Sunday, July 01, 2012

ತೀರಿ ಹೋದ ಕನವಳ್ಳಿ ಸರ್.....ತಿರುಗಿ ಬಂದ ನೆನಪುಗಳು


ಕನವಳ್ಳಿ ಸರ್ ಹೋಗಿಬಿಟ್ಟರೇ?

ದೇವತಾ ಮನುಷ್ಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.

ನಮ್ಮ ತಾಯಿ, ನಮ್ಮ ಚಿಕ್ಕಮ್ಮ, ನಮ್ಮ ಮಾಮಾ, ನಮ್ಮ ಅಣ್ಣ  ಮತ್ತು ನನಗ - ಹಿಂಗ almost ಎಲ್ಲರಿಗೂ ಒಂದಲ್ಲ ಒಂದು ರೀತಿ KEBOSA ಮಾಸ್ತರ್ ಆಗಿದ್ದವರು ನಮ್ಮ ಕನವಳ್ಳಿ ಸರ್. ನಮ್ಮ ತಾಯಿ ಕಡೆ ಮಂದಿ ಎಲ್ಲ ಸಿರ್ಸಿ ಕಡೆ ಹಳ್ಳಿಯಿಂದ  ಧಾರವಾಡಕ್ಕೆ  ಎಜುಕೇಶನ್ ಗೆ ಅಂತ ಬಂದಿದ್ರು. ಎಲ್ಲರೂ KEB, KCD.

ತಂದೆಯವರ ಜೊತೆ ಅತ್ಯಂತ ಆತ್ಮೀಯ ಗೆಳತನ ಸರ್ ಅವರದ್ದು. ಒಬ್ಬರನ್ನೊಬ್ಬರು ಅತ್ಯಂತ ಗೌರವಿಸಿದವರು ಸರ್ ಮತ್ತು ನಮ್ಮ ತಂದೆ.

ನಮ್ಮ ಫ್ಯಾಮಿಲಿ ಮೇಲೆ ಏನೋ ಒಂದು ತರಹದ ಸಿಕ್ಕಾಪಟ್ಟೆ ಪ್ರೀತಿ, ಅಭಿಮಾನ ಕನವಳ್ಳಿ ಸರ್ ಗೆ. 

ಅವರು ಪ್ರಿನ್ಸಿಪಾಲ್ ಆಗಿದ್ದು 1979 - 1980 ನಲ್ಲಿ. ಅದು ನಮ್ಮ ಅಣ್ಣನ SSLC ಬ್ಯಾಚ್. ಸರ್ ಗೆ ಫಸ್ಟ್ ಬ್ಯಾಚ್. ನಮ್ಮ ಅಣ್ಣ ಮತ್ತ ಅವನ ದೋಸ್ತ 2nd ಮತ್ತು 10th ರಾಂಕ್ ಬಂದು ಕನವಳ್ಳಿ ಸರ್ ಲಾಂಗ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಕನವಳ್ಳಿ ಸರ್ ಗೆ ಮೊದಲ ವರ್ಷದಲ್ಲೇ  ಎರಡು ರಾಂಕ್ ಬಂದಿದ್ದು ಭಾಳ ಖುಷಿ ಇತ್ತು.

1980 to 1987 ಅಂದ್ರ KEBOSA ಸಾಲಿಗೆ  ಗೋಲ್ಡನ್ ಇಯರ್ಸ್. ಎಷ್ಟು ರಾಂಕ್ಸ? ಏನ ಕಥಿ? ಕನವಳ್ಳಿ ಮಾಸ್ತರ್ ಟೈಮ್ ನ್ಯಾಗ ಬಂದಷ್ಟು ರಾಂಕ್ ಮತ್ತ ಯಾವಾಗಲೂ ಬಂದಿರಲಿಕ್ಕೆ ಇಲ್ಲ. ಪ್ರತಿ ವರ್ಷ ಮಿನಿಮಮ್ 2-3 ರಾಂಕ್. 1984 ಅಂತೂ ಬೋನಾಂಜಾ. ನೆನಪ ಇರ್ಲಿ, ಅವರ ಟೈಮ್ ನ್ಯಾಗ ಓನ್ಲಿ 10 ರಾಂಕ್ಸ್ ಇನ್ SSLC. ಇರುವ ಹತ್ತು ರಾಂಕುಗಳಲ್ಲಿ 5-6 ರಾಂಕ್ ತರಿಸಿಕೊಂಡಿದ್ದು ಅವರ ಗ್ರೇಟನೆಸ್. 1985 ನಿಂದ 20 ರಾಂಕ್ ಶುರು ಆಗಿದ್ದು. ಈಗಂತೂ ರಾಂಕ್ ಇದ್ದಾಂಗ ಇಲ್ಲ.

ನಮ್ಮ ಅಣ್ಣ ಅಂದ್ರ ಕನವಳ್ಳಿ ಸರ್ ಅವರಿಗೆ ಏನೋ ಒಂದು ತರಹ extra ಹೆಮ್ಮೆ. ಅದ್ರಾಗೂ ನಮ್ಮ ಅಣ್ಣ SSLC ಒಳಗ 2nd ರಾಂಕ್ ಬಂದ, PUC -2 ಒಳಗ 1st ರಾಂಕ್ ಬಂದಿದ್ದು ಕನವಳ್ಳಿ ಸರ್ ಗೆ ಭಾರಿ ಖುಷಿ ಮತ್ತು ಹೆಮ್ಮೆಯ ಮಾತಾಗಿತ್ತು. ಅವಾ SSLC ಒಳಗ 1st ರಾಂಕ್  ಹ್ಯಾಂಗ್ ಮಿಸ್ ಮಾಡಿಕೊಂಡಾ ಅಂತ ನಮ್ಮೆಲಿರಿಗಿಂತ ಹೆಚ್ಚಗಿ ತಲಿ ಕೆಡಿಸ್ಕೊಂಡಿದ್ದು ಕನವಳ್ಳಿ ಮಾಸ್ತರ್ ಮತ್ತು ಅವರ ಕ್ಲೋಸ್ ಥಿಂಕ್ ಟ್ಯಾಂಕ್.

ಇನ್ನು ನಾನೂ ಇದ್ದೆ. ಅವರ ಸ್ಟುಡೆಂಟ್ ಆಗಿ. 1982-1987. ಬಾಕಿ ಎಲ್ಲಾ ಮಾಸ್ತರ್, ಟೀಚರ್ ಮಂದಿ ನನ್ನ ಕಾಟದ ಬಗ್ಗೆ ಕಂಪ್ಲೇಂಟ್ ತೊಗೊಂಡ ಹೋದಾಗ, ನನ್ನ ಪರವಾಗಿ ಮಾತಾಡಿ, 'ಏ, ಆ ಹುಡುಗಾ ಕೆಟ್ಟವ ಅಲ್ಲ. ಅವರ ತಂದಿ, ತಾಯಿ, ಅಣ್ಣ, ಫ್ಯಾಮಿಲಿ ನನಗ ಭಾಳ ಕ್ಲೋಸ್. ಒಳ್ಳೆ ಮನೆತನ ಅವರದ್ದು. ತಲಿಗೆ ಹಚ್ಚಿಗೋಬ್ಯಾಡ್ರಿ,' ಅಂತ ನನ್ನ ಪರವಾಗಿ ವಕಾಲತ್ ಮಾಡಿದ ಮಹನೀಯ ಅವರು. ಥ್ಯಾಂಕ್ಸ್ ಸರ್ರಾ.

ಇನ್ನು ನಮ್ಮ ಬ್ರಾಹ್ಮಣ ಹುಡಗೂರ್ಗೆ ಮುಂಜಿ, ಉಪನಯನ ಅನ್ನೋದನ್ನು ಮಾಡಿ ಬಿಟ್ಟರೆ ತಂದೆ ತಾಯಿದು ಒಂದು ಜವಾಬ್ದಾರಿ ಮುಗದಾಂಗ. ನಮ್ಮ ಮನಿ ಮಂದಿ, ಆವಾಗ ಇನ್ನೂ ಜೀವಂತ ಇದ್ದ ನಮ್ಮ ಅಜ್ಜ, ನಮ್ಮ ಕುಲಪುರೋಹಿತರು ಎಲ್ಲ ಕೂಡಿ ನನಗ ಮುಹೂರ್ತ ಇಟ್ಟಿದ್ದು - 1985 ಮೇ / ಜೂನ್. ಅದೂ 8th English Medium Entrance Exam ಮಿಸ್ ಆಗೋ ಹಾಂಗ. 'ಥತ್! ಇವರ,' ಅಂತ ನಾ ಅಂದ್ರ, ಕನವಳ್ಳಿ ಮಾಸ್ತರ್, 'ಬ್ರಾಹ್ಮಣರಿಗೆ ಮುಂಜಿ ಭಾಳ ಇಂಪಾರ್ಟಂಟ್. ಮುಹೂರ್ತ ಎಲ್ಲಾ ನೋಡಿ ಇಡಬೇಕಾಗ್ತದ. ಇದರ ಬಗ್ಗೆ ಚಿಂತಿ ಮಾಡಬ್ಯಾಡ್ರಿ. ಹ್ಯಾಂಗೂ 7th ಅವನಾ ಟಾಪರ್ ಇದ್ದಾನ್. ಹೋಗಿ ಮಾಡಿಸ್ಕೊಂಡ ಬಾರವ್ವ,' ಅಂತ ಮಾತಾಡ್ಲಿಕ್ಕೆ ಹೋದ ಅವರ ಮಾಜಿ ಸ್ಟುಡೆಂಟ್ ನಮ್ಮ ತಾಯಿಗೆ ಹೇಳಿ ಕಳಿಸಿಬಿಟ್ಟರು. ನಮ್ಮ ತಂದೆ ಮೊದಲೇ ಅವರಿಗೆ ಹೇಳಿ ಮುಂಜಿ ಪ್ರೆಪ್ ಗೆ ಅಂತ 2-3 ದಿನ ಮೊದಲೇ ಊರಿಗೆ ಹೋಗಿದ್ದರು. ಅದಕ್ಕ ನಮ್ಮ ಅಮ್ಮ ಕನವಳ್ಳಿ ಸರ್ ಗೆ ಇನ್ನೊಂದು ಸಲ ಹೇಳಿ ಬರಲಿಕ್ಕೆ ಹೋಗಿದ್ದರು. ಹೀಂಗ ನನಗ ಬಿನಾ ಎಂಟರನ್ಸ್ 8th English ಮೀಡಿಯಂ ಗೆ ಸೀಟ್ ಸಿಕ್ಕಿದ್ದು ಅವರ ಸ್ಪೆಷಲ್ ಪರ್ಮಿಶನ್ ಇಂದ. ಬಾಕಿ ಮಂದಿ ಎಲ್ಲ ಏನೇನೋ ಮ್ಯಾಲೆ ಮಾಡಿಕೊಂಡು ಎಂಟರನ್ಸ್ ಟೆಸ್ಟ್ ಬರಿ ಬೇಕಾದ್ರ ಬಹುಶಾ ನಾ ತಲಿ  ಮ್ಯಾಲೆ ಮುಸುಕು ಹಾಕ್ಕೊಂಡು, ನಮ್ಮ ತಂದೆ ಕಿವಿವಳಗಾ ಲೌಡ್ ಸ್ಪೀಕರ್ ಇಟ್ಟಂಗ ಹೇಳಿದ ಗಾಯತ್ರಿ ಮಂತ್ರ ಇಲ್ಲದ ಮನಸ್ಸಿನಿಂದ ಕೇಳಿಸಿಕೋತ್ತ ಇದ್ದೆ ಅಂತ ಅನಸ್ತದ. 

ಮುಂಜಿ ಆತು. ವಾಪಾಸ್ ಬಂದೆ.

ಮನ್ಯಾಗ ಹೇಳಿದ್ರು. ಮೊದಲು ಕನವಳ್ಳಿ ಸರ್ ಗೆ ನಮಸ್ಕಾರ ಮಾಡಿ ಆಶೀರ್ವಾದ ತೊಗೋ. ಬ್ರಹ್ಮಚಾರೀ ಆಗಿ ಈಗ ಫ್ರೆಶ್. ಅಂತಹ  ಮಹನೀಯರ ಆಶೀರ್ವಾದ ಇದ್ದರ ಮುಂದ ಎಲ್ಲ ಚೊಲೋ ಆಗ್ತದ ಅಂತ.

ನಮಗೇನು ಅವರ ಚೇಂಬರ್ ಹೊಸದೇ? ವಾರಕ್ಕ ಒಮ್ಮೆ ಯಾರರ ಮಾಸ್ತರ್, ಟೀಚರ್, ನನ್ನ ಮತ್ತ ನನ್ನ ಕೆಲೊ ಖಾಯಂ ಕಿಡಿಗೇಡಿ ದೋಸ್ತರನ್ನ ಅಲ್ಲೆ ಕರಕೊಂಡ ಹೋಗಿ, ಮಂಗಳಾರತಿ ಮಾಡಿಸಿ ಕರಕೊಂಡ ಬರ್ತಿದ್ದರು. ಕೆಲೊ ಮಂದಿಗೆ ಪ್ರಸಾದನೂ ಸಿಗ್ತಿತ್ತು. ಫ್ಯಾಮಿಲಿ ಕನೆಕ್ಷನ್ ಇತ್ತು ಅಂತ ನನಗ ಕೇವಲ ಮಂಗಾಳರತಿ ಮಾತ್ರ. ಪ್ರಸಾದ ಇಲ್ಲ. ಪುಣ್ಯಕ್ಕ.

ಸರ್ ಚೇಂಬರ್ ಗೆ ಹೋದೆ...ನಮಸ್ಕಾರ ಮಾಡಿದೆ. ಕನವಳ್ಳಿ ಸರ್ ಒಂದ ಕ್ಷಣ ಆವಾಕ್ಕ ಆದರು. 

ಚಂಡಿಕಿ (ಜುಟ್ಟ) ಎಲ್ಲೆ? ಚಂಡಿಕಿ ಇಲ್ಲದ ಇದೆಂತಾ ಮುಂಜ್ವಿ  ಮಾಡಿಕೊಂಡ ಬಂದಿ? ಅಂತ ಕನವಳ್ಳಿ ಸರ್ ಜೋಕ್ ಹೊಡದ್ರ.

ಸರ್...ಅದು...ಇದು....ಅಂತ ಎಳದು ಹಾರ್ಕಿ ಉತ್ತರ ಕೊಟ್ಟೆ.

ಫ್ರೆಶ್ ಆಗಿ ತಯಾರಾಗಿದ್ದ ಮುಂಜಿ ಮಾಣಿಗೆ ಆಶೀರ್ವಾದ ಮಾಡಿ ಕಳಿಸಿದರು ಸರ್ ಅವತ್ತು.

ಇನ್ನೆಲ್ಲಿ ಇವರಿಗೆ ನಮ್ಮ ಆ ಕಾಲದ ಪೆಟ್ hairstyle ಶಟಿಂಗ್ ಬಗ್ಗೆ ಹೇಳ್ಕೊತ್ತ ಕೂಡಲಿ. 

ಅದೊಂದೇ ನಾ ಹಾಕಿದ ಕಂಡೀಶನ್ ನಮ್ಮ ಮನಿ ಮಂದೀಗೆ ಮುಂಜಿ ಮಾಡ್ಕೊಳ್ಳಿಕ್ಕೆ. 'ನಿಮ್ಮ ಮುಂಜವಿ ಅದು ಇದು ಅನ್ನೋದ್ರಾಗ ನಮ್ಮ ಮಿನಿ-ಹಿಪ್ಪಿ ಕಟ್ಟಿಂಗ್ (ಶಟಿಂಗ್) ಸ್ಟೈಲ್ ಸ್ವಲ್ಪೂ ಹೇರಾ ಪೇರಿ ಆಗಬಾರದು ನೋಡ್ರಿ. ಇಲ್ಲಾ ಅಂದ್ರ ನಾ ಅರ್ಧಾಕ್ಕ ಎದ್ದು ಬಿಡವ,' ಅಂತ. ಓಕೆ ಅಂತ ಒಪ್ಪಿ ನಾಮ್ ಕೆ ವಾಸ್ತೇ ಒಂದೆರೆಡೇ ತಲಿ  ಕೂದಲ ಕಟ್ ಮಾಡಿ, ಮುಂಜಿ ಮಾಡಿ ಮುಗಿಸಿದ್ದರು. ಅವರಿಗೂ ಮಾಡಿ ಮುಗಸಿದ್ದರ ಸಾಕಾಗಿತ್ತು. ಹಾಂಗಾಗಿ ನಮಗ ಚಂಡ್ಕಿ ಮತ್ತೊಂದು ಅಂತ ಅಸಡ್ದಾಳ ರೂಪ ಮಾಡಿಕೊಂಡು ಸಾಲಿಗೆ ಬರೋ ಕರ್ಮ ತಪ್ಪಿತ್ತು. ತಲಿ  ಬೋಳಿಸ್ಕೊಂಡು, ಟೊಪ್ಪಿಗಿ ಹಾಕ್ಕೋಂಡು, ಇನ್ನ್ಯಾರದೋ ಕಡೆ ಅದನ್ನ ಹಾರಿಸ್ಕೊಂಡು ಹ್ಯಾಂಗ ಅದೂ co-ed ಸಾಲಿ ಒಳಗಾ ಇರೋದು ಅಂತ ನನ್ನ ಚಿಂತಿ ಇತ್ತು ಅವತ್ತು.

1985 ಜೂನ್, ಜುಲೈ. ಆ ಮ್ಯಾಲೆ ಸ್ವಲ್ಪ ದಿವಸದಾಗ ಫೇಮಸ್ ಕಂಬರ್ಗಟ್ಟ ಇನ್ಸಿಡೆಂಟ್ ಆತ. ಅದು ಒಂದ ದೊಡ್ಡ ಕಥಿ. ಹುಡುಗಿಯರ ಬೆಂಚ್ ಮ್ಯಾಲೆ  ಜಿಗಟ್ ಜಿಗಟ್ ಕಂಬರ್ಗಟ್ಟ ರಾಪರ್ ಬಂದು ಕೂತು, ದೊಡ್ಡ ಹಗರಣ ಆಗಿ, ಸಿಕ್ಕಾಪಟ್ಟೆ ಎನ್ಕೊಯರಿನೂ ಆಗಿ, ಏನೇನೋ ಆಗಿ, ನಾವೂ almost ಫಿಕ್ಸ್ ಆಗಿ, ಹೆಂಗೋ ಬಚಾವ್ ಆಗಿ, ಬ್ಯಾರೆ ಕಾರಣಕ್ಕಾ ಮತ್ತ ಕನವಳ್ಳಿ ಸರ್ ಚೇಂಬರ್ ನ್ಯಾಗ ಸಣ್ಣ ಪ್ರಮಾಣದ ಮಂಗಳಾರತಿ, ಪೂಜಿ ಎಲ್ಲ ಮಾಡಿಸ್ಕೊಂಡ ಬಂದಿದ್ದು ನೆನಪ ಅದ.

ಇನ್ನ ಒಮ್ಮೆ 1985 ಡಿಸೆಂಬರ್ ಇಲ್ಲಾ 1986 ಜನವರಿ ಇರ್ಬೇಕು ಅಂತ ಅನ್ನಸ್ತದ. ಆವಾಗ ನಮ್ಮ ಅಣ್ಣ IIT-ಬಾಂಬೆದಾಗ ಫೈನಲ್ ಇಯರ್ ಕಂಪ್ಯೂಟರ್ ಇಂಜಿನಿಯರಿಂಗ್ ಸ್ಟುಡೆಂಟ್. ಯಾವದೋ conference ಗೆ ಕೊಯಿಮತ್ತೂರ್ಗೆ ಹೊಂಟಿದ್ದ. ಧಾರವಾಡದಾಗ ಇಳದು 1-2 ದಿನ ಮನಿ ಒಳಗ ಇದ್ದು ಹೋಗಲಿಕ್ಕೆ ಟೈಮ್ ಇರಲಿಲ್ಲ. ಅವ ವಾಪಸ್ ಬಾಂಬೆಗೆ ಹೋಗುವಾಗ, ಧಾರವಾಡ ರೇಲ್ವೆ ಸ್ಟೇಶನ್ ನ್ಯಾಗ ಭೆಟ್ಟಿ ಆಗೋಣ ಅಂತ decide ಮಾಡಿ ಆತು. ಆವಾಗಿನ ಮಹಾಲಕ್ಷ್ಮಿ ಎಕ್ಸಪ್ರೆಸ್ಸ ಟ್ರೇನ್ ಇತ್ತು 4.30 pm ಗೆ. ನನಗೋ ಬಾಲವಾಡಿ 11 am to 2 pm ಟೈಮಿಂಗ್ ಅಂದ್ರ ಮಸ್ತ. ವಾರದಾಗ 2-3 ದಿನ, 4-5 ಪೀರಿಯಡ್ ಆದ ಮ್ಯಾಲೆ ಮನೀಗೆ ಕದ್ದು ಓಡಿ ಹೋಗಲಿಲ್ಲ ಅಂದ್ರ ಮನಸ್ಸಿಗೆ ಸಮಾಧಾನ ಇರತಿದ್ದಿಲ್ಲ. ಇನ್ನು ಅವತ್ತ ಅಣ್ಣನ ಭೆಟ್ಟಿ ಆಗ್ಬೇಕು ಅಂತ ಹೇಳಿ 4 ಪೀರಿಯಡ್ ಆಗೋದ ಕಾಯ್ಕೋತ್ತ ಇದ್ದೆ. ನಾ ಮನಿಗೆ ಓಡಿ ಹೋಗೋದು ಎಲ್ಲಾರಿಗೂ ಗೊತ್ತ ಇತ್ತ. ಹಾಂಗಾಗಿ ಯಾವದಾ ಮಾಸ್ತರ್, ಟೀಚರ್ ಗೆ ಹೇಳೋ ಅವಶ್ಯಕತಾ ಇರಲಿಲ್ಲ. ಏನ ಇದ್ದರೂ ಮರುದಿನ ಏನಂತ ನೆವಾ ಹೇಳಿ ಕಡಿಮಿ ಬೈಸ್ಕೋ ಬೇಕು ಅನ್ನೋದರಾ ಬಗ್ಗೇನಾ ಸ್ಕೆಚ್.

ಮೊದಲ ಮನಿಗೆ ಹೋದೆ. ಮಸ್ತ ಬಾಲವಾಡಿ ಶೆಡ್ಯೂಲ್. ಊಟ ಮಾಡಿ, ನಿದ್ದಿ ಹೊಡದ ಸ್ಟೇಶನ್ ಗೆ ಬಂದೆ.  ಮಹಾಲಕ್ಷ್ಮಿ ಎಕ್ಸಪ್ರೆಸ್ಸ್ ಅವತ್ತ ಸ್ವಲ್ಪ ಲೇಟ ಇತ್ತ. ಕಾದಕೋತ್ತ ಕೂತಾಗ ಯಾರ ಕಾಣಬೇಕು? ತೇಜಸ್ವಿ ನಗರ ಕಡೆಯಿಂದ ಬರುತ್ತಿರುವ ಕನವಳ್ಳಿ ಸರ್. ಅವರು ಸಿಕ್ಕಿದ್ದ ಬೆಷ್ಟ ಆತ. ನಾ ಸಾಲಿ ತಪ್ಪಿಸಿ ಓಡಿ ಬಂದಿದ್ದು ಅವರ ಪ್ರೀತಿ ಶಿಷ್ಯಾ ನಮ್ಮ ಅಣ್ಣನ್ನ ಭೆಟ್ಟಿ ಮಾಡಲಿಕ್ಕೆ. ಜೊತಿಗೆ ಅಪ್ಪಾ, ಅಮ್ಮ ಇದ್ದಾರ. ಇನ್ನೇನ ಬೇಕ? ಕನವಳ್ಳಿ ಸರ್ ನಿಂತು ಪ್ರೀತಿಯಿಂದ ಮಾತಾಡ್ಸಿದ್ರು. ಅಣ್ಣನ ಭೆಟ್ಟಿ ಮಾಡಲಿಕ್ಕೆ ಬಂದೀನಿ ಅಂತ ಖುಷಿ ಪಟ್ಟರು. ಎಲ್ಲಾರಿಗೂ ಶುಭಾಶಯ ಕೋರಿ ಸರ್ ಹೋದರು. ನನಗಂತೂ ಮರುದಿನ ಯಾವದಾ ಮಾಸ್ತರ್, ಟೀಚರ್ ಸಿಕ್ಕಿ - ಸೂಟಿ ಒಳಗ ಯಾಕ ಓಡಿ ಹೋಗಿದ್ದಿ ಅಂದ್ರ - ನನ್ನೇನ ಕೇಳ್ತೀರಿ!!!????? ಬೇಕಾದ್ರ ಹೋಗಿ ಹೆಡ್ ಮಾಸ್ಟರ್ ಕೇಳ್ರಿ - ರಪ್ಪ ಅಂತ ಹೇಳಲಿಕ್ಕೆ ಅಂತ ತಿರಸಟ್ಟ  ಉತ್ತರ ರೆಡಿ ಮಾಡಿ ಇಟ್ಟಿದ್ದೆ. ಯಾರ ಕೇಳಲೇ ಇಲ್ಲ.

8th ಮುಗಿತ ಇನ್ 1986. ಸಮರ್ ಹಾಲಿಡೇಸ್ ನಲ್ಲಿ ಶೃಂಗೇರಿ ಸ್ವಾಮಿಗಳು ಧಾರವಾಡದಾಗ ಒಂದ 8-10 ದಿನ ಕ್ಯಾಂಪ್ ಹಾಕಿದ್ದರು. ದಿನಾ ಸಂಜಿ ಮುಂದ open air theater ನಲ್ಲಿ ಅವರ ಪ್ರವಚನ ಇರ್ತಿತ್ತು. ಅದಕ್ಕ ಅಷ್ಟೂ ದಿವಸ ಬಂದು, ಮೊದಲಿಂದ ಹಿಡದು ಪೂರ್ತಿ ಮುಗಿಯುತನಕ ಶ್ರದ್ಧೆಯಿಂದ ಕೇಳಿ, ಧನ್ಯತಾ ಭಾವದಿಂದ ಹೋದ ಕನವಳ್ಳಿ ಸರ್ ಇನ್ನೂ ನೆನಪ ಇದ್ದಾರ. ಅವರು ದ್ವೈತ ಸಂಪ್ರದಾಯದ  ವೈಷ್ಣವ ಬ್ರಾಹ್ಮಣ ಇದ್ದರು. ಆದ್ರ ಅದ್ವೈತದ ಬಗ್ಗೆ ಪ್ರವಚನ, ಅದೂ ಶೃಂಗೇರಿ  ಸ್ವಾಮಿಗಳಂತಹ ಮಹಾ ಜ್ಞಾನಿಗಳಿಂದ ಮಿಸ್ ಮಾಡ್ಕೊಳ್ಳೋ ಪೈಕಿ ಅವರಲ್ಲ. ಎಲ್ಲೇ ಜ್ಞಾನ ಇರಲಿ, ಯಾವದೇ ಸಿಸ್ಟಮ್ ಇರಲಿ, ತಮ್ಮ ಸ್ವಂತದ ನಂಬಿಕೆ ಏನೇ ಇರಲಿ, ಅದನ್ನ ಬದಿಗಿಟ್ಟು ಓಪನ್ ಮೈಂಡ್ ನಿಂದ ಜ್ಞಾನಾರ್ಜನೆ ಮಾಡಿದವರು ಕನವಳ್ಳಿ ಸರ್. ನಾನೂ ಹೋಗಿ ಕೂಡತಿದ್ದೆ. ಪ್ರವಚನ ಕೇಳಲಿಕ್ಕೆ ಅಲ್ಲ. ಮಸ್ತ ಉತ್ತತ್ತಿ, ಗೋಡಂಬಿ, ಬಾದಾಮಿ, ದ್ರಾಕ್ಷಿ ಪ್ರಸಾದದ ಸಲುವಾಗಿ. ಮತ್ತ ನಮ್ಮ ಏರಿಯ ದಿಂದ ಬಿಟ್ಟಿ ಕಾರ್ ಬ್ಯಾರೆ ಹೋಗ್ತಿತ್ತು.

1986 ನಮ್ಮ ಅಣ್ಣ ಹೈಯರ್ ಸ್ಟಡೀಸ್ ಗೆ ಅಂತ USA ಗೆ ಹೊಂಟ. ಅವನ್ನ ಮತ್ತ ನಮ್ಮ ತಂದೆ, ತಾಯಿ ಅವರನ್ನ ಸಾಲಿಗೆ ಕರೆಸಿ, ಒಂದು ಅಭಿನಂದನಾ ಸಮಾರಂಭ ಮಾಡಿ ಎಲ್ಲರನ್ನೂ ಸತ್ಕರಿಸಿ ಆಶೀರ್ವದಿಸಿದ್ದು ಕನವಳ್ಳಿ ಸರ್. ಸಿಕ್ಕಾಪಟ್ಟೆ ಹೆಮ್ಮೆ ಅವರಿಗೆ.

ಇನ್ನಾ 9th ನ್ಯಾಗ ನಮ್ಮ ಕಾಟ ಜಾಸ್ತಿ ಆತು. ಗೋಡಖಿಂಡಿ ಟೀಚರ್ ಪಿರಿಯಡ್ ನ್ಯಾಗ ಸಿಕ್ಕಾಪಟ್ಟೆ ಗದ್ದಲಾ ಹಾಕಿದವರ ಒಂದು ಲಿಸ್ಟ್ ತಯಾರ ಆತು. ಅದು ಮತ್ತ ಮತ್ತ ರಿವೈಸ್ ಆಗಿ ಫೈನಲ್ ಆಗಿ ಹೆಡ್ ಮಾಸ್ತರ್ ಕಡೆ ಹೋತು. ಅದರ ಮ್ಯಾಲೆ - send them - ಅಂತ ಶರಾ ಬರೆದು ಹನುಮಂತ ಪೂಜಾರ ಪ್ಯೂನ್ ಕಡೆ 9th A ಕ್ಲಾಸಿಗೆ ಕಳ್ಸಿದ್ರು. ಆವಾಗ ಹೆಗಡೆ ಮಾಸ್ತರ್ ಇದ್ದರು. ಅವರು ಹೆಸರು ಓದಿ, ಲಿಸ್ಟ್ ನಲ್ಲಿ ಇರೋ ಮಂದಿ ಹೋಗಿ ಪ್ರಿನ್ಸಿಪಾಲ್ ಭೆಟ್ಟಿ ಆಗ್ರಿ ಅಂತ ಹೇಳಿದ್ರು. ಹೋದ್ವಿ. ಗೋಡಖಿಂಡಿ ಟೀಚರ್ ನಕ್ಕೋತ್ತನ ನಮ್ಮ ಕೇಸ್ ಹಿಸ್ಟರಿ ಸರ್ ಗೆ ಹೇಳಿದ್ರು. ಸರ್ ಬೈದರ ಬಗ್ಗೋ ಪೈಕಿ ಮಂದಿಗೆ ಬೈದು ಕಳ್ಸಿದ್ರು. ನಾವ್ ಸರ್ ಗೂ ಎದರು ಉತ್ತರ ಕೊಟ್ಟ ಖುಶಿ ಒಳಗ ಇದ್ದರಾ, ನಮಗೇನ ಗೊತ್ತಿತ್ ಸರ್ ಮಹಾ ಪ್ರಚಂಡ ಅಂತ. ಸೀದಾ ಹೋಗಿ ಎಂ.ಎ. ಸಿದ್ಧಾಂತಿ ಮಾಸ್ತರ್ ಗೆ ನಮ್ಮ ಸುಪಾರಿ ಕೊಡ್ತಾರ ಅಂತ. ಮರುದಿನ ಎಂ.ಎ. ಸಿದ್ಧಾಂತಿ ಮಾಸ್ತರ್ ಕಡೆ ಯಕ್ಕಾ ಮಕ್ಕಾ ಬೈಸ್ಕೊಂಡ ಮ್ಯಾಲೆ ಗೊತ್ತಾತ, ಕನವಳ್ಳಿ ಸರ್ ಎಷ್ಟು ಶಾಣ್ಯಾ ಅಂತ.  ಚಾಣಕ್ಯ. ಚಾಣಕ್ಯ

ಮುಂದಾ...SSLC ಶುರು ಆದ ಮ್ಯಾಲೂ 1-2 ತಿಂಗಳ ಕನವಳ್ಳಿ ಸರ್ ಪ್ರಿನ್ಸಿಪಾಲ್ ಅಂತ ಇದ್ದರು. ಹೋಗೊಕಿಂತ ಮೊದಲು ಪಟೇಲ ಸರ್ ಮಾತ್ ಕೇಳಿ ಎಲ್ಲಾರಿಗೂ ಹಾಫ್ ಪ್ಯಾಂಟ್ ಅಂತ ರೂಲ್ ಮಾಡಿ, ನಾವೆಲ್ಲಾ ಫುಲ್ 10, 9, 8 ಎಲ್ಲಾ ಹುಡುಗೂರು ಸೀದಾ ಅವರ ಚೇಂಬರ್ ಗೆ ಮುತ್ತಿಗಿ ಹಾಕಿ, ಅವರ ಕಡೆ argue ಮಾಡಿ ಹ್ಯಾಂಗೋ ಮಾಡಿ ಅದನ್ನ ವಾಪಸ ತೊಗೊಳ್ಳೋ ಹಾಂಗ ಮಾಡಿದ್ದು ಅವರ ಜತಿ ನಮ್ಮ ಲಾಸ್ಟ್ ಗುದ್ದಾಟ. 10th ಹುಡುಗರಿಗೆ ಓಕೆ, ಬಾಕಿ ಎಲ್ಲಾರಿಗೆ ಓನ್ಲಿ ಹಾಫ್ ಪ್ಯಾಂಟ್ ಅಂತ ಹೇಳಿ ಆರ್ಡರ್ ಮಾಡಿ, ಸಹಿ ಹಾಕಿ, ಸೆಂಡ್-ಆಫ್ ಪಾರ್ಟಿ ತೊಗೊಂಡ ಸರ್ ರಿಟಾಯ್ರ್ ಆಗಿ ಹೋಗಿ ಬಿಟ್ಟರು. ಜುಲೈ 1987 ಇರಬೇಕು.

ನಾ ಏನ ಅವರನ್ನ ನಂತರ ಭೆಟ್ಟಿ ಮಾಡಿಲ್ಲ. ಆದ್ರ ತಂದೆಯವರಿಂದ ನನ್ನ ಪ್ರೋಗ್ರೆಸ್ಸ್ ರಿಪೋರ್ಟ್ ಪಡ್ಕೋತ್ತಿದ್ದ ಅವರು - SSLC ಒಳಗಾ 2 ಮಾರ್ಕ್ಸ್ ನಿಂದ ರಾಂಕ್ ಮಿಸ್ ಮಾಡಿಕೊಂಡ. PUC ಒಳಗಾ ಓನ್ಲಿ 1 ಮಾರ್ಕ್ಸ್ ನಿಂದ. ಇಂಪ್ರೂವಮೆಂಟ ಅದು.  ಮುಂದ ಚೊಲೋ ಮಾಡ್ಕೋತ್ತಾನ ಅವ.  - ಅಂತ ಹೇಳಿ ರಿಮೋಟ್ ಆಶೀರ್ವಾದ ಮಾಡಿ, ತಿಳಿಸಿದ್ದು ಅವರ ದೊಡ್ಡ ಗುಣ. ಅವರ ಆಶೀರ್ವಾದ ಮಾತ್ರ ಇನ್ನೂ ವರ್ಕ್ ಆಗ್ತಾನ ಅದ.

ಆಮೇಲೂ ಅವರು ವರ್ಷಕ್ಕ 1-2 ಸಾರೆ ಆದರೂ ಮನಿಗೆ ಬಂದು ಹೋಗ್ಯಾರ. ಸಿಕ್ಕಾಗೊಮ್ಮೆ ತಂದೆ ತಾಯಿಯರ ಕಡೆ ನಮ್ಮ ಬಗ್ಗೆ ಕೇಳಿ ಆಶೀರ್ವಾದ ಮಾಡ್ಯಾರ. ಯಾಕಂದ್ರ 25 ವರ್ಷದಾಗ, ವರ್ಷಕ್ಕ at least 2-3 ಸರೆ ಆದರೂ, ಮನಿ ಮಂದಿ ಫೋನ್ ಮಾಡಿದಾಗ - ಕನವಳ್ಳಿ ಮಾಸ್ತರ್ ಸಿಕ್ಕಿದ್ರು. ನಿಮ್ಮ ಬಗ್ಗೆ ಭಾಳ ಪ್ರೀತಿಂದ ಕೇಳಿದ್ರು. ನಿಮ್ಮ ಸುದ್ದಿ ಎಲ್ಲ ಹೇಳಿದೆ, ಖುಶ್ ಆದ್ರು ಸರ್ - ಅಂತ ತಂದೆ ತಾಯಿ ಹೇಳಿದ್ದು ಇವತ್ತು ಭಾಳ ನೆನಪ ಆತು.

RIP, ಕನವಳ್ಳಿ ಸರ್.

** ಮೇಲೆ ಹಾಕಿದ ಪತ್ರಿಕಾ ಪ್ರಕಟಣೆ ಒದಗಿಸಿದ್ದು ಮಿತ್ರ ಜಗದೀಶ್ ಹಂದಿಗೋಳ್. ಥ್ಯಾಂಕ್ಸ್.

2 comments:

Vijay Kulkarni said...

Sorry to read that kanavalli sir has expired.

We pray to god to keep his soul in peace and give strength to his family.

this article is touching the heart of every KEBOSA student who knew the great man.

One point to add is the special classes conducted in the evenings, NTSE and preparations for SSLC exams are his dedication to school and Students.

I dont see that commitment from any teachers now.

Mahesh Hegade said...

Thank you, Vijay.

Thank you very much for reminding about NTSE, BSC classes etc. That's very true.