ಬೆಂಗಳೂರು ಕಡೆ IT ಕೆಲಸದಲ್ಲಿರುವ ಜನ ಆಗಾಗ ಪೇಪರ್ ಹಾಕಿಬಿಡುತ್ತೇನೆ, ಪೇಪರ್ ಹಾಕಿಬಿಡುತ್ತೇನೆ ಎನ್ನುತ್ತಿದ್ದಾಗ ಹಾಗೆಂದರೆ ಏನೆಂದು ಅರ್ಥವಾಗಿರಲಿಲ್ಲ.
ಪೇಪರ್ ಹಾಕಿಬಿಡುತ್ತೇನೆ ಅಂದರೆ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಅರ್ಥವಂತೆ.
ಈಗಿನ ಪರಿಸ್ಥಿತಿಯಲ್ಲಿ ಯಾರೂ ಪೇಪರ್ ಹಾಕಿಬಿಡುತ್ತೇನೆ ಎಂದು ಹಾರಾಡುತ್ತಿಲ್ಲ. ಏಕೆಂದರೆ ಇದ್ದ ಕೆಲಸಕ್ಕೆ ಪೇಪರ್ ಹಾಕಿ ಹೊರಬಿದ್ದರೆ ಮುಂಜಾನೆ ಮನೆಮನೆಗೆ ನಿಜವಾದ ಪೇಪರ್ ಹಾಕುವ ಕೆಲಸವೂ ಸಿಗುವುದಿಲ್ಲ.
ಮತ್ತೆ ಈ IT ಮಂದಿ ಪೇಪರ್ ಹಾಕುವ ಕೆಲಸ ಮಾಡಿಯಾರೇ??? ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಿದಂತಲ್ಲ ಅದು.
ಒಟ್ಟಿನಲ್ಲಿ ಪೇಪರ್ ಹಾಕುವುದರ ಬದಲು ಪೇಪರಿನಲ್ಲಿ ಮುಖ ಮತ್ತೊಂದು ಒರೆಸಿಕೊಂಡು ಬಕೆಟ್ ಹಿಡಿಯುವ ಕೆಲಸ ಮುಂದುವರೆಸಬೇಕಾಗಿದೆ.
2 comments:
ಇಂಡಿಯಾಕ್ಕ ಹೊಳ್ಳಿ ಬರಲಿ. ಇಲ್ಲಿ ಬೇಕಾದಷ್ಟು ಪೇಪರ ಹುಡುಗರ ಕೆಲಸ ಖಾಲೀ ಅವ!
ಸರ್, ಇಂಡಿಯಾಕ್ಕೆ ಹೊರಳಿ ಬರಲಿ ಅನ್ನಲಿಕ್ಕೆ ಅವರೆಲ್ಲ ಅಲ್ಲಿಯವರೇ. ಇಲ್ಲಿ ಕೆಲಸ ಹೋದರೆ ಸೀದಾ ಸ್ವದೇಶಕ್ಕೆ ಮರಳುವುದೇ…
ಕಾಮೆಂಟಿಗೆ ಧನ್ಯವಾದಗಳು.
Post a Comment