ಬಂಗಾರದ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಅಲ್ಲವೇ?
ಸ್ನೇಹಿತರಿಬ್ಬರು ಅದರ ಬಗ್ಗೆ ಮಾತಾಡುತ್ತಿದ್ದರು.
'ನಿನ್ನ ಕಡೆ ಒಟ್ಟು ಎಷ್ಟು ಬಂಗಾರ ಅದಪಾ ದೋಸ್ತ?'
ವಿಚಾರ ಮಾಡಿ, ಲೆಕ್ಕ ಗಿಕ್ಕ ಹಾಕಿ, 'ನನ್ನ ಕಡೆ 150 kg 55 gram ಬಂಗಾರ ಅದನೋ,' ಎಂದ.
'ಯಪ್ಪಾ!! ಏನಲೇ ನಿನಗೇನರೇ ತಿರುಪತಿ ತಿಮ್ಮಪ್ಪನ ಬಂಗಾರ ಸಿಕ್ಕದೇನಲೇ? ಕ್ವಿಂಟಲಗಟ್ಟಲೆ ಬಂಗಾರ. ಅವ್ವಾ!!'
'ತಿರುಪತಿ ತಿಮ್ಮಪ್ಪನ ಬಂಗಾರವೂ ಇಲ್ಲ. ಕಿತಾಪತಿ ಮಂಗಪ್ಪನ ಬಂಗಾರವೂ ಇಲ್ಲ. ಎಲ್ಲ ನನ್ನದೇ ಬಂಗಾರ,'
'ಹಾಂಗಾ?? ಸ್ವಲ್ಪ ವಿವರಿಸಿ ಹೇಳು ನೋಡೋಣ. ಲೆಕ್ಕ ಕೊಡಲ್ಲಾ?'
'ನೋಡು ನನ್ನ ಕಿರುಬೆರಳಿನಾಗ 5 ಗ್ರಾಮಿನ ಸಣ್ಣ ಉಂಗುರ ಅದ. ಮದುವ್ಯಾಗ ಮಾವ ಕೊಟ್ಟಿದ್ದು. ಮಗಳ ಮೈಮ್ಯಾಲೆ 20 ಗ್ರಾಮ್ ಬಂಗಾರ ಅದ. ಹೆಂಡತಿ ಮೈಮ್ಯಾಲೆ ಒಂದು 30 ಗ್ರಾಮ್ ಬಂಗಾರ ಅದ.'
'5+20+30 = 55 ಗ್ರಾಮ್ ಬಂಗಾರ ಆತು. ಬಾಕಿ 150 kg ಎಲ್ಲಿ? ಎಲ್ಲಿಲೇ?'
'ನನ್ನ ಹೆಂಡತಿಗೆ ಚಿನ್ನ, ಬಂಗಾರ, ಚಿನ್ನೂ ಅದು ಇದು ಅಂತೇನಿ. ಅಕಿ ಬಂಗಾರಕ್ಕೆ ಸಮಾನ. ಅಕಿ ವೇಟ್ ಬರೋಬ್ಬರಿ 90 kg. ಮಗಳಿಗೆ ಸೋನಾ, ಸೋನೂ, ಚೋನೂ, ಗೋಲ್ಡಿ ಬೇಬಿ ಅಂತೇನಿ. ಅಕಿನೂ ಬಂಗಾರಕ್ಕೆ ಸಮಾನ. ಅಕಿ ವೇಟ್ ಬರೋಬ್ಬರಿ 60 kg. ಟೋಟಲ್ 90+60 = 150 kg. ಬರೋಬ್ಬರಿ ಆತಿಲ್ಲೋ??'
'ಓಹೋ!! ನಿನ್ನ 150 kg 55 gram ಬಂಗಾರ ಹೀಂಗ ಅಂತಾತು. ಇದು ತಿರುಪತಿ ತಿಮ್ಮಪ್ಪನ ಖಜಾನೆ ಬಂಗಾರ ಅಲ್ಲ. ಗ್ಯಾರಂಟೀ ಕಿತಾಪತಿ ಮಂಗಪ್ಪನ ಖಜಾನೆಯದ್ದೇ! ಡೌಟ್ ಬ್ಯಾಡ. ಬಾಪರೇ!'
'ಬಂಗಾರದಂತಹ ಹೆಂಡತಿ ಸೋನಾಬಾಯಿಯಂತಹ ಮಗಳ ವೇಟ್ ಹೇಳಿದಿ. ಅವರ ಹೈಟ್??'
'ಹೆಂಡತಿ 4'11" ಇದ್ದಾಳ. ಮಗಳು 3'11" ಇದ್ದಾಳ.'
ಕೇಳಿದ ಮಿತ್ರ 'ನೀ ಲಕಿ ಬಿಡಪಾ,' ಎನ್ನುತ್ತಾ ಜಾಗ ಖಾಲಿ ಮಾಡಿದ.
2 comments:
ಹೆಂಡತಿ ಹಾಗು ಮಗಳು ಜೈವಿಕ ಬಂಗಾರಗಳು, ಇವು ಹೆಚ್ಚಾಗುತ್ತಲೇ ಹೊಗುತ್ತವೆ!
ಜೈವಿಕ ಬಂಗಾರ! ಇದು organic gold ಮಾದರಿ :)
ಕಾಮೆಂಟಿಗೆ ಧನ್ಯವಾದ!
Post a Comment