Sunday, April 05, 2015

ಕಾಯಕವೇ ಕೈಲಾಸ, ಲಿಂಗ ಸಮಾನತೆ...ವಾರಾಂತ್ಯದ ತರಲೆ ವಿಚಾರಗಳು

ಕಾಯಕವೇ ಕೈಲಾಸ. ಇದು ಶರಣರ ವರ್ಶನ್. ಸರಳ. ಸಿಂಪಲ್.

ಅವರ ಕಾಯಕ ನಿಮ್ಮ ಕೈಯಲ್ಲಿ ಮಾಡಿಸಿ, ಅದಕ್ಕೆ ಮಜೂರಿ ಅಂತ ನಾಯಿ ಬಿಸ್ಕೀಟು ಹಾಕಿ, ಕೈಲಾಸದ ಕಲರ್ ಕಲರ್ ಚಿತ್ರ ತೋರಿಸಿ, ಸಪ್ನ ಕಾಣಿಸಿ, ಕೈಲಾಸಕ್ಕೆ ಹೋಗಲಿಕ್ಕೆ ಬಸವಣ್ಣ (ನಂದಿ) ಸಹ ಬುಕ್ ಆಗಿಬಿಟ್ಟಿದೆ ಅಂತ ನಂಬಿಸಿ, ನಂಬಿದ ನೀವು ಕೋಲೆಬಸವವಂತೆ ತಲೆಯಾಡಿಸಿ, ಅತಿಯಾಸೆಯಲ್ಲಿ ಅತಿಯಾದ ಕೆಲಸ ಮಾಡಿ ನೀವು ಅಕಾಲಕ್ಕೆ ಸತ್ತು, ನಿಮ್ಮ ಕರ್ಮಾನುಸಾರ ಕೈಲಾಸಕ್ಕೋ, ವೈಕುಂಠಕ್ಕೋ, ನರಕಕ್ಕೋ ಹೋಗಲಿ ಅಥವಾ ಪೂರೈಸದ ಆಸೆಗಳಿಂದ ಅಂತರ್ಪಿಶಾಚಿಯಾಗಿ ಅರಳಿ ಮರಕ್ಕೇ ಜೋತು ಬೀಳಲಿ ಅಥವಾ ಬ್ರಹ್ಮರಾಕ್ಷಸ(ಸಿ)ನಾಗಿ ಬ್ರಹ್ಮಾಂಡವನ್ನೇ ಕಾಡಲಿ, ಪೀಡೆ ಕಳೆಯಿತು ಅಂತ ಕಮ್ಮಿ ಖರ್ಚಿನ ಹೊಸ ಬಕರಾ ಹುಡುಕುವದು. ಇದೂ ಸಹ ಕಾಯಕವೇ ಕೈಲಾಸ. ಇದು ಕಾರ್ಪೊರೇಟ್ ವರ್ಷನ್. Complicated but highly profitable once you understand it.

#WorkLifeBalance

'ಲಿಂಗ ಸಮಾನತೆ' ಅನ್ನುವದನ್ನು ಮಿಸ್ಟೇಕ್ ಮಾಡಿಕೊಂಡ ಧಾರವಾಡ ಜವಾರಿ ಮಂದಿ 'ಲಿಂಗ 'ಸಾಮಾನ' ಅಂತೆ' ಅಂತ ಹೇಳಿಕೊಂಡು ಅಡ್ಯಾಡಿದ್ದು ಸಿಕ್ಕಾಪಟ್ಟೆ ನಗು ತರಿಸಿದರೂ ಧಾರವಾಡ ಭಾಷೆ ಪ್ರಕಾರ ತಪ್ಪಂತೂ ಅಲ್ಲ ಅಂತ 'ಬಾಬು'ಸಿಂಗ ಪೇಡಾ ತಿಂದ 'ತಮ್ಮ'ಗೋಳ ಅಂಬೋಣ.

1 comment:

Trilingasidda Algappan said...


Ngaging thoughts!