Wednesday, June 27, 2012

ಬೋಲ್ಡಿ ಆಂಟಿ ಮತ್ತು ಬಾಲ್ಡಿ ಅಂಕಲ್ - 2

ಮೊನ್ನೆ ಮೊನ್ನೆ ಸಾಬರಿಗೆ ಅವರ ಬೋಲ್ಡಿ ಬೇಗಂ ಜತಿ ಹ್ಯಾಂಗ ಡೀಲ್ ಮಾಡ್ಬೇಕು ಅನ್ನೋದರ ಬಗ್ಗೆ ಟಿಪ್ಸ್ ಕೊಟ್ಟಿದ್ದೆ. ಅದರ ರಿಸಲ್ಟ್ ಬಗ್ಗೆ ಕ್ಯುರಿಯೋಸಿಟಿ ಇತ್ತು. ಇವತ್ತು ಸಾಬರು ಸಿಕ್ಕರ ಕೇಳ್ಬೋದು ಅಂತ ಅಲ್ಲೇ ಮಥುರಾ ಭವನ ಬಾಜೂಕ, ಭೀಮ್ಯಾನ ಚುಟ್ಟಾ ಅಂಗಡಿಯಾಗ, ಒಂದು 420 ಮಾವಾಕ್ಕ ಆರ್ಡರ್ ಮಾಡಿ, ಮಾವಾ  ತಯಾರ ಆಗೋದ ಕಾಯ್ಕೋತ್ತ ನಿಂತಿದ್ದೆ. ಅಷ್ಟರಾಗ ಕರೀಂ ಹತ್ತಿಕೊಳ್ಳದ ಕಡಿಂದ ಬಂದ.

ಸಲಾಂ.....ಸಾಬ್.....ಅಂತ ಅವರ ರೀತಿ ಒಳಗ ನಮಸ್ಕಾರ ಮಾಡಿದ.

ಸಲಾಂ.....ಏನಪಾ ಕರೀಂ....ಆರಾಮ ಏನಪಾ?.....ಅಂದೆ.

ಹಾಂ.....ಸಾಬ್....ಫುಲ್ ಆರಾಮ ಈಗ.....ಅಂತ ಹೇಳಿ ಕರೀಂ ನಿರಾಳ ಆದ.

ಅಷ್ಟರಾಗ ಭೀಮು ಮಾವಾ  ಮಾಡಿ, ಪುಡ್ಕಿ ಕಟ್ಟಿ ಕೊಟ್ಟಾ.

ಮಾವಾ ತೆಗೆದು ಬಾಯಿ ಒಳಗ ಜಡಕೊಂಡು, ಅದನ್ನ ದವಡಿ ಒಂದು strategic ಮೂಲಿ ಒಳಗ ಸ್ಥಾಪನಾ ಮಾಡಿ, ಕರೀಮ ಜೊತಿ ಮಾತುಕತಿ ಹಚ್ಚಿಕೊಂಡೆ.

ಮತ್ತೇನ ಸಾಬ್ರಾ .....? ನಿಮ್ಮಾ ಬೋಲ್ಡೀ ಬೇಗಂ ಸುಧಾರಿಸ್ದಾರಾ ಏನು?......ಅಂತ ಕೇಳಿದೆ.

ಹಾಂ ಸಾಬ್....ಒಂದ ರೀತಿನಲ್ಲಿ....ಆದ್ರೆ ನಾನೇ ಸುಧಾರಿಸ್ಬೇಕಾಯ್ತು.....ಅಂದ ಕರೀಂ.

ಅಂದ್ರ ಏನಪ?

ಇಲ್ಲ ಸಾಬ್....ಅವತ್ತು ನಿಮ್ಮ ಜೊತಿ ಮಾತುಕತಿ ಆದ ಮರ್ದೀನಾ ಭಾಳ ಸುಸ್ತಾಗಿ ಸಂಜಿ ಮನಿಗೆ ಹೋದೆ ಸಾಬ್....ಜೊತಿಗೆ ರಿಲ್ಯಾಕ್ಸ್ ಮಾಡೋಕೆ ಅಂತಾ ಮಸಾಲಾ ಶೇಂಗಾ ಮತ್ತೆ ಒಂದು 120 ml ಸ್ಕಾಚ ವಿಸ್ಕಿ .....ಮನಿಗೆ ಹೋಗಿ ತಂಪಾದ ಘಜಲ್ ಕೇಳ್ತಾ ಕೇಳ್ತಾ ರಿಲ್ಯಾಕ್ಸ್ ಮಾಡಿದೆ ಸಾಬ್.....ಭಾಳ ಹಾಯ್ ಅನ್ನಿಸ್ತು.....ಅಂತ ಒಂದು ಬ್ರೆಕ್ ತೊಗೊಂಡಾ ಕರೀಂ.

ನೋಡಿ ಸಾಬ್.....ಖಾನಾ ತಯಾರ ಇರಬೋದೇನೋ ಅಂತಾ ಕೇಳೋಣಾ ಅಂತಾ ಬೇಗಂ ರೂಮಿಗೆ ಹೋದೆ ಸಾಬ್..ಅಲ್ಲಿ ಅಕಿದು usual Facebook ಹುಚ್ಚು ಮುಂದುವರ್ದಿತ್ತು.....ಅದು ಕ್ಯಾಮೆರಾ ಹಾಕ್ಕೊಂಡಿ ಯಾವದೋ ಪುರಾನಾ ಆಶಿಕ್ ಜೊತಿ ಹಾಡಿನ ಬಂಡಿ ಜೋರ್ ನಡೆದಿತ್ತು ಸಾಬ್....ಅಂತ ಬೇಗಂ ಹುಚ್ಚು ಇನ್ನು ಬಿಟ್ಟಿಲ್ಲಾ ಅಂತ confirm ಮಾಡಿದ.

ಬೇಗಂ.....ಖಾನಾ ತಯಾರ್ ಐತೆ ಕ್ಯಾ? ಬಡಸ್ತಿ ಕ್ಯಾ? ಅಂತ ಕೇಳಿದೆ ಸಾಬ್. ಅದಕ್ಕೆ ಅಕಿ....ಎಲ್ಲಿದು ಖಾನಾ ಭಾಡ್ಕೋವ್....ಭಾಡ್ ಮೇ ಜಾ.....ಅಂತ ನನಗೆ ಬೈದು ಬಿಟ್ಟು....ತನ್ನ Facebook ಮಂಗ್ಯಾತನ ಮುಂದುವರ್ಸಿದಳು ಸಾಬ್.....ಅಂತ ನಿಟ್ಟುಸಿರು ಬಿಟ್ಟು ಇನ್ನೂ ಬಾಕಿ ಅದೇ ಅನ್ನೋ ಲುಕ್ ಕೊಟ್ಟ ಕರೀಂ.....ಮುಂದಿನ ಕ್ಲೈಮಾಕ್ಸ್ ಗೆ ಕಾದು ಕೂತೆ.

ಅಲ್ಲಾ ಸಾಬ್ ಯಾವ ಹಾಡು ಅಂತಾ ಪುರಾನಾ ಆಶಿಕ್ ಜತೆ ಹಾಡೋದು ನಮ್ಮಾ ಬೇಗಂ?....

ಯಾವ ಹಾಡು ಹಾಡಿದರು ಹಾಡಿನ ಬಂಡಿ ವಳಗ?

ನೋಡಿ ಸಾಬ್....ನಮ್ಮಾ ಬೇಗಂ DDLJ .....ಡೋಲಿ ಸಜಾಕೆ ರಖನಾ....ಮೆಹಂದಿ ಲಗಾಕೆ ರಖನಾ....ಹಾಡಿದರೆ ಆಕಿ ಹರಾಮಕೋರ್ ದೋಸ್ತ ಏನು ಹಾಡಬೇಕು ಆ ಕ್ಯಾಮೆರಾದಾಗೆ?......ಕೋಪ ಉಕ್ಕುತ್ತಿತ್ತು.

ಏನ ಹಾಡಿದ್ರಿನಪಾ ನಿಮ್ಮಾ ಬೇಗಂ ಮಾಜಿ ಡಾವ್ ?.....ಅಂತ ಕೇಳಿದೆ.

ಸಾಬ್....ಅವನು ರೂಲ್ಸ್ ಬಿಟ್ಟು.....ಲುಂಗಿ ಉಠಾಕೆ ರಖತಾ.....ಪುಂಗಿ ಸಜಾಕೆ  ರಖತಾ....ಅಂತಾ ಡಬಲ್ ಮೀನಿಂಗ್ ಸಾಂಗ್ ಹಾಡಿ ಬಿಟ್ಟ ಸಾಬ್....ಅದಕ್ಕೆ ನಮ್ಮ ಬೇಗಂ ಕ್ಯಾಕಿ ಹಾಕಿ, ತೊಡೆ ತಟ್ಟಿ ನಕ್ಕಳು ಸಾಬ್.....ಅಂತ ಕರೀಂ ಒಂದು ಉಸರು ಎಳೆದುಕೊಂಡ.

ಸಾಬ್....ಗೊತ್ತಿಲ್ಲ ಸಾಬ್....ಎಲ್ಲಿಂದ ಎಲ್ಲಿಂದ ಗುಸ್ಸಾ ಬಂತು ಅಂತ...ಅಕಿನ್ನಾ ದರ ದರ ಎಳ್ಕೊಂಡು ಬಂದು....ಬಗ್ಗಿಸಿ ಬೆನ್ನ ಮ್ಯಾಲೆ ದಬ ದಬ ಅಂತ ಸರೀತ್ನಾಗೆ ಗುದ್ದಿ ಬಿಟ್ಟೆ.....ಅದೂ ಮಳಕೈಯಿಂದ.... ಬೆನ್ನು ಸೀದಾ ಮಾಡೋಕೆ ಆಗದೆ ತಿರುಗಿದಳು ನೋಡಿ.....ಬ್ಯಾಕ್ ಸಾಯಿಡ್ ನೋಡ್ತಾ ನೋಡ್ತಾ ಇನ್ನೂ ಕೋಪಾ ಜಾಸ್ತಿ ಬಂದು, ಒಂದು ಒತ್ತಾ ಜಾಡ್ಸಿ ಒದ್ದೆ  ನೋಡಿ.....ಸೀದಾ ಹಾರಿ ಹೋಗಿ ಮೂಲೆ ಸೇರ್ಕೊಂಡು ಅಳೋಕೆ ಶುರು ಮಾಡಿದಳು......ಅಂದ ಕರೀಂ. ಮುಖದಲ್ಲಿ ಒಂದು ತರಹದ ಮಿಕ್ಸಡ್ ಫೀಲಿಂಗ್ ಇತ್ತು.

ಇದು ಭಾಳ್ ವಾಯೋಲೆಂಟ್ ಆತಲ್ಲರೀ ಸಾಬ್ರಾ?......ಎಲ್ಲರಾ ಸತ್ತ ಗಿತ್ತಾ ಹೋದಾರು ನಿಮ್ಮ 10 ಲಾಖ್ ರುಪಯ್ಯಾ ಮೆಹರವಾಲಿ ಬೇಗಂ.....ಅಂತ ಸಟಲ್ ಆಗಿ ವಾರನಿಂಗ್ ಕೊಟ್ಟೆ.

ಇಲ್ಲಾ ಸಾಬ್.....ಮ್ಯಾಲೆ ಏಳೋಕಾಗದೆ ಮೂಲೆನಲ್ಲಿ ಬಿದ್ದಿದ್ದರೂ, ಜಾಕೆಟ್ನಾಗಿಂದ ಮೊಬೈಲ್ ತೆಗೆದು ಆಕಿ ಅಮ್ಮಿಜಾನಿಗೆ ಫೋನ್ ಹಚ್ಚಿದಳು.....ಅವಳಾ ಅಮ್ಮೀ ತಾಪಡ್ತೋಪ್ ಬಂದಳು.....ಗಾಡಿನಾಗೆ......ಜೊತಿಗೆ ಆಕಿ ಕಲ್ಲೂ ಮಾಮದ್ ಮಾಮೂ ಮತ್ತು ಕಲ್ಲೂ ಮಾಮಿ.....ಎಲ್ಲರು ಕೂಡಿ ಅಕಿನ್ನ ಎತ್ತಿ ತವರು ಮನಿಗೆ ಕರ್ಕೊಂಡು ಹೋದರು.....ಹಕೀಮ್ ಸಾಬ್ ಇಲಾಜ್ ನೆಡ್ಸಿದಾರೆ ಅಂತೆ.....ಇನ್ನೂ ಒಂದು ತಿಂಗಳು ಬೇಕಂತೆ.....ಅಲ್ಲಿ ತನಕಾ ಆರಾಮ ಸಾಬ್.....ಬನ್ನಿ ಸಂಜಿಕ್ಕೆ  ಬರ್ರೀ ಸರ್ರಾ ಪಾರ್ಟಿ ಮಾಡೋವಾ....ಫುಲ್ ಕೇರಫ್ರೀ ಪಾರ್ಟಿ.....ಅಂತ ಮಸ್ತ ಖುಷಿಂದ ಬೇಗಮ್ಮನ ಬರಕಾಸ್ತ ಮಾಡಿದ ಸುದ್ದಿ ಎಲ್ಲ ಹೇಳಿ ನಿರಾಳ ಆದರು ನಮ್ಮ ಸಾಬರು.

ಆತ್ರೀ ಸಾಬ್ರ .....ಪಾರ್ಟಿ ಮಾಡೋಣಂತ ....ಸಂಜಿಕ್ಕ ಸಿಗತೇನಿ....ಈಗ ಖುದಾ ಹಾಫಿಜ್.

ಖುದಾ ಹಾಫಿಜ್....ಸಾಬ್.

ಸಾಬರ ಸಂಜಿ ಪಾರ್ಟಿಗೆ ತಯಾರಿ ಮಾಡ್ಲಿಕತ್ತಿದೆ.

** ಖರೇ ಅಂದ್ರಾ ಇದನ್ನ ಮುಂದಿನ ಆರ್ಟಿಕಲ್ ಗೆ ಇಂಟ್ರೋ ಅಂತ ಬರೆದೆ. ಇಂಟ್ರೋ ನಾ ಇಷ್ಟು ದೊಡ್ಡದಾಗಿ ಹೋತು. ಕಷ್ಟ(?) ಪಟ್ಟು ಬರೆದಿದ್ದು. ವೇಸ್ಟ್ ಹ್ಯಾಂಗ ಮಾಡಲಿ? ಅದಕ್ಕ ಸುಮ್ಮನಾ ಜಾಸ್ತಿ ಪಬ್ಲಿಸಿಟಿ ಕೊಡದ ಇಲ್ಲೇ ಹಾಕಿರ್ತೆನಿ. ಹಿಂದ ಮುಂದ ಇಲ್ಲದ ಹಾಪ್ ಆರ್ಟಿಕಲ್ ಅನ್ನಿಸಿದರ ಸಾರೀ.

No comments: