ಮೊನ್ನೆ ಹಾಂಗs ಚೀಪ್ಯಾನ ಮನಿ ಕಡೆ ಹೋದೆ.
ರೂಪಾ ವೈನಿ ಬಂದು ಬಾಗಲಾ ತೆಗದರು.
ಬಾರಪಾ ಬಾ! ನಾಲಾಯಕ್ ನವಾಬ! ಬಾ! ಆರಾಮೇನು? ನೀ ಏನು ಹೊನಗ್ಯಾ. ಯಾವಾಗಲೂ ಆರಾಮೇ ಇರ್ತಿ. ಮಂದಿ ಜೀನಾ ಹರಾಮ್ ಮಾಡ್ತೀ. ಬಾ ಕೂಡು, ಅಂತ 'ಸ್ವಾಗತಾ' ಮಾಡಿದರು ರೂಪಾ ವೈನಿ.
ಯಾಕ್ರೀ ವೈನಿ? 'ನಾಲಾಯಕ್ ನವಾಬ' ಅಂತೀರಿ. ಕೆಲಸಿದ್ದಾಗ 'ಪ್ರೀತಿ ಮೈದ್ನಾ' ಅಂತ ಈ ಮೈದುನಂಗ ಮೈದಾ ಹಿಟ್ಟು ಹಚ್ಚಿ ಪಾಲಿಶ್ ಹೊಡಿತೀರಿ. ಈಗ ನೋಡಿದರ ನಾಲಾಯಕ್ ನವಾಬಾ ಅದು ಇದು ಅಂತೀರಿ. ಯಾಕ್ರೀ? - ಅಂತ ಕೇಳಿದೆ.
ಹಾಂಗs ಸುಮ್ಮನನೋ. ಚ್ಯಾಸ್ಟಿ ಏನಪಾ. ಆವಾ ನಿಮ್ಮ ದೋಸ್ತ ಕರೀಮಾ ನಲತ್ತವಾಡದ ನವಾಬ. ಅವನ ದೋಸ್ತಾ ನೀ. ಮ್ಯಾಲಿಂದ ನಾಲಾಯಕ್ ಬ್ಯಾರೆ. ಅದಕ್ಕ ನಾಲಾಯಕ್ ನವಾಬಾ ಅಂದೆ. ಅಷ್ಟ. ಪ್ರೀತಿ ಮೈದ್ನಾ ನಾಲಾಯಕ್ ಇರಬಾರದು ಅಂತ ಅದೇನು? - ಅಂದ್ಕೋತ್ತ ವೈನಿ ಒಳಗ ಹೋದರು.
ಕೂತು ಪೇಪರ್ ಓದ್ಲಿಕತ್ತೆ. ಚೀಪ್ಯಾ ಎಂಟ್ರಿ ಕೊಟ್ಟಾ. ಪಟ್ಟಾಪಟ್ಟಿ ಪೈಜಾಮಾ ಮ್ಯಾಲೆ ಸ್ಯಾಂಡೋ ಬನಿಯನ್. ಸ್ಯಾಂಡೋ ಬನಿಯನ್ ಅಂದ್ರ ಕಟ್ ಬನಿಯನ್. ಆ ಬನಿಯನ್ ಬ್ಯಾರೆ ಲಂಡ್ (ಗಿಡ್ಡ) ಬನಿಯನ್ ಆಗಿ ಹೊಟ್ಟಿ ಮ್ಯಾಲಿನ ಹೊಕ್ಕುಳ ಕಾಣಸ್ಲಿಕತ್ತಿತ್ತು. ಕಟ್ ಬನಿಯನ್ ಹಾಕ್ಕೊಳ್ಳೋ ಗಂಡಸೂರಿಗೆ ಇರೊ ರೋಗ ಚೀಪ್ಯಾಗೂ ಅದ. ಆ ರೋಗ ಏನು ಅಂದ್ರ....ಬಲಗೈ ತೊಗೊಂಡು ಹೋಗಿ ಎಡ ಬಗಲ ಸಂದಿಯೊಳಗ ಹೆಟ್ಟಿಗೊಳ್ಳೊದು, ಎಡಗೈ ತೊಗೊಂಡು ಹೋಗಿ ಬಲ ಬಗಲ ಸಂದಿಯೊಳಗ ಹೆಟ್ಟಿಗೊಳ್ಳೊದು. ಅಲ್ಲಿ ಇರುವ ಅಮೂಲ್ಯವಾದ ರೋಮಗಳು ಅವನೋ ಇಲ್ಲೋ ಅಂತ ಜಗ್ಗಿ ಜಗ್ಗಿ ಚೆಕ್ ಮಾಡೋದು. ಜಗ್ಗೋ ಅಬ್ಬರಕ್ಕ ಎಲ್ಲರೆ ಒಂದು ರೋಮ ಕಿತ್ತು ಬಂದ್ರ ಆಗೋ ನೋವಿಗೆ ಮಸಡಿ ಕಿವಿಚೋದು. ಈ ಕಟ್ ಸ್ಯಾಂಡೋ ಬನಿಯನ್ ಹಾಕ್ಕೊಳ್ಳೋ ಗಂಡಸೂರ ಹಣಿ ಬರಹವೇ ಇಷ್ಟು. ಇವನೂ ಹಾಂಗೇ ಮಾಡ್ಕೋತ್ತ ಎಂಟ್ರಿ ಕೊಟ್ಟಾ. ಅದೇನು ರೋಮಾಂಚನ ಆದ್ರ ಬಗಲ ಸಂದ್ಯಾಗಿನ ರೋಮಗಳೇ ನಿಗರಿ ನಿಲ್ತಾವೋ ಅನ್ನೋ ಹಾಂಗ ಚೆಕ್ ಮಾಡ್ಕೊತ್ತಾರಪಾ ಈ ಚೀಪ್ಯಾನಂತಹ ಮಂದಿ. ರೋಮಾಂಚನ ಆದಾಗ ರೋಮವೇ ಇಲ್ಲದಿದ್ದರ ಅಂತ ಚಿಂತಿ ಇರಬೇಕು! ಅದಕ್ಕೇ ಅಷ್ಟು ಜಗ್ಗಿ ಜಗ್ಗಿ ಚೆಕ್ಕಿಂಗ್ ಈ ಸ್ಯಾಂಡೋ ಬನಿಯನ್ ಮಂದಿದು.
ಏನಲೇ ಚೀಪ್ಯಾ ಇದು ಅವತಾರ? ಒಳ್ಳೆ ಸೇತುಕುಳಿ ಗೋವಿಂದನ ಗತೆ ಕಾಣಲಿಕತ್ತಿ. ಹೇಶಿ ಮಂಗ್ಯಾನಿಕೆ. ಒಂದು ದಾಡಿ ಮಾಡಿಲ್ಲ, ಚಂದಾಗಿ ಕಟಿಂಗ್ ಇಲ್ಲ, ಸ್ನಾನ ಇಲ್ಲ. ಬಗಲ ಕೆರಕೋತ್ತ ಬಂದು ಬಿಟ್ಟಿ ಸೇತುಕುಳಿ ಗೋವಿಂದನ ಹಾಂಗ, ಅಂತ ಹೇಳಿದೆ.
ಯಾರಲೇ ಸೇಟ್ ಕೋಳಿ ಗೋವಿಂದ? ಅದೆಂತಾ ಸೇಟಜೀ ಹೆಸರೋ ಮಾರಾಯಾ? ಸೇಟ್ ಕೋಳಿ ಗೋವಿಂದ ಅಂತ. ಎಲ್ಲಿಯವರು ಅವರು? ಗುಜರಾತ್ ಇರಬೇಕು. ಅಲ್ಲಾ? - ಅಂತ ಕೇಳಿಬಿಟ್ಟ ಚೀಪ್ಯಾ.
ಹೋಗ್ಗೋ!!!! ನಾ ಸೇತುಕುಳಿ ಗೋವಿಂದ ಅಂದ್ರ ಇವಾ ಸೇಟ್ ಕೋಳಿ ಗೋವಿಂದ ಅಂದ್ರ ಯಾರು ಅಂತ ಕೇಳಲಿಕತ್ತಾನ. ಏನ ಮಾಡಲಿಕ್ಕೆ ಬರ್ತದ? ಹೇಳಿ ಕೇಳಿ ಹುಬ್ಬಳ್ಳಿ ಒಳಗ ಸೇಟು (ಮಾರವಾಡಿ) ಕಂಪನಿ ಒಳಗ ಕೆಲಸ ಮಾಡ್ತಾನ. ಅನ್ನ ಹಾಕೋ ದಣಿ ಸೇಟ್ ಇದ್ದಾರ. ಹಾಂಗಾಗಿ ಸೇತುಕುಳಿ ಗೋವಿಂದ ಅಂದಿದ್ದು ಇವಂಗ ಸೇಟ್ ಕೋಳಿ ಗೋವಿಂದ ಅಂತ ಕೇಳಿಬಿಟ್ಟದ.
ಸೇಟ್ ಕೋಳಿ ಗೋವಿಂದ ಅಲ್ಲಲೇ ಹಾಪಾ! ಸೇತುಕುಳಿ ಗೋವಿಂದ! ಸೇತುಕುಳಿ ಗೋವಿಂದ! ವೀರಪ್ಪನ್ ಗ್ಯಾಂಗ್ ಒಳಗ ಇದ್ದಾ ನೋಡು. ಥೇಟ್ ಅವನ ಗತೆ ಕಾಣಲಿಕತ್ತಿ. ಹೇಶಿ ತಂದು! - ಅಂತ ಹೇಳಿದೆ.
ಸೀದಾ ವೀರಪ್ಪನ್ ಅಂದು ಬಿಡಬಹುದಿತ್ತಲ್ಲ. ಕೋಳಿ ಗೋವಿಂದ ಹುಂಜದ ಗೋವಿಂದ ಅದು ಇದು ಯಾಕ ಅಂತೀ? - ಅಂತ ಕೇಳಿದ.
ವೀರಪ್ಪನ್ ಅನ್ನಲಿಕ್ಕೆ ನಿನ್ನ ಮೀಸಿ ನೋಡ್ಕೋ ಮಂಗ್ಯಾನಿಕೆ. ಅವನ ಮೀಸಿ ಎಲ್ಲೆ ನಿನ್ನ ಹಿಟ್ಲರ್ ಟೈಪ್ ಟೂತ್ ಬ್ರಷ್ ಮೀಸಿ ಎಲ್ಲೆ? ಹಾಂ? ಲೇ.....ನಮ್ಮ ಕ್ಲಾಸಿನ ಪುರಾತನ ಸುಂದರಿ ಕೆಲವರ ಮೀಸಿ ನಿನ್ನಕಿಂತ ಮಸ್ತ ಇತ್ತು. ಅದಕ್ಕ ನಿನಗ ವೀರಪ್ಪನ್ ಬ್ಯಾಡ ಅಂತ ಹೇಳಿ ಸೇತುಕುಳಿ ಗೋವಿಂದ ಅಂತ ಹೇಳಿದೆ. ಏನು ಹೇಶಿ ಅವತಾರ ಮಾಡಿಕೊಂಡು ಕೂತಿ ಮಾರಾಯಾ, ಅಂತ ಹೇಳಿದೆ.
ಸುಮ್ಮ ಕೂಡಲೇ ಸಾಕು. ನನ್ನ ಮೀಸಿ ಬಗ್ಗೆ ಮಾತಾಡ್ತಾನ. ನಿನ್ನ ಮಸಡಿ ನೋಡ್ಕೋ. ಯಕ್ಷಗಾನದಾಗ ಹೆಣ್ಣು ವೇಷ ಮಾಡೋ ಗಂಡಸೂರ ಗತೆ, ಮಾರಿ ಮ್ಯಾಲೆ ಕೈ ಇಟ್ಟರ ಜಾರೋಹಾಂಗ ಆ ಪರಿ ನುಣ್ಣಗ ಶೇವ್ ಮಾಡಿಕೊಂಡು ಅಡ್ಯಾಡ್ತೀ. ನನ್ನ ಮೀಸಿ ಮತ್ತ ರೂಪದ ಮ್ಯಾಲೆ ಕಾಮೆಂಟ್ ಮಾಡ್ತೀ ಏನಲೇ ಮಂಗ್ಯಾನಿಕೆ, ಅಂತ ಹೇಳಿದ ಚೀಪ್ಯಾ.
ನಮ್ಮ ಮೀಸಿ ವಿಷಯ ಬಿಡಪಾ. ಮೀಸಿ ಬಿಡೋ ಟೈಮ್ ಒಳಗ ನಾವೂ ಎಲ್ಲಾ ಅವತಾರ ಮಾಡೇವಿ. ಈಗ ಟೈಮ್ ಉಳಿಲಿ ಅಂತ ಎಲ್ಲಾ ಕ್ಲೀನ್ ಶೇವ್ ನೋಡಪಾ. ತಲಿ ಬಾಲ್ಡೀ ಆಗಿಲ್ಲ ಅಂತ ಇದ್ದ ಕೂದಲಾ ಇಟಗೊಂಡೇವಿ ಅಷ್ಟ, ಅಂತ ಹೇಳಿದೆ.
ಅಷ್ಟರಾಗ ರೂಪಾ ವೈನಿ ಸಾಬುದಾಣಿ ಖಿಚಡಿ ಮತ್ತ ಛಾ ತಂದು ಕೊಟ್ಟರು. ಒಂದು ಹಳೆ ತಂಬಿಟ್ಟು ಕೂಡ ಇತ್ತು. ನಾಗರ ಪಂಚಮಿ ಆಗಿ ಮೂರ್ನಾಕ ವಾರ ಆಗಿರಬೇಕು. ಈ ತಂಬಿಟ್ಟು ತಿಂದರ ನಾಳಿಂದ ಚಂಬು ಹಿಡಕೊಂಡು ಓಡುವಂತಹ 'ಚಂಬಿಟ್ಟು' ರೋಗ ಶುರು ಆದೀತು ಅಂತ ಹೇಳಿ, ವೈನೀ!!! ತಂಬಿಟ್ಟು ತಿಂದಿದ್ದು ಭಾಳ ಆಗ್ಯದ್ರೀ. ಅದು ಬ್ಯಾಡ್ರೀ. ತೆಗದು ಬಿಡ್ರೀ, ಅಂತ ವಿನಂತಿ ಮಾಡಿಕೊಂಡೆ. ತಿನ್ನೋ.... ತಿನ್ನೋ..... ನನ್ನ ಪ್ರೀತಿಯ ಹೊನಗ್ಯಾ ಮೈದ್ನಾ....ತಿಂದು ತೇಗು, ಅಂತ ಹೇಳಿ ಅವರೂ ಸ್ವಲ್ಪನೇ ಜುಲ್ಮಿ ಮಾಡಿ ತಂಬಿಟ್ಟು ತೆಗೆದು ನಮಗೆ ಚಂಬಿಟ್ಟು ಆಗೋ ರಿಸ್ಕ್ ಕಮ್ಮಿ ಮಾಡಿದರು.
ಅನ್ನದಾತಾ ಸುಖೀ ಭವ! ಮಸ್ತ ವೈನಿ ಮಸ್ತ! - ಅಂತ ಹೇಳಿದೆ. ಬ್ರಹ್ಮರ್ಷಿ ಅಂತ ತಿಳಕೊಂಡು ಅಡ್ಯಾಡೋ ನಮ್ಮಂತ ಬೇವರ್ಸಿ ಬ್ರಹ್ಮಚಾರಿಗಳಿಗೆ ಹೊತ್ತಿಲ್ಲದ ಹೊತ್ತಿನ್ಯಾಗೂ ಊಟ, ನಾಷ್ಟಾ ಹಲವಾರು ವರ್ಷಗಳಿಂದ ಕೊಡುತ್ತ ಬಂದಿರುವ ಮಂದಿ ಅನ್ನದಾತರೇ. ಅವರು ಸುಖವಾಗಿ ಇರಲಿ.
ಏನಂದೀ ಮಂಗೇಶ್?! ಖಬರ ಅದನೋ ಇಲ್ಲೋ? ಅನ್ನದಾತಾ 'ಸಖೀ' ಭವ ಅಂದೀ? ಹಾಂ? ನಾ ನಿನ್ನ ಸಖಿ ಅಂದ್ರ ಗೆಳತಿ ಆಗಬೇಕಾ?ನಿನ್ನೆ ರಾತ್ರಿ ಯಾವ ಸಿನೆಮಾ ನೋಡಿ ಬಂದಿ? ನೀ ಕದ್ದು ಹೊಲಸ್ ಹೊಲಸ್ ಮಲಯಾಳೀ ಸಿನಿಮಾ ನೋಡ್ತೀ ಅಂತ ನನಗ ಗೊತ್ತದ. ಅದೇ ಗುಂಗಿನ್ಯಾಗ ಬಂದು ವೈನಿ ಯಾರು, ಗೆಳತಿ ಯಾರು ಅನ್ನೋ ಖಬರಿಲ್ಲದ ನನಗ ಸಖೀ ಭವ ಅಂದ್ರ ನಿನ್ನ ಗೆಳತಿ ಆಗು ಅನ್ನಲಿಕತ್ತಿ? ಹುಷಾರ್ ಮಂಗೇಶಿ. ಹಾಕಿ ಬಿಡ್ತೇನಿ ನಾಕು, ಅಂತ ವೈನಿ ಚಿಟಿ ಚಿಟಿ ಮಾಡಿದರು.
ನಾವೇನೂ ಘಾಬರಿ ಆಗಲಿಲ್ಲ. ವೈನಿ ತಿಂಡಿ ತೀರ್ಥ ಕೊಟ್ಟಾಗೆಲ್ಲ ನಾವು ಅನ್ನದಾತಾ ಸುಖೀ ಭವ ಅಂತೇವಿ. ಅವರು, ನಾ ನಿನ್ನ ಸಖಿ ಆಗಬೇಕ ಅಂತಾರ. ಜೋಕ್ ಮಸ್ತಿ ಎಲ್ಲಾ ಕಾಮನ್.
ರೀ ವೈನಿ ನಾನು ಸುಖೀ ಭವ ಅಂದೆ ರೀ. ಸಖಿ ಅಲ್ಲ. ವೈನಿ ಅಂದ್ರ ಒಂದು ತರಹದ ಆತ್ಮೀಯ ಗೆಳತಿ ಇದ್ದಂಗ ನೋಡ್ರೀ. ನಿಮ್ಮ ಜೋಡಿ ಕ್ಲೋಸ್ ಆಗಿ ಖುಲ್ಲಂ ಖುಲ್ಲಾ ಎಲ್ಲಾ ಹೇಳಿಕೊಂಡಂಗ ನಿಮ್ಮ ಪತಿದೇವರು ಚೀಪ್ಯಾನ ಕಡೆ ಎಲ್ಲಾ ಹೇಳಿಕೊಳ್ಳಲಿಕ್ಕೆ ಆಗೋದಿಲ್ಲ ನೋಡ್ರೀ. ಆ ದೃಷ್ಟಿಯಿಂದ ನೋಡಿದರ ವೈನಿ ಅಂದ್ರ ಒಂದು ತರಹದ ಸಖಿ ಗೆಳತಿ ಇದ್ದಂಗ ನೋಡ್ರೀ, ಅಂತ ಹೇಳಿ ಸಾಬುದಾಣಿ ಖಿಚಡಿ ಮುಕ್ಕಲಿಕ್ಕೆ ಶುರು ಮಾಡಿದೆ. ನಾವು ತಿನ್ನೋ ಸ್ಟೈಲ್ ನೋಡಿದವರು ತಿನ್ನೋದು ಅನ್ನೋದಿಲ್ಲ. ಮುಕ್ಕೋದು ಅಂತನೇ ಅಂತಾರ. ಇರ್ಲಿ ಬಿಡ್ರೀ. who cares?!
ಗೊತ್ತದನೋ. ಅದಕ್ಕ ನಿನ್ನ ನನ್ನ ಪ್ರೀತಿಯ ಮೈದ್ನಾ ಅನ್ನೋದು. ನಾನು ಭಾಭಿ ನೀನು ದೇವರ್. ಅಲ್ಲಾ? - ಅಂತ ಮಾತೃಸಹಜ ಪ್ರೀತಿಯಿಂದ, ಸಖಿ ಸಹಜ ಅಕ್ಕರೆಯಿಂದ ಹೇಳಿದರು ರೂಪಾ ವೈನಿ. ಇಂತಾ ವೈನಿ ಸಿಕ್ಕಿದ್ದು ನಮ್ಮ ನಸೀಬಾ.
ನೀವು ಭಾಭಿ ನಾನು ದೇವರ್. ಮತ್ತ ಚೀಪ್ಯಾ ಯಾರ್ರೀ ವೈನಿ? - ಅಂತ ಕೇಳಿದೆ
ಅವರಾss ? ಅವರು ದೆವ್ವರ್. ದೇವರಂತಹ ನೀನು ದೇವರ್. ದೆವ್ವದ ಗತೆ ಅವತಾರ ಮಾಡಿಕೊಂಡು ಕೂತಾರ ನೋಡು ನಿಮ್ಮ ಚೀಪ್ಯಾ ಅವರು ಖರೆ ಅಂದ್ರೂ ದೆವ್ವರ್, ಅಂತ ವೈನಿ ಜೋಕ್ ಹೊಡದರು. ಚೀಪ್ಯಾಗ ಅದರ ಬಗ್ಗೆ ಖಬರ್ ಇರಲಿಲ್ಲ. ಆವಾ ಸಂಯುಕ್ತ ಕರ್ನಾಟಕ ಒಳಗ ದಿನ ಭವಿಷ್ಯ ಓದಿಕೋತ್ತ ಕೂತಿದ್ದ. ಕುಂಭ ರಾಶಿಯ ಹುಂಬ ಸೂಳೆಮಗ ಚೀಪ್ಯಾ. ಇವತ್ತು ಇರಬೇಕು ಅವನ ಭವಿಷ್ಯ ಒಳಗ - ಪತ್ನಿಯಿಂದ ಮನಶಾಂತಿ ಭಗ್ನ- ಅಂತ.
ಇದು ಭಾಬಿ, ದೇವರ್ ಔರ್ ದೆವ್ವರ್ ಆದಂಗ ಆತು ನೋಡ್ರೀ ವೈನಿ. 'ಪತಿ ಪತ್ನಿ ಔರ್ ವೋ' ಅಂತ ಒಂದು ಹಳೆ ಮೂವಿ ಬಂದಿತ್ತು ನೋಡ್ರೀ. ಹಾಂಗ ನಾವೂ ಒಂದು ಮೂವಿ ಮಾಡೋಣ ನಡ್ರೀ. ಭಾಬಿ, ದೇವರ್ ಔರ್ ದೆವ್ವರ್, ಅಂತ ನಾನು ಜೋಕ್ ಹೊಡದೆ. ವೈನಿ ತೊಡಿ ತಟ್ಟಿಕೊಂಡು ನಕ್ಕರು.
ಏನ್ ವೈನಿ....ಶ್ರಾವಣ ಮಾಸಾ ನೆಡದದ. ದುರ್ಗೆಯರ ಊಟ ಯಾವಾಗ? ನನ್ನ ಕರೆಯೋದು ಮರತೀರಿ ಮತ್ತ. ದುರ್ಗೆಯರ ಊಟದಾಗ ಈ ದುರ್ಗಮುರ್ಗಿ ದುರ್ಗಪ್ಪನ ಮರಿ ಬ್ಯಾಡ್ರೀ, ಅಂತ ಹೇಳಿದೆ. ಬಿಟ್ಟಿ ಊಟ ಮಿಸ್ ಮಾಡಿಕೊಳ್ಳೋದು ಮಹಾ ಪಾಪ. 'ಬಿಟ್ಟಿದೇವ' ಅನ್ನೋ ಟೈಟಲ್ ನಮಗ. ಹಾಂಗಾಗಿ ಸಿಕ್ಕಲ್ಲೆಲ್ಲಾ ಬಿಟ್ಟಿ ಕಟಿಲಿಕ್ಕೇ ಬೇಕು.
ಲೇ ಹುಚ್ಚ ಮಂಗೇಶ! ದುರ್ಗೆಯರ ಊಟ ನವರಾತ್ರಿ ಟೈಮ್ ಒಳಗ. ಅಂದ್ರ ಅಕ್ಟೋಬರ್ ಒಳಗ. ಶ್ರಾವಣ ಮಾಸದೊಳಗ ಒಂದು ಶುಕ್ರವಾರ ಮುತ್ತೈದೆಯರ ಊಟ ಅಂತ ಇಟ್ಟುಗೊಂಡ ಇರ್ತೇನಿ. ಅದು ಹೆಂಗಸೂರಿಗೆ ಮಾತ್ರ. ಅದೂ ಮುತ್ತೈದೆಯರಿಗೆ ಮಾತ್ರ. ನೀ ಎಲ್ಲಾ ಅದಕ್ಕ ಬರೋ ಹಾಂಗಿಲ್ಲ. ಆವತ್ತು ನಿಮ್ಮ ಗೆಳ್ಯಾ ಚೀಪ್ಯಾನೇ ಇರಂಗಿಲ್ಲ. ನಿನ್ನ ಕರಿತೇನಾ? ಅದೂ ಕೆಟ್ಟ ಕೆರಾ ಹಿಡದ ಬ್ರಹ್ಮಚಾರಿನ? ಬ್ರಹ್ಮಚಾರಿಗಳನ್ನ ಮುತ್ತೈದೆಯರ ಊಟಕ್ಕ ಕರಿಯೋ ಹಾಂಗಿಲ್ಲ. ಹ್ಯಾಂಗೂ ಮುತ್ತೈದೆಯರ ಊಟದ ದಿವಸ ನಿಮ್ಮ ಚೀಪ್ಯಾ ನಿನ್ನ ರೂಮಿಗೆ ಬಂದು ಕೂಡ್ತಾರ. ಗೊತ್ತದ ನನಗ. ಇಬ್ಬರೂ ಕಂಠ ಪೂರ್ತಿ ಬಿಯರ್, ಅದೂ ಹಗಲು ಹೊತ್ತಿನ್ಯಾಗೇ, ಕುಡದು ಹೋಟೆಲ್ ನಲ್ಲಿ ಊಟ ಮಾಡ್ತೀರಿ ಅಂತ. ಅಷ್ಟ ನಾನ್ವೆಜ್ ತಿನ್ನ ಬ್ಯಾಡ್ರೀ. ಬೀಯರ್ ಕುಡದು ಹಾಳಾಗಿ ಹೋಗ್ರೀ, ಅಂತ ಶ್ರಾವಣ ಶುಕ್ರವಾರದ ಮುತ್ತೈದೆಯರ ಊಟಕ್ಕ ನಮಗೆ ಆಹ್ವಾನ ಇಲ್ಲ ಅಂತ ವೈನಿ ಖಚಿತ ಪಡಿಸಿಬಿಟ್ಟರು.
ಮುತ್ತೈದೆಯರ ಊಟಕ್ಕ ಬ್ರಹ್ಮಚಾರಿ ಅದೂ ನನ್ನಂತಹ ಅಖಂಡ ಬ್ರಹ್ಮಚಾರಿ ಯಾಕ ಬರಬಾರದು ಅಂತ? ಹಾಂ? ಹಾಂ? - ಅಂತ ಕೇಳಿದೆ. Objection my Lord! ಅಂದಂಗ.
ಅದೇನೋ ಗಾದಿ ಮಾತೇ ಅದಲ್ಲೋ ಮಂಗೇಶ್.....ಏನದು....ಹಾಂ.... Never trust a husband too far, nor a bachelor too near.....ಅಂತಾದ್ರಾಗ ನೀನು ಸ್ಮಾರ್ತ ಬ್ರಹ್ಮಚಾರಿ ಬ್ಯಾರೆ. ಮಾತಿಗೊಮ್ಮೆ ನಿಮ್ಮ ಶಂಕರಾಚಾರ್ಯರು ಪರಕಾಯ ಪ್ರವೇಶ ಮಾಡಿ ಒಂದೇ ಸಲ ಮೂರ್ನಾಕು ಮಂದಿ ಹೆಂಗಸೂರಿಗೆ ಹೆಂಗ ಸ್ವರ್ಗಾ ತೋರಿಸಬಿಟ್ಟರು ಅದು ಇದು ಅಂತ ಕಥಿ ಬ್ಯಾರೆ ಹೇಳ್ತೀ. ಅಂತಾ ಶಂಕರಾಚಾರ್ರ ಶಿಷ್ಯ ನೀನು. ನಿನ್ನಂತ ಬ್ರಹ್ಮಚಾರಿನ ಮುತ್ತೈದೆಯರ ಊಟಕ್ಕ ಕರೆಯೋದು ಒಂದೇ ಮತ್ತ ಪಿಂಗಾಣಿ ಪಾತ್ರಿ ಪಗಡಿ ಅಂಗಡಿಯೊಳಗ ಗೂಳಿ ಬಿಡೋದು ಒಂದೇ. ಅದೇನೋ ಅಂತಾರಲ್ಲ bull in a china shop....ನೋಡಲಿಕ್ಕಂತೂ ದೇವರಿಗೆ ಬಿಟ್ಟ ಗೂಳಿ ಹಾಂಗೆ ಇದ್ದಿ. ಅದಕ್ಕ ನೀನು ಮುತ್ತೈದೆಯರ ಊಟಕ್ಕ ಬ್ಯಾಡ. ಎಲ್ಲಾ ನನ್ನ ಗೆಳತ್ಯಾರು ಬರ್ತಾರ. ನೀನು ಬಂದು ಏನರೆ ಕೆತ್ತೆಬಜೆ ಮಾಡಿದರ ಅವರ ಗಂಡಂದಿರು ಸನ್ಯಾಸ ತೊಗೊ ಬೇಕಾಗ್ತದ, ಅಂತ ಹೇಳಿ ವೈನಿ No Entry ಅಂತ ಬೋರ್ಡ್ ಹಾಕೇ ಬಿಟ್ಟರು.
ಎಲ್ಲಿ bull in a china shop ಬಿಡ್ರೀ ವೈನಿ. 'ಮಾದಕ ಮುತ್ತೈದೆಯರ ನಡುವೆ ಮತ್ತೇರಿದ ಮದಗಜ' ಅನ್ರೀ. ಹಾಂಗ ಅಂದ್ರ ನಮಗ ಏನೋ ಹೊಂದ್ತದ. bull in a china shop ಅಂದ್ರ bullshit ಅಂತ ಹೇಳಬೇಕಾಗ್ತದ ನೋಡ್ರೀ. bull in a china shop ಅಂದ ಕೂಡಲೇ ನೆನಪಾತು ನೋಡ್ರೀ. ಆ ಮಂಗ್ಯಾನಿಕೆ ಪಿಂಗಾಣಿ ಪಾತ್ರಿ ಪಗಡಿ ಮಾಲಿಕನ ಕೆಟ್ಟ ನಸೀಬಾ ನೋಡ್ರೀ. ಗೂಳಿ ಹೋಗಿ ಎಲ್ಲಾ ಒಡೆದು ಹಾಕಿ, ಎಲ್ಲಾ ರಾಮ ರಾಡಿ ಅಂತೂ ಎಬ್ಬಿಸಿ ಬಿಡ್ತು. ಅದರ ಮ್ಯಾಲೆ bullshit ಅಂದ್ರ ಶೆಗಣಿ ಬ್ಯಾರೆ ಹಾಕಿ ಹೋಗಿ ಬಿಡ್ತು. ನುಕ್ಸಾನ್ ಬ್ಯಾರೆ. ಮ್ಯಾಲೆ ಶೆಗಣಿ ಕ್ಲೀನ್ ಮಾಡೋ ತಲಿನೋವು ಬ್ಯಾರೆ. ಹಾ ಹಾ ಹಾ! ಅಂತ ನಕ್ಕೆ.
ಅಂತೂ ನಮಗ ಶ್ರಾವಣದ ಮುತ್ತೈದೆಯರ ಊಟದ ನಸೀಬಾ ಇಲ್ಲ. ಬನಾಕೆ ಕ್ಯೂ ಬಿಗಾಡಾ ರೆ, ಬಿಗಾಡಾ ರೆ ನಸೀಬಾ!

ಸ್ಯಾಂಡೋ ಬನಿಯನ್ ಉರ್ಫ್ ಕಟ್ ಬನಿಯನ್ |

1 comment:
ಮಾದಕ ಮುತ್ತೈದೆಯರ ನಡುವೆ ಮತ್ತೇರಿದ ಮದಗಜ.... A certificate.... hah ha ha ha ha
Post a Comment