Sunday, April 24, 2016

'ಭಕ್ತ ಸಿರಿಯಾಳ' 'ಭಟ್ಟ ಹಳಿಯಾಳ' ಆಗಿಹೋಗಿದ್ದು!



ನಮ್ಮ ನಾಡಿನಲ್ಲಿ ಸಿಕ್ಕಾಪಟ್ಟೆ ಬಿಸಿಲು. ಧಗೆ. ತಾಪ. ಅದೂ ಉರಿಯುವ ತಾಪ. ಈ ಎಲ್ಲದಕ್ಕೆ ಸರಿಯಾದ ಗೀತೆ!

ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ 'ತಾಪ' ಶಂಕರ ಶಿವಶಂಕರ

ಭಕ್ತ ಸಿರಿಯಾಳ - ನಾವಿದನ್ನು ೧೯೮೦ ರಲ್ಲಿ ನೋಡಿದ್ದು.  ಎರಡನೇ ಕ್ಲಾಸ್. ಮರುದಿನ ಶಾಲೆಯ ಗೆಳೆಯನೊಬ್ಬನಿಗೆ, 'ಲೇ, ನಾ ನಿನ್ನೆ ಸಿನೆಮಾ ನೋಡಿದೆ ಲೇ!' ಅಂದೆ.

'ಯಾವ ಸಿನೆಮಾ??' ಅಂದ.

'ಭಕ್ತ ಸಿರಿಯಾಳ' ಅಂದೆ.

ಅವನ ಮುಖದ ಮೇಲೆ ದೊಡ್ಡ ??? ಚಿನ್ಹೆ.

ಇವನಿಗೆ ತಿಳಿಯಲಿಲ್ಲ ಅಂತ ಗೊತ್ತಾಗಿ 'ಭಕ್ತ ಸಿರಿಯಾಳ' ಅಂತ ಮತ್ತೊಮ್ಮೆ ಹೇಳಿದೆ.

ಕಡೆಗೂ ಆ ಪುಣ್ಯಾತ್ಮ ಕೇಳಿದ್ದು ಮಾತ್ರ legendary!

'ಅದೆಂತಾ ಸಿನೆಮಾನೋ?? ಭಟ್ಟ ಹಳಿಯಾಳ!?'

ಶಿವನೇ ಶಂಭುಲಿಂಗ! ನಾವು 'ಭಕ್ತ ಸಿರಿಯಾಳ' ಅಂದಿದ್ದು ಅವನಿಗೆ ಅದೆಂಗೆ 'ಭಟ್ಟ ಹಳಿಯಾಳ' ಅಂತ ಕೇಳಿಸಿತು ಅನ್ನುವದು ಈವರೆಗೂ ತಿಳಿದಿಲ್ಲ.

'ಭಕ್ತ' ಅನ್ನುವದು ಉತ್ತರ ಭಾರತದಲ್ಲಿ 'ಭಗತ್' ಆಗಿಬಿಡುತ್ತದೆ. ಆದರೆ ಭಕ್ತ ಭಟ್ಟ ಆಗುವದು ಮಾತ್ರ ನಮ್ಮ ಧಾರವಾಡದಲ್ಲೇ ಇರಬೇಕು. ಸಿರಿಯಾಳ ಹಳಿಯಾಳವಾಗಿದ್ದು ದೊಡ್ಡ ಮಾತಲ್ಲ ಬಿಡಿ. ಹಳಿಯಾಳ ನಮ್ಮ ಪಕ್ಕದ ಊರೇ.

3 comments:

K.A. Munjitre said...


Very interesting! Getting bhavas' functions accomplished in the hot sun will be a major task for the "melvicharaka."

sunaath said...

ಭಟ್ಟ ಹಳಿಯಾಳ ಅಮರ ರಹೇ!

Mahesh Hegade said...

Thanks Sunaath, Sir.