ್ಲಿಂದ ಬರ್ತದೆ ಸಾಬ್....? ನಮಗೆ ಒಂದು ಬೇಗಂ, 2-3 ಸ್ಟೆಪ್ನಿ ಡಾವ್ ಮೆಂಟೇನ್ ಮಾಡೋಕೆ ಆಗೋದಿಲ್ಲ....ಈ ನಿತ್ಯಾ ಸ್ವಾಮಿ ಅದೆಷ್ಟು ಮಂದಿ ಹೆಂಗಸೂರ್ಗೆ ಮಾಗ್ನೆಟ್ ಮಾಡ್ತಾರೆ ಸಾಬ್...ಅದೂ ತಿಕ್ಕಿ ತಿಕ್ಕಿ....ಅಂತ ಡೌಟ್ ತೋರ್ಸಿದಾ ಕರೀಮ್ .

ನೋಡಪಾ....ಕರೀಂ....ನಿನಗ ಒಂದ ಸಿಂಪಲ್ ಎಕ್ಸಾಂಪಲ್ ಕೊಟ್ಟ ಹೇಳಿಕೊಡ್ತೆನಿ ನೋಡಪಾ....ನಿಮ್ಮ ಮನಿವಳಗ ನೀರು ಎಲ್ಲಿಂದ ಬರ್ತದ?

ಸಾಬ್...ನೀರಸಾಗರ್ನಿಂದ ಸಾಬ್..ಅಲ್ಲಿಂದ 5th ಕ್ರಾಸ್ ನಲ್ಲಿ ಇರೋ, ನೆಲದಿಂದ ಭಾಳ ಎತ್ತರದಲ್ಲಿ ಕಟ್ಟಿರೋ  ದೊಡ್ಡ ಟ್ಯಾಂಕ್ ಗೆ  ನೀರ್ ಪಂಪ್ ಮಾಡಿರ್ತಾರೆ....ಅಷ್ಟು ಎತ್ತರದಲ್ಲಿ  ಇರೋದ್ರಿಂದ, ಅದು ಗ್ರಾವಿಟಿ ಉಪಯೋಗಿಸಿಕೊಂಡು, ಆ ಗ್ರಾವಿಟಿ ಫೋರ್ಸನಿಂದ ಇಡೀ ನಮ್ಮ ಏರಿಯಾಕ್ಕೆ ನೀರ್ supply ಆಗ್ತದೆ...ಸಾಬ್....ಅಂತ ಪರ್ಫೆಕ್ಟ್ ಉತ್ತರ ಕೊಟ್ಟ.

ಮಸ್ತ ಉತ್ತರ ಕರೀಂ....ಭಾಳ್ ಶಾಣ್ಯಾ ಇದ್ದಿ....ಇದ ಥೇರಿ ನೋಡಪಾ....ಸ್ವಾಮಿ ಮಂದಿನೂ ಹಾಂಗ ತಮ್ಮಲ್ಲಿ ಇರೋ ಬರೋ ಪವರ್ ಎಲ್ಲ ತಮ್ಮ ಯೋಗಶಕ್ತಿ, ವರ್ಷಗಟ್ಟಲೆ ಮಾಡಿದ ಸಾಧನೆ ಎಲ್ಲದರಿಂದ ಸೀದಾ ತೊಗೊಂಡು ಹೋಗಿ ನೆತ್ತಿ ಹತ್ತರ ಇಟ್ಟಿರ್ತಾರ್....ನಮ್ಮ ಎತ್ತರದಲ್ಲಿ ಇರೋ ದೊಡ್ಡ ವಾಟರ್ ಟ್ಯಾಂಕ್ ಕಾನ್ಸೆಪ್ಟ್....ಸೇಮ್ ಟು ಸೇಮ್....ಅವರದ್ದು ಎಲ್ಲಾ ಶಕ್ತಿ ನೆತ್ತಿ ವಳಗ ಇರೋದಕ್ಕ ಅವರೂ ಭಾಳ್ ಮಂದಿಗೆ  ಸರ್ವೀಸ್ ಮಾಡ್ಲಿಕ್ಕೆ ಸಾಧ್ಯ ಅದ ನೋಡಪಾ....ನಿನ್ನಂತ ಮಂದೀದು ಪವರ್ ಮೊದಲಾ ಕಮ್ಮಿ...ಅದೂ ನೆತ್ತಿ ಬಿಡು....ದಿಲ್ ಕೆ ಪಾಸ್ ಭಿ ಇರೋದಿಲ್ಲ....ಹಾಂಗಾಗಿ ನಿನಗ  ಒಂದು ಬೇಗಂ, 2-3 ಸ್ಟೆಪ್ನಿ ಸರ್ವೀಸ್ ಮಾಡೋದ್ರಾಗ ಹರೋಹರ ಆಗಿಬಿಡ್ತದ ನೋಡಪಾ....ಅಂತಾ ಅವನಿಗೆ ತಿಳಿಯೋ ಹಾಂಗ ಹ್ಯಾಂಗ ಕುಂಡಲಿನಿ energy ಸೀದಾ ನೆತ್ತಿಗೆ ಹೋಗಿ ಓಜಸ್ ಆಗೋದನ್ನ ವಿವರಿಸಿದೆ.

ಕರೀಂ....ಫುಲ್ impress ಆಗಿದ್ದ. ಮಾರಿ ಮ್ಯಾಲೆ ಭಾಳ್ ಪ್ರಶ್ನೆ ಇದ್ದಾಂಗ್ ಕಾಣಿಸ್ತು.

ಸಾಬ್....ನೆತ್ತಿಗೆ ಹ್ಯಾಂಗೆ ಪವರ್ ಕಳ್ಸೋದು...ಸಾಬ್....ಬೇಗಾ ಕಲಿಸಿಕೊಡಿ ಸಾಬ್....ನಮ್ಮದೂ ಪವರ್ ನೆತ್ತಿಗೆ ಹೋಗಿ ಒಮ್ಮೆ ಸೆಟಲ್ ಆಗ್ಲಿ ಸಾಬ್....ಆ ಮ್ಯಾಲೆ ನೋಡಿ ಸಾಬ್....ನಾವು ಅಕ್ಬರ್ ಬಾದಶಾ  ಆಗ್ತೇವಿ....ಅಂತ ಉತ್ಸುಕತೆ ತೋರಸಿದ.

ಏನ ಅಕ್ಬರ್ ಬಾದಶಾ??????....ಅಂತ ಕೇಳಿದೆ.

ಗೊತ್ತಿಲ್ಲ ಕ್ಯಾ ಸಾಬ್.......? ಅಕ್ಬರ್ ಬಾದಶಾ ಹಾರೆಮ್ ನಲ್ಲಿ ಸಾವಿರಾರು ಬೇಗಂ ಇದ್ದರಂತೆ....ಆದ್ರೂ ಅವರಿಗೆ ಹರ ಪೂನಂ ಕೆ ರಾತ್ ಬಾಜೂನಲ್ಲಿ ಒಂದು ಹೊಸ ಪ್ಯೂರ್ ಕನ್ಯಾ ಪಟಾಕಾ ಫಿಗರ್  ಬೇಕಾಗಿತ್ತಂತೆ....ಅಂತಾ ಲೆಜೆಂಡ್ ಹೇಳಿದ.

ಲೇ....ಮಂಗ್ಯಾನ್ ಕೆ...ಅಂತಾ ಹೊಲಸ್ ಹೊಲಸ್ ಉದ್ದೇಶ ಇಟ್ಟಗೊಂಡ ಸಾಧನಾ ಮಾಡ್ಲಿಕ್ಕೆ ಹೋದ್ರ ಯಾವದೂ ಸಿದ್ಧಿ ಆಗೋದಿಲ್ಲ....ಏನರ ಅಕಸ್ಮಾತ್ ಆದರೂ, ಆ ಸಿದ್ಧಿ ಎಲ್ಲಾ ಅವರೀಗೆ ಉಲ್ಟಾ ಹೊಡದ, ರಕ್ತಾ ಕಾರ್ಕೊಂಡ ಸತ್ತ ತಾಂತ್ರಿಕ್ ಮಂದಿ ಕಥಿ ಬೇಕಾದಷ್ಟ ಅವ....ಸಾಧನಾ ಮಾಡೋದಾ ಆದ್ರ  ಸದಾಚಾರಿ ಸ್ವಾಮೀ ಮಾಡೋಹಾಂಗ ಮಾಡಿದ್ರ ನಿನಗೂ ಚೊಲೋ...ಎಲ್ಲರಿಗೂ ಚೊಲೋ ನೋಡಪಾ....ಅಂತ ಅವನ ಗಲತ್ ವಿಚಾರ ಸರಣಿಗೆ ಬ್ರೇಕ್ ಹಾಕಿದೆ.

ತಿಳೀತು ಸಾಬ್....ನೀವು ಹೇಳೋದು ಸರಿ ಅದೆ...ನಾವು ಸ್ಪೆಷಲ್ ಪವರ್ ಗಲತ್ ಉಪಯೋಗ ಮಾಡಬಾರದು. ಮತ್ತೆ ನಿತ್ಯಾ ಸ್ವಾಮಿ ಮಾಡಿದ್ದು ....?....ಅಂತ ಪಾಯಿಂಟ ಹಾಕಿದ.

ನೋಡಪಾ....ನಿತ್ಯಾನಂದರು ತಿಕ್ಕಿದ್ದು, ಮುಕ್ಕಿದ್ದು, ಲಿಕ್ಕಿದ್ದು ಯಾತಕ್ಕ ಅಂತ ನಮಗ ಗೊತ್ತಿಲ್ಲ. ತಂತ್ರದಾಗ ಗುರುಗೆ ಶಿಷ್ಯರ ಜೊತಿ ಎಲ್ಲದನ್ನೂ ಮಾಡೋ ಪ್ರಿವಿಲೇಜ್ ಇರ್ತದ ಅಂತ ಕೇಳೇನಿ. ಶಿಷ್ಯರೂ ಸಹ ಅದನ್ನ ಅರ್ಥ ಮಾಡಿಕೊಂಡ ಮ್ಯಾಲೇ, ಅದು ತಮಗ ಬೇಕು ಅನ್ನಿಸಿದ ಮ್ಯಾಲೇನ ಗುರುವಿನ ಜೊತಿ ಅಂತಾ ತಾಂತ್ರಿಕ ಕ್ರಿಯೆಗಳಲ್ಲಿ ಭಾಗಿ ಆಗ್ತಾರ್ ಏನಪಾ. ಹೀಂಗ ಇದ್ದಾಗ...ನಿತ್ಯಾನಂದರು ಮಾಡಿದ್ದು ಬಿಲ್ಕುಲ್ ತಪ್ಪು ಅಂತ ಹೇಳಲಿಕ್ಕೆ ಬರೋದಿಲ್ಲ. ಆದ್ರ ಅವರ ಒಳಗಿನ ಉದ್ದೇಶ ಏನಿತ್ತು? ಅದು ಅವರಿಗೆ ಮಾತ್ರ ಗೊತ್ತು...ಶಿಷ್ಯಾರಿಗೆ ಮೋಕ್ಷಾ ಕೊಡೋದಿತ್ತೋ ಅಥವಾ ಸ್ವಂತಕ್ಕ ಆನಂದ ಪಡೋದಿತ್ತೋ ...ಅಥವಾ ಎರಡೂ ಇತ್ತೋ?.....ಏನಂತಿ?......ಅಂತ ಕೇಳಿದೆ.

ಹೌದು....ಹೌದು...ಸಾಬ್......ನಾವು ಓಪನ್ ಮೈಂಡ್ ಇಟ್ಟಗೋಬೇಕು....ಅಂದ ಕರೀಂ.

ಸಾಬ್.....ಒಂದು ಬಾತ್....ಅದು ನೆತ್ತಿಗೆ ಹೋಗಿ ಕೂಡೋ ಪವರ್ ಗೆ ಲೀನಾಕುಂಡಿ ಪವರ್ ಅಂತಾರೆ ಅಲ್ಲಾ....ಕ್ಯಾ? ....ಅಂತಾ ಅಂದು inevitable ಬಾಂಬ್ ಹಾಕೇ ಬಿಟ್ಟ.

ಲೇ.....ಮಂಗ್ಯಾನ್ ಕೆ....ಕತ್ತೀ ಕೆ.....ಅದು ಲೀನಾಕುಂಡಿನೂ ಅಲ್ಲಾ, ಯಕ್ಕುಂಡಿನೂ ಅಲ್ಲಾ, ಮುರಕುಂಡಿನೂ, ಬಳಗುಂಡಿನೂ  ಅಲ್ಲ....ಅವೆಲ್ಲಾ ಕುಂಡಿ ಅನಲಿಕ್ಕೆ ಅದೇನ್ ಯಾರದರ ಧಾರವಾಡ್ ಕಡೆ ಮಂದಿ  ಅಡ್ಡಹೆಸರು ಅಂತ ಮಾಡಿ ಏನ.....? ಮಳ್ಳ ಸೂಳಿ ಮಗನ....ಅಂತ ಪ್ರೀತಿಯಿಂದ ಬೈದೆ. ನಗು ಮಾತ್ರ ಭಾಳ ಬಂತು.


ಅಪ್ಪಾ....ಅದು ಕುಂಡಲಿನಿ ಶಕ್ತಿ....ಅಂತ ಮಾರಾಯ.....ಯಾರಿಗಾದ್ರೂ ಹೋಗಿ ಮತ್ತೇನರ ಹೇಳಿ ಹೊಡಿಸ್ಕೋ ಬ್ಯಾಡ....ಅಂದೆ

ಆದ್ರೆ ಸಾಬ್....ನಾವು ಹೇಳಿದ್ದರಲ್ಲಿ ಪಾಯಿಂಟ ಇದೆ ಸಾಬ್....ಫುಲ್ ಗಲತ್ ಇಲ್ಲಾ ಸಾಬ್....ಅಂತ ಡಿಫೆಂಡ್ ಮಾಡಿಕೊಂಡ.


ಏನ ಕರೆಕ್ಟ್ ಅದ....?....................ಅಂತ ಝಾಡಿಸಿದೆ.

ಅಲ್ಲಾ ಸಾಬ್...ನಮಗೆ ಗೊತ್ತಿಲ್ಲ ಕ್ಯಾ? ಅದು ಕುಂಡಿಲೀನಾ ಪವರ್ ಮೂಲ ಇರೋದು ಕುಂಡಿ ಸುತ್ತಾಮುತ್ತಾನೆ.... ನಮಗೇನು ಗೊತ್ತಿಲ್ಲಾ ಕ್ಯಾ ಸಾಬ್? ಅಲ್ಲಿ ಮೂಲ ಇರೋ ಪವರ್ ಅದು. ಜೊತಿಗೆ ಯಾರೋ ದೇವಿ ಚಿತ್ರಾ ಬ್ಯಾರೆ ಇತ್ತು. ಅದಕ್ಕೇ ಆ ದೇವಿ ಹೆಸರು ಲೀನಾ ಏನೋ ಅಂತ ಮಾಡಿ ಬಿಟ್ಟಿ ನಾನು ಲೀನಾಕುಂಡಿ ಅಂತ ಅಂದಿದ್ದು....ಸುಮ್ಮ ಸುಮ್ಮ ಬೈತೀರಿ ಅಲ್ಲಾ ನೀವು?....ಅಂತ ರಿವರ್ಸ್ ಶಾಟ್ ಕೊಟ್ಟ.

ಕುಂಡಿಲೀನಾ  ಅಲ್ಲೋ ಮಾರಾಯ.....ಕುಂಡಲಿನಿ......ಕುಂಡಲಿನಿ......ಕುಂಡಲಿನಿ.....

ಇರಲಿ....ಇನ್ನೊಂದಾ ಪಾಯಿಂಟ ಲಗೂನ ಹೇಳಿ ಮುಗಸ್ತೇನಿ....ಬ್ಯಾರೆ ಕೆಲಸ ಅದ ನನಗ.....

ಹೇಳಿ ಸಾಬ್....ಹೇಳಿ ಸಾಬ್...

ನೋಡಪಾ....ಕುಂಡಲಿನಿ ಶಕ್ತಿ ಅಲ್ಲೆ ಬುಡದ ಬುಡಕ್ಕ ಇರೋದನ್ನ, ಬೆನ್ನಹುರಿ ನಡು ಇರೋ ಪೈಪಿನ್ಯಾಗ ಸಾವಕಾಶ್ ಏರೀಸ್ಕೊತ್ತ ಹೋದ್ರ....ಭಾಳ ವರ್ಷ ಆದ ಮ್ಯಾಲೆ ನೆತ್ತಿ ಮುಟ್ಟತದ ನೋಡಪಾ....ಆದ್ರ ನೆನಪ ಇಟ್ಟಿರ....ನಡುವಿನ ಪೈಪಿನ್ಯಾಗ ಏರಿಸಬೇಕು ಮತ್ತ....ಲೆಫ್ಟ್, ರೈಟ್ ಪೈಪಿನ್ಯಾಗ ಅದು already ಕಂಟ್ರೋಲ್ ಇಲ್ಲದ ಹರಕೋತ್ತ ಇರ್ತದ....ಹಾಂಗ್ ಅಸಡಾ ಬಸಡಾ ಹರಕೋತ್ತ ಇರೋದಕ್ಕಾ ನಾವ್ ನಾವಿದ್ದಂಗಾ ಇದ್ದೇವಿ....ಸ್ವಾಮಿಗಳು ಸ್ವಾಮಿಗಳಾಂಗ ಇರ್ತಾರ್. ತಿಳಿತಾ?

ಸಾಬ್...ಆ ನಡುವಿನ ಪೈಪ್ ಇರ್ತದೋ ಅಥವಾ ಪ್ಲಂಬರ್ ಕರ್ಸಿ ಹಾಕಿಸ್ಕೋಬೇಕೋ .....? ಅಂತಾ ಕನಫೂಸ್ ಲುಕ್ ಕೊಟ್ಟ.

ಇನ್ನ ಇವಂಗ ಸುಶುಮ್ನ ನಾಡಿ ಬಗ್ಗೆ ಮತ್ತ ಯಾವಾಗರ ಹೇಳಿದ್ರಾತು ಅಂತ ಮಾಡಿ.....

ಸಾಬ್ರಾ......ಮುಂಜಾನಿನಿಂದ ಕೆಲಸ ಮಾಡಿಲ್ಲ....ನಿಮ್ಮ ಜೊತಿ ಹರಟಿ ಹೊಡಕೊತ್ತ ಕೂತೇನಿ....ನಮ್ಮ ಬಾಸನ ಕುಂಡಲಿನಿ ಎಲ್ಲಿ ಹೋಗಿ ಮುಟ್ಟ್ಯದೋ.....? ಖುದಾ ಹಾಫಿಜ್ ಸಾಬರ....ಸಿಗ್ತಾ ಇರ್ರಿ ಮತ್ತ....ಬರ್ಲಿ ಈಗ?

ಓಕೆ...ಸಾಬ್....ಹೋಗಿ ಬರ್ರಿ....ನೋಡಿಕೊಂಡ ನಿಮ್ಮದು ಕುಂಡಾಲೀನಾ ಪವರ್ ಏರ್ಸೀ ನೀವು ....ಆ ಮ್ಯಾಲೆ ನೀವೂ ಕಳ್ಳ ಸ್ವಾಮಿ ಆಗಿ ಬಿಟ್ಟೀರಿ ಮತ್ತೆ....ಅಂತ ಮೈಲ್ಡ್ ಆಗಿ ಕಿಚಾಯಿಸಿ ಬೀಳ್ಕೊಟ್ಟ ಕರೀಂ.

2 comments:

bhagwat said...

ಹಾಹಾ ,ಹಾಸ್ಯದಲ್ಲೇ ಒಂದಿಷ್ಟು ಒಳ್ಳೇ ಮಾತೂ ಇಟ್ಟಿರಿ, ಚಂದ ಇದ್ದು, ನಮ್ ಧಾರವಾಡ್ ಕಡೀ ಭಾಶೀ ಭಾಳ್ ಬರತ್ರೀ ನಿಮಗ , ನಿತ್ಯಾನಂದನ ಹತ್ರ ಏನೋ ಶಕ್ತಿ ಇದ್ದಿಕ್ಕು, ಅವನ ಸಾಧನೆಯಿಂದ,ಆದ್ರೆ ಅದನ್ನ ಜಾಸ್ಥಿ ಪ್ರಚಾರ ಮಾಡಿ ಮಾಡಿ ಕಡೆಗೆ ಏನೂ ಗುತಾಗ್ದೇ ಅವನ ಪರಿಸ್ಥಿತಿ ಹೀಂಗ್ ಆಯ್ಕು ಅಲ್ದಾ

Mahesh Hegade said...

ದವಾ.....ಅವ ಎಂತಾ ಮಾಡಿನ ಅವಂಗೆ ಮಾತ್ರ ಗೊತ್ತಿದ್ದು. ಅದಕ್ಕೆ ತಂತ್ರ ವಾಮಾಚಾರ ಹೇಳಿ ಸಮಜಾಯಿಷಿ ಕೊಟ್ಟರೆ ಪೂರ್ತಿ ಇಲ್ಲೇ ಇಲ್ಲೆ ಹೇಳಿ ತೆಗೆದು ಹಾಕುಲೆ ಬತ್ತಿಲ್ಲೆ ಅಷ್ಟೇ.

ಮತ್ತೆ ಸಿಗ್ವಾ!!