ಬೆಳಗಾವಿ (ಬೆಳಗಾಂ) ಯಾರಿಗೇ ಸೇರಿದ್ದು?
ಕರ್ನಾಟಕಕ್ಕೋ ಅಥವಾ ಮಹಾರಾಷ್ಟ್ರಕ್ಕೋ?
ಅದೆಲ್ಲಾ ಜಗಳ ಏನೇ ಇರಲಿ ಬಿಡಿ.
ಮನ್ನೆ ಇಲ್ಲಿ ಒಬ್ಬ ಕಲೀಗ್ ಹೇಳಿದ ಜೋಕ್ ತುಂಬಾ ನಗು ತರಿಸಿತು. ಓದಿ ನೋಡಿ. ಲೈಟಾಗಿ ತೊಗೊಳ್ಳಿ. ಸಿರಿಯಸ್ ಆಗಿ ತೊಗೊಂಡು ಸಿಟ್ಟಾಗಬೇಡಿ.
ಒಬ್ಬ ಕನ್ನಡಿಗ ಮತ್ತೆ ಒಬ್ಬ ಮರಾಠಿಗ ಸೀರಿಯಸ್ಸಾಗಿ ವಾದಿಸುತ್ತಿದ್ದರು. ಬೆಳಗಾವಿ ಯಾರಿಗೆ ಸೇರಬೇಕು? ಅನ್ನುವದರ ಬಗ್ಗೆ.
ಬೆಳಗಾವಿ ಒಳಗೆ "ಬೆಳ" ಅಂತ ಇದೆ ನೋಡಿ, ಅದು ಫುಲ್ ಕನ್ನಡದ್ದು. ಬೆಳಗ್ಗೆ, ಬೆಳವಡಿ, ಬೆಳವಣಿಗೆ ಇತ್ಯಾದಿ ಶಬ್ದಗಳು ಕನ್ನಡದವು. ಹಾಗಾಗಿ ಬೆಳಗಾವಿ ಶಬ್ದವೇ ಮೂಲತಃ ಕನ್ನಡದ್ದು. ಹಾಗಾಗಿ ಅದು ಕರ್ನಾಟಕ್ಕೆ ಸೇರಿದ್ದು. ದೂಸರಾ ಮಾತೇ ಇಲ್ಲ - ಅಂತ ಅಂದ ಕನ್ನಡಿಗ.
ಮರಾಠಿಗನಿಗೆ ಉರಿಯಿತು. ಕನ್ನಡಿಗ ಲಾಜಿಕಲ್ ರೀಸನ್ ಕೊಟ್ಟಿದ್ದ.
ಹಾಗಾದ್ರೆ ನಿಮ್ಮ ಪ್ರಕಾರ ಲಂಡನ್ ಮಹಾರಾಷ್ಟ್ರಕ್ಕೆ ಸೇರಬೇಕು ಏನು???????????????!!!!!!!!!!!!!!! - ಕೋಪದಿಂದ ಕೇಳಿದ ಮರಾಠಿಗ.
ಪಾಪ ಮರಾಠಿಗ.
ಇನ್ನು 'ಲಂಡನ್ ಝಾಲಾಚ್ ಪಾಯಿಜೆ' ಅಂತ ಹೋಗುತ್ತಾರೆ ಏನು? - ಅಂತ ಕನ್ನಡಿಗ ಕನ್ಫ್ಯೂಸ್ ಆದ.
ಮೊದಲೇ ಹೇಳಿದಂತೆ ಬರೀ ಜೋಕ್. ತಿಳಿಲಿಲ್ಲ ಅಂದ್ರೂ ಒಕೆನೇ . :) :)
No comments:
Post a Comment