Sunday, June 24, 2012

ಬೋಲ್ಡಿ ಆಂಟಿ ಮತ್ತು ಬಾಲ್ಡಿ ಅಂಕಲ್

ಸಾಬ್....ನಮ್ಮದು ಬೇಗಂ ಈಗಿತ್ತಲಾಗೆ ಬೋಡಿ ಆಗಿ ಬಿಟ್ಟಿದೆ.....ಅಂತ ನಿಟ್ಟುಸಿರು ಬಿಟ್ಟ ಕರೀಂ.

ನಿಟ್ಟುಸಿರು ಬಿಡುತ್ತ ಬಿಡುತ್ತ ತನ್ನ ಬಿಳಿ ಸಾಬರ ಟೊಪ್ಪಿ ತೆಗೆದು ಕರಚೀಪ್ ನಿಂದ ತನ್ನ ಬಕ್ಕ ತಲಿ ಮ್ಯಾಲಿನ ಬೆವರು ವರಸಿಕೊಂಡು ಒಂದು ಕ್ಷಣ ಹಾಯ್ ಅನ್ನೋ ಫೀಲಿಂಗ್ ಅನುಭವಿಸಿದ ಲುಕ್ ಕೊಟ್ಟ ಏಜಿಂಗ್ ಬಾಲ್ಡೀ ಅಂಕಲ್ ಕರೀಂ.

ಅವನ ಬಕ್ಕ ತಲಿ ನೋಡಿ.....ಬೋಡಾ ಇಲ್ಲ ಬೋಡ್ಯಾ ಅಂತ ಅಂದ್ರ ಇವನಿಗೆ ಅನ್ನಬೇಕು. ಆದ್ರ ಹೆಂಡ್ತಿ ಬೋಡಿ ಆಗ್ಯಾಳ್ ಅಂತಾನ ಅಲ್ಲ? ಏನು ಇದರ ಅರ್ಥ?

ಯಾಕ್ ಸಾಬರ ನಿಮ್ಮ ಬೇಗಂ ಬೋಡಿ ಆದರು? ತಲಿ ವಳಗ ಔಷಧದಿಂದ ತೆಗಿಲಿಕ್ಕೆ ಆಗದಷ್ಟು ಹೇನು, ಕೂರಿ, ತಗಣಿ ಇತ್ಯಾದಿ  ಆಗಿ ಬಿಟ್ಟಿದ್ದವು ಏನು? ಅದಕ್ಕ ಸೀದಾ ಬಂಡಾಯಕಾರಿ ನಿರ್ಣಯ ತೆಗೆದುಕೊಂಡು ಬೋಡಿ ಹೊಡ್ಸಿಬಿಟ್ಟರು ಏನು?....ಅಂದೆ.

ಏನು ಮಾತಾಡತೀರಿ ಸಾಬ್?....ಸ್ವಲ್ಪ ಗರಂ ಆದಂಗ ಇದ್ದಾ ಕರೀಂ.

ಮತ್ತೆ ನೀವ್ ಹೇಳಿದರಲ್ಲ ಸಾಬ್ರ?.....ನಿಮ್ಮ ಹೆಂಡ್ತಿ ಬೋಡಿ ಆಗ್ಯಾಳ್ ಅಂತ. ಬೋಡಿ ಅಂದರಾ ತಲಿ ಬೋಳಿಸ್ಕೊಂಡವರು ಅಂತ.

ಯಾ ಅಲ್ಲಾ.....ತೋಬಾ .....ತೋಬಾ.....ನಿಮ್ಮದು ತಲಿ ......ನಮ್ಮ ಬೇಗಂ ಬೋಳಿಸಕೊಂಡಾಕಿ  ಅನ್ನೋರ್ ಇಡೀ ಖಾಂದಾನ್ ಬೋಡಿ ಮಾಡ್ಲಿ ಆ ಖುದಾ......ಸಿಕ್ಕಾಪಟ್ಟೆ ಸಿಟ್ಟಿಗೆದ್ದು ನನಗೆ ಮತ್ತು ನಮ್ಮ ವಂಶಕ್ಕೆ ಶಾಪ ಹಾಕಿದ ಕರೀಂ.

ಸಿಟ್ಟ ಆಗ್ ಬ್ಯಾಡ್ರಿ ಸಾಬರ. ಬೋಡಿ ಆದಳು ಅಂದ್ರಿ. ಅದಕ್ಕ ಬೋಡಿ ಅನ್ನೋದರ ಅರ್ಥ ಹೇಳಿದ್ರ ನೀವು ತಪ್ಪ ತಿಳ್ಕೊಂಡು ಗರಂ ಆಗಿ ಬಿಟ್ಟಿರಿ. ಗುಸ್ಸಾ ಕ್ಯಾಕರ್ಸಿ ಥೂಕೋಜಿ.....ಅದು ವಳ್ಳೆದು ಅಲ್ಲ ಸೇಹತ್ ಗೆ......ಅಂದೆ.  ನನ್ನ ಭಾಷಾ ಸಹಿತ ಅವನ ತರಹ ಆಗಿದ್ದು ನೋಡಿ ಸಹವಾಸ ದೋಷ  ಅಂದುಕೊಂಡೆ.

ಹಾಗೇನು ಇಲ್ಲ ಸಾಬ್. ನಮ್ಮ ಬೇಗಂದು  ನಾಗಿನ್ ಬಾಲ್ ಹಾಂಗೆ ಅವೇ....ಕೊಬ್ಬರಿ ಎಣ್ಣಿ  ಹಚ್ಚಿ ಮಾಲಿಶ್ ಮಾಡಿ ಮಾಡಿ ಕರಿ ಕರಿ ಬಾಲ್ ಮಸ್ತ ಮಿಂಚಿ ಮಿಂಚಿ  ಕಾಣತಾವೆ.

ನಾಗಿನ್ ಬಾಲ್ ಅಂದ್ರ ಏನ್ರಿ? ನಿಮ್ಮ ಹೆಂಡ್ತಿ ತಲಿ ವಳಗ ಕೇವಲ ಹೇನು, ಕೂರಿ ಆಗ್ಯಾವ್ ಅಂತ ಮಾಡಿದ್ದೆ. ಏನು ಇದು? ಹಾವು, ಹೆಬ್ಬಾವು ಎಲ್ಲ ಸೇರಿಕೊಂಡಾವು ಅಂತ ಆತು.ಛೆ...ಛೆ.

ನಿಮ್ಮ ತಲಿ ಸಾಬ್....ಸುಬೆ ಸುಬೆ ಚಾಯ್ ಆಗಿಲ್ಲ ಕ್ಯಾ? ಅಲ್ಲಾ ......ನಮ್ಮ ಹೆಂಡ್ತಿ ತಲಿ ವಳಗೆ ಸಾಂಪ್, ಅಜಗರ್  ಯಾಕೆ ಬರಬೇಕು?........ಸಿಕ್ಕಾಪಟ್ಟೆ ಇರಿಟೇಟ್ ಆಗಿ ಹೇಳಿದ ಕರೀಂ. ಹೆಂಡ್ತಿ ತಲಿವಳಗ ಹಾವು, ಹೆಬ್ಬಾವು ಅಂದ್ರ......

ಮತ್ತೇನ್ರಿ ? ನಾಗಿನ್  ಬಾಲ್ ಅಂದ್ರಿ?....ದನಿ ಏರ್ಸಿ ಹೇಳಿದೆ. ನನಗೂ ಸ್ವಲ್ಪ ಉರದಿತ್ತು.

ಅಲ್ಲ ಸಾಬ್.....ಉದ್ದ ಚಂದ ಕರ್ರನೆ ಬಾಲ್  ಇರೋ ಲೇಡೀಸ್ ಗೆ ಸಂಸ್ಕ್ರತ್ ನಲ್ಲಿ ಏನೋ ನಗೀನಾ ವಾಣಿ ಅಂತಾರಲ್ಲ ಸಾಬ್.....ಹಾಗೆ ನಮ್ಮ ಬೇಗಂ ಬಾಲ್ ಅವೇ ಅಂತ.

ಹೋಗ್ಗೋ ಸಾಬರ.....ನಾಗವೇಣಿ ಅಂತ ಏನ್ರೀ ?

ಹಾಂ......ಅದೇ ನೋಡಿ ಸಾಬ್.....

ನಾಗವೇಣಿ ಅನ್ನಲಿಕ್ಕೆ ನಗೀನಾ ವಾಣಿ ಅಂತೀರಿ ಅಲ್ಲರಿ......ನಿಮ್ಮ ತಲಿ.

ಇನ್ನು ಕೃಷ್ಣವೇಣಿ ಅನ್ನಲಿಕ್ಕೆ ಕರೀನಾ ವಾಣಿ ಅನ್ನೋ ಪೈಕಿ ಇವ....ಮಂಗ್ಯಾನ್ ಕೆ. ಹೈಸ್ಕೂಲ್ ನಲ್ಲಿ ಸಂಸ್ಕ್ರತ ಬ್ಯಾರೆ ತೊಗೊಂಡಿದ್ದ.

ಸಾಬರ....ಟೈಮ್ ಭಾಳ್  ಆತು.....ಬೋಡಿ ಅಂದ್ರ ತಿಳಿಲಿಲ್ಲ.

ಅದೇ ಸಾಬ್.....ನಮ್ಮ ಬೇಗಂ ಸಿಕ್ಕಾಪಟ್ಟೆ ತಿರಸಟ್ಟ ಆಗಿ ಬಿಟ್ಟಾಳೆ ಸಾಬ್. ಎದರು ಎದರು ಉತ್ತರ ಕೊಡ್ತಾಳೆ ಸಾಬ್. ಮಸಡಿ ಮ್ಯಾಲೆ ಹೊಡದ ಹಾಗೆ ಮಾತು. ಒಂದು ನಯ ಇಲ್ಲ ವಿನಯ ಇಲ್ಲ. ಯಾವಾಗಲೂ ಬ್ಯಾಕ್ ಸೈಡ್ ನಲ್ಲಿ ಬ್ಲಾಸ್ಟ್ ಆದ ಮಂದಿ ಹ್ಯಾಂಗೆ ಚಿಟಿ ಚಿಟಿ  ಚೀರಿ ಚೀರಿ ಮಾತಾಡ್ತಾರೆ ನೋಡಿ...ಹಾಗೆ....ತುಂಬಾ ಬಕ್ತಮೀಜ್ ರೀತಿನಲ್ಲಿ ಮಾತಾಡ್ತಾಳೆ.

ಓಹೋ ಹಾಂಗ ಏನು?

ಆದ್ರ ಹಿಂಗೆಲ್ಲ ವರ್ತನೆ ಮಾಡೋದಕ್ಕೂ ಮತ್ತೆ ಬೋಡಿ ಆಗೋದಕ್ಕು ಏನು ಲಿಂಕ್ ಸಾಬರ?

ಅದೇ ಸಾಬ್....ಹೀಗೆ ತಿರಸಟ್ಟ ರೀತಿನಲ್ಲಿ ಮನಸ್ಸಿಗೆ ನೋವು ಆಗೋ ರೀತಿ ಮಾತಾಡೋದಕ್ಕೆ ಬೋಡಿ ಅಂತಾರಂತೆ ಸಾಬ್.

ಸಾಬರ....ಬೋಡಿ ಅಂತ ಅಲ್ಲ ಬೋಲ್ಡ್ ಇರಬೇಕು ನೋಡ್ರಿ.

ಹಾಂ ಅದೇ ಇರಬೇಕು ಸಾಬ್. ಮಾತಿಗೊಮ್ಮೆ ಬೋಲ್ಡ್ ಬೋಲ್ಡ್ ಅಂತಾಳೆ....ಕೇಳಿದ್ರೆ ಆಜ್ ಮೈ ಜವಾನ್ ಹೋಗಯೀ ಹೂನ್ .....ಗುಲ್ ಸೆ ಗುಲಸ್ತಾನ್ ಹೋಗಯೀ ಹೂನ್. ಬೋಡಿ ಸೆ ಬೋಲ್ಡೀ ಹೋ ಗಯೀ ಹೂನ್ ....ಎ ದಿನ ಎ ಸಾರಿ ಮಹೀನ ............ಅಂತ ಗಾನ ಹಾಡಿ ಹಾಡಿ ನಮಗೆ insult ಮಾಡ್ತದೆ ನಮ್ಮ ಬೇಗಂ....ಸಾಬ್.

ಹೌದ್ರಿ ಸಾಬರ....ಅದಕ್ಕ ಏನ ಮಾಡಲಿಕ್ಕೆ ಬರೋದಿಲ್ಲ.....1960 ರ ಟೈಮ್ ನಲ್ಲಿ ಕೆಲೋ ಮಂದಿ ಹೆಂಗಸೂರು ಹಾಕ್ಕೊಂಡ ವಸ್ತ್ರ ಎಲ್ಲ ಕಳೆದು ಅದಕ್ಕ ಬೆಂಕಿ ಹಚ್ಚಿ, ಬೆಂಕಿ ಸುತ್ತಾ  ನಂಗಾ ನಾಚ್ ಮಾಡಿ ತಾವು ಬೋಲ್ಡ್ ಆದ್ವಿ, ತಾವು ಲಿಬರೆಟೆಡ್ ಆದ್ವಿ ಅಂತ ಖುಷಿ ಪಟ್ಟಿದ್ದರಂತ. ಅಂತವರು ಮುಂದೆ ಹಿಪ್ಪಿ ಆಗಿ ಹರೋಹರ ಆಗಿದ್ದು ಗೊತ್ತದ. ವಿನಾಶ್ ಕಾಲೇ ವಿಪರೀತ್ ಬುದ್ದಿ ನೋಡ್ರಿ.

ಹೇಳ್ರಿ ನಿಮ್ಮ ಬೇಗಂ ಆ ಹಿಪ್ಪಿ ಮಂದಿ ಕಥಿ....ಆವಾಗರ ಬುದ್ಧಿ ಬಂದು ಸ್ವಲ್ಪ ನಯ ವಿನಯ ಕಲ್ತಾಳು.

ಟ್ರೈ ಮಾಡ್ತೇನಿ ಸಾಬ್.

ಖುದಾ ಹಾಫಿಜ್ ಸಾಬ್.

ಹೋಗಿ ಬರ್ರಿ ಸಾಬರ.....ದೇವರು ಒಳ್ಳೇದ್ ಮಾಡ್ಲಿ.

ಪಾಪ ಬೋಡ್ಯಾ ಕರೀಂ ಸಾಬರು....ಅವರ ಬೋಲ್ಡೀ ಬೇಗಂ.


Part 2 ಇಲ್ಲಿದೆ. http://maheshuh.blogspot.com/2012/06/2.html

No comments: