ಮನ್ನಿತ್ತ್ಲಾಗೆ ಹವ್ಯಕ ಫೇಸ್ಬುಕ್ ಗ್ರುಪ್ನಲ್ಲಿ
ಯಾರೋ ಮಾಣಿ ನಂಬದಿ ಮಡಿ ಅಮ್ಮಂದಿಕ್ಕಳ (ಕೇಶ ಮುಂಡನ ಮಾಡಿಕೊಂಡ ವಿಧವೆಯರು) ಬಗ್ಗೆ ರಿಸರ್ಚ್ ಮಾಡ್ತಾ
ಇದ್ದಿ, ಯಾರಾರು ಮಾಹಿತಿ ಇದ್ದರೆ ತಿಳಿಸಿ ಅಂದಾ. ಮಾಹಿತಿ ಇದ್ದವು ಕೊಡ್ತ. ಆ ಮಾತ್ ಬ್ಯಾರೆ. ಆದ್ರೆ
ಯಂದು ಒಂದು ಪ್ರಶ್ನೆ ಇದ್ದಿತ್ತು. ಅಲ್ಲಿ ಕೇಳಿರೆ ಬೈದ್ ಬುಡ್ಗು ಹೇಳಿ ಕೇಳಿದ್ನಿಲ್ಲೆ.
ನಿಂಗಕ್ಕೆ ಯಾರಿಗಾದರು ನೆನಪ ಇದ್ದ? ಆ ಮಡಿ ಅಮ್ಮಂದಿಕ್ಕಗೆ
ಎಂತಕ್ಕೆ “ಧಾರವಾಡ ಪೊಲೀಸರು” ಹೇಳಿ ಪೋಕರಿ ಮಾಣ್ಯಕ್ಕ ಚಾಳಸ್ತಿದ್ದ
ಹೇಳಿ? ಸಿರ್ಸಿ ಸೀಮೆಯಲ್ಲಂತೂ ಹಾಂಗೆ ಚಾಳ್ಸದ ಕೇಳಿದ್ದು ಖರೆ. ಬಾಕಿ ಸೀಮ್ಯಲ್ಲೂ ಹೀಂಗೆ ಅವಹೇಳನಕಾರಿ ರೀತ್ಯಲ್ಲಿ ಚಾಳ್ಸದು ಇತ್ತ ಹೇಳಿ ಗೊತ್ತಿಲ್ಲೆ.
ಆನು ಹುಟ್ಟಿದ್ದು, ಬೆಳೆದಿದ್ದು ಧಾರವಾಡದಲ್ಲಿ. ಅಲ್ಲಿನ ಪೊಲೀಸರು, ಪೋದ್ದಾರ್ರು
ಹೇಳಿ ಎಲ್ಲಾ ನಮನಿ ಪೊಲೀಸರನ್ನೂ ನೋಡಿದ್ದಿ. ಅವು ಯಾರೂ ನಮ್ಮ ಬದಿ ಅಮ್ಮಂದಿಕ್ಕಳ ಹಾಂಗೆ ಏನೂ ಹೇರ
ಕಟಿಂಗ್ ಮಾಡಸ್ತ್ವಿಲ್ಲೆ. ಮತ್ತೆ ಯಾವದೇ ರೀತಿಯಲ್ಲಿ ಅವು ನಮ್ಮ ಬದಿ ಅಮ್ಮಂದಿಕ್ಕಳಂಗೆ ಕಾಣ್ತ್ವಿಲ್ಲೆ. ಒಂಚೂರೂ ಸೂತ್ರ ಸಂಬಂಧ ಇಲ್ಯಪಾ.
ಇನ್ನು ನಮ್ಮ ಊರ ಬದಿಗೆ ಶಣ್ಣಕಿದ್ದಾಗ ಬೇಕಾದಷ್ಟು
ಜನ ಮಡಿ ಅಮ್ಮಂದಿಕ್ಕ ಕಾಣ್ತಿದ್ದ. ನಮ್ಮ ನೆಂಟರಲ್ಲೇ ಎಷ್ಟೋ ಜನ ಇದ್ದಿದ್ದ. ಅವ್ಕೆ ಮತ್ತೆ ಧಾರವಾಡ
ಪೊಲೀಸರಿಗೆ ಎಂತೂ ಹೋಲಿಕೆ ಇಲ್ಲ್ಯಪಾ. ಅವೆಲ್ಲಾ ಖಾಕಿ ಪ್ಯಾಂಟು ಶರ್ಟ್ ಆಗಲಿ ಅಥವಾ ಕಟ ಕಟ ಬೂಟಾಗಲಿ
ಹಾಕ್ತಿದ್ವಿಲ್ಲೆ. ಮತ್ತೆ ಪಾಪ ರಾಶಿ ಬಡಿ ಸ್ವಭಾವದವೇ ಹೆಚ್ಚು. ಖರೆ ಹೇಳವು ಅಂದ್ರೆ ಅವು ಕರ್ಮಯೋಗಿಗಳು.
ಸಿಕ್ಕಾಪಟ್ಟೆ ಕೆಲಸ ಮಾಡದು. ಸ್ವಲ್ಪ ದೇವರು ದಿಂಡರು ಹೇಳಿ ಪೂಜೆ ಪುನಸ್ಕಾರ. ಒಂದು ಮಡಿ ಅಮ್ಮ ನಾಕು ಜನರ ಕೆಲಸ ಮಾಡ್ತಿತ್ತಾರ್ಬಲಾ. ಒಟ್ಟಿನಲ್ಲಿ ಹಡಬೆ ಧಾರವಾಡ ಪೊಲೀಸರಿಗೆ ಮತ್ತೆ ನಂಬದಿ ಮಡಿ ಅಮ್ಮಂದಿಕ್ಕಗೆ ಯಾವದೇ ಹೋಲಿಕೆ ಇಲ್ಲೆ.
ಆದರೂ ಅವಕ್ಕೆ ಎಂತಕ್ಕೆ "ಧಾರವಾಡ ಪೊಲೀಸರು" ಹೇಳಿ
ಮಳ್ಳ ಹುಡುಗುರು ಚಾಳಸ್ತಿದ್ದ? ಗೊತ್ತಿದ್ದ ಯಾರಿಗಾರು?
ಹಾಂಗಂತ ಹೇಳಿ ಕೆಂಪ ಸೀರೆ ಅಮ್ಮಗೋಳಿಗೆ ಇನ್ಸಲ್ಟ್ ಮಾಡುವ ಉದ್ದೇಶ ಇಲ್ಲೆ ಮತ್ತೆ. ತೆಳತ್ತಾ? ಎಂತಕ್ಕೆ ಅಂದ್ರೆ ಇಬ್ಬರು ಅಮ್ಮಂದಿಕ್ಕ ಅಂದ್ರೆ ನನಗೆ ಭಯಂಕರ ಪ್ರೀತಿ. ಒಂದು ದೊಡ್ಡಿಯಮ್ಮ. ಅದೇಯಾ ದೊಡ್ಮಾವನ ಆಯಿ. ಇನ್ನೊಂದು ಅಂದ್ರೆ ಕೆಪ್ಪಜ್ಜಿ. ಅದೇಯಾ ಅಜ್ಜನ ಆಯಿ. ಅಂದ್ರೆ ಆಯಿ ಅಪ್ಪನ ಆಯಿ. ದೊಡ್ದಿಯಮ್ಮ ಸಿಕ್ಕಾಪಟ್ಟೆ ಕ್ಲೋಸ್ ಆದ್ರೆ ಕೆಪ್ಪಜ್ಜಿ ಒಂದು ರೀತಿ ನಿಗೂಢ. ಅಜ್ಜನ ಆಯಿ ಕಿವಿ ಆ ಹೊತ್ತಿಗೆ ಶಡ್ಡ ಆಗಿ ಹೋಗಿತ್ತು. ಅದಕ್ಕೇ ಅದು ಕೆಪ್ಪಜ್ಜಿ ಹೇಳೇ ಫೇಮಸ್ ಆಗಿತ್ತು.

2 comments:
ಇದಕ್ಕೆ ಉತ್ತರ ಶಿಕ್ಚ ಕಡಿಗೆ?
ಇಲ್ಲೆ. ಸಿಕ್ಕಿದ್ದಿಲ್ಲೆ! :)
Post a Comment