Saturday, May 09, 2015

ಹೆತ್ತವರಿಗೆ ಹೆಗ್ಗಣವೂ ಮುದ್ದು

ಹೆತ್ತವರಿಗೆ ಹೆಗ್ಗಣವೂ ಮುದ್ದು (ಹಳೆ ಗಾದೆ)

ಫೇಸ್ ಬುಕ್ ವರ್ಶನ್:

(ಲೈಕ್) ಒತ್ತುವವರಿಗೆ ಓತಿಕ್ಯಾತವೂ ಮುದ್ದು
(ಕಾಮೆಂಟ್) ಹಾಕುವವರಿಗೆ ಹಾವರಾಣಿಯೂ ಮುದ್ದು

ಮೊನ್ನೆ ಮಡಗಾಸ್ಕರ್ ದೇಶಕ್ಕೆ ಪ್ರವಾಸ ಹೋಗಿದ್ದ ಗೆಳತಿ ಪ್ರೊಫೈಲ್ ಫೋಟೋ ಹಾಕಿದ್ದಳು. ಅದರಲ್ಲಿ ಆಕೆ ಯಾರು, ಅಲ್ಲಿನ ಫೇಮಸ್ ಓತಿಕ್ಯಾತ ಯಾವದು ಅಂತ ಗೊತ್ತಾಗದೇ, ಆಕೆಯದ್ದು ಒತ್ತದೇ, ಅಂದರೆ ಪ್ರೊಫೈಲ್ ಫೋಟೋಗೆ ಲೈಕ್ ಒತ್ತದೇ ಕೂತಿದ್ದೆ. ಮೆಸೇಜ್ ಮಾಡಿ ಲೈಕ್ ಒತ್ತು ಅಂದಳು. 'ಏ! ನಾವು ಓತಿಕ್ಯಾತಕ್ಕೆಲ್ಲ ಲೈಕ್ ಒತ್ತುವದಿಲ್ಲ,' ಅಂದರೆ, 'ಏ! ಅದು ನಾನೋ. ನನ್ನ ಜೋಡಿ ಓತಿಕ್ಯಾತ ಅದ,' ಅಂದಳು. 'ಹಾಂಗೇನು?! ಸಾಲಿಯಾಗ ಇದ್ದಾಗ ನೀನೇ ಸಪಾಟ್ ಸುಂದರಿ ಓತಿಕ್ಯಾತ ಇದ್ದಂಗ ಇದ್ದಿ. ಅಂತೂ ಇಂತೂ ಮಡಗಾಸ್ಕರ್ ಓತಿಕ್ಯಾತ ನಿನಗಿಂತಲೂ ದೊಡ್ಡ ಓತಿಕ್ಯಾತ ಅನ್ನು,' ಅಂತ ಅಂದೆ.

ಮುಂದೆ ಅಕಿ ಮಾತಾಡೇ ಇಲ್ಲ. unfriend ಮಾಡಿದಳೇ? ಗೊತ್ತಿಲ್ಲ. ರೂಟಾ ಹೈ ತೋ ಮನಾಲೆಂಗೆ. ಬಿಗಡಾ ಹೈ ತೋ ಬನಾಲೆಂಗೆ. ಫಿರ್ ಭಿ ನ ಮಾನೆತೋ! ;) (https://goo.gl/WzJXVJ)

ಈ ನಮ್ಮ ಓತಿಕ್ಯಾತಕ್ಕೆ ಒತ್ತುತ್ತೀರಾ??? ಅಂದರೆ ಲೈಕ್ ಒತ್ತುತ್ತೀರಾ ಅಂತ!? ;)






3 comments:

Vimarshak Jaaldimmi said...


Great pic!

May be these are used for making the dreaded "maddu!"

sunaath said...

ಮಹೇಶ,
ಮಹಿಳೆಯ ಹೀಯಾಳಿಕೆ, ಎಷ್ಟೇ ಅಲ್ಪಪ್ರಮಾಣದ್ದೆನಿಸಲಿ, ಅಥವಾ Take in light spirit ಅಂತ ನೀವು ಹೇಳಲಿ, ನನಗದು ಸರಿ ಬರುವುದಿಲ್ಲ. ಆದುದರಿಂದ, ನಾನು ನಿಮ್ಮ ಲೇಖನಕ್ಕೆ Unlike ಒತ್ತುತ್ತಿದ್ದೀನಿ. ಕ್ಷಮಿಸಿ.

Mahesh Hegade said...

Thanks Sunaath sir for your honest comments. Appreciate it.