'ಪೆಗಾಸಸ್' ಎಂದಾಗ ಹಿಂದಿನ ಕಾಲದ ನಿಗೂಢ ಸಾಫ್ಟ್ವೇರ್ 'ಪ್ರಾಮಿಸ್' ನೆನಪಾಯಿತು. ಬೇಹುಗಾರಿಕೆಗಾಗಿ ಉಪಯೋಗಿಸುವ ಸಾಫ್ಟವೇರುಗಳಲ್ಲಿ 'ಪೆಗಾಸಸ್' ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ. ಆದರೆ ಇದರಷ್ಟು ಸುದ್ದಿಯನ್ನು ಅನೇಕ ಸಾಫ್ಟ್ವೇರ್ ಮಾಡಲಿಲ್ಲ.
ಸುಮಾರು ಮೂರು ದಶಕಗಳ ಹಿಂದೆ ಅಮೇರಿಕಾದ 'ಪ್ರಾಮಿಸ್' ಎನ್ನುವ ಸಾಫ್ಟ್ವೇರ್ ಅದೆಷ್ಟು ಹವಾ ಸೃಷ್ಟಿಸಿತ್ತು ಅಂದರೆ ಅದರ ಹಿಂದೆ ಬಿದ್ದಿದ್ದ ಖ್ಯಾತ ತನಿಖಾ ಪತ್ರಕರ್ತ ಡೇನಿಯಲ್ ಕ್ಯಾಸಲಾರೋ ಎಂಬಾತ ನಿಗೂಢವಾಗಿ ಸತ್ತುಹೋದ. ಹೋಟೆಲ್ ರೂಮಿನ ಬಾತ್ರೂಮಿನ ಟಬ್ಬಿನಲ್ಲಿ ನಗ್ನವಾಗಿ ಬಿದ್ದಿದ್ದ. ಸುತ್ತಲೂ ರಕ್ತದ ಮಡು. ಮೊಣಕೈ ಮೇಲೆ ರಕ್ತನಾಳ ಕತ್ತರಿಸಿಕೊಂಡ ಆಳದ ಗಾಯಗಳು. ಪಕ್ಕದಲ್ಲಿ 'ಆತ್ಮಹತ್ಯೆ' ಮಾಡಿಕೊಂಡಿದ್ದಕ್ಕೆ ಒಂದು ಚೀಟಿ. Did he commit suicide or was he 'suicided' by powers that be?
'ಪ್ರಾಮಿಸ್' ಸಾಫ್ಟ್ವೇರ್ ರಾಡಿಯ ತನಿಖೆಗೆ ನಿಂತಿದ್ದ ಅಮೇರಿಕಾದ ಮಹಾ ಶಕ್ತಿವಂತ ಸೆನೆಟರ್ ಆಗಿದ್ದ ಜಾನ್ ಟಾವರ್ಸ್ 'ಶಂಕಾಸ್ಪದ' ವಿಮಾನ ಸ್ಪೋಟದಲ್ಲಿ ಶಿವಾಯ ನಮಃ ಆಗಿದ್ದರು.
'ಪ್ರಾಮಿಸ್' ಸಾಫ್ಟವೇರಿನ ಹಕ್ಕುಸ್ವಾಮ್ಯವನ್ನು (ಕಾಪಿರೈಟ್ಸ್) ಲಪಟಾಯಿಸಲು ಸ್ಕೀಮ್ ಹಾಕುತ್ತಿದ್ದ ಇಸ್ರೇಲಿನ (ಮಾಜಿ) ಬೇಹುಗಾರ ಅಮಿರಾಮ್ ನೀರ್ ಮೆಕ್ಸಿಕೋದಲ್ಲಿ ಮತ್ತೊಂದು ನಿಗೂಢ ವಿಮಾನ ಸ್ಪೋಟದಲ್ಲಿ ಸತ್ತ. ಅಲ್ಲೂ ಸಾವಿನ ಹಿಂದೆ ದೊಡ್ಡ ಸಂಶಯ.
ಹೊರಜಗತ್ತಿನಲ್ಲಿ ಮಾಧ್ಯಮಲೋಕದ ದೊಡ್ಡ ದೊರೆಯಾಗಿ ವೇಷ ಧರಿಸಿ ಒಳಗಿಂದೊಳಗೆ ಮೊಸ್ಸಾದ್ ಏಜೆಂಟ್ ಆಗಿ ಕೆಲಸ ಮಾಡುತ್ತಾ, 'ಪ್ರಾಮಿಸ್' ಸಾಫ್ಟವೇರನ್ನು ಅನಧಿಕೃತವಾಗಿ ಮಾರುತ್ತಾ, ತಾನೂ ರೊಕ್ಕ ಮಾಡಿಕೊಂಡು ಇಸ್ರೇಲ್ / ಮೊಸ್ಸಾದಿಗೆ ರೊಕ್ಕ ಮಾಡಿಕೊಡುತ್ತಿದ್ದ ರಾಬರ್ಟ್ ಮ್ಯಾಕ್ಸ್ವೆಲ್ ಎಂಬದ ದೊಡ್ಡ ಕುಳ ಕ್ಯಾನರಿ ದ್ವೀಪಗಳ ಹತ್ತಿರ ಸಮುದ್ರದಲ್ಲಿ ಶವವಾಗಿ ತೇಲಿದ್ದ. ತನ್ನ ಐಷಾರಾಮಿ ವಿಹಾರ ನೌಕೆ 'ಲೇಡಿ ಜಿಸ್ಲೆನ್' ನಲ್ಲಿ ವಿಹಾರ ಮಾಡಿಕೊಂಡಿದ್ದ. ರಾತ್ರಿ ವಿಪರೀತ ಕುಡಿದಿದ್ದ. ಜೋಲಿ ತಪ್ಪಿ ನೀರಿಗೆ ಬಿದ್ದು ಸತ್ತ ಎಂದರು. ಮೊಸ್ಸಾದಿನ ರಹಸ್ಯ ಹಂತಕರು ಈಜಿ ಬಂದು, ಉಡದ ಹಿಡಿತ ಕೊಡುವ ಹಿಡಿಕೆಗಳನ್ನು ಉಪಯೋಗಿಸಿ ಹಡಗನ್ನೇರಿದ್ದರು. ಕುತ್ತಿಗೆ ಮೇಲೆ ವಿಷದ ಇಂಜೆಕ್ಷನ್ ಕೊಟ್ಟು ನೀರಿಗೆ ತಳ್ಳಿದ್ದರು ಎಂದು ಗುಸುಗುಸು ಹಬ್ಬಿದ್ದು ಮಾತ್ರ ಸುಳ್ಳಲ್ಲ. ಮೊಸ್ಸಾದಿನಂತಹ ಖತರ್ನಾಕ್ ಸಂಸ್ಥೆಗೆ ಉಂಡೆನಾಮ ಎಳೆಯಲು ಹೊರಟಿದ್ದ ಖದೀಮ ರಾಬರ್ಟ್ ಮ್ಯಾಕ್ಸ್ವೆಲ್. ಅದೇನು ಆಟವೇ? ಬೇರೆಯವರಿಗೆ ಉಂಡೆನಾಮ ಎಳೆದಂತೆಯೇ? Maxwell had overestimated his strategic usefulness to intelligence community. And he paid dearly for that miscalculation.
ಈಗ 'ಪೆಗಾಸಸ್' ಬಗ್ಗೆ ಬಿಸಿಬಿಸಿ ಸುದ್ದಿ. ಈ ಸಾಫ್ಟ್ವೇರ್ ಯಾರ್ಯಾರ ಚಡ್ಡಿ ಬಿಚ್ಚಲಿದೆಯೋ? ಯಾರ್ಯಾರು ಚಡ್ಡಿ ಮತ್ತೊಂದು ಬಟ್ಟೆ ಕಳಚಿ ಕಫನ್ (ಶವದ ಬಟ್ಟೆ) ಧರಿಸಲಿದ್ದಾರೋ?? ಇಲ್ಲೂ ಇಸ್ರೇಲಿ ಕನೆಕ್ಷನ್ ಇದೆ. ಬೇಹುಗಾರಿಕೆ ಏಜೆನ್ಸಿಗಳ ಘಾಟಿದೆ. ಬೇಹುಗಾರರ ಹೆಜ್ಜೆಗುರುತುಗಳಿವೆ. ಇಸ್ರೇಲಿ ಉತ್ಪಾದನೆ ಎಂದ ಮೇಲೆ ಮೊಸ್ಸಾದಿನ ನೆರಳಂತೂ ಇರಲೇಬೇಕು. ಮುಂದಾಗಲಿರುವ ಒಂದೊಕ್ಕೊಂದು ಸಂಬಂಧವಿರದ ಜಾಗತಿಕ ಘಟನೆಗಳ ಬಗ್ಗೆ ಒಂದು ಕಣ್ಣಿಡಿ. Dots have started appearing. God knows what will be discovered when they are connected!
ಪ್ರಾಮಿಸ್ ಸಾಫ್ಟ್ವೇರ್ ಹಿಂದೆ ಬಿದ್ದ ಪತ್ರಕರ್ತ ಡೇನಿಯಲ್ ಕ್ಯಾಸಿಲಾರೋ ಸತ್ತುಹೋದ. ಆದರೆ ಅವನು ಮಾಡಿಕೊಂಡಿದ್ದ ನೋಟ್ಸ್ ಮೇಲೆ ಆಧಾರಿತ ಪುಸ್ತಕವೊಂದು ಬಂದಿತ್ತು. ಅದನ್ನು ಓದಿ ಅದರ ಮೇಲೆ ಹಿಂದೆ ಬರೆದ ಒಂದು ಇಂಗ್ಲಿಷ್ ಬ್ಲಾಗ್ ಪೋಸ್ಟ್ ಇಲ್ಲಿದೆ. ಆಸಕ್ತರಿಗೆ ಕೊಂಡಿ ಇಲ್ಲಿದೆ - The Octopus: The Secret Government and Death of Danny Casolaro by Kenn Thomas, Jim Keith
ಮೊನ್ನೆ YouTube ಮೇಲೆ ಪೆಗಾಸಸ್ ಬಗ್ಗೆ ಒಂದು ಒಳ್ಳೆ ಪ್ರೋಗ್ರಾಮ್ ನೋಡಿದೆ. ಸುಬ್ರಮಣಿಯನ್ ಸ್ವಾಮಿ ಅಧ್ಯಕ್ಷತೆ ವಹಿಸಿ ನಡೆಸಿಕೊಟ್ಟರು. ಆಸಕ್ತರು ನೋಡಬಹುದು. Dr Subramanian Swamy & Sree Iyer on Pegasus & Its Implications to the Security of Indian Society.
2 comments:
ಮಹೇಶರೆ, ಚದುರಂಗದಾಟವನ್ನು ಮೀರಿಸುವ ನಡೆಗಳ ದರ್ಶನವನ್ನು ಮಾಡಿಸಿದಿರಿ. ಆದರೆ ಈ ಚದುರಂಗದಲ್ಲಿ ಸಾಯುವವರು ಆಟದ ಪೇದೆಗಳಲ್ಲ, ನಿಜವಾದ ಮನುಷ್ಯರು! ಏನೇ ಇರಲಿ, ಇಸ್ರೇಲಿನ ಮೊಸ್ಸಾದಿಗೆ hats off ಎಂದು ಹೇಳಲೇ ಬೇಕು. ಪೆಗಾಸ್ಸಸ್ ಅನ್ನು ಹುಡುಕುವುದು ಕಷ್ಟವಾಯಿತು. ಅದನ್ನು ಓಪನ್ ಮಾಡಲು ಹೊರಟಾಗೆಲ್ಲ, malwareಗಳ ಕಾಟ. ಸುಬ್ರಹ್ಮಣ್ಯ ಸ್ವಾಮಿಯವರೇನು ಕಡಿಮೆಯೆ? ಅವರೂ ಸಹ ನನ್ನ ಕೈಗೆ ಸಿಗಲಿಲ್ಲ. ಇರಲಿ ಬಿಡಿ, ಮುಂದೊಮ್ಮೆ ನಿಮ್ಮ blogನಲ್ಲಿಯೇ ಅವರು ನನಗೆ ಸಿಕ್ಕಾರು!
ಕಾಮೆಂಟಿಗೆ ಧನ್ಯವಾದಗಳು ಸರ್.
ತಮ್ಮ ಕಂಪ್ಯೂಟರಿನಲ್ಲಿ ವೈರಸ್ ಬಂದಿದೆಯೆಂದು ತಮ್ಮ ಅಭಿಪ್ರಾಯವೇ? ಲಿಂಕುಗಳನ್ನು ತೆರೆಯಲು ಹೊರಟಾಗ malware ಕಾಟ ಎಂದಿರಿ. ಹಾಗಾಗಿ ಕೇಳಿದೆ. ಪೆಗಾಸಸ್ ಇರಲಿಕ್ಕಿಲ್ಲ ಬಿಡಿ :)
Post a Comment