ಯಾರದ್ದೋ ಮೇಲೆ ಮಾನಹಾನಿ ಖಟ್ಲೆ ಜಡಿಯುತ್ತೇನೆಂದು ಹೇಳಿಕೊಂಡು ಅಲೆಯುತ್ತಿರುವವರನ್ನು ತಣ್ಣಗೆ ಒಂದು ಮಾತು ಕೇಳಿದೆ. 'ಯಾವ ಮಾನದಂಡವನ್ನು ಉಪಯೋಗಿಸಿ ಮಾನಹಾನಿ ಖಟ್ಲೆ ಹಾಕುತ್ತೀರಿ?' ಅಂತ. 'ಹ್ಯಾಂ? ಹಾನಿಮಾನ...ಅಲ್ಲಲ್ಲ ಮಾನಹಾನಿ ಖಟ್ಲೆ ಹಾಕಾಕ ದಂಡ ಕಟ್ಟಬೇಕು? ಅದೂ ಮಾನದ ದಂಡ ಕಟ್ಟಬೇಕು??? ಅಯ್ಯೋ! ಇದು ತೊಂದ್ರಿಗೆ ತಂದಿಡ್ತಲ್ಲೋ!!!' ಅಂತ ಪೇಚಾಡಿಕೊಂಡರು.
'ಯಾಕ್ರೀ ಏನಾತು?' ಅಂದೆ.
'ಅದೇನೋ ದಂಡ ಅಂದ್ಯಲ್ಲೋ. ಹಾಂ! ಮಾನದಂಡ. ಅದೇ. ದಂಡದ ರೂಪದಾಗ ಕಟ್ಟುವಷ್ಟು ಮಾನ ನನ್ನ ಕಡೆ ಇಲ್ಲಪಾ. ರೊಕ್ಕ ಐತಿ. ಮಾನ, ಮತಿ ಮಾತ್ರ ಇಲ್ಲ ನೋಡಪಾ. ಎಲ್ಲ ಶಿವಾಯ ನಮಃ ಆಗಿ ಬಿಟ್ಟೈತಿ. ಸ್ವಲ್ಪ ಮಾನ ಸಾಲ ಕೊಡು. ಅದರಿಂದ ಮಾನದಂಡ ಕಟ್ಟಿ ಖಟ್ಲೆ ಹಾಕತೇನಿ. ಓಕೆ? ಲಗೂ ಸ್ವಲ್ಪ ಮಾನ ಸಾಲ ಕೊಡೋ. ಏ! ಕೊಡೋ ಪ್ಲೀಸ್! ಒಂದು ಸ್ವಲ್ಪ ಮಾನ ಪ್ಲೀಸ್!' ಅಂತ ಮಾನದಂಡ ಕಟ್ಟಲು ಬೇಕಾದ ಸ್ವಲ್ಪ ಮಾನವನ್ನು ಹೋಟೆಲ್ ಮಾಣಿಗೆ 'ಒಂದು ಪ್ಲೇಟ್ ಮಸಾಲೆ' ಅನ್ನುವ ಮಾದರಿಯಲ್ಲಿ ಒದರಿ ಕೇಳಿದರು.
ಮಾನದಂಡ, ದಂಡದ ಮಾನ ಅನ್ನುತ್ತ ಕೂತಿರುವ ಇಂತಹ ದಂಡಪಿಂಡಗಳ ಜೊತೆ ಮಾತಾಡಿದರೆ ಸಮಯ ದಂಡ ಅಂತ ಅವರಿಗೆ ಒಂದು ಉದ್ದಂಡ ನಮಸ್ಕಾರ ಹಾಕಿ ಎದ್ದು ಬಂದೆ.
2 comments:
ಸಾಲವೆಂದು ಕೊಟ್ಟ ಮಾನ ತಿರುಗಿ ಬಂದೀತೆ, ಅಯ್ಯ?
ವಯಕ್ತಿಕ ಮಟ್ಟದಲ್ಲಿ ಕೊಟ್ಟ ಯಾವ ಸಾಲವೂ ತಿರುಗಿ ಬಂದಿಲ್ಲ ಬಿಡಿ ಸರ್. ಇದೇನು ಬರುತ್ತದೆ. ಅದಕ್ಕೇ ಎದ್ದು ಬಂದಿದ್ದು. :)
ಸಾಲ ಕೊಡಬೇಕು ಅಂದರೆ ಬ್ಯಾಂಕ್ ಆಗಿರಬೇಕು. ನಾಮ ಬಿದ್ದರೂ ತಡೆದುಕೊಳ್ಳುವಂತಿರಬೇಕು.
Post a Comment