Friday, August 10, 2012

ರೊಮ್ಯಾಂಟಿಕ್ ಫಾರ್ಟಿಂಗ್

ಸಾಬ್.....ನಿಮ್ಮದು ಕಡೆ ಒಂದು ಕೇಳಬೇಕಿತ್ತು .....ಅಂತ ತಲಿ ಕೆರಕೋತ್ತ ನಿಂತ ಕರೀಂ.

ಏನ್ರೀ ಸಾಬ್ರಾ.....ಏನು ನಿಮ್ಮ ಪ್ರಶ್ನೆ? ಮುದ್ದಾಂ ಕೇಳುವಂತವರಾಗಿ. ನೀವು ಕೇಳೋದು ದೊಡ್ಡ ಮಾತೋ, ನಾವು ನಮಗ ಉತ್ತರ ಗೊತ್ತಿದ್ದ್ರಾ ಹೇಳೋದು ದೊಡ್ಡ ಮಾತೋ?ಹಾಂ.....ಹಾಂ.....ಅಂತ ಹೇಳಿ ಅವಂದು ಏನಾ ಪ್ರಶ್ನೆ ಇದ್ದರೂ ಬಿಚ್ಚಿ ಕೇಳಪಾ ಅನ್ನೋಹಾಂಗ ಅವಂಗ ಫೀಲಿಂಗ್ ಬರೋಹಾಂಗ ಹೇಳಿದೆ.

ಸಾಬ್.....ಇದು.....ಅದು ಏನೋ ಅಂತಾರೆ ನೋಡಿ ಸಾಬ್....ಹಾಂ...."ರೊಮ್ಯಾಂಟಿಕ್ ಫಾರ್ಟಿಂಗ್".....ಅಂದ್ರೆ ಏನು ಸಾಬ್?....ಅಂತ ತಣ್ಣಗ ಕೇಳಿಯೇ ಬಿಟ್ಟ.

ಅವ ಏನೋ ತಣ್ಣಗಾ ಕೇಳಿದ. ಆದ್ರಾ ಕೇಳಿಸಿಕೊಂಡ ನನಗ ಮಾತ್ರ ಮ್ಯಾಲಿಂದ ಕೆಳತನಕ ಝಟ್ಕಾ ಹೊಡೀತು.

ಸಾಬ್ರಾ....ಸರೀತ್ನಾಗಿ ಇನ್ನೊಮ್ಮೆ ಹೇಳ್ರೀ. ಸರಿ ಕೇಳಿಸ್ಕೊಂಡ ಬಂದೀರೇನರೀ?.......ಅಂತ ಕೇಳಿದೆ.

ಅದೇ ಸಾಬ್....ರೊಮ್ಯಾಂಟಿಕ್ ಫಾರ್ಟಿಂಗ್....ಝನಾನಾ ಲೋಗ್ ಅಂದ್ರೆ ಹೆಂಗಸೂ ಮಂದಿಗೆ ಭಾಳ್ ಸೇರ್ತದೆ ಅಂತೆ ನೋಡಿ.....ತಿಳೀತು ಕ್ಯಾ?.......ಅಂತ ಹೇಳಿ ಮತ್ತೂ ಕನ್ಫ್ಯೂಶನ್ ಮಾಡಿಬಿಟ್ಟ.

ಏನಪಾ ಇದು....? ರೊಮ್ಯಾಂಟಿಕ್ ಆಗಿ "ಅದನ್ನೂ" ಮಾಡಲಿಕ್ಕೆ ಬರ್ತದ....ಮತ್ತ ಮಾಡಿದ್ರ ಅದು ಸೇರೋ ಮಂದಿನೂ ಇರ್ತಾರ ಅಂತ ಅನ್ನೋದಾ ಕೇಳಿಯೇ ಶಾಕ್ ಆತು. ಛೀ.....ಛೀ....ಹೇಶಿ ಮಂಗ್ಯಾನ್ ಕೇ.

ಸಾಬ್ರಾ....ನೋಡ್ರೀ....ನೀವು ಹೇಳೋದು....ಭಾಳ ಗಲತ್ ಅರ್ಥ ಕೊಡ್ತದ.....ರೊಮ್ಯಾಂಟಿಕ್ ಅಂದ್ರ ಅದಾ....ಅದಾ ಅಂದ್ರಾ ಪ್ಯಾರ್ ಮೊಹಬ್ಬತ್ ಅದು ಇದು ಅಂತ.....ಇನ್ನು ಫಾರ್ಟಿಂಗ್ ಅಂದ್ರ....ಬರ್ರಿ ಇಲ್ಲೆ...ಹತ್ತಿರಾ.....ಅದನ್ನ ಪ್ರೈವೇಟ್ ಆಗಿಯೇ ಮಾಡ್ಬೇಕು.ಅಷ್ಟಾ ಅಲ್ಲ......ಪ್ರೈವೇಟ್ ಆಗಿಯೇ ಹೇಳ್ಬೇಕು- ಅಂತ ಅವನ ಕಿವಿಯೊಳಗ ಹೇಳಿದೆ.

ಅರ್ಥ ಕೇಳಿಸ್ಕೊಂಡ ಸಾಬಣ್ಣ ಕಿವಿಯೊಳಗ ಜರಿ ಹುಳ ಜರಾ ಜರಾ ಅಂತ ಹೋಗಿ ಕಿವಿ ಗುಳು ಗುಳು ಆದವರ ಲುಕ್ ಕೊಟ್ಟು, ಅಸಹ್ಯ ಮಸಡಿ ಮಾಡಿದ.

ತೋಬಾ....ತೋಬಾ....ಯಾ ಖುಧಾ....ಈ ಹಾಪ್ ಬೇಗಂ ಸೆ ಹಮಕೋ ಬಚಾವ್.....ಇಂತಾ ಹೊಲಸ್ ಗ್ಯಾಸ್ ಬಿಡೋ ಕೆಲಸಾ ಪ್ಯಾರ್ ಮೊಹಬ್ಬತ್ ಸೆ ಖುಲ್ಲಾ ಖುಲ್ಲಾ ಫೇಸ್ಬುಕ್ ಮ್ಯಾಲೆ ಮಾಡು ಅಂತ ಹುಕುಂ ಮಾಡಿ ಬಿಟ್ಟಾಳೆ. ಹ್ಯಾಂಗೆ ಮಾಡೋದು ಖುದಾ? ಪರ್ವರ್ದಿಗಾರ.....ಅಂತ ಹಾಕ್ಕೊಂಡ ವರ್ದೀ ತಲೆ ಮ್ಯಾಲೆ ಟಾವೆಲ್ ಗತೆ ಹಾಕ್ಕೊಂಡು ಕೂತೇ ಬಿಟ್ಟ,

ಅವಾ ಹೇಳಿದ್ರಾಗ, ಹಾಪ್ ಬೇಗಂ ಹೀಂಗ ರೊಮ್ಯಾಂಟಿಕ್ ಫಾರ್ಟಿಂಗ್ ಮಾಡ್ಲಿಕ್ಕೆ ಹೇಳಿಯಾಳ, ಅದೂ ಫೇಸ್ಬುಕ್ ಮ್ಯಾಲೆ....ಅಂತ ಕೇಳಿ ಇದು ಯಾಕೋ ಮೋರ್ ಕೊಂಪ್ಲಿಕೆಟೆಡ ಅದ ಅಂತ ಅನ್ನಿಸ್ತು.

ಸಾಬ್ರಾ....ಇದು ಯಾಕೋ ಅಷ್ಟು ಸುರಳೀತ ಇಲ್ಲಾ....ಸ್ವಲ್ಪ ಬಿಡಿಸಿ ಹೇಳ್ರೀ. ನಿಮ್ಮ ಬೇಗಂ ಏನು ಅಂದ್ರು?....ಅಂತ ಕ್ಲಾರಿಫಿಕೆಶನ್ ಕೇಳಿದೆ.

ಸಾಬ್....ನೋಡಿ....ನಿಮಗೆ ಗೊತ್ತಿದ್ದಾ ಹಾಗೆ ಆಕಿಗೆ ಫೇಸ್ಬುಕ್ ಹುಚ್ಚು.....ಯಾರ್ಯಾರದೋ ಜೊತೆ ಏನೇನೋ ಮಾಡ್ತಾನೆ ಇರ್ತಾಳೆ. ಒಬ್ಬನ ಜೊತಿ ಹರಟಿ. ಇನ್ನೊಬ್ಬನ ಜೊತೆ ಹಾಡಿನ ಬಂಡಿ. ಇನ್ನೊಬ್ಬನ ಕೂಡಿ ಶಾಯರಿ. ಮತ್ತೊಬ್ಬನ ಕೂಡೆ ಫಾರ್ಟಿಂಗ್....ಈಗ ಇಕಿ ತಲಿ ತಿನ್ನೋ ಅಬ್ಬರಕ್ಕೆ ತತ್ತರಿಸಿ ಎಲ್ಲರೂ ಅಕಿಗೆ ತಮ್ಮ ತಮ್ಮ "ನಾಮ"ತೇಯ ಹಾಕ್ಬಿಟ್ಟು ಹೋಗಿದಾರೆ....ಎಲ್ಲಾರೂ ಹೋದ ಮ್ಯಾಲೆ ಹಳೆ ಗಂಡನ ಪಾದವೇ ಗತಿ ಅಂತ ನನ್ನತ್ರ ಬಂದು ಅವನು ಹೀಗೆ ಸೆಕ್ಸಿ ಫಾರ್ಟಿಂಗ್ ಮಾಡ್ತಿದ್ದ, ಇವನು ಹೀಗೆ ರೊಮ್ಯಾಂಟಿಕ್  ಫಾರ್ಟಿಂಗ್ ಮಾಡ್ತಿದ್ದ, ನೀವೂ ಗಂಡಾ ಅದೀರಿ. ಫುಲ್ ವೆಸ್ಟ್ ಬಾಡಿ. ನಿಮಗೆ ಫಾರ್ಟಿಂಗ್ ಮಾಡೋಕೆ ಬರೋದಿಲ್ಲಾ ಅಂತ ಅಂದು ಬಿಟ್ಟಳು.....ಸಾಬ್....ಅದಕ್ಕೆ ನಿಮ್ಮತ್ತರಾ ಕೇಳಿದೆ.....ಏನು ಅದು ಫಾರ್ಟಿಂಗ್ ಅಂದ್ರೆ.....ಅದು ಯಾಕೆ ನಮ್ಮಾ ಬೇಗಮ್ಗೆ ಅಷ್ಟು ಇಷ್ಟ ಆಗ್ತದೆ.....ನೀವು ಕೇಳಿದ್ರೆ ಹೇಳ್ತೀರಿ....ಫಾರ್ಟಿಂಗ್ ಅಂದ್ರೆ ಗಂಧಾ ಗಂಧಾ ಹವಾ ಬಿಡೋದು ಅಂತ....ನಮಗೆ ಒಟ್ಟಿನಲ್ಲಿ ತಿಳೀತಾ ಇಲ್ಲಾ ನೋಡಿ....ಅದು ಯಾರೋ ನಮ್ಮ ಬೇಗಂ ಪುರಾನಾ ಆಶಿಕ್, ಅದು ಎಲ್ಲೋ ಯಾವದೋ ದೂರದ ದೇಶದಲ್ಲಿ ಕೂತು ಹವಾ ಬಿಟ್ಟು ವಾತಾವರಣ ಕೆಡಸಿದ್ರೆ, ನಮ್ಮ ಬೇಗಂ ಯಾಕೆ ಖುಷಿ ಆಗಬೇಕು ಅಂತಾ?.....ಹಾಂ? ಹಾಂ?....ನಮಗೇ ಅದೇ ತಿಳಿತಾ ಇಲ್ಲಾ....ಅಥವಾ ಪುರಾನಾ ಆಶಿಕ್ ಮಂದಿ, ಅವರ ಹವಾ, ಪರದೇಶ ಎಲ್ಲಾ ಏನಾರೂ ಫರಕ್ ಮಾಡ್ತಾವೆ ಕ್ಯಾ?.....ಅಂತ ಉದ್ದಾಗಿ ಕೇಳಿಬಿಟ್ಟ.

ಈಗ ಯಾಕೋ ಏನೋ ಒಂದು ತಲಿ ಒಳಗಾ ಹೊಳಿಲಿಕ್ಕೆ ಹತ್ತಿತು. ಬೇಗಂ ಅಂತಾನ, ಅಕಿ ಹಳೆ ಗೆಣೆಕಾರರರು ಅಂತಾನ, ಅವರು ಮಾಡೋ ಮಂಗ್ಯಾನಾಟ ಅಕಿಗೆ ಸೇರ್ತಾವ ಅಂತಾನ....ಹಾಂಗಿದ್ರಾ ಇವಾ "ಫ್ಲರ್ಟಿಂಗ್"(flirting) ಅನ್ನೋದಕ್ಕ "ಫಾರ್ಟಿಂಗ್" (farting) ಅನ್ನ್ಲಿಕತ್ತಾನೋ ಹ್ಯಾಂಗ....ಅಂತ ಸಂಶಯ ಬಂತು.

ಸಾಬ್ರಾ ಅದು ಫ್ಲರ್ಟಿಂಗ್ ಅಂತ ಇರಬೇಕು ನೋಡ್ರೀ.....ರೊಮ್ಯಾಂಟಿಕ್ ಫ್ಲರ್ಟಿಂಗ್ ಅಂತ ಹೇಳಿರಬೇಕು ನಿಮ್ಮ ಹೆಂಡ್ತಿ.....ನೀವು ಏನೇನೋ ಕೇಳಿಸ್ಕೊಂಡು ಬಂದು ಅಸಡ್ಡಾಳ "ಫಾರ್ಟಿಂಗ್" ಅನ್ನಲಿಕತ್ತೀರಿ.....ಹಾಂ....ಹಾಂ....ಹೇಶಿ ಮಂಗ್ಯಾನ್ ಕೇ....ಏನ್ರೀ ಇದು......- ಅಂತ ಮೈಲ್ಡ್ ಆಗಿ ಝಾಡಿಸಿದೆ. 

ಸಾಬ್.....ನೀವು ಹೋಗಿ ನಿಮ್ಮ ಕಿವಿ ಸ್ವಲ್ಪಾ ಟೆಸ್ಟ್ ಮಾಡಿಸ್ಕೊಂಡು ಬನ್ನಿ....ನಾ ಹೇಳಿದ್ದೂ ಅದೇ....ನಾನು ಫ್ಲರ್ಟಿಂಗ್ ಅಂದ್ರೆ ಬೇರೆ ಏನೋ ಅಂತ ಕೇಳಿಸ್ಕೊಂಡು, ನನಗೆ ಪ್ಯಾರ್ ಮೊಹಬ್ಬತ್ ಸೇ ಗ್ಯಾಸ್ ಬಿಡು ಅಂತಾ ಉದ್ರಿ ಅಡ್ವೈಸ್ ಕೊಟ್ಟು ನನ್ನ ಉದ್ಧಾರ ಮಾಡೋಕೆ ಹೊಂಟಿದ್ರಿ....ತಥ್ ನಿಮ್ಮ....ಅವತ್ತು ನಾವು ದುಬೈ ಒಳಗೆ ಕಾಂಡೊ ತಗೊಂಡ್ವೀ ಅಂದ್ರೆ ನೀವು ಕಾಂಡೋಮ್ ಅಂತ ಕೇಳಿಸ್ಕೊಂಡು ಚಿಟಿ ಚಿಟಿ ಚೀರಿ ನಮಗೇ ಬೈದ್ರೀ....- ಅಂತ ನನಗ ಉಲ್ಟಾ ಹೊಡದ.

ಇದ್ದರೂ  ಇರಬಹುದು....ಯಾರು ಹ್ಯಾಂಗ ಹೇಳಿದರೋ, ನಮಗ ಹ್ಯಾಂಗ ಕೇಳಿತೋ.....ಶಿವನೇ ಬಲ್ಲ.

ಒಟ್ಟಿನಲ್ಲಿ ಈಗ ಸಾಬ್ರಾ ಹಾಪ್ ಬೇಗಂಗೆ ಎಲ್ಲಾ ಪುರಾನಾ ಆಶಿಕ್ ನಾಮ ತೇಯಿದು ಹೋಗಿ ಬಿಟ್ಟಿದ್ದಾರೆ. ಹಣಿ ಮ್ಯಾಲೆ ಅಯ್ಯಂಗಾರ್ ಅಲ್ಲದಿದ್ದರೂ ಮೂರ ನಾಮ ಹಾಕಿಸ್ಕೊಂಡು, ಬೇಗಂ ಪುನಃ ಹಳೇ ಸಾಬರ ಕಡೆ ಬಂದು, ಫೇಸ್ಬುಕ್ ಮ್ಯಾಲೆ ಲವಿ ಡವಿ ಮಾಡ್ರೀ ಅಂತ ಗಂಟು ಬಿದ್ದಾಳೆ....ಅದೇ "ರೊಮ್ಯಾಂಟಿಕ್ ಫ್ಲರ್ಟಿಂಗ್".

ಶಿವರಾಮ  ಕಾರಂತರು "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅಂತ ಒಂದು ಪುಸ್ತಕ ಬರೆದಿದ್ದರು. ಅದೇ ರೀತಿ, "ರೊಮ್ಯಾಂಟಿಕ್ ಫ್ಲರ್ಟಿಂಗ್" ಅನ್ನೋದು ಫೇಸ್ಬುಕ್ ಹುಚ್ಚಿನ ಹಲವಾರು ಮುಖಗಳಲ್ಲಿ ಒಂದು ಮುಖವಾ ಅಂತ ಡೌಟ್ ಬಂತು.

No comments: