ಮೊನ್ನೆ ರಾಮ ನವಮಿಗೆ ನೆನಪಾಗಿದ್ದು. ಹಳೆಯ ಶಾಲೆ ಹಾಡು. ಹೊಸ ಜಾಡು.
ಕಾದಿರುವಳು ಶಬರಿ
ಬಾಜೂ ಇದೆ ಖಾಲಿ ಡಬರಿ
ರಾಮ ಬರುವನೆಂದು
RMD ಕೊಡುವನೆಂದು…
ಶಬರಿ ರಾಮನಿಗಾಗಿ ಡಬರಿ ತುಂಬಾ ಬೋರೆ ಹಣ್ಣು ತಂದಳು. ರಾಮ ಬರಲು ತಡವಾಯಿತು. ಶಬರಿಗೆ ಹಸಿವಾಯಿತು. ಎಲ್ಲ ಬೋರೆ ಹಣ್ಣು ಗುಳುಂ ಮಾಡಿ ಕುಳಿತಳು. ರಾಮನಿಗಾಗಿ ಮತ್ತೂ ಕಾದಳು…ರಾಮನ ಹತ್ತಿರ RMD ಗುಟ್ಕಾ ಇಸಿದುಕೊಂಡು ಹೋದರಾಯಿತು ಎಂದು.
ಇದು ಆಧುನಿಕ ಶಬರಿಯ ಭಕ್ತಿ.
ಮಿತ್ರ ಶರದ್ ಪಾಟೀಲ್, RMD ಎಂದರೆ ರಾಮನಿಂದ ಮುದುಕಿಗೆ ದಾನ ಎಂದು ಅರ್ಥವೇ ಎಂದು, ಕೇಳಿದಾಗ ತುಂಬಾ ನಗು ಬಂತು. ಅದ್ಭುತ ಸಂಶೋಧನೆ! ನನಗೂ ಹೊಳೆದಿರಲಿಲ್ಲ.
2 comments:
ಈಗ ರಾಜಕಾರಣಿಗಳೂ ಸಹ, ಮತದಾತರಿಗೆ ಶಬರಿಯ ಭಕ್ತಿಯನ್ನೇ ತೋರಿಸುತ್ತಿದ್ದಾರೆ!
ಮತದಾರರು ಬರೋಬ್ಬರಿ ಜವಾಬ್ದಾರಿ ತೋರಿಸಿದರೆ ರಾಜಕಾರಣಿಗಳ ಗತಿ ಶೂರ್ಪನಖಿ ತರಹ ಆಗುತ್ತದೆ!
ಕಾಮೆಂಟಿಗೆ ಧನ್ಯವಾದಗಳು.
Post a Comment