Thanksgiving -
ಇಲ್ಲಿ ಉತ್ತರ ಅಮೇರಿಕಾದಲ್ಲಿ ದೊಡ್ಡ ಹಬ್ಬ. ಅಮೇರಿಕಾ ಖಂಡಕ್ಕೆ ಬಂದು ನೆಲೆಸಿದ
ಯುರೋಪಿಯನ್ನರು ಶುರು ಮಾಡಿದ ಸಂಪ್ರದಾಯ. ವರ್ಷಕ್ಕೊಮ್ಮೆ ಕುಟುಂಬದವರೆಲ್ಲರೂ ಒಂದಾಗಿ,
ಎಲ್ಲದಕ್ಕೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಬಡಾ ಖಾನಾ ಊಟ ಮಾಡಿ, ಮೋಜು ಮಸ್ತಿ ಮಾಡುವ
ಸಮಯ.
ಹತ್ತು ವರ್ಷದ ಹಿಂದೆ, ೨೦೦೬ ರಲ್ಲಿ, ಕೂಡ Thanksgiving ಬಂದಿತ್ತು. ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೇಯ ಗುರುವಾರ ಬರುತ್ತದೆ Thanksgiving. ಮರುದಿನ ಶುಕ್ರವಾರವೂ ರಜೆ. ನಂತರ ವಾರಾಂತ್ಯ ಅಂತ ನಾಲ್ಕು ದಿನ ರಜೆ. ಹಿಂದೆ ಅಥವಾ ಮುಂದೆ ಮತ್ತೊಂದೆರೆಡು ದಿನ ರಜೆ ಹಾಕಿದರೆ ವಾರಪೂರ್ತಿ ರಜೆಯೋ ರಜೆ.
೨೦೦೬ ರಲ್ಲಿ ಅಮೇರಿಕಾದ ಪೂರ್ವ ಕರಾವಳಿಯ ಬಾಸ್ಟನ್ ನಗರದ ಆಸುಪಾಸಿನಲ್ಲಿದ್ದೆ. ಆ ವರ್ಷದ Thanksgiving ರಜೆಯಲ್ಲಿ Yogaville (ಯೋಗಾವಿಲ್) ಕಡೆ ಹೋಗುವ ಪ್ಲಾನ್ ಹಾಕಿದ್ದೆ. Yogaville - ವರ್ಜೀನಿಯಾ ರಾಜ್ಯದಲ್ಲಿರುವ ಒಂದು ಹಳ್ಳಿ. ಸ್ವಾಮಿ ಸಚ್ಚಿದಾನಂದ ಎಂಬ ಭಾರತೀಯ ಸನ್ಯಾಸಿಯೊಬ್ಬರು ಅಲ್ಲಿ ಆಶ್ರಮ ಸ್ಥಾಪಿಸಿಕೊಂಡಿದ್ದಾರೆ. ನಾನೇನು ಅವರ ಶಿಷ್ಯನಲ್ಲ. ಆದರೆ ಯೋಗಾವಿಲ್ ತುಂಬಾ ಸುಂದರವಾದ, ಪ್ರಶಾಂತವಾದ ಮತ್ತು ನಿಸರ್ಗದ ಮಧ್ಯೆಯಿರುವ ಅದ್ಭುತ ಸ್ಥಳ ಅಂತ ಕೇಳಿದ್ದೆ. ಆಶ್ರಮದ website ನೋಡಿದ ಮೇಲಂತೂ ಫುಲ್ ಫಿದಾ. ದಟ್ಟ ಅರಣ್ಯದ ಮಧ್ಯೆ ಇರುವ ಒಂಟಿ ಆಶ್ರಮ. ಬಂದವರಿಗೆ ತಂಗಲು ಸುಂದರ ಸುಸಜ್ಜಿತ ಕುಟೀರಗಳು. ಕೊಂಚ ದೂರದಲ್ಲಿಯೇ ಸುಂದರ ಸರೋವರ ಮತ್ತು ಧ್ಯಾನಮಂದಿರ. ಇದೆಲ್ಲಾ ನೋಡಿದ ಮೇಲೆ ಆ ವರ್ಷದ thanksgiving ರಜೆಯಲ್ಲಿ ಅಲ್ಲೇ ಹೋಗಿ ನಾಲ್ಕು ದಿನ ಇದ್ದು ಬರಲು ನಿಶ್ಚಯ ಮಾಡಿದೆ. ಫೋನ್ ಮಾಡಿ ಸ್ಥಳ ಕಾಯ್ದಿರಿಸಿದ್ದಾಯಿತು.
ಯೋಗಾವಿಲ್ ಸುಮಾರು ಆರುನೂರು ಮೈಲು ದೂರ. ಒಂದೇ ದಿನದಲ್ಲಿ ತಲುಪಬಹುದು. ನಮಗೇನು ಗಡಿಬಿಡಿ? ಮತ್ತೆ ಅಷ್ಟೆಲ್ಲ ಗಡಿಬಿಡಿ ಮಾಡಿ ದೌಡಾಯಿಸಿದರೆ ರಸ್ತೆ ಪ್ರಯಾಣ ಎಂಜಾಯ್ ಮಾಡುವದೆಲ್ಲಿ ಬಂತು? ಹಾಗಾಗಿ ಮೊದಲ ದಿನ ರಾತ್ರಿಗೆ ಆರಾಮವಾಗಿ ವಾಷಿಂಗ್ಟನ್ (ರಾಜಧಾನಿ) ಮುಟ್ಟಿಕೊಳ್ಳುವದು. ರಾತ್ರಿ ಅಲ್ಲಿಯೇ ವಸತಿ ಮಾಡಿ, ಮರುದಿನ interior ವರ್ಜಿನಿಯಾದ ಕಾಡಿನ ಮಧ್ಯದ ರಸ್ತೆಗಳ ಮೂಲಕ ಆರಾಮಾಗಿ ಡ್ರೈವ್ ಮಾಡ್ತುತ್ತ, ಸಂಜೆಗೂಡಿ ಯೋಗಾವಿಲ್ ಆಶ್ರಮ ಮುಟ್ಟಿಕೊಳ್ಳುವದು ಎಂದು ಯೋಚಿಸಿದೆ. ಅದೇ ಪ್ರಕಾರ ಬೆಳಿಗ್ಗೆ ಬಾಸ್ಟನ್ ಬಿಟ್ಟು ಸಂಜೆ ವಾಷಿಂಗ್ಟನ್ ಮುಟ್ಟಿ, ಅಲ್ಲಿನ ಹೋಟೆಲ್ಲವೊಂದರಲ್ಲಿ ತಂಗಿದೆ.
ಮರುದಿನ ಬೆಳಿಗ್ಗೆ ಹೊರಟೆ. ವರ್ಜೀನಿಯಾ ಬಹಳ ಸುಂದರ ರಾಜ್ಯ. ಪೂರ್ವ ಕರಾವಳಿಯ ರಾಜ್ಯಗಳೆಲ್ಲ ಸುಂದರವೇ ಅನ್ನಿ. ಒಂದು ಕಡೆ ಅಟ್ಲಾಂಟಿಕ್ ಸಾಗರ. ಎಲ್ಲಕಡೆ ಭರಪೂರ ಅರಣ್ಯ. ಬೆಟ್ಟಗುಡ್ಡ. ಎಲ್ಲಕಡೆ ಹಸಿರು. ನಡುನಡುವೆ ನದಿ, ತೊರೆ. ನೋಡಿದಲ್ಲಿ ಜಿಂಕೆಗಳು ಹಿಂಡು. ನಗರ ಪ್ರದೇಶ ಬಿಟ್ಟು ಸ್ವಲ್ಪ ಹೊರಗೆ ಬಂದುಬಿಟ್ಟರೆ ನಿಜವಾದ ಗ್ರಾಮೀಣ (rural) ಅಮೇರಿಕಾದ ಅಮೋಘ ಸೌಂದರ್ಯದರ್ಶನ. ಅಲ್ಲಿನ single lane ರಸ್ತೆಗಳಲ್ಲಿ ಸಂಗೀತ ಕೇಳುತ್ತ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ, ನಿಧಾನವಾಗಿ ಡ್ರೈವ್ ಮಾಡುವದರಲ್ಲಿ ಇರುವ ಸುಖವನ್ನು ಅನುಭವಿಸಿಯೇ ತಿಳಿಯಬೇಕು. ಅಪರೂಪಕ್ಕೊಮ್ಮೆ ಛಂಗ ಅಂತ ರಸ್ತೆ ಹಾರಿಹೋಗುವ ಜಿಂಕೆಗಳಿಗೇನೂ ಕಮ್ಮಿಯಿಲ್ಲ. ಒಮ್ಮೆಲೇ ರಸ್ತೆ ಹಾರಿಹೋಗುವ ಜಿಂಕೆಗಳು ನೋಡಲು ರೋಚಕವಾದರೂ ಒಮ್ಮೊಮ್ಮೆ ದೊಡ್ಡ ಅಪಘಾತಗಳಿಗೆ ಕಾರಣವಾಗಿಬಿಡುತ್ತವೆ. ಹಾಗಾಗಿ ನಿರ್ಜನ ಪ್ರದೇಶ, ಟ್ರಾಫಿಕ್ ಕಮ್ಮಿ ಅಂತ ಮೈಮರೆತು ಡ್ರೈವ್ ಮಾಡುವಂತಿಲ್ಲ.
ದಾರಿ ಮಧ್ಯೆ ಶಾರ್ಲಟ್ಸ್ವಿಲ್ (Charollottesville) ಅನ್ನುವ ಪಟ್ಟಣ ಬಂತು. ಖ್ಯಾತ ಯೂನಿವರ್ಸಿಟಿ ಆಫ್ ವರ್ಜೀನಿಯಾ ಅಲ್ಲೇ ಇದೆ. ಅಣ್ಣ, ಅಣ್ಣನ ಧಾರವಾಡ ಸ್ನೇಹಿತ ಎಲ್ಲ ಅಲ್ಲೇ ಮಾಸ್ಟರ್ ಡಿಗ್ರಿ ಓದಿದ್ದರು. ಹಾಗಾಗಿ ಶಾರ್ಲಟ್ಸ್ವಿಲ್ ಪಟ್ಟಣವೆಂದರೆ ಮೊದಲಿಂದಲೂ ಏನೋ ಅಕ್ಕರೆ, ಆತ್ಮೀಯತೆ. ಆಧುನಿಕ ಅಮೇರಿಕಾದ ಸ್ಥಾಪಕರಲ್ಲೊಬ್ಬ ಮತ್ತು ಮೂರನೇಯ ಅಧ್ಯಕ್ಷನಾಗಿದ್ದ ಥಾಮಸ್ ಜೆಫರ್ಸನ್ ಕೂಡ ಅಲ್ಲಿಯವರೇ. ಅವರ ದೊಡ್ಡ ಎಸ್ಟೇಟ್ Monticello ಅಲ್ಲೇ ಇದೆ. ಅದನ್ನೆಲ್ಲ ಹಿಂದೊಮ್ಮೆ ೧೯೯೭ ರಲ್ಲಿ Charollottesville ಗೆ ಪ್ರವಾಸಕ್ಕೆಂದು ಭೇಟಿ ಕೊಟ್ಟಾಗ ನೋಡಿಯಾಗಿತ್ತು. ಹಾಗಾಗಿ ಈ ಸಲ ಅವೆಲ್ಲ ನೆನಪಾದವು. ಅಷ್ಟರಲ್ಲಿ ಪಟ್ಟಣಪ್ರದೇಶ ಮುಗಿದು ಮತ್ತೆ ವರ್ಜೀನಿಯಾದ ದಟ್ಟವಾದ ಅರಣ್ಯಪ್ರದೇಶ ಆರಂಭವಾಗಿತ್ತು. ಆಗ ಮಧ್ಯಾಹ್ನ ಸುಮಾರು ಮೂರು ಘಂಟೆ. ಚಳಿಗಾಲವಾಗಿದ್ದರಿಂದ ಬೇಗ ಕತ್ತಲಾಗುತ್ತದೆ. ದಟ್ಟಕಾಡುಗಳ ಪ್ರದೇಶದಲ್ಲಿ ಮತ್ತೂ ಬೇಗ. ಯೋಗಾವಿಲ್ ಆಶ್ರಮದಿಂದ ಹತ್ತಿಪ್ಪತ್ತು ಮೈಲಿ ದೂರವಿದ್ದೆ. ದಾರಿ ತೋರಿಸುತ್ತಿದ್ದ ಆ ಕಾಲದ ಡಬ್ಬಾ GPS ಆಗಾಗ ಉಪಗ್ರಹದ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಕಾಡು ಕಮ್ಮಿಯಾಗಿ, line-of-sight ಸಿಕ್ಕು, ಸ್ಯಾಟಲೈಟ್ ಲಾಕ್ ಆದಾಗ ಮತ್ತೆ ದಾರಿ ತೋರಿಸುತ್ತಿತ್ತು. ಹಿಂದಿನ ಪಟ್ಟಣಪ್ರದೇಶದಿಂದ ಹೊರಬಿದ್ದಾಗ ಮೊಬೈಲ್ ಸಿಗ್ನಲ್ ಮಾಯವಾಗಿದ್ದು ಮತ್ತೆ ವಾಪಸ್ ಬಂದಿರಲಿಲ್ಲ. ಆ ದಟ್ಟಕಾಡಿನಲ್ಲಿ ಮೊಬೈಲ್ ಸಿಗ್ನಲ್ ಸಿಗುವ ಸಾಧ್ಯತೆಗಳೂ ಇರಲಿಲ್ಲ.
ಆಶ್ರಮ ತಲುಪಲು ಒಂದು ನಿರ್ದಿಷ್ಟ ಸ್ಥಳದಲ್ಲಿ ಮೇನ್ ರೋಡಿನಿಂದ ಎಡಕ್ಕೆ ತಿರುಗಿ ಕೊಂಚ ಕಚ್ಚಾ ರಸ್ತೆಯಲ್ಲಿ ಹೋಗಬೇಕಾಗಿತ್ತು. 'ಆ ಮುಖ್ಯ ತಿರುವನ್ನು ತಪ್ಪಿಸಿಕೊಳ್ಳಬೇಡಿ!' ಎಂದು ಆಶ್ರಮದ website ನಲ್ಲಿ ಹೇಳಿದ್ದರು. ಹಾಗಾಗಿ ಬಹಳ ಜಾಗರೂಕನಾಗಿದ್ದೆ. ಆಗ ಒಮ್ಮೆಲೇ ಯಾವದೋ ಪ್ರಾಣಿ ರಸ್ತೆಯನ್ನು ಫಟಾಕ್! ಅಂತ ಕ್ರಾಸ್ ಮಾಡಿತು. ಜಿಂಕೆ ಅಲ್ಲ. ವೇಗ ಕಮ್ಮಿ ಇತ್ತು. ಕಣ್ಣರಳಿಸಿ ನೋಡಿದರೆ ನಾಯಿ. ಅರೇ ಇಸ್ಕಿ! ಈ ನಾಯಿ ಇಲ್ಲಿ ಹೆಂಗೆ? ಅದೂ ದಟ್ಟಕಾಡಿನ ಮಧ್ಯೆ??
ಮುಂದೆ ಎರಡೇ ಮಾರಿನಲ್ಲಿ ಆಶ್ರಮಕ್ಕೆ ಹೋಗುವ ಎಡತಿರುವು ಕಂಡಿತು. ತಿರುಗಿಸಿದರೆ ಸ್ವಲ್ಪ ಕಚ್ಚಾ ಅನ್ನಿಸುವಂತಹ ರಸ್ತೆ. ಡ್ರೈವ್ ಮಾಡಲು ತೊಂದರೆ ಇರಲಿಲ್ಲ. ಆಶ್ರಮ ಆರೇಳು ಮೈಲು ದೂರವಿತ್ತು.
ಗಾಡಿ ತಿರುಗಿಸಿ, ವೇಗ ಹೆಚ್ಚಿಸುವ ಮೊದಲು ಸಹಜವಾಗಿ ತಲೆ ಮೇಲಿರುವ rear-view ಕನ್ನಡಿ ನೋಡಿದರೆ ಏನು ಕಾಣಬೇಕು!? ಅದೇ ನಾಯಿ! ಸಣ್ಣ ಜಾತಿಯ Dachshund ನಾಯಿ. ಜೋರಾಗಿ ತೇಕುತ್ತ, ಏದುಸಿರು ಬಿಡುತ್ತ ಕಾರನ್ನು ಹಿಂಬಾಲಿಸುತ್ತಿದೆ. ಯಾಕೆ? ತಿಳಿಯಲಿಲ್ಲ. ರಸ್ತೆಯಲ್ಲಿ ಕಾಡಿನ ಮಧ್ಯೆ ಹಾಗೆಲ್ಲ ನಾಯಿ ಕಾಣುವದಿಲ್ಲ. ಕಂಡರೆ ಜಾಸ್ತಿ ಹೊತ್ತು ಬದುಕುವದೂ ಇಲ್ಲ. ಯಾವದಾದರೂ ವಾಹನಕ್ಕೆ ಸಿಕ್ಕಿ ಶಿವನ ಪಾದ ಸೇರುತ್ತದೆ. ಇಲ್ಲಿ ನೋಡಿದರೆ ನಾಯಿ ಕಂಡಿದ್ದೊಂದೇ ಅಲ್ಲ. ನಿಧಾನವಾಗಿ ಚಲಿಸುತ್ತಿರುವ ನನ್ನ ಕಾರನ್ನು ಹಿಂಬಾಲಿಸಿ ಬರುತ್ತಿದೆ. 'ಪ್ಲೀಸ್, ಕಾರ್ ನಿಲ್ಲಿಸು. ಪ್ಲೀಸ್!' ಅಂತ ಕೇಳಿಕೊಂಡಿತು ನಾಯಿ. ಅದರ ದೈನ್ಯ ಮುಖ ನೋಡಿ ಹಾಗಂತ ನನಗನ್ನಿಸಿಬಿಟ್ಟಿತು. ಬ್ರೇಕ್ ಹಾಕಿಯೇಬಿಟ್ಟೆ. ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದೆ. ಏನೇ ಇರಲಿ ಹಿಂಬಾಲಿಸಿ ಬರುತ್ತಿರುವ ನಾಯಿ ಮಹಾತ್ಮೆ ನೋಡಿಯೇ ಮುಂದೆ ಹೋಗೋಣ ಎಂದು ವಿಚಾರ ಮಾಡಿದೆ.
ಕಾರ್ ನಿಂತಿತು ಅಂತ excite ಆದ ನಾಯಿ ದಬಾಯಿಸಿ ಓಡಿ ಬಂದಿತು. 'ಸದ್ಯ ನಿಂತಿರುವ ಕಾರ್ ಮತ್ತೆ ಹೋಗಿಬಿಟ್ಟರೆ ನಾನು ಕೆಟ್ಟೆ!' ಅನ್ನುವ ಮಾದರಿಯಲ್ಲಿ ಸಿಕ್ಕಾಪಟ್ಟೆ ತರಾತುರಿಯಲ್ಲಿ ಓಡಿ ಬಂತು. ಆ ಗಿಡ್ಡ ನಾಯಿ ಅಷ್ಟು ಫಾಸ್ಟಾಗಿ ಓಡಿದ್ದು ಅದೇ ಮೊದಲಿರಬೇಕು. ಸಿಕ್ಕಾಪಟ್ಟೆ ಸುಸ್ತಾಗಿತ್ತು ಅದಕ್ಕೆ.
ನಾನು ಕಾರ್ ಬಾಗಿಲು ತೆಗೆದು ಹೊರಗೆ ಬಂದೆ. ಮುಂದಾಗಿದ್ದು ಮಾತ್ರ ಟಿಪಿಕಲ್. ಟಿಪಿಕಲ್ ನಾಯಿ ಪ್ರೀತಿ. ಗಿಡ್ಡ ತಳಿಯ ನಾಯಿಯಾದರೂ ಎಗರಿ ಎಗರಿ, ಕಾಲು ನೆಕ್ಕಿ, ಬಾಲ ಮುರಿದುಹೋಗುವ ಹಾಗೆ ಬಾಲ ಅಲ್ಲಾಡಿಸಿ, ಕುಂಯ್ ಕುಂಯ್ ಅಂದು ಪ್ರೀತಿ ಮಾಡಿತು ಆ ನಾಯಿ. ನಾಯಿ ಪ್ರೀತಿ ಹೇಗಿರುತ್ತದೆ ಅನ್ನುವದು ಮಾಡಿಸಿಕೊಂಡವರಿಗೆ ಮಾತ್ರ ಗೊತ್ತು ಬಿಡಿ.
ನಾಯಿಗಳೇ ಹಾಗೆ. ಅವುಗಳಿಗೆ ಸದಾ ಮನುಷ್ಯ ಸಂಪರ್ಕ ಬೇಕು. ಅದರಲ್ಲೂ ಸಾಕಿದ ನಾಯಿಗಳು ಅಪರಿಚಿತ ಪ್ರದೇಶದಲ್ಲಿ ಕಳೆದುಹೋದಾಗ, ಜೊತೆಗೆ ಯಾರೂ ಇಲ್ಲದಾಗ ಪೂರ್ತಿ ಪರದೇಶಿಗಳಾಗಿ ಫುಲ್ ಕಂಗಾಲಾಗಿಬಿಡುತ್ತವೆ. ಅಂತಹ ಹೊತ್ತಿನಲ್ಲಿ ಯಾವ ಮನುಷ್ಯರು ಕಂಡರೂ ಓಕೆ. 'ಅಬ್ಬಾ! ಅಂತೂ ಒಬ್ಬ ಮನುಷ್ಯ ಸಿಕ್ಕ. ಇನ್ನು ಒಂದು ತರಹದ ನಿರುಮ್ಮಳ,' ಅನ್ನುವ ಭಾವನೆ ನಾಯಿಗಳಿಗೆ. ಮನುಷ್ಯ ಸಂಪರ್ಕ ಸಿಕ್ಕಿತು ಎಂದು ಸಿಕ್ಕಾಪಟ್ಟೆ ಖುಷಿ ಮತ್ತು ನೆಮ್ಮದಿ ಅವುಗಳಿಗೆ. ಅವನ್ನೆಲ್ಲ ಮಾತಾಡಿ ತೋರಿಸಲು ಅವು ಪಾಪ ಮೂಕಪ್ರಾಣಿ. ಹಾಗಂತ ಭಾವನೆಗಳನ್ನು ನಾಯಿಪ್ರೀತಿ ಮೂಲಕ ವ್ಯಕ್ತಪಡಿಸುವಲ್ಲಿ ನಾಯಿಗಳು expert.
ಆ ಅಪರಿಚಿತ ನಾಯಿಯ ಪ್ರೀತಿಯಿಂದ ನಾನೂ ಕರಗಿಹೋದೆ. ಅದು ಕರುಣಾಜನಕ ರೀತಿಯಲ್ಲಿ ಕಾರಿನ ಹಿಂದೆ ಏದುಸಿರು ಬಿಡುತ್ತ ಓಡಿ ಬರುತ್ತಿರುವಾಗಲೇ ಹೃದಯ ಮಿಡಿದಿತ್ತು. ಈಗ ಆ ಸಣ್ಣ ಸೈಜಿನ ನಾಯಿಯ ದೊಡ್ಡ ಸೈಜಿನ ಪ್ರೀತಿ ಹೃದಯವನ್ನು ಪೂರ್ತಿ ಕರಗಿಸಿಬಿಟ್ಟಿತು. ಬಗ್ಗಿ ಕೂತು ಆ ನಾಯಿಯನ್ನು ಒಂದಿಷ್ಟು ಮುದ್ದಾಡಿದಾಗ ನನಗೂ ಹಾಯೆನಿಸಿತು. ನಾವೂ ಸಹ ನಾಯಿಪ್ರಿಯರೇ ನೋಡಿ. ಮಳೆಯಲ್ಲೋ ಇಬ್ಬನಿಯಲ್ಲೋ ತೊಯ್ದ ನಾಯಿಯ ಮೈಯಿಂದ ಟಿಪಿಕಲ್ ವಾಸನೆ. ನಗು ಬಂತು.
ಸಾಕಿದ ನಾಯಿ ಬೆಕ್ಕುಗಳ ಕೊರಳಪಟ್ಟಿಗೆ ವಿಳಾಸವಿರುವ ಒಂದು ಲೋಹದ ಟ್ಯಾಗ್ ಇರುವದು ಸಹಜ ಇಲ್ಲಿ. ಈ ನಾಯಿಯ ಕೊರಳಲ್ಲೂ ಇತ್ತು. ಅದರ ಮೇಲೆ ವಿಳಾಸ ಮತ್ತು ಫೋನ್ ನಂಬರ್ ಎರಡೂ ಇತ್ತು. ನನ್ನ ಮೊಬೈಲ್ ಫೋನ್ ತೆಗೆದು ನೋಡಿದರೆ ಸಿಗ್ನಲ್ ಇಲ್ಲ. ಕಾಡಿನ ಮಧ್ಯೆ ಫೋನ್ ಬೂತ್ ಇರುವ ಚಾನ್ಸೇ ಇಲ್ಲ. ಹೇಗೆ ಸಂಪರ್ಕಿಸಲಿ ಈ ನಾಯಿಯ ಮಾಲೀಕರನ್ನು?
ಕತ್ತಲಾಗುತ್ತಿದೆ. ಜೊತೆಗೆ ಕಾಲಿಗೆ ಅಡರಿಕೊಂಡು, 'ಪ್ಲೀಸ್, ನನ್ನನ್ನು ಒಬ್ಬನೇ ಇಲ್ಲಿ ಬಿಟ್ಟು ಹೋಗದಿರು. ನೀ ಬಿಟ್ಟೆ ಅಂದರೆ ನಾ ಕೆಟ್ಟೆ,' ಅಂತ ಮೈಗೊರಗಿ ನಿಂತಂತಹ helpless ನಾಯಿ. ಮುಗ್ಧ ಮೂಕಪ್ರಾಣಿ. ಏನು ಮಾಡಲಿ? ನಾಯಿಯ ಮಾಲೀಕರಿಗೆ ಫೋನ್ ಮಾಡಲಿಕ್ಕೆ ಫೋನಿಲ್ಲ. ಪಾಪದ ನಾಯಿಯನ್ನು ಅಲ್ಲೇ ಬಿಟ್ಟು ಕಾರ್ ಎತ್ತಿಗೊಂಡು ಓಡಬಹದು. ಹಾಗೆ ಮಾಡಿದರೆ ದೇವರು ಕ್ಷಮಿಸಿದರೂ ಅಂತರಾತ್ಮ ಜೀವನವಿಡೀ ಕ್ಷಮಿಸುವದಿಲ್ಲ. ನಿಸ್ಸಹಾಯಕ ಆ ನಾಯಿಯನ್ನು ಅಲ್ಲೇ ಬಿಟ್ಟು ಬರುವದನ್ನು ಊಹೆ ಮಾಡಿಕೊಳ್ಳಲೂ ಅಸಾಧ್ಯ. ಆ ನಾಯಿಯ ಅದೃಷ್ಟ ಅಲ್ಲಿಯವರೆಗೆ ಏನೋ ಚೆನ್ನಾಗಿತ್ತು ಅಂತ ಬಚಾವಾಗಿದೆ. ಅದೆಷ್ಟು ವಾಹನಗಳ ಹಿಂದೆ ಓಡಿತ್ತೋ. ಅದ್ಯಾವ್ಯಾವ ವಾಹನಗಳನ್ನು ಯಾರಾದರೂ ಸಹಾಯ ಮಾಡಿಯಾರು ಅಂತ ಅಡ್ಡಹಾಕಿತ್ತೋ. ಅದರ ಪುಣ್ಯಕ್ಕೆ ಯಾವದೇ ವಾಹನ ಅದರ ಮೇಲೆಯೇ ಹರಿದುಹೋಗಿ ನಾಯಿ ಸತ್ತಿಲ್ಲ. ಘಂಟೆಗೆ ಐವತ್ತು ಅರವತ್ತು ಮೈಲಿ ವೇಗದಲ್ಲಿ ಹೋಗುವ ವಾಹನ ಕೊಂಚ ಟಚ್ ಆದರೂ ಸಾಕು. ಮನುಷ್ಯರೇ ಶಿವಾಯ ನಮಃ ಆಗುತ್ತಾರೆ. ಇನ್ನು ಸಣ್ಣ ಸೈಜಿನ ನಾಯಿ ಅಷ್ಟೊತ್ತಿನ ತನಕ ಬಚಾವಾಗಿದ್ದೇ ದೊಡ್ಡ ಮಾತು. ಹೀಗೆ ಪರಿಸ್ಥಿತಿ ಖರಾಬ್ ಇರುವಾಗ ನಾನೂ ಸಹ ಆ ನಿಷ್ಪಾಪಿ ನಾಯಿಯನ್ನು ಅಲ್ಲೇ ಬಿಟ್ಟು, ಅದಕ್ಕೆ ಬೆನ್ನು ಹಾಕಿಹೋದರೆ ಇರುವ ಕೊಂಚ ಮನುಷ್ಯತ್ವಕ್ಕೂ ಬೆಲೆ ಇಲ್ಲದಂತಾಗುತ್ತದೆ.
ನಾಯಿಯ ಟ್ಯಾಗ್ ಮೇಲಿದ್ದ ವಿಳಾಸ ಅಸ್ಪಷ್ಟವಾಗಿತ್ತು. ಮತ್ತೆ ಎಷ್ಟು ದೂರವೋ ಏನೋ. ಆಶ್ರಮಕ್ಕೆ ಇನ್ನೂ ಐದಾರು ಮೈಲಿ. ನಾಯಿಯನ್ನು ಅಲ್ಲಿಗೇ ಕರೆದುಕೊಂಡು ಹೋಗಲೇ? ಅಲ್ಲಿಗೆ ಕರೆದುಕೊಂಡ ಹೋದ ಮೇಲೆ ಮುಂದೆ? ಅಲ್ಲಿ ನಾಯಿಯನ್ನು ಎಲ್ಲಿ ಇಟ್ಟುಕೊಳ್ಳೋಣ? ಆಶ್ರಮ ಅಂದ ಮೇಲೆ ಪ್ರಾಣಿಗಳ ಮೇಲೆ ನಿರ್ಬಂಧ ಇತ್ಯಾದಿ ಇರುವ ಸಾಧ್ಯತೆಗಳು ಹೆಚ್ಚು. ಆದರೂ ಅಲ್ಲಿ ಫೋನ್ ಅಂತೂ ಇರುತ್ತದೆ. ಅಲ್ಲಿಂದ ಫೋನ್ ಮಾಡಿದರೆ ನಾಯಿಯ ಮಾಲೀಕರು ಅಲ್ಲಿಗೆ ಬಂದು ನಾಯಿಯನ್ನು ಕರೆದುಕೊಂಡು ಹೋಗಬಹುದು. ಹೀಗೆ ಒಂದು ಐಡಿಯಾ ಬಂತು. ಆದರೂ ಆಶ್ರಮಕ್ಕೆ ನಾಯಿಯನ್ನು ಕರೆದುಕೊಂಡು ಹೋಗುವ ಐಡಿಯಾ ಯಾಕೋ intuition ಗೆ ಒಪ್ಪಿಗೆಯಾಗಲಿಲ್ಲ. ಕಠಿಣ ಸಂದರ್ಭಗಳಲ್ಲಿ gut instincts ಗಳಿಗೆ ಮಹತ್ವ ಕೊಡಬೇಕು. ಅವು ಸರಿಯಾದ ದಾರಿ ತೋರಿಸುತ್ತವೆ ಎಂದು ಎಲ್ಲೋ ಓದಿದ ನೆನಪು. ಹಾಗಾಗಿ ನಾಯಿಯನ್ನು ಆಶ್ರಮಕ್ಕೆ ಕರೆದೊಯ್ಯುವ ಐಡಿಯಾ ಕೈಬಿಟ್ಟೆ.
ಮತ್ತೊಂದು ಐಡಿಯಾ ಬಂತು. ಅದೇನೆಂದರೆ ಆ ಏರಿಯಾದಲ್ಲಿ ಇರಬಹುದಾದ ಯಾರದ್ದಾದರೂ ಮನೆಗೆ ಹೋಗಿ ನಾಯಿಯ ಮಾಲೀಕರಿಗೆ ಫೋನ್ ಮಾಡುವದು. ಮಾಲೀಕರು ಬರುವ ತನಕ ಅಲ್ಲೇ ಇದ್ದು, ಅವರು ಬಂದ ಮೇಲೆ ನಾಯಿಯನ್ನು ಒಪ್ಪಿಸಿ, ಆಶ್ರಮದ ಕಡೆ ಹೊರಡುವದು. ದಾರಿಯಲ್ಲಿ ಬರುವಾಗ ಅಲ್ಲಲ್ಲಿ ವಿರಳವಾಗಿ ಮನೆಗಳಿವೆ ಅನ್ನುವ ಸಂಗತಿ ತಿಳಿದಿತ್ತು. ರಸ್ತೆ ಮೇಲೆ ಫಲಕಗಳಿದ್ದವು. ರಸ್ತೆ ಪಕ್ಕದಲ್ಲಿ ಮನೆಗಳಿರಲಿಲ್ಲ. ರಸ್ತೆ ಬದಿಗಿನ ಒಳದಾರಿಗಳಲ್ಲಿ ಒಂದೆರೆಡು ಮೈಲಿ ಹೋದರೆ ಮನೆಗಳಿವೆ ಅಂತ ಬೋರ್ಡ್ ಹಾಕಿದ್ದರು.
ಡ್ರೈವರ್ ಪಕ್ಕದ ಸೀಟಿನ ಬಾಗಿಲು ತೆಗೆದೆ. ನಾಯಿ ಚಂಗನೆ ಕಾರೊಳಗೆ ಹಾರಿ ಪ್ಯಾಸೆಂಜರ್ ಸೀಟಿನ ಮೇಲೆ ಸ್ಥಾಪಿತವಾಯಿತು. ಅಮೇರಿಕಾದ ನಾಯಿಗಳಿಗೆ ಅದು reflex. ಕಾರಿನಲ್ಲಿ ಓಡಾಡಿ ರೂಢಿಯಾಗಿರುತ್ತದೆ. ಹಾಗಾಗಿ ಕಾರಿನ ಡೋರ್ ತೆಗೆದಾಕ್ಷಣ ಒಳಗೆ ಹತ್ತಿ ಕೂತುಬಿಡುತ್ತವೆ. ಅದರಲ್ಲೂ ಈ ನಾಯಿಯಂತೂ ಅದೆಷ್ಟು ಕ್ಯೂಟ್ ಆಗಿ ಸೀಟ್ ಹತ್ತಿ ಕೂತಿತು ಅಂದರೆ ಮತ್ತಿಷ್ಟು ಮುದ್ದು ಮಾಡಬೇಕು ಅನ್ನಿಸುವಂತೆ ಕೂತಿತ್ತು. ಅದರ ಮೈ ಮೇಲೆ ಕೈಯಾಡಿಸಿ ಈಕಡೆ ಬಂದು ಗಾಡಿ ಸ್ಟಾರ್ಟ್ ಮಾಡಿದೆ. ಮನೆ ಕಡೆ ಹೊರಟೆವು ಅಂತ ನಾಯಿ ಫುಲ್ ಖುಷ್. ಮೈ ಕೈ ನೆಕ್ಕಿ ಪ್ರೀತಿ ಮಾಡಲು ಬಂತು. 'ಸದ್ಯ ಸುಮ್ಮನೆ ಕೂಡು. ನಂತರ ನೋಡೋಣ,' ಅಂದೆ. ನಾಯಿ ಮಳ್ಳ ಮುಖ ಮಾಡಿ ಕೂತಿತು. ಗಾಡಿ ತಿರುಗಿಸಿ ಮತ್ತೆ ಮೇನ್ ರೋಡಿಗೆ ಬಂದೆ.
ಒಂದು ಅರ್ಧ ಮೈಲಿ ಬರುವಷ್ಟರಲ್ಲಿ ಮೊದಲನೇ ಫಲಕ ಕಂಡಿತು. ಅಲ್ಲಿ ಗಾಡಿ ತಿರುಗಿಸಿ ಕಚ್ಚಾ ರಸ್ತೆಯಲ್ಲಿ ಒಂದು-ಒಂದೂವರೆ ಮೈಲಿ ಹೋದರೆ ಕಂಡಿದ್ದು ಒಂದು ದೊಡ್ಡ ರಾಂಚ್ (ranch). ನಮ್ಮ ಸಿರ್ಸಿ ಕಡೆ ಕಾಡಿನ ಮಧ್ಯೆ ತೋಟ ಮತ್ತು ತೋಟದ ಮಧ್ಯೆ ಮನೆಯಿರುತ್ತದೆ ನೋಡಿ. ಆ ಮಾದರಿ. ಇಲ್ಲಿ ತೋಟವಿಲ್ಲ. ನೂರಾರು ಎಕರೆ ಇರುವ ರಾಂಚ್. ಜೊತೆಗೆ ಒಂದಿಷ್ಟು ದನ ಇತ್ಯಾದಿ.
ಅಷ್ಟೆಲ್ಲ ಇದ್ದರೂ ಅಲ್ಲೆಲ್ಲೂ ಮನುಷ್ಯರ ಸುಳಿವೇ ಇಲ್ಲ. ಎಲ್ಲಿ ಹೊಲದಕಡೆ ಹೋಗಿದ್ದಾರೋ ಏನೋ. ಅಮೇರಿಕಾದಲ್ಲಿ trespassing ಮಾಡುವದು ಬಹಳ ರಿಸ್ಕಿ. ತಮ್ಮ ಪ್ರಾಪರ್ಟಿ ಮೇಲೆ ಯಾರಾದರೂ ಅನಧೀಕೃತವಾಗಿ ಎಂಟ್ರಿ ಕೊಟ್ಟರೆ ಮಾಲೀಕರು ಗುಂಡು ಹಾರಿಸಿದರೂ ಆಶ್ಚರ್ಯವಿಲ್ಲ. ಮತ್ತೆ ಗ್ರಾಮೀಣ ಪ್ರದೇಶದಲ್ಲಿ, ಕಾಡಿರುವ ಪ್ರದೇಶದಲ್ಲಿ ಬಂದೂಕುಗಳು ಬಹಳ ಜಾಸ್ತಿ. trespassers ಮೇಲೆ ಗುಂಡು ಹಾರಿಸಿದರೆ ಅದು ಅಪರಾಧವವೂ ಅಲ್ಲ. ಹೇಳಿಕೇಳಿ ಬಂದೂಕಿನ ಮೇಲೆಯೇ ಕಟ್ಟಿದ ದೇಶ ಅಮೇರಿಕಾ. ಈ ನಾಯಿಯನ್ನು ಮನೆ ಮುಟ್ಟಿಸುವ ಉಮೇದಿಯಲ್ಲಿ ನಾವು ಯಾರ್ಯಾರದ್ದೋ ಮನೆಗೆ ಹೋಗುವದು. ಅವರು ನಾವು ಯಾರೋ ಕಳ್ಳರೋ ದರೋಡೆಕೋರರೋ ಅಂದುಕೊಂಡು ಗುಂಡು ಪಿಂಡು ಹಾರಿಸಿ ಒಂದಕ್ಕೆರೆಡು ಹಡಾಗತಿ ಆಗುವದು. ಅದೆಲ್ಲ ಲಫಡಾ ಯಾರಿಗೆ ಬೇಕು? ಹೀಗೆ ವಿಚಾರ ಮಾಡಿ ಮೊದಲು ಆ ನಿರ್ಜನ ranch ನಿಂದ ಜಾಗ ಖಾಲಿ ಮಾಡಿದೆ. ಗಾಡಿ ಎತ್ತಿ ಮತ್ತೆ ಮೇನ್ ರೋಡಿಗೆ ಬಂದಾಗಲೇ ಒಂದು ತರಹದ ನಿರುಮ್ಮಳ. ಗೊತ್ತಿಲ್ಲದೇ trespassing ಮಾಡಿ ಗುಂಡೇಟು ತಿಂದು ಜನರು ಶಿವಾಯ ನಮಃ ಆದ ಘಟನೆಗಳು ಬೇಕಾದಷ್ಟಿವೆ. ಹಾಗಾಗಿ ಕೇರ್ಫುಲ್ ಆಗಿರಬೇಕು.
ಮತ್ತೊಂದು ಕಚ್ಚಾ ರಸ್ತೆ ಹೊಕ್ಕೆ. ಒಳಗೆ ಒಂದೆರೆಡು ಮೈಲಿ ನಿಧಾನಕ್ಕೆ ಡ್ರೈವ್ ಮಾಡಿಕೊಂಡು ಹೋದ ಮೇಲೆ ಮತ್ತೊಂದು ಮನೆ ಕಂಡುಬಂತು. ತುಂಬಾ ದೊಡ್ಡ ಪ್ರಾಪರ್ಟಿ ಅಲ್ಲ. ಕಚ್ಚಾ ರಸ್ತೆಯ ಅಂತ್ಯದಲ್ಲೇ ಮನೆ ಬಾಗಿಲು. ಅದಕ್ಕೊಂದು ಕರೆಗಂಟೆ. ಹೀಗಾಗಿ ಬಟಾಬಯಲಿನಲ್ಲಿ, ಬಂದೂಕಿಗೆ ಟಾರ್ಗೆಟ್ ಆಗುವ ಭಯವಿಲ್ಲ. ಬೆಲ್ ಮಾಡಿ ನೋಡುವದು. ಯಾರಾದರೂ ಬಂದರೆ ಸರಿ. ಇಲ್ಲವಾದರೆ ಮತ್ತೊಂದು ಮನೆ ಹುಡುಕುವದು. ಹೀಗೆ ವಿಚಾರ ಮಾಡುತ್ತ ಆ ಮನೆಯ ಕರೆಗಂಟೆ ಒತ್ತಿದೆ.
ಮತ್ತೆ ಮತ್ತೆ ಕರೆಗಂಟೆ ಒತ್ತಿದ ನಂತರ ಯಾರೋ ಬಾಗಿಲಿಗೆ ಬಂದರು. 'ದೇವರೇ, ಇವರು ಬಂದೂಕು ಪಿಂದೂಕು ಹಿಡಿದುಕೊಂಡು ಬರದಿದ್ದರೆ ಅಷ್ಟೇ ಸಾಕು!' ಅಂದುಕೊಂಡೆ. ಬಂದು ಬಾಗಿಲು ತೆಗೆದಾಕೆ ಒಬ್ಬ ಮಧ್ಯವಯಸ್ಕ ಬಿಳಿಯ ಮಹಿಳೆ. ಹಾಗೆ ಕಾಡಿನ ಮಧ್ಯೆ ಇರುವ ಮಂದಿಗೆ ಅಪರಿಚಿತರ ಅದರಲ್ಲೂ ಬೇರೆ ಜನಾಂಗದವರ (race) ಸಂಪರ್ಕ ಕಮ್ಮಿ. ಅವರದ್ದೇನಿದ್ದರೂ ಬಿಳಿ ಜನರ ಜೊತೆ ಪಾರ್ಟಿ. ಕೆಲಸ ಮಾಡಲು ಕರಿ ಜನರು. ಗುಲಾಮಿ ಪದ್ಧತಿ ಇಲ್ಲದಿದ್ದರೂ ಕೆಲಸಕ್ಕೆ ಈಗಲೂ ಕರಿಯರೇ. ಹಾಗಿರುವಾಗ ನಾನು, ಕಂದುಬಣ್ಣದ ಆದ್ಮಿಯೊಬ್ಬ, ಮನೆ ಮುಂದೆ ಬಂದು ನಿಂತಿದ್ದು ಆಕೆಗೆ ಆಶ್ಚರ್ಯವೋ ಆಶ್ಚರ್ಯ.
ನನ್ನ ಶುದ್ಧ ಇಂಡಿಯನ್ accent ಇಂಗ್ಲೀಷಿನಲ್ಲಿ ವಿವರಿಸಿದೆ. ಅವಳಿಗೆ ನನ್ನ ಇಂಗ್ಲೀಷ್ ತಿಳಿಯಲು ಸ್ವಲ್ಪ ವೇಳೆ ಹಿಡಿಯಿತು. ಈ ಮೊದಲು ಹೇಳಿದಂತೆ ಅಂತಹ remote ಏರಿಯಾದಲ್ಲಿರುವವರಿಗೆ ಜನಸಂಪರ್ಕ ಕಮ್ಮಿ. ಹಾಗಾಗಿ ನಾನು ಏನು ಹೇಳುತ್ತಿದ್ದೇನೆ ಎಂದು ಆಕೆಗೆ ವಿಷಯ ಫುಲ್ ಕ್ಲಿಯರ್ ಆಗಲು ಕೊಂಚ ವೇಳೆ ಹಿಡಿಯಿತು. ಕಾರಿನಲ್ಲಿ ಕೂತಿದ್ದ ನಾಯಿಯನ್ನು ತೋರಿಸಿದ ಮೇಲೆ ಅವಳಿಗೆ ಎಲ್ಲ ತಿಳಿಯಿತು. ದೊಡ್ಡ ಗಲಗಲ ನಗೆ ನಕ್ಕು, Oh! ಅಂತ ಉದ್ಗರಿಸಿ, ಎರಡೂ ಕೈ ಮೇಲೆ ತೆಗೆದುಕೊಂಡು ಹೋಗಿ, ಪೂರ್ತಿ ದೇಹವನ್ನು ಕುಲಕಿಸುತ್ತ, ಹಾ! ಹಾ! ಅಂತ ನಕ್ಕಳು. ನಾನು ಅಬ್ಬಾ! ಅಂತ ನಿಟ್ಟುಸಿರುಬಿಟ್ಟೆ. ಅಂತೂ ಇಂತೂ ಈಕೆಗೆ ವಿಷಯ ತಿಳಿಯಿತಲ್ಲ! ದೊಡ್ಡ ಮಾತು.
ಕಾರಿನ ಹತ್ತಿರ ಬಂದಳು. ನಾಯಿ ಕೂತಿದ್ದ ಕಡೆಯ ಬಾಗಿಲು ತೆಗೆದೆ. ನಾಯಿ ಜಿಗಿದು ಹೊರಗೆ ಬಂತು. ಹೊಸದಾಗಿ ಕಂಡ ಮೇಡಂ ಸಾಹೇಬರಿಗೂ ನಾಯಿ ತನ್ನ ದುವಾ ಸಲಾಮಿ ಮಾಡಿತು. ಹೇಳಿಕೇಳಿ ನಾಯಿ. ಕಂಡ ಮನುಷ್ಯರಿಗೆಲ್ಲ ಬಾಲ ಅಲ್ಲಾಡಿಸಿ, ಮೈಕೈ ನೆಕ್ಕಿ ಪ್ರೀತಿ ಮಾಡುತ್ತದೆ.
ಆಕೆ ನಾಯಿಯ ಮೈದಡವುತ್ತ ಅದರ ವಿಳಾಸದ ಲೋಹದ ಟ್ಯಾಗ್ ನೋಡಿದರು. ಗೊತ್ತೆಂಬಂತೆ ತಲೆಯಾಡಿಸಿದರು. ಒಳ್ಳೆ ಸೂಚನೆ. 'ಒಂದು ನಿಮಿಷ. ಇರು. ಬಂದೆ,' ಎಂದು ಹೇಳಿ ಒಳಗೆ ಹೋದರು. ಒಂದೆರೆಡು ನಿಮಿಷದ ನಂತರ ಬಂದರು.
'ಈ ನಾಯಿಯ ಮಾಲೀಕರು ನನಗೆ ಪರಿಚಯದವರು. ಇಲ್ಲೇ ಹತ್ತಿರದಲ್ಲಿ ಅವರ ಮನೆ ಇದೆ. ಈಗ ಫೋನಲ್ಲಿ ಮಾತಾಡಿದೆ. ಅವರೆಲ್ಲ ಕಾಡಿನಲ್ಲಿ ಎಲ್ಲೋ ಬೇಟೆಗೆ ಹೋಗಿದ್ದರಂತೆ. ಅವರ ಜೊತೆಗೆ ಹೋಗಿದ್ದ ಈ ನಾಯಿ ಎಲ್ಲೋ ತಪ್ಪಿಸಿಕೊಂಡಿತಂತೆ. ಅವರೂ ಹುಡುಕುತ್ತಿದ್ದಾರಂತೆ. ನಾನು ನಾಯಿ ಹೀಗೆ ಸಿಕ್ಕ ವಿಷಯ ತಿಳಿಸಿದೆ. ಕೇಳಿ ಅವರಿಗೆ ನೆಮ್ಮದಿ, ಸಂತೋಷವಾಯಿತು. ನಿನಗೆ ಥ್ಯಾಂಕ್ಸ್ ಹೇಳಿದ್ದಾರೆ. ನಾಯಿಯನ್ನು ಇಲ್ಲೇ ಬಿಡಬಹುದು. ಅವರು ನಂತರ ಬಂದು ಕರೆದುಕೊಂಡು ಹೋಗುತ್ತಾರಂತೆ. ನಾಯಿ ತಂದುಕೊಟ್ಟವರಿಗೆ, ಅಂದರೆ ನಿನಗೆ, ಬಹಳ ಕೃತಜ್ಞತೆ ಸಲ್ಲಿಸಿದ್ದಾರೆ,' ಎಂದು ಹೇಳಿದರು ಆ ಮನೆಯೊಡತಿ.
ಅಂತೂ ದೊಡ್ಡ ಭಾರವೊಂದು ಹೆಗಲ ಮೇಲಿಂದ ಇಳಿದ ಫೀಲಿಂಗ್. ನಾಯಿ ಫುಲ್ ಖುಷ್. ಅದು ಆರಾಮಾಗಿ ಅವರ ಕಂಪೌಂಡಿನಲ್ಲಿ ಸುತ್ತಾಡಿಕೊಂಡಿತ್ತು. ಅದಕ್ಕೊಂದು ಕೊನೆಯ goodbye ಹೇಳಿದೆ. ಮತ್ತೆ ನಾಯಿಪ್ರೀತಿ ತೋರಿಸಿತು. ಕೃತಜ್ಞತೆ ಅರ್ಪಿಸಿತು. ಅಥವಾ ಹಾಗಂತ ನನಗನ್ನಿಸಿತು. ಸಹಾಯ ಮಾಡಿದ ಆ ಮನೆಯ ಲೇಡಿಗೆ ಥ್ಯಾಂಕ್ಸ್ ಹೇಳಿದೆ. 'ಹೇ !ಹೇ! ನಿನಗೆ ದೊಡ್ಡ ಥ್ಯಾಂಕ್ಸ್ ಮಾರಾಯ. ರಸ್ತೆಯಲ್ಲಿ ಹೋಗುತ್ತಿರುವವರು ಯಾರು ನಾಯಿಯೊಂದಕ್ಕೆ ಇಷ್ಟೆಲ್ಲಾ ಮಾಡುತ್ತಾರೆ? ಗಾಡ್ ಬ್ಲೆಸ್ ಯು!' ಅಂದರು. ಖುಷಿಯಾಯಿತು.
ಆ ಜವಾಬ್ದಾರಿಯನ್ನು ನಿಭಾಯಿಸಿದ ಖುಷಿಯಲ್ಲಿ ವಾಪಸ್ ಮೇನ್ ರೋಡಿಗೆ ಬಂದೆ. ಮುಂದೆ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಯೋಗಾವಿಲ್ ಆಶ್ರಮ ತಲುಪಿದೆ. ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ, ಚಿಕ್ಕಚಿಕ್ಕ ಕುಟೀರಗಳು, ಧಾನ್ಯಮಂದಿರ, ಸರೋವರ, ಸ್ನೇಹಮಯಿ ಜನರು, ಎಲ್ಲ ಒಂದು ತರಹದ ಖುಷಿ ಕೊಟ್ಟವು. ಜೊತೆಗೆ ಪಾಪದ ನಾಯಿಯೊಂದನ್ನು ಮನೆ ಮುಟ್ಟಿಸಿ ಬಂದ ಖುಷಿಯೂ ಕೂಡಿ ಡಬಲ್ ಖುಷಿ.
ನಾಯಿಯೆಂದರೆ ಭಗವಾನ್ ದತ್ತಾತ್ರೇಯನ ಪ್ರೀತಿಯ ಪ್ರಾಣಿ, ದತ್ತಾತ್ರೇಯನ ಅವತಾರ ಅಂತೆಲ್ಲ ಪ್ರತೀತಿ ಇದೆ. ಪ್ರಪ್ರಥಮ ಬಾರಿಗೆ ಮನೆಗೆ ಸಾಕುನಾಯಿ ತಂದಾಗ ತಂದೆಯವರು ಹೇಳಿದ್ದೇ ಅದು - ನಾಯಿ ದತ್ತಾತ್ರೇಯನ ಅವತಾರ! ಹಾಗೆ ಹೇಳಿದ್ದಕ್ಕೋ ಏನೋ ಗೊತ್ತಿಲ್ಲ ನಾಯಿಗಳ ಮೇಲೆ ಪ್ರೀತಿಯ ಜೊತೆ ಒಂದು ತರಹದ ಭಕ್ತಿ, ಮಮತೆ ಪ್ಲಸ್ ಸಂಥಿಂಗ್ ಸಂಥಿಂಗ್. ಒಟ್ಟಿನಲ್ಲಿ ದತ್ತಾತ್ರೇಯನ ಅವತಾರಿ ಉರ್ಫ್ ಈ ನಾಯಿ ವರ್ಜಿನಿಯಾದ ಕಾಡಿನಲ್ಲಿ ದಾರಿಯನ್ನು ತಪ್ಪಿಸಿಕೊಂಡಿದ್ದ. ಅವನನ್ನು ಸೇಫಾಗಿ ಮನೆಮುಟ್ಟಿಸಿದ್ದೆ. ಹೀಗಾಗಿ ೨೦೦೬ ರ Thanksgiving ಹಬ್ಬಕ್ಕೆ ಒಂದು ಅರ್ಥ, ಸಾರ್ಥಕತೆ, ಧನ್ಯತೆ ಮತ್ತು ಮಹತ್ವ ಬಂದಿತ್ತು. ಪಾಪದ ಮೂಕಪ್ರಾಣಿಯೊಂದನ್ನು ಕಾಪಾಡುವ ಅವಕಾಶವನ್ನು Thanksgiving ಹಬ್ಬದಂದೇ ಒದಗಿಸಿದ್ದಕ್ಕೆ ಭಗವಾನ್ ದತ್ತಾತ್ರೇಯನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿದ್ದೆ.
ಅದಾದ ಕೆಲವೇ ದಿವಸಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೌಕರಿ ಸಿಕ್ಕಿತು. ಎರಡು ಮೂರು ತಿಂಗಳಿಂದ ಮೂರ್ನಾಲ್ಕು ಇಂಟರ್ವ್ಯೂ ಆಗಿತ್ತು. ಆದರೆ ಎಲ್ಲೂ confirm ಆಗಿರಲಿಲ್ಲ. ಬಾಸ್ಟನ್ ಏರಿಯಾದಲ್ಲಿ ಇದ್ದು ಹತ್ತು ವರ್ಷವಾಗಿತ್ತು. ಬೇರೆಕಡೆ, ಅದರಲ್ಲೂ ಕ್ಯಾಲಿಫೋರ್ನಿಯಾ ಕಡೆ, ಹೋಗುವಾಸೆ ನಮಗೆ. ಎಲ್ಲೂ ಕ್ಲಿಕ್ ಆಗಿರಲಿಲ್ಲ. ದಾರಿತಪ್ಪಿದ ದತ್ತಾತ್ರೇಯ ಸ್ವರೂಪಿ ನಾಯಿಯನ್ನು ಮನೆಗೆ ಮುಟ್ಟಿಸಿದ್ದಕ್ಕೆ ಆ ದೇವರು ಅದೇನು ಆಶೀರ್ವಾದ ಮಾಡಿದನೋ ಗೊತ್ತಿಲ್ಲ. ಎಲ್ಲಾ ಫಟಾಫಟ್ ವರ್ಕೌಟ್ ಆಗಿ, ಒಂದು ತಿಂಗಳಲ್ಲಿ ಕ್ಯಾಲಿಫೋರ್ನಿಯಾಗೆ ಬಂದಿಳಿದೆ. ಆ ಒಂದು ತಿಂಗಳಲ್ಲಿ ಅದೆಷ್ಟು busy, ಅವೆಷ್ಟು ಚಿಕ್ಕಪುಟ್ಟ ತೊಂದರೆಗಳು, ಅವೆಷ್ಟು tension ಗಳು. ಎಲ್ಲವೂ ಹೂವೆತ್ತಿಟ್ಟಂತೆ ಗಾಯಬ್. ಎಲ್ಲ ದತ್ತಾತ್ರೇಯನ ಮಹಿಮೆ ಅಂತ ನಮ್ಮ ನಂಬಿಕೆ.
ಆಗ ಇಷ್ಟೆಲ್ಲಾ ಆದರೂ ಆ ಸಣ್ಣ Dachshund ನಾಯಿಯ ಜೊತೆಗಿನ ಒಂದೇ ಒಂದು ಫೋಟೋ ಇಲ್ಲ. ಆಗ ನನ್ನ ಬಳಿ ನೋಕಿಯಾ-೬೬೦೦ ಅನ್ನುವ ಒಳ್ಳೆ ಫೋನ್ ಇತ್ತು. ಅದರಲ್ಲಿ ಭರ್ಜರಿ ಕ್ಯಾಮೆರಾ ಇತ್ತು. ಆದರೆ ಆಗಿನದು selfie ಯುಗವಾಗಿರಲಿಲ್ಲ ನೋಡಿ. ಮತ್ತೆ ದಾರಿತಪ್ಪಿಸಿಕೊಂಡಿದ್ದ ದತ್ತಾತ್ರೇಯನನ್ನು ತ್ವರಿತವಾಗಿ ಮನೆಗೆ ಮುಟ್ಟಿಸಬೇಕಿತ್ತು. ಹೀಗಾಗಿ ಆ ಕ್ಯೂಟ್ ನಾಯಿಯೊಂದಿಗೆ ಫೋಟೋ ತೆಗೆಯಬೇಕು ಅನ್ನುವದು ತಲೆಗೂ ಬಂದಿರಲಿಲ್ಲ. ಮತ್ತೆ 'Best moments are the ones that are not captured,' ಅಂತ ಮಾತು ಬೇರೆ ಇದೆಯಲ್ಲವೇ? ಆ ದಿವ್ಯಕ್ಷಣ ಕೂಡ ಆ ಟೈಪಿನ ಬೆಸ್ಟ್ ಮೊಮೆಂಟ್.
ಮುಂದೊಂದು ದಿನ ಮನೆಯವರೊಂದಿಗೆ ನಾಯಿ ರಕ್ಷಣೆ ಆಪರೇಷನ್ ವಿವರಗಳನ್ನು ಹಂಚಿಕೊಂಡಿದ್ದೆ. ಮನೆಯಲ್ಲಿ ಎಲ್ಲರೂ ಶ್ವಾನಪ್ರೇಮಿಗಳೇ. ನನಗಿಂತಲೂ ಹೆಚ್ಚಿನ ಖುಷಿ ಅವರಿಗೂ ಆಗಿತ್ತು.
ಒಂದು helpless ಮೂಕಪ್ರಾಣಿ ನಾಯಿ ಎಲ್ಲೋ ಕಾಡಿನ ಮಧ್ಯೆ ಸಿಕ್ಕಾಗ ಅದರ ನಿಷ್ಕಲ್ಮಶ unconditional ಪ್ರೀತಿಯನ್ನು ಸ್ವೀಕರಿಸಿ, ಆ ನಾಯಿಗೆ ನಮಗಾದ ರೀತಿಯಲ್ಲಿ reciprocate ಮಾಡಿ, ಸಹಾಯ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಮತ್ತೆ ಅಂತಹ ಅವಕಾಶ ಸಿಕ್ಕಿಲ್ಲ. ಸಿಕ್ಕಿದ್ದ ಆ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಅನುವಾಗುವಂತೆ ಪರಿಸ್ಥಿತಿ ವರ್ಕೌಟ್ ಆಗಿದ್ದೂ ಕೂಡ ದೊಡ್ಡ ಮಾತೇ. ಈ ವರ್ಷ ಮತ್ತೆ Thanksgiving ಬಂದಾಗ ಇದೆಲ್ಲ ನೆನಪಾಯಿತು. ಮತ್ತೊಮ್ಮೆ ಆ ವರ್ಷದ ಒಳ್ಳೆ ನಸೀಬಕ್ಕೊಂದು ದೊಡ್ಡ ಥ್ಯಾಂಕ್ಸ್.
Grateful people are happy people. ಹಾಗಾಗಿ ಎಲ್ಲದಕ್ಕೂ, ಎಲ್ಲರಿಗೂ ಕೃತಜ್ಞರಾಗಿರೋಣ. ಸಂತೋಷದ ಚಿಲುಮೆಯ ಮೂಲ ಕೃತಜ್ಞತೆಯಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.
24-Nov-2016, Happy Thanksgiving everyone! Have a great one!

ದಾರಿಯಲ್ಲಿ ಸಿಕ್ಕಿದ್ದ ನಾಯಿ ಸುಮಾರು ಹೀಗೇ ಇತ್ತು |

ಭಗವಾನ್ ದತ್ತಾತ್ರೇಯ |