ತುಂಬಾ ಹಿಂದೆ, ಸದನ ನಡೆಯುತ್ತಿರುವಾಗ ಸದನ ಸದಸ್ಯರ ನಡುವೆ ನಡೆದ ಚರ್ಚೆಗಳಲ್ಲಿನ ಆಸಕ್ತಿದಾಯಕ ಚುಟುಕುಗಳನ್ನು ತಮಾಷೆಯ ಶೈಲಿಯಲ್ಲಿ 'ಸದನ ಕೌತುಕ' ಎಂಬ ಶೀರ್ಷಿಕೆಯಡಿ ಪ್ರಕಟಿಸುತ್ತಿದ್ದರು. ಆ ಧಾಟಿಯಲ್ಲಿ ಇತ್ತೀಚಿನ ಬೆಳವಣಿಗೆ ಆಧರಿಸಿ ಒಂದು ಕಾಲ್ಪನಿಕ ಬರಹ...
ಇವರು ಅವರಿಗೆ ಕೊಲೆಗಾರ ಅಂದರು. ಅವರು ಇವರಿಗೆ ಸೂ* ಅಂದರು. ಈಗ ಅಕ್ಕಾ, ನಾನು ಹೃದಯದಿಂದ ಕೆಟ್ಟವನಲ್ಲ ಅಕ್ಕಾ ಎಂದು ಇವರೂ, ಅಣ್ಣಾ ನಿನ್ನ ಹೃದಯ ಚೆನ್ನಾಗಿರಬಹುದು ಬಾಯಿ ಸ್ವಚ್ಛವಾಗಿಲ್ಲ ಎಂದು ಅವರೂ ಗುದಮುರಗಿ ನಡೆಸಿರುವಾಗ ಒಂದು ನೆಮ್ಮದಿಯ ವಿಷಯ ಏನೆಂದರೆ ಸುಪ್ರಿಯಾ ಸುಳೆ, ಪಂಕಜಾ ಮುಂಡೆ ಮುಂತಾದ ವಿಚಿತ್ರ ಅಡ್ಡಹೆಸರುಳ್ಳ ಜನ ನಮ್ಮಲ್ಲಿ ಇಲ್ಲ. ಅಂತವರು ಇದ್ದರೆ, ಮೇಲಿಂದ ಅವರಿಗೆ ಕನ್ನಡವೂ ಅಷ್ಟಿಷ್ಟು ಬಂದುಬಿಟ್ಟಿದ್ದರೆ ಶಿವಾ . ..ದೊಡ್ಡ ಲಫಡಾ.
ರೀ, ಸುಳೇ ಅವರೇ ಅಂದರೆ ಯಾಕ? ಎಲ್ಲಿ ಕಡಿಯಾಕ ಹತ್ತೈತಿ? ಎಂದು ಮೈಮೇಲೆ ಬಿದ್ದರೆ ಮತ್ತೆ ಅಕ್ಕಾ, ಸುಳೇ ಅಂದೆ ಕಣಕ್ಕಾ ಸೂ ಎಂದು ಮಹಾಪ್ರಾಣ ಹೇಳಿಲ್ಲ ಅಕ್ಕಾ ಅನ್ನುತ್ತಾ ಪ್ರಾಣ ಕಾಪಾಡಿಕೊಳ್ಳಬೇಕು.
ಇನ್ನು ಮುಂಡೆ. ರೀ ಮುಂಡೆ ಅಂದರೆ ಶಿವಾಯ ನಮಃ. ಅದು ಬೇಡ ಗೋಪಿನಾಥ್ ಮುಂಡೆ ಅವರ ಪುತ್ರಿ ಎಂದು ರೀ ಮುಂಡೆಮಗಳೇ ಅಂದುಬಿಟ್ಟರೆ ಮತ್ತೂ ದೊಡ್ಡ ಅಧ್ವಾನ. ರೀ ಪಂಕಜಾ ಅವರೇ ಅಂದುಬಿಟ್ಟರೆ ಪಂಕೇ ಜಾಯತೇ ಇತಿ ಪಂಕಜಾ ಅರ್ಥಾಥ್ ಕೆಸರಿನಲ್ಲಿ ಹುಟ್ಟಿದ್ದು ಉರ್ಫ್ ಕಮಲ ಎಂದು ಹೆಗಡೆ ಮಾಸ್ತರ್ ಅಂತಹ ಸಂಸ್ಕೃತ ವಿದ್ವಾನರು ಬತ್ತಿ ಇಟ್ಟರು ಅಂದರೆ ಅದನ್ನೇ ಹಿಡಿದುಕೊಂಡು ತಿರುಗಿ ಇಡುತ್ತಾರೆ. ಅಕ್ಕಾ, ನಿನ್ನನ್ನು ಮತ್ತೇನೆಂದು ಸಂಬೋಧಿಸಲಿ ಅಕ್ಕಾ? ಲೋಟಸ್ ವಿಡೋ ಅಂದುಬಿಡಲೇ??? ಲೋಟಸ್ ವಿಡೋ ಎಂದರೆ ಪಂಕಜಾ ಮುಂಡೆ ಎಂದು ಚಿಕ್ಕಿ ಹಗರಣ ಖ್ಯಾತಿಯ ಮುಂಡೆ, ಮುಂಡೆ ಮಗಳಿಗೆ ಅರ್ಥವಾಗುವುದು ಅಷ್ಟರಲ್ಲೇ ಇದೆ ಬಿಡಿ.
ಹಿರಿಯ ರಾಜಕಾರಣಿ ಮೋಟಮ್ಮ ಒಂದು ಕಾಲದಲ್ಲಿ ಸದನದಲ್ಲಿ ಇದ್ದರು. ಈಗ ಅವರ ಪುತ್ರಿ ನಯನಾ ಮೋಟಮ್ಮ ಇದ್ದಾರೆ. ಕೆಲವರಿಗೆ ಹಿಂದಿ ಮೇಲೆ ವಿಪರೀತ ಪ್ರೀತಿ. ಸುಟ್ಟರೂ ಹಿಂದಿ ಬರುವುದಿಲ್ಲ. ಚಿತ್ರಗೀತೆಗಳ ಮೂಲಕ ಹಿಂದಿ ಕಲಿಯೋಣ ಎಂದು ಹೇಳಿ, ಸಮಯ ಸಿಕ್ಕಾಗ, ಸದನದ ಸುತ್ತಮುತ್ತಾ ಎಲ್ಲಿಯಾದರೂ, ಜಿಸ್ ಕೀ ಬೀವಿ ಮೋಟಿ ಉಸ್ಕಾ ಭೀ ಬಡಾ ಕಾಮ್ ಹೈ. ಬಿಸ್ತರ್ ಪೇ ಬಿಛಾದೋ. ಗದ್ದೆ ಕಾ ಕಾಮ್ ಹೈ. ಮೇರೇ ಅಂಗಾನೇ ಮೇ ತುಮಾರಾ ಕ್ಯಾ ಕಾಮ್ ಹೈ, ಎಂದೇನಾದರೂ ಗುಣುಗುಣಿಸಿಬಿಟ್ಟರೆ ಮುಗೀತು ಕಥೆ. ಏನ್ರೀ ಮೋಟಿ ಗೀಟಿ ಅಂತ ಏನೇನೋ ಹೇಳ್ತೀರಾ ಅಂತ ಮೋಟಮ್ಮನವರೂ ಮತ್ತು ಅವರ ಪುತ್ರಿ ಜಗಳಕ್ಕೆ ಬಂದರೆ ಮತ್ತೆ ಅಮ್ಮಾ, ಅಕ್ಕಾ ಎಂದು ವಿವರಣೆ ಕೊಡಬೇಕು.
ಶಾಸಕ ರಾಜು ಕಾಗೆ ಇದ್ದಾರೆ. ಅವರ ಅಡ್ಡಹೆಸರು ಕಾಗೆ ಮೇಲೆ ಏನೆಲ್ಲಾ ಗೂಬೆ ಕೂಡಿಸಿಬಿಟ್ಟರು ಅಂದರೆ ಹಿಂದೊಮ್ಮೆ ಸದನದಲ್ಲೇ ಕಣ್ಣೇರು ಹಾಕಿಬಿಟ್ಟಿದ್ದರು ಕಾಗೆ. ಮಾಧ್ಯಮಗಳು ಕಾಗೆ, ಕಲರ್ ಕಲರ್ ಕಾಗೆ ಏನೇನೋ ಅಂತಾರೆ ಸ್ವಾಮೀ. ಮಾಧ್ಯಮವೇ ಆದರೂ ಅವರಿಗೊಂದು ಮಾರ್ಗಸೂಚಿ ಬೇಡವೇ ಎಂದು ಕಾಗೆ ಎಂಬ ಅಡ್ಡಹೆಸರಿನ ಅವರಿಗೆ ಏನೆಲ್ಲಾ ನೋವು ಉಂಟು ಮಾಡಿದರು ಎಂದು ಹೇಳಿ ಅಂಬೋ ಅಂದಿದ್ದರು. ಅವರಿಗೆ ರಿಲೀಫ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.
ಫೈರ್ ಬ್ರಾಂಡ್ ಮುಖಂಡ ಕಾಶಪ್ಪನವರ್ ಇದ್ದಾರೆ. ಅವರಿಗೆ Cashಅಪ್ಪನವರ ಅಂದುಬಿಟ್ಟರೆ ನಿಮ್ಮನ್ನು ಹುನಗುಂದದ ಅವರ ಗ್ರಾನೈಟ್ ಕ್ವಾರಿಯೊಳಗೆ ಜೀವಂತ ಹೂತುಬಿಟ್ಟಾರು. ಅವರ ಅಬ್ಬರ ಕೇಳಿದವರಾರೂ ಅವರಿಗೆ ಅಣ್ಣಾ,ಬಾಸ್ ಬಿಟ್ಟು ಬೇರೆ ಕಮಕ್ ಕಿಮಕ್ ಅನ್ನುವುದಿಲ್ಲ.
ಹಿಂದೆ ಹುಚ್ಚಮಾಸ್ತಿಗೌಡ ಎನ್ನುವ ರಾಜಕಾರಣಿ ಇದ್ದರು. ಅವರಿಗೆ ಏನೆಲ್ಲಾ ಲೇವಡಿ ಮಾಡುತ್ತಿದ್ದರೋ ಪಾಪ.
ಹಾಗೆಯೇ ಚಿಗರೆಮಾಚಿಗೌಡ. ಅವರ ನೆನಪಿನಲ್ಲೇ ಹುಧಾ ಮಹಾನಗರದ ಚಿಗರಿ ಬಸ್ ಬಂದಿದ್ದರೆ ಅವರ ಹೆಸರು ಹಾಗೆ ಇದ್ದಿದ್ದು ಸಾರ್ಥಕ.
ಹಾರ್ದಿಕ್ ದೀಕ್ಷಿತ್ ಅಂತ ಯಾರೂ ಇಲ್ಲ ಅಂತ ಭಾವಿಸುತ್ತೇನೆ. ಅಂತಹ ಹೆಸರುಳ್ಳ ಹುಡುಗ ಶಾಲೆ ಮುಗಿಸುವುದು ಡೌಟ್. ಇಂಗ್ಲಿಷ್ ಭಾಷೆಯಲ್ಲಿ ಬರೆದರೇ ನಗು ಬರುತ್ತದೆ. ಮೂಲ ಗೊತ್ತಿಲ್ಲದವರು ಉಚ್ಚಾರಣೆ ಮಾಡಿಬಿಟ್ಟರೆ...ಶಿವಾ..ಅಷ್ಟೇ ಮತ್ತೆ.
No comments:
Post a Comment