ಭಕ್ತ: ದೇವರೇ, ಹುಡುಗಿಯರು ಅದೆಷ್ಟು ಸುಂದರವಾಗಿಯೂ, ಕೋಮಲವಾಗಿಯೂ ಇರುತ್ತಾರೆ. ಆದರೆ ಹೆಂಡತಿಯರು ಹೀಗೇಕೆ? ಸದಾ ಸಿಡುಕುತ್ತ ಜಗಳವಾಡುತ್ತಿರುತ್ತಾರೆ??
ದೇವರು: ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ.
ಹೀಗೆ ಹೇಳಿ ಭಗವಂತ ಮಾಯವಾದ.
ಆಂಟಿಯರೂ (ಬೇರೆಯವರ ಹೆಂಡತಿಯರು) ಕೂಡ ತುಂಬಾ ಸುಂದರವಾಗಿಯೂ, ಕೋಮಲೆಯರಾಗಿಯೂ ಇರುತ್ತಾರೆ. ಅಥವಾ ಹಾಗಿದ್ದಂತೆ ಕಾಣುತ್ತಾರೆ. ಏಕೆಂದರೆ ಆಂಟಿಯರೂ ಕೂಡ ದೇವರ ಸೃಷ್ಟಿಗಳೇ. ಅದು ಹೇಗೆ!? ಮಹಿಳೆಯೊಬ್ಬಳು ಆಂಟಿಯಾಗುವದು ಯಾವಾಗ? ಮಕ್ಕಳು ಆಂಟಿ ಆಂಟಿ ಎಂದು ಕರೆದಾಗ. ಆಂಟಿ ಅಂತಹ ಮಕ್ಕಳ ಸೃಷ್ಟಿ. ಮಕ್ಕಳು ದೇವರ ಸಮಾನ. ಹಾಗಾಗಿ ಆಂಟಿಯರು ದೇವರ ಸೃಷ್ಟಿ. ಹಾಗಾಗಿ ಅವರು ತುಂಬಾ ಇಷ್ಟವಾಗುತ್ತಾರೆ. ಹಾಗಾಗುವುದು ಮಾಯೆಯ ಪರಾಕಾಷ್ಠೆ ಎಂದು ಆಂಟಿಯರ ಸಖ್ಯ ಮಾಡಿದವರ ಅಭಿಪ್ರಾಯ. ನಂತರ ಅವರು ಆಂಟಿಯರು ಭಗವಂತನ ಸೃಷ್ಟಿ ಎಂದು ಹರ್ಗೀಸ್ ಹೇಳುವುದಿಲ್ಲ. ಅದೇನಿದ್ದರೂ ದೇವರ ಲೀಲೆ. ಸಂಸಾರದ ಮಾಯೆ ಎಂದು ಹೇಳುತ್ತಾ ತಲೆ ಮೇಲೆ ಟವೆಲ್ ಹಾಕಿಕೊಂಡು ಖಾಲಿ ಕಿಸೆಯಲ್ಲಿ ಕೈಬಿಡುತ್ತಾರೆ. ಆಂಟಿ ಸಹವಾಸ ಅಂತಹ ಶೋಚನೀಯ ಸ್ಥಿತಿಗೆ ತಂದಿರುತ್ತದೆ. ಪಾಪ.
ಬೆಂಗಳೂರಿನಂತಹ ದೊಡ್ಡ ಶಹರಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸೆಂಟ್ರಲ್ ಕ್ರೈಂ ಬ್ರಾಂಚ್ ಎನ್ನುವ ಒಂದು elite ವಿಭಾಗವಿರುತ್ತದೆ. ಅದರಲ್ಲಿ anti rowdy squad ಅನ್ನುವ ಉಪವಿಭಾಗ ಇರುತ್ತದೆ. ಅಥವಾ ರೌಡಿಸಂ ಜಾಸ್ತಿಯಾದಾಗ ಸೃಷ್ಟಿಸಲ್ಪಡುತ್ತದೆ. ನಾನಂತೂ ಅದನ್ನು ಆಂಟಿ ರೌಡಿ ಸ್ಕ್ವಾಡ್ ಎಂದೇ ಓದಿ ನಗುತ್ತಿದ್ದೆ. ರೌಡಿಯಂತಹ ಆಂಟಿಯರನ್ನು ಸಂಬಾಳಿಸಲು ಇರುವ ಪೊಲೀಸ್ ತಂಡ.
ಸಿನೆಮಾ ಒಂದರ ದೃಶ್ಯ. ಅದರಲ್ಲಿ ನಟ ಕೋಮಲ್ ಕುಮಾರ್ (ನಟ ಜಗ್ಗೇಶ್ ತಮ್ಮ) ಒಂದು ವಿಡಿಯೋ, ಸಿಡಿ ಬಾಡಿಗೆಗೆ ಕೊಡುವ ಅಂಗಡಿ ಇಟ್ಟಿರುತ್ತಾನೆ. ರಹಸ್ಯವಾಗಿ ಬ್ಲೂಫಿಲಂ ಕೂಡ ಕೊಡುತ್ತಿರುತ್ತಾನೆ. ಆಗ ಯಾರೋ ಅವನಿಗೆ ಜೋರು ಮಾಡುತ್ತಾರೆ. ಹಾಗೆಲ್ಲಾ ಬ್ಲೂಫಿಲಂ ಸಿಡಿ ಚಲಾವಣೆ ಮಾಡಿದರೆ ಆಂಟಿ ರೌಡಿ ಸ್ಕ್ವಾಡ್ ಗೆ ದೂರು ಕೊಡುವುದಾಗಿ ಹೆದರಿಸುತ್ತಾರೆ. ಹಾಗೆ ರೋಪ್ ಹಾಕಿದಾಗ ಕೋಮಲ್ ಹೊಡೆವ ರಿವರ್ಸ್ ಡೈಲಾಗ್ - ರೀ ಸ್ವಾಮೀ, ಏನು ಆಂಟಿ ರೌಡಿ ಸ್ಕ್ವಾಡಿಗೆ ಹೋಗ್ತೀರಾ? ಹೋಗಿ. ಹೋಗಿ. ಆಂಟಿ ಮತ್ತು ರೌಡಿ ಕೂಡಿಯೇ ಈ ಅಂಗಡಿ ಹಾಕಿಕೊಟ್ಟಿದ್ದು. ಗೊತ್ತಾ!?
ಅವನ ಅಂಗಡಿಯ ಅಸಲಿ ಮಾಲೀಕರು ಆ ಏರಿಯಾದ ಒಬ್ಬ ಖತರ್ನಾಕ್ ಆಂಟಿ ಮತ್ತು ಒಬ್ಬ ಖರಾಬ್ ರೌಡಿ.
ಹೀಗೆ ಆಂಟಿ ಮಹಿಮೆ ಅಪಾರ!!
2 comments:
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಬೆಟ್ಟವನ್ನು ಹತ್ತಿದಾಗಲೇ ತಿಳಿಯುವುದು ಅಲ್ಲಿರುವ ಕಲ್ಲು, ಮುಳ್ಳುಗಳು!
ತಮ್ಮ ಕಾಮೆಂಟಿಗೆ ಧನ್ಯವಾದ, ಸುನಾಥ್ ಸರ್!
ನೀವು ಬೆಟ್ಟ, ಹತ್ತುವುದು, ಅದರ ಕಷ್ಟಗಳು ಎಂದಾಗ ಒಂದು ಗಾದೆ ನೆನಪಾಯಿತು....
It isn’t the mountain ahead that wears you out; it is the grain of sand in your shoe.
:)
Post a Comment