ನೀವು ಧಾರವಾಡಕ್ಕೆ ಹೋಗಿ, ಸುಮ್ಮನೆ 'ಏ ಹಾಪ್' ಅಥವಾ 'ಲೇ ಹಾಪಾ' ಅಂತ ಸ್ವಲ್ಪ ಜೋರ ಕೂಗಿ ನೋಡ್ರೀ. ಭಾಳ ಜೋರ ಒದರೋದು ಏನೂ ಬ್ಯಾಡ. ಧಾರವಾಡ ಅಥವಾ ಉತ್ತರ ಕರ್ನಾಟಕದ ಮಂದಿ ಜರೂರ ತಿರುಗಿ ನೋಡ್ತಾರ. ತಿರುಗಿ ನೋಡದಿದ್ದವರು ಯಾರೋ ಬ್ಯಾರೆ ಕಡೆಯಿಂದ ಬಂದಿರುವ ವಲಸಿಗ ಪರದೇಸಿಗಳು ಅಂತ ತಿಳಕೋಬಹುದು.
ತಿರುಗಿ ನೋಡಿದವರು, ಇವನಾಪನಾ, ಯಾರಿಗೆ ಹಾಪ್ ಅಂದಲೇ ಇವ ಹಾಪ್ಸೂಳಿಮಗ? ನಮ್ಮ ದೋಸ್ತ ಇರಬೇಕು, ಅಂತ ಅನಕೋತ್ತ ನಿಮ್ಮಲ್ಲಿ ಇರಬಹುದಾದ ಅಥವಾ ಇಲ್ಲದಿರಬಹುದಾದ ದೋಸ್ತನ್ನ ಹುಡಕಿಕೊಂಡು ಬಂದೇ ಬಿಡ್ತಾರ. ಅದು ಅಲ್ಲಿಯ ಮಣ್ಣಿನ ಗುಣ. ಮತ್ತ ಅವರ ದೊಡ್ಡ ಗುಣ. ಆಮ್ಯಾಲೆ ನೀವು ಯಾರಿಗೆ ಹಾಪ್ ಅಂದಿದ್ದು ಅಂತ ವಿವರಣೆ, ಸಮರ್ಥನೆ ಮತ್ತೊಂದು ನೀಡೋದು ನಿಮ್ಮ ಕೆಲಸ.
ಆವಾ ನನಗ ಹಾಪ್ ಅಂದಲೇ! ಅಂತ ಒಬ್ಬ ಅಂದರೆ, ಏ ಇಲ್ಲೋ ಮಂಗ್ಯಾನ್ ಕೆ, ಅವಾ ನಮ್ಮ ದೋಸ್ತ, ನನಗ ಹಾಪ್ ಅಂದಾನ, ಹೌದಿಲ್ಲರೀ ಸರ್ರಾ?, ಅಂತ ಇನ್ನೊಬ್ಬ. ಹಾಪಾ ಅನ್ನಿಸಿಕೊಳ್ಳಲು ಜಗಳ ಅವರಲ್ಲೇ ಶುರು ಆದರೂ ಆಶ್ಚರ್ಯ ಇಲ್ಲ. ಅದನ್ನೂ ನೀವೇ ಬಗೆಹರಿಸಬೇಕು.
ಆತ್ಮೀಯರಿಗೆ ಹಾಪ್, ಹಾಪಾ ಅನ್ನೋದು, ಆತ್ಮೀಯರ ಕಡೆ ಏ ಹಾಪ್, ಲೇ ಹಾಪಾ, ಅಂತ ಅನ್ನಿಸಿಕೊಳ್ಳೋದ್ರೋಗ ಇರೋ ಸುಖ ಅಂದವರಿಗೆ ಮತ್ತ ಅನ್ನಿಸಿಕೊಂಡವರಿಗೇ ಗೊತ್ತು. ಅದೇ ಹಾಪಾನಂದ. ಬ್ರಹ್ಮಾನಂದ, ಸಚ್ಚಿದಾನಂದ ಮತ್ತೊಂದು ಮಗದೊಂದು ಆನಂದ ಇದ್ದಂಗ. ಅವೆಲ್ಲ ಆನಂದಗಳ ಚರಸೀಮೆ ಮೀರಿದ ಆನಂದ ಈ ಹಾಪಾನಂದ!
ಹಾಪ್ ಅನ್ನುವ ಪದದ ಗಮ್ಮತ್ತ ಅದು.
ಇಂಗ್ಲೀಷ 'half' ನಿಂದ ಉದ್ಭವ ಆಗಿದ್ದರೂ ಧಾರವಾಡ ಕಡೆ ಹಾಪ್ ಅನ್ನೋ ಶಬ್ದ ಇಷ್ಟು ಸೃಜನಾತ್ಮಕ ಆಗಿ ಬಿಟ್ಟದ ಅಂದ್ರೆ ಈ ಹಾಪ್ ಅನ್ನೋ versatile ಪದವನ್ನು ಎಲ್ಲಿ ಹಾಕಿ, ಏನು ಮಾಡಿ, ಒಂದು ವಿಶಿಷ್ಟ ಮಾತು ಆಡಲಿ ಅಂತ ನಾವು ಧಾರವಾಡ ಮಂದಿ ಕಾದುಕೊಂಡು ಇರ್ತೇವಿ.
ಮೊದಲು ಬರೇ ಹಾಪ್ ಮ್ಯಾಡ್ ಗೆ ಶಾರ್ಟಾಗಿ ಹಾಪ್ ಅಂತಿದ್ರೋ ಏನೋ? ಈಗಂತೂ ಎಲ್ಲದೂ ಹಾಪ್. ಹಾಪ್ ಚಹಾ, ಹಾಪ್ ಪ್ಯಾಂಟ್, ಹಾಪ್ ಸೀರಿ, ಹಾಪ್ ನಮಸ್ಕಾರ, ಏನೇನೋ. ಒಟ್ಟಿನ್ಯಾಗ ಸರ್ವಂ ಹಾಪಮಯಂ.ಎಲ್ಲೆಲ್ಲಿ half ಉಪಯೋಗಿಸಬಹುದೋ ಅಲ್ಲೆಲ್ಲಾ ಹಾಪ್ ಚಲ್ತಾ ಹೈ. ಚಲ್ತಾ ಹೈ ಕ್ಯಾ ಭಾಯಿ ದೌಡತಾ ಹೈ!
ಹಾಪ್ ಛಾ! - ಹಾಪ್ ಛಾ ಅಂದ್ರ ಒಂದು ಚಹಾ ತೊಗೊಂಡು ಎರಡು ಕಪ್ಪಿನೊಳಗ ಬೈ ಟೂ ಮಾಡಿ ಕುಡಿಯೋದು ಅಲ್ಲ. ಧಾರವಾಡ ಕಡೆ ಹಾಪ್ ಛಾ ಅಂತ ಕೇಳಿದ್ರ ಹಾಪೇ ಕಪ್ ಛಾ ಕೊಟ್ಟು, ತೊಗೊಳ್ಳರೀ ಸರ್ರಾ, ಅಂತ ಹೇಳ್ತಾರ. ಇದರ ಮ್ಯಾಲೆ ಬೈ ಟೂ ಛಾ, ತ್ರೀ ಬೈ ಫೈವ್ ಛಾ ಎಲ್ಲಾ ಬ್ಯಾರೆ ಮತ್ತ.
ನಮ್ಮ ಅತ್ಯಂತ ಪ್ರೀತಿ(?) ಬೈಗುಳ ಅಂದ್ರ ಹೃದಯಾಳದಿಂದ ಬರುವ 'ಸೂಳಿಮಗನss'. ಸೂಳೆಮಗ ಅಲ್ಲ ಮತ್ತ. ಎರಡೂ ಬ್ಯಾರೆ ಬ್ಯಾರೆ. ಸೂಳೆಮಗ ಅಂದ್ರ ಕೆಟ್ಟ ಬೈಗಳ. ಅದು ವಿಷಪೂರಿತ ನಾಗರಹಾವು ಇದ್ದಂಗ. ಅದss ಸೂಳಿಮಗ ಅನ್ನೋದು ಹಲ್ಲು ಕಿತ್ತಿದ ನಾಗರಹಾವು. ಏಕ್ದಂ ಸೇಫ್ ಮತ್ತ ಆಡಲಿಕ್ಕೆ ಅಂದ್ರ ಪುಂಗಿ ಊದಿ ಆಡಲಿಕ್ಕೆ ಮಸ್ತ. ಹೇಳೋ ಧಾಟಿ, ಯಾರಿಗೆ ಯಾರು ಯಾವ ಸಂದರ್ಭದಲ್ಲಿ ಹೇಳ್ತಾರ ಅನ್ನೋದು ಸಹ ಇಂಪಾರ್ಟೆಂಟ್. ಜೀವದ ಆಶಾ ಇದ್ದವರು ಯಾರೂ ಸೂಳೆಮಗ ಅಂತ ಯಾರಿಗೂ ಅನ್ನೋದಿಲ್ಲ. ಸೂಳಿಮಗನss ಅಂತ ಎಳದೆಳದು, ತರೇವಾರಿ ರೀತಿಯೊಳಗ ಹೇಳಿದ್ರ ಮಂದಿ ಹ್ಯಾಂಗ ಆನಂದ ಪಡ್ತಾರೋ ಅದೇ ರೀತಿ ಖರೆ ಅರ್ಥದೊಳಗ ತಾಯಿಗೆ ಬಯ್ಯೋ ಹಾಂಗ ಸೂಳೆಮಗನ ಅಂದು ಬಿಟ್ಟರ ಹೆಣಾ ಹಾಕಲಿಕ್ಕೂ ರೆಡಿ ಧಾರವಾಡ ಮಂದಿ. ಕಾರಣ - ಮತ್ತ ಅದೇ ಮಣ್ಣಿನ ಗುಣ. ಅವರ ಗುಣ.
ಹೀಂಗ ಸೂಳಿಮಗನss ಅನ್ನೋ ಅಪ್ಯಾಯಮಾನ ಪದಕ್ಕ ಹಿಂದೆ ಮಸ್ತ ಹೊಂದಲಿ ಅಂತ ಬೇರೆ ಬೇರೆ ವಿಶೇಷಣಗಳನ್ನು ಸೇರಸ್ತೇವಿ. ಯಾರಿಗೆ ಹೇಳಬೇಕು, ಅವರ ಜೊತಿ ಎಷ್ಟು ಆತ್ಮೀಯತೆ ಇರ್ತದ ಅದರ ಮ್ಯಾಲೆ ಅದು ಡಿಪೆಂಡ್. ಏನ್ರೀ!
ಮಂಗ್ಯಾ, ಮಳ್ಳ, ಹುಚ್ಚ, ಕಳ್ಳ, ಹಾಪಾ, ಕುಡ್ಡ, ಕೆಪ್ಪ, ಢಬ್ಬ, ಕೊಳಕ, ಮಬ್ಬ, ದರಿದ್ರ ಇತ್ಯಾದಿ ಇತ್ಯಾದಿ. ಇವು ಸೂಳಿಮಗನ ಜೋಡಿ ಮಸ್ತ ಹೋಗ್ತಾವ. ಚಹಾದ ಜೋಡಿ ಚೂಡಾದಂಗ. ಈ ಸೂಳಿಮಗ ಅನ್ನೋದು ಒಂದು ತರಹದ ಸೋಡಾ ಇದ್ದಂಗ. ವಿಸ್ಕಿ, ಬ್ರಾಂಡಿ, ರಮ್, ಕಂಟ್ರಿ ಶೆರೆ ಯಾವದರ ಜೋಡಿ ಬೇಕು ಅದರ ಜೋಡಿ ಹಾಕ್ಕೊಂಡು ಎತ್ತಿ ಬಿಡ್ರೀ. ಮಸ್ತ ಇರ್ತದ. ಬರೆ ಹಾಂಗss ಬೇಕಾರೂ ಕುಡೀರಿ. ನೋ ಪ್ರಾಬ್ಲೆಮ್.
ಹಾಪ್ಸೂಳಿಮಗನ = ಹಾಪ್ + ಸೂಳಿಮಗನ. ಯಾವ ಸಂಧಿನೋ ಏನೋ?
ಹಾಪ್ಸೂಳಿಮಗನ ಭಾಳ ಸಲ ಉಪಯೋಗಂತೂ ಆಗ್ತದ. ದೋಸ್ತನ ಡುಬ್ಬದ ಮ್ಯಾಲೆ ಒಂದು ಗುದ್ದಿ, ಪ್ರೀತಿಯಿಂದ, ಬಾಟಮ್ ಆಫ್ ದಿ ಹಾರ್ಟ್ ನಿಂದ, ದೋಸ್ತಾss! ಏನ್ ಮಸ್ತ ಹಾಪ್ಸೂಳಿಮಗ ಇದ್ದೀ ಮಾರಾಯಾ!!!ಭಾಳ ಥ್ಯಾಂಕ್ಸ್!!! ಅಂದ್ರ ಆವಾ ತಿರುಗಿ ನಿಮಗ, ಏನ್ ಮಂಗ್ಯಾಸೂಳಿಮಗ ಇದ್ದೀಲೆ? ದೋಸ್ತ ಅಂತೀ. ಅದರ ಮ್ಯಾಲಿಂದ ಥ್ಯಾಂಕ್ಸ್ ಬ್ಯಾರೆ. ದೋಸ್ತರ ನಡು ಅದು ಯಾಕಲೇ? ಹುಸ್ಸೂಳಿಮಗನss (ಹುಚ್ಚ ಸೂಳಿಮಗನ), ಅಂತ ದೋಸ್ತ ಹುಸಿಮುನಿಸು ತೋರಿಸಿ ವಾಪಸ್ ಬೆನ್ನ ಮ್ಯಾಲೆ ಗುದ್ದಿ, ನೀವು ಒಂದು ಸೂಳಿಮಗ ಅಂದ್ರ ಅವಾ ಎರಡು ಸೂಳಿಮಗ ಅಂತ ಹೃದಯಾಳದಿಂದ ತೆಗೆದು ಬಡ್ಡೀ ಸಮೇತ ಕೊಟ್ಟು ಬಿಡ್ತಾನ. ನಂತರ ಇಬ್ಬರೂ ಕೂಡಿ ಒಂದೊಂದು ಹಾಪ್ ಛಾ ಕುಡದು ಬ್ಯಾರೆ ಎಲ್ಲಾ ಮಂದಿ ಬಗ್ಗೆ ಮಾತಾಡಿಕೋತ್ತ ಮೇಲೆ ಹೇಳಿದ ಮತ್ತು ಇನ್ನೂ ಹಲವು ಶಬ್ದಗಳನ್ನ ಸೂಳಿಮಗನ ಹಿಂದೆ ಹಚ್ಚಿ ಮಜಾ ಮಾಡಬಹುದು. ಅದಕ್ಕೇನೂ ಲಿಮಿಟ್ ಇಲ್ಲೇ ಇಲ್ಲ.
ನಮ್ಮ ಕಡೆ ಹುಡುಗುರ ನಿಕ್ಕರ್ ಅನ್ನೋ ಶಬ್ದಕ್ಕ ಸ್ವಚ್ಚ ಸಮಾನಾರ್ಥಕ ಶಬ್ದ ಅಂದ್ರ ಚೊಣ್ಣ. ಚಡ್ಡಿ ಬ್ಯಾರೆ. ಅದು ಅಂದರ ಕೀ ಬಾತ್ ಹೈ ಅನ್ನೋ ಹಾಂಗ ಅದು ಅಂಡರ್ವೇರ್. ಚೊಣ್ಣ ಅಂದ್ರ ಬೆಂಗಳೂರು ಮಂದಿ ಅನ್ನೋ ನಿಕ್ಕರ್. ಏನ್ ನಿಕ್ಕರೋ ಏನ್ ಕುಕ್ಕರೋ? ಅವರಿಗೇ ಗೊತ್ತು. ಆದರೂ ಧಾರವಾಡ ಕಡೆ ಇದ್ದಿದರಲ್ಲೇ sophisticated ಅಂತ ಇದ್ದವರು, ಅಥವಾ ಇದ್ದೇವಿ ಅಂತ ತೋರಿಸ್ಕೊಬೇಕು ಅನ್ನವರು 'ಹಾಪ್ ಪ್ಯಾಂಟ್' ಅಂತ ಚೊಣ್ಣಕ್ಕ ಹೆಸರು ಇಟ್ಟು ಬಿಟ್ಟಾರ. ಶಾರ್ಟ್ಸ್ ಅಂತ ಆವಾಗಂತೂ ಅಂತಿರಿಲಿಲ್ಲ. ಈಗ ಏನೋ ಗೊತ್ತಿಲ್ಲ.
ಈ ನಿಕ್ಕರ್ ಮತ್ತ ಚೊಣ್ಣ ಉರ್ಫ್ ಹಾಪ್ ಪ್ಯಾಂಟ್ ಇಷ್ಟು confusion ತಂದು ಇಡ್ತದ ಅಂದ್ರ......
ಒಮ್ಮೆ ಎರಡನೆತ್ತಾನೋ ಮೂರ್ನೆತ್ತಾನೋ ಇದ್ದಾಗ ಬೆಂಗಳೂರು ಕಡಿಯಿಂದ transfer ಆಗಿ ಒಂದು ಹುಡುಗ ನಮ್ಮ ಕ್ಲಾಸಿಗೆ ಬಂದ. ನಮ್ಮ ಕ್ಲಾಸ್ ಮಾಸ್ತರ್ ಮತ್ತ ಆ ಹುಡುಗನ ಅವ್ವನ ನಡುವೆ ನಡದ ಸಂಭಾಷಣೆ ಕೇಳ್ರೀ.
ನಮಸ್ಕಾರ ಸಾssರ್!, ಅಂತ ಬೆಂಗಳೂರ ಭಾಷಾ ಒಳಗ ಉಲಿದಳು ತಾಯಿ.
ಸರ್ ಅನೋದನ್ನ ಆ ಪರಿ ಸಾರ ಮಾಡಿ ಎಳೆದಿದ್ದು ನೋಡಿ ನಮ್ಮ ಮಾಸ್ತರಿಗೆ ಊಟ ಮಾಡಿ ಬಂದ ಸಾರಿನ ನೆನಪಾಗಿರಬೆಕು. ನಮ್ಮ ಸರ್ ಕೈ ಮೂಸಿ ನೋಡಿಕೊಂಡರು. ಧಾರವಾಡ ಬ್ರಾಹ್ಮಣರ ಸಾರು ಭಾಳ ಮಸ್ತ ವಾಸನಿ ಇರ್ತದ. ಸರ್ ಮಾತ್ರ ಊಟ ಮಾಡಿ ಬಂದಿರಬೇಕು. ಇಕಿ ಆ ಪರಿ ಸಾರ್ ಅಂತ ಎಳೆದು ಹೇಳಿದ್ದು ಕೇಳಿ ಸರ್ ಗೆ ಮನಿಯೊಳಗ ಮಾಡಿದ ಸಾರಿನ ನೆನಪಾಗಿ ಖಮ್ಮನೆ ಒಂದು ಸರೆ ಮೂಸಿ ಮನಿ ಸಾರಿನ ಸುವಾಸಿನಿ ನೋಡಿಕೊಂಡು ಬಿಡೋಣ ಅನ್ನಿಸಿರಬೇಕು. ನೋಡಿಕೊಂಡೇ ಬಿಟ್ಟರು.
ಸಾರಿನ ವಾಸನಿ ಮಸ್ತ ಎಂಜಾಯ್ ಮಾಡಿದ ಸರ್, ನಮಸ್ಕಾರ್ರೀ, ಹೇಳ್ರೀ. ಏನಾಗಬೇಕಿತ್ತು? - ಅಂತ ಕೇಳಿದರು.
ಸಾರ್ ಸ್ಕೂಲ್ ಯುನಿಫಾರ್ಮ್ ಏನು ಸಾರ್? - ಅಂತ ಅಕಿ ಕೇಳಿದಳು. ಮಗನ್ನ ಸಾಲಿಗೆ ಅಂತೂ ಹಾಕಿ ಆತು. ಇನ್ನು ಎರಡ ಜೋಡಿ ಯುನಿಫಾರ್ಮ್ ಕೊಡಸಿ ಒಗದು ಬಿಟ್ಟರ ಮುಗೀತ ನೋಡ್ರೀ.
ಯುನಿಫಾರ್ಮ್ ರೀ? ಅದರೀ.... ನೀಲಿ ಚೊಣ್ಣ, ಬಿಳೆ ಅಂಗಿ. ಎಲ್ಲಾರೂ ಹಾಕಿಕೊಂಡು ಕೂತಾರ ನೋಡ್ರೀ, ಅಂತ ಚೊಣ್ಣಾ ಹಾಕಿಕೊಂಡು ಚೊಣ್ಣಾ ಹಜಾರೆ ಹಾಗೆ ಕುಳಿತಿದ್ದ ಶಿಷ್ಯರನ್ನು ತೋರಿಸಿದರು ಸರ್.
ಆ ತಾಯಿಗೆ ಅದು ಯಾಕ ತಿಳಿಳಿಲ್ಲೋ ಏನೋ ಅನ್ನೋದು ನಮಗ ಇವತ್ತಿಗೂ ತಿಳಿದಿಲ್ಲ. ತಿಳಿದರೂ ಡಬಲ್ ಖಾತ್ರಿ ಮಾಡಿಕೊಳ್ಳೋಣ ಅಂತ ಸರ್ ಜೊತಿ ಮಾತು ಮುಂದುವರ್ಸಿದಳೋ ಏನೋ? ಯಾರಿಗೆ ಗೊತ್ತ?
ಚೊಣ್ಣಾ ಅಂದ್ರೆ? ನಿಕ್ಕರ್ ಅಂತಾನಾ ಸಾರ್? - ಅಂತ ಮತ್ತ ರಾಗಾ ಎಳೆದಳು ಬೆಂಗಳೂರು ಕನ್ನಡ ತಾಯಿ.
ನಮ್ಮ ಸರ್ ಗೆ ನಿಕ್ಕರ್ ಅಂದ್ರ ಅವರ ಮನಿ ದೇವರಾಣಿಗೂ ಏನು ಅಂತ ತಿಳಿದಿಲ್ಲ. ತಾಪಡ್ತೋಪ್ ಏನೋ ಒಂದು ವಿಚಾರ ಮಾಡಿ ಕೌಂಟರ್ ಪಾಯಿಂಟ್ ಒಗೆದೇ ಬಿಟ್ಟರು ಸರ್!
ಏನ್ರೀ? ಕುಕ್ಕರ್ ರೀ? ಏ ಕುಕ್ಕರ್ ಗಿಕ್ಕರ್ ಬ್ಯಾಡ್ರೀ. ನಾವೇನು ಇಲ್ಲೆ ಅಡಿಗಿ ಪಡಿಗಿ ಮಾಡೋ ಸಾಲಿ ಇಟ್ಟಿಲ್ಲ. ಡಬ್ಬಿಗೆ ಮಸ್ತ ಊಟ ಹಾಕಿ ಕಳಿಸಿ ಬಿಡ್ರೀ. ನೀವು ಕುಕ್ಕರ್ ಕೊಟ್ಟು, ಇವಾ ಮಂಗ್ಯಾನ್ ಕೆ ನಡು ಸೂಟಿ ಬಿಟ್ಟಾಗ ಅಡಿಗಿ ಮಾಡಲಿಕ್ಕೆ ಹೋಗಿ, ಢಮ್ ಅನ್ನಿಸಿ, ಅವೆಲ್ಲಾ ಬ್ಯಾಡ. ಹುಡುಗ್ಗ ನೀಲಿ ಚೊಣ್ಣ ಬಿಳಿ ಅಂಗಿ ಹಾಕಿ, ತಲಿಗೆ ಒಂದಿಷ್ಟು ಎಣ್ಣಿ ತಟ್ಟಿ ಕಳಿಸಿ ಬಿಡ್ರೀ. ಬಿಸಿಲು ಭಾಳ ನೋಡ್ರೀ. ಎಣ್ಣಿ ಇದ್ದರ ನೆತ್ತಿ ತಂಪ ಇರ್ತದ ಹುಡಗಂದು, ಅಂತ ಸರ್ ಏನೇನೋ ಹೇಳಿ ಆ ಬೆಂಗಳೂರು ಮಾತೆಯನ್ನು ಮತ್ತೂ confuse ಮಾಡಿ ಬಿಟ್ಟರು.
ಅಕಿಗೆ ಒಟ್ಟ ಯುನಿಫಾರ್ಮ್ ಏನು ಅಂತ ಖಾತ್ರಿ ಮಾಡಿಕೋಬೇಕು. ಮೊದಲೇ ಧಾರವಾಡ ಒಳಗ ಎಲ್ಲಾ ಅರವೀ ಅಂಗಡಿಯೋರು, 'ಒಮ್ಮೆ ಮಾರಿದ ಮಾಲನ್ನು ವಾಪಸ್ ತೆಗೆದುಕೊಳ್ಳಲಾಗುವದಿಲ್ಲ', ಅಂತ ರಸೀತಿ ಮ್ಯಾಲೆ ಢಾಳ್ ಆಗಿ ರಬ್ಬನೆ ಅಕ್ಷರ ಒಳಗ ಪ್ರಿಂಟ್ ಹಾಕಿಸಿಬಿಟ್ಟಿರತಾರ. ಹಾಂಗಾಗಿ ಅಕಿದೇನೂ ತಪ್ಪಿಲ್ಲ. ನಮ್ಮ ಸರ್ ಏನೋ ಹೇಳೋದು, ಇಕಿ ಹೋಗಿ ಮಗಂಗ ಏನೋ ಬ್ಯಾರೆನೇ ಯುನಿಫಾರ್ಮ್ ತೊಗೊಳ್ಳೋದು, ಅದನ್ನ ನೋಡಿ ನಮ್ಮ ಸರ್ರ್, ಏ ಇದು ನಮ್ಮ ಸಾಲಿ ಯುನಿಫಾರ್ಮ್ ಅಲ್ಲರೀ, ಇದು ಎಮ್ಮಿಕೇರಿ ಸಾಲಿ ಯುನಿಫಾರ್ಮ್, ನಿಮ್ಮ ಹುಡಗನ್ನ ಎಮ್ಮಿಕೇರಿ ಸಾಲಿಗೇ ಸೇರಸರೀ. ಟೀಸಿ (TC = transfer certificate) ತೆಗಿಸಿ ಕೊಟ್ಟು ಬಿಡಲೇನು? ತೊಗೊಂಡು ಹಾಳಾಗಿ ಹೋಗ್ರೀ, ಅಂತ ಆವಾಜ್ ಹಾಕಿ, ರಾಮಾ ರಾಮಾ.....ಬ್ಯಾಡಪ್ಪೋ ಬ್ಯಾಡ್ ಅವೆಲ್ಲ ತಲಿಸೂಲಿ.
ಅಕಿ ಹೇಳಿ ಕೇಳಿ ಬೆಂಗಳೂರು ಮಾತೆ. ಆ ಮಾತೆ ಮತ್ತೊಂದು ಸ್ಕೀಮ್ ಹಾಕಿದಳು.
ಚೊಣ್ಣ ಅಂದ್ರೆ ಚಡ್ಡೀನಾ ಸಾರ್? - ಅಂತ ಮತ್ತ ರಾಗಾ ಎಳೆದಳು. ಬೆಂಗಳೂರು ಕಡೆ ಕನ್ನಡ ಮತ್ತ ಸಾಮಾನ್ಯ ಕನ್ನಡ ಒಳಗ ಚಡ್ಡೀ ಅಂತನ ಅಂತಾರ. ಆದ್ರ ನಾವು ಧಾರವಾಡ ಮಂದಿ ಚೊಣ್ಣ ಅಂದ್ರ ಹೊರಗಿಂದು ಚಡ್ಡಿ ಅಂದ್ರ ಒಳಗಿಂದು ಅಂತ ಬ್ಯಾರೆ ಬ್ಯಾರೆ ಮಾಡಿ ಇಟ್ಟುಗೊಂಡು ಬಿಟ್ಟೇವಿ.
ಇಷ್ಟು ಸಣ್ಣ ಹುಡಗ್ಗ ನೀವು ಚಡ್ಡೀ ಬ್ಯಾರೆ ಹಾಕಿ ಕಳಸವ್ರು ಇದ್ದೀರಿ ಏನು? ನಿಮ್ಮ ಮರ್ಜೀ. ಯಾರೂ ಇಲ್ಲೇ ಎರ್ಡ್ಮೂನೆತ್ತಕ್ಕೆಲ್ಲಾ ಒಳಗ ಚಡ್ಡಿ ಮತ್ತೊಂದು ಹಾಕಿಕೊಂಡು ಬರೋದಿಲ್ಲ. ಅವೆಲ್ಲಾ ದೊಡ್ಡ ಕನ್ನಡ ಸಾಲಿ ಅಂದ್ರ ಐದನೇತ್ತಾ ಮ್ಯಾಲೆ. ಇಷ್ಟ ಲಗೂ ಯಾಕ ಬಿಡ್ರೀ ಚಡ್ಡಿ. ಸ್ವಲ್ಪ ಹವಾ ಆಡಿ ಚೋಲೋತ್ನಾಗಿ ಬೆಳೀಲಿ ಬಿಡ್ರೀ. ಅಂದ್ರ ಹುಡುಗಾ ಚೋಲೋತ್ನಾಗಿ ಬೆಳೀಲಿ ಅಂತರೀ. ತಪ್ಪು ತಿಳ್ಕೊಬ್ಯಾಡ್ರೀ. ಅದಕ್ಕss ನಾವು ಬೂಟು ಸಹಿತ ಬ್ಯಾಡ ಅಂತ ಹೇಳಿ ಬಿಟ್ಟೇವಿ. ಎಲ್ಲಾ ಟೈಟ್ ಟೈಟ್ ಚಡ್ಡಿ ಬೂಟು ಮತ್ತೊಂದು ಹಾಕಿಕೊಂಡು ಏಳೆಂಟ ತಾಸು ಸಾಲಿಯೊಳಗ ಇದ್ದರ ಸಣ್ಣ ಹುಡುಗುರು ದೊಡ್ಡವರು ಆಗೋದು ಹ್ಯಾಂಗ್ರೀ? ಹೇಳ್ರೀ ನೀವss, ಅಂತ ಸರ್ ಹೇಳಿ ಬಿಡಬೇಕಾ!!!! ಫುಲ್ ಉದ್ರೀ ಉಪದೇಶ!
ಬೆಂಗಳೂರು ಮಾತೆ ಮತ್ತೂ confuse ಆದರು. ಚೊಣ್ಣ ಅಂದ್ರೆ ಚಡ್ಡೀನೋ ಅಂತ ಕೇಳಿದರೆ ಸಾರ್ ಚಡ್ಡಿ optional ಅಂತಾರೆ! ಎಲ್ಲೇ ನಾಳಿಂದ ಅಕಿ ಮಗನ್ನ ಮಿನಿ ಹಾಪ್ ಗೋಮಟೇಶ್ವರ ಮಾಡಿ ಸಾಲಿಗೆ ಕಳಿಸಬೇಕಾದೀತೇನೋ ಅಂತ ಅಕಿ ಚಿಂತಿ. ಚಡ್ಡಿ ಬೇಕಂತಿಲ್ಲ ಅಂದ ಮ್ಯಾಲೆ ಬರೆ ಅಂಗಿ ಒಂದೇ ಹಾಕಿ ಕಳಿಸಿ ಬಿಟ್ಟರೆ ಗಳಗಂಟೆ ದಾಸಯ್ಯನ ಸ್ಟೈಲ್ ಒಳಗ ಕೆಳಗ ಗಂಟಿ ಬಾರಿಸಿಕೋತ್ತ ಹಾಪ್ ಗೋಮಟೇಶ್ವರ ಸಾಲಿಗೆ ಹಾಜರ್!
ಅಕಿ ಬೆಂಗಳೂರಿನ್ಯಾಕಿ ಭಾಳ ಶಾಣ್ಯಾ ಇದ್ದಳು. ಆ ಮಾತೆ ಮತ್ತೂ ಒಂದು ಸ್ಕೀಮ್ ಹಾಕಿದಳು
ಸಾರ್ ಚೊಣ್ಣ ಅಂದ್ರೆ 'ಹಾಪ್ ಪ್ಯಾಂಟ್' ಏನು ಸಾರ್? - ಅಂತ ಕೇಳಿದರು.
ನಮ್ಮ ಸರ್ ಗೆ ಈಗ ತಲಿ ಕೆಡಲಿಕತ್ತಿತ್ತು. ಬ್ಯಾರೆ ಯಾರರೆ ಆಗಿದ್ರ ಇಷ್ಟೊತ್ತಿನ್ಯಾಗ ಪ್ಯಾಟಿಗೆ ಹೋಗಿ, ಯುನಿಫಾರ್ಮ್ ಕೂಡ ಖರೀದಿ ಮಾಡಿ ತಂದು, ಹುಡುಗ ಹಾಕಿಕೊಂಡು ಬಂದಿದ್ದ ಬಣ್ಣದ ಅರವೀ ಅಲ್ಲೇ ಸಾಲಿ ಒಳಗ ಎಲ್ಲಾರ ಮುಂದನss ಕಳದು (ಬಿಚ್ಚಿ), ಹುಡುಗ್ಗ ಯುನಿಫಾರ್ಮ್ ಹಾಕಿಸಿ ಹೋಗಿ ಬಿಡತಿದ್ದರು. ಇಕಿ ನೋಡಿದ್ರ ಇನ್ನೂ ಚೊಣ್ಣ ಅಂದ್ರೇನು ಚಡ್ಡಿ ಅಂದ್ರೇನು ಅಂತ ಕೇಳಿಕೋತ್ತ ಕೂತಾಳ. ಎಂತಾ ಅವ್ವಾ ಇಕಿ? ಎಂತೆಂತಾ ಹಾಪ್ ಮಂದಿಗೆ ಅಡ್ಮಿಶನ್ ಕೊಡ್ತಾರಪಾ ನಮ್ಮ ತಲಿ ಇಲ್ಲದ ಹೆಡ್(?) ಮಾಸ್ತರು ಅಂತ ಸರ್ ಪೇಚಾಡಿಕೊಂಡರು.
ನೋಡ್ರೀ..... ನೀವು ಫುಲ್ ಪ್ಯಾಂಟ್ ಹೊಲಿಸಿ ಅದನ್ನ ಹಾಪ್ ಮಾಡಿಸಿ ಚೊಣ್ಣ ಮಾಡಿ ಹಾಕಿಸಿ ಕಳಿಸಿದರೂ ಏನೂ ತೊಂದ್ರೀ ಇಲ್ಲರೀ. ಒಟ್ಟಿನ್ಯಾಗ ನೀಲಿ ಚೊಣ್ಣ ಬಿಳೆ ಅಂಗಿ ಯುನಿಫಾರ್ಮ್ ಹಾಕಿಸಿ ಕಳಸರೀ. ತಿಳೀತರೀ? ನಾ ಹೋಗಬೇಕರೀ ಈಗ. ನೋಡ್ರೀ ಎಷ್ಟು ದಾಂಧಲೆ ಹಾಕ್ಲೀಕತ್ತಾರ ಮಂಗ್ಯಾನ ಮಕ್ಕಳು, ಅಂತ ಅಂದವರೇ ಗದ್ದಲ ಹಾಕುತ್ತಿದ್ದ ಹುಡಗರ ಕಡೆ ಕೆಕ್ಕರಿಸಿ ನೋಡಿದರು ಸರ್. ಒಬ್ಬ ಕಿಸಕ್ ಅಂತ ನಕ್ಕ. ಸರ್ ಬೀಪಿ ಏರಿ ಹೋಯಿತು. ದಡಬಡ ಹೋದವರೇ ಅವನ್ನ ಎಳಕೊಂಡು ಬಂದು ಆ ಬೆಂಗಳೂರು ಮಾತೆಯ ಮುಂದೆಯೇ ದನ ಬಡದಾಂಗ ಬಡಿದು, ಹ್ಯಾಂಗ? ಅನ್ನೋ ಲುಕ್ ಬ್ಯಾರೆ ಕೊಟ್ಟರು. ಹೀಂಗ ಬಡಿಲಿಲ್ಲ ಅಂದ್ರ ಈ ಮಂಗ್ಯಾನಮಕ್ಕಳು ಸುಧಾರಿಸದೋದಿಲ್ಲ ಬಿಡ್ರೀ, ಅಂತ ಡೈಲಾಗ್ ಬ್ಯಾರೆ. ತನ್ನ ಮಗನೂ ಸಹಿತ ಅವರೆಲ್ಲರ ಮಧ್ಯೆ 'ಮಂಗ್ಯಾನಮಗ'ನಾಗಿ, ಧಾರವಾಡಕ್ಕೆ ಬಂದು ಮಂಗ್ಯಾನ ಮಗನನ್ನು ಹಡೆದ ತಪ್ಪಿಗೆ ತಾನೂ ಮಂಗ್ಯಾ ಆದೆ ಅನ್ನೋ ಫೀಲಿಂಗ್ ಒಳಗೆ ಬೆಂಗಳೂರು ಮಾತೆ ಜಗಾ ಖಾಲಿ ಮಾಡಿದಳು. ಮಂಗಾ ಆಗೋದು ಎಷ್ಟು ಸುಲಭ ಧಾರವಾಡನಲ್ಲಿ ಗೊತ್ತಾ!? ಅಂತ ತನ್ನ ಬೆಂಗಳೂರು ಕನ್ನಡ ಒಳಗ ಡಂಗುರಾ ಹೊಡದಿರಬೇಕು ಆಮ್ಯಾಲೆ ಅಕಿ.
ಹಾಪ್ ಪ್ಯಾಂಟ್ ವಿಷಯದಿಂದ ಹಾಪ್ ಆಗಿದ್ದು ಹೀಗೆ.
ನಾವು ಧಾರವಾಡ ಮಂದಿ ನಮಸ್ಕಾರ ಮಾಡೋದನ್ನೂ ಸಹಿತ ಹಾಪ್ ಮಾಡಿ 'ಹಾಪ್ ನಮಸ್ಕಾರ' ಅಂತ ಒಂದು ಹೊಸ ರೀತಿಯ ನಮಸ್ತೆ ಅನ್ನೋದನ್ನ ಕಂಡು ಹಿಡಿದು ಬಿಟ್ಟೇವಿ. 'ಹಾಪ್ ನಮಸ್ಕಾರ' ಒಳಗೂ ಬೇರೆ ಬೇರೆ ತರಹದ ಹಾಪ್ ನಮಸ್ಕಾರ ಇರ್ತಾವ. ಅದಕ್ಕೊಂದು elaborate military salute manual ಹಾಂಗ 'ಹಾಪ್ ನಮಸ್ಕಾರ' manual ಅಂತ ಬರೀಬಹುದು.
ನಮಸ್ಕಾರ್ರೀ ಸರ್ರಾ, ಅಂದು ಬಲಗೈ ಒಂದss ಎತ್ತಿ, ಎದಿ ನಟ್ಟ ನಡು ಹಿಡದು, ಸ್ವಲ್ಪ ತಗ್ಗಿ ಬಗ್ಗಿ ಮಾಡಿಬಿಟ್ಟರೆ 'ಹಾಪ್ ನಮಸ್ಕಾರ' ಮಾಡಿದಂಗ. ನಮಸ್ಕಾರ ಮಾಡಿಸ್ಕೊಂಡವರು ನಿಮಗಿಂತ ದೊಡ್ಡವರು, ಮಾಸ್ತರ್, ಟೀಚರ್ ಮಂದಿ ಇದ್ದರ ಅವರೂ ಸಹಿತ ತಮ್ಮ ಬಲಗೈ ಒಂದೇ ಮ್ಯಾಲೆ ತೊಗೊಂಡು ಹೋಗಿ, ಹಣಿ ನಟ್ಟ ನಡು ಹಿಡದು, ತಲಿ ಸ್ವಲ್ಪ ಬಗ್ಗಿಸಿ, ನಮಸ್ಕಾರ ಅಂದು ಬಿಟ್ಟರ ಹಾಪ್ ನಮಸ್ಕಾರಕ್ಕೆ ಪ್ರತಿ ಹಾಪ್ ನಮಸ್ಕಾರ ಮಾಡಿದಂಗ. ಲೆಕ್ಕ ಚುಕ್ತಾ. ಅವರು ನಿಮಗ ಬರೇ ಆಶೀರ್ವಾದ ಒಂದೇ ಅಲ್ಲ ಸ್ವಲ್ಪ ಗೌರವನೂ ತೋರಿಸಬೇಕು ಅಂದ್ರ ಅವರೂ ನಿಮ್ಮಂಗ ಸ್ವಲ್ಪ ತಗ್ಗಿ ಬಗ್ಗಿ ಎದಿ ಮುಂದ ಬಲಗೈ (ಒಂದೇ) ತಂದು ಸರಿಸಮಾನ ಹಾಪ್ ನಮಸ್ಕಾರ ಮಾಡಬಹುದು.
ಈ 'ಹಾಪ್ ನಮಸ್ಕಾರ' ಅನ್ನೋದು ಮಾಡವರಿಗೆ ಮತ್ತ ಮಾಡಿಸಿಕೊಳ್ಳವರಿಗೆ ಇಬ್ಬರಿಗೂ ಭಾಳ convenient. ನಮ್ಮ ಧಾರವಾಡ ಮಂದೀದು ಎರಡೂ ಕೈ ಟೋಟಲ್ ಫ್ರೀ ಇರೋದು ಭಾಳ ಅಪರೂಪ. ಚೀಲ, ಸೈಕಲ್ ಹ್ಯಾಂಡಲ್, ಸ್ಕೂಟರ್ ಹ್ಯಾಂಡಲ್, ನಾಯಿ / ಹಂದಿ ಓಡಿಸೋ ವಾಕಿಂಗ್ ಸ್ಟಿಕ್, ಮತ್ತೊಂದು ಮಗದೊಂದು ಅಂತ ಏನರ ಒಂದಲ್ಲ ಒಂದು ಸಾಮಾನು ಒಂದು ಕೈಯಾಗ ಇದ್ದss ಇರ್ತದ. ಹಾಂಗಾಗಿ ಎರಡೂ ಕೈ ಜೋಡಿಸಿ ಫುಲ್ ನಮಸ್ಕಾರ ಮಾಡೋದು ಭಾಳ ಕಠಿಣ. ಭಾಳ ರಿಸ್ಕಿ ಸಹಿತ. ಎರಡೂ ಕೈ ಬಿಟ್ಟು ಮಾಡೋದು ಏನರ ಇದ್ದರ ಅದು ಬಾಯಿಯೊಳಗ ಎರಡೂ ಕೈಗಳ ಬೆಟ್ಟು ಹೆಟ್ಟಿ ಸೀಟಿ ಹೊಡೆಯೋದು ಒಂದೇ ಇರಬೇಕು. ಅಷ್ಟು ದೊಡ್ಡ ರಿಸ್ಕ್ ತೊಗೋ ಬೇಕು ಅಂದ್ರ ಅದಕ್ಕ ತಕ್ಕ ರಿವಾರ್ಡ್ ಕೊಡಬಹುದಾದ 'ಮಾಲ್' (ಐಟಂ,ಬಾಂಬ್,ಫಿಗರ್,ಪೀಸ್, ಹುಡುಗಿ) ಸುತ್ತ ಮುತ್ತ ಇರಲೇಬೇಕು. ಇಲ್ಲಂದ್ರ ಇಲ್ಲ.
ಮತ್ತ ನಮಸ್ಕಾರ receive ಮಾಡೋರಿಗೂ ವಾಪಸ್ ಹಾಪ್ ನಮಸ್ಕಾರ ಮಾಡೋದು ಸರಳ. ಯಾಕಂದ್ರ ಮ್ಯಾಕ್ಸಿಮಮ್ ನಮಸ್ಕಾರದ ಶಿಕ್ಷೆಗೆ (?) ಈಡಾಗವರು ಅಂದ್ರ ಮಾಸ್ತರ್ ಮಂದಿ, ಪ್ರೊಫೆಸರ್ ಮಂದಿ, ದೊಡ್ಡ ಸಾಹೇಬರು ಮಂದಿ. ಅವರಿಗೆ ಮುಂಜಾನೆಯಿಂದ ಸಂಜೀ ತನಕಾ ಬಿಟ್ಟೂ ಬಿಡದೆ, ನಮಸ್ಕಾರ್ರೀ ಸರ್ರಾ, ಅಂತ ಹಾಪ್ ನಮಸ್ಕಾರ ಮಾಡಿಸಿಕೊಂಡು ಮಾಡಿಸಿಕೊಂಡು ಸಾಕಾಗಿ ಬಿಟ್ಟಿರ್ತದ. ಕಾಟಾಚಾರಕ್ಕ ಏನೋ ಒಂದು ತಿರುಗಿ ಮಾಡಿ ತಪ್ಪಿಸಿಕೊಂಡು ಹೋದ್ರ ಸಾಕಗಿರ್ತದ. ಹಾಂಗಾಗಿ ಅವರೂ ಒಂದು ಹಾಪ್ ನಮಸ್ಕಾರ ಹಾಕಿ ಬಚಾವ್ ಆಗ್ತಾರ.
ಹಾಪ್ ನಮಸ್ಕಾರ ಮಾಡುವ ಮತ್ತು ಅದನ್ನು ಸ್ವೀಕರಿಸಿ ವಾಪಸ್ ಹಾಪ್ ನಮಸ್ಕಾರ ಮಾಡುವ ಒಂದು ಚಿಕ್ಕ ಪ್ರಾತ್ಯಕ್ಷಿಕೆ.
ಗಂಡಸೂರ ಪ್ಯಾಂಟಿಗೆ ಪ್ಯಾಂಟss ಹಾಪ್ ಮಾಡಿದ ಮ್ಯಾಲೆ ಹೆಂಗಸೂರ ಸೀರಿ ಹಾಪ್ ಮಾಡಿಲ್ಲ ಅಂದ್ರ ಹ್ಯಾಂಗ? ಹೆಂಗಸೂರು, ಅದೂ ಮಹಿಳಾವಾದಿ ಫೆಮಿನಿಸ್ಟ್ ಹೆಂಗಸೂರು, ಗಂಡಸರು ಪ್ಯಾಂಟ್ ಹಾಪ್ ಮಾಡಿ ಹಾಪ್ ಪ್ಯಾಂಟ್ ಮಾಡಿಕೊಂಡರು, ನಮ್ಮ ಹೆಂಗಸೂರದು ಏನೂ(?) ಹಾಪ್ ಮಾಡಲೇ ಇಲ್ಲ ಅಂತ ಜಗಳಾ ತೆಗಿಬಾರದು ಅಂತ ಹೇಳಿ ಅವರ ಸೀರೀನss ಹಾಪ್ ಮಾಡಿ 'ಹಾಪ್ ಸೀರಿ' ಅಂತ ಒಂದು ಡ್ರೆಸ್ ಸಹಿತ ತಯಾರ ಮಾಡಿ ಬಿಟ್ಟೇವಿ. ಅಲ್ಲಾ ಏನೂ ಹಾಪ್ ಮಾಡಿಲ್ಲ ಅನಲಿಕ್ಕೆ ಅವರ ತಲಿ ಇವರು, ಇವರ ತಲಿ ಅವರು ಹಾಪ್ ಮಾಡಿಕೋತ್ತ ಇರ್ತಾರ. ಅದು ಪ್ರಕೃತಿಯಿಂದಾದ ಸಜಹ ಹಾಪ್. ಅದನ್ನ ಬಿಟ್ಟು ಹೆಂಗಸೂರದ್ದು ಹಾಪ್ ಮಾಡಿದ್ದು ಅಂದ್ರ ಸೀರಿನss ಇರಬೆಕು. ಶುದ್ಧ ಕನ್ನಡ ಒಳಗ ಏನು ಲಂಗಾ ದಾವಣಿ ಅಂತಾರೋ ಅದಕ್ಕ ನಮ್ಮ ಮಂದಿ ಅನ್ನೋದು 'ಹಾಪ್ ಸೀರಿ'. ಸ್ಕರ್ಟ್, ಪರಕಾರ, ಮತ್ತೊಂದು, ಮಗದೊಂದು ಹಾಕುತ್ತಿದ್ದ ಬಾಲೆಯರು ದೊಡ್ಡವರಾಗಿ ಸೀರೆಗೆ ಶಿಫ್ಟ್ ಆಗೋಕಿಂತ ಮೊದಲು ಸ್ವಲ್ಪ ದಿವಸ ಪ್ರಾಕ್ಟೀಸ್ ಆಗಲಿ ಅಂತ 'ಹಾಪ್ ಸೀರಿ' ಡ್ರೆಸ್ ಬಂದಿರಬಹುದು. ಆದ್ರ ಚೂಡಿದಾರ್ ಅನ್ನೋದು ಬಂದ ಮ್ಯಾಲೆ 'ಹಾಪ್ ಸೀರಿ' ಒಂದss ಏನ್ ಬಂತು, ಫುಲ್ ಸೀರಿ ಸಹಿತ ಆಫ್ರಿಕಾದ ಘೇಂಡಾ ಮೃಗದಾಂಗ ನಶಿಸಿ ಹೋಗ್ಲೀಕತ್ತುಬಿಟ್ಟದ. ಈಗಿನ ಹೆಂಗಸೂರಿಗೆ ಮನ್ಯಾಗಿದ್ದಾಗ, ಓಣ್ಯಾಗಿದ್ದಾಗ ಅಸಡ್ಡಾಳ ಸರ್ಕಸ್ ಟೆಂಟ್ ಅಂತಹ ನೈಟೀ, ಹೊರಗ ಬಂದ್ರ ಚೂಡಿದಾರ್. ಮುತ್ತಜ್ಜಿ, ಅಜ್ಜಿ, ಮಗಳು, ಮಮ್ಮಗಳು, ಮಿಮ್ಮಗಳು ಎಲ್ಲರೂ ಇದೇ ಡ್ರೆಸ್ ಕೋಡಿಗೆ ಬಂದು ಬಿಟ್ಟ ಮ್ಯಾಲೆ 'ಹಾಪ್ ಸೀರಿ' 'ಫುಲ್ ಸೀರಿ' ಎಲ್ಲ ಹರೋ ಹರೋ ಅಂದು ಬಿಟ್ಟಾವ. 'ಹಾಪ್ ಸೀರಿ' ಹಾಕವರು ಭಾಳ ಕಮ್ಮೀ ಈಗ. ಯಾವದರ ಭಾಳ ಸಂಪ್ರದಾಯಸ್ತರ ಮನಿ ಹುಡುಗ್ಯಾರು ಹಾಕಬಹುದು. ಮತ್ತ ಅದನ್ನ ಹಾಕಿಕೊಂಡ ಹುಡುಗ್ಯಾರಿಗೆ, ಪ್ಯಾರಾಚೂಟ್ ಏ ಪ್ಯಾರಾಚೂಟ್, ಅಂತ ಕಿಡಿಗೇಡಿ ಹುಡುಗುರು ಕಾಡಸ್ತಾರ ಬ್ಯಾರೆ. ಪರಕಾರ ಪೋಲ್ಕಾ ಹಾಕಿಕೊಂಡವರಿಗೆ 'ಪ್ಯಾರಾಚೂಟ್' ಅಂತ ಕಾಡೋದು ಜಾಸ್ತಿ. ಯಾಕಿರಬಹುದು? ಆ ಅಸಡ್ಡಾಳ ಸಂಪ್ರದಾಯಸ್ತ ಡ್ರೆಸ್ ಒಳಗ ಹುಡುಗಿ ನೋಡಿದ್ರ ಪ್ಯಾರ್ ಆಗೋದು ದೂರ ಉಳೀತು, ಏನಾರಾ ನಾಕಾಣೆ ಎಂಟಾಣೆ ಪ್ಯಾರ್ ಆಗಿದ್ದರೂ ಸಹ ಛೂಟ್ ಜಾತಾ ಹೈ (ಬಿಟ್ಟು ಹೋಗುತ್ತದೆ) ಅಂತ ಪ್ಯಾರಾಛೂಟ ಅಂತ ಕಾಡಿಸ್ತಾರೋ ಏನೋ? ಕಾಡಿದ ಕಿಡಿಗೇಡಿಗಳನ್ನ ಅಥವಾ ಕಾಡಿಸಿಕೊಂಡ ಪ್ಯಾರಾಚೂಟಗಳನ್ನೇ ಕೇಳಬೇಕು.
ಪ್ಯಾರ್ ಕರನೇ ವಾಲೇ ನಹಿ ಪೆಹನತೆ ಪ್ಯಾರಾಛೂಟ. ಪೆಹನತೆ ಹೈ ಶಾನ್ ಸೆ ಚೂಡಿದಾರ್, ಮಿಡಿ, ಮಿನಿ, ಮ್ಯಾಕ್ಷಿ...ಅಂತ ಶಾನ್ ಮೂವಿಯ ಜೀತೇ ಹೈ ಶಾನ್ ಸೆ ಹಾಡು ನೆನಪು ಆಗಿಬಿಡ್ತು. ಸೂಡ್ಲೀ
ಮ್ಯಾಲೆ ಇದ್ದಾಳ ನೋಡ್ರೀ - 'ಹಾಪ್ ಸೀರಿ' ಸುಂದರಿ. ಇಕಿಗೆ ಯಾರೋ ಕಿಡಿಗೇಡಿ, ಏ ಪ್ಯಾರಾಚೂಟ್!!, ಅಂತ ಕಾಡಿರಬೇಕು. ಏ ಹಲ್ಕಟ್! ಅಂತ ಅದಕ್ಕೇ ಅವಂಗ ಬೈಲಿಕತ್ತಿರಬೇಕು ಅಕಿ! ಮಸಡಿ, ಕೈ ನೋಡಿದರ ಹಂಗಾ ಅನ್ನಸ್ತದ. ಅಲ್ಲಾ?
ಮೇಲಿನ ಚಿತ್ರಕೃಪೆ: http://farm3.static.flickr.com/2620/4200931751_9198f7bc07_o.jpg
ಒಮ್ಮೆ ಒಬ್ಬಾಕಿ 'ಹಾಪ್ ಸೀರಿ' ಹುಡುಗಿಗೆ ನಮ್ಮ ಟೀಚರ್ ಅಂತ ತಿಳ್ಕೊಂಡು 'ಹಾಪ್ ನಮಸ್ಕಾರ' ಮಾಡಿಬಿಟ್ಟಿದ್ದೆ!! ಗೊತ್ತದ ಏನು? 'ಹಾಪ್ ಸೀರಿ' ಹುಡುಗಿಗೆ 'ಹಾಪ್ ನಮಸ್ಕಾರ' ಮಾಡಿದ 'ಹಾಪಾ' ನಾ ಒಬ್ಬನೇ ಇರಬೇಕು.
ಅದೇನಾಗಿತ್ತಂದರ....ನಾವು ಯೋಳನೆತ್ತಾ (7th) ಇದ್ದಾಗ ಒಬ್ಬರು ಹೊಸಾ ಲೇಡಿ ಟೀಚರ್ ಬಂದಿದ್ದರು. ಮಾತ್ರ TCH ಮುಗಿಸಿದ್ದರು. ಹೆಚ್ಚೆಚ್ಚ ಅಂದ್ರ 21-22 ವರ್ಷ ಅವರಿಗೆ. ಅವರಿಗೆ ಒಬ್ಬಾಕಿ ತಂಗಿ. ಏನೋ ಒಂದೆರಡು ವರ್ಷ ಸಣ್ಣಾಕಿ. ನೋಡಲಿಕ್ಕೆ ಇಬ್ಬರೂ ಒಂದss ತರಹ ಇದ್ದರು. ಹತ್ತಿರ ಹೋಗಿ ರವಗಾಜು (ಭೂತಗನ್ನಡಿ, magnifying glass) ಹಚ್ಚಿ, ಡೀಪ್ ಸ್ಕ್ಯಾನ್ ಮಾಡಿ ನೋಡಿದರ ಮಾತ್ರ ಅಕ್ಕ ಯಾರು ತಂಗಿ ಯಾರು ಅಂತ ಗೊತ್ತ ಆದರೂ ಆಗಬಹುದು. ಅದೂ ಖಾತ್ರಿ ಇಲ್ಲ. ಅವಳಿ ಜವಳಿ ಇದ್ದಂಗ ಇದ್ದರು.
ಹೀಂಗಿದ್ದಾಗ ಒಮ್ಮೆ ಅವರ ಮನಿ ಮುಂದಿಂದನ ಸೈಕಲ್ ಮ್ಯಾಲೆ ಭರ್ರ ಅಂತ ಸಾಲಿಗೆ ಹೊಂಟಿದ್ದೆ. ಏಕ್ದಂ ಥೇಟ್ ಟೀಚರ್ ಹಾಂಗss ಇರಾಕಿ ಒಬ್ಬಾಕಿ ಎದರಿಗೆ ಬರೋದು ಕಾಣಿಸ್ತು. 'ಹಾಪ್ ಸೀರಿ' ಹಾಕ್ಕೊಂಡು ಬರ್ಲೀಕತ್ತುಬಿಟ್ಟಿದಳು! ನಮ್ಮ ಟೀಚರ್ ಯಾವಾಗಲೂ ಸಾಲಿಗೆ ಫುಲ್ ಸೀರಿ ಉಟ್ಟಗೊಂಡು ಬರ್ತಿದ್ದರು. ಏನಾತಪಾ ಇವರಿಗೆ? ಇವತ್ಯಾಕ ಹಾಪ್ ಸೀರಿ? ಅಂತ ವಿಚಾರ ಬಂತು. ಅಷ್ಟರಾಗ ಹಾಪ್ ಸೀರಿ ಹುಡುಗಿ ಬ್ಯಾರೆ ಹತ್ತಿರ ಬಂದು ಬಿಟ್ಟಿದ್ದಳು. ನಮ್ಮ ಟೀಚರ್ ಹೌದೋ ಅಲ್ಲೋ ಅಂತ ಭಾಳ ಡೌಟ್ ಬಂತು. ಒಂದು ಹಾಪ್ ನಮಸ್ಕಾರ ವೇಸ್ಟ್ ಹೋದರೂ ಫರಕ್ಕ್ ಇಲ್ಲ ಆದರೆ ಟೀಚರ್ ಗೆ ನಮಸ್ಕಾರ ತಪ್ಪಬಾರದು ಅಂತ ಹೇಳಿ, 'ಹಾಪ್ ಸೀರಿ' ಹುಡುಗಿ ಸೈಕಲ್ ಮುಂದ ಬಂದ ಕೂಡಲೇ, ಬಲಗೈ ಎತ್ತಿ, ಸೈಕಲ್ ಹೊಡಕೋತ್ತನ, ನಮಸ್ಕಾರ್ರೀ ಟೀಚರ್, ಅಂತ ಅಂದು ಬಿಟ್ಟೆ. ಹಾಪ್ ಸೀರಿ ಹುಡುಗಿ ತಿರುಗಿ ಹಾಪ್ ನಮಸ್ಕಾರ ಅಂತ ವಾಪಸ್ ನಮಸ್ಕಾರ ಅಂತೂ ಮಾಡಲಿಲ್ಲ. ಮ್ಯಾಲಿಂದ ನಾಚಿಗೊಂಡು, ತಲಿ ಕೆಳಗ ಹಾಕಿಕೊಂಡು, ಒಂದು ನಮೂನಿ ಕಿಸಿ ಕಿಸಿ ನಕ್ಕೋತ್ತ ಹೋಗಿ ಬಿಟ್ಟಳು. ನಮ್ಮದೂ ಸೈಕಲ್ ಜೋರ್ ಇತ್ತು. ರವಗಾಜ ಹಚ್ಚಿ ನೋಡಿ, ಡೀಪ್ ಸ್ಕ್ಯಾನ್ ಮಾಡಿ ಇಕಿ ನಮ್ಮ ಟೀಚರೋ ಅಥವಾ ಅವರ ತಂಗಿನೋ ಅಂತ ನೋಡಲಿಕ್ಕೆ ಆಗಲಿಲ್ಲ. ಕಿಸಿ ಕಿಸಿ ನಕ್ಕಿದ್ದು ನೋಡಿದರ ಅವರ ತಂಗಿನೇ ಇರಬೇಕು ಅಂತ ಅನ್ನಿಸ್ತು. ಅಥವಾ ನಮ್ಮ ಟೀಚರೇ ಇದ್ದು, ಎಲ್ಲೇ ಹಾಪ್ ಸೀರಿ ಉಟ್ಟಗೊಂಡು, ಸ್ಟೂಡೆಂಟ್ ಕೈಯಾಗ ಸಿಕ್ಕೊಂಡು, ಹಾಪ್ ನಮಸ್ಕಾರ ಮಾಡಿಸಿಕೊಂಡೆ ಅಂತ ಟೀಚರ್ ಗೆ ನಾಚಿಗಿ ಆಗಿ, ನಮಸ್ಕಾರ ಮಾಡದೇ, ಹಾಂಗss ಹೋದರೋ ಅಂತ ಸಂಶಯ ಕೂಡ ಬಂತು. ಅಕ್ಕರ ಇರಲೀ ತಂಗ್ಯರಾ ಇರಲೀ ಬಿಡು ಅಂತ ಸಾಲಿಗೆ ಬಂದು ಮುಟ್ಟಿದೆ.
ಸಾಲಿಗೆ ಬಂದು ಮುಟ್ಟಿದರ ಮೊತ್ತಮೊದಲು ಯಾರು ಕಾಣಬೇಕು? ಫುಲ್ ಸೀರಿ ಉಟ್ಟಗೊಂಡ ಟೀಚರ್. ಐದು ನಿಮಿಷದಾಗ ಹಾಪ್ ಸೀರಿಂದ ಫುಲ್ ಸೀರಿಗೆ ಶಿಫ್ಟ್ ಆಗಿ, ಸಾಲಿನೂ ಮುಟ್ಟಲಿಕ್ಕೆ ನಮ್ಮ ಟೀಚರ್ ಆರ್ಡಿನರಿ ಮನುಷ್ಯಾನss ಇದ್ದರು. ದೆವ್ವ, ಭೂತ, ಮೋಹಿನಿ ಮತ್ತೊಂದು ಇರಲಿಲ್ಲ. ಹಾಂಗಾಗಿ ನಾ ಹಾಪ್ ನಮಸ್ಕಾರ ಹಾಕಿದ್ದು ಅವರ ತಂಗಿಗೆ ಅಂತ ಖಾತ್ರಿ ಆತು. ಒಂದು ಹಾಪ್ ನಮಸ್ಕಾರ ವೇಸ್ಟ್ ಆದ ಬಗ್ಗೆ ಸ್ವಲ್ಪ್ ಫೀಲ್ ಆತು. ಆದರೂ ಟೀಚರ್ ಗೆ ನಮಸ್ಕಾರ ಮಾಡೋದು ತಪ್ಪಿಸಬಾರದು ಅಂತ ಹೇಳಿ ಈಗ ಸಿಕ್ಕಿದ ಫುಲ್ ಸೀರಿ ಟೀಚರ್ ಗೆ ಅಪರೂಪಕ್ಕ ಫುಲ್ಲಾಗಿ ಎರಡೂ ಕೈಯಿಂದ ಫುಲ್ ನಮಸ್ಕಾರ ಕೂಡ ಹಾಕಿದೆ. ಟೀಚರ್ ಆಶ್ಚರ್ಯ ಆಗಿ, ಯಾಕಪಾ ಈ ಹಾಪಾ ಇವತ್ತು ಹಾಪ್ ನಮಸ್ಕಾರದ ಬದಲೀ ಫುಲ್ ನಮಸ್ಕಾರ ಹಾಕ್ಲಿಕತ್ತಾನ, ಅಂತ ಲುಕ್ ಕೊಟ್ಟರು. ಮತ್ತ ಹಾಪೂ ಅಲ್ಲದ ಫುಲ್ಲೂ ಅಲ್ಲದ ಗೋಣು ಬಗ್ಗಿಸಿ ಮೌನ ನಮಸ್ಕಾರ ಹಾಕಿದ ಟೀಚರ್ ಇನ್ನೊಬ್ಬ ಟೀಚರ್ ಜೊತೆ ಮಾತಾಡಿಕೋತ್ತ ಹೋದರು. ಏನ್ರೀ ಟೀಚರ್ ನಿಮ್ಮ ತಂಗಿಗೆ ಹಾಪ್, ನಿಮಗ ಫುಲ್, ಒಟ್ಟಿನ್ಯಾಗ ದೀಡ್ (ಒಂದೂವರೆ) ನಮಸ್ಕಾರ ದೀಡ್ ಪಂಡಿತನ ಗತೆ ಹಾಕಿದರ, ಫುಲ್ ಹೋಗಲೀ, ಹಾಪ್ ಬ್ಯಾಡ ಅಟಲೀಸ್ಟ್ ಒಂದು ಕ್ವಾರ್ಟರ್ ನಮಸ್ಕಾರರ ಹಾಕೋದು ಬಿಟ್ಟು ಬರೆ ಗೂಳವ್ವನ ಗತೆ ಗೋಣು ಬಗ್ಗಿಸಿ ಹೊಂಟೀರೆಲ್ಲಾ ಅಂತ ಅನ್ನಬೇಕು ಅಂತ ಮಾಡಿದೆ. ಆದ್ರ ಬ್ಯಾಡ ಅಂತ ಬಿಟ್ಟೆ.
ಇಲ್ಲೆ ಅಮೇರಿಕಾ ಒಳಗ ನೋಡಿದ ಅತ್ಯಂತ ವಿಚಿತ್ರ ಸೈನ್ ಅಂದ್ರ 'baby on board'. ಮೊದಮೊದಲು ಏನಂತನೇ ಗೊತ್ತಾಗಲಿಲ್ಲ. ಆಮ್ಯಾಲೆ ತಿಳೀತು. ಸಣ್ಣ ಕೂಸು, ಬಾಲ ಬಚ್ಚೆ ಇರೋ ಮಂದಿ ತಮ್ಮ ತಮ್ಮ ಕಾರ್ ಖಿಡಕಿಗೆ ಅದೊಂದು ವಿಚಿತ್ರ ಪ್ಲಾಕ್ ಹಚ್ಚಿಗೊಂಡು ಇರ್ತಾರ ಅಂತ. ಯಾಕ ಅಂತ ಇನ್ನೂ ತಿಳಿದಿಲ್ಲ. ನಮ್ಮ ಗಾಡಿ ಒಳಗ ಸಣ್ಣ ಕೂಸು ಅದ, ಬಂದು ಗುದ್ದವರು, ಡಿಕ್ಕಿ ಹೊಡೆಯವರು ಸ್ವಲ್ಪ ನೋಡಿಕೊಂಡು ಗುದ್ದರೀಪಾ, ಸಾವಕಾಶ ಡಿಕ್ಕಿ ಹೊಡಿರೀಪಾ, ಅಂತ ರಿಕ್ವೆಸ್ಟ್ ಮಾಡಿಕೊಳ್ಳಲಿಕ್ಕೆ ಏನು? ಗೊತ್ತಿಲ್ಲ.
ಆದ್ರ ಆ 'baby on board' ಪ್ಲಾಕ್ ನೋಡಿದಾಗೆಲ್ಲ ಏನು ಅನ್ನಿಸೋದು ಅಂದ್ರ 'ಹಾಪ್ ಆನ್ ಬೋರ್ಡ್' (haap on board) ಅನ್ನೋ ಒಂದು ಪ್ಲಾಕ್ ಸಿಕ್ಕಿದ್ದರ ಎಷ್ಟು ಬೆಷ್ಟ್ ಇತ್ತು ಅಂತ. ಹಾಪ್ ಇದ್ದವರು ಗರ್ವದಿಂದ 'ಹಾಪ್ ಆನ್ ಬೋರ್ಡ್' ಅಂತ ತಮ್ಮ ತಮ್ಮ ಗಾಡಿ ಮ್ಯಾಲೆ ಹಾಕ್ಕೊಂಡು ಹೋಗಬಹುದಿತ್ತು. ಟ್ರಾಫಿಕ್ ಸಿಗ್ನಲ್ ಒಳಗ ನಿಂತಾಗ, ಬಾಜೂ ಗಾಡಿ ಒಳಗ 'ಹಾಪ್ ಆನ್ ಬೋರ್ಡ್' ಅಂತ ಪ್ಲಾಕ್ ಕಂಡರ ಗಾಜು ಇಳಿಸಿ, ಲೇ ಹಾಪಾ! ಅಂತ ಒಳಗಿದ್ದ ಹಾಪಾ, ಹಾಪಿಗಳಿಗೆ ವಿಶ್ ಮಾಡಬಹುದಿತ್ತು.
ಹಾಂಗಂತ ವಿಚಾರ ಮಾಡ್ತಿದ್ದಾಗ ಒಂದು ಪ್ಲಾಕ್ ಕಂಡೇ ಬಿಡ್ತು. ಕೆಳಗ ಅದ ನೋಡ್ರೀ. ಇನ್ನೇನು ತಡ? ಒಂದು ಮಸ್ತ ಕಲರ್ ಪ್ರಿಂಟ್ ಔಟ್ ತೆಗೆದು ಕಾರಿಗೆ ಹಚ್ಚಿಗೊಂಡು ಬಿಡ್ರೀ. ಹಾಪ್ ಹಾಪ್ ಮಂದಿ networking ಮಾಡಲಿಕ್ಕೆ ಬೆಷ್ಟ ಐಡಿಯಾ ಇದು. ಎಲ್ಲೋ ದೂರ ದೇಶದಾಗ ನಮ್ಮೂರಿನ ಹಾಪ್ ಸಿಕ್ಕ ಅಂದ್ರ ಅದರ ಖುಷಿನೇ ಬೇರೆ. ಒಂದು ಹಾಪ್ ನಮಸ್ಕಾರ ಹಾಕಿ, ಹಾಪ್ಸೂಳಿಮಗನss....ಯಾ ಊರ ಆತಾಪಾ ನಿನಗಾ? ಯಾವ ಹಾಪರ ಪೈಕಿ ನೀ? - ಅಂತ ಟ್ರಾಫಿಕ್ ಸಿಗ್ನಲ್ ರೆಡ್ ನಿಂದ ಗ್ರೀನ್ ಆಗಿ, ಬಾಕಿ ಮಂದಿ ಬೊಂಬಡಾ ಹೊಡಕೊಂಡರೂ, ಸಿಕ್ಕಿದ ಹಾಪ್ ಧಾರವಾಡಿ ಜೊತಿ ಹರಟಿ ಮುಗಿಸಿ, ಬೊಂಬಡಾ ಬಜಾಯಿಸಿದವರಿಗೆ ನಟ್ಟ ನಡು ಬೆರಳು ಚಂದಾಗಿ ತೋರಿಸಿಯೇ ಆ ಮ್ಯಾಲೆ ಗಾಡಿ ಎತ್ತೋದು. ಏನಂತೀರಿ?
'ಸರ್ವೇ ಜನ ಸುಖಿನೋ ಭವಂತು' ಹಳೇದಾತು. ಈಗ ಏನಿದ್ರೂ, 'ಸರ್ವೇ ಜನ ಹಾಪೋ ಭವಂತು'. ಹಾಪ್ ಆಗಿ ಬಿಟ್ಟರ ಸುಖ ತಂತಾನೇ ಬರ್ತದ. ಹಾಪ್ ಅಲ್ಲದವರ ಅವಸ್ಥೆ ಯಾರಿಗೂ ಬ್ಯಾಡ. ಅವರೂ ಎಲ್ಲ ಲಗೂ ಲಗೂ ಹಾಪ್ ಆಗಿ ಸರ್ವಂ ಹಾಪಮಯಂ ಆಗಿ ಬಿಟ್ಟರೆ ಅಲ್ಲೇ ಸಚ್ಚಿದಾನಂದ. ಆನಂದದ ಚರಸೀಮೆ. ಬಯಲುಸೀಮ್ಯಾಗ ಚರಸೀಮೆ ಎಲ್ಲಿಂದ ಬಂತು ಕೇಳಿದರ ಬೈತಾರ ನೋಡ್ರೀ ನಮ್ಮ ಧಾರವಾಡ ಮಂದಿ...........ಲೇ ಹೋಗಲೇ ಹಾಪ್....ಏನೇನರ ಕೇಳ್ತೀ..... ಹಾಪನ್ನ ತಂದು....ಹಾಪ್ಸೂಳಿಮಗನ ಪ್ರಶ್ನೆ ನೋಡ್ರೀ..... ಬಯಲುಸೀಮ್ಯಾಗ ಚರಸೀಮೆ ಅಂದ್ರ ಮುಂಜಾನೆ ಚರಗಿ ತೊಗೊಂಡು ಹೋಗೋ ಸೀಮಿಲೇ (ಜಗಾ) ಮಂಗ್ಯಾನ್ ಕೆ.....ಅಂತ.
ಗರ್ವ್ ಸೆ ಕಹೋ ಹಮ್ ಹಾಪ್ ಹೈ!

ಸಿಂಪಲ್ ನೀಲಿ ಚೊಣ್ಣಾ ಮತ್ತ ಸ್ಯಾಂಪಲ್ ಚೊಣ್ಣಾ ಹಜಾರೆ ತರಹದ ಹುಡುಗ |

ಶಾಸನಾನುಸಾರ ನೀಡಿದ ವಿಶೇಷ ಸೂಚನೆ : ಮೇಲೆ ಹಾಕಿದ ಹಾಪ್ ನಮಸ್ಕಾರದ ಪ್ರಾತ್ಯಕ್ಷಿಕೆಯಲ್ಲಿ ಯಾವದೇ ಪ್ರಾಣಿಯನ್ನೂ ಹಿಂಸಿಸಲಾಗಿಲ್ಲ.

4 comments:
ಹ್ಹ ಹ್ಹ. ಈ ಹಾಪ ಅನ್ನೋದು ಹ್ಯಾಪದ ಅಪಭ್ರಂಶ ಅನ್ಕೊಂಡಿದ್ದೆ ! ಈಗ ಎಲ್ಲಾ ವಿವರ ತಿಳೀತು. :)
ನೋಡ್ಜ್ಯಾ!!! ಹಾಪ್ ಅಂದ್ರು ಎಂತದು ಹೇಳಿ ;)
Thank you
ಮಸ್ತ್ ಮಸ್ತ್ ಬರದೀರ್ರೀ, ಓದಿಕೋತ ಇದ್ದರೆ ಧಾರವಾಡದಾಗ ಇದ್ದಂಗ ಅನಸ್ತದ. ಲೇಖನ ಮುಗದಮ್ಯಾಲೆ ಅರೆ ನಾ ಈಗ ಧಾರವಾಡದಾಗ ಇಲ್ಲ ಅನ್ನೋ ಖಬರ ಬರ್ತದ....
ಓದಿ ಒಳ್ಳೆಯ ಕಾಮೆಂಟ್ ಹಾಕಿದ ವೆಂಕಟೇಶ ಮನ್ನಾರಿ ಅವರಿಗೆ ಧನ್ಯವಾದಗಳು.
Post a Comment