ಮಾಸ್ತರ್ : ಇದು ಒಂದು ಮೀಟರ್ ಕಟಿಗಿ. ಇದರ ಉದ್ದ ಫುಲ್ ಮೀಟರ್. ಸೆಂಟಿಮೀಟರ್ ಅಂದ್ರ ೧ / ೧೦೦ ಮೀಟರ್. ತಿಳೀತss??
ದ್ಯಾಮ್ಯಾ (ಸಣ್ಣ ದನಿಯೊಳಗ) : ಈ ಮಾಸ್ತರ್ ಫುಲ್ ಮೆಂಟಲ್. ಇವನ ಕಡೆ ಕಲಿತ ನಾವು ಸೆಂಟಿಮೆಂಟಲ್. ೧ / ೧೦೦ ಮೆಂಟಲ್! ಥತ್!
ಮಾಸ್ತರ್: ಏನಲೇ ಅದು ಗುಸುಗುಸು?
ದ್ಯಾಮ್ಯಾ: ಸರ್ರಾ, ನೀವು ಸೆಂಟಿಮೀಟರ್ ಅಂದ್ರ ನಮಗ ಸೆಂಟಿಮೆಂಟಲ್ ನೆನಪಾತ್ರೀ.
ಮಾಸ್ತರ್: ಈಡಿಯಟ್! ಈ centi ಬ್ಯಾರೆ ಆ senti ಬ್ಯಾರೆ.
ದ್ಯಾಮ್ಯಾ (ಸಣ್ಣ ದನಿಯೊಳಗ) : ಅವನೌನ್! ಏನ್ ಇಂಗ್ಲಿಷ್ ಭಾಷಾನೋ! ಏನ್ ಗಣಿತನೋ! ಲಗೂ ಘಂಟಿ ಹೊಡಸಪಾ ದೇವರಾ! ಸೂಟಿ ಬಿಟ್ಟರ ಸಾಕು!
ದ್ಯಾಮ್ಯಾಗ ಏಕದಂ ಒಂದು ಐಡಿಯಾ ಬಂತು. ಈ ಮಾಸ್ತರ್ ಭಾಳ ಬೋರ್ ಹೊಡೆಸಾಕತ್ಯಾನ, ಮಾಡೋಣ ತಡಿ ಅಂದ್ಕೊಂಡ.
ದ್ಯಾಮ್ಯಾ: ಸರ್ರಾ ಒಂದು ಡೌಟ್ ರೀ!
ಮಾಸ್ತರ್: ಏನು? ಕೇಳು.
ದ್ಯಾಮ್ಯಾ: ಒಂದ್ನೂರಾಂಶ ನರಿ ಅಂದ್ರ ೧ / ೧೦೦ ನರಿಗೆ ಏನಂತಾರ್ರೀ???????????????
ಮಾಸ್ತರ್ ಫುಲ್ ಥಂಡಾ. ಇಂತಾ ಖತರ್ನಾಕ್ ಪ್ರಶ್ನೆ ಅವರ ಸರ್ವೀಸ್ ಒಳಗ ಯಾರೂ ಕೇಳಿರಲಿಲ್ಲ.
ಮಾಸ್ತರ್: ಸ್ಟುಪಿಡ್! ನರಿ ನಾಯಿ ಅನ್ಕೋತ್ತ! ಹುಚ್ಚುಚ್ಚರೆ. ಏನು ಹಾಂಗಂದ್ರ?
ದ್ಯಾಮ್ಯಾ (ಕಿಡಿಗೇಡಿ ಗತೆ ನಕ್ಕೋತ್ತ): ನಾ ಹೇಳಲ್ರೀ ಸರ್??????
ಮಾಸ್ತರ್ (ಸಿಟ್ಟಿಂದ): ಗೊತ್ತಿದ್ದರೂ ಯಾಕ ಕೇಳಿದಿ? ಮುಕ......ಅಲ್ಲಲ್ಲ ಮೈಯ್ಯಾಗಿನ ಸೊಕ್ಕೆನ??? ಗೊತ್ತದ ಅಂದ ಮ್ಯಾಲೆ ಹೇಳಿ ಸಾಯಿ!
ದ್ಯಾಮ್ಯಾ: ಸೆಂಟಿನರಿ! (centenary) ಅಂದ್ರ ೧ / ೧೦೦ ನರಿ.
ಮಾಸ್ತರ್ ಬೆಚ್ಚಿ ಬಿದ್ದರು. ಆದರೂ ಸುಧಾರಿಸಿಕೊಂಡು ಹೇಳಿದರು.
ಮಾಸ್ತರ್: ಲೇ! ಹುಚ್ಚಾ! ಅದು centenary. cente ಅಂದ್ರ ೧೦೦. ನಿನ್ನ ಪ್ರಕಾರ ಒಂದು ನೂರು ನರಿಗೆ centenary ಅಂದ್ರ ಸರಿಯಾದೀತು. ಆದ್ರ ಅದು ತಪ್ಪು. centi ಅಂದ್ರ ೧ / ೧೦೦. cente ಅಂದ್ರ ೧೦೦. ಸರಿ ಮಾಡಿ ನೆನಪ ಇಡರೀ. ಇಲ್ಲಂದ್ರ cent percent (೧೦೦ %) ಮಾರ್ಕ್ಸ್ ಬರೋದರ ಬದಲು centi percent (೧%) ಮಾರ್ಕ್ಸ್ ಬರ್ತಾವು. ಫೇಲ್ ಆಗಿಹೋಗ್ತೀರಿ! ಹುಷಾರ್!
ಮಾಸ್ತರ್ ಅವತ್ತು ಹತ್ತು ನಿಮಿಷ ಕ್ಲಾಸ್ ಲಗೂನೆ ಬಿಟ್ಟು ಹೋಗಿಬಿಟ್ಟರು. ಸ್ಟಾಫ್ ರೂಮಿಗೆ ಹೋಗಿ, ಅಲ್ಲಿದ್ದ ನೀರಿನ ಮಡಕಿ ಮ್ಯಾಲೆ, 'ಕುಂಬರು ಮಾಡಿದ ಕೊಡನವ್ವಾ. ಚನ್ನಪ್ಪ ಚನ್ನಗೌಡಾ' ಅಂತ ಬಡಿದು ಸೆಂಟಿ (senti) ಒಳಗ ಹಾಡಾ ಹಾಡುತ್ತ, ಒಂದು ಗ್ಲಾಸ್ ತಣ್ಣನೆ ನೀರು ಕುಡಿದು, 'ಈ ದ್ಯಾಮ್ಯಾನಂತಹ ಶಿಷ್ಯ ರತ್ನಗಳು ಎಲ್ಲಿಂದ ತಯಾರಾಗಿ ಬರ್ತಾವ?? ಅದೂ ನನಗss ಗಂಟ ಬೀಳತಾವ' ಅಂತ ಇಲ್ಲದ ತಲಿ ಕೆಡಿಸಿಕೊಂಡರು.
ಮುಂದಿನ ಹತ್ತು ನಿಮಿಷ, ಮಧ್ಯಾನ ಸೂಟಿ ಘಂಟಿ ಢನ್ ಅನ್ನೋ ತನಕಾ ದ್ಯಾಮ್ಯಾ 'centi ಅಂದ್ರ ೧ / ೧೦೦. cente ಅಂದ್ರ ೧೦೦' ಅನ್ನೋದರ ಗುಂಗಿನ್ಯಾಗೇ ಇದ್ದ. ತಲ್ಯಾಗ ಅದೇ ಗುಂಗಿ ಹುಳ.
ಸೂಟಿಗೆ ಮನಿಗೆ ಹೊಂಟಿದ್ದ ದ್ಯಾಮ್ಯಾ, 'centi ಅಂದ್ರ ೧ / ೧೦೦. cente ಅಂದ್ರ ೧೦೦' ಮಸ್ತಿ ಮೂಡಿನ್ಯಾಗ ಇದ್ದ. ಮಾಸ್ತರ್ ಸ್ಟಾಫ್ ರೂಮಿನ ಮುಂದ ಬಂದಾಗ, ದೂರಿಂದ ಒದರಿದ, 'ಸರ್ರಾ, ನೂರು ನರಿಗಳ ಬುದ್ಧಿ ಒಂದೇ ಮನುಷ್ಯಾನಾಗ ಇದ್ದರ ಅವಂಗ ಏನಂತಾರ್ರೀ???'
ಮಾಸ್ತರಿಗೆ ಕೇಳಲಿಲ್ಲೋ, ಯಾರಿಗೆ ಬೇಕು ಈ ಮಂಗ್ಯಾನಮಕ್ಕಳ ಸಹವಾಸ ಅಂತ ಹಾಂಗೇ ಬಿಟ್ಟರೋ ಗೊತ್ತಿಲ್ಲ. ಸುಮ್ಮನೇ ಕೂತಿದ್ದರು.
ಯಾವದಕ್ಕೂ ಇರಲಿ, ಎಲ್ಲರ ಮಾಹಿತಿಗಾಗಿ, ಎಲ್ಲರ ಜ್ಞಾನಕ್ಕಾಗಿ ಅಂತ ದ್ಯಾಮ್ಯಾನೇ ಉತ್ತರ ಜೋರಾಗಿ ಒದರಿದ.
ಸೆಂಟಿನರಿಯನ್ (centenarian) !!
ಸೆಂಟಿನರಿಯನ್ (centenarian) = ನೂರು ನರಿಗಳ ಬುದ್ಧಿ ಇರೋ ಶಾಣ್ಯಾ(!) ಮನುಷ್ಯ!
ಕೆಲವು ಮಂದಿಗೆ ವಯಸ್ಸು ಐವತ್ತೂ ಆಗಿರೋದಿಲ್ಲ ಆದ್ರ ಬುದ್ಧಿ ಮಾತ್ರ ಸೆಂಟಿನರಿಯನ್, ಡಬಲ್ ಸೆಂಟಿನರಿಯನ್ ಆಗಿಬಿಟ್ಟಿರ್ತದ. ಅಂತವರಿಂದ ಜ್ವಾಕಿರಿಪಾ! ಸುಮಡಿಯೊಳಗ, ಸದ್ದಿಲ್ಲದೇ ಬ್ಯಾಕಿನಾಗ ಬತ್ತಿ ಇಟ್ಟು ಹೋಗಿಬಿಟ್ಟಾರು! ಜ್ವಾಕಿ!
ವಿ.ಸೂ: 'centenarian ಉಚ್ಚಾರ ಸೆಂಟಿನೇರಿಯನ್. ಅಲ್ಲೇನು? ಅದೆಂಗ ದ್ಯಾಮ್ಯಾ ಸೆಂಟಿನರಿಯನ್ ಅಂದಾ?' ಅಂತ ಕೇಳಬ್ಯಾಡ್ರೀ. ನಾವೆಲ್ಲಾ ಕನ್ನಡ ಮೀಡಿಯಂ ಮಂದಿ. ಬರೆದಂತೆ ಹೇಳು. ಹೇಳಿದಂತೆ ಬರೆ.
ಮಾಸ್ತರ ಹೇಳಿದ್ದು - centi ಅಂದ್ರ ೧ / ೧೦೦. ಇದು ಪೂರ್ತಿ ಖರೆ ಅಂತೂ ಅಲ್ಲ. ಶತಪದಿ = centipede! Exception case.
ದ್ಯಾಮ್ಯಾನ ಮ್ಯಾಲಿನ ಕಿತಾಪತಿ ಓದಿ ತಾವು ಕಲಿತದ್ದೆಲ್ಲವನ್ನೂ ಮರೆತವರಿಗೆ (ಮಾತ್ರ) ಕೆಳಗಿನ ವಿವರಣೆ.
centenarian = a person who is 100 years old or older
centenary = the 100th anniversary of something (such as an important event)

1 comment:
Dyamya is like office boys in Gowadi press!
Post a Comment