ಚೀಪ್ಯಾ, ಚೀಪ್ಯಾ, ಇದ್ದಿಯೇನಲೇ ಮನಿಯಾಗಾ? ಹಾಂ? ಲೇ ಚೀಪ್ಯಾ? - ಅಂತ ಮೈಲು ದೂರದಿಂದ ಶಂಖಾ ಹೊಡಕೋತ್ತ ಚೀಪ್ಯಾನ ಮನಿ ಕಡೆ ಬಂದೆ.
ಬಾರೋ ಮಂಗೇಶ್. ಬಾ, ಬಾ, ಅಂತ ರೂಪಾ ವೈನಿ ಏನೋ ಸ್ಪೆಷಲ್ ಪ್ರೀತಿಯಿಂದ ಒಳಗ ಕರೆದರು.
ಚೀಪ್ಯಾ ಎಲ್ಲೆ ಹೋಗ್ಯಾನರೀ ವೈನಿ? ಹಾಂ? - ಅಂತ ಕೇಳಿದೆ.
ಬರತಾರ ಕೂಡು. ಸ್ವಲ್ಪ ಫಾರೆನ್ನಿಗೆ(?) ಹೋಗ್ಯಾರ, ಅಂತ ರೂಪಾ ವೈನಿ ಹೇಳಿದರು.
ಫಾರೆನ್ನರಿ? ಯಾವಾಗ ಹೋದಾ? ಎಷ್ಟು ದಿವಸ ಆಗ್ತದ್ರೀ ಬರೋದು? ದಿನಗಟ್ಟಲೆ, ವಾರಗಟ್ಟಲೆ ನಾ ಇಲ್ಲೆ ಕಾಯಿಕೋತ್ತ ಕೂಡಲಾ? ಹಾಂ? - ಅಂತ ಕೇಳಿದೆ.
ಸೂಕ್ಷ್ಮವಾಗಿ ಹೇಳಿದ್ದೊಂದು ತಿಳಿಯಂಗಿಲ್ಲ ನೋಡು ನಿನಗ. ಎಲ್ಲಾ ಪೂರ್ತಿ ಬಿಚ್ಚೇ ಹೇಳಬೇಕು. ಸಂಡಾಸಕ್ಕ ಹೋಗ್ಯಾರ. ಅದಕ್ಕ ಫಾರೆನ್ನಿಗೆ ಹೋಗ್ಯಾರ ಅಂತ ಹೇಳಿದರ ಖರೆನೇ ಫಾರೆನ್ನಿಗೆ ಹೋಗ್ಯಾರ ಅಂತ ತಿಳ್ಕೋತ್ತೀ ನೋಡು. ಹಾಪಾ! - ಅಂತ ಚೀಪ್ಯಾ ನಿಸರ್ಗದ ಕರೆಗೆ ಓಗೊಟ್ಟು ಹೋಗ್ಯಾನ, ಲಗೂನ (?) ಬರ್ತಾನ ಅಂತ ಹೇಳಿದರು.
ಸಂಡಾಸಕ್ಕ ಹೋಗ್ಯಾನ? ಹಾಂಗ ಹೇಳೋದು ಬಿಟ್ಟು, ಫಾರೆನ್ ಅಂತ, ಅದ ಅಂತ, ಇದಂತ? ಆss.......ಇವರಾ, ಅಂತ ಆಕ್ಷೇಪ ವ್ಯಕ್ತಪಡಿಸಿದೆ.
ಏ...ಖಬರಗೇಡಿ! - ಅಂತ ರೂಪಾ ವೈನಿ ನಂಗ ಬೈದರು. ನಿರ್ಲಕ್ಷ ಮಾಡಿದೆ.
ಮಂಗೇಶ, ಖಬರಗೇಡಿ ಅಂದ ಕೂಡಲೇ ನೆನಪಾತು ನೋಡು, ಅಂತ ರೂಪಾ ವೈನಿ ಏನೋ ಡೀಪ್ ಥಿಂಕಿಂಗ್ ಮೋಡಿಗೆ ಹೋದರು.
ಏನ್ರೀ ವೈನಿ? ಅಂತ ಕೇಳಿದೆ.
ಖಬರಗೇಡಿನ ಅಮೇರಿಕಾದಾಗ ಹಿಡದು ಹಾಕ್ಯಾರಂತಲ್ಲೋ ಮಂಗೇಶ? ಹಾಂ? - ಅಂತ ಅಂದ್ರು ರೂಪಾ ವೈನಿ.
ರೀ...ವೈನಿ....ಮೈ ಮ್ಯಾಲೆ ಖಬರಿಲ್ಲ ಅಂದ್ರ ಅಮೇರಿಕಾದಾಗೂ ಹಿಡದು ಒಗಿತಾರ, ಅಂಟಾರ್ಕಟಿಕಾ ಒಳಗೂ ಹಿಡದು ಹಾಕ್ತಾರ್ರೀ. ಅದರಾಗ ಏನದರೀ ವಿಶೇಷ? ಹಾಂ? - ಅಂತ ಕೇಳಿದೆ.
ಏ...ಹುಚ್ಚಾ....ನಾ ಹೇಳಿದ್ದು ಖಬರಗೇಡಿ ಖಬರಗೇಡಿ ಅಂತ, ಅಂತ ರೂಪಾ ವೈನಿ ಒತ್ತಿ ಒತ್ತಿ ಹೇಳಿದರು.
ನಾ ಕೇಳಿಸಿಕೊಂಡಿದ್ದೂ ಸಹಿತ ಅದರೀ. ಯಾರೋ ಮೈ ಮ್ಯಾಲೆ ಖಬರಿಲ್ಲದ ಖಬರಗೇಡಿ ಹಾಂಗೆ ಏನೋ ಮಾಡಿರಬೇಕು. ಅದಕ್ಕss ಹಿಡದು ಒಳಗ ಹಾಕ್ಯಾರ. ಯಾರು? ನಿಮ್ಮ ಪೈಕಿ ಏನು ಮತ್ತಾ? - ಅಂತ ಕೇಳಿದೆ.
ಏ...ಹಾಪಾ....ಅಕಿ ಯಾರೋ ರಾಜ ಮಹಾರಾಜರ ಜೋಡಿ ತಂತ್ರಾ ಮಾಡಾಕಿ ಅಂತ ನೋಡಪಾ. ರಾಜತಾಂತ್ರಿಕಿ. ಅಕಿ ಒಳಗ ಹೋದಾಕಿ. ಪಾಪ ನಡು ರಸ್ತೇದಾಗ ಅಕಿ ಮಕ್ಕಳ ಮುಂದನೇ ಹಿಡದು ಒಳಗ ಹಾಕ್ಯಾರಂತ ನೋಡೋ! ಅಂದ್ರು ರೂಪಾ ವೈನಿ.
ಇದು ಏನೋ ಭಾಳ ದೊಡ್ಡ ಕಾಂಪ್ಲಿಕೇಟೆಡ್ ಆತಲ್ಲಪಾ ಅಂತ ಅನ್ನಿಸ್ತು.
ಯಾರು ಇಕಿ? ಅಮೇರಿಕಾದಾಗ ತಂತ್ರಾ ಮಾಡ್ತಾಳಂತ? ಮಂತ್ರಾ ಹೇಳ್ತಾಳಂತ? ಯಂತ್ರಾನೂ ಕಟ್ಟತಿರಬಹುದು. ಡೇಂಜರ್ ಹುಡುಗಿ! ಯಾರಿರಬಹುದು?
ಯಾರ್ರೀ ಅಕಿ ವೈನಿ? ಏನು ತಂತ್ರಾ ಮಾಡ್ತಾಳ ಅಕಿ? ಹಾಂ? - ಅಂತ ಕೇಳಿದೆ.
ಏನೋ ರಾಜತಂತ್ರಾ ಮಾಡ್ತಾಳಂತ ನೋಡಪಾ. ಅಲ್ಲೆ ಅಮೇರಿಕಾದಾಗ ತಂತ್ರಾ ಮಾಡೋವಾಗ ಏನೋ ಲಫಡಾ ಮಾಡಿಕೊಂಡು ಸಿಕ್ಕಿ ಬಿದ್ದಾಳಂತ ನೋಡು. ಗೊತ್ತಾತೇನೋ? ಹಾಂ? - ಅಂತ ವೈನಿ ಸ್ವಲ್ಪ ಅಸಹನೆಯಿಂದ ಹೇಳಿದರು.
ಇಲ್ರೀ ವೈನಿ. ಗೊತ್ತಾಗಲಿಲ್ಲ ನೋಡ್ರೀ, ಅಂತ ನಮ್ಮ ಅಜ್ಞಾನವನ್ನ ಪ್ರದರ್ಶಿಸಿದೆ.
ಥತ್ ನಿನ್ನ! ಪೇಪರ್ ಗೀಪರ್ ಓದ್ತಿಯೋ ಇಲ್ಲೋ? ಹಾಂ? ಪೇಪರ್ ತುಂಬಾ ಅಕಿದೇ ಸುದ್ದಿ. ಹಂತಾದ್ರಾಗ ಗೊತ್ತಿಲ್ಲ ಅಂತಿಯಲ್ಲೋ? ಹಾಂ? - ಅಂತ ವೈನಿ ತಿವಿದರು.
ಪೇಪರ್ ಓದ್ತೇನ್ರೀ. ಆದ್ರ ವಾರ ಭವಿಷ್ಯ ಮಾತ್ರ. ಬಾಕಿ ಏನೂ ಓದೋದಿಲ್ಲರಿ, ಅಂತ ಹೇಳಿದೆ.
ಸುದ್ದಿ ಗಿದ್ದಿ ಓದೋದಿಲ್ಲಾ? ಯಾಕಾ? - ಅಂತ ವೈನಿ ಕೇಳಿದರು.
ಎಲ್ಲಿ ಸುದ್ದಿರಿ? ಎಲ್ಲಾ paid media. ಎಲ್ಲಾ ಮಾರಿಕೊಂಡು, ಯಾರ ಪರವಾಗ ಏನೇನು ಬೇಕೋ ಎಲ್ಲಾ ಬರದು ಬರದು ಒಗಿತಾರ. ಅದನ್ನ ಏನು ಓದೋದರೀ? ಬಿಡ್ರೀ, ಅಂತ ಹೇಳಿದೆ.
ಏನು ಪೇಡೇ? ಆವಾ ಪೇಡೇ ಮಾಡೋ ಬಾಬುಸಿಂಗ ಸಹಿತ ನ್ಯೂಸ್ ಪೇಪರ್ ಮಾಡ್ಯಾನ ಏನು? ಮಾಡಿದರೂ ಆಶ್ಚರ್ಯ ಇಲ್ಲ ತೊಗೋ. ಟ್ರಕ್ ಹೊಡಿಯೋ ಸಂಕೇಶ್ವರ ಅವರು ಪೇಪರ್ ಮಾಡಿ, ಅದನ್ನ ಮಾರಿ, ಮತ್ತ ಬ್ಯಾರೆ ಪೇಪರ್ ಮಾಡಿ ಸಾವಿರಾರು ಕೋಟಿ ರೊಕ್ಕಾ ದುಡಿಲಿಲ್ಲೇನು? ಹಾಂಗೆ ಬಾಬುಸಿಂಗನೂ ವಿಚಾರ ಮಾಡಿರಬೇಕು. ಪೇಪರ್ ಮಾರಾಟ ಆದಷ್ಟು ಆತು, ಉಳಿದ ರದ್ದಿ ಪೇಪರ್ ಎಲ್ಲಾ ಪೇಡೆ ಕಟ್ಟಿ ಕೊಡಲಿಕ್ಕೆ, ಅಂಗಡಿ ಮುಂದ ಸ್ಯಾಂಪಲ್ ನೋಡೋ ಮಂದಿಗೆ ಅರ್ಧಾ, ಗಿರ್ಧಾ ಪೇಡೆ ಕೊಡಲಿಕ್ಕೆ ಉಪಯೋಗ ಆಗ್ತದ ಅಂತ ಹೇಳಿ ಬಾಬುಸಿಂಗ ಸಹಿತ ಪೇಪರ್ ಮಾಡಿರಬೇಕು. ಅದೇ ಪೇಡೆ ಪೇಪರ್ ಇರಬೇಕು ಅಲ್ಲಾ? ನೀ ಆ ಪೇಪರ್ ಓದ್ತೀ ಏನು? ಅಷ್ಟೇ ಮತ್ತಾ ಆ ಪೇಪರ್ ಓದಿದರ. ಅದರಾಗ ಲೈನ್ ಬಜಾರದಾಗ ಯಾರು ಯಾರಿಗೆ ಯಾವಾಗ ಲೈನ್ ಹೊಡೆದರು, ಯಾಕಿ ಯಾವನಿಗೆ ಎಷ್ಟು ಸಿಗ್ನಲ್ ಕೊಟ್ಟಳು, ಅಷ್ಟನ್ನ ಬಿಟ್ಟರೆ ಮತ್ತೇನೂ ಇರೋದಿಲ್ಲ. ಹಾಂಗಾಗೆ ನಿನಗ ದೇಶ ವಿದೇಶದ ಸುದ್ದಿ ಒಂದೂ ಗೊತ್ತಿಲ್ಲ. ಅದಕ್ಕೆ ಅಕಿ ಖಬರಗೇಡಿ ಅನ್ನೋ ತಾಂತ್ರಿಕಳನ್ನ ಅಲ್ಲೆ ಅಮೇರಿಕಾದಾಗ ಹಿಡದು ಜೈಲಾಗ ಒಗೆದಾರ ಅಂದ್ರ ಏನೂ ಗೊತ್ತಿಲ್ಲದ ಮಂಗ್ಯಾನ ಮಾರಿ ಮಾಡ್ತೀ. ಫುಲ್ ವೇಸ್ಟ್ ಬಾಡಿ ಆಗಿ ನೋಡು, ಅಂತ ವೈನಿ ನನಗ ಹಾಕ್ಕೊಂಡು ಬೈದರು.
ಅಬ್ಬಾ!! ರೂಪಾ ವೈನಿ ಜನರಲ್ ನಾಲೆಜ್ ನೋಡ್ರೀ. paid media ಅಂದ್ರ ಧಾರವಾಡದ ಫೇಮಸ್ ಪೇಡೆ ಮಾರೋ ಬಾಬುಸಿಂಗ ಮಾಡಿದ ನ್ಯೂಸ್ ಪೇಪರ್ ಅಂತ!!! ಶಿವನೇ ಶಂಭುಲಿಂಗ!
ಅಷ್ಟರಾಗ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು, ಬಲಗೈಯಾಗ ಹಳದಿ ಬಣ್ಣದ ಪ್ಲಾಸ್ಟಿಕ್ ಚಂಬನ್ನ ಹಸ್ತ ಪೂರ್ತಿ ಬಳೆಸಿ, ಐದೂ ಬೆರಳುಗಳನ್ನ ಸಮಾನಾಂತರವಾಗಿ ಹರಡಿ, ಚಂಬು ಹಿಡಕೊಂಡು, ಎಡಗೈಯಿಂದ ಕಿವಿಗೆ ಸುತ್ತಿದ್ದ ಜನಿವಾರನ್ನು ಬಿಡಿಸಿಕೋತ್ತ, ಫಾರೆನ್ನಿನಿಂದ foreign-returned ಚೀಪ್ಯಾ ಹಾಜರಾದ.
ಆವಾ ಚಂಬು ಇಟ್ಟು, ಪಟ್ಟಾಪಟ್ಟಿ ಚಡ್ಡಿ ಮ್ಯಾಲೆ ಪಟ್ಟಾಪಟ್ಟಿ ಪೈಜಾಮಾ ಏರಿಸಿ ಆರಾಂ ಖುರ್ಚಿ ಒಳಗ ಕೂತು, ಒಂದು ಉಸ್ ಅಂತ ರಿಲೀಫ್ ಆದ ಉಸಿರು ತೆಗೆಯೋ ಪುರಸತ್ತಿಲ್ಲ ರೂಪಾ ವೈನಿ ಶುರು ಮಾಡಿಕೊಂಡರು.
ರೀ...ಯಾರ್ರೀ ಅಕಿ? ಮನ್ನೆ ಮನ್ನೆ ಅಮೇರಿಕಾದಾಗ ಜೈಲಿಗೆ ಹೋದ ನಮ್ಮ ಇಂಡಿಯಾ ಹುಡುಗಿ? ಏನ ಹೆಸರು ಅಕಿದು? ರಾಜ ತಂತ್ರಾ ಮಾಡಾಕಿ? ಅಡ್ಡೆಸರು ಮಾತ್ರ 'ಖಬರಗೇಡಿ' ಅಂತ ನೋಡ್ರೀ? ಯಾರ್ರೀ ಅಕಿ? ಮಂಗೇಶಗ ಸ್ವಲ್ಪ ಸುದ್ದಿ ಹೇಳೋಣ ಅಂತ. ಪೂರ್ತಿ ಹೆಸರು ನೆನಪಾಗವಲ್ಲತು, ಅಂತ ರೂಪಾ ವೈನಿ ಚೀಪ್ಯಾಗ ಗಂಟು ಬಿದ್ದರು. ಅವರಿಗೆ ನೆನಪಾಗದ್ದಿದ್ದನ್ನ ಇವಾ ನೆನಪು ಮಾಡಿ ಕೊಡಬೇಕು. ಅವರ memory aid ಇವ. ಅವನ sleeping aid ಇವರು. ಒಳ್ಳೆ ಕಾಂಬಿನೇಶನ್!
ಯಾರ ಮಾರಾಳ? ಯಾರು? ಏನು ಹೇಳಲಿಕತ್ತಿ? ಯಾವ ಖಬರಗೇಡಿ? ಎರಡು ಖಬರಗೇಡಿಗಳು ನನ್ನ ಮುಂದೇ ಇದ್ದೀರಲ್ಲಾ? ಒಂದು ಈ ಬೇಕಾರ್ ಮಂಗೇಶಾ, ಇನ್ನೊಬ್ಬಾಕಿ ನೀ. ಅಲ್ಲೆ ಕುಕ್ಕರ್ ಒಂದು ಡಜನ್ ಸೀಟಿ ಹೊಡದು ಬುಸ್ ಬುಸ್ ಅನ್ನಲಿಕತ್ತದ. ಅದನ್ನ ಹೋಗಿ ಮೊದಲು ಒಲಿ ಆರಿಶಿ ಬಾ. ನನಗ ಅನ್ನಾನೇ ಊಟ ಮಾಡಬೇಕು ಇವತ್ತು. ಗಂಜಿ ಅಲ್ಲಾ, ಅಂತ ಚೀಪ್ಯಾ ವೈನಿಗೆ ಅವರು ಕುಕ್ಕರ್ ಬಗ್ಗೆ ಗಮನ ಕೊಡದೆ ಖಬರಗೇಡಿ ಆಗಿ ನಿಂತಿದ್ದನ್ನ ನೆನಪಿಸಿದ.
ನಿಮಗೂ ನೆನಪಿಲ್ಲಾ ಅಕಿ ಖಬರಗೇಡಿ ಹುಡುಗಿ ಯಾರು ಅಂತ? ಬರ್ತೇನಿ ತಡ್ರೀ ಕುಕ್ಕರ್ ಬಂದ ಮಾಡಿ. ನನಗೇ ನೆನಪ ಆಗ್ತದ. ಅಡ್ಡೆಸರು ಮಾತ್ರ ಖಬರಗೇಡಿ ಅಂತನೇ ನೋಡ್ರೀ, ಅಂತ ಹೇಳಿಕೋತ್ತ ರೂಪಾ ವೈನಿ ಅಡಿಗಿಮನಿ ಕಡೆ ರನ್ನಿಂಗ್ ರೇಸ್ ಮಾದರಿಯಲ್ಲಿ ಓಡಿದರು. ನೈಟಿ ಮ್ಯಾಲೆ ಕಟ್ಟಿಕೊಂಡು ಓಡೋದನ್ನ ಮಾತ್ರ ಮರಿಲಿಲ್ಲ.
ಏನಲೇ ಚೀಪ್ಯಾ? ವೈನಿ ಏನು ಖಬರಗೇಡಿ ಖಬರಗೇಡಿ ಅಂತ ಯಾರ ಬಗ್ಗೆ ಮಾತಾಡ್ಲಿಕತ್ತಾರ? ಹಾಂ? ಯಾರಲೇ ಅಕಿ ನಮ್ಮ ದೇಶದಾಕಿ ಖಬರಗೇಡಿ ಅಂತ? ಅಲ್ಲೆಲ್ಲೋ ಅಮೇರಿಕಾದಾಗ ಏನೋ ತಂತ್ರಾ ಮಂತ್ರಾ ಮಾಡಲಿಕ್ಕೆ ಹೋಗಿ ಸಿಕ್ಕೊಂಡು ಬಿದ್ದು ಜೈಲಿಗೆ ಹೋದಳಂತ? ಹಾಂ? ಏನು ಹಚ್ಚ್ಯಾರ ವೈನಿ? - ಅಂತ ಕೇಳಿದೆ.
ವೈನಿಯಿಂದ ಸದಾ ಹೈರಾಣ ಇರುವ ನಮ್ಮ ಮಹಾರಾಣಾ ಪ್ರತಾಪ್ ಚೀಪ್ಯಾ, ಗೊತ್ತಿಲ್ಲೋ! ಅನ್ನೋವರಾಂಗ ಲುಕ್ ಕೊಟ್ಟ. ನಿನ್ನ ಕರ್ಮ ಅಂತ ಸುಮ್ಮನಾದೆ. ಅಷ್ಟರಾಗ ರೂಪಾ ವೈನಿನೇ ಬಂದ್ರು ವಾಪಸ್ ಅಡಿಗಿಮನಿ ಕೆಲಸಾ ಮುಗಿಸಿ.
ಹಾಂ! ಈಗ ನೆನಪಾತು ನೋಡಪಾ ಮಂಗೇಶ. ಅಕಿ ಹೆಸರು 'ದೇವನಾಯಿ ಖಬರಗೇಡಿ' ಅಂತ. ಅಕಿ ಏನೋ ದೊಡ್ಡ ಆಫೀಸರ್ ಅಂತ ನೋಡಪಾ. ಐಎಎಸ್ ಕಿಂತ ದೊಡ್ಡ ಆಫೀಸರ್ ಅಂತ. ಅಮೇರಿಕಾದಾಗ ಕೆಲಸಾ ಮಾಡಿಕೋತ್ತ ಇದ್ದಳಂತ. ಅಕಿನೇ ನೋಡು ಈಗ ಅಲ್ಲಿನ ಜೈಲಾಗ ಹೋಗಿ ಕೂತಾಕಿ. 'ದೇವನಾಯಿ ಖಬರಗೇಡಿ'. ಕರೆಕ್ಟ್. ಅದೇ ಹೆಸರು. ಏನೋ ವಿಚಿತ್ರ ಹೆಸರು, ಅಡ್ಡೆಸರು ಎಲ್ಲಾ ಅದ ಅಂತ ನೆನಪಿತ್ತು. ಪೂರ್ತಿ ನೆನಪಾಗವಲ್ಲದಾಗಿತ್ತು, ಅಂತ ಹೇಳಿದರು ರೂಪಾ ವೈನಿ.
ದಿನಕ್ಕ ಸಾವಿರ ಸರೆ ಆ 'ಸಂಯುಕ್ತ ಕರ್ನಾಟಕ' ಪೇಪರ್ ಓದ್ತೀರಿ. ಏನು ಓದ್ತೀರಿ? ನಾ ಆವಾಗ ಕೇಳಿದರ ಗೊತ್ತಿಲ್ಲ ಅಂದ್ರಲ್ಲಾ? ಹಾಂ? ಪೇಪರ್ ಬಂದು ಮಾಡಿಸಿ, ಈ ಹುಚ್ಚ ಮಂಗೇಶ ಯಾವದೋ ಲೈನ್ ಬಜಾರ್ ಬಾಬುಸಿಂಗನ ಪೇಡೆ ಪೇಪರ್ ಓದ್ತಾನಂತ, ನೀವು ಅದನ್ನೇ ಓದ್ರಿ. ಸುಮ್ಮನ ರೊಕ್ಕಾ ದಂಡಾ. ಒಂದು ಸುದ್ದಿ ಗೊತ್ತಿರೋದಿಲ್ಲಾ. ಎಲ್ಲಾ ವೇಸ್ಟ್ ಬಾಡೀಸ್, ಅಂತ ಚೀಪ್ಯಾಗೂ ಸಹಿತ ಮಂಗಳಾರತಿ ಮಾಡಿದರು.
ಯಾರಲೇ ಚೀಪ್ಯಾ ಇಕಿ 'ದೇವನಾಯಿ ಖಬರಗೇಡಿ'? ಹಾಂ? ಹೆಸರೇ ವಿಚಿತ್ರ ಅದಲ್ಲೋ? ಏನನ್ನಲಿಕತ್ತಾರ ರೂಪಾ ವೈನಿ? ಏನಲೇ ಇದು ಅಮೇರಿಕಾದಾಗ ನಮ್ಮ ದೇಶದ ಹುಡುಗಿ ಮಾಡಿದ ಲಫಡಾ? ಹಾಂ? - ಅಂತ ಕೇಳಿದೆ.
ಚೀಪ್ಯಾ ಒಂದು ದೀರ್ಘ ಉಸಿರು ಒಳಗ ಎಳಕೊಂಡ. ಘಟ್ಟೆ ಹಿಡಕೊಂಡ. ಎಲ್ಲೆ ಪ್ರಾಣಾಯಾಮಾ ಮಾಡಲಿಕ್ಕೆ ಶುರು ಮಾಡಿದನೋ ಅಂತ ಸಂಶಯ ಬಂತು.
ಅಯ್ಯೋ!!! ಅಕಿ ಹೆಸರು 'ದೇವನಾಯಿ ಖಬರಗೇಡಿ' ಅಲ್ಲರೋ! ಅಕಿ ಹೆಸರು 'ದೇವಯಾನಿ ಖೋಬ್ರಾಗಡೆ' ಅಂತ ಹೇಳಿ. ಮರಾಠೀ ಹುಡುಗಿ. ತಂತ್ರಾ ಪಿಂತ್ರಾ ಮಾಡಾಕಿ ಅಲ್ಲಾ. ಯಂತ್ರಾ ಕಟ್ಟಾಕಿನೂ ಅಲ್ಲಾ. ರಾಜತಾಂತ್ರಿಕ ಅಂದ್ರ ಡಿಪ್ಲೋಮ್ಯಾಟ್ ಅಂತ. ಅಕಿ ಒಳಗ ಆದಾಕಿ. ಅಲ್ಲಲ್ಲ ಒಳಗ ಹೋದಾಕಿ, ಅಂತ ಚೀಪ್ಯಾ ಏನೇನೋ ದೊಡ್ಡ ಉದ್ದ ಸುದ್ದಿಯನ್ನ ಸಂಕ್ಷೇಪವಾಗಿ ಹೇಳಿದ.
ಹಾಂ!! ಕರೆಕ್ಟ್ ಹೇಳಿದಿರಿ ನೋಡ್ರೀ. ನನಗ ಸ್ವಲ್ಪ confusion ಆಗಿ 'ದೇವನಾಯಿ ಖಬರಗೇಡಿ' ಅಂದು ಬಿಟ್ಟೆ. ಕರೆಕ್ಟ್ ಕರೆಕ್ಟ್ . ಅದು ದೇವಯಾನಿ ಖೋಬ್ರಾಗಡೆ ಅಂತನೇ. ಅಕಿನೇ ನೋಡು ಮಂಗೇಶ ಪಾಪ ಜೈಲಿಗೆ ಹೋಗ್ಯಾಳಂತ. ಅಕಿಗೆ ಪಾಪ ಸಣ್ಣು ಸಣ್ಣು ಎರಡೋ ಮೂರೋ ಮಕ್ಕಳವನೋ. ಗಂಡ ಇದ್ದಾನ. ಏನು ಮಾಡಬೇಕು ಅವರು? ಗೊತ್ತು ಪರಿಚಯ ಇಲ್ಲದ ದೇಶ ಬ್ಯಾರೆ. ಪಾಪ! ಅಂತ ರೂಪಾ ವೈನಿ ದೇವನಾಯಿ ಅಲ್ಲಲ್ಲ ದೇವಯಾನಿ ಅನ್ನಾಕಿ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.
ವೈನಿ ನಿಮ್ಮದು ಇದೇ ಆತು. ಹುಟ್ಟಿದಾಗ ನಿಮ್ಮ ನಾಲಿಗೆ ಮ್ಯಾಲೆ ನಿಮ್ಮವ್ವಾ ಬಂಗಾರದ ತಂತಿ ಜೇನುತುಪ್ಪದಾಗ ತಿಕ್ಕಿ ನಾಲಿಗೆ ನೆಕ್ಕಿಸೋದರ ಬದಲೀ ಯಾವದೋ ಜಂಗು ಹಿಡಿದ ತಗಡಿನ ತಂತಿ ಕಾಕಂಬಿ ಬೆಲ್ಲದಾಗ ತಿಕ್ಕಿ ನೆಕ್ಕಿಸಿ ಒಗದಿರಬೇಕು ನೋಡ್ರೀ. ಅದಕ್ಕೇ ತಪ್ಪ ತಪ್ಪ ಅಂತೀರಿ. ಆವತ್ತು ನಿಮ್ಮ ಸ್ವಾಮಿಗಳ ಕಡೆ ಹೋಗಿ, ಸ್ವಾಮಿಗಳೇ ನಿಮ್ಮ 'ಅನುನಾಯಿ'ಗಳಲ್ಲ ಹ್ಯಾಂಗಿದ್ದಾರ? ಯಾವದೂ ಅನುನಾಯಿ ಸುತ್ತ ಮುತ್ತ ಕಾಣೂದೆ ಇಲ್ಲಲಾ? ಅಂತ ಅಂದು ಬಿಟ್ಟಿದ್ದಿರಿ. ಅನುಯಾಯಿ ಅನ್ನಲಿಕ್ಕೆ ಅನುನಾಯಿ ಅನಕೋತ್ತ! ಘಾಬ್ರಿಯಾದ ಸ್ವಾಮಿಗಳು ಇದೆಲ್ಲೆ ಮಠದಾಗ ಇವೇನು ಅನುನಾಯಿ ಅನ್ನೋ ಹೊಸಾ ಬ್ರೀಡಿನ ನಾಯಿಗಳು ಬಂದಾವಪಾ? ಅಂತ tension ಮಾಡಿಕೊಂಡು, ನಾಯಿ ಓಡಿಸಲಿಕ್ಕೆ ಬಡಿಗಿ ಹುಡಕಲಿಕ್ಕೆ ಹೊಂಟಿದ್ದರು. ಆಗ ಚೀಪ್ಯಾನೇ ಸ್ವಾಮಿಗಳಿಗೆ ಸಮಾಧಾನ ಹೇಳಬೇಕಾತು. ಸ್ವಾಮಿಗಳೇ, ಇಕಿ ನಿಮ್ಮ ಶಿಷ್ಯಂದಿರು ಎಲ್ಲೆ ಅಂತ ಕೇಳಲಿಕ್ಕೆ ಅನುಯಾಯಿ ಅನ್ನೋದರ ಬದಲೀ ಅನುನಾಯಿ ಅಂದು ಬಿಟ್ಟಳು. ಕ್ಷಮಾ ಮಾಡ್ರೀ ಅಂತ ಹೇಳಿದ ಮ್ಯಾಲೆ ನಿಮ್ಮನ್ನೆಲ್ಲಾ ಹುಚ್ಚ ನಾಯಿ ನೋಡೋ ಹಾಂಗ ನೋಡಿ, ಕೊಳೆತ ಬಾಳೆಹಣ್ಣನ್ನ, ನಾಯಿಗೆ ಬಿಸ್ಕೆಟ್ ಒಗದಾಂಗ ಒಗೆದು, ಸ್ವಾಮಿಗಳು ಕೈ ತೊಳಕೊಂಡಿದ್ದರು. ಉಚ್ಚಾರ ನೋಡ್ರೀ!ಉಚ್ಚಾರ! ದೇವಯಾನಿ ಅಂತ ಅಂತಾ ಚಂದ ರೂಪವಂತ ಹುಡುಗಿ ಹೆಸರನ್ನ ದೇವನಾಯಿ ಅಂತ ಮಾಡ್ತೀರಲ್ಲರೀ! ಖೋಬ್ರಾಗಡೆ ಅಂದ್ರ ತೆಂಗಿನಕಾಯಿ ಹರಿಯವರು ಅಂತ ಇರಬೇಕು. ಅದನ್ನ ಖಬರಗೇಡಿ ಅಂತ ಮಾಡಿ, ಥತ್ ನಿಮ್ಮ! ಅಂತ ಹೇಳಿ ಹಾಕ್ಕೊಂಡು ತಿರುವ್ಯಾಡಿ ಒಗೆದು ಬಿಟ್ಟೆ.
ಅನ್ನಪಾ ಅನ್ನು. ಏನೋ ಒಂದು ಸಣ್ಣ ಮಿಸ್ಟೇಕ್ ಮಾಡಿಬಿಟ್ಟರೆ ಇಷ್ಟೆಲ್ಲಾ ಅನ್ನೋದಾ? ಅನ್ನು ಅನ್ನು. ಪ್ರೀತಿ ವೈನಿಗೆ ಪ್ರೀತಿ ಮೈದ್ನಾ ಹೀಂಗ ಮಾತಾಡ್ತಾನೇನು? ಹಾಂ? - ಅಂತ ಹೇಳಿ ವೈನಿ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟರು. ಪಾಪ ಅನ್ನಿಸ್ತು. ಅವರು ಹೇಳಿ ಕೇಳಿ ಎಮ್ಮಿಕೇರಿ ಸಾಲಿಗೆ ಹೋದವರು. ಏನೋ ಸ್ವಲ್ಪ ಹೆಚ್ಚು ಕಡಿಮಿ ಅಂತಾರ. ನಾವೇ ಹೊಂದಿಕೊಂಡು ಹೋಗಬೇಕು.
ಅಯ್ಯಾ....ಮನಸ್ಸಿಗೆ ಹಚ್ಚಿಗೊಂಡರೇನ್ರೀ ವೈನಿ? ಕ್ಯಾಕರಿಸಿ ಉಗಿರೀ. ಏನೋ ಅಂದು ಬಿಟ್ಟೆ. ಉಗಿರೀ, ಅಂತ ಹೇಳಿ ಅವರ ಮುಂದಿಂದ ಸ್ವಲ್ಪ ಬಾಜೂ ಸರಕೊಂಡೆ. ಎಲ್ಲರೆ ಮಾರಿ ಮ್ಯಾಲೇ ಕ್ಯಾಕರಿಸಿ ಉಗಿದು ಬಿಟ್ಟಾರು ರೂಪಾ ವೈನಿ ಅಂತ ಹೆದರಿಕಿ. ಪರ್ಮಿಷನ್ ಬ್ಯಾರೆ ಕೊಟ್ಟು ಬಿಟ್ಟೇನಿ. ಉಗಿಲಿಕ್ಕೆ.
ಆದರೂ ರೂಪಾ ವೈನಿ ಇನ್ನೂ ಡಿಪ್ರೆಶನ್ ಒಳಗೇ ಇದ್ದಂಗ ಕಂಡರು. ಸುಮ್ಮನೇ ಕೂತಿದ್ದರು. ನಾವು ಕೊಟ್ಟ ಡೋಸ್ ಜಾಸ್ತಿನೇ ಆತೋ ಏನೋ? ಪಾಪ! ಇನ್ನು ನಾವಾಗೇ ಮತ್ತೆ ಟ್ರಾಕಿಗೆ ಕರಕೊಂಡು ಬರಬೇಕು.
ವೈನಿ...ಇಕಿ ದೇವಯಾನಿ ಅನ್ನಾಕಿನ ಯಾಕ ಹಿಡದು ಜೈಲಾಗ ಒಗೆದಾರಂತ? ಹಾಂ? ಹೇಳ್ರೀ. ಹೇಳ್ರೆಲ್ಲಾ ಪ್ಲೀಸ್? ಅಂತ ಮಸ್ಕಾ ಹೊಡೆದು ಕೇಳಿಕೊಂಡೆ.
ನಾ ಏನೂ ಮಾತಾಡಂಗಿಲ್ಲ ನಿನ್ನ ಜೋಡಿ. ಬರೇ ನನ್ನ ಚ್ಯಾಸ್ಟಿ ಮಾಡಿ ಅಣಗಸ್ತೀ, ಅಂತ ವೈನಿ ನಕರಾ ಇನ್ನೂ ಮುಂದುವರಿಸಿದರು.
ಹೇಳ್ರೀ ವೈನಿ, ಹೇಳ್ರೀ, ಪ್ಲೀಸ್!!! ಅಂತ ಕೈಮುಗಿದು, ಸಾಷ್ಟಾಂಗ ನಮಸ್ಕಾರ ಹಾಕೇ ಬಿಡೋಣ ಅಂತ ಎದ್ದೆ. ಥಾಂಬಾ ಥಾಂಬಾ, ಅನ್ನೋ ಹಾಂಗ ವೈನಿ ಸಾಕು ಮಾಡು ನಿನ್ನ ನೌಟಂಕಿ ಅಂದ್ರು.
ನೋಡೋ ಮಂಗೇಶ, ಅಕಿ ದೇವನಾಯಿ ಅಲ್ಲಲ್ಲ ದೇವಯಾನಿ ಅಮೇರಿಕಾದಾಗ ಅದೇನೋ 'ಬೂಬು' ಲಫಡಾ ಮಾಡಿಕೊಂಡು ಬಿಟ್ಟಾಳಂತ ನೋಡಪಾ. ಅದಕ್ಕೆ ಅಕಿನ್ನ ಬೂಬು ಲಫಡಾ ಯಾಕ ಮಾಡಿದ್ರೀ? ಅಂತ ಕೇಳಿ, ಹಿಡದು, ಬೇಡಿ ಹಾಕಿ, ಜೈಲ್ಯಾಗ ಒಗೆದಾರಂತ. ಆ ಮ್ಯಾಲೆ ಏನೋ 'ಜಾಮೂನಿನ' (?) ಮ್ಯಾಲೆ ಬಿಟ್ಟಾರಂತ ಈಗ. ಅದೇನು ಜಾಮೂನ್ ತಿನ್ನಿಸಿ ಬಂದಳೋ ಏನೋ ಇಕಿ? ಗುಲಾಬ್ ಜಾಮೂನ್ ತಿನ್ನಿಸಿದಳೋ? ಕಾಲಾ ಜಾಮೂನೇ ತಿನ್ನಿಸಿದಳೋ? ಗೊತ್ತಿಲ್ಲ. ಒಟ್ಟ ಇಕಿ ಕೊಟ್ಟ ಜಾಮೂನ್ ತಿಂದ ಅಮೇರಿಕಾದ ಪೊಲೀಸರು ಇಕಿನ್ನ ಜೈಲಿಂದ ಅಂತೂ ಹೊರಗ ಬಿಟ್ಟಾರ ಅಂತ ಸುದ್ದಿ. ಇಷ್ಟದ ಸುದ್ದಿ, ಅಂತ ರೂಪಾ ವೈನಿ ಹೇಳಿದರು.
ದೇವಯಾನಿ ಅನ್ನಾಕಿ ಮೊದಲು ಬೂಬು ಲಫಡಾ ಮಾಡ್ತಾಳ. ಮಾಡಿ ಸಿಕ್ಕಿ ಬೀಳತಾಳ. ಸಿಕ್ಕಿ ಬಿದ್ದ ಮ್ಯಾಲೆ ಪೊಲೀಸರಿಗೆ ಅದು ಏನೋ ಜಾಮೂನ್ ತಿನ್ನಿಸಿ ಹೊರಗ ಬರ್ತಾಳ. ಏನಪಾ ಇದು? ಏನು ಇವು ಅಮೇರಿಕಾದ ಕಾನೂನು ಕಟ್ಟಳೆಗಳು? ಅಂತ ಒಂದು ತರಹದ ಆಶ್ಚರ್ಯ ಆತು.
ಅಲ್ರೀ ವೈನಿ....ಅಮೆರಿಕಾದಾಗ ಬೂಬು ಲಫಡಾ ಮಾಡಿದಳು ಅಂದ್ರಾ ಪೋಲಕಾ, ಗೀಲಕಾ, ಬ್ಲೌಸ್, ಪೆಟ್ಟಿಕೋಟ, ಬಾಡಿ, ಸ್ಲಿಪ್ಪು, ಜಿಪ್ಪು, ಗಿಪ್ಪು...ಅವು ಏನೇನೋ ಇರ್ತಾವಲ್ಲಾ ನಿಮ್ಮ ಹೆಂಗಸೂರ ಅರಿವಿಗೊಳು, ಅವನ್ನೆಲ್ಲಾ ಸರಿ ಮಾಡಿ ಹಾಕ್ಕೊಂಡು ಹೋಗಿದ್ದಿಲ್ಲಾ ಏನು ಇಕಿ ದೇವಯಾನಿ? ಅಸಡಾ ಬಸಡಾ ಅರಿವಿ ಹಾಕ್ಕೊಂಡು, ತೋರ್ಸಬಾರದ್ದನ್ನ ತೋರಿಸ್ಕೋತ್ತ ಅಡ್ಯಾಡಿದರೆ ಹಿಡದು ಜೈಲಿಗೆ ಹಾಕೇ ಹಾಕ್ತಾರ. ಬಿಡ್ತಾರೇನು? ಹಾಂ? - ಅಂತ ಕೇಳಿದೆ.
ಏನು ಪೋಲ್ಕಾ, ಬ್ಲೌಸ್, ಜಂಪರ್, ಬಾಡಿ ಅಂತ ಹಚ್ಚಿಯೋ? ಹಾಂ? ಈಗ ನೀನು ಖಬರಗೇಡಿ ನೋಡು. ಬೂಬು ಲಫಡಾ ಅಂತ ಹೇಳಲಿಕತ್ತೇನಿ. ಹಂತಾದ್ರಾಗ ಏನೇನೋ ಹಚ್ಚಿ ಅಲ್ಲಾ? ಮುಂಜಾನೇ ತೀರ್ಥಾ ತೊಗೊಂಡು ಬಂದು ಕೂತಿ ಏನು? ಹಾಂ? ಅಂತ ಬೈದ್ರು ರೂಪಾ ವೈನಿ.
ತೊಂದ್ರಿಗೆ ಬಂತಲ್ಲರಿ ಇದು. ದೇವಯಾನಿ ಅನ್ನಾಕಿದು ಅಮೇರಿಕಾದಾಗ boobಉ (ಬೂಬು) ಲಫಡಾ ಅಂದ್ರು. ನಾ ಎಲ್ಲೊ ಇಕಿದೂ ಸಹಿತ wardrobe malfunction ಆಗಿ, ಕಾಣಬಾರದ 'ಮಾಲು' ಎಲ್ಲ ಕಂಡು, ಬಿಟ್ಟಿ ಕಂಡಿದ್ದನ್ನ ನೋಡಿ ಕೈ ಮುಗಿದು ಸುಮ್ಮನಿರದ ಅಮೇರಿಕಾದ ಪೊಲೀಸರು ಇಕಿನ್ನ ಹಿಡದು ಒಳಗ ಹಾಕಿ ಬಿಟ್ಟರೋ ಏನೋ ಅಂತ ವಿಚಾರ ಮಾಡಿದೆ. ನೋಡಿದ್ರ ಇದು ಏನೋ ಬ್ಯಾರೆನೇ ಇದ್ದಂಗ ಇದೆ. ಇನ್ನೂ explicit ಆಗಿ ಹಿರಿಯಕ್ಕನ ಸಮಾನ ರೂಪಾ ವೈನಿ ಮುಂದ ಇದೆಲ್ಲಾ ಮಾತಾಡಬಾರದು ಅಂತ ಹೇಳಿ ಸುಮ್ಮನಾದೆ.
ಬೂಬು ಲಫಡಾ? ಅಂದ್ರ ಏನ್ರೀ ವೈನಿ? - ಅಂತ ಕೇಳಿದೆ.
ಅದನೋ...ಬೂಬು....ಬೂಬು...ಮನಿ ಕೆಲಸಾ ಮಾಡಲಿಕ್ಕೆ ಬರೋದಿಲ್ಲಾ ಹೆಂಗಸೂರು? ಆ ಬೂಬು. ತಿಳೀತಾ? - ಅಂತ ವಿವರಣೆ ಕೊಟ್ಟರು ವೈನಿ.
(ನಮ್ಮ ಧಾರವಾಡ ಕಡೆ ಮನೆಕೆಲಸ ಮಾಡಲು ಬರುವ ಹೆಂಗಸರಿಗೆ ಬೂಬು ಅನ್ನುತ್ತಾರೆ. ಮೆಹಬೂಬಿ ಅನ್ನುವದರ ಸಂಕ್ಷಿಪ್ತ ಫಾರ್ಮ್ ಅದು)
ಕಸಾ ಮುಸರಿ ಮಾಡಲಿಕ್ಕೆ ಬರೋ ಬೂಬುಗಳಾ? ನಾ ಬ್ಯಾರೆನೇ ಏನೋ(?) ಅಂತ ತಿಳಕೊಂಡು ನಿಮ್ಮ ಹೆಂಗಸೂರ ಅರಿವಿ ಬಗ್ಗೆ ಏನೇನೋ ವಿಚಾರ ಮಾಡಿಬಿಟ್ಟಿದ್ದೆ. ಗೊತ್ತಾತು ಈಗ. ಏನು ಲಫಡಾ ಮಾಡಿಕೊಂಡಳು ಇಕಿ ದೇವಯಾನಿ? ಎಲ್ಲಿಂದ ಬೂಬು ಕರಕೊಂಡು ಹೋಗಿದ್ದಳು? ಹತ್ತಿಕೊಳ್ಳದಿಂದನೋ ಅಥವಾ ಬಾರಾಕೊಟ್ರಿಯಿಂದನೋ ಅಥವಾ ಲಕ್ಷ್ಮಿಸಿಂಗನ ಕೆರಿ ಕಡೆಯಿಂದ ವಡ್ಡರಾಕಿನ ಕರ್ಕೊಂಡು ಹೋಗಿ ಬಿಟ್ಟಿದ್ದಳೋ? ಹಾಂ? ಹಾಂ? - ಅಂತ ಕೇಳಿದೆ.
ಅಕಿ ದೇವಯಾನಿ ಪುಣೆ, ಮುಂಬೈ ಕಡೆಯಾಕಿ. ಅಕಿ ಯಾಕ ಇಲ್ಲೆ ಧಾರವಾಡದಿಂದ ಬೂಬು ಕರಕೊಂಡು ಹೋಗ್ತಾಳ? ಅಲ್ಲೆ ಎಲ್ಲೋ ಮುಂಬೈದಾಗಿಂದ ಕರ್ಕೊಂಡು ಹೋಗಿದ್ದಳು ಅಂತ, ರೂಪಾ ವೈನಿ ಹೇಳಿದರು.
ಇಕಿ ದೊಡ್ಡ ಆಫೀಸರ್. ಭಾಳ ಕೆಲಸ ಇರ್ತದ. ಸಣ್ಣ ಮಕ್ಕಳು ಬ್ಯಾರೆ ಇದ್ದಾರ ಅಂತೀರಿ. ಕೆಲಸಕ್ಕ ಬೇಕು ಅಂತ ಬೂಬು ಕರಕೊಂಡು ಹೋಗ್ಯಾಳ ಅಮೇರಿಕಾಕ್ಕ. ಏನು ತಪ್ಪದ ಅದರಾಗ? ಹಾಂ? - ಅಂತ ಕೇಳಿದೆ.
ಬೂಬೂನ್ನ ಕರ್ಕೊಂಡು ಹೋಗಿ, ಅಕಿಗೆ ಕೊಡತೇನಿ ಅಂತ ಹೇಳಿದ ಪಗಾರೇ ಬ್ಯಾರೆ ಅಂತ ಮತ್ತ ಕೊಟ್ಟ ಪಗಾರೇ ಬ್ಯಾರೆ ಅಂತ. ಹೇಳಿದ್ದರಕಿಂತ ಭಾಳ ಕಡಿಮಿ ಪಗಾರ ಕೊಟ್ಟಾಳಂತ. ಇಕಿ ಬೂಬು ಒಂದು ಪೈಲಾ ಪಗಾರ ಆದ ಕೂಡಲೇ, ಇಷ್ಟು ಕಡಿಮಿ ಪಗಾರ್ ಕೊಟ್ಟಾರ ಅಂತ ಹೇಳಿ ಸೀದಾ ಪೋಲೀಸರ ಕಡೆ ಹೋಗಿ ಹೇಳಿ ಬಿಟ್ಟಳು ಅಂತ ಆತು. ಮಹಾ ಬೆರಕಿ ಜಾಬಾದ್ ಇದ್ದಾಳ ನೋಡು ಆ ಬೂಬು. ಪೊಲೀಸರು ತಡಿ ಇಕಿ ದೇವಯಾನಿಗೆ ಸಿಗಸೋಣು ಅಂತ ಹೇಳಿ, ಅಕಿ ಬೂಬಗ, ನೀ ಇನ್ನೂ ಒಂದೆರೆಡು ತಿಂಗಳು ಸುಮ್ಮನಿದ್ದು ನಮಗ ಬೇಕಾದ ಎಲ್ಲಾ ಸಾಕ್ಷಿ ಕೂಡಿ ಹಾಕು, ಏನೂ ಚಿಂತಿ ಮಾಡಬ್ಯಾಡ, ಒಮ್ಮೆ ನಿನ್ನ ಮಾಲಕಿನ್ ಒಳಗ ಹಾಕೋವಾಂಗ ಮಾಡಿ ಕೊಟ್ಟುಬಿಡು, ನಿನ್ನ ಫುಲ್ ಮಾಲಾಮಾಲ್ ಮಾಡಿ, ನಿನ್ನ ಇಡೀ ಕುಟುಂಬ ಅಮೇರಿಕಾಕ್ಕ ಕರೆಸಿಕೊಂಡು ಬಿಡ್ತೇವಿ. ಅಷ್ಟು ಮಾಡ್ತೀಯಾ? ಅಂತ ಫಿಟ್ಟಿಂಗ್ ಇಟ್ಟು ಬಿಟ್ಟಾರ ಆ ಅಮೇರಿಕನ್ ಪೊಲೀಸರು. ಎಲ್ಲಾ ಸಾಕ್ಷಿ ಕೂಡಿ ಹಾಕಿ, ಒಂದು ದಿವಸ ಇಕಿ ದೇವಯಾನಿನ್ನ ನಡು ರಸ್ತೆದಾಗ ಅಡ್ಡ ಹಾಕಿ, ಕಾರ್ ನಿಲ್ಲಿಸಿ, ಇಕಿನ್ನ ಇಳಿಸಿ, ಕೈಗೆ ಬೇಡಿ ಹಾಕಿ, ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೋಗಿ, ಅವರ ಪದ್ಧತಿ ಪ್ರಕಾರ ತನು, ಮನ ಎಲ್ಲಾ ಫುಲ್ ಬಿಚ್ಚಿಸಿ ತಪಾಸಣೆ ಮಾಡಿಸಿ, ಕೆಟ್ಟ ಕೆಟ್ಟ ಕಳ್ಳರು ಸುಳ್ಳರು ಇರೋ ಕ್ವಾಣಿ ಒಳಗ ದೇವಯಾನಿ ಅಂತಹ ದೊಡ್ಡ ಆಫಿಸರನ್ನ ಕೂಡಿ ಹಾಕಿ ಬಿಟ್ಟಿದ್ದರು ಅಂತ ಆತು. ಇಕಿ ಜಾಮೂನ್ ಮಾಡಿ ಕೊಡೊ ತನಕಾ ಅಲ್ಲೇ ಬಂದಾಗಿ ಕೂತಿದ್ದಳು ನೋಡು, ಅಂತ ರೂಪಾ ವೈನಿ ದೇವಯಾನಿಯ ಕಥಿ ಹೇಳಿ ಮುಗಿಸಿದರು. ಅವರ ರೀತಿ ಒಳಗ ಹೇಳಿದರು. ಅದು ರೂಪಾ ವೈನಿ ಸ್ಪೆಷಲ್ ಸ್ಟೈಲ್.
ಇಷ್ಟದ ಕಥಿ ಅಂತ ಆತು. ಹಾಂ? ದೊಡ್ಡ ಮಂದಿ ಅದು ಏನೇನು ಮಾಡ್ತಾರೋ? ಏನು ಮಾಡಲಿಕ್ಕೆ ಹೋಗಿ ಅದೇನೇನು ಆಗ್ತದೋ? ದೇವರೇ ಬಲ್ಲ, ಅಂತ ಹೇಳಿದೆ.
ಅಂತೂ ಈಗ ಹೊರಗ ಬಂದಳಲ್ಲಾ ದೇವಯಾನಿ? ಅಷ್ಟೇ ಸಾಕು. ಇಲ್ಲಂದ್ರ ಗಂಡಾ ಮಕ್ಕಳ ಗತಿ ಏನ್ರೀ? ಇದ್ದ ಬೂಬು ಬ್ಯಾರೆ ಕೊಡಬಾರದ ತ್ರಾಸು ಕೊಟ್ಟು ಹೋಗಿ ಬಿಟ್ಟಳು, ಮ್ಯಾಲಿಂದ ಮಾಲಕಿನ್ ಸಹಿತ ಜೈಲಿನ್ಯಾಗ ಅಂದ್ರ ಪರಿಸ್ಥಿತಿ ಭಾಳ ಗಂಭೀರ ಆಗ್ತಿತ್ತು ನೋಡ್ರೀ. ವೈನಿ.....ಆದ್ರ ಒಂದು ವಿಷಯ ತಿಳಿಲಿಲ್ಲ ನೋಡ್ರೀ, ಅಂತ ಹೇಳಿದೆ.
ಏನು? - ಅಂದ್ರು ರೂಪಾ ವೈನಿ.
ವೈನಿ....ಅದು ಏನೋ ಜಾಮೂನ್ ತಿನ್ನಿಸಿ ದೇವಯಾನಿನ್ನ ಬಿಡಿಸಿಕೊಂಡು ಬಂದ್ರು ಅಂದ್ರೀ. ಏನು ಹಾಂಗಂದ್ರ? ಅದೇನು, ಜಾಮೂನ್ ಕೊಟ್ಟು ಬಿಟ್ಟರ ಬಿಟ್ಟು ಬಿಡ್ತಾರ ಅಮೇರಿಕಾ ಒಳಗ? ಏನು ದೇಶರೀ ಅದು? ಹಾಂ? ಅಂತ ಕೇಳಿದೆ.
ಜಾಮೂನ ಅಂದ್ರ.....ಅಂದ್ರ....ರೀ ಶ್ರೀಪಾದ ರಾವ್...ಅಕಿ ದೇವಯಾನಿ ಕೊಟ್ಟಿದ್ದು ಅದೆಂತಾ ಜಾಮೂನ್ರೀ? ಅಂತ ಗಂಡನ್ನ ಕೇಳಿದರು ರೂಪಾ ವೈನಿ.
ಯಪ್ಪಾ!!! ಅದು ಜಾಮೂನ್ ಅಲ್ಲರೋ. ಅದು ಜಾಮೀನ್ ಜಾಮೀನ್! ಅಂದ್ರ ಬೇಲ್. ಗೊತ್ತಾತ? - ಅಂತ ತಲಿ ಚಚ್ಚಿಕೋತ್ತ ಚೀಪ್ಯಾ ಹೇಳಿದ.
ಹೋಗ್ಗೋ! ವೈನಿ! ಏನ್ರೀ? ಜಾಮೀನಿನ ಮೇಲೆ ಅಕಿನ್ನ ಬಿಟ್ಟಾರಂತ. ನೀವು ನೋಡಿದರ ಅಕಿ ದೇವಯಾನಿ ಏನೋ ಜಾಮೂನ್ ಮಾಡಿ, ಪೊಲೀಸರಿಗೆ ಮಸ್ತಾಗಿ ತಿನ್ನಿಸಿ ಬಿಡಿಸಿಕೊಂಡು ಬಂದಾಳ ಅಂತ ಹೇಳಲಿಕತ್ತೀರಿ. ನಾನು ನಮ್ಮ ಇಂಡಿಯಾ ಪೊಲೀಸರು ಲಂಚ ಅಂತ ಹೇಳಿ ರೊಕ್ಕಾ ತಿಂತಾರ, ಹಾಂಗೆ ಅಮೇರಿಕಾ ಪೊಲೀಸರು ಲಂಚ ಅಂತ ಹೇಳಿ ಎಲ್ಲೆ ಜಾಮೂನ ತಿನ್ನಲಿಕ್ಕೆ ಶುರು ಮಾಡಿ ಬಿಟ್ಟಾರೋ ಅಂತ ಏನೇನೋ ತಿಳಕೊಂಡು ಬಿಟ್ಟಿದ್ದೆ. ಹಾ!! ಹಾ!!ಮಸ್ತ ಅದ ತೊಗೊರೀ ಜಾಮೂನ ಕಥಿ. ನಾ ಹೋಗಿ ಬರ್ಲ್ಯಾ? - ಅಂತ ಕೇಳಿದೆ.
ಏ ರೂಪಾ...ಇಷ್ಟೊತ್ತು ಅವನ ಜೋಡಿ ಜಾಮೂನ್ ಜಾಮೂನ್ ಅಂತ ಹೇಳಿ ಹೊಯ್ಕೊಂಡಿ. ಹೊಂಟು ನಿಂತಾನ. ಒಂದ್ನಾಕು ಜಾಮೂನ್ ತಿನ್ನಿಸಿ ಕಳಿಸು. ಹೇಳಿ ಕೇಳಿ ನಿನ್ನ ಪ್ರೀತಿ ಮೈದ್ನಾ, ಅಂತ ಚೀಪ್ಯಾ ಹೇಳಿದ.
ನಂದೂ ತಲಿ ನೋಡು. ಜಾಮೂನ್ ಮಾಡಿ ಇಟ್ಟೇನಿ. ಕೊಡೊದನ್ನೇ ಮರ್ತೆ. ಕೂಡೋ ಒಂದು ನಿಮಿಶ. ಜಾಮೂನ್ ತಿಂದು, ಚಹಾ ಕುಡಿದೇ ಹೋಗೀ ಅಂತ, ಹೇಳಿ ರೂಪಾ ವೈನಿ ನಾಷ್ಟಾ ತರಲಿಕ್ಕೆ ಒಳಗ ಹೋದರು.
ಅನ್ನದಾತಾ ಸುಖೀ ಭವ ಅಂತ ಹೇಳಿಕೋತ್ತ ಜಾಮೂನು, ಚಹಾಕ್ಕ ಕಾದು ಕೂತೆ.

ದೇವಯಾನಿ ಖೋಬ್ರಾಗಡೆ |

ನನ್ನ ಬಿಡ್ರೀ! ಜಾಮೂನ್ ಕೊಡ್ತೀನಿ! |
8 comments:
Good foreground for analysis of a complicated legal case - future
exo-politico-legal experts may find precedents at a later time when dealing with aliens.
Is it Hattikolla? Or Attikolla?
Some aliens have been reported there in Attikolla!
Thank you!
I think it is Hattikolla. Written like that in news paper articles...for example...ಧಾರವಾಡ ರೈಲ್ವೆ ನಿಲ್ದಾಣ ಸಮೀಪದ ಹತ್ತಿಕೊಳ್ಳ ವೇಬ್ರಿಜ್ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
http://vijaykarnataka.indiatimes.com/articleshow/20175803.cms
Dharwadadaga kuntu harati hodadanga aatu nodri.
ಓದಿ ಕಾಮೆಂಟ್ ಹಾಕಿದ್ದಕ್ಕೆ ಭಾಳ ಧನ್ಯವಾದ, ರಾಧಾ ಕುಲಕರ್ಣಿ ಅವರೇ!
Good ones
.....
Thanks Kamat!
It is Attikolla. It had trees bearing fruits named Atti Hannu. Hence the name for the valley.
Thank you, Jamkhandi Sir.
Post a Comment