Friday, February 06, 2015

ಪ್ಯಾಂಟ್ ಹಾಕ್ಕೊಂಡುಬಿಟ್ಟರೆ ಸಾಮಾನು ನೋಡೋದು ಹ್ಯಾಂಗೆ??

'ಏ ಇಕಿನ, ನಾ ಪ್ಯಾಟಿಗೆ ಹೋಗಿ ಬರ್ತೇನಿ!' ಅಂದ ಗಂಡ. ಅವಂದು ಗುಟ್ಕಾ ಮುಗಿದಿತ್ತು. ತಲಬು ಎದ್ದಿತ್ತು. ಎದ್ದ ತಲಬು, ಹಿಡಿದ ಕಿಲುಬು ಭಾಳ ಡೇಂಜರ್. ನಿರ್ಲಕ್ಷ ಮಾಡಲೇಬಾರದು.

'ಏ, ಸ್ವಲ್ಪ ತಡೀರಿ. ನಾ ನನ್ನ ಕಿರಾಣಾ ಲಿಸ್ಟ್ ತಯಾರ್ ಮಾಡಿ ಕೊಡತೇನಿ. ಎಲ್ಲ ತೊಗೊಂಡು ಬಂದೀರಂತ,' ಅಂದಳು ಹೆಂಡತಿ. ಅಕಿ ಹೋಂ ಮಿನಿಸ್ಟರ್. ದೊಡ್ಡ ಜವಾಬ್ದಾರಿ.

'ಸರಿ, ಸರಿ. ಲಗೂ ಲಗೂ ಕೊಡು,' ಅನ್ಕೋತ್ತ ಗಂಡ ಡ್ರೆಸ್ ಚೇಂಜ್ ಮಾಡಲಿಕ್ಕೆ ಹೋದ.

ಭರಕ್ಕನೆ ಲುಂಗಿ ಕಳದು ಪ್ಯಾಂಟ್ ಹಾಕ್ಕೊಂಡು, ಮ್ಯಾಲಿಂದ ಒಂದು ಬುಶ್ ಶರ್ಟ್ ಹಾಕ್ಕೊಂಡು ಬಂದುಬಿಟ್ಟ. ಅದಕ್ಕ ಎಷ್ಟೊತ್ತ ಬೇಕ? ಹೆಚ್ಚ ಅಂದ್ರ ಒಂದು ೯೦ ಸೆಕೆಂಡ್. ೯೦ ml ಎಣ್ಣಿ ಹಾಕಲಿಕ್ಕೆ ಜಾಸ್ತಿ ಟೈಮ್ ಬೇಕಾದೀತು. ಆದ್ರ ಪ್ಯಾಂಟು, ಅಂಗಿ ಹಾಕಿಕೊಳ್ಳಲಿಕ್ಕೆ ಅಷ್ಟೆಲ್ಲ ಹೊತ್ತ ಬ್ಯಾಡ.

'ಏ ಇಕಿನ. ಆತೇನು? ಕಿರಣಾ ಲಿಸ್ಟ್ ಮಾಡಿ ಆತೇನು? ನಾ ಪ್ಯಾಟಿಗೆ ಹೋಗಲಿಕ್ಕೆ ರೆಡಿ,' ಅಂದ ಗಂಡ.

ಪಾಪ ಅಕಿ ತನ್ನ ಒಂದೊಂದೇ ಡಬ್ಬಿ ತೆಗೆದು ತೆಗೆದು, ನೋಡಿ ನೋಡಿ, ಏನೇನು ತರಸಬೇಕು, ಎಷ್ಟೆಷ್ಟು ತರಸಬೇಕು ಅಂತ ದೊಡ್ಡ ಮಟ್ಟದ ಪಟ್ಟಿ ತಯಾರ್ ಮಾಡ್ಲಿಕತ್ತಿದ್ದಳು.

ಗಂಡಗ ಗಡಿಬಿಡಿ. ಸೀದಾ ಅಡಿಗಿಮನಿಗೆ ಹೋಗಿಬಿಟ್ಟ. ಹೋದವನೇ 'ಟಂಟಟಾಮ್, ನಾ ರೆಡಿ!' ಅಂದು ಬಿಟ್ಟ.

ಹೆಂಡತಿ ಬಾಯಿ ಮ್ಯಾಲೆ ಕೈ ಇಟ್ಟುಕೊಂಡು, ಇಷ್ಟಗಲ ಕಣ್ಣು ಮಾಡಿ, ಮ್ಯಾಲಿಂದ ಕೆಳವರೆಗೂ ನೋಡಿದಳು.

'ಅಯ್ಯ! ಇಷ್ಟು ಲಗೂ ಪ್ಯಾಂಟ್ ಹಾಕ್ಕೊಂಡು ಬಿಟ್ಟರೀ?????? ನನಗ ಸಾಮಾನೇ ನೋಡಿಕೊಂಡು ಆಗಿರಲಿಲ್ಲ! ಸ್ವಲ್ಪ ತಡೀರಿ ಎಲ್ಲ ಸಾಮಾನು ಸರೀತ್ನಾಗಿ ನೋಡಿಕೊಂಡು ಬಿಡ್ತೇನಿ. ಒಂದು ಗಳಿಗಿ ಆಗಿಲ್ಲ. ಪ್ಯಾಂಟ್ ಹಾಕ್ಕೊಂಡು, ಟಂಟಟಾಮ್ ಅಂತ ಅನ್ಕೋತ್ತ ಬಂದುಬಿಟ್ಟರು. ನೀವು ಇಷ್ಟ ಲಗೂ ಪ್ಯಾಂಟ್ ಹಾಕ್ಕೊಂಡ್ರ ನಾ ಸಾಮಾನ್ ಹ್ಯಾಂಗ ನೋಡಲೀ??????????????????? ' ಅಂತ ಅಂದ ಹೆಂಡತಿ ಕಿರಾಣಾ ಸಾಮಾನು ನೋಡೋದನ್ನ ಮುಂದುವರಿಸಿದಳು.

ಅಕಟಕಟಾ!

ಸಾಮಾನು. ಕಿರಾಣಾ ಸಾಮಾನು! ಅದರ ಪಟ್ಟಿ. ನೋಡೋದ್ರೊಳಗೇ ಪ್ಯಾಂಟ್ ಏರಿಸಿಬಿಟ್ಟಿದ್ದ ಗಂಡ. ದುರ್ಲಭ ದರ್ಶನ!

(ಮೂಲ: ಬಾಲಚಂದ್ರ ಹೆಗಡೆ)

 * ಇಂತದ್ದನ್ನೆಲ್ಲ ಓದಿ ಮಸ್ತಿ ಮಾಡುವವರಾದರೆ ಇಲ್ಲಿ ಹೋಗಿ ಫುಲ್ ಚಿಂದಿ ಉಡಾಯಿಸಿ. ತುಂಟರಿಗೆ ಮಾತ್ರ - http://motugode.blogspot.com/

No comments: