ಏ ಮಂಗೂ.... ಏ ಮಂಗೂ....ಅಂತ ರೂಪಾ ವೈನಿ ಏನೋ ಭಾಳ ಅಕ್ಕರೆಯಿಂದ ಕರೆದರು. ಅವರು ತಮ್ಮ usual ಏ....ಮಂಗ್ಯಾ! ಲೇ ಮಂಗ್ಯಾ! ಮಂಗೇಶಿ! ಅಂತ ಕರೆಯೋದು ಬಿಟ್ಟು ತಾಯಿ ಮಗೂನ್ನ ಮಗೂ ಅಂತ ಕರೆದಾಂಗ ನಮ್ಮನ್ನ ಮಂಗೂ ಅಂತ ಕರೆಯೋದು ನೋಡಿ ಏನೋ ಕೆಲಸ ಅದ ಇವರಿಗೆ, ಅದಕ್ಕೇ ಈ extra fitting ಇಡ್ಲೀಕತ್ತಾರ ಅಂತ ಸಂಶಯ ಬಂತು.
ಏನ್ರೀ ವೈನಿ? ಏನು ಇವತ್ತು ಭಾಳ ಪ್ರೀತಿಯಿಂದ ಮಂಗೂ ಅಂತ ಕರಿಲೀಕತ್ತೀರಿ? ಹಾಂ?- ಅಂತ ಕೇಳಿದೆ.
ನಂದೊಂದು passport ಆಗಬೇಕೋ, ಅಂದ್ರು ವೈನಿ.
passport ರೀ? ಭಾರಿ ಆತಲ್ಲರೀ. ಏನು ಎಲ್ಲಾ ಹೋಗಿ passport ಮಾಡಿಸಬೇಕು ಅಂತ ತಲಿಯಾಗ ಬಂದು ಬಿಟ್ಟದ? ಹಾಂ? - ಅಂತ ಕೇಳಿದೆ.
ಬೇಕಪಾ. ನಾನೇ ರೂಪಾಬಾಯಿ ಅಂತ ಖಾತ್ರಿ ಮಾಡಿಕೊಳ್ಳಲಿಕ್ಕೆ ಅಂತ ಏನರ ಬೇಕಲ್ಲೋ? ಅದೇನೋ ಆಧಾರ್ ಕಾರ್ಡೋ ಸುಡುಗಾಡೋ ಕೊಡತೇನಿ ಅಂತ ಹೇಳಿದ್ದಾ ಆವಾ ನಂದಿನಿ ನಿಲೇಕಣಿ. ಎಲ್ಲಿ ಆಧಾರೋ, ಎಲ್ಲಿ ಉಡದಾರೋ, ಏನೋ ತಾನೋ? ಒಟ್ಟಿನ್ಯಾಗ ಆಧಾರ ಕಾರ್ಡ್ ಬರಲೇ ಇಲ್ಲ. ಈಗ ನನ್ನ ಕಡೆ ನನ್ನ ಹಳೇ ಕಾಲದ ಪಿಯೂಸಿ ಕಲಿತಿದ್ದಾಗ ಇದ್ದ ಕಾಲೇಜಿನ ಐಡೆಂಟಿಟಿ ಕಾರ್ಡ್ ಬಿಟ್ಟರ ಏನೂ ಇಲ್ಲ. ಆ ಹಳೆ ಐಡೆಂಟಿಟಿ ಕಾರ್ಡ್ ಯಾತಕ್ಕೂ ಬರೋದಿಲ್ಲ. ಅದಕ್ಕ ಒಂದು passport ಮಾಡಿಸಿಬಿಡೋಣ ಅಂತ, ಅಂತ ವೈನಿ ಹೇಳಿದರು.
ಈ ನಂದಿನಿ ನಿಲೇಕಣಿ ಯಾರ್ರೀ? ಅದೂ 'ಆವಾ' ನಂದಿನಿ ನೀಲೇಕಣಿ ಅಂತೀರಿ? ಅವನೋ ಅಕಿನೋ? ಲಿಂಗ ಸರಿ ಮಾಡಿಕೊಳ್ಳಿರಿ. ಅಂದ್ರ ಪುಲ್ಲಿಂಗನೋ ಸ್ತ್ರೀಲಿಂಗನೋ ಅಂತ ನಿಕ್ಕಿ ಮಾಡಿಕೊಳ್ಳಿರಿ ವೈನಿ, ಅಂತ ಹೇಳಿದೆ.
ನಂದಿನಿ ನಿಲೇಕಣಿ ಅಂತನೇ ಅವನ ಹೆಸರು. ಮೊದಲು ನಮ್ಮ ನಾಣಿ ಮಾಮಾನ ಜೋಡಿ ಇನ್ಫೋಸಿಸ್ ಒಳಗ ಇದ್ದಾ. ರಿಟೈರ್ ಆದ ಮ್ಯಾಲೆ ಆಧಾರ ಕಾರ್ಡ್ ಮಾಡೋದನ್ನ ಶುರು ಮಾಡಿದ್ದ ಅಂತ. ಆ ಆಧಾರ್ ಕಾರ್ಡ್ ಯೋಜನಾ ಕುಲಗೆಟ್ಟು ಹೋತು. ಈಗ ಈ ನಂದಿನಿ ಎಲ್ಲೆ ಹೋದನೋ ಏನೋ? ಅಂತ ವೈನೀ ಹೇಳಿದರು.
ಈಗ ತಿಳೀತು. ಅದೂ ಇನ್ಫೋಸಿಸ್ ಅಂದ ಮ್ಯಾಲೆ.
ರೀ ವೈನಿ, ಅವರ ಹೆಸರು ನಂದನ್ ನಿಲೇಕಣಿ ಅಂತ. ನಂದಿನಿ ಅಂತೀರಲ್ಲರಿ? ಹಾಂ? - ಅಂತ ಕೇಳಿದೆ.
ನಂದನನೋ ನಂದಿನಿಯೋ? ಏನೋ ಏನೋ? ಒಟ್ಟ ಒಬ್ಬವ. ಈಗ ಇಪ್ಪತ್ತು ವರ್ಷದ ಹಿಂದ ಆ ಬೋಳ ತಲಿ ಶೇಷಣ್ಣ ಬಂದು, ಏನೋ ಎಲೆಕ್ಷನ್ ಕಾರ್ಡ್ ಮಾಡ್ತೇನಿ ಅಂತ ಹೇಳಿ, ಖಾಲಿ ಪುಕ್ಕಟ ಟೊಪ್ಪಿಗಿ ಹಾಕಿ ಹೋಗಿದ್ದ. ನಸಕ್ ಮುಂಜಾನೆ ಎಲ್ಲೋ ಓಡಿ ಹೋಗಿ ಫೋಟೋ ತೆಗಿಸಿಕೊಂಡು, ಫಾರಂ ತುಂಬಿ ಬಂದಿದ್ದಿವಿ. ಆ ಮ್ಯಾಲೆ ಆ ಎಲೆಕ್ಷನ್ ಕಾರ್ಡ್ ಬಂದರ ಕೇಳು. ಇವರದ್ದೆಲ್ಲಾ ಹೀಂಗೆ, ಅಂತ ರೂಪಾ ವೈನಿ ಎಲ್ಲರನ್ನೂ ಸಾರಾ ಸಗಟಾಗಿ ಬೈದ್ರು.
ಅಲ್ಲರೀ ವೈನಿ, ಆವಾ ಆವಾ ಅಂತೀರಿ. ಮ್ಯಾಲಿಂದ ನಂದಿನಿ ಅಂತೀರಿ. ಅಲ್ಲಾ ನಿಮಗ ಸ್ವಲ್ಪರೆ common sense ಇಲ್ಲೇನು? ನಂದಿನಿ ಅನ್ನೋದು ಅದು ಹ್ಯಾಂಗ ಗಂಡಸೂರ ಹೆಸರು ಆಗತದ್ರೀ? ಹಾಂ? ನಂದಿನಿ ಅಂತ ನಂದಿನಿ? ಹ್ಯಾಂಗ ಅಂತಾರ ನೋಡು, ಅಂತ ಸ್ವಲ್ಪ ಆಕ್ಷೇಪಣೆ ಮಾಡಿದೆ.
ಅಯ್ಯ ಇವನs! ಈಗಿನ ಕಾಲದವರ ಹೆಸರಿನ ಮ್ಯಾಲೆ ಲಿಂಗ ನಿರ್ಧರಿಸೋ ಹಾಂಗ ಇಲ್ಲೇ ಇಲ್ಲೋ. ಪರಮೇಶ್ವರ ಅಂತ ಯಾರರ ಹೆಂಗಸಿನ ಹೆಸರು ಕೇಳಿ ಏನು? ಹಾಂ? ಕೇಳಿ ಏನು ಅಂತ ಹೇಳಲೇ ಮಂಗ್ಯಾ? ಆ ಮ್ಯಾಲೆ ನನ್ನ ತಿದ್ದೀ ಅಂತ. ಹಾಂ? ಕೇಳಿಯೇನೋ ಮಂಗ್ಯಾ? - ಅಂತ ವೈನಿ ನನಗೇ ರಿವರ್ಸ್ ಬಾರಿಸಿದರು.
ಪರಮೇಶ್ವರ ಅಂತ ಹೆಂಗಸೂರ ಹೆಸರರಿ? ಹಾಂ? ಎಲ್ಲಿದ ಹಚ್ಚೀರೀ? ಏನೇನೋ ಅನಕೋತ್ತ. ಸುಮ್ಮ ಸುಮ್ಮನ ಏನೇನೋ ಹೇಳಬ್ಯಾಡ್ರೀ, ಅಂತ ಹೇಳಿ ಇಗ್ನೋರ್ ಮಾಡೋಣ ಅಂತ ಅಂದ್ರ ಬಿಡಬೇಕಲ್ಲಾ ರೂಪಾ ವೈನಿ? ಚಾಲೆಂಜ್ ತೊಗೊಂಡ್ರು ಅವರು.
ರೀ ಶ್ರೀಪಾದ್ ರಾವ್! ರೀ ಶ್ರೀಪಾದ್ ರಾವ್, ಅಂತ 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಮಗ್ನನಾಗಿದ್ದ ಅವರ ಗಂಡನ್ನ ಕರೆದರು ರೂಪಾ ವೈನಿ.
ಏನಾ? ಏನೀಗಾ? ಹಾಂ? ಅನ್ನೋ ಲುಕ್ ಚೀಪ್ಯಾ ಕೊಟ್ಟಾ.
ಆ ನಿಮ್ಮ ಸ್ಮಾರ್ತ ಫೋನ್ ತೆಗೆದು, ಆ ಗೂಗಲ್ಲೋ ಪೀಗಲ್ಲೋ ಅನ್ನೋ ಇಂಜಿನ್ ಒಳಗ ಪರಮೇಶ್ವರ ಅನ್ನೋ ಹೆಂಗಸಿನ ಮಾಹಿತಿ ತೆಗೆದು ಈ ಮಂಗೇಶನ ಮಾರಿ ಮ್ಯಾಲೆ ಒಗಿರಿ ಸ್ವಲ್ಪ. ನನಗ ಏನೂ ಗೊತ್ತಿಲ್ಲ, ನಾ ಧಡ್ಡ ಇದ್ದೇನಿ ಅಂತ ತಿಳ್ಕೊಂಡು, ನನಗ ಮಾತಿಗೊಮ್ಮೆ ಅಣಗಸ್ತಾನ. ಆಟಾ ಹಚ್ಯಾನ. ಲಗೂನ ತೋರಸ್ರೀ, ಅಂತ ಗಂಡಗ ಆಜ್ಞಾ ಮಾಡಿದರು ರೂಪಾ ವೈನಿ.
ಹಾ!!ಹಾ!! ಏನ್ರೀ ವೈನಿ ಅದು ಸ್ಮಾರ್ತ ಫೋನ್? ಬರೆ ಸ್ಮಾರ್ತ ಬ್ರಾಹ್ಮಂಡರಿಗೆ ಮಾತ್ರ ಏನು? ನೀವ್ಯಾಕ ಅದನ್ನ ಇಟಗೋಂಡೀರಿ? ಹಾಂ? ನಿಮ್ಮದು ವೈಷ್ಣವ ಫೋನ್ ಎಲ್ಲೋತು? ಹಾ!! ಹಾ!!! ಸ್ಮಾರ್ತ ಫೋನಂತ ಸ್ಮಾರ್ತ ಫೋನ್, ಅಂತ ಉಳ್ಳಾಡಿ ನಕ್ಕೆ. ವೈನಿಗೆ ಇನ್ನೂ ಉರೀತು.
ನಮ್ಮನಿಯವರ ಕಡೆ ಇರೋದು ಸ್ಮಾರ್ತ ಫೋನ್ ಅಲ್ಲಾ? ಮತ್ತೇನು? - ಅಂತ ಕೇಳಿದರು ರೂಪಾ ವೈನಿ.
ಮಾರಾಳಾ! ಮಾರಾಳಾ! ಅದು smart ಫೋನ್ ಅಂತ ರೂಪಾ. ಹೋಗಿ ಹೋಗಿ ಅದಕ್ಕ ಸ್ಮಾರ್ತ ಫೋನ್ ಅಂದು ಫೋನಿನ್ಯಾಗೂ ನಾಮದ ಫೋನು ಭಸ್ಮದ ಫೋನು ಅಂತ ತಂದು ಇಡ್ಲೀಕತ್ತಿ ನೋಡು. ಏನೀಗಾ? ಪರಮೇಶ್ವರ ಅನ್ನೋ ಗಂಡಸಿನ ಹೆಸರಿರೋ ಹೆಂಗಸಿನ ಮಾಹಿತಿ ಹುಡುಕಿ, ಅವನ ಮಾರಿ ಮ್ಯಾಲೆ ಒಗಿಬೇಕಾ? ಅಷ್ಟನಾ? ಅದೇನು ಮಹಾ? - ಅಂದ ಚೀಪ್ಯಾ, ಫೋನ್ ಎಲ್ಲೆ ಹೋತು? ಎಲ್ಲಿ ಇಟಗೊಂಡೆ? ಕಾಣ್ವಲ್ತು, ಅಂತ ಚೀಪ್ಯಾ ಅವನ smart ಫೋನ್ ಹುಡುಕಲು ಶುರು ಮಾಡಿದ.
ಫೋನ್ smart ಇದ್ದರೂ ಆ ಫೋನ್ ಉಪಯೋಗ ಮಾಡವರೂ ಸಹಾ smart ಇರಬೇಕಲೇ ಚೀಪ್ಯಾ. ನಿನ್ನಂತಾ ಧಡ್ಡ ಸೂಳಿಮಗನ ಕೈಯ್ಯಾಗ ಕೊಟ್ಟರ ಎಂತಾ smart ಫೋನ್ ಇದ್ದರೂ ಅದು dumb ಫೋನ್ ಆಗಿ ಹೋಗ್ತದ ನೋಡು. ಮೊದಲು smart ಫೋನ್ ಹುಡುಕುವಷ್ಟು smart ಆಗಲೇ. ಆ ಮ್ಯಾಲೆ ಗಂಡಾ ಹೆಂಡ್ತಿ ಕೂಡಿ ಪರಮೇಶ್ವರ ಅನ್ನೋ ಗಂಡು ಹೆಸರಿನ ಹೆಂಗಸಿನ್ನ ಹುಡುಕೀರಿ ಅಂತ, ಅಂತ ಹೇಳಿ ಅವನನ್ನೂ ಚ್ಯಾಸ್ಟಿ ಮಾಡಿದೆ.
ಎಲ್ಲಿ ಇಟ್ಟುಕೊಂಡ್ರೀ ನಿಮ್ಮ ಫೋನ್? ಅಂತ ರೂಪಾ ವೈನಿ ಸಹ ಚೀಪ್ಯಾನ ಮೇಲೆ ಚೀರಿದರು. ಆವಾ ಕೂತಲ್ಲಿಂದ ಏಳವಲ್ಲ. ಅಲ್ಲೆ ಸುತ್ತ ಮುತ್ತಾ ನೋಡ್ಲೀಕತ್ತಿದ್ದ.
ಮ್ಯಾಲೆ ಏಳ್ರೀ....ಏಳ್ರೀ ನಿಮ್ಮಾ! ಅಂತ ವೈನಿ ಝಾಡಿಸಿದ ಕೂಡಲೇ ದೊಡ್ಡ ಹೊಟ್ಟಿ ಹೊತಗೊಂಡು ಚೀಪ್ಯಾ ಎದ್ದ.
ನೋಡ್ರೀ ಅಲ್ಲೇ ಅದ. ಕುಂಡಿ ಕೆಳಗ ಫೋನ್ ಇಟಗೊಂಡು ಕೂತೀರಿ. ಅದು ಅಲ್ಲೆ ಕುಂಡಿ ಕೆಳಗ ಅದ ಅನ್ನೋದೂ ಸಹ ನಿಮಗ ಖಬರಿಲ್ಲ. ಕುಂಡ್ಯಾಗಿನ ನರಾ ಎಲ್ಲಾ ಸತ್ತು ಹೋಗ್ಯಾವೇನ್ರೀ? ಹಾಂ? ಏನು ಒಂದು ನಲವತ್ತು ಆತೋ ಇಲ್ಲೋ ಫುಲ್ ಮುದಕಪ್ಪ ಆಗಿ ಎಲ್ಲಾ ಪ್ರಜ್ಞಾ ಕಳಕೊಂಡು ಕೂತೀರಿ ನೋಡ್ರೀ. ಹೊಗಾ ನಿಮ್ಮಾ. ಮೊದಲು ಆ ಫೋನ್ ತೆಗೆದು ಲಗೂನ ಗೂಗಲ್ ಮಾಡ್ರೀ, ಅಂತ ವೈನಿ ಚೀಪ್ಯಾಗ ಹಾಕ್ಕೊಂಡು ಬೈದರು.
ಚೀಪ್ಯಾ ಫೋನ್ ಕೈಯಾಗ ತೊಗೊಂಡು ಮತ್ತ ಕೂಡಲಿಕ್ಕೆ, ಕುಂಡಿ ಊರಲಿಕ್ಕೆ ತಯಾರ ಆಗಿದ್ದ. ಅಷ್ಟರಾಗ ರೂಪಾ ವೈನಿ ಮತ್ತ ಸೈರೆನ್ ಮೊಳಗಿಸಿದರು.
ಅಯ್ಯೋ!!! ನಿಮಗ ಏನಾಗ್ಯದ ಅಂತೀನಿ? ಕುಂಡಿ ಕೆಳಗ ಫೋನ್ ಒಂದೇ ಅಲ್ಲಾ, ಆ ಟೀವಿ ರಿಮೋಟ್ ಸಹಿತ ಹಾಕ್ಕೊಂಡು ಕೂತಿದ್ದರಲ್ಲರೀ? ಹಾಂ? ಆ ರಿಮೋಟ್ ಪಕ್ಕಾ ಒಂದು ಇಟ್ಟಂಗಿ ಸೈಜಿಗೆ ಅದ.ಅದು ಸಹಿತ ನಿಮಗ ಗೊತ್ತಾಗಲಿಲ್ಲ ಅಂದ್ರ ಅವು ನಿಮ್ಮ ಕುಂಡಿ ನರಾ ಖರನೇ ಸತ್ತಾವ ನೋಡ್ರೀ. ಒಳ್ಳೆ ಹರಿದ ನರದ ನರಹರಿ ರಾವ್ ಆಗೀರಿ ನೋಡ್ರೀ. ಫೋನ್ ಮತ್ತ ರಿಮೋಟ್ ಮ್ಯಾಲೆ ಕೂತಿದ್ದು ಹೋಗಲಿ. ಎದ್ದು ಬರೆ ಫೋನ್ ಒಂದೇ ತೊಗೊಂಡು, ಮತ್ತ ಆ ರಿಮೋಟ್ ಮ್ಯಾಲೆ ನಿಮ್ಮ ಕುಂಡಿ ಸ್ಥಾಪನಾ ಮಾಡಲಿಕ್ಕೆ ಹೊಂಟೀರಲ್ಲಾ??? ಏನ್ ಬಡಕೊಳ್ಳಿ ನಾ??? ರಾಮಾ ರಾಮಾ. ಆ ರಿಮೋಟ್ ತೆಗೆದು ಇಲ್ಲೆ ಕೊಡ್ರೀ, ಅಂತ ಚೀಪ್ಯಾಗ ಹೇಳಿದರು. ಪಾಪದ ಪ್ರಾಣಿ ಚೀಪ್ಯಾ ರಿಮೋಟ್ ಕೊಟ್ಟು ಮತ್ತ ಸ್ಥಾಪಿತನಾದ.
ಚೀಪ್ಯಾ ತನ್ನ smart ಫೋನ್ ಒಳಗ ಏನೇನೋ ಒತ್ತಿದಾ. ಒತ್ತಿ ಏನೋ ಮಾಡಿ, ಫೋನ್ ಹೆಂಡ್ತೀಗೆ ಕೊಟ್ಟ.
ಹಾಂ! ಇಕಿನೇ ನೋಡ್ರೀ ಪರಮೇಶ್ವರ. ಪರಮೇಶ್ವರ ಗೋದ್ರೆಜ್. ನೋಡೋ ಹುಚ್ಚ ಮಂಗ್ಯಾನಿಕೆ. ಈ ನಿನ್ನ ವೈನಿ ಎಮ್ಮಿಕೇರಿ ಸಾಲಿಗೆ ಹೋಗ್ಯಾಳ, SSLC ಐದು ವರ್ಷ ಕೂಡಿ ಮುಗಿಸ್ಯಾಳ, ಇಕಿಗೆ ಏನೂ ಗೊತ್ತೇ ಇಲ್ಲ ಅಂತ ತಿಳ್ಕೊಂಡು ನನಗ ಅದು ಇದು ಅಂತೀ ಅಲ್ಲಾ? ನೋಡು, ನೋಡು, ಅಂತ ಹೇಳಿಕೋತ್ತ ನನ್ನ ಮಾರಿ ಎದುರಿಗೆ ತಂದು ಹಿಡದರು.
ಓ? ಇಕಿನಾ? ಗೋದ್ರೆಜ್ ಕಂಪನಿ ಮಾಲೀಕನ ಹೆಂಡ್ತೀ. ಒಪ್ಪಿದೆ ವೈನಿ ಒಪ್ಪಿದೆ. ಹೀಂಗ ಇರ್ತಾರ ಕೆಲೋ ಮಂದಿ ಗಂಡಸೂರ ಹೆಸರು ಇಟಗೊಂಡ ಹೆಂಗಸೂರು. ಆದ್ರ ಆವಾ ಮಾತ್ರ ನಂದಿನಿ ನಿಲೇಕಣಿ ಅಲ್ಲ, ಅಂತ ಹೇಳಿದೆ.
ಏ ಇಕಿ ಪರಮೇಶಿ ಒಬ್ಬಾಕಿನ ಅಂತ ತಿಳ್ಕೊಂಡೀ ಏನು? ನಿನಗ ಜನರಲ್ ನಾಲೆಜ್ ಇಲ್ಲ ನೋಡು. ಇನ್ನೂ ಇಂತವರು ಭಾಳ ಮಂದಿ ಇದ್ದಾರ. ಗಂಡಸೂರ ಹೆಸರು ಇಟಗೊಂಡ ಹೆಂಗಸೂರು, ಅಂತ ರೂಪಾ ವೈನಿ ಅವರ ನೈಟೀ ಕಾಲರ್ ಹಾರಿಸಿ ತಮ್ಮ ಜ್ಞಾನದ ಬಗ್ಗೆ ಗರ್ವ ಪಟ್ಟರು.
ಹಾಂ? ಯಾರ್ರೀ ಅವರೆಲ್ಲಾ? - ಅಂತ ಕೇಳಿದೆ.
ಕಿರಣ್ ಜುನೇಜಾ ಒಬ್ಬಾಕಿ ಹಳೆ ನಟಿ ಇದ್ದಾಳ. ಕಿರಣ್ ಖೇರ್ ಅಂತ ಅನುಪಮ್ ಖೇರನ ಹೆಂಡ್ತೀ ಇದ್ದಾಳ. ಸರೋಜ ಖಾನ ಇದ್ದಾಳ. ಇನ್ನು ಸಿಖ್ ಮಂದಿ ಅಂತೂ ಎಲ್ಲಾ ಗಂಡಸೂರ ಹೆಸರೇ. ಕೌರ್ ಹಚ್ಚಿ ಬಿಟ್ಟರ ಮುಗೀತು. ಅದು ಹೆಂಗಸೂರ ಹೆಸರು ಆಗಿ ಬಿಡ್ತದ. ಏನು ಮಂದಿಪಾ ಅಂತೇನಿ? ಅಲ್ಲೋ ಹೆಂಗಸೂರಿಗೇ ಅಂತ ಎಷ್ಟೆಷ್ಟು ಚಂದ ಚಂದ ಹೆಸರು ಅವ. ಹೋಗಿ ಹೋಗಿ ಗಂಡಸೂರ ಹೆಸರು ಇಟಗೊಂಡು ಸಾಯ್ತಾರಲ್ಲೋ ಇವರೆಲ್ಲಾ? ಏನು ಬಂದದ ಅಂತೀನಿ ಇವರಿಗೆಲ್ಲಾ? ಯಾವತ್ತಿಂದ ಗಂಡಸೂರ ಪ್ಯಾಂಟು, ಚೊಣ್ಣಾ, ಅಂಗಿ ಅದು ಇದು ಹಾಕೋದು ಕಲ್ತರು ನೋಡು, ಆವತ್ತಿಂದ ಬಂತು ಕೇಡುಗಾಲ, ಅಂತ ರೂಪಾ ವೈನಿ ಹೇಳಿದರು.
ಹೆಂಗಸೂರ ಹೆಸರು ಇಟಗೊಂಡ ಗಂಡಸೂರು ಯಾರಿಲ್ಲಾ ಏನ್ರೀ? -ಅಂತ ಕೇಳಿದೆ.
ಯಾಕಿಲ್ಲ? ಇದ್ದಾನಲ್ಲಾ ನಿಮ್ಮ ಊರಿನ ಮೊಮ್ಮಗಾ? ಅಂತ ಹೇಳಿ ಬಿಟ್ಟರು ರೂಪಾ ವೈನಿ.
ನಮ್ಮ ಊರಿನ ಮೊಮ್ಮಗನಾ? ಯಾರ್ರೀ ಆವಾ? - ಅಂತ ಕೇಳಿದೆ.
ನಿವೇದಿತಾ ಆಳ್ವಾ. ಮಾರ್ಗರೇಟ್ ಆಳ್ವಾನ ಸುಪುತ್ರ. ಅಕಿ ಅಂತೂ ಮಾತಿಗೊಮ್ಮೆ, ನಾನು ಉತ್ತರ ಕನ್ನಡ ಕಾರವಾರ ಜಿಲ್ಲೆಯ ಸೊಸೆ, ಅತ್ತೆ, ಮಗಳು, ಚಿಗವ್ವಾ, ಮೌಶಿ, ನೆಗೆಣ್ಣಿ ಅಂತ ಎಲ್ಲಾ ಕಡೆ ಹೊಯ್ಕೋತ್ತಾಳ. ಯಾಕಂದ್ರ ನಿಮ್ಮ ಜಿಲ್ಲಾದಿಂದ ಆರಿಸಿ ಹೋಗಿದ್ದಳು ನೋಡು. ಈಗ ಅಕಿ ಮಗಾ ನಿವೇದಿತಾ ನಿಲ್ಲವ ಅಂತ ಮುಂದಿನ ಎಲೆಕ್ಷನ್ ಒಳಗ, ಅಂತ ಹೇಳಿದರು.
ರೀ ವೈನಿ....ಅವನ ಹೆಸರು ನಿವೇದಿತ್ ಆಳ್ವಾ ಅಂತ. ನಿವೇದಿತಾ ಅಲ್ಲಾ. ಆದರೂ ವಿಚಿತ್ರ ಬಿಡ್ರೀ, ಅಂತ ಹೇಳಿದೆ. ನಮ್ಮ ಜನರಲ್ ನಾಲೆಜ್ ಸಿಕ್ಕಾಪಟ್ಟೆ improve ಆತು ವೈನಿ ಜೋಡಿ ಇದೆಲ್ಲ ಮಾತಾಡಿ.
ರೀ ವೈನಿ...ಅದೇನೋ passport ಅಂದ್ರೀ. ಏನು? - ಅಂತ ಕೇಳಿದೆ.
ಹೂನೋ....ನನಗ ಒಂದು passport ಮಾಡಿಸಬೇಕು, ಅಂದ್ರು ವೈನಿ.
ಯಾವ ಸ್ಕೀಮಿನ್ಯಾಗ ಬೇಕು? ತತ್ಕಾಲ, ಆಪತ್ಕಾಲ, ವಿಪತ್ಕಾಲ, ಮಳೆಗಾಲ, ಚಳಿಗಾಲ, ಆ ಕಾಲ, ಈ ಕಾಲ ಅಂತ ಹಲವಾರು ರೀತಿ passport ಕೊಡೊ ಸ್ಕೀಮ್ ಬಂದಾವ. ನಿಮಗ ಯಾವ ಕಾಲದಾಗ ಬೇಕು ಹೇಳ್ರೀ? - ಅಂತ ಕೇಳಿದೆ.
ಹಾಂ? ಏನೋ ಇದು? ಬ್ಯಾರೆ ಬ್ಯಾರೆ ಕಾಲಕ್ಕ ಬ್ಯಾರೆ ಬ್ಯಾರೆ passport ಏನು? ಯಾಕ? ಅಥವಾ ಕಾಲಿಗೇ ಬ್ಯಾರೆ passport, ಕೈಗೇ ಬ್ಯಾರೆ passport, ತಲಿಗೇ ಬ್ಯಾರೆ, ಅಂತ ಏನರೆ ಶುರು ಮಾಡ್ಯಾರ ಏನು? ಹಾಂ? - ಅಂತ ವೈನಿ ಕೇಳಿದರು. ಘಾಬರಿ ಅವರಿಗೆ.
ಹೇ!! ಹೇ!! ಹಾಂಗೇ ಅಂದೆ ಬಿಡ್ರೀ. ಒಂದು ಸಾಮಾನ್ಯ passport. ಅಂದ್ರ ರೆಗ್ಯುಲರ್ ಟೈಮ್. ಒಂದೋ ಎರಡೋ ತಿಂಗಳದಾಗ ಆರಾಮ ಬರ್ತದ. ಇನ್ನೊಂದು ತತ್ಕಾಲ ಅಂದ್ರ ಲಗೂನೆ ಬರ್ತದ. ಒಂದು ವಾರ ಹೆಚ್ಚಂದ್ರ. ಅದಕ್ಕ ರೊಕ್ಕಾ ಸ್ವಲ್ಪ ಜಾಸ್ತಿ. ನಿಮಗ ಯಾವದು ಬೇಕು? - ಅಂತ ಕೇಳಿದೆ.
ಹೀಂಗಾ? ನಮಗ ordinary ಸಾಕಪಾ. ತತ್ಕಾಲ ಅದು ಇದು ಅನ್ನಲಿಕ್ಕೆ ನಮಗೇನು ರೊಕ್ಕಾ ಜಾಸ್ತಿ ಆಗ್ಯದ ಏನು? - ಅಂತ ವೈನಿ ಹೇಳಿದರು.
ಓಕೆ....ಹಾಂಗಿದ್ರ passport ಅರ್ಜಿ ತಂದು, ತುಂಬಿ, ಅದಕ್ಕ ಬೇಕಾದ ಎಲ್ಲ ಡಾಕ್ಯುಮೆಂಟ್ ಕಾಪಿ ಇಟ್ಟು, ಒಂದು passport ಫೋಟೋ ಹಚ್ಚಿ, ಕೊಟ್ಟು ಬಂದು ಬಿಡ್ರೀ. ಫೀಸ್ ಕಟ್ಟಿ ಬಿಡ್ರೀ. ಆತು ನಿಮ್ಮ ಕೆಲಸಾ. passport ಬಂದೇ ಬಿಡ್ತದ. ಈಗ ಎಲ್ಲಾ ಭಾಳ ಸಿಂಪಲ್ ಮಾಡಿ ಬಿಟ್ಟಾರ್ರೀ ವೈನಿ. ಚಿಂತಿ ಮಾಡಬ್ಯಾಡ್ರೀ, ಅಂತ ಹೇಳಿದೆ.
ಅಲ್ಲೋ ಹುಚ್ಚಾ! passport ಬೇಕು, ಇಲ್ಲ ಅಂತ ಹೇಳಲಿಕತ್ತೇನಿ. ಅಂತಾದ್ರಾಗ passport ಅರ್ಜಿ ಜೋಡಿ passport ಫೋಟೋ ಇಡು ಅಂದ್ರ ಎಲ್ಲಿಂದ ಇಡ್ಲೀ. ನಿಮ್ಮಜ್ಜಿ passport ಫೋಟೋ ಹಚ್ಚಿ ಕಳಿಸಲಿ? ಏನಂತ ಅಂತೀಯೋ? ಹಾಪಾ, ಅಂತ ವೈನಿ ಬೈದರು.
ರೀ ವೈನಿ.....passport ಫೋಟೋ ಅಂದ್ರ passport ಫೋಟೋ ಅಲ್ಲಾ. ಅದೊಂದು ಫೋಟೋ ಸೈಜ್ ಅಷ್ಟೇ. ಆ ಸೈಜಿನ ಭಾವಚಿತ್ರ ಹಚ್ಚಿ ಕಳಿಸಿರಿ ಅಂತ. ತಿಳೀತಾ? ಹಾಂ? - ಅಂತ ಸ್ವಲ್ಪ ಬೈದಂಗ ಹೇಳಿದೆ. ವೈನಿಗೆ ಸ್ವಲ್ಪ diffidence ಬಂದಂಗ ಆಗಿ ಸ್ವಲ್ಪ ಮೆದು ಆದರು.
ಭಾವಚಿತ್ರ???? ಅಂತ ಹೇಳಿ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಮಾರಿ ಮ್ಯಾಲೆ. ಮತ್ತ ಎಲ್ಲರೆ ನಾ ಬೈದು ಗೀದು ಬಿಟ್ಟೇನಿ ಅಂತ ಸುಮ್ಮನ ನಿಂತರು.
ಹೂನ್ರೀ...passport ಸೈಜಿನ ಭಾವಚಿತ್ರ ಬೇಕೇ ಬೇಕು. ಒಂದಲ್ಲ ಮೂರೋ ನಾಕೋ ಬೇಕು, ಅಂತ ಹೇಳಿದೆ.
ವೈನಿ ಮಾರಿ ನೋಡಿದರ ಅವರಿಗೆ ಇನ್ನೂ ಭಾಳ confusion ಇತ್ತು. ಮತ್ತ ಕೇಳಿದರ ನಾ ಬೈತೇನಿ ಅಂತ ಸುಮ್ಮನಾದರು ಅಂತ ಕಾಣಸ್ತದ.
ಏ...ಮಂಗೂ....ನನ್ನ passport ಅರ್ಜಿ ಸ್ವಲ್ಪ ತುಂಬಿ ಕೊಡಲ್ಲಾ? ವೈನಿಗೆ ಅಷ್ಟೂ ಸಹಾಯ ಮಾಡಂಗಿಲ್ಲ? ಹಾಂ? - ಅಂತ ವೈನಿ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟರು.
ರೀ ವೈನಿ...passport ಅರ್ಜಿ ತುಂಬೋದು ಭಾಳ ಸರಳರೀ. ಕನ್ನಡದಾಗ ಇರ್ತದ. ತುಂಬ್ರೀ. ಅದೇನು ಐಎಎಸ್ ಪರೀಕ್ಷಾ ಅಲ್ಲ. ತಿಳೀತಾ? ಅಂತ ಹೇಳಿದೆ.
ಇಲ್ಲಪಾ ಮಂಗಣ್ಣಾ...ಮಂಗೇಶ... ನಾನು ಪೆನ್ನು ಹಿಡದು ಬರೆದಿದ್ದು ಏನರೆ ಅಂತಿದ್ದರಾ ಅದು ಕಿರಾಣಾ ಅಂಗಡಿ ಲಿಸ್ಟ್ ಮಾತ್ರ ನೋಡಪಾ. ಬರಿಲಿಕ್ಕೆ ಬರೋದೇ ಇಲ್ಲೋ. ರೂಢಾ ತಪ್ಪಿ ಹೋಗ್ಯದ. ನಾನೇ ಅರ್ಜಿ ತುಂಬಲಿಕ್ಕೆ ಹೋಗಿ, ಏನೇನೋ ಆಗಿ, passport ಬರದೇ ಇದ್ದರ ಭಾಳ ತೊಂದ್ರೀ. ಅದಕ್ಕ ನೀನೆ ಸ್ವಲ್ಪ ತುಂಬಿ ಕೊಡಲ್ಲಾ? ಪ್ಲೀಸ್, ಅಂತ ವೈನಿ ವಿನಂತಿ ಮಾಡಿಕೊಂಡರು.
ಹ್ಯಾಂಗ ಇಲ್ಲಾ ಅನ್ನಲಿ? ಮಾತೃ ಸಮಾನ, ಅಕ್ಕನ ಸಮಾನ, ಒಳ್ಳೆ ಗೆಳತಿ ಹಾಂಗ ಇದ್ದಾರ ನಮಗ ರೂಪಾ ವೈನಿ ಅಂದ್ರ. ಅವರು ಗಂಡನಾದ ಚೀಪ್ಯಾಗ ಈ ಕೆಲಸ ಹರ್ಗೀಸ್ ಹಚ್ಚೋದಿಲ್ಲಾ. ಆವಾ ಮಂಗ್ಯಾ ಸೂಳಿಮಗಗ ಒಂದು ರೇಶನ್ ಕಾರ್ಡ್ ಇನ್ನೂ ಮಾಡಿಸಿಕೊಳ್ಳಲಿಕ್ಕೆ ಆಗಿಲ್ಲ. ಆವಾ passport ಅರ್ಜಿ ತುಂಬಿ ಹಾರಿಬಿದ್ದಾ ಅಂತ ವೈನಿಗೆ ಗೊತ್ತೇ ಅದ. ಅದಕ್ಕ ನನಗ ತುಂಬಿ ಕೊಡು ಅಂತ ಹೇಳಲಿಕತ್ತಾರ. ಓಕೆ. ಏನು ಮಹಾ ಕೆಲಸ ಅಂತ ಒಪ್ಪಿಕೊಂಡೆ. ನಾ ಒಪ್ಪಿಕೊಂಡ ಖುಷಿಯೊಳಗ ವೈನಿ ನಾಷ್ಟಾ ತಂದೇ ಬಿಟ್ಟರು. ಎಲ್ಲಾ ಐಟಂ super size ಮಾಡಿ ತಂದಿದ್ದರು. ಬೆಷ್ಟೇ ಆತು. ಹಶಿವಿ! ಅನ್ನದಾತಾ ಸುಖೀ ಭವ.
ರೀ ವೈನಿ....ನಾನು ಯಾವಾಗರೇ passport ಅರ್ಜಿ ತೊಗೊಂಡು ಬರ್ತೇನಿ. ಬಂದಾಗ ತುಂಬಿ ಕೊಡತೇನಿ. ಓಕೆ? - ಅಂತ ನಾಷ್ಟಾ ಮುಕ್ಕೋದ್ರಾಗ ಮಗ್ನ ಆದೆ.
ಅಯ್ಯಾ ಇವನ.... ಅರ್ಜಿ ತಂದು ಇಟ್ಟೆನೋ. ನಾಷ್ಟಾ ಮುಗಿಸಿ ತುಂಬಿ ಬಿಡಪಾ. ಭಾವಚಿತ್ರ ಬ್ಯಾರೆ ಹಚ್ಚಬೇಕು ಅಂತ ಹೇಳಿಬಿಟ್ಟಿ. ಅದರದ್ದೇ ದೊಡ್ಡ ಕೆಲಸಾ. ತರ್ತೇನಿ ತಡಿ passport ಅರ್ಜೀ ಅಂತ ಹೇಳಿಕೋತ್ತ ರೂಪಾ ವೈನಿ ಒಳಗ ಹೋದರು.
ಭಾರಿ ಇದ್ದೀರಿ ಬಿಡ್ರೀ ವೈನಿ. ಎಲ್ಲಾ ರೆಡಿ ಮಾಡಿಕೊಂಡೇ ಕೂತೀರಿ. ವೆರಿ ಗುಡ್. ತುಂಬೇ ಬಿಡೋಣಂತ, ಅಂತ ಹೇಳಿ ಗಬಾ ಗಬಾ ನಾಷ್ಟಾ ಮುಕ್ಕಿದೆ.
ಹ್ಞೂ...ಒಂದು ಪೆನ್ನು ಕೊಡ್ರೀ ವೈನಿ, ಅಂತ ಹೇಳಿದೆ. ಸ್ಟ್ಯಾಂಡರ್ಡ್ Reynolds ಬಾಲ್ ಪೆನ್ ಕೊಟ್ಟರು.
ವೈನಿ ವಿವರ ಎಲ್ಲ ಗೊತ್ತಿತ್ತು. ಲಗು ಲಗು ತುಂಬಿದೆ. ಒಂದು ಸಲಾ ಎಲ್ಲಾ ಚೆಕ್ ಮಾಡಿದೆ.
ನೋಡ್ರೀ ವೈನಿ...ಎಲ್ಲಾ ತುಂಬಿ ಆತು. ಇಷ್ಟು ರೊಕ್ಕಕ್ಕ ಒಂದು ಡೀಡಿ ತೆಗೆಸಿಬಿಡ್ರೀ. ತಿಳೀತಾ? ಇದು, ಅದು, ಆದು ಮತ್ತ ಇದು, ಈ ಎಲ್ಲಾ ಡಾಕ್ಯುಮೆಂಟ್ಸ್ ಜೆರಾಕ್ಸ್ ಮಾಡಿಸಿ, attest ಮಾಡಿಸಿ ಲಗತ್ತಿಸಿರಿ. ಭಾವಚಿತ್ರದ್ದು ನಾಕು ಕಾಪಿ ಇಲ್ಲೆ, ಅಲ್ಲೆ, ಇಲ್ಲೆ ಮತ್ತ ಅಲ್ಲೆ ಹಚ್ಚಿರಿ. ಅಂಟು ಹಚ್ಚೇ ಅಂಟಿಸಿರಿ ಮತ್ತ. ಎಲ್ಲರೆ ಅನ್ನದ ಅಗಳು ಕಿವಿಚಿ ಹಚ್ಚೀರಿ. ಅದು ನಡೆಯೋದಿಲ್ಲ ಮತ್ತ. passport ಆಫೀಸ್ ಮಂದಿ ಕಲಸನ್ನ, ಚಿತ್ರಾನ್ನ ತಿಂದು ಹೈರಾಣ ಆಗ್ಯಾರ ಅಂತ. ಏನು ಮಂದೀರಿ ಅಂತೀನಿ....ಗಾಳಿಪಟಾ ಮಾಡೋವಾಗ ಅನ್ನಾ ಕಿವಿಚಿ ಅಂಟಿನ ಗತೆ ಮಾಡಿ ಹಚ್ಚೋದು ಬ್ಯಾರೆ. ಆದ್ರ passport ಫೋಟೋಕ್ಕೂ ಅದನ್ನ ಹಚ್ಚೋದು ಅಂದ್ರ ಏನ್ರೀ? ಬುದ್ಧಿನೇ ಇಲ್ಲ. ಎಲ್ಲಾ ತಿಳೀತ್ರೀ? ಹಾಂ? - ಅಂತ ಕೇಳಿದೆ.
ಹಾಂ...ತಿಳೀತೋ. ಥಾಂಕ್ಯೂ ಥಾಂಕ್ಯೂ. ಭಾಳ ಹೆಲ್ಪ್ ಆತು, ಅಂತ ವೈನಿ passport ಬಂದು ಫಾರಿನ್ ಟ್ರಿಪ್ ಹೊಡೆದು ಬಂದವರಂಗ ಸಂಭ್ರಮ ಪಟ್ಟರು. ಪಾಪ!
ಭಾವಾ....ಚಿತ್ರಾ ?????? ಅಂತ ಹೇಳಿ ಒಂದು ಕ್ವೆಶ್ಚನ್ ಮಾರ್ಕ್ ಒಗೆದರು ರೂಪಾ ವೈನಿ.
ಏನ್ರೀ? ಅಂತ ಧ್ವನಿ ಎತ್ತರಿಸಿ ಕೇಳಿದೆ.
ಏನಿಲ್ಲ, ಏನಿಲ್ಲ...ನಿನ್ನ ಕೆಲಸ ಮುಗೀತು. ನಾ ಇನ್ನು ಮುಂದಿನ ಕೆಲಸ ಮಾಡತೇನಿ. ಇವತ್ತೋ ನಾಳಿಯೋ ಹೋಗಿ ರೊಕ್ಕದ ಡ್ರಾಫ್ಟ್ ತರ್ತೇನಿ. ಭಾವಚಿತ್ರಕ್ಕೂ ವ್ಯವಸ್ಥಾ ಮಾಡ್ತೇನಿ, ಅಂತ ಹೇಳಿದರು ವೈನಿ. ಏನೋ ಭಾನಗಡಿ ಮಾಡ್ತಾರೋ ಅಂತ ಸಂಶಯ ಬಂತು. ಭಾಳ ಸಂಶಯ ಪಡಬಾರದು. ಸಂಶಯಾತ್ಮಾ ವಿನಶ್ಯತಿ, ಅಂತ ಕೃಷ್ಣ ಹೇಳಿ ಬಿಟ್ಟಾನ. ಭಗವದ್ಗೀತಾ ಒಳಗ.
ನಾ ಬರ್ಲ್ಯಾ? - ಅಂತ ಕೇಳಿ ಹೊರಟು ಬಂದೆ.
*****
ರೂಪಾ ವೈನಿಗೆ passport ಸಿಕ್ಕುಬಿಡ್ತಾ? ಅಥವಾ ಮತ್ತೇನೋ ಆತಾ?.....ಅದು ಮುಂದಿನ ಭಾಗದಲ್ಲಿ.
(ಸಶೇಷ. ಮುಂದುವರಿಯಲಿದೆ) (ಭಾಗ - ೨ ಇಲ್ಲಿದೆ)

2 comments:
Now, Roopa wine-y may get Devanaayi's photo!
She can use Steve bhava's bhava's bhava's photo!!
Post a Comment