ಮುಲ್ಲಾ ನಸ್ರುದ್ದೀನ ಇದ್ದ ಊರಿಗೆ ಆನೆ ಬಂದಿತ್ತು. ಅದು ಆ ಊರಿಗೆ ಆನೆ ಅಂತ ಒಂದು ಪ್ರಾಣಿ ಬಂದಿದ್ದು ಅದೇ ಮೊದಲನೇ ಸಲ. ಹಾಗಂತ ಮಾತ್ರ ಅದನ್ನು ತಂದವರಿಗೆ ಗೊತ್ತಿರಲಿಲ್ಲ ಅಷ್ಟೇ. ಅವರು ಯಾರೋ ಆನೆ ಮಾರಾಟಗಾರರು. ತಮ್ಮ ಆನೆ ಮಾರಾಟ ಮಾಡಲು ಅಂತ ಊರಿಂದೂರಿಗೆ ತಿರುಗುತ್ತ, ಮುಲ್ಲಾನ ಊರಿಗೆ ಬಂದು, ಡೇರೆ ಹಾಕಿಕೊಂಡು, ಆನೆಯನ್ನು ಪ್ರದರ್ಶನಕ್ಕೆ ಇಟ್ಟುಕೊಂಡು ಕೂತಿದ್ದರು.
ಎಲ್ಲರಂತೆ ಮುಲ್ಲಾ ಸಹಿತ ಆನೆ ನೋಡಲು ಹೋದ. ಹೋದವರೆಲ್ಲ ದೂರ ನಿಂತು ಆನೆಯನ್ನು ನೋಡುತ್ತ, ಆಶ್ಚರ್ಯ ಪಡುತ್ತ, ಸಂಭ್ರಮಿಸುತ್ತ, ತಮ್ಮ ತಮ್ಮಲ್ಲೇ ಏನೇನೋ ಮಾತಾಡುತ್ತ ಇದ್ದರು. ಇವನು ಹೇಳಿ ಕೇಳಿ ಮುಲ್ಲಾ ನಸ್ರುದ್ದೀನ. ಎಲ್ಲರಕಿಂತ ಸ್ವಲ್ಪ ಬೇರೆಯೇ. ಸೀದಾ ಆನೆಯ ಹತ್ತಿರಕ್ಕೇ ಹೋಗಿಬಿಟ್ಟ!
ಹೋದವನೇ ಆನೆಯ ಸುತ್ತ ತಿರುಗತೊಡಗಿದ. ನೋಡಿದವರಿಗೆ ಅನ್ನಿಸಬೇಕು, 'ಎಲ್ಲಿ ಇವನು ಗಜಶಾಸ್ತ್ರ ಪಂಡಿತನೋ ಹೇಗೆ? ಆನೆಯನ್ನು ವಿಸ್ತೃತವಾಗಿ ಅಭ್ಯಸಿಸಿ, ಅದರ ಗುಣ ವಿಶೇಷ, ಕುಂದು ಕೊರತೆ ಎಲ್ಲ ಕಂಡುಹಿಡಿಯುತ್ತಿದ್ದಾನೋ ಹೇಗೆ?' ಅಂತ. ಮುಲ್ಲಾ ಆನೆಯ ಸುತ್ತ ರೌಂಡ್ ಹಾಕಿಯೇ ಹಾಕಿದ.
ಆನೆ ಮಾರುವವರು ಸಹ ಮುಲ್ಲಾನ ಚಟುವಟಿಕೆಗಳನ್ನು ಗಮನಿಸಿದರು. ಅವರಿಗೆ ಏನೆನ್ನಿಸಿತೋ ಏನೋ. ಬಂದವರೇ, ಮುಲ್ಲಾ ನಸ್ರುದ್ದೀನನನ್ನು ಸ್ವಲ್ಪ ಆಕಡೆ ಕರೆದುಕೊಂಡು ಹೋದವರೇ, ಏನೋ ಕುಸುಪುಸು ಮಾತಾಡಿ, ಅವನ ಕೈಯಲ್ಲಿ ಒಂದಿಷ್ಟು ಚಿನ್ನದ ನಾಣ್ಯಗಳನ್ನು ತುರುಕಿ, ಆನೆ ಮಾರಾಟವಾಗುವ ತನಕ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೂತಿರಬೇಕೆಂದೂ, ಆನೆ ಮಾರಾಟವಾದ ನಂತರ ಮತ್ತಿಷ್ಟು ಕಾಸು ಕೊಡುವದಾಗಿ ಹೇಳಿದರು. ಮುಲ್ಲಾನಿಗೆ ಏನು, ಎತ್ತ, ಎಂತ ಅಂತ ತಿಳಿಯಲಿಲ್ಲ. ಆದರೂ ಕಾಸು ಕೊಡುತ್ತಿದ್ದಾರೆ. ಏನೂ ಮಾತಾಡಬೇಡ ಅನ್ನುತ್ತಿದ್ದಾರೆ. ಓಕೆ. ಸರಿ, ಅಂದುಕೊಂಡ ಮುಲ್ಲಾ ಕಾಸು ತೆಗೆದುಕೊಂಡು, ಆನೆ ಸುತ್ತ ಸುತ್ತುವದನ್ನು ಬಿಟ್ಟು, ತಾನೂ ಜನರಲ್ಲಿ ಒಂದಾದ.
ಮುಲ್ಲಾ ಆನೆ ಸುತ್ತ ಆ ಪರಿ ಸುತ್ತುತ್ತ ಇರುವದನ್ನು ಗಮನಿಸಿದ್ದ ಆನೆ ಮಾರಾಟದ ಮಂದಿ, 'ಈ ಮುಲ್ಲಾ ಯಾರೋ ಗಜಶಾಸ್ತ್ರದ ಪಂಡಿತನೇ ಇರಬೇಕು. ಅವರ ಆನೆಯಲ್ಲಿ ಇರಬಹುದಾದ, ಇಲ್ಲದಿರಬಹುದಾದ ಕುಂದು ಕೊರತೆ ಎಲ್ಲ ಕಂಡು ಹಿಡಿದು, ಜನರ ಮುಂದೆ ಜಾಗಟೆ ಬಾರಿಸಿಬಿಟ್ಟ ಅಂದರೆ ಆನೆ ಮಾರಾಟ ಮಾಡುವದು ಕಷ್ಟವಾಗಬಹುದು,' ಅಂತ ವಿಚಾರ ಮಾಡಿ, ಮುಲ್ಲಾನಿಗೆ ರೊಕ್ಕ ಕೊಟ್ಟು ಪಟಾಯಿಸಿದ್ದರು. ಅಥವಾ ಹಾಗಂತ ತಿಳಿದಿದ್ದರು.
ಮುಂದೆ ಸ್ವಲ್ಪ ಸಮಯದ ನಂತರ ಆನೆಯ ಮಾರಾಟವಾಯಿತು. ಆನೆ ತಂದವರು ಖುಷ್ ಆದರು. ತಮ್ಮ ರೊಕ್ಕ ಎಣಿಸಿಕೊಂಡ ನಂತರ ಮುಲ್ಲಾ ನಸ್ರುದ್ದೀನನನ್ನು ಹುಡುಕಿದರು. ಮೊದಲಾಡಿದ ಮಾತಿನಂತೆ ಮತ್ತೊಂದಿಷ್ಟು ಕಾಸು ಕೈಯಲ್ಲಿಟ್ಟರು. ಒಂದು ಪ್ರಶ್ನೆ ಕೇಳಿದರು. 'ಮುಲ್ಲಾ ಸಾಹೇಬರೇ, ಆನೆಯನ್ನು ಅಷ್ಟೊಂದು ಕುತೂಹಲದಿಂದ, ಅಷ್ಟೊಂದು ಕೂಲಂಕಷವಾಗಿ ಪರೀಕ್ಷೆ ಮಾಡುತ್ತಿದ್ದಿರಲ್ಲ. ಏನು ಅನ್ನಿಸಿತು ಆನೆ ಬಗ್ಗೆ? ಈಗ ಎಲ್ಲ ಬಿಚ್ಚಿ ಹೇಳಿ.'
ಮುಲ್ಲಾ ನಸ್ರುದ್ದೀನ ದೀರ್ಘವಾಗಿ ಉಸುರೆಳೆದುಕೊಂಡ. 'ಆನೆ ಅಂದರೆ ಹಿಂದೂ ಬಾಲ, ಮುಂದೂ ಬಾಲವಿರುವಂತಹ ಒಂದು ವಿಚಿತ್ರ ಪ್ರಾಣಿ!' ಅಂದವನೇ, ಸಲಾಂ ಮಾಡಿ, ಕಾಸು ಎಣಿಸುತ್ತ, ಮನೆ ದಾರಿ ಹಿಡಿದ.
ಈ ಪುಣ್ಯಾತ್ಮ ಗಜಶಾಸ್ತ್ರ ಪಂಡಿತ, ಆನೆಯ ಗುಣ ವಿಶೇಷಗಳನ್ನು ವಿಶ್ಲೇಷಣೆ ಮಾಡಿ ತಮ್ಮ ಆನೆ ಮಾರಾಟಕ್ಕೆ ಅಡ್ಡಿಯಾದಾನು ಅಂತ ಹೆದರಿ ಅವನಿಗೆ ಕಾಸು ಕೊಟ್ಟು, ಒಳಗಾಕಿಕೊಂಡೆವು ಅಂತ ಖುಷಿ ಪಟ್ಟಿದ್ದ ಆನೆ ಮಾರಾಟಗಾರರು ಮಾತ್ರ ಮುಲ್ಲಾನ ಗಜಶಾಸ್ತ್ರದ 'ಪ್ರಾವಿಣ್ಯತೆ' ಕೇಳಿ ತಲೆ ತಲೆ ಚಚ್ಚಿಕೊಂಡರು.
ನೀತಿ: ಕೆಲವರು ವಿಷಯದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಎಲ್ಲ ಗೊತ್ತಿದ್ದವರಂತೆ 'ಲುಕ್' ಕೊಡುತ್ತಿರುತ್ತಾರೆ. ಅಂತವರಿಂದ ತುಂಬ impress ಆಗುವ ಮುನ್ನ ಸ್ವಲ್ಪ ಮಾತಾಡಿಸಿ ನೋಡಿ. Light travels faster than sound. This is why some people look bright until you hear them speak.

3 comments:
Great post!
ಹಹ್ಹಹ್ಹಾ!!
Thanks, Sunaath Sir.
Post a Comment