ಸೆಲ್ಫಿ ...ಇದೇ ನಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೋ ಈಗ! |
'ಕೆಲವು ಮಂದಿ ಅದ್ಯಾವ ರೇಟಿನಲ್ಲಿ, ಅದ್ಯಾವ ವೇಗದಲ್ಲಿ, ಅದೆಂತಹ ವೇಗೋತ್ಕರ್ಷದಲ್ಲಿ ಪ್ರೊಫೈಲ್ ಪಿಕ್ ಬದಲಾಯಿಸುತ್ತಾರೆ ಮಾರಾಯರೇ! ಆ ರೇಟಿನಲ್ಲಿ, ಆ ವೇಗದಲ್ಲಿ, ಆ ವೇಗೋತ್ಕರ್ಷದಲ್ಲಿ ಅವರು ಕಾಚಾ ಚಡ್ಡಿ ಕೂಡ ಬದಲಾಯಿಸಲಿಕ್ಕಿಲ್ಲ,' ಅಂತ ಒಂದು ಜೋಕು.
(Some people change their FB profile picture more often than they probably change their underwear. So goes a saying. I had not changed mine in two plus years. I mean I had not changed my profile pic (not undies) in two plus years. So here is a selfie. Read somewhere that putting selfie is a psycho problem! True??)
ಸಿಕ್ಕಾಪಟ್ಟೆ, ಪದೇ ಪದೇ ಪ್ರೊಫೈಲ್ ಪಿಕ್ ಬದಲಾಯಿಸುವ ಗೆಳತಿಯೊಬ್ಬಾಕೆ ಸದಾ ದೊಡ್ಡ ಸೈಜಿನ ಗಾಗಲ್ಸ್ ಹಾಕಿಕೊಂಡೇ ಸೆಲ್ಫಿ (selfie) ಹೊಡೆದುಕೊಳ್ಳುತ್ತಾಳೆ. 'ಸೆಲ್ಫಿ ಓಕೆ ಮಾರಾಯಿತಿ. ಅಷ್ಟು ದೊಡ್ಡ ಗಾಗಲ್ಸ್ ಯಾಕೆ????' ಅಂತ ಕೇಳಿದರೆ, 'ಸ್ಟುಪಿಡ್! ನನಗ ನಾಚಿಗೆ ಬರ್ತದ! ನೀನು ನನ್ನ ಕಣ್ಣಾಗ ಕಣ್ಣಿಟ್ಟು ನೋಡಿ ನಿನ್ನ ಅಂಡರ್ವೇರ್ ಚಡ್ಡಿ ಬದಲಾವಣೆ ಡೈಲಾಗ್ ಹೊಡೆದುಬಿಟ್ಟರೆ ಏನು ಗತಿ ಅಂತ???!' ಅಂದುಬಿಡುತ್ತಾಳೆ!!!!! ಅಕಟಕಟಾ!!!! ಶಿವನೇ ಶಂಭುಲಿಂಗ!
ಪ್ರೊಫೈಲ್ ಪಿಕ್ ಬಗ್ಗೆ ಬರೆದಿದ್ದ ಒಂದು ಹಳೆ ಬ್ಲಾಗ್ ಪೋಸ್ಟ್ - http://maheshuh.blogspot.com/2013/08/blog-post_7994.html
(ಫೇಸ್ಬುಕ್ ಸ್ಟೇಟಸ್ ನಿಂದ ಎತ್ತಿದ್ದು)
4 comments:
Very good!
Thanks Shailesh.
ಪ್ರೊಫೈಲ್ ಬದಲಾಯಿಸೋಕೇ, ಎರಡೂವರೆ ವರ್ಷ ಬೇಕಾಯಿತಾ? ಇನ್ನು ಒಳಚಡ್ಡಿ ಬದಲಾಯಿಸೋಕೆ....? ಶಿವನೇ ಶಂಭುಲಿಂಗ!
ಹಾ! ಹಾ! ಬದಲಾಯಿಸಲು, ಬದಲಾಯಿಸಿಕೊಳ್ಳಲು ಬೇರೆ ಸಾಕಷ್ಟು ಇದ್ದಾಗ ಅದನ್ನೇನು ಅಂದರೆ ಪ್ರೊಫೈಲ್ ಫೋಟೋ ಏನು ಬದಯಾಲಿಸೋದು ಅಂತ ಹಾಗೆ ಬಿಟ್ಟಿದೆ. ಬದಲಾಯಿಸಲು ಜೀವನ, ನಡೆ ನುಡಿ, ಆಚಾರ ವಿಚಾರ ಮತ್ತು ಮುಖ್ಯವಾಗಿ ಚಡ್ಡಿ ಇರುವಾಗ ಎಲ್ಲಿ ಪ್ರೊಫೈಲ್ ಪಿಕ್ ಬದಲುಮಾಡುತ್ತಾ ಕೂಡೋಣ?:)
Post a Comment