ಶಿಷ್ಯ: ಸ್ವಾಮೀಜಿ, ನನಗೊಬ್ಬಳು ಹೆಂಡತಿ ಬೇಕಾಗಿದ್ದಾಳೆ.
ಸ್ವಾಮೀಜಿ: ನಿನಗೆ ಬಂಗಾರದ ಹೆಂಡತಿ ಬೇಕೋ? ಬೆಳ್ಳಿಯ ಹೆಂಡತಿ ಬೇಕೋ?
ಶಿಷ್ಯ: ಬಂಗಾರದ ಹೆಂಡತಿ, ಬೆಳ್ಳಿಯ ಹೆಂಡತಿ ಅಂದ್ರೇನು ಸ್ವಾಮೀಜಿ?
ಸ್ವಾಮೀಜಿ: ಬಂಗಾರದ ಹೆಂಡತಿ ನಿನ್ನನ್ನು ಇಂಗ್ಲೀಷಿನಲ್ಲಿ, 'ಏ, ಯು,' ಎಂದು ಕರೆಯುತ್ತಾಳೆ. ಬೆಳ್ಳಿಯ ಹೆಂಡತಿ ನಿನ್ನನ್ನು ಹಿಂದಿಯಲ್ಲಿ, 'ಏ, ಜೀ' ಎಂದು ಕರೆಯುತ್ತಾಳೆ.
ಶಿಷ್ಯ: ಬಂಗಾರದ ಹೆಂಡತಿಯ 'ಏ, ಯು,' ಅಂದರೆ 'hey you' ಎಂದು ತಿಳಿಯಿತು. ಬೆಳ್ಳಿಯ ಹೆಂಡತಿಯ 'ಏ, ಜೀ' ಅಂದರೆ ಏನು ಸ್ವಾಮೀಜಿ?
ಸ್ವಾಮೀಜಿ: 'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದರ್ಥ!
ಕೇಳಿ ಶಿಷ್ಯನ ತಲೆಗೆ ಚಕ್ಕರ್ ಬಂದಂತಾಯಿತು. ಆದರೂ ಒಂದು ಕುತೂಹಲವಿತ್ತು.
ಶಿಷ್ಯ: ನಿಮ್ಮ ಬಂಗಾರದ ಮತ್ತು ಬೆಳ್ಳಿ ಹೆಂಡತಿ ಸಿಕ್ಕಾಪಟ್ಟೆ ಖತರ್ನಾಕ್. ಕೊಂಚವೂ ಗೌರವ ಕೊಡದೇ 'ಏ, ಯು,' ಎಂದು ಕರೆಯುವವಳಿಗೆ ಬಂಗಾರದ ಹೆಂಡತಿಯೆಂದೂ ಮತ್ತು ಖರಾಬಾಗಿ 'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳಿಗೆ ಬೆಳ್ಳಿಯ ಹೆಂಡತಿಯೆಂದು ಏಕೆ ಕರೆಯುತ್ತೀರಿ? ಬಂಗಾರ, ಬೆಳ್ಳಿ ಎಂದರೆ ಉತ್ತಮ ಎಂದರ್ಥವಲ್ಲವೇ?
ಸ್ವಾಮೀಜಿ: ನಿನ್ನ ತಲೆ! ನಿನಗೆ ಬೇಸಿಕ್ ಕೆಮಿಸ್ಟ್ರಿ ಕೂಡ ಗೊತ್ತಿಲ್ಲ ಅನ್ನಿಸುತ್ತದೆ. 'ಏ, ಯು,' (AU) ಎಂದು ಕೂಗುವವಳು ಬಂಗಾರದ ಹೆಂಡತಿ ಏಕೆಂದರೆ ಬಂಗಾರದ ರಾಸಾಯನಿಕ ಚಿನ್ಹೆ AU. ಹಾಗೇ ಬೆಳ್ಳಿಯ ರಾಸಾಯನಿಕ ಚಿನ್ಹೆ AG. ಹಾಗಾಗಿ 'ಏ, ಜೀ' (AG) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳು ಬೆಳ್ಳಿಯ ಹೆಂಡತಿ.
ಕೇಳಿದ ಶಿಷ್ಯ ಢಮಾರ್!
**
ಶಿಷ್ಯ: ಪತಿಗೆ husband ಎಂದೇಕೆ ಹೇಳುತ್ತಾರೆ?
ಸ್ವಾಮೀಜಿ: husband ಅಂದರೆ ಜಿಸ್ಕಾ ಹಸ್ನಾ ಬಂದ್ ಹೋಗಯಾ ಹೈ ವೋ ಹಸಬಂದ್ ಹೈ! ಅರ್ಥಾತ್ ಯಾರ ನಗು ನಿಂತು ಹೋಗಿದೆಯೋ ಅವನೇ ಹಸ್ಬೆಂಡ್!
**
ಶಿಷ್ಯ: ಮದುವೆಯ ದಿನ ಹುಡುಗಿಯೇಕೆ ಅಳುತ್ತಾಳೆ?
ಸ್ವಾಮೀಜಿ: ಅವಳು ಮದುವೆಯ ದಿನವೊಂದೇ ಅಳುತ್ತಾಳೆ. ಹುಡುಗ ನಂತರ ಜೀವನಪರ್ಯಂತ ಅಳುತ್ತಾನೆ!
**
ಸಂಸಾರಿ ಅಂದರೇನು?
ಸಂಸಾರಿ (ಸ್ತ್ರೀಲಿಂಗ): ಅರ್ಜೆಂಟಿನಲ್ಲಿ ನೈಟಿ ಸಿಗದಿದ್ದಾಗ ಕೈಗೆ ಸಿಕ್ಕ (some) ಸೀರೆ (Saree)ಯನ್ನೇ ಸುತ್ತಿಕೊಂಡವಳು. Some Saree = ಸಂಸಾರಿ.
ಸಂಸಾರಿ (ಪುಲ್ಲಿಂಗ): ಅರ್ಜೆಂಟಿನಲ್ಲಿ ಲುಂಗಿ, ಪಂಚೆ, ಪ್ಯಾಂಟು, ಚೊಣ್ಣ ಏನೂ ಸಿಗದಿದ್ದಾಗ ಕೈಗೆ ಸಿಕ್ಕ (some) ಹೆಂಡತಿಯ ಸೀರೆ (Saree)ಯನ್ನೇ ಸುತ್ತಿಕೊಂಡವನು. Some Saree = ಸಂಸಾರಿ.
**
What is THE height of reverse gender discrimination?
Cow dung is holy. Bullshit is you-know-what :)
**
ಸ್ವಾಮಿ ಅನುಭವಾನಂದ ಸರಸ್ವತಿಗಳು ತಮ್ಮ ಪ್ರವಚನಗಳ ಮಧ್ಯೆ ಇಂತಹ ಅಮೋಘ ಜೋಕುಗಳನ್ನು ಹೊಡೆಯುತ್ತಿರುತ್ತಾರೆ. ಬಿಡಿಬಿಡಿಯಾಗಿ ಓದಿದಾಗ, 'ಏನಪ್ಪಾ ಇವರು ಕೇವಲ ಸಂಸಾರಿಗಳನ್ನು, ದಂಪತಿಗಳನ್ನು ವ್ಯಂಗ್ಯ ಮಾಡುತ್ತಾರೆ' ಎಂದೆನಿಸಬಹುದು. ಆದರೆ ಸ್ವಾಮೀಜಿಯವರ ಸ್ಪೆಷಾಲಿಟಿ ಅಂದರೆ ಜನ ನಗಲು ಬಾಯ್ತೆರೆದಾಗ ಜ್ಞಾನದ, ವಿವೇಕದ ಅಮೂಲ್ಯ ಗುಳಿಗೆಯೊಂದನ್ನು ಕೂಡ ನುಸುಳಿಸಿರುತ್ತಾರೆ. ಅದು ಭಾಳ ಮಸ್ತ!
ಈಗ ಒಂದು ವರ್ಷದಿಂದ ನಾನಂತೂ ಸ್ವಾಮಿಗಳ ಬಿಗ್ ಫ್ಯಾನ್. ಅವರೂ ಅಷ್ಟೇ. ಏಕ್ದಂ ಹೈಟೆಕ್ ಸ್ವಾಮೀಜಿ. ತಮ್ಮ ಪ್ರತಿಯೊಂದು ಪ್ರವಚನವನ್ನೂ ನೀಟಾಗಿ ವಿಡಿಯೋ ಮಾಡಿ YouTube ಮೇಲೆ ಹಾಕಿರುತ್ತಾರೆ.
ನೋಡಿ. ಮಜಾ ಮಾಡಿ. ಪ್ರಯೋಜನ ಪಡೆದುಕೊಳ್ಳಿ.