MPhil ಡಿಗ್ರಿಗೆ ಪ್ರವೇಶ ಪಡೆಯುವುದು ಕಷ್ಟವಾಗಿದೆಯಂತೆ...ಎನ್ನುವ ಸುದ್ದಿ ಓದಿದಾಗ ನೆನಪಾಗಿದ್ದು.
ಒಂದು ಕಾಲದಲ್ಲಿ ಸ್ನಾತಕೋತ್ತರ (ಮಾಸ್ಟರ್) ಡಿಗ್ರಿ ಮುಗಿದು ಮಾಡಲು ಕೆಲಸ / ಮದುವೆಗೆ ವರ ಸಿಗುವ ತನಕ ಟೈಮ್ ಪಾಸ್ ಗೆ ಈ MPhil ಡಿಗ್ರಿಗಿಂತ ಒಳ್ಳೆ ಸಬೂಬು, ನೆವ ಇರಲಿಲ್ಲ. ಅಂಥವರಿಗೆ ತಂದು ಜಡಿದರಲ್ಲಪ್ಪ... ಬಗಣಿ ಗೂಟ.
ಕವಿವಿಯ ಎಲ್ಲ ಬೇಕಾದ, ಬೇಡವಾದ ಸೌಲಭ್ಯಗಳನ್ನು ಪಡೆಯಲು ಬೆಸ್ಟ್ ಡಿಗ್ರಿ ಇದಾಗಿತ್ತು...MPhil.
ಒಂದಾನೊಂದು ಕಾಲದಲ್ಲಿ, ,ಮಟಮಟ ಮಧ್ಯಾಹ್ನ ಬೋಟಾನಿಕಲ್ ಗಾರ್ಡನ್ ಪೊದೆ ಹಿಂದೆ "ದೇವರ ಪೂಜೆ" ಮಾಡುತ್ತ ಸಿಕ್ಕಿಬಿದ್ದವಳೂ ಹೇಳಿದ್ದು, "ನಾ MPhil ಸ್ಟೂಡೆಂಟ್ ರೀ ಸರಾ."
ಹಾಳಾಗಿ ಹೋಗು ಎಂದು ಅವಳನ್ನು ಬಿಟ್ಟು ಅವಳ ಜೋಡಿ ಸಿಕ್ಕ ಬೋಳು ತಲೆ ಅಂಕಲ್ ಅಸಾಮಿಯನ್ನು ಕೇಳಿದರೆ, "ನಾ ಲೈಬ್ರರಿಯನ್ ರೀ. ಪುಸ್ತಕ ಕೇಳಿದ್ದರು ಕೊಡಾಕ್ ಬಂದಿನ್ನ ರೀ," ಎಂದು ಪುಂಗುತ್ತ ಗಡಿಬಿಡಿಯಲ್ಲಿ ಬ್ಯಾಕ್ ಸೈಡ್ ಬ್ಲಾಸ್ಟ್ ಆಗುವ ಮೊದಲು ಕುಂಡೆ ಝಾಡಿಸುತ್ತ ಎದ್ದು ಹೋದರಂತೆ. ಅವರು ಈಗಿಲ್ಲ ದಿವಂಗತರಾಗಿದ್ದಾರೆ. (ಬೆನ್ನು) ಸವರೋ ಸಿದ್ದಣ್ಣ ಎನ್ನುವುದು ಅವರ ಅನ್ವರ್ಥಕ ನಾಮ.😂😂😂
ಹೀಗೆ mphil ಡಿಗ್ರಿಯ ಮಹಿಮೆ ಅಪಾರ.
😂😂😂
2 comments:
ಅಕಟಕಟಾ! ಎಂತಹ ರಸಗಳಿಗೆಯಲ್ಲಿ ಸ್ಟೇಜ್ ಮೇಲೆ entry ಕೊಟ್ಟುಬಿಟ್ಟಿರಿ! ಲೆಗ್ ಹಾರ್ಮೋನಿಯಮ್ಮಿನ ಅವಶ್ಯಕತೆ ಇಲ್ಲದೆ, ಅವರ backsideಏ ಸಂಗೀತಪ್ರಸಾರ ಮಾಡುವಂತಾಯಿತಲ್ಲ!
ಹಾ!! ಹಾ!! ನಿಮ್ಮ ಹಾಸ್ಯಪ್ರಜ್ಞೆ ಅದ್ಭುತ.
ನಾವು ಕೇಳಿದ್ದಷ್ಟೇ ಅದೂ ಬಲ್ಲಮೂಲಗಳ ಮೂಲಕ...
Post a Comment