Friday, February 06, 2015

ಹಟ್ರಪ್ಪ ಬಗ್ಗಿಸಿಕ್ಯಾರೋ

ಶುಕ್ರವಾರ ಮಧ್ಯಾನ ನಾಲ್ಕ ಘಂಟೆ ಹೊತ್ತಿಗೆ ಯಾರರ IT ಮಂದಿ ಹಿಡದು, 'ರೀ, ಬರ್ರಿ. ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಬಗ್ಗೆ ಮಾತಾಡೋಣ. ಚರ್ಚೆ ಮಾಡೋಣ,' ಅಂತ ಮಾತ್ರ ಕರಿಬ್ಯಾಡ್ರೀ.

ಅವರು ಭಗ ಭಗ ಅಂತ ಉರ್ಕೊಂಡು, 'ನಿನ್ನಾಪನಾ, ಇಲ್ಲೆ ನಮ್ಮ ಪರಿಸ್ಥಿತಿ ಭಾಳ ಖರಾಬ್ ಐತಿ. ಶುಕ್ರವಾರ ಸಂಜಿ ಆತ. ಆದರೂ ಇನ್ನೂ ಅದು ಇದು ಸುಡುಗಾಡು ಸುಂಟಿ ಅಂತ ನಮ್ಮ ಕೆಲಸ ಮುಗಿವಲ್ಲತು. ವೀಕೆಂಡ್ ಬ್ಯಾರೆ ಫುಲ್ ಕೆಲಸ ಇರೋ ಲಕ್ಷಣ ಐತಿ. ಅಂತಾದ್ರಾಗ ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಬಗ್ಗೆ ಮಾತಾಡೋಣ ಬಾ ಅಂತೀರಲ್ಲರೀ???? ಬುದ್ಧಿ ಗಿದ್ದಿ ಐತೋ ಇಲ್ಲೋ???'

'ಹಾಂಗೆನ್ರೀ???? ಅಂದ್ರ ನೀವು IT ಮಂದಿ ಬ್ಯಾರೆನೇ ಸಂಸ್ಕೃತಿ ಬಗ್ಗೆ ಮಾತಾಡ್ತಿರೀ ಬಿಡ್ರೀ. ನಿಮ್ಮ ಸಂಸ್ಕೃತಿ ಅದೇ. ಅದು ಬ್ಯಾರೆನೇ ಸಂಸ್ಕೃತಿ!'

'ಯಾವದಂತೀಪಾ ಶಾಣ್ಯಾ ನಮ್ಮ IT ಸಂಸ್ಕೃತಿ? ಹೇಳು? ಯಾವದು IT ಕಂಪನಿ ಸಂಸ್ಕೃತಿ?'

'ಹಟ್ರಪ್ಪ ಬಗ್ಗಿಸಿಕ್ಯಾರೋ' !!!

ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಹ್ಯಾಂಗಿತ್ತೋ ಗೊತ್ತಿಲ್ಲ. ಆದ್ರ ಈ ನಮ್ಮ IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಅಂದ್ರ ಅವನೌನ್ ಮೋಹಿನಿ ದೆವ್ವ ಇದ್ದಾಂಗ. ಗಾಣದಾಗ ಕಬ್ಬು ಹಾಕಿ, ಅರೆದು, ರಸ ಎಲ್ಲ ಹೀರಿ, ಸಿಪ್ಪಿ ಒಗದ ಫೀಲಿಂಗ್. ಅಷ್ಟು ಸುಸ್ತು ವೀಕೆಂಡ್ ಬಂತು ಅಂದ್ರ.

ಶಿವನೇ ಶಂಭುಲಿಂಗ!

IT ಬಗ್ಗೆ ಇಷ್ಟೆಲ್ಲ ಹೇಳಿದರೂ ನಮ್ಮ ಆಫೀಸ್ ಕಲೀಗ್ಸ್ ಗೆ ಎಲ್ಲಾ ಒಂದು ದೊಡ್ಡ ಥ್ಯಾಂಕ್ಸ್. ಅವರು ಇದ್ದಾರ, ಭಾಳ ಶ್ರಮ ಪಡ್ತಾರ, ಬಾಸ್ ಒಳ್ಳೆಯವ ಅದಾನ ಅಂತ ಹೇಳಿಯೇ ನಾವು ಬಚಾವು. ಇಲ್ಲಂದ್ರ ಈ IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಕಾಲದಾಗ ಎಂದೋ ಮಟಾಶ್! ಫಿನಿಶ್!

ಇನ್ನೂ ಒಂದೆರೆಡು ಕಾಲ್, ಮೀಟಿಂಗ್ ಅದಾವು. ಹೋಗಿ ಅವನ್ನೂ ಬಗ್ಗಿಸಿಕ್ಯಾರ ಅಲ್ಲಲ್ಲ ಮುಗಿಸಿಕ್ಯಾರ, ಹಡಪದ ಪೆಟ್ಟಿಗೆ ಕಟ್ಟಿ, ಮನಿ ಹಾದಿ ಹಿಡಿತೇನಿ. ವರ್ಕಿಂಗ್ ಫ್ರಾಂ ಹೋಂ ಇರೋ ಕಾರಣ ಮನಿ ಹಾದಿ ಹಿಡಿಯೋದು ಅಂದ್ರ ಕಂಪ್ಯೂಟರ್ ಡಬ್ಬಿ ಮುಚ್ಚಳ ಮುಚ್ಚಿ, ಚೀಲದಾಗ ಇಡೋದು ಅಷ್ಟೇ! :)

ವಾರಾಂತ್ಯ ಎಲ್ಲರಿಗೂ ಸ್ವಲ್ಪ ಒಳ್ಳೆ ರೆಸ್ಟ್ ಸಿಗಲಿ. ವಿಶ್ರಾಂತಿ ಆಗಲಿ. ಶುಭ ವಾರಾಂತ್ಯ. ಮತ್ತ ಸೋಮವಾರ ಮುಂಜಾನೆಯಿಂದ ಮಂಡೆ ಬಿಸಿ ಶುರು. IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿಯ ಪ್ರೇತ ನೃತ್ಯ ಝಕ್ಕ ನಕ್ಕ ರಿಟರ್ನ್ಸ್!

ನಮಸ್ಕಾರ!

No comments: