Sunday, March 08, 2015

ಸ್ತ್ರೀ ದ್ವೇಷಿ vs. ಪುರುಷ ದ್ವೇಷಿ

'ನೀನು ಸ್ತ್ರೀ ದ್ವೇಷಿ (misogynist) ಕಣೋ' ಅಂದಳು ಆಕೆ. ಅಂದಾಕೆ ಹಳೆ ಗೆಳತಿ.

ಸಿಟ್ಟು ಬಂತು. ಸಂಯಮ ಮೀರುತ್ತಿತ್ತು. ಸುಮ್ಮ ಸುಮ್ಮನೆ ಹೀಗೆಲ್ಲ ಅಂದ್ರೆ ಮತ್ತೆ???????

'ಯಾಕೆ?' ಅಂದೆ.

'ಮತ್ತೇನು???? ನಿರ್ಭಯಾ ಪ್ರಕರಣದ ಡಾಕ್ಯುಮೆಂಟರಿ ಬಂದ ನಂತರ ನಿನ್ನ FB ಪೋಸ್ಟ್ ನೋಡಿದರೆ ಸಾಕು. ಎಲ್ಲ ಗೊತ್ತಾಗುತ್ತೆ,' ಅಂದು ಪೆಕಪೆಕಾ ಅಂತ ನಕ್ಕಳು.

ಬಾಯಿ ತುದಿಗೆ ಬಂದಿತ್ತು, ಅಂದು ಬಿಡೋಣ ಅಂತ. ಆದರೆ ಹೇಳಲಿಲ್ಲ. ಅದೇ ವ್ಯತ್ಯಾಸ ತಾನೇ? ನಮ್ಮ ಮತ್ತೆ ಅವರ ನಡುವೆ.

'ಹುಚ್ಚಿ! ನಾನು ಮಿಸೋಜೈನಿಸ್ಟ್ ಅಂತ ಆದ್ರೆ ನೀನು ನಿಜವಾಗಲೂ ಮಿಸಾಂಡ್ರಿಸ್ಟ್!!! (misandrist = ಪುರುಷ ದ್ವೇಷಿ)' ಅನ್ನೋಣ ಅನ್ನಿಸಿತ್ತು. ಹಾಗೆ ಅನ್ನೋದನ್ನ ಹೇಗೋ ತಡೆದುಕೊಂಡೆ. misogynist ಇದಕ್ಕೆ ಬರೋಬ್ಬರಿ ವಿರುದ್ಧ ಪದ misandrist ಅಂತ ನಮಗೆ ಗೊತ್ತಿದೆ ಅಂದಾಕ್ಷಣ ಯಾರ್ಯಾರಿಗೋ ಹೇಳಿ ಬಿಡೋಕೆ ಆಗುತ್ತೆಯೇ? ಅದೂ ಹಳೆ ಗೆಳತಿಯೊಬ್ಬಳಿಗೆ????

ಕಂಡ ಕಂಡ ಗಂಡಸರೆನ್ನೆಲ್ಲ 'ಸ್ತ್ರೀ ದ್ವೇಷಿ' ಅನ್ನುವ ಕಾರಣಗಳು ಆಕೆಗೆ ಸದ್ಯಕ್ಕೆಇವೆ ಅಂತ ನನಗೆ ಗೊತ್ತು. ಪ್ರೀತಿಸಿ ಮದುವೆಯಾದ ಗಂಡ. ಇಪ್ಪತ್ತು ವರ್ಷಗಳ ನಂತರ ಈಗ ಮದುವೆ ಫುಲ್ ಬರ್ಬಾದ್ ಆಗಿದೆ. ಅದೇನು ಲಫಡಾನೋ ಗೊತ್ತಿಲ್ಲ. 'ಅವನು ನಾಮ ಹಾಕಿದ್ದಾನೆ' ಅಂತ ಈಕೆ ಅಂದರೆ 'ಇವಳು ವಿಭೂತಿ ಪಟ್ಟಾ ಹೊಡೆದಿದ್ದಾಳೆ' ಅಂತ ಅವನು ಅನ್ನುತ್ತಾನೆ. ಇನ್ನು ಮಕ್ಕಳು? ಟೀವಿಯಲ್ಲಿ ಬರುವ 'ಹೀರೋ' ಒಬ್ಬನನ್ನು ನೋಡಿ 'ಅಪ್ಪಾ, ಅಪ್ಪಾ, there is dad' ಅನ್ನುತ್ತವೆ. ಆ ಹಳೆ, ರಿಟೈರ್ಡ್, ಎಕ್ಕುಟ್ಟಿಹೋದ ಹೀರೋ ಎಂದೋ ಹೀರಿದ್ದ ಮಧು ನೆನಪಿಸಿಕೊಂಡು ಮುಲುಗುತ್ತಾನೆ. ಯಾವದು ನಿಜವೋ??? ಇವರ ಪಂಚಾಯತಿ ಮುಗಿಯುವದಿಲ್ಲ. ಹಾಗಿದ್ದಾಗ ಇವರ ಪುರುಷ, ಸ್ತ್ರೀ ದ್ವೇಷದ ನಡುವೆ ನಮ್ಮಂತವರು ಮಟಾಶ್! ಏನು ಮಾಡೋಣ????

ಏನೋ ಕುಲದೇವರಾದ ಹೊನ್ನಾವರ ಹೊಸಾಕುಳಿ ಲಕ್ಷ್ಮಿನಾರಾಯಣ ಸಹನೆ ಸ್ವಲ್ಪ ಜಾಸ್ತಿಯೇ ಕೊಟ್ಟಿದ್ದಾನೆ. ಆಗಲೇ ಸಿಕ್ಕಾಪಟ್ಟೆ ನೊಂದಿರುವವಳ ಗಾಯಕ್ಕೆ ಮತ್ತೊಂದಿಷ್ಟು ಉಪ್ಪು ತಿಕ್ಕುವ ಮನಸಾಗಲಿಲ್ಲ. ಅದಕ್ಕೇ ಸುಮ್ಮನಿದ್ದೆ. ಅದೂ misogynist ಅನ್ನುವ ಬಿರುದು ಧರಿಸಿ. ಇದು ಹಾಲಾಹಲ ವಿಷಕ್ಕಿಂತ ಜಾಸ್ತಿ ಏನೂ ಅಲ್ಲವಲ್ಲಾ??? ;) ಜೈ ನೀಲಕಂಠ!  ಬಂ ಬಂ ಭೋಲೆನಾಥ! ;)

Misogynist and Misandrist ! :)

:) :)

(ಇದು ಕಥೆ. ಸ್ವಲ್ಪ ನಿಜವೂ ಇದೆ ;))

2 comments:

Nukki Vaze said...


Interesting!

Lingappa Alagappan said...


Good. A root cause analysis would help.