ಅವನು ಬಡವ. ಅವಳು ಬಡವಿ. ಇಬ್ಬರೂ ಬಡವರಾದರೂ ಇಬ್ಬರ ಮಧ್ಯೆ ಶ್ರೀಮಂತ ಪ್ರೇಮ. ಸಮೃದ್ಧ ಪ್ರೀತಿ. ಯಾಕೋ ಒಮ್ಮೆ ಹುಡುಗಿಗೆ ಹುಡುಗನಿಗೆ ಏನಾದರೂ ಅಚಾನಕ್ ಉಡುಗೊರೆ (surprise gift) ಕೊಡಬೇಕೆನ್ನಿಸಿತು. ಕಾಕತಾಳೀಯವೆಂಬಂತೆ ಹುಡುಗನಿಗೂ ಸಹ ಹಾಗೇ ಅನ್ನಿಸಬೇಕೇ!?
ಹುಡುಗನಿಗೆ ಏನು ಉಡುಗೊರೆ ಕೊಡಲಿ ಅಂತ ಹುಡುಗಿ ವಿಚಾರ ಮಾಡಿದಳು. ಒಂದು ಐಡಿಯಾ ತಲೆಗೆ ಬಂತು. ಹುಡುಗನ ಹತ್ತಿರ ಒಂದು ಒಳ್ಳೆ ಕೈಗಡಿಯಾರ (wrist watch) ಇತ್ತು. ಆದರೆ ಅದರ ಚರ್ಮದ ಪಟ್ಟಿ (strap) ಹಳೆಯದಾಗಿ ಅಲ್ಲಲ್ಲಿ ಹರಿದು ಹೋಗಿತ್ತು. ಕೈಗಡಿಯಾರಕ್ಕೆ ಒಪ್ಪುವಂತಹ ಒಂದು ಸುಂದರವಾದ ಚರ್ಮದ ಪಟ್ಟಿಯನ್ನು ಉಡುಗೊರೆಯನ್ನಾಗಿ ಕೊಡಬೇಕೆಂದುಕೊಂಡಳು. ಆದರೆ ರೊಕ್ಕ? ಮೊದಲೇ ಬಡವಿ. ರೊಕ್ಕ ಇಲ್ಲ. ರೊಕ್ಕ ಜೋಡಿಸಲು ಏನು ಮಾಡಲಿ? ಅಂತ ವಿಚಾರ ಮಾಡಿದಳು. ಏನೂ ಹೊಳೆಯಲಿಲ್ಲ. ಒಂದು ಐಡಿಯಾ ಬಂತು ಆದರೆ ಅಷ್ಟು ಇಷ್ಟವಾಗಲಿಲ್ಲ. ಆದರೆ ಇನಿಯನಿಗೆ ಉಡುಗೊರೆ ಕೊಡಬೇಕೆಂಬ ಬಯಕೆ ಉತ್ಕಟವಾಗಿತ್ತು. ಹಾಗಾಗಿ ಪ್ರೀತಿಗಾಗಿ, ಪ್ರೇಮದ ಉಡುಗೊರೆಗಾಗಿ ಯಾವ ತ್ಯಾಗಕ್ಕೂ ಸೈ ಅಂತ ಅದೇ ಕೆಲಸ ಮಾಡಿ ದುಡ್ಡು ಸಂಪಾದಿಸಿದಳು. ಹುಡುಗನ ಕೈಗಡಿಯಾರಕ್ಕೆ ಒಂದು ಸುಂದರವಾದ ಚರ್ಮದ ಪಟ್ಟಿಯನ್ನು ಖರೀದಿಸಿದಳು.
ಹುಡುಗನೂ ತನ್ನ ಹುಡುಗಿಗೆ ಏನು ಉಡುಗೊರೆ ಕೊಡಲಿ ಅಂತ ವಿಚಾರ ಮಾಡಿದ. ಹುಡುಗಿ ನೀಲವೇಣಿ. ತುಂಬಾ ಚಂದವಾದ, ಉದ್ದವಾದ, ಸೊಂಪಾದ ತಲೆಕೂದಲ ಕೇಶರಾಶಿಯ ಒಡತಿ. ಹಾಗಾಗಿ ಅಷ್ಟು ಸುಂದರವಾದ ಕೂದಲಿರುವ ಹುಡುಗಿಗೆ ಒಂದು ಚಂದವಾದ ದಂತದ ಬಾಚಣಿಗೆ ಕೊಡಲು ನಿರ್ಧರಿಸಿದ. ರೊಕ್ಕ ಬೇಕಲ್ಲ? ಅವನೂ ಬಡವ. ರೊಕ್ಕಕ್ಕೆ ಹೇಗೆ ಜುಗಾಡ್ ಮಾಡುವದು ಅಂತ ಹುಡುಗ ತಲೆಕೆಡಿಸಿಕೊಂಡ. ಏನೋ ಒಂದು ಐಡಿಯಾ ಬಂತು. ಆದರೆ ಇಷ್ಟವಾಗಲಿಲ್ಲ. ಯಾಕೋ ಸರಿಯೆನ್ನಿಸಲಿಲ್ಲ. ಆದರೆ ಅವನಿಗೂ ಉಡುಗೊರೆ ಕೊಟ್ಟೇಬಿಡಬೇಕೆಂಬ ಉತ್ಕಟ ಬಯಕೆ. ಪ್ರೀತಿಗಾಗಿ ಅವನೂ ತ್ಯಾಗ ಮಾಡಿದ. ರೊಕ್ಕ ಸಂಪಾದಿಸಿದ. ಒಂದು ಸುಂದರ ದಂತದ ಬಾಚಣಿಗೆಯನ್ನು ಕೊಂಡ.
ಮರುದಿನ ಇಬ್ಬರೂ ಭೇಟಿಯಾದರು. ತನ್ನ ಪ್ರೇಮಿಗೆ ಗಿಫ್ಟ್ ಕೊಡಬೇಕು, ಅವರ ಮುಖದಲ್ಲಿ ಮೂಡುವ ಆಶ್ಚರ್ಯ, ಸಂತೋಷ, ಹೆಮ್ಮೆ ಮತ್ತು ತರೇವಾರಿ ಭಾವನೆಗಳನ್ನು ಕಣ್ತುಂಬ ನೋಡಿ, ಹೃದಯದಲ್ಲಿ ತುಂಬಿಕೊಳ್ಳಬೇಕು ಅಂತ ಇಬ್ಬರಿಗೂ ಕಾತುರ. ಇಬ್ಬರಿಗೂ ಚಡಪಡಿಕೆ.
ಆಕೆ ಉಡುಗೊರೆ ತಂದಿದ್ದು ಇವನಿಗೆ ಗೊತ್ತಿಲ್ಲ. ಇವನು ತಂದಿದ್ದು ಆಕೆಗೆ ಗೊತ್ತಿಲ್ಲ. ಒಬ್ಬರನೊಬ್ಬರು ನೋಡಿಕೊಂಡರು. ಏನನ್ನೋ ಗಮನಿಸಿದರು. 'ಯಾಕೆ ಈ ಹಠಾತ್ ಬದಲಾವಣೆ?' ಅನ್ನುವ ಲುಕ್ ಇಬ್ಬರದ್ದೂ ಮುಖದ ಮೇಲೆ. ಏನೋ ಮಾಡಲು ಹೋದರೆ ಇಲ್ಲಿ ಬೇರೇನೋ ಆಗಿಬಿಟ್ಟಿದೆ ಅನ್ನುವದು ಅವರಿಗಷ್ಟೇ ಅರ್ಥವಾದಂತೆ ತಲೆಯಲ್ಲಾಡಿಸಿ, 'ಏನಿಲ್ಲ ಬಿಡು. ಹಾಗೇ ಸುಮ್ಮನೆ,' ಅನ್ನುವಂತೆ ದೇಶಾವರಿ ಮಳ್ಳ ನಗೆ ಇಬ್ಬರೂ ನಕ್ಕರು. ಹುಡುಗನಿಗಾಗಿ ತಂದಿದ್ದ ಕೈಗಡಿಯಾರದ ಚರ್ಮದ ಪಟ್ಟಿ ಹುಡುಗಿಯ ವ್ಯಾನಿಟಿ ಬ್ಯಾಗಿನಲ್ಲೇ ಉಳಿಯಿತು. ಹುಡುಗಿಗಾಗಿ ತಂದಿದ್ದ ದಂತದ ಬಾಚಣಿಕೆ ಹುಡುಗನ ಜೇಬಿನಲ್ಲೇ ಉಳಿಯಿತು. ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳಲೇ ಇಲ್ಲ.
ಏಕೆ!?
ಹುಡುಗನ ಕೈಯಲ್ಲಿ ಕೈಗಡಿಯಾರ ಇರಲೇ ಇಲ್ಲ. ಹುಡುಗಿಯ ನೀಳ, ಸಮೃದ್ಧ ಕೇಶರಾಶಿ ಹೋಗಿ ಅದರ ಜಾಗದಲ್ಲಿ ಸಣ್ಣ boy cut ತರಹದ hairstyle ಬಂದುಬಿಟ್ಟಿತ್ತು. ಹುಡುಗನ ಕೈಗಡಿಯಾರಕ್ಕೆ ಚರ್ಮದ ಪಟ್ಟಿ ಕೊಳ್ಳಲು ತನ್ನ ಕೇಶರಾಶಿಯನ್ನೇ ಕತ್ತರಿಸಿಕೊಂಡು wig ಮಾಡುವವರಿಗೆ ಮಾರಿದ್ದಳು ಹುಡುಗಿ. ಹುಡುಗಿಗೆ ದಂತದ ಬಾಚಣಿಗೆ ತರಲು ತನ್ನ ಕೈಗಡಿಯಾರವನ್ನೇ ಮಾರಿಬಿಟ್ಟಿದ್ದ ಹುಡುಗ.
* ಎಂದೋ ಎಲ್ಲೋ ಓದಿದ ಕಥೆಯೊಂದರಲ್ಲಿ ನೆನಪುಳಿದಿದ್ದು ಇಷ್ಟು. ಯಾವದೋ ಆಂಗ್ಲ ಕಥೆ ಕನ್ನಡಕ್ಕೆ ತರ್ಜುಮೆಯಾಗಿ ಬಂದಾಗ ಓದಿದ್ದು ಅಂತ ನೆನಪು. ಕಥೆಯ ಹೆಸರು ಗೊತ್ತಿದ್ದರೆ ತಿಳಿಸಿ.
-- ಇದು ಓ. ಹೆನ್ರಿ ಬರೆದಂತಹ The gift of magi ಎಂಬ ಕಥೆಯ ಮೇಲೆ ಆಧಾರಿಸಿದ್ದು ಅಂತ ಸುನಾಥ್ ಸರ್ ಕಾಮೆಂಟ್ ಮಾಡಿ ತಿಳಿಸಿದ್ದಾರೆ. ಅವರಿಗೊಂದು ಧನ್ಯವಾದ. ಮೂಲ ಕಥೆಯನ್ನು ಇನ್ನೊಮ್ಮೆ ಓದಬೇಕು.

2 comments:
ಇದು ಓ’ಹೆನ್ರಿ ಬರೆದ Gift of magi ಎನ್ನುವ ಕತೆ. ಓ’ಹೆನ್ರಿಯ ಅತಿ ಜನಪ್ರಿಯ ಕತೆಗಳಲ್ಲಿ ಇದೊಂದು.
ಕಥೆಯನ್ನು ಸಾರರೂಪದಲ್ಲಿ ಚೆನ್ನಾಗಿ ಬರೆದಿದ್ದೀರಿ.
ಥ್ಯಾಂಕ್ಸ್ ಸರ್. ಕಥೆಯ ಹೆಸರನ್ನು ಹೇಳಿದ್ದಕ್ಕೆ ಧನ್ಯವಾದ.
Post a Comment