Tuesday, October 03, 2017

ಯೋಗದ ಪ್ರಭಾವ

ಒಬ್ಬರ ಮಗನಿಗೆ ಉಗುರು ಕಚ್ಚುವ ಕೆಟ್ಟ ಅಭ್ಯಾಸ. ಏನೇ ಚಿಕಿತ್ಸೆ, counseling ಮಾಡಿದರೂ ಉಪಯೋಗವಾಗಲಿಲ್ಲ. ಯಾರೋ ಪರಿಚಿತರು ಹೇಳಿದರು, 'ಯೋಗಾಭ್ಯಾಸ ಕಲಿಸಿ. ಅದರಿಂದ ಈ ಕೆಟ್ಟ ಅಭ್ಯಾಸ ಬಿಟ್ಟರೂ ಬಿಡಬಹುದು.'

ಅದೂ ಒಂದು ಆಗಿಹೋಗಲಿ ಅಂತ ಆ ಹುಡುಗನನ್ನು ಯೋಗದ ಕ್ಲಾಸಿಗೆ ಸೇರಿಸಿದರು.

ಕೆಲಕಾಲದ ಮೊದಲು ಸಿಕ್ಕಿದ್ದ ಪರಿಚಿತರು ಮತ್ತೆ ಭೇಟಿಯಾದರು.

'ನಿಮ್ಮ ಮಗನನ್ನು ಯೋಗಾಭ್ಯಾಸಕ್ಕೆ ಕ್ಲಾಸಿಗೆ ಹಾಕಿದಿರೇ?' ಎಂದು ಕೇಳಿದರು.

'ಹೌದು. ಈಗ ಚೆನ್ನಾಗಿ ಯೋಗಾಸನಗಳನ್ನು ಹಾಕುತ್ತಾನೆ,' ಎಂದರು ಹುಡುಗನ ಪಾಲಕರು.

'ತುಂಬಾ ಸಂತೋಷ. ಈಗ ಉಗುರು ಕಚ್ಚುವ ಅಭ್ಯಾಸ ಬಿಟ್ಟಿದ್ದಾನೆಯೇ?' ಎಂದು ಕೇಳಿದರು ಪರಿಚಿತರು.

'ಇಲ್ಲ.....' ಎಂದು ಹೇಳಿದರು ಪಾಲಕರು. ತಲೆ ಅಡ್ಡಡ್ಡ ಆಡಿಸಿದರು.

'ಮತ್ತೆ???!!!' ಆಶ್ಚರ್ಯಚಕಿತರಾಗಿ ಕೇಳಿದರು ಪರಿಚಿತರು.

'ಈಗ ಕಾಲ್ಬೆರಳುಗಳ ಉಗುರುಗಳನ್ನೂ ಕೂಡ ಕಚ್ಚುತ್ತಾನೆ!' ಎಂದು ನಿಟ್ಟುಸಿರು ಬಿಟ್ಟರು ಪಾಲಕರು.


ಮೂಲ: ಸ್ವಾಮಿ ಅನುಭವಾನಂದಜೀ

ಕೊಂಚ ಅಪ್ರಸ್ತುತವಾದರೂ ಯಾಕೋ ಈ ಗಾದೆ ಮಾತು ನೆನಪಾಯಿತು - Motivation is not always the answer. If you motivate an idiot, you get a motivated idiot!

2 comments:

sunaath said...

‘Motivation ಯಾವಾಗಲೂ ಒಳ್ಳೆಯದಾಗಿರುತ್ತದೆ’ ಎನ್ನುವಂತಿಲ್ಲ ಎನ್ನುವ ನಿಮ್ಮ ಮಾತು ಸಮಂಜಸವೇ ಆಗಿದೆ. ‘ಜಿಹಾದಿ’ಗಳೇ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಮಿತ್ರಸಮ್ಮಿತಿಯಂತಿರುವ ನಿಮ್ಮ ಲೇಖನಗಳು ಮಾತ್ರ ಒಳ್ಳೆಯ motivation ಕೊಡುತ್ತವೆ.

Mahesh Hegade said...

Thanks, Sunaath sir. Jihadis - good example.