Trump is looking to create a bitcoin strategic reserve. How would that work?
ಹುಚ್ಚಾ ವೆಂಕಟನ ದೊಡ್ಡಪ್ಪನಂತಿರುವ ಟ್ರಂಪ್ ಮತ್ತು ಹುಚ್ಚಾ ವೆಂಕಟನ ಹಿರಿಯಣ್ಣನಂತಿರುವ ಈಲಾನ್ ಮಸ್ಕ್ ಮತ್ತು ಕಜಿನ್ ಬ್ರದರ್ ತರಹ ಇರುವ ಅವಿವೇಕ ನಾಮಸ್ವಾಮಿ ಮುಂತಾದವರು ಟ್ರಂಪ್ ಜೊತೆ ಇರುವಾಗ ಏನೂ ಆಗಬಹುದು.
ಈ ಪುಣ್ಯಾತ್ಮ ಟ್ರಂಪ್ ಹಿಂದೆ 2016 ರಲ್ಲಿ ಬಂದಾಗ ಚೀನಾ, ಇಲ್ಲಿನ ಡೀಪ್ ಸ್ಟೇಟ್ (deep state) ಜೊತೆ ಭಾನಗಡಿ ಮಾಡಿಕೊಂಡ. ಕಾಲುಕೆರೆದು ಅವರನ್ನು ತಡವಿಕೊಂಡ. ಆಗ ಕೊಟ್ಟರು ನೋಡಿ ಒಂದು ಬರೋಬ್ಬರಿ ಗಜ್ಜು. ಅದೇ ಕೋವಿಡ್. ಆ ಕೋವಿಡ್ ಅನಾಹುತ ಎಬ್ಬಿಸಿದ್ದು ೨ ೦ ೨ ೦ ರಲ್ಲಿ ಟ್ರಂಪ್ ನನ್ನು ಸೋಲಿಸಲು ಮತ್ತು ಓಡಿಸಲು. ಆದರೆ ತೊಂದರೆ, ಪಡಿಪಾಟಲು, ತಾಪತ್ರಯ ಅನುಭವಿಸಿದ್ದು ಇಡೀ ವಿಶ್ವ. ಲಸಿಕೆ, ಚಿಕಿತ್ಸೆ ಮಣ್ಣು ಮಸಿ ಎಂದು ಅತಿ ದೊಡ್ಡ ಪ್ರಮಾಣದ wealth transfer ಆಗಿದ್ದನ್ನು ನೋಡುತ್ತಾ ಬಾಯಿ ಬಾಯಿ ಬಡಿದುಕೊಂಡು ಇಲ್ಲಿ 750 ಡಾಲರ್ stimulus ಚೆಕ್ಕನ್ನೂ, ಬೇರೆ ಕಡೆ ಐದು ಕೇಜಿ ರೇಶನ್ ಅಕ್ಕಿಯನ್ನೂ ತೆಗೆದುಕೊಂಡು ದಣಿಗೆಗಳಿಗೆ ಸಾಷ್ಟಾಂಗ ಹಾಕಿದ್ದು ವಿಶ್ವದ ಜನತೆ. ಅಲ್ಲಿಗೆ ಸಮಾನತೆ ಮತ್ತೊಂದು ಶಿವಾಯ ನಮಃ.
ಈಗ ಮತ್ತೆ ಟ್ರಂಪ್ ಬಂದಿದ್ದಾರೆ. ಇನ್ನು ನಾಲ್ಕು ವರ್ಷ ಈ ಹುಚ್ಚಾ ವೆಂಕಟನ ಗ್ಯಾಂಗ್ ಏನೇನು ಮಾಡಲಿದೆಯೋ ದೇವರೇ ಬಲ್ಲ.
ಬಿಟ್ ಕಾಯಿನ್ ಬಿಟ್ ಕಾಯಿನ್ ಎಂದು ಹುಯಿಲು ಎಬ್ಬಿಸಿ, ಅದನ್ನು manipulate ಮಾಡಿ, ಎಲ್ಲರೂ ತಮ್ಮ ಹೊಲ, ಮನೆ, ಬಂಗಾರ, ಸಿಂಗಾರ ಎಲ್ಲ ಮಾರಿಕೊಂಡು ಬಿಟ್ ಕಾಯಿನ್ ಕೊಳ್ಳಬೇಕು. ಆವಾಗ ಇವರು ಅದನ್ನು ಡಂಪ್ ಮಾಡಿ ಎಲ್ಲರನ್ನೂ ದಿವಾಳಿ ಮಾಡಿ ಮತ್ತೇನೋ ಮಾಡಿಕೊಳ್ಳಬೇಕು. ಹುನ್ನಾರ ಹಾಗೇ ಇದ್ದಂತೆ ಕಾಣುತ್ತದೆ.
ಇವರ ಖತರ್ನಾಕ್ ಸ್ಕೀಮ್ ವಿಫಲವಾದರೆ ಮಸ್ಕ್ ನ ರಾಕೆಟ್ ಅಂತೂ ಇವೆಯೆಲ್ಲ. ಎಲ್ಲರ ಪುಕುಳಿಯಲ್ಲೂ ಒಂದೊಂದು ರಾಕೆಟ್ ಹೆಟ್ಟಿ ಢಂ ಅನ್ನಿಸುತ್ತಾನೆ. ಅವು ಹಡಬೆ ರಾಜಕಾರಣಿಗಳನ್ನು ಹೊತ್ತು ಎಲ್ಲಿ ಹೋಗುತ್ತವೋ ಯಾವನಿಗೆ ಗೊತ್ತು. ಅವು ತ್ರಿಶಂಕು ಸ್ವರ್ಗಕ್ಕೆ ಹೋಗಬಹುದು. ಅಥವಾ ಅಂತರಿಕ್ಷದಲ್ಲಿ ಅಂತರ್ಪಿಶಾಚಿಗಳ ಹಾಗೆ ಗಿರಕಿ ಹೊಡೆಯುತ್ತಾ ಮುಕ್ತಿ ಸಿಗದ ರಾಜಕಾರಣಿಗಳು ಮತ್ತೆ ಮತ್ತೆ ಭೂತ ಪ್ರೇತಗಳ ಹಾಗೆ ವಕ್ಕರಿಸಿ ನಮ್ಮನ್ನು ಕಾಡುತ್ತವೆ.
ಕೊನೆಗೆ ಒಂದು ರಾಕೆಟ್ಟನ್ನೂ ತನ್ನ ಪುಕುಳಿಯಲ್ಲಿಯೂ, ಮತ್ತೊಂದನ್ನು ಅವಿವೇಕ ನಾಮಸ್ವಾಮಿಯ ಪುಕುಳಿಯಲ್ಲಿಯೂ ಹೆಟ್ಟಿ, ನನ್ನ ಪುಕುಳಿ ರಾಕೆಟ್ಟಿಗೆ ನೀ ಬೆಂಕಿ ಹಚ್ಚು. ನಿಂದಕ್ಕೆ ನಾ ಹಚ್ಚುತ್ತೇನೆ ಎಂದು ಮಸ್ಕಿರಿ ( ಮಸ್ಕ್ + ಕಿರಿ = ಮಸ್ಕಿರಿ, ಮಷ್ಕಿರಿ) ಮಾಡುತ್ತಾ ಆಗಲೇ ಮಂಗನ(ಳ) ಗ್ರಹದಲ್ಲೋ, ಶುಕ್ರ ಗ್ರಹದಲ್ಲೋ ಮಾಡಿಟ್ಟುಕೊಂಡಿರುವ ತಮ್ಮ ತಮ್ಮ ರಹಸ್ಯ ನೆಲೆಗಳಿಗೆ ಪರಾರ್. ಅದೇ ಪ್ರಳಯ. ಕಲಿಯುಗದ ಅಂತ್ಯ. ಅದಕ್ಕೆ ಎಲ್ಲರೂ ತಯಾರಾಗಿರೋಣ...😂😂😂😂😂😂😂
No comments:
Post a Comment