ನಾನು ಮಾರ್ಕಸ್. ನನ್ನ ಸಹೋದರ ಮೋರ್ಗನ್. ನಾವಿಬ್ಬರೂ ಅವಳಿ ಜವಳಿ. ನಾವು ಟೆಕ್ಸಾಸ್ ನವರು.
ಆಗಾಗ ನಾನು, ಅವನು ನಮ್ಮ ಚಿಕ್ಕ ದೋಣಿಯನ್ನು ತೆಗೆದುಕೊಂಡು ನಮ್ಮ ಮನೆಯ ಹತ್ತಿರವಿರುವ ಕೆರೆಯಲ್ಲಿ ದೋಣಿ ವಿಹಾರಕ್ಕೆ ಹೋಗುತ್ತೇವೆ.
ಆ ಕೆರೆಯಲ್ಲಿದೆ ಒಂದು ಮೊಸಳೆ. ಒಂದೇ ಇದೆ ಅಂತ ಕಾಣಿಸುತ್ತದೆ. ಯಾಕೆಂದರೆ ಬೇರೊಂದನ್ನ ನಾವಾಗಲಿ ಬೇರೆ ಯಾರಾಗಲಿ ಕಂಡ ಬಗ್ಗೆ ಮಾಹಿತಿ ಇಲ್ಲ.
ನಾವು ಪ್ರತಿ ಸರಿ ದೋಣಿ ತೆಗೆದುಕೊಂಡು ಹೋದಾಗ ಅದು ನಮಗೆ ಕಂಡು ಬರುತ್ತದೆ. ಅದಕ್ಕೆ ನಮ್ಮ ಕಂಡರೆ ಏನು ವಿಶೇಷ ಆಸಕ್ತಿಯೋ ಕಾಣೆ. ನಮ್ಮ ದೋಣಿಯ ಪಕ್ಕ ಬಂದು ದೋಣಿ ಜೊತೆ ಸಾಗಿ ಬರುತ್ತದೆ.
ಈ ನನ್ನ ಸಹೋದರ ಮೋರ್ಗನ್ ಗೆ ಕೆಲವೊಂದು ವಿಚಿತ್ರ ಖಯಾಲಿಗಳು. ಅದರಲ್ಲಿ ಮೊಸಳೆಯೊಂದಿಗೆ ಕುಸ್ತಿ ಮಾಡುವದೂ ಸಹ ಒಂದು.
ನಾವಿಬ್ಬರೂ ಅಮೇರಿಕಾದ ಅತ್ತ್ಯುನ್ನತ, ಅತಿ ಸನ್ನದ್ಧ ಕಮಾಂಡೋ ನೇವಿ ಸೀಲ್ಸ್ ಆಗಿರುವದರಿಂದ, ನಮಗೆ ಅಗತ್ಯ ಬಿದ್ದರೆ ಮೊಸಳೆಗಳ ಜೊತೆ ತಕ್ಕ ಮಟ್ಟಿಗೆ ಹೋರಾಡಿ ತಪ್ಪಿಸಿಕೊಳ್ಳುವ ತರಬೇತಿಯೂ ಆಗಿದೆ. ಆದರೆ ಯಾರೂ ನಿಸರ್ಗದಲ್ಲಿರುವ ಮಹಾನ್ ಖತರ್ನಾಕ್ ಪ್ರಾಣಿ ಮೊಸಳೆಯೊಂದಿಗೆ ಅವರಾಗಿಯೇ ಮೈಮೇಲೆ ಬಿದ್ದು ಗುದ್ದಾಡಲು ಹೋಗುವದಿಲ್ಲ.
ಆದರೆ ಈ ನನ್ನ ಸಹೋದರ ಮೋರ್ಗನ್ ಗೆ ಈ ನಮ್ಮ ಕೆರೆಯಲ್ಲಿದ್ದು, ನಮ್ಮ ದೋಣಿ ಪಕ್ಕ ಬಂದು, ಮಾತಾಡಿಸಿ ಹೋಗುವ ಮೊಸಳೆಯೊಂದಿಗೆ ಗುದಮುರಗಿ ಹಾಕದಿದ್ದರೆ ಸಮಾಧಾನವಿಲ್ಲ.
ದೋಣಿ ಪಕ್ಕ ಬಂದ ಮೊಸಳೆಯನ್ನು ಒಂದು ಸಲ ಸರಿಯಾಗಿ ನೋಡಿದವನೇ ಮೋರ್ಗನ್ ಸೀದಾ ಮೊಸಳೆ ಮೇಲೆ ಡೈವ್ ಹೊಡದೇ ಬಿಡುತ್ತಾನೆ. ಆ ಮೊಸಳೆಯ ಬಾಯಿ ಇವನ ಉಕ್ಕಿನ ಬಾಹುಗಳಲ್ಲಿ ಬಂದ್. ಮೊಸಳೆಯ ಬಾಯಿ ಬಂದಾಗಲಿಲ್ಲವೋ, ನಿಮ್ಮ ಆವಾಜ್ ಖಾಯಂ ಬಂದಾಗುವ ಸಾಧ್ಯತೆ ಜಾಸ್ತಿ. ಆದರೆ ಮೋರ್ಗನ್ ಎಂತಹ ನುರಿತ ಸೀಲ್ ಕಮಾಂಡೋ ಅಂದ್ರೆ ಅಂತಹ ತಪ್ಪು ಮಾಡುವನಲ್ಲ.
ನಂತರ ಆ ಬಡಪಾಯಿ(?) ಮೊಸಳೆಯೊಂದಿಗೆ ನೀರಿನಲ್ಲಿ ಒಂದಿಷ್ಟು ಸುತ್ತು ಇಬ್ಬರೂ ಮೇಲೆ ಕೆಳೆಗೆ ಆಗುತ್ತಾರೆ. ಮೋರ್ಗನ್ ಗೆ ಆಟ. ಮೊಸಳೆಗೆ? ಗೊತ್ತಿಲ್ಲ. ಈ ತರಹ ಮೊಸಳೆಯೊಂದಿಗೆ ಗುದಮುರಿಗೆ ಹಾಕಿ, ಗುದ್ದಾಡಿ, ನೀರಿನಲ್ಲಿ ಮುಳುಗಿ, ಎದ್ದು ಮಾಡುತ್ತಿರುವಾಗ ಸಿಕ್ಕಾಪಟ್ಟೆ ಗಹಗಹಿಸಿ ನಗುತ್ತಾನೆ ಬೇರೆ ಈ ಪುಣ್ಯಾತ್ಮ ನನ್ನ ಸಹೋದರ ಮೋರ್ಗನ್!
ಕೆಲ ನಿಮಿಷಗಳ ಮೋಜು ಮಸ್ತಿಯ ನಂತರ ಇಬ್ಬರಿಗೂ ಸಾಕಾಗುತ್ತದೆ. ಮೊಸಳೆಗೂ ಮತ್ತು ಮೊರ್ಗನ್ ಗೂ. ಈಗ ಆ ಮೊಸಳೆಯನ್ನು ಬಿಡಬೇಕು ಮತ್ತು ಸುರಕ್ಷಿತವಾಗಿ ದೋಣಿಯೊಳಗೆ ಬಂದು ಸೇರಿಕೊಳ್ಳಬೇಕು. ಮೊಸಳೆಯ ಬಾಯಿ ಬಂದು ಮಾಡಿದ ಕೈ ತೆಗೆದು, ಆ ದೈತ್ಯ ಮೊಸಳೆಯನ್ನು ಬಿಡುವ ಘಳಿಗೆ ಇದೆ ನೋಡಿ, ಅದು ಅತ್ಯಂತ ರಿಸ್ಕಿ ಮತ್ತು ಡೇಂಜರಸ್. ಯಾಕಂದ್ರೆ ಬಿಡಿಸಿಕೊಂಡ ಮೊಸಳೆ ಅವನಿಂದ ದೂರ ಹೋದರೆ ಸರಿ. ಇಲ್ಲ ಅಂದರೆ...........ಏನೂ ಆಗಬಹುದು.
ಒಮ್ಮೆ ಮೋರ್ಗನ್ನಿಂದ ಬಿಡಿಸಿಕೊಂಡ ಮೊಸಳೆ ಮತ್ತೆ ಅವನ ಕಡೆ ಆಕ್ರಮಣ ಮಾಡಿದ್ದು ಇಲ್ಲ. ಅದಕ್ಕೂ ಸಾಕಾಗಿರುತ್ತದೆ ಅನ್ನಿಸುತ್ತದೆ. ಒಮ್ಮೆ ಮಾತ್ರ ಸ್ವಲ್ಪ ಗಲಿಬಿಲಿ ಆಗಿತ್ತು ಕೊನೆಯ ಘಳಿಗೆಯಲ್ಲಿ. ಮೋರ್ಗನ್ ಬಿಟ್ಟ ನಂತರ ದೂರ ಹೋಗದ ಮೊಸಳೆ ಈ ಕಡೆ ತಿರುಗಿತು. ಮೋರ್ಗನ್ ನಸೀಬ್ ಅವತ್ತು ನೆಟ್ಟಗಿತ್ತು ಅನ್ನಿಸುತ್ತದೆ. ಕೈ ಮೇಲೆ ಕೇವಲ ಮೊಸಳೆ ಹಲ್ಲು ಗೀರಿಕೊಂಡು ಹೋಯಿತೇ ವಿನಹಾ ಅವನ ಕೈಯಾಗಲಿ ಅಥವಾ ಪೂರ್ತಿ ಅವನೇ ಆಗಲಿ ಗಾಯಬ್ ಆಗಲಿಲ್ಲ. ಥ್ಯಾಂಕ್ ಗಾಡ್!
ಈ ತರಹ ಬರೆಯುತ್ತ ಹೋಗುವವರು - ಮಾರ್ಕಸ್ ಲುಟ್ಟ್ರೆಲ್. ಅವರ ಪುಸ್ತಕ - Lone Survivor.
ಮಾರ್ಕಸ್ ನೇವಿ ಸೀಲ್ ಕಮಾಂಡೋ ಆಗಿದ್ದವರು. ಈಗ ಒಂದು ವರ್ಷದ ಹಿಂದೆ ರಹಸ್ಯವಾಗಿ ಪಾಕಿಸ್ತಾನ್ ಹೊಕ್ಕು, ಒಂದು ಸುಳಿವೂ ಸಿಗದಂತೆ ಒಸಮಾ-ಬಿನ್-ಲಾಡೆನ್ ಅಡಗುದಾಣದ ಮೇಲೆ ಮಾರಕ ದಾಳಿ ಮಾಡಿ, ಅವನ್ನ ನಿರ್ನಾಮ ಮಾಡಿ, ಅಷ್ಟೇ ರಹಸ್ಯದಿಂದ ಹೊರ ಬಂದು ಎಲ್ಲರನ್ನೂ ಚಕಿತಗಳಿಸಿದ ಕಮಾಂಡೋಗಳೇ ನೇವಿ ಸೀಲ್ಸ್.
ಈ ಮೊದಲು ನೇವಿ ಸೀಲ್ಸ್ ಬಗ್ಗೆ ಹೊರ ಜಗತ್ತಿಗೆ ಜಾಸ್ತಿ ಗೊತ್ತಿರಲಿಲ್ಲ. ಅವರಿಗೂ ಅದೇ ಬೇಕು. ಇವತ್ತಿಗೂ ಅದೊಂದು ಅತ್ಯಂತ ರಹಸ್ಯ ವಿಶೇಷ ಕಾರ್ಯಾಚರಣೆ ಪಡೆ. ಎಷ್ಟು ಜನರಿದ್ದಾರೆ, ಎಲ್ಲಿ ಅವರ ಶಿಬಿರ, ಯಾವ ರೀತಿ ಕಾರ್ಯಾಚರಣೆ ಮಾಡುತ್ತಾರೆ, ಇತ್ಯಾದಿ - ಎಲ್ಲವೂ ರಹಸ್ಯ ರಹಸ್ಯ. ಅವರು ಕೈಗೊಂಡ ಸುಮಾರು ಕಾರ್ಯಾಚರಣೆಗಳು ಎಂದಿಗೂ ಹೊರಬರುವದಿಲ್ಲ. ಕೆಲವೊಂದು ಕಡೆ ಸ್ವಲ್ಪ ಸ್ವಲ್ಪ ಮಾಹಿತಿ, ಅದೂ ರಾಷ್ಟ್ರೀಯ ಭದ್ರತೆಗೆ ತೊಂದರೆ ಬರದಂತೆ, ಬಿಡುಗಡೆ ಮಾಡುತ್ತಾರೆ. ಅಂತಹ ಚೂರು ಪಾರು ಮಾಹಿತಿಗಳನ್ನೇ ಉಪಯೋಗಿಸಿಕೊಂಡು, ಅನುಮತಿ ಸಿಕ್ಕಷ್ಟೇ ಮಾಹಿತಿ ಉಪಯೋಗಿಸಿ ಬರೆದಿರುವಂತಹ ಕೆಲವು ಪುಸ್ತಕಗಳು ಇವೆ. ಅಂತಹದ್ದು ಒಂದು ಪುಸ್ತಕ - Lone Survivor.
Lone Survivor - ಪುಸ್ತಕ ಮಾರ್ಕಸ್ ಅವರ ಚರಿತೆ ಮತ್ತು ಅವರು ಪಾಲ್ಗೊಂಡಿದ್ದ ಒಂದು ಅತ್ಯಂತ ರಕ್ತಸಿಕ್ತ ಕಾರ್ಯಾಚರಣೆಯ ವೃತ್ತಾಂತವೂ ಹೌದು.
ಈ ನೇವಿ ಸೀಲ್ ಕಮಾಂಡೋ ಪಡೆ ಇದೆ ಅಲ್ಲ, ಇದರಲ್ಲಿ ಇರುವ ಯೋಧರು ಹೇಗೆ ಅಂದರೆ ಅವರ ದೈಹಿಕ ಮತ್ತು ಮಾನಸಿಕ ಶಕ್ತಿ, ಸ್ಥೈರ್ಯ ಸೀಮಾತೀರವಾದದ್ದು. Pushed to the limits - ಅಂತಾರಲ್ಲ. ಆ ತರಹ. ಅವರ ಕಷ್ಟ ತಡೆದುಕೊಳ್ಳುವ ಶಕ್ತಿಯನ್ನು ಸಿಕ್ಕಾಪಟ್ಟೆ ಏರಿಸಿ ಇಟ್ಟಿರುತ್ತಾರೆ. ಯಾಕಂದರೆ ಸೀಲ್ಸ್ ಹೋಗುವದು ಅತ್ಯಂತ ಕಠಿಣ ಕೆಲಸಕ್ಕೆ ಮಾತ್ರ. ಮತ್ತೆ ಅವರಿಗೆ ನೆಲದ ಮೇಲೆ, ನೀರಿನಲ್ಲಿ ಮತ್ತೆ ಗಾಳಿಯಲ್ಲಿ ಯುದ್ಧ ಮಾಡುವ ತರಬೇತಿ ಇರುತ್ತದೆ. ಸೀಲ್ಸ್ 12-15 ಜನರ ಚಿಕ್ಕ ಚಿಕ್ಕ ತಂಡಗಳಲ್ಲಿ ಕೆಲಸ ಮಾಡುತ್ತಾರೆ. ಅತ್ಯಂತ ರಹಸ್ಯವಾಗಿ ನುಸುಳಿ, ಗುಟ್ಟಿನಿಂದ ದಾಳಿ ಮಾಡಿ, ವೈರಿಗಳನ್ನ ನಿರ್ನಾಮ ಮಾಡಿ ಬರುವದೇ ಅವರ ಕೆಲಸ. ಇನ್ನು ಕೆಲವು ಕಡೆ ವಿಧ್ವಂಸಕ ಸ್ಪೋಟ ಇತ್ಯಾದಿ ಮಾಡುವದು ಅವರಿಗೆ ತಿಳಿದಿರುತ್ತದೆ. ಈ ಜನ ತಮ್ಮ ರಬ್ಬರ್ ದೋಣಿಗಳೊಂದಿಗೆ ವಿಮಾನದಿಂದ ಹಾರಿ, ದೋಣಿಯಲ್ಲಿ ಸಮುದ್ರದಲ್ಲಿ ಕ್ರಮಿಸಿ, ಮಾಡಬೇಕಾದ ಕೆಲಸ ಮಾಡಿ ಮುಗಿಸಿ, ತದನಂತರ ಸಬ್ ಮರೀನ್ ನಲ್ಲಿ ಪರಾರಿ ಆಗಿರುವ ಕಾರ್ಯಾಚರಣೆಗಳೂ ಇವೆಯಂತೆ.
ಮಾರ್ಕಸ್ ತಮ್ಮ ಪುಸ್ತಕದಲ್ಲಿ ಈ ಸೀಲ್ಗಳ ಆಯ್ಕೆ ಹೇಗಾಗುತ್ತದೆ, ಎಷ್ಟು ಕಮ್ಮಿ ಜನ ಆಯ್ಕೆ ಆಗುತ್ತಾರೆ, ಹಾಗೆ ಆಯ್ಕೆ ಆದವರಲ್ಲಿ ಎಷ್ಟು ಕಮ್ಮಿ ಜನ ಆರಂಭಿಕ ದೈಹಿಕ, ಮಾನಸಿಕ ಶಕ್ತಿ, ಯುಕ್ತಿ ತರಬೇತಿ ಮುಗಿಸುವಕ್ಕಿಂತ ಮೊದಲೇ ನಪಾಸ್ ಆಗುತ್ತಾರೆ, ಉಳಿದವರು ಎಷ್ಟು ಜನ ಮೂಳೆ ಮತ್ತೊಂದು ಮುರಕೊಂಡು ಸ್ಕ್ರಾಪ್ ಆಗಿ ವಾಪಸ್ ಹೋಗುತ್ತಾರೆ, ಒಮ್ಮೊಮ್ಮೆ ಸತ್ತು ಹೋಗಿದ್ದು ಇದೆಯಂತೆ. ಒಟ್ಟಿನಲ್ಲಿ ಮನುಷ್ಯನನ್ನು ಕೊಲ್ಲುವಂತ ಕಠಿಣ ತರಬೇತಿ. ಬದುಕಿದೆಯೋ ಅತ್ಯಂತ ಸಮ್ಮಾನಿತ ನೇವಿ ಸೀಲ್ ತ್ರಿಶೂಲದ ಗೌರವ. ಇಲ್ಲವೋ - ಸಾರಿ. ಬ್ಯಾಡ್ ಲಕ್.
ಮಾರ್ಕಸ್ ಮತ್ತು ಅವರ ಸಹೋದರ ಮೋರ್ಗನ್ ಗೆ ಮೊದಲಿಂದಲೂ ಇಂತಹ ನೇವಿ ಸೀಲ್ ಆಗೋ ಹುಚ್ಚು. ಕುಟುಂಬದ ಫುಲ್ ಸಪೋರ್ಟ್ ಬೇರೆ. ಅವರ ಹುಟ್ಟೂರಿನಲ್ಲೇ ಇದ್ದ ನಿವೃತ್ತ ಕಮಾಂಡೋ ಒಬ್ಬನಿಂದ ತರಬೇತಿ ಮತ್ತು ಪ್ರೋತ್ಸಾಹ. ಮೇಲಾಗಿ ಇವರಿಬ್ಬರ ಪರಿಶ್ರಮ. ಮತ್ತೇನು ಬೇಕು ಯಶಸ್ಸಿಗೆ? ಸಹೋದರರು ಇಬ್ಬರೂ ಅತ್ಯಂತ ಕಠಿಣ ಆಯ್ಕೆ ಪರೀಕ್ಷೆಗಳನ್ನು ಎಲ್ಲ ಪಾಸ್ ಮಾಡಿ, ಎಲ್ಲಾ ಕಠಿಣ ತರಬೇತಿಯಲ್ಲಿ ಯಶಸ್ವಿ ಆಗಿ, ಪದವಿ ಪ್ರಧಾನ ಸಮಾರಂಭದಲ್ಲಿ ತ್ರಿಶೂಲ್ ಪಡೆದಾಗ ಎಲ್ಲರಿಗೂ ಹೆಮ್ಮೆ. ಸೋದರರು ಬೇರೆ ಬೇರೆ ಸೀಲ್ ತಂಡಕ್ಕೆ ಹೋಗುತ್ತಾರೆ.
ಮುಂದೆ 2001, ಸೆಪ್ಟಂಬರ್ 11 ರ ದಾಳಿಯ ನಂತರ ಆಫ್ಘಾನಿಸ್ತಾನದಲ್ಲಿ ಅಮೇರಿಕಾದ ಕಾರ್ಯಾಚರಣೆ ಶುರು ಆಗುತ್ತದೆ. ಕೆಲವು ಹೈ ವಾಲ್ಯೂ ಟಾರ್ಗೆಟ್ ಗಳನ್ನು ನಿರ್ನಾಮ ಮಾಡಲು ಅಥವಾ ಹಿಡಿದುಕೊಂಡು ಬರಲು ಸೀಲ್ಸ್ ಕಮಾಂಡೋಗಳು ಹೋಗುತ್ತಾರೆ. ಅಂತಹ ತಂಡ ಒಂದರಲ್ಲಿ ನಿಯುಕ್ತರಾಗಿ ಮಾರ್ಕಸ್ ಆಫ್ಘಾನಿಸ್ತಾನಕ್ಕೆ ಬರುತ್ತಾರೆ.
ಆಪರೇಶನ್ ರೆಡ್ ವಿಂಗ್ಸ್ - ಒಬ್ಬ ಉನ್ನತ ತಾಲಿಬಾನಿಯನ್ನು ಎತ್ತಾಕಿಕೊಂಡು ಬರಲಿಕ್ಕೆ ತಯಾರು ಮಾಡಿದ ಕಾರ್ಯಾಚರಣೆಯ ಪ್ಲಾನ್. ಪ್ಲಾನ್ ಪ್ರಕಾರ ಮಾರ್ಕಸ್ ಮತ್ತು ಮೂವರು ಇತರೆ ಸೀಲ್ಸ್ ಅವರದು ಒಂದು ತಂಡ. ಹೀಗೆ 4-5 ಜನ ಇರುವ 4-5 ಸೀಲ್ ತಂಡಗಳು ಅಣಿಯಾಗುತ್ತವೆ. ಪ್ರತಿ ತಂಡಕ್ಕೂ ಅವರದ್ದೇ ಆದ ನಿರ್ದಿಷ್ಟ ಕಾರ್ಯಸೂಚಿ ಇರುತ್ತದೆ.
ಬೇಹುಗಾರಿಕೆ ಮಾಹಿತಿ ಮತ್ತು ವಾಸ್ತಿವಿಕತೆ ಬೇರೆ ಬೇರೆಯೇ ಆಗಿರುತ್ತದೆ. ನಡು ನಡುವೆ ಸಂಪರ್ಕದ ವೈಫಲ್ಯ ಬೇರೆ. ಒಟ್ಟಿನಲ್ಲಿ ಒಂದಲ್ಲ ಒಂದು ಕೈಕೊಟ್ಟು ಪೂರ್ತಿ ಕಾರ್ಯಾಚರಣೆ ಎಕ್ಕುಟ್ಟು ಹೋಗುತ್ತದೆ. ಎಕ್ಕುಟ್ಟ ಕಾರ್ಯಾಚರಣೆಯ ತುಂಬಾ ಹೆಚ್ಚಾಗಿ ಹೊಡೆತ ಬೀಳುವದು ಮಾರ್ಕಸ್ ಮತ್ತು ಅವರ ತಂಡಕ್ಕೆ.
ಇರುವರು ನಾಲ್ಕು ಸೀಲ್ಸ್. ತಾಲಿಬಾನಿಗಳೋ ನೂರಾರು. ಅದೂ ದೊಡ್ಡ ಪ್ರಮಾಣದ ಆಯುಧಗಳೊಂದಿಗೆ. ಭೀಕರ ಕಾಳಗ ನಡೆಯುತ್ತದೆ. ಉಳಿದ ಮೂವರು ಹತರಾಗುತ್ತಾರೆ. ಮಾರ್ಕಸ್ ತೀವ್ರ ರೀತಿಯಲ್ಲಿ ಗಾಯಗೊಂಡು ಹೇಗೋ ಮಾಡಿ ತಾಲಿಬಾನಿಗಳಿಂದ ಆ ಹೊತ್ತಿನ ಮಟ್ಟಿಗೆ ತಪ್ಪಿಸಿಕೊಳ್ಳುತ್ತಾರೆ.
ನಂತರ ಅವರ ಪುಣ್ಯ. ಅಮೇರಿಕಾದ ಪರವಾದ ಕುರುಬರ ಗುಂಪೊಂದು ಅವರನ್ನು ರಕ್ಷಿಸಿ ತಮ್ಮ ಜೊತೆ ಇಟ್ಟುಗೊಂಡು ಆರೈಕೆ ಮಾಡುತ್ತದೆ. ಅಲ್ಲೂ ತಾಲಿಬಾನಿಗಳು ಬರುತ್ತಾರೆ. ಕುರುಬರು ಏನೇನೋ ತಲೆ ಉಪಯೋಗಿಸಿ ಮಾರ್ಕಸ್ ರನ್ನು ಕಾಪಾಡುತ್ತಾರೆ. ಸಂಪರ್ಕ ಕಡಿದು ಹೋಗಿರುವದರಿಂದ ಮಾರ್ಕಸ್ ಅವರನ್ನು ಹುಡುಕುತ್ತಿರುವ ಬೇರೆಯವರಿಗೂ ಅವರ ಬಗ್ಗೆ ತಿಳಿಯುವದಿಲ್ಲ.
ನಂತರ ಸುಮಾರು ದಿವಸಗಳ ನಂತರ ಅವರನ್ನು ಸಲಹುತ್ತಿರುವ ಕುರುಬರ ಪೈಕಿ ಕೆಲವರು ಸುಮಾರು ದೂರದಲ್ಲಿರುವ ಅಮೇರಿಕಾದ ಸೈನಿಕ ಶಿಬಿರ ಕಂಡು, ಅಲ್ಲಿಗೆ ಹೋಗಿ ಸುದ್ದಿ ಮುಟ್ಟಿಸಿದ ನಂತರವೇ ಮಾರ್ಕಸ್ ಗೆ ಮುಕ್ತಿ ಸಿಗುತ್ತದೆ.
ಹಲವಾರು ರೋಚಕ ಸುದ್ದಿಗಳನ್ನು ಮಾರ್ಕಸ್ ದಾಖಲಿಸಿದ್ದಾರೆ. ಸೀಲ್ಸ್ ಬಗ್ಗೆ ಹಿಂದೆಂದೂ ಬಂದಿರದ ವಿವರಗಳು ಅವರ ಪುಸ್ತಕದಲ್ಲಿವೆ. ನೇವಿ ಸೀಲ್ಸ್ ಪ್ರತಿಯೊಂದನ್ನೂ ನೋಡುವ ರೀತಿಯೇ ಬೇರೆ. ಹೀಗಾಗಿ ಅವರ ಕಾರ್ಯಾಚರಣೆಯ ವಿಧಾನಗಳೇ ಬೇರೆ. ತುಂಬಾ ಆಸಕ್ತಿಕರ ವಿಷಯಗಳು.
edge of the seat ರೋಮಾಂಚಕಾರಿ ಅನುಭವಗಳನ್ನು ಒಳಗೊಂಡ ಒಂದು ಅತ್ಯುತ್ತಮ ಯುದ್ಧ ಚರಿತ್ರೆಯ ಪುಸ್ತಕ. ಓದಲು ಅಡ್ಡಿ ಇಲ್ಲ.
ಮಾರ್ಕಸ್ ಲುಟ್ಟ್ರೆಲ್ ಬಗ್ಗೆ ಮಾಹಿತಿ.
Lone Survivor - ಪುಸ್ತಕ.
ನೇವಿ ಸೀಲ್ಸ್

No comments:
Post a Comment