Wednesday, June 27, 2012

ಹೇಸರಗತ್ತೆ ಸಾಬರಿಗೆ ಹಲಸಿನಕತ್ತೆ ಎಂಬ ಬಿರುದಾ?


ಕರೀಂ ಸಾಬರು ಯಾಕೋ ಮ್ಲಾನವದನರಾಗಿ ಬರ್ಲಿಕತ್ತಿದ್ದರು.

ಸಾಬ್ರಾ....ಸಲಾಂರೀಪಾ.....ಯಾಕೋ ಡೌನ್ ಆದಂಗ ಇದ್ದೀರಲ್ಲಾ? ಯಾಕ? ಮೈಯಾಗ್ ಆರಾಮ್ ಇಲ್ಲೇನು?....ಅಂತ ಕೇಳಿದೆ.

ಇಲ್ಲಾ ಸಾಬ್....ಎಲ್ಲಾ ಆರಾಮ ಅದೆ. ಮನಸ್ಸಿಗೆ ಬೇಜಾರ್ ಆಗಿದೆ....ಅಂದ್ರು ಕರೀಂ ಸಾಬರು.

ಯಾಕಪಾ ದೋಸ್ತಾ......? ತಲಿಗೆ ಹಚ್ಚಿಗೊಂಡರೂ ಮನಸ್ಸಿಗೆ ಹಚ್ಚಿಗೊಬಾರದ್ರೀ.....ಚಿಯರ್ ಅಪ್ ಸರ್ರ...ಏನಾತು?

ಸಾಬ್....ಆ ಹಡಬಿಟ್ಟಿ ಬ್ಯಾಂಕನವರು ನನ್ನಾ ಸಾಲದ್ದು ಆಪ್ಲಿಕೇಶನ್ ರಿಜೆಕ್ಟ್ ಮಾಡಿದರು ಸಾಬ್....ಅಂದಾ ಕರೀಂ.

ಹೋಗ್ಗೋ...ಅದಕ್ಕ ಇಷ್ಟ ಬ್ಯಾಸರನಾ ? ಹೋಗ್ಲಿ ಬಿಡ್ರಿ ...ಆ ಬ್ಯಾಂಕ್ ಅಲ್ಲದಿದ್ದರಾ ಇನ್ನೊಂದು ಬ್ಯಾಂಕಿನ್ಯಾಗ ಸಾಲ ಸಿಗ್ತದ ತೊಗೊರೀ.....ಅಂತ ಸಾಬರನ್ನ ಚಿಯರ್ ಅಪ್ ಮಾಡೋ ಪ್ರಯತ್ನ ಮಾಡಿದೆ.

ಸಾಬ್....ಸಾಲಾ ರಿಜೆಕ್ಟ್ ಆಯಿತು ಅಂತಾ ಬೇಸರ ಇಲ್ಲಾ ಸಾಬ್....ಅಲ್ಲಿನ ಮ್ಯಾನೇಜರ್ ನನಗೆ "ಹಲಸಿನಕತ್ತೆ" ಅಂತ ಬೈದು ಹೊರಗೆ ಹಾಕ್ಸಿದಾ ಸಾಬ್....ಅದು ಭಾಳ್  ಬೇಸರ ಆಯಿತು.....ಅಂತ ಬೇಜಾರಿನಿಂದ ಮಾತ್ ನಿಲ್ಲಸಿದ ಕರೀಂ.

 "ಹಲಸಿನಕತ್ತೆ"!!!!!!!!!!!!!!!!!! "ಹಲಸಿನಕತ್ತೆ"...............ಏನಿದು? ಎಂದೂ ಕೇಳದ ಪದ.

ಸಾಬ್ರಾ......ಏನ್ರೀ ಇದು....."ಹಲಸಿನಕತ್ತೆ" ಅಂದ್ರಾ?.....ತಿಳಿವಲ್ಲತು. ಸ್ವಲ್ಪ ಬಿಚ್ಚಿ ಹೇಳ್ರಪಾ ...ಅಂತ ಅಂದೆ.

ಸಾಬ್....ನಾನು ನನ್ನ ಬಿಜಿನೆಸ್ಸ ಪ್ಲಾನ್ ತೊಗೊಂಡು  ಲೋನ್ ಗೆ ಅಪ್ಲೈ ಮಾಡಿದೆ. ನನ್ನ ಬಿಜಿನೆಸ್ಸ ಪ್ಲಾನ್ ನೋಡಿ ಅಂಡು ಬಡಕೊಂಡ ನಕ್ಕಾ ಆ ಮೇನೇಜರ್ ನಮಗೆ ಮೊದಲು "ಝಾಕಾಸ್" ಅಂತ ಅಂದ....ಸಾಬ್.....ಅಂತ ಮಾತ್ ನಿಲ್ಲಿಸಿದ ಕರೀಂ.

ಸಾಬ್ರಾ.... ಝಾಕಾಸ್ ಅಂದ್ರ ನಿಮ್ಮಾ ಭಾಷಾದಾಗ 'ಮಸ್ತ' , ರಾಪಚಿಕ್ ಅಂತ ಅಲ್ಲೇನು? ಬಿಯರ್ ಬಾರ್ ಭೂದೇವಿ, ಶ್ರೀದೇವಿ ಗಳಿಗೆ ನೀವು ಮತ್ತ ನಿಮ್ಮ ದೋಸ್ತರು ಝಾಕಾಸ್, ರಾಪಚಿಕ್, ಐಟಂ, ಬಾಂಬ್, ಮಾಲ್ ....ಅದು ಇದು ಅಂತ ಅನ್ನಕೋತ್ತ ಇರತಿದ್ದರಿ.....ಆ ಮಂಗ್ಯಾ ಮೇನೆಜರ್ಗೂ ನೀವು ಯಾರೋ ಬಿಯರ್ ಬಾರ್ ಸುಂದರಾಂಗ ಕಂಡಂಗಾ ಕಂಡಿರಬೇಕು. ಅದಕ್ಕ ನಿಮಗ ಝಾಕಾಸ್ ಅಂದಾನ್.....ಅಂತ ಎಕ್ಸಪಾಂಡ ಮಾಡಿದೆ.

ನಾನೂ ಹಾಂಗೆ ತಿಳ್ಕೊಂಡೆ ಸಾಬ್.....ಝಾಕಾಸ್ ಅಂತಾನೆ....ಅದಕ್ಕೆ ನಾನು ಶುಕ್ರಿಯಾ ಸಾಬ್ ಅಂದೆ ಅವನಿಗೆ....ಅವನಿಗೆ BP ಜಾಸ್ತಿ ಆಗಿ.....ನಿಮಗೆ ಝಾಕಾಸ್ ಅಂದ್ರೆ ಗೊತ್ತಿಲ್ಲ....?ತಡೀರಿ ನಿಮಗೆ ಕನ್ನಡಲ್ಲೇ ಬೈತೀನಿ ಅಂತಾ ತಲಿ ಕೆರಕೊಂಡು ಹುಡ್ಕಿ ಹುಡ್ಕಿ "ಹಲಸಿನಕತ್ತೆ" ಅಂತಾ ಶಬ್ದ ಆರ್ಸಿ ಬೈದು ಬಿಟ್ಟಾ ಸಾಬ್....ಅಂತ ಕರೀಂ ದುಃಖ ತೋಡಿಕೊಂಡ.

ಝಾಕಾಸ್  ಗೆ ಕನ್ನಡ ಶಬ್ದ ಹಲಸಿನಕತ್ತೆ.....ನನಗಂತೂ ತಿಳಿಲಿಲ್ಲ.

ಕರೀಂ ಸಾಬ್ರಾ.....ಏನಿತ್ತು ನಿಮ್ಮ ಬಿಜಿನೆಸ್ಸ್ ಪ್ಲಾನ್? ಸ್ವಲ್ಪ ಹೇಳ್ರಿ.....ಅಂದೆ.

ಸಾಬ್....ನಾವು ಹೇಸರಗತ್ತೆ ಬಿಜಿನೆಸ್ಸ್ ಮಾಡಬೇಕು ಅಂತ ಮಾಡಿದ್ವಿ ಸಾಬ್.....ಅಂತ ಹೊಸಾ ಬಾಂಬ್ ಹಾಕಿದ ಕರೀಂ.

ಹೇಸರಗತ್ತೆ ಬಿಜಿನೆಸ್ಸ್.....ಹಿಂದೆ ಯಾರೂ ಮಾಡಿರಲಿಕ್ಕೆ ಇಲ್ಲಾ....ಮುಂದೆ ಯಾರೂ ಮಾಡ್ಲಿಕ್ಕೆ ಇಲ್ಲ....ನಗು ಬಂತು.

ಕರೀಂ....ಏನು ಇದು  ಹೇಸರಗತ್ತೆ ಬಿಜಿನೆಸ್ಸ್?....ಸ್ವಲ್ಪ ವಿವರಿಸಿ ಹೇಳಪಾ.....ಅಂದೆ .

ಸಾಬ್....ನೋಡಿ....ನಾವು ಮೊನ್ನೆ ದುಬೈಗೆ ಹೋದಾಗ ಒಬ್ಬರು ಅಫ್ಘಾನಿ ಖಾನ್ ಸಾಬ್ ಸಿಕ್ಕಿದ್ರು ....ಅವರು ಈ ಐಡಿಯಾ ಕೊಟ್ಟರು....ಭಾಳ್  ಮುನಾಫಾ ಇರೋ ಬಿಜಿನೆಸ್ಸ್ ಸಾಬ್.

ಮುಂದ ಹೇಳ್ರೀಪಾ ....ಮಸ್ತಾ ಇಂಟರೆಸ್ಟಿಂಗ್ ಅದ.

ಸಾಬ್ ನೋಡಿ....ಅಫಾಘಾನಿಸ್ತಾನ್ ನಲ್ಲಿ ರೋಡ ಗೀಡ್ ಇರೋದಿಲ್ಲ.....ಎಲ್ಲಾ ಕಡೆ ಪಹಾಡೀ ರಾಸ್ತಾ. ಅಲ್ಲೇ  ಹೇಸರಗತ್ತೆನೇ  ಬೇಕು ಎಲ್ಲದಕ್ಕೆ. ಸಾಮಾನ್ ಸಾಗ್ಸೋಕ್ಕೆ....ಮಂದಿ ಸಾಗ್ಸೋಕ್ಕೆ....ಅದಕ್ಕೆ ಅಲ್ಲಿ ಅದಕ್ಕೆ ಅಷ್ಟು ಡಿಮಾಂಡ್. ಅಲ್ಲಿದು supply  ಸಾಕಾಗೋದಿಲ್ಲ. ಅದಕ್ಕೇ ಅವರು ಹೇಸರಗತ್ತೆ ಇಂಪೋರ್ಟ್ ಮಾಡಿಕೊತ್ತಾರೆ. ನಾವು ಆ ಬಿಜಿನೆಸ್ಸ್ ಮಾಡಿ ಮಾಲಾ ಮಾಲ್ ಆಗೋಣಾ ಅಂತಾ ಸಾಬ್.....ಅಂತ ಕರೀಂ ತನ್ನ ಬಿಜಿನೆಸ್ಸ್ ಪ್ಲಾನ್ ಶಾರ್ಟ್ ಆಗಿ ಹೇಳಿದ.

impressive ಬಿಜಿನೆಸ್ಸ್ ಪ್ಲಾನ್ ಅಂತಾ ಅನ್ನಿಸಿದ್ದು ಮಾತ್ರಾ ಖರೆ. ಆದರೂ ಇನ್ನು ಡೀಟೇಲ್ಸ ಬೇಕಿತ್ತು ಫುಲ್ ಪಿಕ್ಚರ್ ಸಲುವಾಗಿ.

ಅಲ್ಲರೀ ಸಾಬ್ರಾ..ಹ್ಯಾಂಗ ಹೇಸರಗತ್ತೆ ತಯಾರ್ ಮಾಡ್ತೀರಿ?....ಅಂದೆ.

ಒಳ್ಳೆ ಸವಾಲ್ ಸಾಬ್....ಆ ದುಬೈ ಖಾನ್ ಸಾಬ್ ನಮಗೆ ಎಲ್ಲ ಮಾಹಿತಿ ಕೊಟ್ಟಾರೆ. ನೋಡಿ ಹೇಸರಗತ್ತೆ ಮಾಡೋಕೆ ಬೇಕು - ಗಂಡು ಕತ್ತೆ ಮತ್ತು ಹೆಣ್ಣು ಕುದರೆ. ಅವು ಎರಡಕ್ಕೂ ಪ್ಯಾರ್ ಮಾಡೋಕೆ ಬಿಟ್ಟರೆ, ಅವರಾ ಸುಹಾಗ್ ರಾತ್ ಆದ್ರೆ, ಬರೋ ಬಚ್ಚಾನೆ ಹೇಸರಗತ್ತೆ ನೋಡಿ ಸಾಬ್. ಹೇಸರಗತ್ತೆ ಅಪ್ಪಾ ಅಬ್ಬಾಜಾನ್ ಕತ್ತೆ. ಅಮ್ಮಾ ಅಮ್ಮಿಜಾನ್ ಕುದರೆ.....ಅಂತ details ಕೊಟ್ಟ ಕರೀಂ.

ಓಹೋ....ಭಾರಿ ಅದ ಬಿಡ್ರಿ....ಆದ್ರ ನಿಮ್ಮ ಕಡೆ ವಯಸ್ಸಿಗೆ ಬಂದ ಗಂಡ ಕತ್ತಿ, ಹೆಣ್ಣ ಕುದರಿ ಎಲ್ಲ ಅವ ಏನು?....ಅಂದೆ.

ಐತೆ ಅಲ್ಲ ಸಾಬ್....ನೋಡಿಲ್ಲ ಕ್ಯಾ? ನಮ್ಮದು ಸವಣೂರ್ ನವಾಬರಾ ವಂಶ....ಅದರದ್ದು ಒಂದು ಹೆಣ್ಣು ಕುದರಿ ಅದೇ ನಮ್ಮ ಕೂಡ...ಆ ಮಾಳಮಡ್ಡಿ ಧೋಭಿ ಕತ್ತೆ ಸಾಲಕ್ಕೆ ನಮ್ಮ ಕಡೆ ರೊಕ್ಕ ತೊಗೊಂಡು, ತೀರಸಲಿಕ್ಕೆ ಆಗದೇ ಕತ್ತೇನಾ ನಮಗೆ ಕೊಟ್ಟಬಿಟ್ಟಿ ಓಡಿ  ಹೋದಾ....ಹಾಂಗಾಗಿ ಅದೂ ನಮ್ಮ  ಹತ್ರಾನೇ ಇದೆ....ಕುದ್ರಿ,ಕತ್ತಿ  ಬಾಜು ಬಾಜು ಇದ್ದು ಪ್ಯಾರ್ ಮೊಹಬ್ಬತ್ ಎಲ್ಲ ಆಗಿ ಬಿಟ್ಟಿದೆ. ಕೂಡೊಕೆ ಬಿಟ್ಟರೆ ಹೇಸರಗತ್ತೆ ರೆಡಿ ಸಾಬ್.....ಅಂತ ಎಕ್ಸೈಟ್ ಆಗಿ ಹೇಳಿದ ಕರೀಂ.

ಇದನೆಲ್ಲ details ಬಿಜಿನೆಸ್ಸ ಪ್ಲಾನ್ ನ್ಯಾಗ ಹಾಕಿದ್ರೋ ಇಲ್ಲೋ? ಇವೆಲ್ಲ  ಇಂಪಾರ್ಟಂಟ್ ....ಅಂತ ಕೇಳಿದೆ.

ಎಲ್ಲಾ ಹಾಕಿದ್ದೆ ಸಾಬ್....ಅವ ಮ್ಯಾನೇಜರ್ ಹೇಸರಗತ್ತೆ ಬಿಸಿನೆಸ್ಸ್ ಮಾಡೋಕೆ ನಿಮಗೆ ಸಾಲಾ ಕೊಟ್ಟರೆ ನೀವು ದಿವಾಳಾ ತೆಗೆದು ಬ್ಯಾಂಕ್ ಗೆ ನಾಮ ಹಾಕ್ತೀರಿ.....ನೀವು ಹೇಸರಗತ್ತೆ ಬಿಸಿನೆಸ್ಸ್ ಮಾಡೋರು ಒಳ್ಳೆ ಝಾಕಾಸ್ ನೋಡಿ ಅಂದ ಸಾರ್....

ನನಗೆ  ಝಾಕಾಸ್ ತಿಳಿಲಿಲ್ಲ ನೋಡಿ ಅದಕ್ಕೆ ಕನ್ನಡದಲ್ಲಿ ಹಲಸಿನಕತ್ತೆ ಅಂತಾ ಬೈದಾ ಸಾಬ್ ಆ ಹರಾಮಕೋರ್ ಮೇನೇಜರ್....ಅಂತ ಸಿಟ್ಟಿನಿಂದ ಹೇಳಿದ ಕರೀಂ.

ತಡೀರಿ ಸಾಬ್ರಾ ...ಪ್ರಾಬ್ಲೆಮ್ ಸಾಲ್ವ್ ಮಾಡೋಣು....ಸ್ಟೆಪ್ ಬೈ ಸ್ಟೆಪ್....ಅಂತ ಶುರು ಮಾಡಿದೆ.

ಹಲಸಿನಕತ್ತೆ.....ಹಲಸಿನ ಹಣ್ಣು ಅಂದ್ರ jack fruit. ಹಲಸಿನ ಕತ್ತೆ ಅಂದ್ರಾ......Jack Ass.....!!!!!

ಸಾಬ್ರ....ಹೇಸರಗತ್ತೆ ಬಿಸಿನೆಸ್ಸ್ ಮಾಡಲಿಕ್ಕೆ ಹೊಂಟ ನಿಮಗ ಅವ ಇಂಗ್ಲಿಷ್ ನ್ಯಾಗ ಕತ್ತಿ ಅಂತ ಬೈದ. ಹಾಪ್, ಬಡ್ದ ತಲಿ ಮಂದಿಗೆ ಇಂಗ್ಲಿಷ್ ನ್ಯಾಗಾ ಜ್ಯಾಕ್ಯಾಸ್  (Jackass ) ಅಂತ ಹೇಳೂದು ರೂಡಿ. ಅವ  ಮೇನೇಜರ್ ನಿಮಗಾ ಜ್ಯಾಕ್ಯಾಸ್  ಅಂದ್ರಾ ನೀವು ಝಾಕಾಸ್ ಅಂತ ತಿಳ್ಕೊಂಡು ನಕ್ಕೀರಿ. ಅವಂಗ ಉರದದ. ಅದಕ್ಕಾ ಹುಡುಕಿ ಹುಡುಕಿ ಟ್ರಾನಸ್ಲೆಟ್ ಮಾಡಿ ನಿಮಗ ಶುಧ್ಧ ಕನ್ನಡದಾಗ "ಹಲಸಿನಕತ್ತೆ" ಅಂತ ಬೈದು ಓಡಿಸಿದಾ.....ಅಂತ ಫುಲ್ ಎಕ್ಸಪ್ಲೇನೆಶನ್ ಕೊಟ್ಟೆ.

ಸಾಬ್ರ ಮುಖಾ ಮತ್ತೂ ಸಣ್ಣದಾತು.

ಕರೀಮಾ.....ಇರಲಿ ತೊಗೋಪಾ....ಆ ಮೇನೇಜರ್ ಅಂದಿದ್ದ ತಲಿಗೆ, ಮನಸ್ಸಿಗೆ, ಮತ್ತೊಂದಕಡೆ ಹಚ್ಚಿಗೊಬ್ಯಾಡಾ....ಬ್ಯಾರೆ ಏನರ ಬಿಸಿನೆಸ್ಸ್ ಮಾಡಿ ಅಂತಾ. ಅಲ್ಲಾ...ಒಂದ ಧೋಬಿ ಗಂಡ ಕತ್ತಿ, ಒಂದ ನಿಮ್ಮ ಸವಣೂರ್ ವಾಡೆ ಹೆಣ್ಣ ಕುದರಿ ಇಟ್ಟಗೊಂಡು, ಎಷ್ಟ ಹೇಸರ್ಗತ್ತಿ ಮಾಡಿ ಅಫಾಘಾನಿಸ್ತಾನಕ್ಕಾ export ಮಾಡ್ಲಿಕ್ಕೆ ಸಾಧ್ಯ? ರೊಕ್ಕಾ ಫುಲ್ ನುಕ್ಸಾನ್ ಮಾಡಿಕೋತ್ತಿದ್ದಿ. ಅವ ಮೇನೇಜರ್ ಇಂಥಾ ಭಾಳ್ ಬಿಸಿನೆಸ್ಸ್ ಪ್ಲಾನ್ ನೋಡಿರ್ತಾನ್. ಅದಕ್ಕಾ ತೆಲಿಕೆಟ್ಟ ನಿನಗ ಬೈದ ಓಡ್ಸಿದಾ. ಹಿಂದ ಯಾರೋ ಒಬ್ಬವ ಸೀಡಲೆಸ್ ಶೇಂಗಾ (!!!) ಬಿಸಿನೆಸ್ಸ್ ಪ್ಲಾನ್ ತೊಗೊಂಡ ಹೋಗಿದ್ದಾ ಅಂತಾ. ಅವಂಗೂ ಹೀಂಗಾ ಬೊಂಗಾ ಬಾರ್ಸಿ ಓಡಸಿದ್ದಾ ಅಂತ.....ಅಂತಾ ಸಮಾಧಾನ ಮಾಡಿದೆ.

ಸಾಬ್....ಎಂತಾ ಮಸ್ತ ಬಿಸಿನೆಸ್ಸ್ ಐಡಿಯಾ ಸಾಬ್....ಸೀಡಲೆಸ್ ಶೇಂಗಾ....ಸಾಬ್....ಥಾಂಕ್ ಯೂ ...ಸಾಬ್...ಈಗಾ ಹೋಗಿ ಈ ಬಿಸಿನೆಸ್ಸ್ ಪ್ಲಾನ್ ಮಾಡ್ತೆನಿ....ಅಂತಾ ಹುರುಪಿನಿಂದ ಹೊರಟಾ ಕರೀಂ.

ಸೀಡಲೆಸ್ ಶೇಂಗಾ ಬಿಸಿನೆಸ್ಸ್ !!!!!?????.....ಖರೇ ಜ್ಯಾಕ್ಯಾಸ್  ಇವ.....ಅಂತ ಕಂಫಾರ್ಮ್ ಆತ.

ಖುದಾ ಹಾಫಿಜ್ ಸಾಬ್ರಾ.....ಸೀಡ್ಲೆಸ್ ಶೇಂಗಾ ಬೆಳದ್ರಾ ಹ್ಯಾಂಗ ಆತ ಅಂತ ತಿಳಸ್ರೀಪಾ......ಅಂತಾ ನಕ್ಕೊತ್ತಾ ಹೊಂಟ ಬಂದೆ.

** ಹೇಸರಗತ್ತೆ ಅಂದರೆ mule. ಅಮೇರಿಕಾದ  ಮಾಜಿ ಬೇಹುಗಾರಿಕೆ ಅಧಿಕಾರಿ ಮಿಲ್ಟನ್ ಬೀರ್ಡನ್ ಅವರು ತಮ್ಮ ಪುಸ್ತಕದಲ್ಲಿ  ಹೇಸರಗತ್ತೆಗಳು 1978-1988 ರಲ್ಲಿ ನೆಡದ ಆಫ್ಘಾನ್-ಸೋವಿಯತ್ ಯುದ್ಧದಲ್ಲಿ ನಿರ್ವಹಿಸಿದ ಪ್ರಮುಖ ಪಾತ್ರವನ್ನು ಧಾಖಲಿಸಿದ್ದು, ಅಫ್ಘಾನಿ ಮಜಾಹಿದೀನರಿಗೆ ಸರಕು, ಶಸ್ತ್ರ, ಬ್ರಹ್ಮಾಸ್ತ್ರ (stinger missiles) ಮುಟ್ಟಿಸಿದ್ದು ಹೇಸರಗತ್ತಗಳೇ ಎಂದು ಅವುಗಳ ಸೇವೆಯನ್ನು ಮತ್ತು ಸೋವಿಯತ್  ಸೋಲಿನಲ್ಲಿ ಅವು ವಹಿಸಿದ ಪ್ರಮುಖ ಪಾತ್ರವನ್ನು ಸ್ಮರಿಸಿದ್ದಾರೆ. ನನಗೆ ಓದಿದ ನೆನಪಿರುವ ಹಾಗೆ ಆ ಸಮಯದ್ದಲ್ಲಿ mules were considered strategic assets as part of Afghan campaign.  Mules were very important part of the supply-chain.

6 comments:

Harisha - ಹರೀಶ said...

ಏಕ್ ಧಮ್ ಝಾಕಾಸ್ ಇದ್ದು!!

Mahesh Hegade said...

ಪ್ರೋತ್ಸಾಹಕ್ಕೆ ಧನ್ಯವಾದ, ಹರೀಶ್.

Unknown said...

jakas blogging!jack.....alla

Mahesh Hegade said...

Thank you, unknown, taking time to leave comment and for your encouragement. Much appreciated.

Manjuath.S said...

It is really interesting to read and give refresh to tension-ed mind. Good entertainment. Please continue the same

Mahesh Hegade said...

Thank you, Manjunath.S