ವರ್ಷದ ಆರಂಭದಲ್ಲೊಮ್ಮೆ ಓಳು ಬಿಟ್ಟು, 'ಗೋಲು ಸೆಟ್ ಮಾಡಿ. ಗೋಲು ಸೆಟ್ ಮಾಡಿ' ಅಂತ ಗೋಳು ಹೊಯ್ಕೊಳ್ಳುತ್ತಾರೆ. (Goal setting)
ಗೋಲು ಸೆಟ್ ಮಾಡಿ, ಅವನ್ನೆಲ್ಲ meet, exceed ಮಾಡಿದರೂ, ನಂತರ ಓಳು ಬಿಟ್ಟು, ಮಾಲು (ಮತ್ಲಬ್ ರೊಕ್ಕಾ, ರೋಕಡಾ) ಕೊಡದೇ ಗೋಲುಮಾಲ್ ಮಾಡೋದೇ ಕಾರ್ಪೊರೇಟ್ performance management ಫಂಡಾ!
ಅದರಲ್ಲೂ SMART (ಸ್ಮಾರ್ತ) ಗೋಲುಗಳಂತೆ. Specific, Measurable, Attainable, Realistic, Time-bound ಇರಬೇಕಂತೆ ಸೆಟ್ ಮಾಡೋ ಗೋಲುಗಳು.
ಏನು ಸ್ಮಾರ್ತ ಗೋಲೋ? ಏನು ಮಾಧ್ವರ ಗೋಲೋ? ಏನು ಅಯ್ಯಂಗಾರರ ಗೋಲೋ? ಗೋಳೋ ಗೋಳು. ಒಟ್ಟಿನಲ್ಲಿ ಒಂದಿಷ್ಟು ಗೀಚಿ, ಬಾಸ್ ಅದಕ್ಕೆ ಅವನ ಮುದ್ರೆ, ಭಸ್ಮ, ನಾಮ ಹಾಕಿ ಇಟ್ಟ ಅಂದರೆ ಅದನ್ನ ಮತ್ತೆ ನೋಡೋದು ಮುಂದಿನ ವರ್ಷವೇ. performance appraisal ಟೈಮ್ ನಲ್ಲಿ.
ನಿಮ್ಮಲ್ಲೂ ಇದೇ ಗೋಲಾ? ಇದೇ ಗೋಳಾ?
2 comments:
ಗೋಲಿನ ಗೋಳಿನಿಂದಾಗಿ, ನನ್ನ ತಲೆ ಬೋಳ್ ಆಗಿ ಹೋಗಿದೆ!
Good one Sir! ಎಲ್ಲರದ್ದೂ ಅದೇ ಗೋಳು. ತಲೆ ಬೋಳು :)
Post a Comment