ಕೃಪಾಕರ ಸೇನಾನಿಯವರ 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' ಪುಸ್ತಕದಿಂದ (ಚಿತ್ರ ಕೃಪೆ: ವಿಕಾಸ್ ಹೆಗಡೆ) |
ವಿದೇಶದಲ್ಲಿದ್ದ ಕೆಲವು ಭಯಂಕರ ಪ್ರತಿಭಾವಂತರ ಅಲ್ಬಮ್ಮುಗಳನ್ನು ನೋಡಿ motivate ಆಗಿದ್ದಂತೂ ನಿಜ. ಅದರಲ್ಲಿ ದೂಸರಾ ಮಾತಿಲ್ಲ. ಇಪ್ಪತ್ತನೇ ವರ್ಷಕ್ಕೇ ಮಾಸ್ಟರ್ ಡಿಗ್ರಿ ಮುಗಿಸಿದ ಅಣ್ಣ, ಇಪ್ಪತ್ತೆರಡನೇ ವಯಸ್ಸಿಗೇ Phd ಮುಗಿಸಿದ ಅಕ್ಕ, ಇಂಗ್ಲೆಂಡಿನ ದೊಡ್ಡ ಸರ್ಜನ್ ಮಾಮಾ, ಅಮೇರಿಕಾದ ದೊಡ್ಡ ವಕೀಲ ಮತ್ತೊಬ್ಬ. ಹೀಗೆ ಪರಿಚಿತರ ಮಕ್ಕಳಲ್ಲಿ ಸುಮಾರು ದೊಡ್ಡ ಮಟ್ಟದ ಸಾಧಕರು ಇದ್ದರು. ಆರು ತಿಂಗಳಿಗೊಮ್ಮೆ ಅಂತವರ ಧಾರವಾಡದ ಮನೆಗೆ ಹೋಗಿಬಿಟ್ಟರೆ ಮುಗಿಯಿತು. ಒಂದು ವಿಶಿಷ್ಟ ಜಗತ್ತಿಗೆ ಹೋದಂತೆ. ವರ್ಷಕ್ಕೆ ಒಂದು ಎರಡು ಬಾರಿ ಮಕ್ಕಳ ಬಳಿ ಹೋಗಿಬಂದಿರುತ್ತಿದ್ದ ಆ ಮನೆಯವರು ಆಲ್ಬಮ್ ತೆಗೆದುಕೊಂಡು ಬಂದುಕೂತು, ತಾಸುಗಟ್ಟಲೆ ಎಲ್ಲಾ ವಿವರಿಸುತ್ತಿದ್ದರು. ಅವರ ಯಶಸ್ಸಿನ ಕಥೆಗಳೇ ಅಂದು ನಮಗೆ ದೊಡ್ಡ ಪ್ರೇರಣೆ. Those high achievers were our role models.
ಒಮ್ಮೊಮ್ಮೆ ಮಹಾ ಅದೃಷ್ಟವೋ ಎಂಬಂತೆ ಎಲ್ಲಿಯಾದರೂ ಒಂದು ಪೆನ್ನು, ಪೆನ್ಸಿಲ್, ವಾಚು, ಮುಂತಾದ ವಿದೇಶದ ಚಿಕ್ಕ ಉಡುಗೊರೆ ಕೂಡ ಸಿಗುತ್ತಿತ್ತು. 'ನಮ್ಮನಿ ಅಣ್ಣಾ ನಿನಗ ಅಂತ ಕೊಟ್ಟು ಕಳಿಸ್ಯಾನ, ತೊಗೋ', 'ನಿಮ್ಮ ಮಾಮಾ ಕೊಟ್ಟಾನ ನೋಡು ಮಹೇಶಗ ಕೊಡು ಅಂತ ಹೇಳಿ' ಅಂತ ಕೊಟ್ಟುಬಿಟ್ಟರೆ ಮುಗಿದೇಹೋಯಿತು. ವಿದೇಶದಲ್ಲಿ ಅಷ್ಟು ದೂರವಿದ್ದವರನ್ನೂ ಕೂಡ ಅಪ್ಪಿಕೊಂಡು ಕಿಸ್ ಹೊಡೆದೇಬಿಡಬೇಕು ಅನ್ನುವಷ್ಟು ಖುಷಿ. ಅಂತಹ ಅಣ್ಣಂದಿರ ಮೇಲೆ, ಅಕ್ಕಂದಿರ ಮೇಲೆ, ಮಾಮಾಗಳ ಮೇಲೆ ಮತ್ತೂ ಹೆಚ್ಚಿನ ಅಚ್ಚರಿ, ಗೌರವ, ಭಕ್ತಿ, ಮೂಡುತ್ತಿತ್ತು. ಅವರಂತೆ ಸಾಧಿಸಬೇಕು. ಸಾಧನೆ ಏನು ಅಂತ ತಿಳಿಯದಿದ್ದರೂ ಓಕೆ. ಒಟ್ಟಿನಲ್ಲಿ ಅವರಂತಾಗಿಬಿಡಬೇಕು. ತುರಂತ ಆಗಬೇಕು. ಅದೇ ಕನಸು.
ಇಂತಹ ಸಾಧಕ ಮಂದಿ ಮುಂದಿನ ಸಲ ಧಾರವಾಡಕ್ಕೆ ಬಂದಾಗ ಅಂತವರು ನಮಗೆ ಯಾವ ಸಿನೆಮಾ ಹೀರೋಗಿಂತಲೂ ಕಮ್ಮಿ ಅಲ್ಲ. role models. 'ಅವರಂತೆ ಆಗಬೇಕು!' ಅಂತ ಒಂದು ದಾರಿ ತೋರಿಸಲಿಕ್ಕೆ, ಕನಸು ಕಾಣಲಿಕ್ಕೆ ನೆರವಾಗಿದ್ದು ಇಂತಹ ಅಲ್ಬಮ್ ಗಳೇ. ಹಾಗಾಗಿ ಅಂತಹ ಆಲ್ಬಮ್ ಗಳಿಗೆ ದೊಡ್ಡ ಧನ್ಯವಾದ. ಈಗಿನ ಮಂದಿಗೆ ಆ ನಸೀಬ್ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಎಲ್ಲರ ಕೈಯಲ್ಲಿ ಅವೇ ಹಪ್ಪು ಸ್ಮಾರ್ಟ್ ಫೋನ್. ಅವೇ ಹಳಸಿದ ಫೇಸ್ಬುಕ್, ಟ್ವಿಟ್ಟರ್. ಉದ್ಯೋಗಿಲ್ಲದ ಮಂದಿ ಹಾಕಿದ ಯಬಡಾಸು 'ಸ್ವಂತಿ'ಗಳಿಗೆ ಲೈಕ್ ಒತ್ತುತ್ತಾ ಕೂಡುವ ಕರ್ಮ.
ಇನ್ನು ಮದುವೆ ಅಲ್ಬಮ್. ಕೆಟ್ಟ ಬೋರಿಂಗ್. ಮದುವೆ ಅಲ್ಬಮ್ ತೋರಿಸುವದಿದ್ದರೆ ಮದುವೆಯ ಮೂರು ವರ್ಷ / ೩೬,೦೦೦ ಕೀಮಿ ವಾರಂಟಿ ಮುಗಿದ ನಂತರ ತೋರಿಸಿ. ಈಗಿತ್ತಲಾಗೆ ಎಷ್ಟೋ ಮದುವೆಗಳು ಅಷ್ಟು ತಾಳಿಕೆ ಬರುತ್ತಲೇ ಇಲ್ಲ. ತಾಳಿದ್ದು ಬಾಳೀತು. ತಾಳದ ತಾಳಿ ಕಟ್ಟಿಕೊಂಡ ತಾಳಿಬಾನ್ ಮಂದಿಯ ಮದುವೆ ಅಲ್ಬಮ್ ತಂದರೆ ಸಟಾಕ್ ಅಂತ ಎಸ್ಕೇಪ್!
ಒಂದು ಪುಸ್ತಕದ excerpt ನೋಡಿ ಏನೆಲ್ಲಾ ನೆನಪಾಯಿತು!
* ನನ್ನ ಫೇಸ್ಬುಕ್ ಸ್ಟೇಟಸ್ ನಿಂದ ಎತ್ತಿದ್ದು.
2 comments:
ಹೌದು, time pass ಮಾಡಲಿಕ್ಕೆ, ಮಾಡಸಲಿಕ್ಕೆ, ಈ ಅಲ್ಬಮ್ ಎನ್ನೋದು ತುಂಬ ಉಪಯುಕ್ತ ಸಾಧನವಾಗಿತ್ತು. ಈಗ ಏನಿದೆ, ಶಿವಾ?
ರೈಟ್ ಸರ್. ಈಗ ಸ್ಮಾರ್ಟ್ ಫೋನುಗಳ ಅಬ್ಬರದಲ್ಲಿ ಅವೆಲ್ಲ ಯಾರಿಗೂ ಬೇಡವಾಗಿವೆ.
Post a Comment