ಶ್ರೀಮತಿ ಗಿಳಿಯೂರ....ಅಲ್ಲಲ್ಲ.... ಈಗ ಶ್ರೀಮತಿ ಅನ್ನಲಿಕ್ಕೆ ಬರೋದಿಲ್ಲ ಯಾಕ ಅಂದ್ರ ಎರಡು ದಿವಸದ ಹಿಂದ ಮಾತ್ರ ಅವರ ಗಂಡ, ಮಾಜಿ ಖ್ಯಾತ ವೈದ್ಯ ಡಾ. ಗಿಳಿಯೂರ ಹೋಗಿ ಬಿಟ್ಟರು. ಹೋಗಿ ಬಿಟ್ಟರು ಅಂದ್ರ ದೇವರ ಕಡೆ ಹೋಗಿ ಬಿಟ್ಟರು. ಹಾಂಗಾಗಿ ಅವರ ಹೆಂಡತಿಗೆ ಶ್ರೀಮತಿ ಅನ್ನಲಿಕ್ಕೆ ಬರೋದಿಲ್ಲ ಅಂತ ಅನ್ನಸ್ತದ. ಮದ್ವಿ ಆಗದವರಿಗೆ ಕುಮಾರಿ, ಮದ್ವಿ ಆದವರಿಗೆ ಶ್ರೀಮತಿ, ಪತಿಯನ್ನು ಕಳಕೊಂಡವರಿಗೆ ಏನಂತಾರೋ ಏನೋ? ಅದಕ್ಕೇ ಸಿಂಪಲ್ ಆಗಿ Ms. ಗಿಳಿಯೂರ್ ಅಂದು ಬಿಡೋಣ.
ಡಾ. ಗಿಳಿಯೂರ ಅವರ ಸಾವು ಗಿಳಿ ರೂಪದಾಗೇ ಬಂದಿದ್ದು ಮಾತ್ರ ಭಾಳ ಆಶ್ಚರ್ಯ ನೋಡ್ರೀ. ಅವರ ಮನಿತನದಾಗ ಮೊದಲಿಂದಲೂ ಗಿಳಿ ಆವ. ಗಿಳಿ ಸಾಕ್ತಾರ ಅಂತ ಗಿಳಿಯೂರ ಅಂತ ಹೆಸರು ಬಂತೋ ಅಥವಾ ಗಿಳಿಯೂರ ಅಂತ ಹೆಸರು ಇರೋದಕ್ಕ ಗಿಳಿ ಸಾಕ್ತಾರೋ ಗೊತ್ತಿಲ್ಲ.
ಡಾ. ಗಿಳಿಯೂರ ಅವರ ಮನಿ ಒಳಗ ಇರೋ ಗಿಳಿ ಮಸ್ತ ಇತ್ತು. ಎಲ್ಲಾ ಮಾತು ಮಸ್ತ ಮಾತಾಡ್ತಿತ್ತು. ಆದ್ರ ಅಧಿಕ ಪ್ರಸಂಗಿ ಇತ್ತು. ಯಾರು ಬಂದಾಗ ಏನು ಮಾತಾಡ್ಬೇಕು ಅಂತ ಗೊತ್ತಿಲ್ಲ ಆ ಹುಚ್ಚ ಖೋಡಿ ಗಿಳಿಗೆ. ನಿಮಗ ಒಂದು ಘಟನೆ ಹೇಳ್ತೆನೀ ಆ ಹುಚ್ಚ ಖೋಡಿ ಗಿಳಿ ಬಗ್ಗೆ. ಎಲೆಕ್ಷನ್ ಟೈಮ್ ಇತ್ತು. ವಡ್ಡರ ಓಣಿ ಸ್ಲಂ ಮಂದಿ ಎಲ್ಲಾ ಫುಲ್ ಕಾಂಗ್ರೆಸ್ ಪಾರ್ಟಿ. ಅವರು, ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು, ಅಂತ ಓಣಿ ತುಂಬ ಒದರಿಕೋತ್ತ ಹೋಗ್ತಿದ್ದರು. ಹೇಳಿ ಕೇಳಿ ಬ್ರಾಹ್ಮಣರ ಓಣಿ. ಎಲ್ಲಾ ಜನತಾ ಪಾರ್ಟಿಗೆ ಓಟು ಹಾಕವರೇ. ಆದ್ರ ಹಂದಿ ಹಿಡಿಯೋ ವಡ್ಡರ ಮಂದಿ ಎದುರು ಹಾಕಿಕೊಂಡು ಜಗಳಾ ಮಾಡೋ ದಮ್ಮ ಇಲ್ಲ. ಅದಕ್ಕ ಹಂದಿ ಹಿಡಿಯೋ ಮಂದಿ - ಜನತಾ ಪಾರ್ಟಿಗೆ ಬೂಟು - ಅಂತ ಅಂದ್ರ ಅಂದುಕೊಳ್ಳಲಿ ಅಂತ ಬಿಟ್ಟಿದ್ದರು. ಈ ಗಿಳಿ ಅದನ್ನ ಮಸ್ತ ಬಾಯಿಪಾಠ ಮಾಡಿ ಬಿಟ್ಟಿತ್ತು. ಒಮ್ಮೆ ಜನತಾ ಪಾರ್ಟಿ ಅಭ್ಯರ್ಥಿ ಯಾರೋ ಡಾ. ಗಿಳಿಯೂರ ಅವರ ಮನಿಗೆ ಬಂದಿದ್ದರು. ಹೇಳಿ ಕೇಳಿ ಊರಿಗೆ ದೊಡ್ಡ ಡಾಕ್ಟರ್. ಅವರು ತಮ್ಮ ಕಡೆ ಬರೋ ಎಲ್ಲಾ ಪೇಷಂಟ್ ಮಂದಿಗೆ ಒಂದು ಮಾತು ಜನತಾ ಪಾರ್ಟಿ ಅವರ ಪರವಾಗಿ ಹೇಳಿದರ ಮಸ್ತ ಪ್ರಚಾರ ಆಗ್ತದ ಅಂತ ಜನತಾ ಪಾರ್ಟಿ ಕ್ಯಾಂಡಿಡೇಟ್ ಅವರ ಆಶಾ. ಅವರು ಬಂದು ಕೂತ ಕೂಡಲೇ ಗಿಳಿ ಶುರು ಮಾಡಿತು ನೋಡ್ರೀ.....ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು. ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು. ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು.....ಹಿಡದು ಬಿಡದ ಗಿಳಿ ಒದರಲಿಕ್ಕೆ ಹತ್ತಿ ಬಿಡ್ತು!!! ಸೂಡ್ಲಿ ಗಿಳಿ!!!! ಡಾ. ಗಿಳಿಯೂರ ಅವರಿಗೆ ಭಾಳ ಅಂದ್ರ ಭಾಳ embarrassment ಆಗಿ ಅವರ ಪರಿಸ್ಥಿತಿ ಬ್ಯಾಡ. ಚುಪ್!ಚುಪ್!ಗಪ್!ಗಪ್! ಅಂತ ಡಾ.ಗಿಳಿಯೂರ ಹೇಳೇ ಹೇಳಿದರು. ಮಾತು ಕೇಳಲಿಕ್ಕೆ ಅದೇನು ನಾಯಿ ಏನು? ಅಲ್ಲ. ಗಿಳಿ ಅದು. ಅದು ಮತ್ತ ಮತ್ತ ಕಾಂಗ್ರೆಸ್ಸಿಗೆ ಓಟು, ಜನತಾ ಪಾರ್ಟಿಗೆ ಬೂಟು ಅಂತ ಅಂದು ಅಂದು ಆ ಜನತಾ ಪಾರ್ಟಿ ಕ್ಯಾಂಡಿಡೇಟ್ ಫುಲ್ ಹೈರಾಣ ಆಗಿ ಒಂದು ದೊಡ್ಡ ನಮಸ್ಕಾರ ಹಾಕಿ ಕೆಟ್ಟ ಮಸಡಿ ಮಾಡಿಕೊಂಡು, ಡಾಕ್ಟರ್ ಸಾಹೇಬರ, ನೀವು ಹೇಳದ್ದನ್ನ ನಿಮ್ಮ ಗಿಳಿ ಎಲ್ಲಾ ಹೇಳಿಬಿಡ್ತು. ಭಾಳ ಖುಷಿ ಆತು ಕೇಳಿ. ಬರ್ತೆನ್ರೀ ಅಂತ ಹೇಳಿ ಹೋಗಿಬಿಟ್ಟ. ಡಾ. ಗಿಳಿಯೂರ, ಅದು ಇದು....ನಿಲ್ಲರೀ..... ಅಂತ ಏನೋ ಹೇಳಲಿಕ್ಕೆ ಹೋದರು. ಆದ್ರ ಜನತಾ ಪಾರ್ಟಿ ಕ್ಯಾಂಡಿಡೇಟ್ ಇವರೆಲ್ಲ ಕಾಂಗ್ರೆಸ್ ಮಂದಿ ಅಂತ ತಿಳಕೊಂಡು ಹೋಗಿ ಬಿಟ್ಟ.
ಮತ್ತೊಂದು ಗಿಳಿ ಅಧಿಕ ಪ್ರಸಂಗ ಅಂದ್ರ ಇದು. ಡಾ. ಗಿಳಿಯೂರ ಅವರ ಮರಿಮಗ ಇನ್ನೂ ಎರಡನೇ ಕ್ಲಾಸ್. ಅವಂಗ ಮುಂಜಾನೆ ಸಾಲಿ ಇರ್ತದ. ಅಷ್ಟು ಲಗೂ ಏನು ಸ್ನಾನ ಮಾಡಿಸೋದು ಅಂತ ಹಾಂಗೇ ಮಾರಿ ತೊಳಿಸಿ ಕಳಿಸಿರ್ತಾರ. ವಾಪಸ್ ಬಂದ ಮ್ಯಾಲೆ ಸ್ನಾನ ಮಾಡಿಸಿದರ ಆತು ಅಂತ ಹೇಳಿ. ಅವಂಗೋ! ಸಾಲಿಯಿಂದ ವಾಪಾಸ್ ಬಂದ ಮ್ಯಾಲೆ ಸ್ನಾನ ಬಿಡ್ರೀ ಊಟ ಮಾಡಲಿಕ್ಕೆ ಟೈಮ್ ಇರೋದಿಲ್ಲ. ಹೋಗಿ ಕ್ರಿಕೆಟ್ ಆಡೋದರ ಬಗ್ಗೆನೇ ಲಕ್ಷ. ಆವಾ ಅಂತೂ ಸ್ನಾನ ಮಾಡಂಗಿಲ್ಲ. ಗಡಿಬಿಡಿ ಒಳಗ ಊಟ ಮಾಡಿದವನೇ ಬ್ಯಾಟ್ ತೊಗೊಂಡು ಓಡಿ ಹೋದಾ ಅಂದ್ರ ಆವಾ ಸಂಜಿ ಮುಂದ ದೀಪಾ ಹಚ್ಚೋ ಟೈಮ್ ಗೆ ವಾಪಸ್ ಬರೋದು. ಬಂದ ಕೂಡಲೇ, ಅಜ್ಜಿ ಹಶಿವಿ, ಅಂತಾನ. ಆ ಪರಿ ಹಸಕೊಂಡು ಬಂದ ಹುಡುಗ್ಗ ಏನು ಸ್ನಾನ ಮಾಡು ಅಂತ ಹೇಳೋದು ಅಂತ, ಸ್ನಾನ ಅಂತೂ ಮಾಡಿಲ್ಲ, ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ, ಅಂತ ಹೇಳಿ ಪ್ರೀತಿಯಿಂದ ಅಜ್ಜಿ ಚಡ್ಡಿ ಬನಿಯನ್ ತಂದು ಕೊಡ್ತಾರ. ಅಜ್ಜಿ ಮುಂದನೇ ವಸ್ತ್ರಾ ಕಳದು ಚಡ್ಡಿ ಬನಿಯನ್ ಬದಲೀ ಮಾಡಿ, ಊಟ ಗಬಾ ಗಬಾ ಮಾಡೋದ್ರೋಳಗ ಹುಡಗನಿಗೆ ಫುಲ್ ನಿದ್ದಿ. ವಾರಕ್ಕ ಒಂದೋ ಎರಡೋ ದಿವಸ ಹಿಡದು ಸ್ನಾನ ಮಾಡಸ್ತಾರ ಬಿಡ್ರೀ. ಆ ಗಿಳಿ ಸಹಿತ - ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ - ಅನ್ನೋದನ್ನ ಮಸ್ತ ಕಲ್ತದ. ಯಾವಾಗ ಅದನ್ನ ಅನ್ನಬೇಕು? ಗೆಸ್ ಮಾಡ್ರೀ. ಡಾ. ಗಿಳಿಯೂರ ಅವರ ಮನಿಗೆ ಯಾರೋ ದೊಡ್ಡ ಸ್ಮಾರ್ತ ಮಠದ ಸ್ವಾಮಿಗಳು ಪಾದಪೂಜಾಕ್ಕ ಅಂತ ಬಂದರ, ಅವರ ಬಂದು ಕೂಡೋ ತಡಾ ಇಲ್ಲ, ಈ ಹುಚ್ಚ ಖೋಡಿ ಗಿಳಿ - ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ. ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ. ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ - ಅಂತ ಒಂದೇ ಸವನ ಚೀರಿ ಸ್ವಾಮಿಗಳು ಸಿಟ್ಟಿಗೆದ್ದು ಹೋಗಿ ಬಿಟ್ಟರು. ಇಂತಾ ಖತರ್ನಾಕ ಗಿಳಿ ಅದ ನೋಡ್ರೀ ಈ ಡಾ. ಗಿಳಿಯೂರ ಅವರ ಮನಿಯೊಳಗ.
ಆದರೂ ಮನಿಯೊಳಗ ಇರೋ ಎಲ್ಲಾ ಮಂದಿಗೆ ಆ ಗಿಳಿ ಅಂದ್ರ ಪಂಚ ಪ್ರಾಣ. ಆ ಗಿಳಿಗೆ ಭಾಳ ಅಂದ್ರ ಭಾಳ ಸಲಿಗಿ ಕೊಟ್ಟಾರ. ಅದರ ರೆಕ್ಕಿ ಆಗಾಗ ಕತ್ತಿರಿಸಿ ಹಾಕ್ತಾರ. ಭಾಳ ನಾಜೂಕ ಆಗಿ ಸರ್ಜರಿ ಮಾಡಿದಂಗ ಕತ್ತರಿಸ್ತಾರ. ಯಾಕ ಅಂದ್ರ ಗಿಳಿಯನ್ನ ಎಲ್ಲಾ ಟೈಮ್ ಪಂಜರದಾಗ ಇಡಲಿಕ್ಕೆ ಮನಸ್ಸು ಇಲ್ಲ ಅವರಿಗೆ. ರೆಕ್ಕಿ ಕತ್ತರಿಸಿ ಇಟ್ಟರ ಹಾರಲಿಕ್ಕೆ ಆಗೋದಿಲ್ಲ. ಮತ್ತ ಸಾಕಿದ ಗಿಳಿ ಆಗಿದ್ದರಿಂದ ಅಲ್ಲೇ ಸುತ್ತಾ ಮುತ್ತಾ ಅಡ್ಯಾಡಿಕೋತ್ತ, ಮನಿ ಮಂದಿ ಹೆಗಲ ಮ್ಯಾಲೆ ಬಂದು ಕೂತುಗೋತ್ತ, ಮಂಗ್ಯಾನಾಟಾ ಮಾಡಿಕೋತ್ತ ಇರ್ತದ. ಬೇಕಂದಾಗ ಹಿಡದು ಪಂಜರ ಒಳಗ ಹಾಕಬಹುದು.
ಈ ಗಿಳಿ ರೆಕ್ಕಿ ಅಂದ್ರ ನಮ್ಮ ಕೂದಲ ಇದ್ದಂಗ. ತಿಂಗಳಾ ತಿಂಗಳಾ ಬೆಳಿತಾವ. ಹಜಾಮತಿ ಮಾಡಿಸಬೇಕು. ಅದು ಏನು ಆಗಿತ್ತೋ ಏನೋ ಈ ತಿಂಗಳ. ಡಾ. ಗಿಳಿಯೂರ ಅವರಿಗೂ ಭಾಳ ವಯಸ್ಸು ಆಗಿತ್ತು ನೋಡ್ರೀ. ಮರ್ತು ಬಿಟ್ಟಿದ್ದರು ಅಂತ ಕಾಣಸ್ತದ ಗಿಳಿ ರೆಕ್ಕಿ ಕಟ್ ಮಾಡೋದು. ಹಾಂಗಾಗಿ ಒಂದು ದಿವಸ ಗಿಳಿ ಪಂಜರಾ ತೆಗೆದು ಬಿಟ್ಟ ಕೂಡಲೇ ಸ್ವಲ್ಪ ಜಾಸ್ತಿ ಎತ್ತರ ಹಾರಿ, ಅಲ್ಲೇ ಕಂಪೌಡ್ ಒಳಗ ಇರೋ ಗಿಡದ ಮ್ಯಾಲೆ ಹೋಗಿ ಕೂತು ಬಿಡ್ತು. ಆ ಗಿಳಿಗೆ ಹಾರಿ ಗೀರಿ ಗೊತ್ತೇ ಇಲ್ಲ. ರೆಕ್ಕಿ ಕತ್ತರಿಸಿ ಇಟ್ಟಿದ್ದರ ಅದಕ್ಕ ಇಷ್ಟು ಎತ್ತರ ದೂರ ಹಾರಲಿಕ್ಕೆ ಆಗ್ತಿದ್ದೇ ಇಲ್ಲ. ಈಗೂ ರೆಕ್ಕಿ ಫುಲ್ ಇರಲಿಲ್ಲ ಅಂತ ಹೇಳಿ ಭಾಳ ದೂರ, ಎತ್ತರ ಹಾರ್ಲಿಕ್ಕೆ ಆಗಲೇ ಇಲ್ಲ ಆ ಗಿಳಿಗೆ.
ಗಿಳಿಗೆ ಡಾ. ಗಿಳಿಯೂರ ಏನೇನೋ ಮಾಡಿ ಕರೆದರು. ಮೊದಲೇ ಹೇಳೇನಲ್ಲ. ಅದು ಗಿಳಿ, ನಾಯಿ ಅಲ್ಲ ಮಾತು ಕೇಳಲಿಕ್ಕೆ ಅಂತ. ಅದು ಕೆಳಗ ಬರಲೇ ಇಲ್ಲ. ಬದಲಿಗೆ ಡಾಕ್ಟರ ಹ್ಯಾಂಗ ಕರೀತಾರ ಹಾಂಗೇ ವಾಪಾಸ್ ಅಂದು ಅವರನ್ನ ಅಣಗಿಸಿಕೋತ್ತ ಕೂತಿತ್ತು ಗಿಡದ ಟೊಂಗಿ ಮ್ಯಾಲೆ.
ಈಗ ಡಾಕ್ಟರ ಗಿಳಿಯೂರ ಅವರಿಗೆ ಕಾಳಜಿ ಶುರು ಆತು. ಪಾಪ ಮೊದಲೇ ಹಾರಿಲಿಕ್ಕೆ ಬರದ ಗಿಳಿ. ಬಾವುಗ, ಗಿಡುಗ, ಹದ್ದು ಏನರೆ ಬಂದು, ಆ ಪಾಪದ ಗಿಳಿ ಮ್ಯಾಲೆ ದಾಳಿ ಮಾಡಿ, ಆರಾಮಾಗಿ ಗಿಳಿ ಅವರ ಊಟಕ್ಕ ತೊಗೊಂಡು ಹೋದ್ರ ಅಂತ ಚಿಂತಿ ಆತು. ಗಿಳಿಯೂರ ಮನಿತನದಾಗ ಯಾವದೇ ಗಿಳಿ ಹಂಗೆಲ್ಲಾ ಸತ್ತಿದ್ದು ಇಲ್ಲವೇ ಇಲ್ಲ. ಎಲ್ಲಾ ಸಹಜ ಆಗೇ ಸತ್ತಾವ. ಗಿಳಿಗೆ ಏನರೆ ಅಸಹಜ ಸಾವು ಬಂದ್ರ ಮಹಾ ಅಪಶಕುನ ಅಂತ ಗಿಳಿಯೂರ ಮಂದಿ ನಂಬ್ತಾರ.
ಮಹಾದೇವಾ! ಇಲ್ಲೆ ಬಾರೋ - ಅಂತ ಡಾಕ್ಟರ ಗಿಳಿಯೂರ ತಮ್ಮ ಆಳನ್ನು ಕರೆದರು.
ಏನ್ರೀ ಸಾಹೇಬರ? ಅಂತ ಮಹಾದೇವ ಬಂದ.
ಆ ಏಣಿ ತೊಗೊಂಡು ಬಂದು ಹಾಕಪಾ, ಅಂದರು ಡಾಕ್ಟರ ಗಿಳಿಯೂರ.
ಆ ಏಣಿ ಹತ್ತಿ ಹೋಗಿ ಗಿಡದ ಮ್ಯಾಲೆ ಕೂತ ಗಿಳಿ ಹಿಡಕೊಂಡು ಬರೋ ಪ್ಲಾನ್ ಇತ್ತು ಅಂತ ಯಾರಿಗೂ ಗೊತ್ತಿಲ್ಲ.
ಆಳು ಮಹಾದೇವ ಬಂದು, ಏಣಿ ಹಚ್ಚಿ, ತಾನೇ ಹತ್ತಲಿಕ್ಕೆ ಹೊಂಟ. ಬ್ಯಾಡ ಅಂತ ಡಾಕ್ಟರ ಅವನನ್ನ ತಡೆದರು.
ಅವರಿಗೆ ಗೊತ್ತದ. ಆ ಗಿಳಿ ಎಷ್ಟು ಜಾಬಾದ ಅದ ಅಂತ. ಮನಿ ಮಂದಿ ಕೈಯ್ಯಾಗ ಬಂದ್ರ ಬಂತು. ಇವಾ ಆಳು ಹಿಡಿಲಿಕ್ಕೆ ಹೋಗಿ, ಆ ಗಿಳಿ ಮತ್ತ ದೂರ ಹಾರಿ ಹೋಗಿ ಲಫಡಾ ಆಗೋದು ಬ್ಯಾಡ ಅಂತ ಹೇಳಿ ಡಾಕ್ಟರ ಯಾರೂ ಊಹಾ ಮಾಡದಂತಹ ಒಂದು ಕೆಲಸಾ ಮಾಡಲಿಕ್ಕೆ ಹೊಂಟು ಬಿಟ್ಟರು!!!
ಸುಮಾರು ಎಂಬತ್ತು ವರ್ಷದ ಡಾಕ್ಟರ ತಾವೇ ಏಣಿ ಹತ್ತಲಿಕ್ಕೆ ಹೊಂಟರು!!! ಅದೇ ಅವರು ಮಾಡಿದ ದೊಡ್ಡ ತಪ್ಪು.
ಮಹಾದೇವ ಆಳು ಎಷ್ಟ ಬ್ಯಾಡ ಬ್ಯಾಡ ಅಂದ. ಆದರೂ ಡಾಕ್ಟರ ಕೇಳಲೇ ಇಲ್ಲ. ಆಳು ಏನು ಮಾಡಿಯಾನು? ಜ್ವಾಕಿರೀ ಸಾಹೇಬ್ರಾ, ಅಂತ ಹೇಳಿದ. ನೀ ಏಣಿ ಸರಿ ಮಾಡಿ ಹಾಕಿ, ಕೆಳಗ ಘಟ್ಟೆ ಹಿಡಕೊಂಡು ನಿಲ್ಲೋ! ಅಂತ ಸ್ವಲ್ಪ ಜೋರು ಮಾಡಿ ಡಾಕ್ಟರ ತಮ್ಮ ದೊಡ್ಡ ಗಾತ್ರದ ವೃದ್ಧ ದೇಹವನ್ನು ಒಂದೊಂದೇ ಮೆಟ್ಟಿಲು ಹತ್ತಿಕೋತ್ತ, ಬುಸು ಬುಸು ಶ್ವಾಸಾ ಬಿಟ್ಟುಗೋತ್ತ, ಸಿಕ್ಕಾಪಟ್ಟೆ ನೋವನ್ನು ಹ್ಯಾಂಗೋ ಅನುಭವಿಸುತ್ತ ಅಂತೂ ಇಂತೂ ಆ ಸೂಡ್ಲಿ ಗಿಳಿ ಇದ್ದ ಗಿಡದ ಟೊಂಗಿ ಬಾಜೂಕ ಬಂದು ನಿಂತರು ಅಂತ ಆತು. ಅವರು ಸುಧಾರಿಸಿಕೊಳ್ಳಲಿಕ್ಕೆ ಅಂತ ಬಿಟ್ಟ ಒಂದು ಉಸಿರಿನಿಂದ ಆ ಗಿಳಿಗೆ ಏನೋ ಕಚಗುಳಿ ಇಟ್ಟಂಗ ಆಗಿರಬೇಕು. ಏನೋ ಅಪದ್ಧ ಮಾತಾಡಿಕೋತ್ತ ಅದೇ ಗಿಡದ ಅದೇ ಟೊಂಗಿಯ ಸ್ವಲ್ಪ ಬಾಜೂಕ್ಕ ಹೋಗಿ ಕೂತು ಬಿಡ್ತು ಗಿಳಿ. ಡಾಕ್ಟರ ಗಿಳಿಯನ್ನ ಹಿಡಿಲಿಕ್ಕೆ ಕೈ ಚಾಚಿದರು. ಸಿಗಲಿಲ್ಲ. ಇನ್ನು ಎಲ್ಲೆ ಮತ್ತ ಪೂರ್ತಿ ಕೆಳಗ ಇಳಿದು, ಏಣಿ ಜಗಾ ಚೇಂಜ್ ಮಾಡಿ, ಮತ್ತ ಹತ್ತೋದು ಅಂತ ವಿಚಾರ ಮಾಡಿದ ಡಾಕ್ಟರ ಗಿಳಿ ಹಿಡಿಲಿಕ್ಕೆ ಸ್ವಲ್ಪ ಬಾಜೂಕ ಬಗ್ಗಿದರು. ಉದ್ದ ಕೈ ಚಾಚಿದರು. ಆತು ಅನಾಹುತ!!
ಜೋಲಿ ತಪ್ಪಿತೋ ಪಾಪ ಅವರಿಗೆ ಅಥವಾ ಏಣಿ ಜಾರಿತೋ ಗೊತ್ತಿಲ್ಲ. ಡಾಕ್ಟರ್ ಮಾತ್ರ ಧಪ್ಪ ಅಂತ ಅಷ್ಟು ಮ್ಯಾಲಿಂದ ಕೆಳಗ ಬಿದ್ದು ಬಿಟ್ಟರು!!!!
ಎಂದೂ ದೂರ ಹಾರದ ಅವರ ಗಿಳಿ ಮಾತ್ರ ಅವತ್ತು ಮಾತ್ರ ಡಾಕ್ಟರ ಗಿಳಿಯೂರ ಕೆಳಗ ಬೀಳೋ ತಡಾ ಇಲ್ಲ - ಗಿಳಿಯು ಪಂಜರದೊಳಗಿಲ್ಲ. ಗಿಳಿಯು ಪಂಜರದೊಳಗಿಲ್ಲ - ಅಂತ ಹಾಡು ಹಾಡಿಕೋತ್ತ ಪುರ್ರ್ ಅಂತ ಹಾರಿ ಹೋಗಿಬಿಡ್ತು. ಪ್ರಾಣ ಪಕ್ಷಿ ಹಾರಿ ಹೋಗೋದು ಅಂತ ಒಂದು ಮಾತ ಅದ. ಈ ಕಡೆ ಬಿದ್ದ ಹೊಡೆತಕ್ಕ ಮತ್ತ ವಯಸ್ಸೂ ಇರಬಹುದು, ಡಾಕ್ಟರ ಪ್ರಾಣ ಪಕ್ಷಿ ಸಹಿತ ಹಾರಿದರ ಅದನ್ನ ಸಾಂಕೇತಿಕವಾಗಿ ಹೇಳೋ ಹಾಂಗ ಗಿಳಿ ಹಾರಿ ಹೋತೋ ಅಂತ ಅನ್ನಿಸ್ತು.
ಈ ರೀತಿಯಾಗಿ ಗಿಳಿಯೂರ ಎಂಬ ಡಾಕ್ಟರಗೆ ಸಾವು ಅವರ ಪ್ರೀತಿಯ ಗಿಳಿ ರೂಪದಲ್ಲಿ ಬಂದು ಬಿಡ್ತು.
ಸತ್ತವರು ಸತ್ತು ಹೋದರು. ಇದ್ದವರು ಎಲ್ಲಾ ಮಾಡಬೇಕಲ್ಲ. ಹೇಳಿ ಕೇಳಿ ಊರಿಗೆ ಭಾಳ ದೊಡ್ಡ ವ್ಯಕ್ತಿ ಡಾ. ಗಿಳಿಯೂರ. ಸುದ್ದಿ ಊರ ತುಂಬಾ ಮಿಂಚಿನ ಹಾಂಗ ಹರಡಿತು. ಎಲ್ಲಾ ಮಂದಿ ಬಂದು ಕೂಡಲಿಕತ್ತರು. ಗಿಳಿಯೂರ ಡಾಕ್ಟರ ಹೆಂಡತಿ ಭಾಳ ತೂಕದ ಹೆಂಗಸು ಅವರು. ಬಂದವರನ್ನು ಭಾಳ graceful ಆಗಿ receive ಮಾಡಿಕೊಂಡು ಅವರ ಸಂತಾಪಗಳಿಗೆ ಥ್ಯಾಂಕ್ಸ್ ಹೇಳಿದರು. ಈ ಕಡೆ ಮನಿ ಮಂದಿ ಡಾಕ್ಟರ ಅವರ ಶವ ಸಂಸ್ಕಾರಕ್ಕ ತಯಾರಿ ಮಾಡಿಕೊಳ್ಳಲಿಕ್ಕೆ ಹತ್ತಿದರು.
ಎಲ್ಲರ ಸಹಾಯ ಸಹಕಾರದಿಂದ ಡಾಕ್ಟರ ಗಿಳಿಯೂರ ಅವರ ದೇಹಕ್ಕ ಅಗ್ನಿ ಸಂಸ್ಕಾರ ಆತು. ಆ ಗಿಳಿ ನೋಡ್ರೀ! ಸ್ಮಶಾನಕ್ಕೂ ಹಾರಿ ಬಂದಿತ್ತು. ಆ ಸ್ಮಶಾನದ ಒಂದು ಗಿಡದ ಮ್ಯಾಲೆ ಕೂತು ಮತ್ತ ಅದೇ ಹಾಡು - ಗಿಳಿಯು ಪಂಜರದೊಳಗಿಲ್ಲ....ಗಿಳಿಯು ಪಂಜರದೊಳಗಿಲ್ಲ!!!! ಏನು ಅಂತೀನಿ? ಆ ಗಿಳಿ ಮೈಯ್ಯಾಗ ಏನರೆ ದೆವ್ವ ಹೊಕ್ಕಿತ್ತ?! ಗೊತ್ತಿಲ್ಲ.
ಗಿಳಿಯೂರ್ ಡಾಕ್ಟರ ಹೆಂಡತಿ ಎಲ್ಲಾ ಕೆಲಸಾ ಮುಗಿಸಿ, ಬಂದಿದ್ದ ಬಂಧು ಬಳಗದವರನ್ನೆಲ್ಲ ಕಳಿಸಿ, ಕೆಲಸದ ಮಂದಿಗೆ ಎಲ್ಲಾ ರಜಾ, ಇನಾಮು ಇತ್ಯಾದಿ ಕೊಟ್ಟು, ಬಂದು ಇನ್ನೇನು ಮಲ್ಕೊಬೇಕು ಅನ್ನೋದ್ರಾಗ ಯಾರೋ ಬಾಗಲಾ ಬಡದರು. ಯಾರು ಇರಬಹುದು ಈ ಅಪರಾತ್ರಿಯಾಗ ಅಂತ ವಿಚಾರ ಮಾಡಿದರು ಮಿಸೆಸ್ ಗಿಳಿಯೂರ್. ಅದೂ ರಾತ್ರಿ ಒಂದರ ಮ್ಯಾಲೆ ಆಗ್ಯದ. ಈ ಹೊತ್ತಿನ್ಯಾಗ ಯಾರು ಅಂತ ವಿಚಾರ ಮಾಡಿದರು. ಅವರೇನು ಅಂಜಲಿಲ್ಲ. ಯಾಕಂದ್ರ ಎಲ್ಲಾ ಸೇಫ್ ಅದ ನಮ್ಮ ಕಡೆ. ಮತ್ತ ಅವರು ಭಾಳ ಘಟ್ಟಿಗಿತ್ತಿ ಬಿಡ್ರೀ. ಗಂಡನ ಸಾವನ್ನೇ ಅವರು ಭಾಳ ಧೈರ್ಯದಿಂದ ಫೇಸ್ ಮಾಡಿದವರು.
ಎಲ್ಲಾ ಕೆಲಸದವರು ಅವರು ಇವರು ಹೋಗಿ ಬಿಟ್ಟಿದ್ದರು. ಗಿಳಿಯೂರ್ ಡಾಕ್ಟರ ಹೆಂಡತಿ ಮನಿಯೊಳಗ ಒಬ್ಬರೇ. ಹಾಸಿಗಿ ಮ್ಯಾಲೆ ಅಡ್ಡ ಆದವರು ಎದ್ದು ಹೋಗಿ, ಬಾಗಲದ ಹಿಂದ ನಿಂತು, ಯಾರು? ಅಂತ ಕೇಳಿದರು. ನಾನೇ! ಅಂತ ಬಂತು ಗಂಡು ಧ್ವನಿ. ಮತ್ತ ಕೇಳಿದರು, ಯಾರು? ಅಂತ. ಮತ್ತ, ನಾನೇ, ಅಂತ ಉತ್ತರ ಬಂತು. ನಾನೇ ಅನ್ನಲಿಕ್ಕೆ ಇವನ ಹೆಸರೇ ನಾನೇ ಅದನೋ ಅಂತ ಉಪೇಂದ್ರನ ಮೂವಿ ಕ್ಯಾರಕ್ಟರ್ 'ನಾನು' ನೆನಪಾದ. ಆದರೆ 'ನಾನೇ' ಅನ್ನೋದರ ಹಿಂದಿನ ಧ್ವನಿಯಲ್ಲಿ ಇದ್ದ ತುಂಟತನ ಯಾಕೋ ಪರಿಚಯ ಇದ್ದಂಗ ಅನ್ನಿಸ್ತು. Ms. ಗಿಳಿಯೂರ ಸಹ ಹೇಳಿ ಕೇಳಿ ಧಾಡಿಸಿ ಗಟ್ಟಿಗಿತ್ತಿ. ಯಾರ ಇವಾ ಮಂಗ್ಯಾ ಅಂತ ನೋಡೇ ಬಿಡೋಣ ಅಂತ ಬಾಗಲಾ ತೆಗೆದರು.
ದೆವ್ವದ ಹಾಂಗ ನಿಂತಿದ್ದ!!!
ಆ ಹೊತ್ತಿನ್ಯಾಗ ಅವನ್ನ ನೋಡಿ ಗಿಳಿಯೂರ ಮೇಡಂ ಫುಲ್ ದಂಗು ಹೊಡೆದರು.
ಬಾ ಹೋಗೋಣ! ಈಗೇ ಬಾ!! ನಡಿ ನನ್ನ ಜೋಡಿ - ಅಂದಾ ಆವ. ಹೇಳೋದು ನೋಡಿದರ ನಿನ್ನ ಮ್ಯಾಲೆ ನನಗ ಫುಲ್ ಹಕ್ಕು ಅದ, ದೂಸರಾ ಮಾತಾಡದ ಬಾ ಅನ್ನೋ ಹಾಂಗ ಇತ್ತು.
ಹಾಂ?!!!! ಎಲ್ಲಿಗೆ? ಅದೂ ಈ ಹೊತ್ತಿನ್ಯಾಗ. ನಮ್ಮ ಮನಿಯವರು ಇವತ್ತ ಮಾತ್ರ ತೀರಿ ಕೊಂಡಾರ. ನೀನೂ ಬಂದಿದ್ದಿ ಅವರ ಸ್ಮಶಾನ ಯಾತ್ರಾಕ್ಕ. ದೂರಿಂದ ನೋಡಿದೆ ನಾನು. ನನ್ನ ಜೀವಾ ತಿನ್ನಲಿಕ್ಕೆ ಇವಾ ಯಾಕ ಬಂದಾನ ಅಂತ ಅಂದುಕೊಂಡೆ. ನೀನು ಅವರ ಗೆಳಯಾ ಅಥವಾ ಪೇಷಂಟ್ ಏನೂ ಇರಲಿಲ್ಲ. ಯಾಕ ಬಂದಿದ್ದಿ? ಈಗ ಯಾಕ ಬಂದೀ? ಪ್ಲೀಸ್ ಜೀವಾ ತಿನ್ನಬ್ಯಾಡ. ಹೋಗು! - ಅಂತ ಕೇಳಿಕೊಂಡರು ಗಿಳಿಯೂರ್ ಮೇಡಂ.
ಇಲ್ಲ ನೀ ಬೇಕ ಬೇಕ. ಇವತ್ತು ಅಲ್ಲದಿದ್ದರ ಇನ್ನೊಂದು ದಿನ. ಇನ್ನೊಂದು ವರ್ಷ. ಐವತ್ತು ವರ್ಷ ಕಾದೇನಿ. ಸಿಕ್ಕೇ ಸಿಗ್ತೀ. ಗ್ಯಾರಂಟಿ! ಬೇಕಾದ್ರ ಬರದು ಇಟ್ಟುಗೋ!! - ಅಂತ ಹೇಳಿ ಆ ದೆವ್ವದ ಟೈಪ್ ಆದ್ಮಿ ಉದ್ದ ಉದ್ದ ಕಾಲು ಹಾಕಿಕೋತ್ತ ಹೋಗಿ ಬಿಟ್ಟ. ಹೋಗೋವಾಗ ಗೇಟ ಬಾಗ್ಲಾ ಹಾಕೋದರ ಬದಲೀ ಹೀರೋ ಗತೆ ಒದ್ದ. ಪರ್ಫೆಕ್ಟ್ ಆಗಿ ಒದ್ದ. ಒಂದ ಇಂಚ್ ಹಿಂದ ಮುಂದ ಆಗದ ಗೇಟ್ ಬಾಗಿಲ ಬಂದ್ ಆತು.
Ms. ಗಿಳಿಯೂರ ಮಾತ್ರ ದೆವ್ವ ಬಡಕೊಂಡವರಂಗ ಬಾಗಲದಾಗ ನಿಂತೇ ಇದ್ದರು.
ಗಿಳಿಯೂರ ಮೇಡಂ ಸುಮಾರು ಐವತ್ತು ವರ್ಷದ ಹಿಂದಿನ ಫ್ಲಾಶ್ ಬ್ಯಾಕ್ ಹೋದರು.
ಮುಂದೇನಾತು?!!!!!
ಮುಂದೇನಾತು ಅಂತ ತಿಳಕೊಳ್ಳಲಿಕ್ಕೆ ಕೂಲಂಬಿಯಾ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೇಜ್ ಬರದಂತಹ ಸ್ಪಾನಿಶ್ ಭಾಷೆಯಲ್ಲಿ ಇರುವ 'El amor en los tiempos del cólera' ಕಾದಂಬರಿ ಓದಬೇಕು. ಅದು ಇಂಗ್ಲಿಷ್ ಒಳಗ 'Love in the time of cholera' ಅಂತ ಅನುವಾದ ಆಗಿದೆ. ಕನ್ನಡದ ಬರಹಗಾರ ರವಿ ಬೆಳೆಗೆರೆ ಅದನ್ನ 'ಮಾಂಡೋವಿ' ಅಂತ ೧೯೯೬ ಒಳಗ ಕನ್ನಡಕ್ಕೂ ತಂದಿದ್ದಾರೆ. ಅದು ಅನುವಾದ ಅಲ್ಲ. ಅದು ಒಂದು ಟೈಪ್ ರೂಪಾಂತರ ಅಂತ ಅನ್ನಬಹುದು. ಯಾಕಂದ್ರ ಮೂಲ ಕಥೆ ನಡೆಯೋದು ಎಲ್ಲೋ ಕ್ಯಾರಿಬ್ಬಿಯನ್ ಸಮುದ್ರದ ತಟದ ಯಾವದೋ ದೇಶದಲ್ಲಿ. 'ಮಾಂಡೋವಿ' ಅನ್ನೋ ರೂಪಾಂತರದಲ್ಲಿ ರವಿ ಬೆಳೆಗೆರೆ ಬಳ್ಳಾರಿ ಸುತ್ತ ಮುತ್ತ ನಡಿಯೋ ಕಥೆ ಹಾಂಗ ಬರದಾರ. ಎರಡೂ ಉತ್ತಮ ಪುಸ್ತಕಗಳು.
ಗಿಳಿ ಹಿಡಿಯಲು ಹೋಗಿ ಡಾಕ್ಟರ ಸಾಯುವ ಘಟನೆಯಿಂದ ಕಾದಂಬರಿ ಒಂದು ತರಹದ ಟ್ವಿಸ್ಟ್ ತೆಗೆದುಕೊಳ್ಳುತ್ತದೆ. ಹಾಂಗಾಗಿ ಆ ಮುಖ್ಯ ಘಟನೆಯನ್ನು ನಮ್ಮ ಧಾರವಾಡ ಭಾಷಾ ಒಳಗ ತರಲಿಕ್ಕೆ ಸ್ವಲ್ಪ ನಮ್ಮ ಸ್ವಂತದ ಮಸಾಲಿ ಹಾಕಿ ಬರೆದಿದ್ದು ಇದು.
** 'Love in the time of cholera' PDF version is here.

No comments:
Post a Comment