Wednesday, July 04, 2012

ಬಿಚ್ಚನ್ನದಿರಿ ಪೊಕ್ಕಿಕುನ್ನಿಯನ್ನಿ

ಬಿಚ್ಚದು ಎಂತೂ ಇಲ್ಲೇ. ಸುಮ್ಮನೆ ಕುಶಾಲಿಗೆ.

ನೋಡಿ.....ನಮ್ಮ ಹವ್ಯಕ ಭಾಷೆಯಲ್ಲಿ ಕೆಲವೊಂದು ಯುನೀಕ್ ಶಬ್ದ ಇರ್ತು.

ಹೆಣ್ಣ ಹುಡ್ರು ಎಷ್ಟೇ ದೊಡ್ದಾಗಲೀ, ಅವು ಯಾವಾಗಲೂ ಕೂಸೇಯಾ. ಯನ್ನ 67 ವರ್ಷದ ತಾಯಿ ಅದರ 94 ವರ್ಷದ ಅಪ್ಪಂಗೆ ಇನ್ನೂ ಕೂಸೇಯಾ.

ಮಾಣಿ.....ಸ್ವಲ್ಪ ಕಮ್ಮಿ. ಮೊದಲೆಲ್ಲಾ ಎಲ್ಲಾ ಗಂಡು ಹುಡ್ರೀಗೂ ಮಾಣಿ ಹೇಳೇ ಹೇಳದಾಗಿತ್ತು. ಈಗ ಸ್ವಲ್ಪ ಕಮ್ಮಿ. ನನ್ನ ದೊಡ್ಮಾವಾ  ಮಾಣಿ ಹೆಗಡೆ ಹೇಳೇ ಹೊನ್ನೆಗದ್ದೆಯಲ್ಲಿ (ಸಿರ್ಸಿ ತಾಲೂಕ್) ಫೇಮಸ್ ಆಗಿದ್ದ. ಈಗ ಇಲ್ಲೆ ಅವ.

ಮನುಷ್ಯರಿಗೆ ಹೀಂಗ ಇದ್ದ ಮ್ಯಾಲೆ, ಈ ನಮ್ಮನಿ ಮಾತು ಪ್ರಾಣಿಗಳಿಗೂ ಬಂದ್ರೆ ಅದರಲ್ಲಿ ಎಂತಾ ವಿಶೇಷಾ?

ನಾಯಿ, ವಯಸ್ಸಿನಲ್ಲಿ  ಎಷ್ಟೇ ದೊಡ್ಡದಾಗಲಿ ಅದು,  ಕುನ್ನಿಯೇ. ಬೇಕಾದರೆ ಸ್ವಲ್ಪ ಪ್ರೀತಿ ಜಾಸ್ತಿ ಆದ್ರೆ ಕುನ್ನಿಗೊಡ್ಡು.

ಹಾಂಗೆ....ಇನ್ನೊಂದು ಶಬ್ದ ಅಂದ್ರ ಹೆಣ್ಣ ನಾಯಿಗೆ "ಪಕ್ಕಿ ಕುನ್ನಿ". ಜಾಸ್ತಿ ಪ್ರಚಾರ ಇಲ್ಲೇ ಕಾಣ್ತು ಈ ಶಬ್ದಕ್ಕೆ. ಆದ್ರೆ ಘಟ್ಟದ ಕೆಳಗೆ ಕೇಳಿದ್ದು ನೆನಪ ಇದ್ದು. ಅದು ಪಕ್ಕಿ ಕುನ್ನಿ ಹೇಳ  ಅಥವಾ ಪೊಕ್ಕಿ ಕುನ್ನಿ ಹೇಳ  ಹೇಳಿ ಸ್ವಲ್ಪ ಡೌಟ್ ಇದ್ದು.

ನೋಡಿ.....ಈ ಇಂಗ್ಲಿಷ್ನಲ್ಲಿ ದಿನಾ ಸಾವಿರ ಸರಿ ಹೇಳ ಕಾಮನ್ ಶಬ್ದ ಕೆಲವೊಂದಕ್ಕೆ ಕನ್ನಡ ಸರಿಸಮಾನ್ ಶಬ್ದ ಹೇಳಿದ್ರೆ ಒಂತರ ಅಸಹ್ಯ ನಮಗೇ ಆಗ್ತು. ನಾ ಅದೆಲ್ಲ ಬಿಡ್ಸಿ  ಹೇಳ್ತನಿಲ್ಲೆ. ಮುಂದಿನ  ಸರಿ Oh! Shit ಅಂದಾಗ್ ನೆನಪ್ ಆಗಿ ಆ ರೀತಿ ಮಳ್ಳ ಹಲಬದ ಬಿಟ್ಟರೆ ಸಾಕು.

ಕೆಲೊ ಜನ್ರಿಗೆ ಕಂಡ ಕಂಡ ಜನಕ್ಕೆ bitch ಹೇಳಿ ಕೆಟ್ಟ ಪದ ಹೇಳ ಅಭ್ಯಾಸ. ಅದು ಎಲ್ಲಿವರಿಗೆ ಹೋಗ್ತು ಅಂದ್ರೆ - "Life's a Bitch and Then You Die" - ಹೇಳ ವಿಲಕ್ಷಣ ಗಾದೆ ಮಾತ್ ಬ್ಯಾರೆ ಕೇಡು.

ಅಂತವು ಬಿಚ್ ಬಿಚ್ ಹೇಳಿ ಹೇಳಿಕೆತ್ತಾ ಶಬ್ದ ಮಾಲಿನ್ಯ ಮಾಡ ಬದಲು, ಆ ಚಟ ಬಿಡವರಿಗೆ, ಬಿಚ್ ಬದಲಿಗೆ ಪಕ್ಕಿಕುನ್ನಿ, ಪೊಕ್ಕಿಕುನ್ನಿ ಹೇಳಿ ಹೇಳಿಕೆತ್ತ ಇದ್ದರೆ ಒಳ್ಳೇದನ ಅನ್ನಿಸ್ತು. ಸಿಗರೇಟ್ ಒಂದೇ ಸರಿ ಬಿಡಲ್ಲೆ ಆಗ್ತಿಲ್ಲೆ ಹೇಳಿದವಕೆ ಆ ನಿಕೋಟಿನ್ ಗಮ್ಮು, ಪ್ಯಾಚು, ಮತ್ತೊಂದು ಹೇಳಿ  ಸ್ವಲ್ಪ ಕಮ್ಮಿ ಹಾರ್ಮಫುಲ್ ವಸ್ತು  ತಗಳಿ ಹೇಳಿದಾಂಗೆ.

ಆ ಕೊಳಕ್ ಕೊಳಕ್ ಶಿಟ್, ಬಿಚ್, ಸ್ಕ್ರೂ ಶಬ್ದ ಎಲ್ಲಾ ಬಿಟ್ಟವೂ ಸಹಿತ ಪಕ್ಕಿಕುನ್ನಿ ಹೇಳಲೆ ಮುದ್ದಾಂ ಅಡ್ಡಿಲ್ಲೆ. ಬೇಕಾದ್ರೆ ಒಂದು ಹೆಣ್ ಕುನ್ನಿ ಸಾಕಿ, ಅದಕ್ಕೆ ಬೇಕಾದ್ರೆ ಪೊಕ್ಕಿ ಹೇಳೇ ಹೆಸರಿಡಿ. ಚಂದ, ಯುನೀಕ್ ಹೆಸರು. ಕುನ್ನಿಯಂತು ನಿಂಗಳನ್ನ ಅನ್ಕಂಡೀಷನಲ್  ಆಗಿ ಪ್ರೀತಿ ಮಾಡ್ತು. ಅದು ಅದರ ನೇಚರ್. ಅನ್ಕಂಡೀಷನಲ್  ಪ್ರೀತಿ ಬೇಕಾದ್ರೆ ಕುನ್ನಿ ಸಾಕಿ - ಹೇಳಿದವ ವಾಷಿಂಗಟನ್ ಹೇಳಿ ನೆನಪು.

ಕಡಿಗೆ ಒಂದ ಮಾತು....ಆ ಫೇಮಸ್ - ವಿರಹಾ ನೂರು ನೂರು ತರಹ....ಸಾಂಗಿನಲ್ಲಿ - ಹರೆಯ ಉಕ್ಕಿ ಕರೆವ ಹಕ್ಕಿ, ವಿರಹ ಸಹಿಸೆ ಸಹಿಸೆ ತಾನೆಂದಿದೆ - ಹೇಳಿ ಬತ್ತು. ಯಂಗ ಅದನ್ನಾ-  ಹರೆಯ ಉಕ್ಕಿ ಕರೆವ ಪೊಕ್ಕಿ , ವಿರಹ ಸಹಿಸೆ ಸಹಿಸೆ ತಾನೆಂದಿದೆ - ಹೇಳಿ ಪೊಕ್ಕಿ ಕುನ್ನಿಯ  ವಿರಹದ ಬಗ್ಗೆ, ಹರೆಯದ ಬಗ್ಗೆ ಜೋಕ್ ಮಾಡಿದ್ದೂ ಇದ್ದು. 11 ವರ್ಷ ಪೊಕ್ಕಿ ಕುನ್ನಿ ಸಾಕಿದ ಅನುಭವ ರಾಶಿ ಇದ್ದು. ಮತ್ತೆ ಯಾವಾಗಾದ್ರೂ ಬರೀವಾ.

ಇಲ್ಲಿಗೆ ಪೊಕ್ಕಿ ಪುರಾಣ ಸಮಾಪ್ತಿ. 




8 comments:

Nagendra Bhat said...

Great one Mahesh...

Mahesh Hegade said...

Thanks Nagendra.

Harisha - ಹರೀಶ said...

ಮಸ್ತ್ ಇದ್ದು ಮಹೇಶಣ್ಣ :)

Mahesh Hegade said...

Thanks Harisha. Love to write in our own Kannada whenever I come across any topic/word unique to our culture. Appreciate your taking time to read and comment.

ಶ್ಯಾಂ ಭಟ್, ಭಡ್ತಿ said...

ಮಹೇಶಣ್ಣ.... ಪಕ್ಕಿ ಕುನ್ನಿ ಹೇಳದೂವ ಆಂಗ್ಲ ಮತ್ತು ಕನ್ನಡದ ಎರಡು ಪದಗಳ ಕಂಗ್ಲೀಶ್ ರೂಪ.
"ಆಹಾ ಭಯಂಕರ ಲೈಕಿದ್ದು" ಹೇಳಕಾರೆ ಬಪ್ಪ ಲೈಕ್ ಇದ್ದಾಂಗೆ .

Mahesh Hegade said...

ಭಡ್ತಿ ಅವರೇ,

ಹಾಂಗ ಅದು?

ಯಾವ್ ಎರಡು ಶಬ್ದ? ತಿಳಿಸಿ ಹೇಳ್ರೋ ಮಾರಾಯರ.

ಕಾಮೆಂಟಿಗೆ ಧನ್ಯವಾದ

ಶ್ಯಾಂ ಭಟ್, ಭಡ್ತಿ said...

ಮಹೇಶಣ್ಣ, ನಮಸ್ಕಾರ
ಯಾವ ಎರಡು ಶಬ್ದ ಹೇಳದನ್ನ ಪೋಸ್ಟ ಕಾರಡಲ್ಲಿ ಬರದು ಹಾಕಿದ್ದಿ.. :)

ಸುಬ್ರಹ್ಮಣ್ಯ ಭಾಗ್ವತ್ said...

ಹಾಹಾಹಾ,ಪೊಕ್ಕಿ ಕುನ್ನಿಯು ಈ ಮಾಧ್ಯಮದಲ್ಲಿ,ಚೆನ್ನಾಗಿದ್ದು